Tag: ಜಾಕ್ ಮಾ

  • ಭಾರೀ ಕುತೂಹಲ ಹುಟ್ಟಿಸಿತು ಜಾಕ್ ಮಾ ದಿಢೀರ್ ಪಾಕ್ ಭೇಟಿ

    ಭಾರೀ ಕುತೂಹಲ ಹುಟ್ಟಿಸಿತು ಜಾಕ್ ಮಾ ದಿಢೀರ್ ಪಾಕ್ ಭೇಟಿ

    ಇಸ್ಲಾಮಾಬಾದ್: ಚೀನಾದ (China) ಅತ್ಯಂತ ಶ್ರೀಮಂತ ಹಾಗೂ ಆಲಿಬಾಬಾ ಗ್ರೂಪ್‍ನ ಸಹ-ಸಂಸ್ಥಾಪಕ (Alibaba Group Co-Founder) ಜಾಕ್ ಮಾ ಅವರ ದಿಢೀರ್ ಪಾಕಿಸ್ತಾನ (Pakistan) ಭೇಟಿ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಬೋರ್ಡ್ ಆಫ್ ಇನ್ವೆಸ್ಟ್ ಮೆಂಟ್ (BOI)ನ ಮಾಜಿ ಅಧ್ಯಕ್ಷ ಮುಹಮ್ಮದ್ ಅಜ್ಫರ್ ಅಹ್ಸನ್ ಅವರು ಜಾಕ್ ಮಾ (Jack Ma) ಭೇಟಿಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಜೂನ್ 29ರಂದು ಲಾಹೋರ್‍ಗೆ ಆಗಮಿಸಿರುವ ಜಾಕ್ ಮಾ ಅವರು ಬರೋಬ್ಬರಿ 23 ಗಂಟೆಗಳ ಕಾಲ ಇದ್ದರು ಎಂದು ಹೇಳಿದ್ದಾರೆ.

    ಪಾಕ್‍ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸರ್ಕಾರಿ ಅಧಿಕಾರಿಗಳು ಹಾಗೂ ಮಾಧ್ಯಮದವರ ಜೊತೆ ಮಾತನಾಡಲು ನಿರಾಕರಿಸಿದ್ದರು. ಖಾಸಗಿ ಸ್ಥಳದಲ್ಲಿದ್ದ ಮಾ ಅವರು ಜೂನ್ 30ರಂದು ಖಾಸಗಿ ಜೆಟ್ ಮೂಲಕ ವಾಪಸ್ಸಾಗಿದ್ದಾರೆ ಎಂದರು. ಸದ್ಯಕ್ಕೆ ಜಾಕ್ ಮಾ ಭೇಟಿಯ ಉದ್ದೇಶ ಗೌಪ್ಯವಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಪಾಕಿಸ್ತಾನಕ್ಕೆ ಇದರಿಂದ ಧನಾತ್ಮಕ ಫಲಿತಾಂಶಗಳು ಸಿಗಬಹುದು ಎಂಬ ಭರವಸೆ ಇದೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಐದು ಚೀನೀ ಪ್ರಜೆಗಳು, ಡ್ಯಾನಿಶ್ ವ್ಯಕ್ತಿ ಮತ್ತು ಯುಎಸ್ ಪ್ರಜೆಯನ್ನು ಒಳಗೊಂಡ 7 ಉದ್ಯಮಿಗಳ ನಿಯೋಗದ ಜೊತೆ ಮಾ ಕಾಣಿಸಿಕೊಂಡಿದ್ದರು. ಹಾಂಗ್ ಕಾಂಗ್‍ನ ವ್ಯಾಪಾರ ವಿಮಾನಯಾನ ವಲಯದಿಂದ ಚಾರ್ಟರ್ಡ್ ಫ್ಲೈಟ್ ಮೂಲಕ ನೇಪಾಳದಿಂದ ಪಾಕಿಸ್ತಾನಕ್ಕೆ ಬಂದಿರುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: Twitter ನಲ್ಲಿ ಪೋಸ್ಟ್‌ ಓದುವ ಮಿತಿ ಹೆಚ್ಚಳ – ಮಹತ್ವದ ಬದಲಾವಣೆ ಘೋಷಿಸಿದ ಮಸ್ಕ್‌

    ಒಟ್ಟಿನಲ್ಲಿ ಜಾಕ್ ಮಾ ಅವರು ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿರುವುದು ಭಾರೀ ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಭೇಟಿಯ ಕುರಿತು ಚರ್ಚೆಗಳಾಗುತ್ತಿವೆ. ಮಾ ಮತ್ತು ಅವರ ತಂಡವು ಪಾಕಿಸ್ತಾನದಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವುದರ ಕುರಿತು ಊಹಾಪೋಹಗಳು ಎದ್ದಿವೆ. ಆದರೆ ಯಾವುದೇ ನಿರ್ದಿಷ್ಟ ವ್ಯಾಪಾರ ವ್ಯವಹಾರಗಳು ಅಥವಾ ಸಭೆಗಳು ನಡೆದಿರುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಚೀನಾಗೆ ಮರಳಿದ ಜಾಕ್ ಮಾ

    ಮತ್ತೆ ಚೀನಾಗೆ ಮರಳಿದ ಜಾಕ್ ಮಾ

    ಬೀಜಿಂಗ್: ಆಲಿಬಾಬಾ (Alibaba) ಸಂಸ್ಥಾಪಕ ಜಾಕ್ ಮಾ (Jack Ma) ಅವರು ಮತ್ತೆ ಚೀನಾಗೆ ಮರಳಿದ್ದಾರೆ ಎಂದು ಸೌತ್ ಚೀನಾ ಮಾನಿಂಗ್ ಪೋಸ್ಟ್ ಸೋಮವಾರ ವರದಿ ಮಾಡಿದೆ.

    ಚೀನಾದ (China) ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದ ಜಾಕ್ ಮಾ ಅವರು 2021 ರಲ್ಲಿ ಚೀನಾದಿಂದ ಕಣ್ಮರೆಯಾಗಿದ್ದರು. ಅಲ್ಲದೇ ನಂತರದ ದಿನಗಳಲ್ಲಿ ಅವರು ಆಸ್ಟ್ರೇಲಿಯಾ, ಜಪಾನ್ ಮತ್ತು ಥೈಲಾಂಡ್ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಬಗ್ಗೆ ವರದಿ ಪ್ರಕಟವಾಗಿದ್ದವು. ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ – ಏರ್ ಇಂಡಿಯಾ, ನೇಪಾಳ ಏರ್‌ಲೈನ್ಸ್ ಡಿಕ್ಕಿ ಜಸ್ಟ್ ಮಿಸ್

    ಜಾಕ್ ಮಾ ಹಾಂಗ್‌ಝೌನಲ್ಲಿ ತಾವು ನಿರ್ಮಿಸಿದ ಹಣಕಾಸು ತಂತ್ರಜ್ಙಾನ ಶಾಲೆಗೆ ಮರಳಿದ್ದಾರೆ ಎಂದು ಯುಂಗು ಎಜುಕೇಷನ್ (Yungu Education) ಶಾಲೆಯು ತಮ್ಮ ವಿಚಾಟ್ (We Chat) ಖಾತೆಯಲ್ಲಿ ಹೇಳಿದೆ. ಅಲ್ಲದೇ ಅವರೊಂದಿಗಿನ ಫೋಟೋ ಮತ್ತು ವಿಡಿಯೋಗಳನ್ನು ಕೂಡಾ ಹಂಚಿಕೊಂಡಿದೆ.ಈ ವರದಿ ಪ್ರಕಟವಾದ ನಂತರ ಹಾಂಗ್‌ಕಾಂಗ್‌ನಲ್ಲಿ ಆಲಿಬಾಬಾ ಷೇರುಗಳು ಶೆ.4ರಷ್ಟು ಹೆಚ್ಚಿದೆ. ಇದನ್ನೂ ಓದಿ: 2 ವರ್ಷ ಕೋವಿಡ್ ಸ್ಟ್ರಿಕ್ಟ್ ರೂಲ್ಸ್ ಬಳಿಕ ಮೊದಲ ಬಾರಿ ಚೀನಾದ ಹಾಂಕಾಂಗ್‌ನಲ್ಲಿ ಪ್ರತಿಭಟನೆ 

    2021ರ ಅಕ್ಟೋಬರ್ 24 ರಂದು ಶಾಂಘೈನಲ್ಲಿ ಜಾಕ್ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಜಾಕ್ ಮಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಬ್ರಿಟನ್‍ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ 

    ಜಾಕ್‌ಮಾ ಆಂಟ್ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. 2020 ನವೆಂಬರ್‌ನಲ್ಲಿ ಈ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡಿ 37 ಶತಕೋಟಿ ಡಾಲರ್ ಹಣ ಸಂಗ್ರಹಿಸಲು ಮುಂದಾಗಿತ್ತು. ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಐಪಿಒ ಸಂಗ್ರಹಿಸಿದ ಕಂಪನಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಅನುಮಾನ ವ್ಯಕ್ತಪಡಿದ್ದರು. ಇದಾದ ಬಳಿಕ ಚೀನಾ ಸರ್ಕಾರ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿತ್ತು. ಇದನ್ನೂ ಓದಿ: ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ – ಸಾಮರ್ಥ್ಯ ಎಷ್ಟಿದೆ ಗೊತ್ತಾ?

  • ಕಣ್ಮರೆಯಾಗಿದ್ದ ಶತಕೋಟ್ಯಧಿಪತಿ ಜಾಕ್ ಮಾ ಕೊನೆಗೂ ಪ್ರತ್ಯಕ್ಷ

    ಕಣ್ಮರೆಯಾಗಿದ್ದ ಶತಕೋಟ್ಯಧಿಪತಿ ಜಾಕ್ ಮಾ ಕೊನೆಗೂ ಪ್ರತ್ಯಕ್ಷ

    ಬೀಜಿಂಗ್: ಕೆಲ ತಿಂಗಳಿಂದ ಸಾರ್ವಜನಿಕವಾಗಿ ಕಾಣೆಯಾಗಿದ್ದ ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್ ಮಾ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಬುಧವಾರ ಸುಮಾರು 100 ಶಿಕ್ಷಕರಿಗೆ ಆನ್‍ಲೈನ್ ತರಬೇತಿ ನಡೆಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಅಕ್ಟೋಬರ್ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಶಿಕ್ಷಕರ ಸಾಧನೆಗಳನ್ನು ಗುರುತಿಸಲು ಮಾಜಿ ಇಂಗ್ಲಿಷ್ ಶಿಕ್ಷಕರಾಗಿರುವ ಜಾಕ್ ಮಾ ಅವರು ಪ್ರತಿ ವರ್ಷ ವಾರ್ಷಿಕ ಸಮ್ಮೇಳನ ನಡೆಸುತ್ತಾರೆ. ಅದೇ ರೀತಿ ಈ ವರ್ಷವೂ ಸಮ್ಮೇಳನ ನಡೆಸಿದ್ದು, ಈ ವೇಳೆ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಜಾಕ್ ಮಾ ಅವರ ಆನ್‍ಲೈನ್ ವಿಮಾ ವ್ಯವಹಾರ ಚೀನಾದ ಆ್ಯಂಟಿ ಟ್ರಸ್ಟ್ ರೆಗ್ಯೂಲೇಟರ್ಸ್ ಪರಿಶೀಲನೆಗೆ ಒಳಪಟ್ಟ ಬಳಿಕ ಅವರ ಭವಿಷ್ಯದ ಬಗ್ಗೆ ವದಂತಿಗಳು ಹರಡಿದ್ದವು. ಅಲ್ಲದೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ್ದರಿಂದ ಹಲವು ಅನುಮಾನಗಳು ಸಹ ಕಾಡ ತೊಡಗಿದ್ದವು. ಇದೀಗ ಅವರು ಕಾಣಿಸಿಕೊಂಡಿದ್ದಾರೆ.

    ಶಿಕ್ಷಕರನ್ನುದ್ದೇಶಿಸಿ ಮಾತನಾಡಿರುವ ಉದ್ಯಮಿ ಜಾಕ್ ಮಾ, ಸಾಮಾನ್ಯವಾಗಿ ಪ್ರತಿ ವರ್ಷ ಸೌತ್ ಹೈನಾನ್‍ನ ಸನ್ಯಾ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆ ಈ ಬಾರಿ ಆನ್‍ಲೈನ್ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಜಾಕ್ ಮಾ ಅವರು ಕಾಣಿಸಿಕೊಂಡಿರುವ ಕುರಿತು ಸ್ಥಳೀಯ ಬ್ಲಾಗ್‍ನಲ್ಲಿ ಬಿತ್ತರವಾಗಿತ್ತು. ಬಳಿಕ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಈ ಕುರಿತು ಖಚಿತಪಡಿಸಿತ್ತು. ಚೀನೀಸ್ ರೆಗ್ಯೂಲೇಟರ್ಸ್ ನವರು ಅಲಿಬಾಬಾ ಸಂಸ್ಥೆಯ ಫಿಂಟೆಕ್ ದೈತ್ಯ ಆಂಟ್ ಫೈನಾನ್ಶಿಯಲ್‍ನ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿದ್ದರು. ಆ ಬಳಿಕ ಜಾಕ್ ಮಾ ಕಾಣೆಯಾಗಿದ್ದರು ಎನ್ನಲಾಗಿತ್ತು.

    ಕಳೆದ ಅಕ್ಟೋಬರ್‍ನಿಂದ ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್ ಮಾ ಸಾರ್ವಜನಿಕವಾಗಿ ಕಣ್ಮರೆಯಾಗಿದ್ದರು. 2 ತಿಂಗಳ ಹಿಂದೆ ಜಾಕ್ ಮಾ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನೇತೃತ್ವದ ಸರ್ಕಾರದ ನೀತಿಯನ್ನು ಟೀಕಿಸಿದ್ದರು. ಈ ಟೀಕೆಯ ಬಳಿಕ ಜಾಕ್ ಮಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಲ್ಲ ಎಂದು ವರದಿಯಾಗಿತ್ತು.

    ತನ್ನ ನೀತಿಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರೆ ಚೀನಾ ಸರ್ಕಾರ ಸಾರ್ವಜನಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಅದೇ ರೀತಿ ಚೀನಾ ಜಾಕ್ ಮಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎಂದು ಹಲವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

    ಅನುಮಾನ ಎದ್ದಿದ್ದು ಯಾಕೆ?
    ಅಮೆರಿಕ ಬಿಸಿನೆಸ್ ಹೀರೋ ಟ್ಯಾಲೆಂಟ್ ಕಾರ್ಯಕ್ರಮವನ್ನು ಜಾಕ್ ಮಾ ಪ್ರಯೋಜಿಸಿದ್ದರು. ಈ ಶೋ ನ ಅಂತಿಮ ಕಾರ್ಯಕ್ರಮದಲ್ಲಿ ಜಾಕ್ ಮಾ ಭಾಗವಹಿಸಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಜಾಕ್ ಮಾ ಕಾಣಿಸಿರಲಿಲ್ಲ. ಅಲ್ಲದೆ ಆಫ್ರಿಕಾದ ಉದ್ಯಮಿಗಳ ಜೊತೆ ಕಾರ್ಯಕ್ರಮ ನಡೆಸಲು ಆಫ್ರಿಕಾ ಬಿಸಿನೆಸ್ ಹೀರೋ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಜಾಕ್ ಮಾ ನೇಮಕವಾಗಿದ್ದರು. ಆದರೆ ಈ ಕಾರ್ಯಕ್ರಮದ ವೆಬ್‍ಸೈಟ್‍ನಿಂದ ಜಾಕ್ ಮಾ ಫೋಟೋವನ್ನು ತೆಗೆಯಲಾಗಿತ್ತು.

    ಜಾಕ್ ಮಾ ಹೇಳಿದ್ದೇನು?
    ಅಕ್ಟೋಬರ್ 24 ರಂದು ಶಾಂಘೈನಲ್ಲಿ ಜಾಕ್ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು.

    ಜಾಕ್ ಮಾ ಭಾಷಣ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಜನ ಜಾಕ್ ಮಾ ಸುರಕ್ಷತೆಯ ಬಗ್ಗೆ ಆಗಲೇ ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದರು.

    ತನಿಖೆ ಆರಂಭಿಸಿದ್ದು ಯಾಕೆ?
    ಜಾಕ್‍ ಮಾ ಆಂಟ್ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ನವೆಂಬರ್ ನಲ್ಲಿ ಈ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡಿ 37 ಶತಕೋಟಿ ಡಾಲರ್ ಹಣ ಸಂಗ್ರಹಿಸಲು ಮುಂದಾಗಿತ್ತು. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಐಪಿಒ ಸಂಗ್ರಹಿಸಿದ ಕಂಪನಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಚೀನಾ ಸರ್ಕಾರ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿತ್ತು.

    ಚೀನಾ ಸರ್ಕಾರದ ಬಗ್ಗೆ ಬಹಿರಂಗ ಟೀಕೆ, ಐಪಿಒ ಬಿಡುಗಡೆ, ಆಲಿಬಾಬಾ ಕಂಪನಿಯ ಮೇಲೆ ತನಿಖೆ ಈ ಎಲ್ಲ ವಿಚಾರಗಳು ಒಂದಕ್ಕೊಂದು ಹೋಲಿಕೆ ಆಗುತ್ತಿರುವ ಕಾರಣ ಜಾಕ್ ಮಾ ಸುರಕ್ಷತೆಯ ಬಗ್ಗೆ ಜನ ಆಗಲೇ ಪ್ರಶ್ನಿಸಿದ್ದರು.

  • ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್‌ ಮಾ ಕಣ್ಮರೆ

    ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್‌ ಮಾ ಕಣ್ಮರೆ

    ಬೀಜಿಂಗ್‌: ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್‌ ಮಾ  ಕಣ್ಮರೆಯಾಗಿದ್ದಾರೆ  ಎಂಬ ಶಂಕೆ ವ್ಯಕ್ತವಾಗಿದೆ.

    2 ತಿಂಗಳ ಹಿಂದೆ ಜಾಕ್‌ ಮಾ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಸರ್ಕಾರದ ನೀತಿಯನ್ನು ಟೀಕಿಸಿದ್ದರು. ಈ ಟೀಕೆಯ ಬಳಿಕ ಜಾಕ್‌ ಮಾ ಸಾರ್ವಾಜನಿಕವಾಗಿ ಎಲ್ಲೂ ಕಾಣಿಸಿಲ್ಲ ಎಂದು ವರದಿಯಾಗಿದೆ.

    ತನ್ನ ನೀತಿಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರೆ ಚೀನಾ ಸರ್ಕಾರ ಸಾರ್ವಜನಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಅದೇ ರೀತಿಯಾಗಿ ಚೀನಾ ಜಾಕ್‌ ಮಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎಂಬ ಅಭಿಪ್ರಾಯಗಳನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಅನುಮಾನ ಯಾಕೆ?
    ʼಅಮೆರಿಕ ಬಿಸಿನೆಸ್‌ ಹೀರೋʼ ಟ್ಯಾಲೆಂಟ್‌ ಕಾರ್ಯಕ್ರಮವನ್ನು ಜಾಕ್‌ ಮಾ ಪ್ರಯೋಜಿಸಿದ್ದರು. ಈ ಶೋದ ಅಂತಿಮ ಕಾರ್ಯಕ್ರಮದಲ್ಲಿ ಜಾಕ್‌ ಮಾ ಭಾಗವಹಿಸಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಜಾಕ್‌ ಮಾ ಕಾಣಿಸಿರಲಿಲ್ಲ.

    ಆಫ್ರಿಕಾದ ಉದ್ಯಮಿಗಳ ಜೊತೆ ಕಾರ್ಯಕ್ರಮ ನಡೆಸಲು ʼಆಫ್ರಿಕಾ ಬಿಸಿನೆಸ್‌ ಹೀರೋʼ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಜಾಕ್‌ ಮಾ ನೇಮಕವಾಗಿದ್ದರು. ಆದರೆ ಈ ಕಾರ್ಯಕ್ರಮದ ವೆಬ್‌ಸೈಟ್‌ನಿಂದ ಜಾಕ್‌ ಮಾ ಫೋಟೋವನ್ನು ತೆಗೆಯಲಾಗಿತ್ತು.

    ಜಾಕ್‌ ಮಾ ಹೇಳಿದ್ದು ಏನು?
    ಅಕ್ಟೋಬರ್‌ 24 ರಂದು ಶಾಂಘೈನಲ್ಲಿ ಜಾಕ್‌ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು.

    ಜಾಕ್‌ ಮಾ ಭಾಷಣ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಜನ ಜಾಕ್‌ ಮಾ ಸುರಕ್ಷತೆಯ ಬಗ್ಗೆ ಆಗಲೇ ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದರು.

    ತನಿಖೆ ಆರಂಭಿಸಿದ್ದು ಯಾಕೆ?
    ಜಾಕ್‌ಮಾ ಆಂಟ್‌ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ನವೆಂಬರ್‌ನಲ್ಲಿ ಈ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡಿ 37 ಶತಕೋಟಿ ಡಾಲರ್‌ ಹಣ ಸಂಗ್ರಹಿಸಲು ಮುಂದಾಗಿತ್ತು. ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಐಪಿಒ ಸಂಗ್ರಹಿಸಿದ ಕಂಪನಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಅನುಮಾನ ವ್ಯಕ್ತಪಡಿದ್ದರು. ಇದಾದ ಬಳಿಕ ಚೀನಾ ಸರ್ಕಾರ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿತ್ತು.

    ಚೀನಾ ಸರ್ಕಾರದ ಬಗ್ಗೆ ಬಹಿರಂಗ ಟೀಕೆ, ಐಪಿಒ ಬಿಡುಗಡೆ, ಆಲಿಬಾಬಾ ಕಂಪನಿಯ ಮೇಲೆ ತನಿಖೆ ಈ ಎಲ್ಲ ವಿಚಾರಗಳು ಒಂದಕ್ಕೊಂದು ಹೋಲಿಕೆ ಆಗುತ್ತಿರುವ ಕಾರಣ ಜಾಕ್‌ ಮಾ ಸುರಕ್ಷತೆಯ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ.

  • ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

    ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

    ನವದೆಹಲಿ: ಆಲಿಬಾಬಾ ಒಡೆತನದ ಮಾಲೀಕ ಜಾಕ್ ಮಾ ರನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಹಿಂದಿಕ್ಕಿ, ಏಷ್ಯಾದ ಅಗ್ರಗಣ್ಯ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

    ಭಾರತದ ಇ-ಕಾಮರ್ಸ್ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸಂಚಲನಕ್ಕೆ ಕಾರಣವಾಗಿದ್ದು, ಮುಕೇಶ್ ಅಂಬಾನಿಯವರು ಏಷ್ಯಾದ ಬೃಹತ್ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್‍ಬರ್ಗ್ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ ಅಂಬಾನಿ ಅವರ ಆಸ್ತಿ 44.3 ಶತಕೋಟಿ ಡಾಲರ್(3,03,445 ಕೋಟಿ ರೂ.) ಆಗಿದೆ. ಈ ಮೊದಲು ಏಷ್ಯಾದ ನಂ. 1 ಶ್ರೀಮಂತರಾಗಿದ್ದ ಆಲಿಬಾಬಾ ಸಂಸ್ಥೆಯ ಮಾಲೀಕ ಜಾಕ್ ಮಾ ಅವರ ಸಂಪತ್ತು 44 ಶತಕೋಟಿ ಡಾಲರ್‍ನಷ್ಟಿತ್ತು ಎಂದು ಬ್ಲೂಮ್‍ಬರ್ಗ ಸಂಸ್ಥೆ ವರದಿ ಮಾಡಿದೆ.

    ಬ್ಲೂಮ್‍ಬರ್ಗ್ ವರದಿ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.1.7ರಷ್ಟು ಬೆಳವಣಿಗೆ ದಾಖಲಿಸಿ ರೂಪಾಯಿ 1,199.8 ರಷ್ಟನ್ನು ಷೇರುದಾರರು ಹೆಚ್ಚಿಗೆ ಗಳಿಸಿದ್ದಾರೆ. ಈ ವರ್ಷ ರಿಲಯನ್ಸ್ ನ ಪೆಟ್ರೊಕೆಮಿಕಲ್ಸ್ ಸಾಮರ್ಥ್ಯ ದುಪ್ಪಟ್ಟಾಗಿದ್ದು, ಅಂಬಾನಿ ಸಂಪತ್ತಿಗೆ ಈ ವರ್ಷ 400 ಕೋಟಿ ಡಾಲರ್(27,400 ಕೋಟಿ ರೂ.) ಜಮೆಯಾಗಿದೆ. ರಿಲಯನ್ಸ್ ಜಿಯೋ ಆದಾಯದಿಂದ ಹೂಡಿಕೆದಾರರು ಸಂತೋಷಗೊಂಡಿದ್ದಾರೆ.

    ಜಿಯೋಗೆ 21.5 ಕೋಟಿ ಟೆಲಿಕಾಂ ಚಂದಾದಾರರಿದ್ದು, ವ್ಯಾಪ್ತಿ ವಿಸ್ತರಣೆಗೆ ಪೂರಕವಾಗಿ ನಾನಾ ಹೊಸ ಯೋಜನೆಗಳನ್ನು ತಿಂಗಳ ಆರಂಭದಲ್ಲಿಯಷ್ಟೇ ಕಂಪನಿ ಘೋಷಿಸಿದೆ. ರಿಲಯನ್ಸ್ ರೀಟೇಲ್ ಲಿಮಿಟೆಡ್ ಮತ್ತು ರಿಲಯನ್ಸ್ ಜಿಯೋ ಬಿಸಿನೆಸ್ ಅನ್ನು ಬಳಸಿಕೊಂಡು, ಆನ್‍ಲೈನ್‍ನಿಂದ ಆಫ್‍ಲೈನ್ ವರೆಗಿನ ವಲಯದಲ್ಲಿ ದೊಡ್ಡ ಬೆಳವಣಿಗೆಯ ಅವಕಾಶ ಸೃಷ್ಟಿಸಲಿದ್ದೇವೆ,” ಎಂದು ಅಂಬಾನಿ ಅವರು ಇತ್ತೀಚೆಗೆ ನಡೆದ 41ನೇ ವಾರ್ಷಿಕ ಸಭೆಯಲ್ಲಿ ಹೇಳಿದ್ದರು.

    ದೇಶದ 1,100 ನಗರಗಳಲ್ಲಿ ಮೊದಲ ಹಂತದಲ್ಲಿ ಫೈಬರ್ ಆಧಾರಿತ ಬ್ರ್ಯಾಡ್‍ಬ್ಯಾಂಡ್ ಸೇವೆಯನ್ನು ಆರಂಭಿಸಲು ಜಿಯೊ ಮುಂದಾಗಿದೆ. ಇದು ಟೆಲಿಕಾಂ ವಲಯದಲ್ಲಿ ಇನ್ನೊಂದು ಸಂಚಲನಕ್ಕೆ ಕಾರಣವಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.