Tag: ಜಾಕ್ ಪ್ಯಾಟ್ರಿಕ್ ಡಾರ್ಸಿ

  • ಟ್ವಿಟ್ಟರ್ ಸಂಸ್ಥೆಯಿಂದ ಭಾರತಕ್ಕೆ 110 ಕೋಟಿ ರೂ. ನೆರವು

    ಟ್ವಿಟ್ಟರ್ ಸಂಸ್ಥೆಯಿಂದ ಭಾರತಕ್ಕೆ 110 ಕೋಟಿ ರೂ. ನೆರವು

    ವಾಷಿಂಗ್ಟನ್: ಕೊರೊನಾ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಭಾರತಕ್ಕೆ ಖ್ಯಾತ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಂಸ್ಥೆ 15 ಮಿಲಿಯನ್(110 ಕೋಟಿ) ಹಣವನ್ನು ನೀಡುವ ಮೂಲಕ ನೆರವಿನ ಹಸ್ತ ಚಾಚಿದೆ.

    ಈ ಕುರಿತು ಟ್ವೀಟ್ ಮಾಡಿರುವ ಟ್ವಿಟ್ಟರ್ ಸಂಸ್ಥೆಯ ಸಿಇಒ ಜಾಕ್ ಪ್ಯಾಟ್ರಿಕ್ ಡಾರ್ಸಿ, ಭಾರತಕ್ಕೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಸರ್ಕಾರೇತರ ಸಂಸ್ಥೆ(ಎನ್‍ಜಿಒ)ಗಳ ಮೂಲಕ 10 ಮಿಲಿಯನ್ ಹಣ ನೀಡುತ್ತಿದ್ದೇವೆ ಎಂದಿದ್ದಾರೆ.

    ಎನ್‍ಜಿಒ ಗಳಾದ ಯೈಡ್ ಇಂಡಿಯಾ ಮತ್ತು ಸೇವಾ ಇಂಟರ್‍ ನ್ಯಾಷನಲ್ ಅಮೆರಿಕ ಸಂಸ್ಥೆಯೊಂದಿಗೆ ಕೈಜೋಡಿಸಿ 110 ಕೋಟಿ ರೂಪಾಯಿ ಹಣವನ್ನು ನೀಡಲು ಮುಂದೆ ಬಂದಿದ್ದು, ಸೇವಾ ಇಂಟರ್‍ ನ್ಯಾಷನಲ್ ಎನ್‍ಜಿಒ ಈಗಾಗಲೇ ಆಕ್ಸಿಜನ್ ಮತ್ತು ವೆಂಟಿಲೇಟರ್‍ ಗಳನ್ನು ಭಾರತಕ್ಕೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

    ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಕೊರೊನಾ ಕೇಸ್ ಪತ್ತೆಯಾಗಿದ್ದು, 4205ಕ್ಕೂ ಅಧಿಕ ಜನ ಕೊರೊನಾಗೆ ಬಲಿಯಾಗಿದ್ದಾರೆ. ಈಗಾಗಲೇ ಭಾರತದಲ್ಲಿ ಕೊರೊನಾ ಎರಡನೇ ಅಲೆ ಹಲವು ಸಾವು-ನೋವುಗಳನ್ನು ತಂದೊಡ್ಡಿದ್ದು ಹಲವು ದೇಶಗಳಿಂದ ಭಾರತಕ್ಕೆ ನೆರವಿನ ಮಹಾಪೂರ ಹರಿದು ಬರುತ್ತಿದೆ.