Tag: ಜಾಕ್ ಡಾರ್ಸೆ

  • ಟ್ವಿಟ್ಟರ್‌ಗೆ ಸೆಡ್ಡು – ಪರ್ಯಾಯ ಆ್ಯಪ್ ರಚಿಸಿದ ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡಾರ್ಸೆ

    ಟ್ವಿಟ್ಟರ್‌ಗೆ ಸೆಡ್ಡು – ಪರ್ಯಾಯ ಆ್ಯಪ್ ರಚಿಸಿದ ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡಾರ್ಸೆ

    ವಾಷಿಂಗ್ಟನ್: ಟ್ವಿಟ್ಟರ್‌ನ (Twitter) ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್ ಡಾರ್ಸೆ (Jack Dorsey) ಮೈಕೋಬ್ಲಾಗಿಂಗ್ ಸೈಟ್‌ಗೆ ಪರ್ಯಾಯವಾಗಿ ಹೊಸ ಆ್ಯಪ್ ರಚನೆ ಮಾಡಿದ್ದು, ಇದೀಗ ಆ್ಯಪ್ ಪರೀಕ್ಷಾ ಹಂತದಲ್ಲಿದೆ ಎಂದು ವರದಿಯಾಗಿದೆ.

    ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಮಾಜಿ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಉನ್ನತ ಅಧಿಕಾರಿಗಳನ್ನೇ ವಜಾಗೊಳಿಸಲಾಗಿದೆ. ಈ ಬದಲಾವಣೆಯ ನಡುವೆಯೇ ಡಾರ್ಸೆ ಟ್ವಿಟ್ಟರ್‌ಗೆ ಪರ್ಯಾಯವಾಗಿ ಬ್ಲೂಸ್ಕೈ (Bluesky) ಹೆಸರಿನ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು.

    ವರದಿಗಳ ಪ್ರಕಾರ ಬ್ಲೂಸ್ಕೈ ಅಪ್ಲಿಕೇಶನ್ ಐಒಎಸ್‌ನ ಆ್ಯಪ್ ಸ್ಟೋರ್‌ನಲ್ಲಿ ಬೀಟಾ ಪರೀಕ್ಷೆಗಾಗಿ ಬಿಡುಗಡೆ ಮಾಡಲಾಗಿದೆ. ಇದು ಮೊದಲ ಬಾರಿ ಫೆಬ್ರವರಿ 17 ರಂದು ಆ್ಯಪ್ ಸ್ಟೋರ್‌ನಲ್ಲಿ ಕಾಣಿಸಿಕೊಂಡಿತ್ತು. ಪರೀಕ್ಷಾ ಹಂತದಲ್ಲಿ ಇದನ್ನು 2,000 ಬಾರಿ ಇನ್‌ಸ್ಟಾಲ್ ಮಾಡಲಾಗಿದೆ ಎಂದು ಎಂದು ವರದಿಯಾಗಿದೆ.

    ಬ್ಲೂಸ್ಕೈ ಆ್ಯಪ್‌ನ ಇಂಟರ್ಫೇಸ್ ಅನ್ನು ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಅಪ್ಲಿಕೇಶನ್‌ನಲ್ಲಿರುವ ಪ್ಲಸ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಬಳಕೆದಾರರು ಫೋಟೋಗಳನ್ನು ಒಳಗೊಂಡಂತೆ 256 ಅಕ್ಷರಗಳ ಪೋಸ್ಟ್ಅನ್ನು ಸುಲಭವಾಗಿ ರಚಿಸಬಹುದು. ಟ್ವಿಟ್ಟರ್‌ನಂತೆಯೇ ಬ್ಲೂಸ್ಕೈನಲ್ಲಿ ಲೈಕ್ಸ್, ರೀಪೋಸ್ಟ್, ಫಾಲೋ, ಹಾಗೂ ರಿಪ್ಲೈ ಮಾಡಬಹುದಾದ ಫೀಚರ್‌ಗಳಿವೆ. ಆದರೆ ಇದರಲ್ಲಿ ವ್ಯಕ್ತಿಗಳಿಗೆ ನೇರ ಸಂದೇಶ ಕಳುಹಿಸುವ ಫೀಚರ್ ಇಲ್ಲ. ಇದನ್ನೂ ಓದಿ: ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

    ಬ್ಲೂಸ್ಕೈನ ಯೋಜನೆಯನ್ನು 2019ರಲ್ಲಿ ಟ್ವಿಟ್ಟರ್ ಅಭಿವೃದ್ಧಿಪಡಿಸಿತ್ತು. ಆದರೆ ಬಳಿಕ 2022ರಲ್ಲಿ ಅದನ್ನು ಸ್ವತಂತ್ರ್ಯ ಕಂಪನಿಯಾಗಿ ಪ್ರತ್ಯೇಕಗೊಳಿಸಲಾಯಿತು. ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧಿನಪಡಿಸಿಕೊಳ್ಳುವುದಕ್ಕೂ 1 ವಾರ ಮೊದಲೇ ಡಾರ್ಸೆ ಬ್ಲೂಸ್ಕೈಗೆ ಬೀಟಾ ಪರೀಕ್ಷಕರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

  • ಮಸ್ಕ್‌ನಿಂದ ಟ್ವಿಟ್ಟರ್ ಖರೀದಿ ಯೋಜನೆ – ಮಂಡಳಿಯಿಂದ ಹೊರನಡೆದ ಮಾಜಿ ಸಿಇಒ

    ಮಸ್ಕ್‌ನಿಂದ ಟ್ವಿಟ್ಟರ್ ಖರೀದಿ ಯೋಜನೆ – ಮಂಡಳಿಯಿಂದ ಹೊರನಡೆದ ಮಾಜಿ ಸಿಇಒ

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಕೊಳ್ಳುವ ಯೋಜನೆ ಬೆನ್ನಲ್ಲೇ ಟ್ವಿಟ್ಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಮಂಡಳಿಯಿಂದ ಹೊರನಡೆದಿದ್ದಾರೆ.

    ಜಾಕ್ ಡೋರ್ಸೆ ಟ್ವಿಟ್ಟರ್ ಸಿಇಒ ಆಗಿ ಮತ್ತೆ ಬರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಡೋರ್ಸೆ ಮಂಡಳಿಯಿಂದ ಕೆಳಗಿಳಿದು, ಮತ್ತೆ ಟ್ವಿಟ್ಟರ್ ಸಿಇಒ ಆಗಿ ಹಿಂದಿರುಗುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ: ಕೆಲವು ಐಫೋನ್‌ಗಳಲ್ಲಿ ಸ್ಥಗಿತವಾಗಲಿದೆ ವಾಟ್ಸಪ್

    Elon Musk twitter 1

    ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಆದರೆ 44 ಬಿಲಿಯನ್ ಡಾಲರ್‌(ಸುಮಾರು 3 ಲಕ್ಷ ಕೋಟಿ ರೂ.) ಒಪ್ಪಂದವನ್ನು ಅನೇಕ ಕಾರಣಗಳಿಂದಾಗಿ ತಡೆ ಹಿಡಿಯಲಾಗಿದೆ.

    ಡಾರ್ಸೆ ಟ್ವಿಟ್ಟರ್ ಸಿಇಒ ಹುದ್ದೆಯಿಂದ ಕೆಳಗಿಳಿದಂದಿನಿಂದ ಮಂಡಳಿಯನ್ನು ತೊರೆಯುವ ಬಗ್ಗೆ ತಿಳಿಸಿದ್ದರು. 2022ರ ಷೇರುದಾರರ ಸಭೆಯಲ್ಲಿ ತಮ್ಮ ಅವಧಿ ಮುಗಿಯುವವರೆಗೆ ಮಂಡಳಿಯ ಭಾಗವಾಗಿಯೇ ಇರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಚಾಂಪಿಯನ್‍ಷಿಪ್‍ಗೆ ಮಾನ್ಯತೆ ಪಡೆದ ಐರ್ಲೆಂಡ್, ಬಾಂಗ್ಲಾದೇಶ

    2021ರ ನವೆಂಬರ್‌ನಲ್ಲಿ ಡಾರ್ಸೆ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ರಾಜೀನಾಮೆಗೆ ನಿಖರವಾದ ಕಾರಣವನ್ನು ಉಲ್ಲೇಖಿಸಿರಲಿಲ್ಲ. ಡೋರ್ಸೆ ಪ್ರಸ್ತುತ ಹಣಕಾಸು ಪಾವತಿ ಪ್ಲಾಟ್‌ಫಾರ್ಮ್ ಆಗಿರುವ ಬ್ಲಾಕ್ ಅನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಇದಕ್ಕೆ ಸ್ಕ್ವೇರ್ ಎಂಬ ಹೆಸರಿತ್ತು.

  • ಖಾಸಗಿ ಫೋಟೋ, ವೀಡಿಯೋ ಹಂಚಿಕೆಗೆ ಟ್ವಿಟ್ಟರ್ ನಿರ್ಬಂಧ

    ಖಾಸಗಿ ಫೋಟೋ, ವೀಡಿಯೋ ಹಂಚಿಕೆಗೆ ಟ್ವಿಟ್ಟರ್ ನಿರ್ಬಂಧ

    ನವದೆಹಲಿ: ವೈಯಕ್ತಿಕ ಫೋಟೋ ಮತ್ತು ವೀಡಿಯೋಗಳನ್ನು ವ್ಯಕ್ತಿಯ ಅನುಮತಿ ಇಲ್ಲದೆ ಹಂಚಿಕೊಳ್ಳುಲು ಇನ್ಮುಂದೆ ಅವಕಾಶ ನೀಡುವುದಿಲ್ಲ ಎಂದು ಸಮಾಜಿಕ ಜಾಲತಾಣ ಕಂಪನಿಯಾದ ಟ್ವಿಟ್ಟರ್ ಹೇಳಿದೆ.

    ಈಗಾಗಲೇ ಅನ್ಯರ ಫೋನ್ ನಂಬರ್, ವಿಳಾಸ, ಗುರುತಿನ ಚೀಟಿಯಂತಹ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಷೇಧಿಸಿ ಟ್ವೀಟರ್ ನೀತಿ ಜಾರಿ ಮಾಡಿದೆ. ಹೊಸ ನಿಯಮದ ಅನ್ವಯ ಬಳಕೆದಾರರು ಪ್ರತಿ ಬಾರಿ ಫೋಟೋ ಅಥವಾ ವೀಡಿಯೋ ಅಪ್ಲೋಡ್ ಮಾಡುವಾಗಲೂ ಟ್ವೀಟರ್ ಪರಾಮರ್ಶೆ ಮಾಡುವುದಿಲ್ಲ.  ಇದನ್ನೂ ಓದಿ: ಟ್ವಿಟ್ಟರ್‌ ಸಿಇಒ ಪರಾಗ್‌ ಅಗರ್‌ವಾಲ್‌ ಸಿಗುತ್ತೆ ಕೋಟಿಗಟ್ಟಲೇ ಸಂಬಳ + ಬೋನಸ್‌

    ಚಿತ್ರಿತ ವ್ಯಕ್ತಿಗಳು ಅಥವಾ ಅಧಿಕೃತ ಪ್ರತಿನಿಧಿಗಳು ತಮ್ಮ ಖಾಸಗಿ ಚಿತ್ರ ಅಥವಾ ವೀಡಿಯೋವನ್ನು ಹಂಚಿಕೊಳ್ಳಲು ತಾವು ಒಪ್ಪಿಗೆ ನೀಡಿಲ್ಲ ಎಂದು ನಮಗೆ ಸೂಚಿಸಿದಾಗ, ನಾವು ಅದನ್ನು ತೆಗೆದುಹಾಕುತ್ತೇವೆ ಎಂದು ಟ್ವೀಟರ್ ತನ್ನ ಬ್ಲಾಗ್  ಪೋಸ್ಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಟ್ವಿಟ್ಟರ್‌ CEO ಜಾಕ್‌ ಡಾರ್ಸಿ ರಾಜೀನಾಮೆ – ಭಾರತೀಯ ಪರಾಗ್‌ ಅಗರ್‌ವಾಲ್‌ಗೆ ಒಲಿಯಿತು ಪಟ್ಟ


    ಮೈಕ್ರೋಬ್ಲಾಗಿಂಗ್ ಕಂಪನಿ ಟ್ವಿಟ್ಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಸೋಮವಾರ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದರು. ಟ್ವೀಟರ್‌ನ ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ಅಧಿಕಾರ ವಹಿಸಿಕೊಂಡಿದ್ದಾರೆ.