Tag: ಜಾಕಿ ಶ್ರಾಫ್

  • ಟೈಗರ್ ಶ್ರಾಫ್ ಜೊತೆ ಮಾಡ್ತಿರೋದು ಸಿನಿಮಾವಲ್ಲ : ರಶ್ಮಿಕಾ ಮಂದಣ್ಣ

    ಟೈಗರ್ ಶ್ರಾಫ್ ಜೊತೆ ಮಾಡ್ತಿರೋದು ಸಿನಿಮಾವಲ್ಲ : ರಶ್ಮಿಕಾ ಮಂದಣ್ಣ

    ಬಾಲಿವುಡ್ ಖ್ಯಾತ ಯುವ ನಟ ಟೈಗರ್ ಶ್ರಾಫ್ ಅವರ ಜೊತೆ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನುವ ಸುದ್ದಿಯಿತ್ತು. ಇದೇ ಮೊದಲ ಬಾರಿಗೆ ಈ ಜೋಡಿಯು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳು ಕೂಡ ಈ ಜೋಡಿಯನ್ನು ಒಟ್ಟಿಗೆ ನೋಡಲು ಕಾತರದಿಂದ ಕಾಯುತ್ತಿದ್ದರು. ಆದರೆ, ನಿರಾಸೆಯ ಸುದ್ದಿಯನ್ನು ಕೊಟ್ಟಿದ್ದಾರೆ ರಶ್ಮಿಕಾ. ತಾವು ಟೈಗರ್ ಶ್ರಾಫ್ ಜೊತೆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಹೇಳಿದ್ದಾರೆ.

    ರಶ್ಮಿಕಾ ಮಂದಣ್ಣ ಅವರು ಟೈಗರ್ ಶ್ರಾಫ್ ಜೊತೆ ನಟಿಸುತ್ತಿರುವುದು ನಿಜ. ಆದರೆ, ಅದು ಸಿನಿಮಾದಲ್ಲಿ ಅಲ್ಲವಂತೆ. ಟೈಗರ್ ಶ್ರಾಫ್ ಜೊತೆ ಅವರು ಜಾಹೀರಾತುವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಕುರಿತು ರಶ್ಮಿಕಾ ಮಂದಣ್ಣ ಅವರೇ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ನಿಮ್ಮ ರೂಮರ್ಸ್, ಗಾಸಿಪ್ ಎಲ್ಲವೂ ನಿಜ. ಆದರೆ, ಟೈಗರ್ ಶ್ರಾಫ್ ಜೊತೆ ಸಿನಿಮಾದಲ್ಲಿ ಅಲ್ಲ, ಜಾಹೀರಾತಿನಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಬರ್ತಡೇ : ಏನೆಲ್ಲ ಸ್ಪೆಷಲ್ ಗೊತ್ತಾ?

    ಬಾಲಿವುಡ್ ನಲ್ಲಿ ಸಖತ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಹೆಸರಾಂತ ಕಲಾವಿದರ ಜೊತೆ ಅವಕಾಶ ಸಿಗುತ್ತಿರುವುದು ಸಹಜವಾಗಿಯೇ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಆದರೆ, ಮುಂದಿನ ದಿನಗಳಲ್ಲಿ ಟೈಗರ್ ಶ್ರಾಫ್ ಜೊತೆ ರಶ್ಮಿಕಾಗೆ ಅವಕಾಶ ಸಿಗಲಿ ಎಂದು ಹಾರೈಸಿದ್ದಾರೆ. ಈ ಜೋಡಿ ಕೂಡ ಹಿಟ್ ಆಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಅಮಿತಾಭ್ ಸೇರಿದಂತೆ ಹಲವು ಖ್ಯಾತ ನಟರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ರಶ್ಮಿಕಾ ಅಚ್ಚರಿ ಮೂಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಲ್ಡಿಂಗ್‍ನ ತುತ್ತತುದಿಯಲ್ಲಿ ನಿಂತು ಸ್ಟಾರ್ ನಟನ ತಂಗಿಯ ಲಿಪ್‍ಲಾಕ್

    ಬಿಲ್ಡಿಂಗ್‍ನ ತುತ್ತತುದಿಯಲ್ಲಿ ನಿಂತು ಸ್ಟಾರ್ ನಟನ ತಂಗಿಯ ಲಿಪ್‍ಲಾಕ್

    -ಅಣ್ಣ ಸಿಂಗಲ್, ತಂಗಿ ಎಂಗೇಜ್
    -ಹಾಟ್ ಫೋಟೋಗಳಿಂದಲೇ ಸುದ್ದಿಯಾಗೋ ಸ್ಟಾರ್ ಕುಡಿ

    ಮುಂಬೈ: ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಪುತ್ರಿ, ಟೈಗರ್ ಶ್ರಾಫ್ ಸೋದರಿ ಕೃಷ್ಣಾ ಶ್ರಾಫ್ ತನ್ನ ಗೆಳೆಯನ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿವೆ.

    ಸೋದರ ಜಾಕಿ ಶ್ರಾಫ್ ಸಿಂಗಲ್ ಆಗಿದ್ದರೂ ಸೋದರಿ ಕೃಷ್ಣಾ ಗೆಳೆಯನ ಜೊತೆ ಕೊರೊನಾ ಹಾಲಿಡೇಯನ್ನ ಎಂಜಾಯ್ ಮಾಡ್ತಿದ್ದಾರೆ. ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ನಡುವೆ ಲವ್ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ಇಬ್ಬರೂ ಮಾತ್ರ ತಾವು ಇನ್ನೂ ಸಿಂಗಲ್ ಅಂತಾನೇ ಹೇಳಿಕೊಂಡಿದ್ದಾರೆ. ಆದ್ರೆ ಟೈಗರ್ ಸೋದರಿ ಬಹು ದಿನಗಳ ಹಿಂದೆ ತನ್ನ ಪ್ರೀತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    https://www.instagram.com/p/B_pUWQxg4e8/?utm_source=ig_embed

    ಬಾಸ್ಕೆಟ್ ಬಾಲ್ ಆಟಗಾರ ಇಬಾನ್ ಹ್ಯಾಂಸ್ ಪ್ರೇಮಪಾಶದಲ್ಲಿ ಕೃಷ್ಣಾ ಬಂಧಿಯಾಗಿದ್ದು, ಸದ್ಯ ಇಬ್ಬರು ಮುಂಬೈನಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೃಷ್ಣಾ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. 2015ರಲ್ಲಿ ಕೃಷ್ಣಾರ ಟಾಪ್‍ಲೆಸ್ ಫೋಟೋ ಚರ್ಚೆಗೆ ಗ್ರಾಸವಾಗಿತ್ತು.

  • ವೈರಲ್ ಆಯ್ತು ಜಾಕಿ ಶ್ರಾಫ್ ಟ್ರಾಫಿಕ್ ಕ್ಲಿಯರ್: ವಿಡಿಯೋ ನೋಡಿ

    ವೈರಲ್ ಆಯ್ತು ಜಾಕಿ ಶ್ರಾಫ್ ಟ್ರಾಫಿಕ್ ಕ್ಲಿಯರ್: ವಿಡಿಯೋ ನೋಡಿ

    ಲಕ್ನೋ: ಬಾಲಿವುಡ್‍ನ ಹಿರಿಯ ನಟ ಜಾಕಿ ಶ್ರಾಫ್ ರವರು ಸ್ವತಃ ರಸ್ತೆಗಿಳಿದು ಟ್ರಾಫಿಕ್ ಕ್ಲಿಯರ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಬಾಲಿವುಡ್ ನ ಹಿರಿಯ ನಟರಾದ 61 ವರ್ಷದ ಜಾಕಿ ಶ್ರಾಫ್ ರವರು ಲಕ್ನೋ ದ ಜನದಟ್ಟಣೆ ಪ್ರದೇಶದಲ್ಲಿ ಸಂಚಾರ ಪೊಲೀಸರ ರೀತಿ ರಸ್ತೆಗಿಳಿದು ವಾಹನ ದಟ್ಟಣೆಯಿಂದ ಕೂಡಿದ್ದ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಿ ಅಲ್ಲಿಂದ ತಮ್ಮ ಕಾರನ್ನು ಏರಿ ತೆರಳಿದ್ದಾರೆ.

    ಈ ವಿಡಿಯೋವನ್ನು ಜಾಕಿ ಶ್ರಾಫ್ ಕಾರಿನಲ್ಲಿದ್ದವರು ಸೆರೆ ಹಿಡಿದಿದ್ದು, ನಂತರ ಜಾಕಿಶ್ರಾಫ್ ರವರು ತಮ್ಮ ಟ್ವಿಟ್ಟರ್ ನಲ್ಲಿ ಲಕ್ನೋ ಟ್ರಾಫಿಕ್ ಕಂಟ್ರೋಲ್ ಎಂದು ಬರೆದು ತಮ್ಮ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ನಟ ಜಾಕಿ ಶ್ರಾಫ್ ರವರ ಸಾಮಾಜಿಕ ಕಳಕಳಿಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.