Tag: ಜಾಂಡೀಸ್

  • ನಟ, ನಿರ್ದೇಶಕ ಸೂರ್ಯ ಕಿರಣ್ ನಿಧನ

    ನಟ, ನಿರ್ದೇಶಕ ಸೂರ್ಯ ಕಿರಣ್ ನಿಧನ

    ಖ್ಯಾತ ನಟ ಹಾಗೂ ನಿರ್ದೇಶಕ ಸೂರ್ಯ ಕಿರಣ್ (Surya Kiran) ನಿಧನರಾಗಿದ್ದಾರೆ. ತೆಲುಗು ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದ ಸೂರ್ಯ ಕಿರಣ್ ಅವರಿಗೆ ಜಾಂಡೀಸ್ ಆಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    ಕೇವಲ 48ರ ಹರೆಯದ ಸೂರ್ಯ ಕಿರಣ್ ಸಿನಿಮಾ ಮತ್ತು ಕಿರುತೆರೆ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರಾಜು ಬೈ ಮತ್ತು ಸತ್ಯಂ, ಬ್ರಹ್ಮಾಸ್ತ್ರ, ಚಾಪ್ಟರ್ 6 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಜೊತೆಗೆ ಬಿಗ್ ಬಾಸ್ ತೆಲುಗು ಸೀಸನ್ ನಲ್ಲೂ ಇವರು ಭಾಗಿಯಾಗಿದ್ದರು.

     

    ಮೂಲತಃ ಕೇರಳದವರಾದ ಸೂರ್ಯ, ಹುಟ್ಟಿ ಬೆಳೆದದ್ದೆಲ್ಲ ಚೆನ್ನೈನಲ್ಲಿ. ಸಿನಿಮಾ ನಟರಾಗಿ ನೂರಾರು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ವೈಯಕ್ತಿಕ ಬದುಕಿನಲ್ಲಿ ಸೋತಿದ್ದರು ಎನ್ನುವ ಮಾಹಿತಿ ಕೂಡ ಇದೆ.

  • ಜಾಂಡೀಸ್ ನಿಂದ ಯುವತಿ ಸಾವು- ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಪೋಷಕರ ಆಕ್ರೋಶ

    ಜಾಂಡೀಸ್ ನಿಂದ ಯುವತಿ ಸಾವು- ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಪೋಷಕರ ಆಕ್ರೋಶ

    ಬೆಂಗಳೂರು: ನಗರದ ಇತಿಹಾಸ ಪ್ರಸಿದ್ಧ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾದಲ್ಲಿ ರೋಗಿಗಳ ನರಕಯಾತನೆ ಮುಂದುವರಿದಿದೆ.

    ಜಾಂಡೀಸ್‍ನಿಂದ ಬಳಲುತ್ತಿದ್ದ 26 ವರ್ಷದ ಯುವತಿಗೆ ಆಪರೇಷನ್ ಮಾಡ್ಬೇಕು ಅಂತ ಮೂರ್ನಾಲ್ಕು ದಿನ ಚಿಕಿತ್ಸೆಯನ್ನ ವೈದ್ಯರು ಕೊಟ್ಟಿದ್ದಾರೆ. ಆದ್ರೆ, ಎರಡು ದಿನಗಳ ಹಿಂದೆ ಯುವತಿ ಸಾವನ್ನಪ್ಪಿದ್ದಾಳೆ. ಇದ್ರಿಂದ ಆಕ್ರೋಶಿತರಾದ ಯುವತಿಯ ಪೋಷಕರು ವಿಕ್ಟೋರಿಯಾ ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ.

    ಸರ್ಕಾರಿ ಆಸ್ಪತ್ರೆಯಾದ್ರೂ ಹೊರಗಿನಿಂದಲೇ ಔಷಧಿ ತರಬೇಕಿದೆ. ಸರಿಯಾಗಿ ಟ್ರೀಟ್‍ಮೆಂಟ್ ಕೊಡ್ತಿಲ್ಲ. ಎಮರ್ಜೆನ್ಸಿ ವಾರ್ಡಿನಲ್ಲಿರುವ ರೋಗಿಯನ್ನ ಡಿಸ್ಚಾರ್ಜ್ ಮಾಡಿ ಕರೆದುಕೊಂಡು ಹೋಗಿ. ಅವ್ರು ಸತ್ರೆ ನಮ್ಮನ್ನ ಕೇಳಬಾರದು ಅಂತ ಡಾಕ್ಟರ್ ಹೇಳ್ತಾರೆ ಅಂತ ದೂರಿದ್ರು.

    ಹೆಸರಿಗಷ್ಟೇ ಇದು ಸರ್ಕಾರಿ ಆಸ್ಪತ್ರೆ. ನಡೆಯೋದು ಬರೀ ದುಡ್ಡಿನ ದಂಧೆ. ದುಡ್ಡಿಲ್ಲ ಅಂದ್ರೇ ಡಾಕ್ಟರ್ ನಿಂದ ಕಾಂಪೌಂಡರ್ ವರೆಗೂ ತುಚ್ಛವಾಗಿ ಕಾಣ್ತಾರೆ. ಅಂತ ಕಲಬುರ್ಗಿಯಿಂದ ಬಂದಿರೋ ವ್ಯಕ್ತಿಯೊಬ್ಬರು ದೂರಿದ್ದಾರೆ.