Tag: ಜಹಾಂಗೀರ್‌ಪುರ ಗಲಭೆ

  • ಜಹಾಂಗೀರ್‌ಪುರ ಗಲಭೆ ಪ್ರಕರಣ –  ದೆಹಲಿ ಪೊಲೀಸರ ಮೇಲೆ ವಿಶ್ವಾಸ ಇಲ್ಲ

    ಜಹಾಂಗೀರ್‌ಪುರ ಗಲಭೆ ಪ್ರಕರಣ – ದೆಹಲಿ ಪೊಲೀಸರ ಮೇಲೆ ವಿಶ್ವಾಸ ಇಲ್ಲ

    ನವದೆಹಲಿ: ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳ ಮೂಲಕ ಜಹಾಂಗೀರ್‌ಪುರ ಗಲಭೆ ಪ್ರಕರಣದ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರಿಗೆ ಪತ್ರ ಬರೆಯಲಾಗಿದೆ. ವಕೀಲ ಅಮೃತಪಾಲ್ ಸಿಂಗ್ ಖಾಲ್ಸಾ ಈ ಪತ್ರ ಬರೆದಿದ್ದು ಸುಪ್ರೀಂಕೋರ್ಟ್ ತನ್ನ ‘ಎಪಿಸ್ಟೋಲರಿ ಅಧಿಕಾರ ವ್ಯಾಪ್ತಿ’ಯನ್ನು ಚಲಾಯಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

    SUPREME COURT

    ದೆಹಲಿಯಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿವೆ. ೨೦೨೦ ರಲ್ಲಿ ದೆಹಲಿ ಪೊಲೀಸರಿಂದ ಕೋಮು ಗಲಭೆ ತಡೆಯಲು ಸಾಧ್ಯವಾಗಿಲ್ಲ. ಪರಿಸ್ಥಿತಿ ನಿಭಾಯಿಸದ ಅವರು ವಿಶ್ವಾಸರ್ಹತೆ ಕಳೆದುಕೊಂಡಿದ್ದಾರೆ. ಪೊಲೀಸರ ಹಿಂದಿನ ತನಿಖೆಗಳು ಕೋಮುವಾದಿ ಶಕ್ತಿಯನ್ನು ರಕ್ಷಿಸುವಂತೆ ಕಂಡು ಬರುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದಾರೆ.

    ಹನುಮ ಜಯಂತಿ ಶೋಭಾ ಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೆಲವು ಶಸ್ತ್ರಸಜ್ಜಿತ ಸದಸ್ಯರು ಮಸೀದಿಗೆ ನುಗ್ಗಿ ಕೇಸರಿ ಧ್ವಜವನ್ನು ಅಳವಡಿಸಿದ್ದಾರೆ. ನಂತರ ನಡೆದದ್ದು ಎರಡೂ ಸಮುದಾಯಗಳಿಂದ ಕಲ್ಲು ತೂರಾಟವಾಗಿದೆ ಎಂದು ಮಾಧ್ಯಮ ವರದಿಗಳು ಮಾಡಿವೆ. ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಆಪ್ತ?

    ರಾಜಧಾನಿಯಲ್ಲಿ ಗಲಭೆಗಳು ಭುಗಿಲೆದ್ದಿದ್ದು, ಇದು ಎರಡನೇ ಬಾರಿಯಾಗಿದೆ. ಎರಡೂ ಸಂದರ್ಭಗಳಲ್ಲಿ ಕೇವಲ ‘ಅಲ್ಪಸಂಖ್ಯಾತ’ ಸಮುದಾಯದ ಸದಸ್ಯರನ್ನು ಮಾತ್ರ ದೂಷಿಸಲಾಗುತ್ತಿದೆ ಎಂದು ವಕೀಲ ಅಮೃತಪಾಲ್ ಸಿಂಗ್ ಖಾಲ್ಸಾ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಕೈ ಮಾಡೋದು, ಠಾಣೆಗೆ ನುಗ್ಗೋ ಪ್ರಯತ್ನ ಮಾಡೋದು ಅಕ್ಷಮ್ಯ ಅಪರಾಧ: ಬಿಎಸ್‍ವೈ

    ಕಳೆದ ಶನಿವಾರ ಜಹಾಂಗೀರ್‌ಪುರ ಪ್ರದೇಶದಲ್ಲಿ ಜಯಂತಿಯ ದಿನದಂದು ಕೋಮು ಗಲಭೆ ನಡೆದಿತ್ತು. ಘಟನೆಯಲ್ಲಿ 7-8 ಸಿಬ್ಬಂದಿ ಗಾಯಗೊಂಡಿದ್ದಾರೆ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಧಕ್ಕೆಯಾಗಿದೆ. ಘಟನೆ ಸಂಬಂಧ ಮುಸ್ಲಿಂ ಸಮುದಾಯದ ಹತ್ತಕ್ಕೂ ಹೆಚ್ಚು ಯುವಕರನ್ನು ಬಂಧಿಸಲಾಗಿದೆ.