Tag: ಜಸ್ಪ್ರಿತ್ ಬುಮ್ರಾ

  • ವರ್ಷದ ವಿಸ್ಡೆನ್ ಇಂಡಿಯಾ ಕ್ರಿಕೆಟರ್ಸ್ ಆದ ಬುಮ್ರಾ, ಮಂಧಾನಾ

    ವರ್ಷದ ವಿಸ್ಡೆನ್ ಇಂಡಿಯಾ ಕ್ರಿಕೆಟರ್ಸ್ ಆದ ಬುಮ್ರಾ, ಮಂಧಾನಾ

    ನವದೆಹಲಿ: ಭಾರತದ ಯುವ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ವರ್ಷದ ವಿಸ್ಡೆನ್ ಇಂಡಿಯಾ ಅಲ್ಮನಾಕ್ ಕ್ರಿಕೆಟರ್ಸ್ ಆಗಿ ಆಯ್ಕೆಯಾಗಿದ್ದಾರೆ.

    2019 ಮತ್ತು 2020 ನೇ ಸಾಲಿನ ವಿಸ್ಡೆನ್ ಇಂಡಿಯಾ ಅಲ್ಮನಾಕ್‍ನ ವರ್ಷದ ಕ್ರಿಕೆಟರ್ಸ್ ಆಯ್ಕೆಯಾಗಿದ್ದು, ಇದರಲ್ಲಿ ಭಾರತದಿಂದ ಇಬ್ಬರು ಸೇರಿ ಏಷ್ಯಾದಿಂದ ಒಟ್ಟು ಐದು ಜನರಿಗೆ ಈ ಪ್ರಶಸ್ತಿ ದೊರಕಿದೆ. ಬುಮ್ರಾ ಮತ್ತು ಮಂಧಾನಾ ಅವರನ್ನು ಬಿಟ್ಟರೆ ಪಾಕಿಸ್ತಾನದ ಫಖರ್ ಜಮಾನ್, ಶ್ರೀಲಂಕಾದ ದಿಮುತ್ ಕರುಣಾರತ್ನೆ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ಅವರಿಗೆ ಏಷ್ಯಾದಿಂದ ಈ ಪ್ರಶಸ್ತಿಗೆ ಲಭಿಸಿದೆ.

    ಈ ಪ್ರಶಸ್ತಿ ಪಡೆದ ಸ್ಮೃತಿ ಮಂಧಾನಾ ಅವರು ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ಅವರನ್ನು ಬಿಟ್ಟರೆ ವಿಸ್ಡೆನ್ ಇಂಡಿಯಾ ಅಲ್ಮನಾಕ್ ಕ್ರಿಕೆಟರ್ಸ್ ಆಗಿ ಆಯ್ಕೆಯಾದ ಮೂರನೇ ಭಾರತದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಭಾರತೀಯ ಕ್ರಿಕೆಟ್ ದಿಗ್ಗಜರಾದ ಗುಂಡಪ್ಪ ವಿಶ್ವನಾಥ್ ಮತ್ತು ಲಾಲಾ ಅಮರನಾಥ್ ಅವರನ್ನು ವಿಸ್ಡೆನ್ ಇಂಡಿಯಾ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ.

    ಬರಹಗಾರ ಪ್ರಶಾಂತ್ ಕಿಡಾಂಬಿ ಬರೆದ ಮೊದಲ ಆಲ್ ಇಂಡಿಯಾ ಟೀಮ್ ಅನ್ ಟೋಲ್ಡ್ ಹಿಸ್ಟರಿ ಎಂಬ ಪುಸ್ತಕ ವರ್ಷದ ವಿಸ್ಡೆನ್ ಇಂಡಿಯಾ ಪುಸ್ತಕವಾಗಿ ಆಯ್ಕೆಯಾಗಿದೆ. ಈ ಪುಸ್ತಕವನ್ನು ಅಲ್ಮಾನಾಕ್‍ನ ವಿಮರ್ಶಕರು ಭಾರತದ ಕ್ರಿಕೆಟ್ ಪ್ರವಾಸವನ್ನು ತುಂಬಾ ಚೆನ್ನಾಗಿ ವಿವರಿಸಲಾಗಿದೆ ಎಂದು ಹೇಳಿದ್ದಾರೆ.

  • ತನ್ನ ಡೆಡ್ಲಿ ಯಾರ್ಕರ್ ಎಸೆತಗಳ ಹಿಂದಿನ ರಹಸ್ಯ ಬಿಚ್ಚಿಟ್ಟ ಜಸ್ಪ್ರಿತ್ ಬುಮ್ರಾ

    ತನ್ನ ಡೆಡ್ಲಿ ಯಾರ್ಕರ್ ಎಸೆತಗಳ ಹಿಂದಿನ ರಹಸ್ಯ ಬಿಚ್ಚಿಟ್ಟ ಜಸ್ಪ್ರಿತ್ ಬುಮ್ರಾ

    ಬರ್ಮಿಗ್ಹ್ಯಾಮ್: ವಿಶ್ವದ ನಂಬರ್ ಒನ್ ಬೌಲರ್ ಜಸ್ಪ್ರಿತ್ ಬುಮ್ರಾ ತನ್ನ ಡೆಡ್ಲಿ ಯಾರ್ಕರ್ ಎಸೆತಗಳ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ಮಾಡಿದ ಬುಮ್ರಾ ಭಾರತ ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 28 ರನ್ ಅಂತರದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ತನ್ನ ಡೆಡ್ಲಿ ಯಾರ್ಕರ್ ಮೂಲಕ ಬಾಂಗ್ಲಾದೇಶಿ ಆಟಗಾರನ್ನು ಕಾಡಿದ ಬುಮ್ರಾ ತನ್ನ ನಿಗದಿತ 10 ಓವರ್‍ ಗಳಲ್ಲಿ 55 ರನ್ ನೀಡಿ 4 ವಿಕೆಟ್ ಕಿತ್ತು ಭಾರತಕ್ಕೆ ಜಯವನ್ನು ತಂದುಕೊಟ್ಟರು.

    ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲಲು ಕೊನೆಯ ಮೂರು ಓವರ್ ನಲ್ಲಿ 36 ರನ್‍ಗಳ ಅವಶ್ಯಕತೆ ಇದ್ದಾಗ ಭಾರತ ಒಂದು ಹಂತದಲ್ಲಿ ಅಪಾಯಕ್ಕೆ ಸಿಲುಕಿತ್ತು. ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಬಾಂಗ್ಲಾ ಬ್ಯಾಟ್ಸ್‍ಮನ್ ಮೊಹಮ್ಮದ್ ಸೈಫುದ್ದೀನ್ ಅವರು ಕ್ರೀಸ್‍ನಲ್ಲಿ ಉತ್ತಮವಾಗಿ ಆಡುತ್ತಿದ್ದ ಕಾರಣ ಸೋಲುವ ಭೀತಿ ಎದುರಾಗಿತ್ತು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಅವರು ಬುಮ್ರಾಗೆ ಪ್ರಮುಖ 48 ನೇ ಓವರ್ ಬೌಲ್ ಮಾಡಲು ನೀಡಿದರು. ತಮ್ಮ ನಾಯಕ ನಿರೀಕ್ಷೆಗೆ ತಕ್ಕಂತೆ ಬೌಲ್ ಮಾಡಿದ ಬುಮ್ರಾ ಅ ಓವರ್‍ ನಲ್ಲಿ ಯಾರ್ಕರ್ ಮೂಲಕ 2 ವಿಕೆಟ್ ಪಡೆದು ಭಾರತವನ್ನು ಗೆಲ್ಲಿಸಿದರು.

    ಈಗ ಈ ಮಾರಕ ಯಾರ್ಕರ್‍ ಗಳ ಹಿಂದಿನ ರಹಸ್ಯ ಹೇಳಿರುವ ಬುಮ್ರಾ ಅವರು ನನ್ನ ನಿಖರವಾದ ಯಾರ್ಕರ್ ದಾಳಿಗೆ ನಾನು ಮಾಡುವ ಅಭ್ಯಾಸ ಸಹಾಯ ಮಾಡುತ್ತದೆ, ನೆಟ್ಸ್ ನಲ್ಲಿ ಹೆಚ್ಚು ಯಾರ್ಕರ್ ಎಸೆಯುತ್ತೇನೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬುಮ್ರಾ,”ನಾನು ನೆಟ್ಸ್‍ನಲ್ಲಿ ಯಾರ್ಕರ್ ಎಸೆತಗಳನ್ನು ಹೆಚ್ಚು ಎಸೆಯಲು ಪ್ರಯತ್ನ ನಡೆಸುತ್ತೇನೆ. ಹೀಗೆ ಮಾಡುವುದರಿಂದ ಯಾರ್ಕರ್ ಎಸೆತಗಳ ಮೇಲೆ ನಮಗೆ ಒಳ್ಳೆಯ ಹಿಡಿತ ಸಿಗುತ್ತದೆ. ಅದನ್ನು ತುಂಬಾ ಸಲ ಅಭ್ಯಾಸ ಮಾಡದೇ ಇದ್ದರೇ ಯಾರ್ಕರ್ ಎಸೆತವನ್ನು ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ”ಸ ಎಂದು ಹೇಳಿದ್ದಾರೆ.

    ನಾನು ಯಾವಗಲೂ ಆಟವಾಡಲು ಎದುರು ನೋಡುತ್ತಿರುತ್ತೇನೆ ಮತ್ತು ನಾವು ಆಡುವ ಹೆಚ್ಚಿನ ಸಂಖ್ಯೆಯ ಪಂದ್ಯಗಳಲ್ಲಿ ನಾವು ಹೆಚ್ಚು ಅನಂದಪಡುತ್ತೇವೆ. ಇದು ನನ್ನ ಮೊದಲ ವಿಶ್ವಕಪ್ ಅದ್ದರಿಂದ ಸಾಧ್ಯವಾದಷ್ಟು ಆಟವಾಡಬೇಕು ಎನ್ನುವ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.

    ಬುಮ್ರಾ ಯಾರ್ಕರ್ ಅಭ್ಯಾಸದ ವೇಳೆ ಆಲ್‍ರೌಂಡರ್ ವಿಜಯ್ ಶಂಕರ್ ಗಾಯಗೊಂಡಿದ್ದು, ಈಗ ಟೂರ್ನಿಯಿಂದ ಹೊರಬಿದ್ದಿದ್ದಾರೆ.

  • ಹಾಟ್ ಫೋಟೋ ಅಪ್ಲೋಡ್ ಮಾಡಿದ ವೇಗಿ ಜಸ್ಪ್ರಿತ್ ಬುಮ್ರಾ- ವರ್ಕೌಟ್ ಗುಟ್ಟು ರಟ್ಟು

    ಹಾಟ್ ಫೋಟೋ ಅಪ್ಲೋಡ್ ಮಾಡಿದ ವೇಗಿ ಜಸ್ಪ್ರಿತ್ ಬುಮ್ರಾ- ವರ್ಕೌಟ್ ಗುಟ್ಟು ರಟ್ಟು

    ನವದೆಹಲಿ: ಇಂದಿನ ಯುವಕರು ತಾವು ಸಿಕ್ಸ್ ಪ್ಯಾಕ್ ಮಾಡಬೇಕೆಂದು ಕನಸು ಕಾಣುತ್ತಾರೆ. ಬಾಲಿವುಡ್ ನಟರು ಯಾವಾಗಲೂ ಕಸರತ್ತು ಮಾಡುತ್ತಾ ಸಿಕ್ಸ್ ಪ್ಯಾಕ್ ಮಾಡಿಕೊಂಡು ಹೊಸ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಅಂತೆಯೇ ವೇಗಿ ಜಸ್ಪ್ರಿತ್ ಬುಮ್ರಾ ಕೂಡ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ತಮ್ಮ ಸಿಕ್ಸ್ ಪ್ಯಾಕ್ ಫೋಟೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಅತಿ ವೇಗದ ಬೌಲರ್ ಎಂದೇ ಗುರುತಿಸಿಕೊಂಡಿರುವ ಬುಮ್ರಾ ಪ್ರತಿದಿನ ಜಿಮ್ ನಲ್ಲಿ ಸಖತ್ ವರ್ಕ್ ಔಟ್ ಮಾಡುತ್ತಾರೆ. ಈ ವರ್ಕ್ ಔಟ್ ಫಲವೇ ಸಿಕ್ಸ್ ಪ್ಯಾಕ್ ಎಂಬುದನ್ನು ಹೇಳಿದ್ದಾರೆ.

    ನಿಮ್ಮ ನಿರಂತರ ಪ್ರಯತ್ನ ಮತ್ತು ಕೆಲಸದಲ್ಲಿ ತೋರಿಸುವ ಶ್ರದ್ಧೆ ನಿಮ್ಮನ್ನು ಯಶಸ್ಸಿನತ್ತ ಕರೆದೊಯ್ಯುತ್ತದೆ ಎಂದು ಫೋಟೋ ಜೊತೆಗೆ ಬುಮ್ರಾ ಬರೆದುಕೊಂಡಿದ್ದಾರೆ.

    ಈ ಫೋಟೋ ಜೊತೆಗೆ ತಾವು ವೇಟ್ ಲಿಫ್ಟಿಂಗ್ ಮಾಡುವ ವಿಡಿಯೋವನ್ನು ಕೂಡ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನೀವು ಹತಾಶೆಯಲ್ಲಿರುವ ಸಂದರ್ಭದಲ್ಲಿ ನಿಮ್ಮಲ್ಲಿರುವ ಆತ್ಮಸ್ಥೈರ್ಯ ಹೆಚ್ಚುತ್ತದೆ. ಯಾವುದು ಸಾಧ್ಯವಿಲ್ಲ ಅಂತಾ ತಿಳಿದಿರುತ್ತಿರೋ ಅದು ನಿಮ್ಮಿಂದ ಸಾಧ್ಯವಾಗುತ್ತದೆ ಎಂದು ಬುಮ್ರಾ ತಮ್ಮ ಟ್ಟಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಬುಮ್ರಾ ಅವರ ಈ ಫೋಟೋವನ್ನು ನೋಡಿದ ಅಭಿಮಾನಿಗಳು `ಲವ್ ಯೂ’ ಅಂತಾ ಕಮೆಂಟ್ ಮಾಡುತ್ತಿದ್ದಾರೆ.

    https://twitter.com/DeepikaPadukono/status/931491173398560773

    https://twitter.com/ImPriyaRaina/status/931493223012298752