Tag: ಜಸ್ಟ್ ಪಾಸ್

  • ಪರೀಕ್ಷೆ ಟೈಮ್ ನಲ್ಲಿ ‘ಜಸ್ಟ್ ಪಾಸ್’ ಅಂತ ಹಾಡಿದ ಶರಣ್

    ಪರೀಕ್ಷೆ ಟೈಮ್ ನಲ್ಲಿ ‘ಜಸ್ಟ್ ಪಾಸ್’ ಅಂತ ಹಾಡಿದ ಶರಣ್

    ಹಾಸ್ಯ ಕಲಾವಿದರಾಗಿ, ನಾಯಕರಾಗಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶರಣ್ (Sharan), ಹಲವಾರು ಸಿನಿಮಾಗಳಿಗೆ ಗಾಯಕರಾಗಿಯೂ ಕೇಳುಗರ ಗಮನ ಸೆಳೆದಿದ್ದಾರೆ. ಸದ್ಯ ಅವರು ಮತ್ತೊಂದು ಚಿತ್ರಕ್ಕೂ ಹಾಡಿದ್ದು, ಪರೀಕ್ಷೆ ವೇಳೆಯಲ್ಲಿ ‘ಜಸ್ಟ್ ಪಾಸ್’ (Just Pass) ಎನ್ನುತ್ತಾ ಮತ್ತೆ ಸಂಗೀತ ಲೋಕಕ್ಕೆ ಕಾಲಿಟ್ಟಿದ್ದಾರೆ.

    ಕೆ.ಎಂ.ರಘು (KM Raghu) ನಿರ್ದೇಶನದ ‘ಜಸ್ಟ್ ಪಾಸ್’ ಚಿತ್ರಕ್ಕಾಗಿ ವಿ.ನಾಗೇಂದ್ರ ಪ್ರಸಾದ್ (Nagendra Prasad) ಬರೆದಿರುವ ‘ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು. ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು’ ಎಂಬ ಹಾಡನ್ನು ಶರಣ್ ಹಾಡಿದ್ದು,  ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಸಾಧುಕೋಕಿಲ ಅಭಿನಯಿಸಿದ್ದಾರೆ. ಇದನ್ನೂ ಓದಿ: ಮಾಜಿ ಪತ್ನಿ, ಸಹೋದರನ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನವಾಜುದ್ದೀನ್ ಸಿದ್ದಿಕಿ

    ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್  ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಕೆ.ಎಂ.ರಘು ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ.     ಶ್ರೀ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ನಾಯಕಿ ಪ್ರಣತಿ ಈ ಚಿತ್ರದ ನಾಯಕಿ. ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ, ಪ್ರಕಾಶ್ ತುಮ್ಮಿನಾಡು, ಗೋವಿಂದೇಗೌಡ ಮುಂತಾದವರುವ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಸೆಟ್ಟೇರಿತು ಪರಸಂಗ ನಿರ್ದೇಶಕನ ಹೊಸ ಸಿನಿಮಾ ‘ಜಸ್ಟ್ ಪಾಸ್’

    ಸೆಟ್ಟೇರಿತು ಪರಸಂಗ ನಿರ್ದೇಶಕನ ಹೊಸ ಸಿನಿಮಾ ‘ಜಸ್ಟ್ ಪಾಸ್’

    ‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ.ಎಂ.ರಘು ನಟ ಶ್ರೀ ಜೊತೆ ‘ಜಸ್ಟ್ ಪಾಸ್’ ಕಥೆ ಹೇಳಲು ಸಜ್ಜಾಗಿದ್ದಾರೆ. ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಮುಹೂರ್ತ ಇಂದು ನೆರವೇರಿದೆ. ನಿರ್ದೇಶಕ ಕೆ.ಎಂ.ರಘು ಮಾತನಾಡಿ ‘ಜಸ್ಟ್ ಪಾಸ್’ ಕಾಲೇಜ್ ಬ್ಯಾಕ್ ಡ್ರಾಪ್ ನಲ್ಲಿ ನಡಿಯೋ ಸಿನಿಮಾ. ಈಗಾಗಲೇ ಕಾಲೇಜ್ ಸಬ್ಜೆಕ್ಟ್ ಇರುವ ಹಲವಾರು ಸಿನಿಮಾಗಳು ಬಂದಿವೆ ನಾವೇನು ಹೊಸತು ಹೇಳ್ತೀವಿ ಅನ್ನೋದು ಮುಖ್ಯ. ಒಂದೇ ಲೈನ್ ನಲ್ಲಿ ಸಿನಿಮಾ ಬಗ್ಗೆ ಹೇಳಬೇಕು ಅಂದ್ರೆ ಈ ಚಿತ್ರದಲ್ಲಿ ಜಸ್ಟ್ ಪಾಸ್ ಆದವರಿಗಾಗಿಯೇ ಕಾಲೇಜ್ ತೆರೆಯಲಾಗಿರುತ್ತೆ. ಅವರಿಗಾಗಿಯೇ ಹಾಸ್ಟೆಲ್ ವ್ಯವಸ್ಥೆ ಕೂಡ ಇರುತ್ತೆ. ಜಸ್ಟ್ ಪಾಸ್ ಆದವರ ಮೆಂಟಾಲಿಟಿ ಬೇರೆ ಇರುತ್ತೆ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿರುತ್ತಾರೆ. ತುಂಬಾ ತರ್ಲೆ ಇರ್ತಾರೆ. ಅವರನ್ನು ಇಟ್ಟುಕೊಂಡು ಯಾವ ರೀತಿ ಎಜುಕೇಶನ್ ನೀಡಲಾಗುತ್ತೆ ಅನ್ನೋದನ್ನ ಕಾಮಿಡಿ, ಸೆಂಟಿಮೆಂಟ್ ಎಲಿಮೆಂಟ್ ಜೊತೆಗೆ ಕಟ್ಟಿಕೊಡಲಾಗಿದೆ. ಕಾಲೇಜ್ ಸಬ್ಜೆಕ್ಟ್ ಎಂದಾಕ್ಷಣ ಎಷ್ಟು ಎಂಟಟೈನ್ಮೆಂಟ್ ಇರುತ್ತೋ ಅಷ್ಟೇ ಒಳ್ಳೆ ಮೆಸೇಜ್ ಕೂಡ ಈ ಚಿತ್ರದಲ್ಲಿದೆ. ಮೈಸೂರು, ಸಕಲೇಶಪುರ, ಮಡಿಕೇರಿಯಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಕೆ.ಎಂ.ರಘು ಮಾಹಿತಿ ಹಂಚಿಕೊಂಡ್ರು.

    ನಾಯಕ ನಟ ಶ್ರೀ ಮಾತನಾಡಿ ನಿರ್ದೇಶಕರು ಸಿನಿಮಾ ಕಾನ್ಸೆಪ್ಟ್ ಬಗ್ಗೆ ಹೇಳಿದಾಗ ಇಂಟ್ರಸ್ಟಿಂಗ್ ಅನಿಸ್ತು. ಚಿತ್ರದಲ್ಲಿ ‘ಜಸ್ಟ್ ಪಾಸ್’ ಆದವರಿಗಾಗಿಯೇ ಒಂದು ಕಾಲೇಜ್ ತೆರೆಯಲಾಗಿರುತ್ತೆ. ಪ್ರಿನ್ಸಿಪಾಲ್ ಜಸ್ಟ್ ಪಾಸ್ ಆದವರಿಗಾಗಿ ಯಾಕೆ ಕಾಲೇಜ್ ತೆರೆದಿರುತ್ತಾರೆ. ಹೇಗೆ ಎಜುಕೇಶನ್ ನೀಡುತ್ತಾರೆ ಎನ್ನುವ ಸ್ಟೋರಿ ಚಿತ್ರದಲ್ಲಿದೆ. ಚಿತ್ರದಲ್ಲಿ ಅರ್ಜುನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾಯಕ ನಟನಾಗಿ ಇದು ನನ್ನ ನಾಲ್ಕನೇ ಸಿನಿಮಾ. ಬಹಳ ತರ್ಲೆ, ಚೇಷ್ಟೆ ಮಾಡುವಂತ ಕ್ಯಾರೆಕ್ಟರ್ ನನ್ನದು. ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರೋ ಪಾತ್ರ. ಜಸ್ಟ್ ಪಾಸ್ ಸಿನಿಮಾ ಫಸ್ಟ್ ಕ್ಲಾಸ್ ಆಗಿ ಮಾಡಲು ಎಲ್ಲರೂ ತಯಾರಾಗಿದ್ದೇವೆ ಎಲ್ಲರ ಆಶೀರ್ವಾದ ಬೇಕು ಎಂದು ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.

    ನಿರ್ಮಾಪಕ ಶಶಿಧರ್.ಕೆ.ವಿ  ಮಾತನಾಡಿ ನಮ್ಮ ಬ್ಯಾನರ್ ಆರಂಭ ಮಾಡಿ ಒಳ್ಳೆ ಸ್ಟೋರಿ ಸಿಕ್ಕರೆ ಸಿನಿಮಾ ಮಾಡೋಣ ಎಂದು ಯೋಜನೆಯಲ್ಲಿದ್ದೆವು.  ಆದ್ರೆ ಅದೇ ಸಮಯದಲ್ಲಿ ಕೊರೋನ ಆರಂಭವಾಯ್ತು. ಅದಾದ ನಂತರ ಕೆ.ಎಂ.ರಘು ಪರಿಚಯ ಆಯ್ತು. ಅವರು ಮಾಡಿಕೊಂಡಿರೋ ಸಬ್ಜೆಕ್ಟ್ ಇಷ್ಟವಾಯ್ತು. ಸಿನಿಮಾ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ವಿ. ಈ ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್, ಮೋಟಿವೇಶನ್ ಎಲ್ಲವೂ ಇದೆ. ಜನವರಿ 2ರಿಂದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಗ್ಯಾರಂಟಿ ಫಸ್ಟ್ ಕ್ಲಾಸ್ ಆಗಿ ಮೂಡಿ ಬರಲಿದೆ ಎಂಬ ನಂಬಿಕೆ ಇದೆ ಎಂದು ಸಂತಸ ಹಂಚಿಕೊಂಡ್ರು. ಇದನ್ನೂ ಓದಿ: ಆಲ್ವಿನ್ ಹೆನ್ರಿ ನಿರ್ದೇಶನದ ‘ಕ್ರಿಸ್ಟಿ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ನಾಯಕ ನಟಿ ಪ್ರಣತಿ ಮಾತನಾಡಿ ಬ್ರಹ್ಮಗಂಟು ಧಾರಾವಾಹಿಯಲ್ಲಿ ತಂಗಿ ಪಾತ್ರವನ್ನು ನಿರ್ವಹಿಸಿದ್ದೇನೆ. ನಟನೆಗೆ ನಾನು ಆಕಸ್ಮಿಕವಾಗಿ ಬಂದಿದ್ದು, ಶೃತಿ ನಾಯ್ಡು ಮೇಡಂ ನನ್ನ ಫೋಟೋ ನೋಡಿ ಸೀರಿಯಲ್ ನಲ್ಲಿ ನಟಿಸಲು ಅವಕಾಶ ನೀಡಿದ್ರು. ಅಲ್ಲಿಂದ ನನ್ನ ಜರ್ನಿ ಆರಂಭವಾಯ್ತು. ಕಿರುತೆರೆಯಾದ ನಂತರ ಬೆಳ್ಳಿತೆರೆಗೆ ಮೊದಲ ಹೆಜ್ಜೆ ಇಟ್ಟಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಕಿರುತೆರೆಯಲ್ಲಿ ಹೇಗೆ ಸಹಕಾರ ನೀಡಿದ್ರೋ ಅದೇ ರೀತಿ ಸಿನಿಮಾಗೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡ್ರು.

    ‘ಜಸ್ಟ್ ಪಾಸ್’ ಸಿನಿಮಾವನ್ನು ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಅರ್ಪಿತಾ, ಬಿಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ಅಭಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಜಸ್ಟ್ ಪಾಸ್’ ಆಗಲು ಹೊರಟ ಹುಡುಗನಿಗೆ ಸಿಕ್ಕಳು ಹೀರೋಯಿನ್

    ‘ಜಸ್ಟ್ ಪಾಸ್’ ಆಗಲು ಹೊರಟ ಹುಡುಗನಿಗೆ ಸಿಕ್ಕಳು ಹೀರೋಯಿನ್

    ‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಹೊಸ ಸಬ್ಜೆಕ್ಟ್ ಹೊತ್ತು ಬಂದಿದ್ದಾರೆ. ಈ ಬಾರಿ ಯೂತ್ ಫುಲ್ ಸಬ್ಜೆಕ್ಟ್ ಕಥೆ ಹೇಳಲು ರೆಡಿಯಾಗಿದ್ದಾರೆ. ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದ್ದು, ಚಿತ್ರಕ್ಕೆ ‘ಜಸ್ಟ್ ಪಾಸ್’ ಎಂದು ಶೀರ್ಷಿಕೆ ಇಡಲಾಗಿದೆ.

    ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಇರುವುದೆಲ್ಲವ ಬಿಟ್ಟು, ಗಜಾನನ ಗ್ಯಾಂಗ್ ಖ್ಯಾತಿಯ ನಟ ಶ್ರೀ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸಗಳೆಲ್ಲ ಮುಗಿಸಿ ಶೂಟಿಂಗ್ ಹೊರಡಲು ಸಿನಿಮಾ ತಂಡ ಸಕಲ ತಯಾರಿ ನಡೆಸಿಕೊಂಡಿದೆ. ಚಿತ್ರಕ್ಕೆ ಹೀರೋಯಿನ್ ಹುಡುಕಾಟಲ್ಲಿದ್ದ ಚಿತ್ರತಂಡಕ್ಕೆ ಹೊಸ ಪ್ರತಿಭೆ ಪ್ರಣತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್, ಫ್ಯಾಮಿಲಿ ವಾರ್ ಸೀಸನ್ 2 ರನ್ನರ್ ಅಪ್ ಆಗಿರುವ ಪ್ರಣತಿ ಬ್ರಹ್ಮಗಂಟು ಸೀರಿಯಲ್ ನಲ್ಲೂ ನಟಿಸಿದ್ದಾರೆ. ಈಗ ಜಸ್ಟ್ ಪಾಸ್ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.  ಇದನ್ನೂ ಓದಿ: ದೂರು ನೀಡಿದರೂ ಉರ್ಫಿ ಡೋಂಟ್ ಕೇರ್ : ಮೊಬೈಲ್ ಮೂಲಕ ಪ್ರತಿಭಟಿಸಿದ ನಟಿ

    ಕೆ.ಎಂ ರಘು. ನಿರ್ದೇಶನದ ದೊಡ್ಡಹಟ್ಟಿ ಬೋರೇಗೌಡ ಸಿನಿಮಾ ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ ಅತ್ಯುತ್ತಮ ಮೊದಲ ಸಿನಿಮಾ ಎಂಬ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿತ್ತು. ಮೊಲದ ಬಾರಿ ನಿರ್ದೇಶಕರು ಯೂತ್ ಫುಲ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದು, ಇದೇ ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದೆ.

    ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ಜಸ್ಟ್ ಪಾಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಅರ್ಪಿತಾ, ಚಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ಅಭಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]