Tag: ಜಶ್ವಂತ್ ಬೋಪಣ್ಣ

  • ಡೇಟಿಂಗ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆದ ‘ಬಿಗ್ ಬಾಸ್’ ಖ್ಯಾತಿಯ ಜಶ್ವಂತ್

    ಡೇಟಿಂಗ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆದ ‘ಬಿಗ್ ಬಾಸ್’ ಖ್ಯಾತಿಯ ಜಶ್ವಂತ್

    ಬಿಗ್ ಬಾಸ್ ಒಟಿಟಿ ಕನ್ನಡ 1ರ ಸ್ಪರ್ಧಿಯಾಗಿದ್ದ (Bigg Boss) ಜಶ್ವಂತ್ ಬೋಪಣ್ಣ (Jashwanth Bopanna) ಇದೀಗ ಡೇಟಿಂಗ್ ರಿಯಾಲಿಟಿ ಶೋ ‘ಸ್ಲ್ಪಿಟ್ಸ್‌ವಿಲ್ಲಾ 15’ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್‌ಟಿ’ ಸಿನಿಮಾ

     

    View this post on Instagram

     

    A post shared by Sunny Leone (@sunnyleone)

    ‘ಸ್ಲ್ಪಿಟ್ಸ್‌ವಿಲ್ಲಾ 15’ರಲ್ಲಿ ಆಕ್ರಿತಿ ನೇಗಿಗೆ (Akriti Negi) ಜೊತೆಯಾಗಿ ಜಶ್ವಂತ್ ಸ್ಪರ್ಧಿಸಿದ್ದರು. ಡೇಟಿಂಗ್‌ ರಿಯಾಲಿಟಿ ಶೋ ಹಿನ್ನೆಲೆ ಆಕ್ರಿತಿ ಅವರ ಮಾಜಿ ಬಾಯ್‌ಫ್ರೆಂಡ್‌ಗಳು ಕೂಡ ಈ ಶೋನಲ್ಲಿ ಭಾಗಿಯಾಗಿದ್ದರು. ಆದರೆ ಜಶ್ವಂತ್ ಮಾಜಿ ಪ್ರೇಯಸಿ ನಂದಿನಿ ಭಾಗವಹಿಸಲಿಲ್ಲ. ಆದರೆ ಎಲ್ಲರಿಂದ ಟಾರ್ಗೆಟ್ ಆಗಿದ್ದ ಆಕ್ರಿತಿ ಮತ್ತು ಜಶ್ವಂತ್, ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಟವಾಡಿ ಫಿನಾಲೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಈಗ ಫಿನಾಲೆಯಲ್ಲಿ 5 ಸೆಕೆಂಡ್‌ಗಳ ಅಂತರದಲ್ಲಿ ಜಶ್ವಂತ್ ಮತ್ತು ಆಕ್ರಿತಿ ಜೋಡಿ ಗೆದ್ದು ಬೀಗಿದ್ದಾರೆ. ಹರ್ಷ್ ಮತ್ತು ರುಷಾಲಿ ವಿರುದ್ಧ ಗೆದ್ದಿದ್ದಾರೆ.

    ಇನ್ನೂ ಈ ಗ್ರ್ಯಾಂಡ್ ಫಿನಾಲೆಯಲ್ಲಿ ಗೆದ್ದ ಜಶ್ವಂತ್ ಮತ್ತು ಆಕ್ರಿತಿ ನೇಗಿಗೆ 5 ಲಕ್ಷ ರೂ. ಕ್ಯಾಶ್ ಪ್ರೈಝ್ ಸಿಕ್ಕಿದೆ. ನೆಚ್ಚಿನ ನಟನ ಗೆಲುವಿಗೆ ಫ್ಯಾನ್ಸ್‌ ಶುಭಕೋರಿದ್ದಾರೆ. ಆ

  • ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    `ರೋಡಿಸ್’ ಖ್ಯಾತಿಯ ನಂದು (Nandu) ಮತ್ತು ಜಶ್ವಂತ್ (Jashwanth) ಪ್ರೇಮ ಪಕ್ಷಿಗಳಾಗಿ ಬಿಗ್ ಬಾಸ್ ಒಟಿಟಿಗೆ ಕಾಲಿಟ್ಟಿದ್ದರು. ದೊಡ್ಮನೆಯಲ್ಲಿ ಕೂಡ ಲವ್ ಬರ್ಡ್ಸ್ ಆಗಿಯೇ ಹೈಲೈಟ್ ಆಗಿದ್ದರು. ಬಿಗ್ ಬಾಸ್ ಶೋ (Bigg Boss Kannada) ನಂತರ ಇಬ್ಬರ ಲವ್ ಸ್ಟೋರಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು. ಈ ಬಗ್ಗೆ ಸ್ವತಃ ಬಿಗ್ ಬಾಸ್ ನಂದು ಉತ್ತರ ಕೊಟ್ಟಿದ್ದಾರೆ.

    ಒಟಿಟಿ ಬಿಗ್ ಬಾಸ್‌ನಲ್ಲಿ ನಂದು ಮತ್ತು ಜಶ್ ಜೋಡಿಗಳಾಗಿ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಈ ಶೋ ಬಳಿಕ ನಂದು ಮತ್ತು ಜಶ್ವಂತ್ ನಡುವೆ ಬ್ರೇಕ್ ಅಪ್ ಆಗಿದೆ ಎನ್ನಲಾಗಿತ್ತು. ಈಗ ಈ ಎಲ್ಲಾ ಊಹಾಪೋಹಗಳಿಗೆ ಸ್ಪರ್ಧಿ ನಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ನಾವಿಬ್ಬರು ಒಟ್ಟಿಗೆ ಇದ್ವಿ, ಜೊತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ವಿ. ಜೊತೆಯಲ್ಲಿದ್ದಾಗ ಖುಷಿಯಿಂದ ಜೀವಿಸಿದ್ವಿ. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್‌ ಅಪ್ ಮಾಡಬಾರದು ಎಂದು ಯೋಚಿಸಿದ್ದೆ, ಆದರೆ ಈ ಸಂಬಂಧ ಅಂತ್ಯಗೊಳಿಸುವ ಸಮಯದಲ್ಲಿ ಹಾಗೇ ಇರಲಿಲ್ಲ. ಜಶ್ವಂತ್, ನನಗೆ ಸ್ವಲ್ಪ ಸಮಯ ಬೇಕು ಅಂತಾ ಹೇಳಿದಾಗ ಅವನ ಖುಷಿ ಕೂಡ ನಾನು ಆಯ್ಕೆ ಮಾಡಬೇಕಾಗುತ್ತದೆ. ಅವನ ನಿರ್ಧಾರಕ್ಕೂ ನಾನು ಗೌರವ ಕೊಡಬೇಕಾಗುತ್ತದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೀನಿ. ನಾವು ಡಿಸೈಡ್ ಮಾಡಿದ್ದೀವಿ, ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು ಅಂತಾ ಎಂದು ಸೋಷಿಯಲ್ ಮೀಡಿಯಾದ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

    ನಾನು ಯಾವಾಗಲೂ ಅವರ ಖುಷಿನಾ ಅವರೇ ಚ್ಯೂಸ್ ಮಾಡಲಿ ಅಂತಾ ಬಿಡ್ತೀನಿ. ಸೋ, ಅವನ ಖುಷಿ ಅವನಿಗೆ ಏನು ಬೇಕು ಅನ್ನೋದನ್ನ ಯೋಚನೆ ಮಾಡಿದ್ದಾನೆ. ನನ್ನ ಖುಷಿ ಅಷ್ಟೇ ಮುಖ್ಯ ಆಗಲ್ಲ. ಅವನ ಖುಷಿ ಕೂಡ ಅಷ್ಟೇ ಮುಖ್ಯ. ಈ ಬಗ್ಗೆ ಜಶ್ವಂತ್‌ಗೆ ಏನು ಹೇಳಬೇಡಿ, ಸಮಯ ಬಂದಾಗ ಅವನ ಏನು ಎಂಬುದನ್ನ ಅವನೇ ಪ್ರೂವ್ ಮಾಡುತ್ತಾನೆ ಎಂದು ಜಶ್ವಂತ್ ಬಗ್ಗೆ ಸಕರಾತ್ಮಕವಾಗಿ ನಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲಾ ಅಂತಾ ನಾನು ಬೇಸರ ಪಟ್ಟುಕೊಳ್ಳಲ್ಲ. ನನ್ನ ಜೀವನದಲ್ಲಿ ಈಗ ಏನೆಲ್ಲಾ ಇದೆ ಅದಕ್ಕೆ ನಾನು ಆಭಾರಿಯಾಗಿದ್ದೇನೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಪಾಸಿಟಿವ್ ಆಗಿ ನಂದು ಬರೆದುಕೊಂಡಿದ್ದಾರೆ. ಜಶ್ವಂತ್ ಜೊತೆಗಿನ ಬ್ರೇಕಪ್ ಆಗಿರುವ ಬಗ್ಗೆ ಅಧಿಕೃತವಾಗಿ ನಂದು ಹೇಳಿಕೊಂಡಿದ್ದಾರೆ. ಈ ಬೆನ್ನಲ್ಲೇ ಸಾನ್ಯ ಅಯ್ಯರ್‌ಗೆ (Sanya Iyer) ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂದು, ಜಶ್ವಂತ್ ಬ್ರೇಕಪ್‌ಗೆ ಸಾನ್ಯನೇ ಕಾರಣ ಅಂತಾ ನೆಟ್ಟಿಗರು ದೂರುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

    ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

    ಬಿಗ್ ಬಾಸ್ ಮನೆಯಲ್ಲಿ ಈ ಒಂದಿಷ್ಟು ಟೀಂಗಳಾಗಿವೆ. ಇಡೀ ದಿನ ಮನೆಯಲ್ಲಿಯೇ ಇರಬೇಕಾದ ಕಾರಣ ತಮ್ಮ ತಮ್ಮ ಯೋಚನಾ ಲಹರಿಗೆ ಮ್ಯಾಚ್ ಆಗುವವರನ್ನು ಫ್ರೆಂಡ್ಸ್ ಮಾಡಿಕೊಂಡಿಕೊಂಡಿದ್ದಾರೆ. ಇದೀಗ ಸಾನ್ಯ ಜೊತೆಗಿನ ಜಶ್ವಂತ್ ಫ್ರೆಂಡ್‌ಶಿಪ್ ನಂದು ಮುನಿಸಿಗೆ ಕಾರಣವಾಗಿದೆ.

    ದೊಡ್ಮನೆಯಲ್ಲಿ ಸಾನ್ಯ, ರೂಪೇಶ್, ನಂದು, ಜಶ್ವಂತ್, ಒಂದು ಟೀಂ ಆಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್‌ಗೆ ಎಂಟ್ರಿ ಕೊಡುವಾಗ ಜೋಡಿಯಾಗಿಯೇ ಬಂದಿದ್ದ ನಂದು ಮತ್ತು ಜಶ್ವಂತ್ ನಡುವೆ ಇದೀಗ ಮನಸ್ತಾಪ ಉಂಟಾಗಿದೆ. ಸಾನ್ಯ ಜತೆ ಜಶ್ವಂತ್ ಕ್ಲೋಸ್ ಆಗಿ ಮೂವ್ ಆಗಿರೋದನ್ನ ನೋಡಿ, ನಂದು ತನ್ನ ಬಾಯ್‌ಫ್ರೆಂಡ್‌ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಾನ್ಯ ಮತ್ತು ರೂಪೇಶ್ ಕಪಲ್ ಆಗಿರೋದ ಅಥವಾ ನಾವು ಕಪಲ್ ಆ ಎಂದು ಜಶ್ವಂತ್ ಜತೆ ನಂದು ಮಾತನಾಡಿದ್ದಾರೆ. ಸಾನ್ಯ ಜೊತೆ ಸಖತ್ ಸಲಿಗೆಯಿಂದ ಇರೋದನ್ನ ನೋಡಿ, ನೋಡುವವರು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ನೀವು ರೀತಿ ಕಾಣಿಸಿಕೊಳ್ಳಬೇಡಿ ಎಂದು ನಂದು ಜಶ್ವಂತ್‌ಗೆ ಹೇಳಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ

    ಈ ವೇಳೆ ನೀನು ರೂಪೇಶ್ ಜತೆ ಕ್ಲೋಸ್ ಆಗಿದ್ಯಾ ಆದರೆ ನನಗೇನು ಸಮಸ್ಯೆ ಇಲ್ಲ ಎಂಬ ಜಶ್ವಂತ್ ಮಾತನಾಡಿದ್ದಾರೆ. ಈಗ ಎನು ಪ್ರೂವ್ ಮಾಡೋಕೆ ಟ್ರೈ ಮಾಡುತ್ತಿದ್ಯಾ ಎಂದು ನಂದು ಜಶ್ವಂತ್‌ ವಿರುದ್ಧ ಫುಲ್‌ ಗರಂ ಆಗಿದ್ದಾರೆ. ಸಾನ್ಯ ಜೊತೆಗಿನ ಜಶ್ವಂತ್ ಅತಿಯಾದ ಸಲುಗೆ ನೋಡಿ ನಂದು ಕಣ್ಣೀರು ಹಾಕಿದ್ದಾರೆ. ಜಶ್ವಂತ್‌ ಮತ್ತು ಸಾನ್ಯ ಫ್ರೆಂಡ್‌ಶಿಪ್‌ ಇದೀಗ ನಂದು ನಿದ್ದೆಗೆಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಮಿನೇಷನ್ ಪ್ರಕ್ರಿಯೆ ಜೋರಾಗಿದೆ. ಎರಡನೇ ವಾರದ ನಾಮಿನೇಷನ್ ಜಟಾಪಟಿ ಜೋರಾಗಿದೆ. ಇದೀಗ ಸ್ಪರ್ಧಿ ಜಶ್ವಂತ್ ಕೆಂಗಣ್ಣಿಗೆ ಸೋನು ಗೌಡ ಗುರಿಯಾಗಿದ್ದಾರೆ. ತನ್ನ ಗರ್ಲ್‌ಫ್ರೆಂಡ್ ತಂಟೆಗೆ ಬಂದ ಸೋನು ಗೌಡ ವಿರುದ್ಧ ಜಶ್ವಂತ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ದೊಡ್ಮನೆಯಲ್ಲಿ ಎರಡನೇ ವಾರದ ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮ್ಯೂಸಿಕ್ ಚೇರ್ ರೀತಿಯೇ ಒಂದು ಗೇಮ್ ನಡೆದಿತ್ತು. ಈ ಗೇಮ್‌ನಲ್ಲಿ ಸೋನುಗೆ ಒಂದು ಲೆಟರ್ ಸಿಕ್ಕಿದೆ. ಈ ಲೇಟರ್ ಮೂಲಕ ಅವರು ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ನಾನು ನಂದು ಅವರನ್ನು ನಾಮಿನೇಟ್ ಮಾಡುತ್ತೇನೆ. ಅವರು ಸಖತ್ ಆಗಿ ಆಡುತ್ತಾರೆ. ನನಗೆ ಟಫ್ ಕಾಂಪಿಟೇಟರ್ ಅನಿಸಿತು. ಈ ಕಾರಣಕ್ಕೆ ಅವರ ಹೆಸರನ್ನು ತೆಗೆದುಕೊಂಡೆ ಎಂದು ಸೋನು ಗೌಡ ಕಾರಣ ನೀಡಿದರು. ಇದನ್ನೂ ಓದಿ:ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಯ್ತು ‘ಸಲಾರ್’ ಚಿತ್ರದ ಪೋಸ್ಟರ್

    ಬಳಿಕ ಮತ್ತೊಂದು ಆಟದಲ್ಲಿ ಗೆದ್ದು ಜಶ್ವಂತ್ ಅವರು ಸೋನು ಅವರನ್ನು ನಾಮಿನೇಟ್ ಮಾಡಿದರು. ಸೋನು ಅವರು ಮನೆಯವರೊಂದಿಗೆ ಜೊತೆ ಬೆರೆಯುತ್ತಿಲ್ಲ. ಇದರ ಜತೆಗೆ ಅವರು ನನ್ನ ಗರ್ಲ್‌ಫ್ರೆಂಡ್ ಅನ್ನು ನಾಮಿನೇಟ್ ಮಾಡಿದ್ದಾರೆ. ಈ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದರು. ಈ ಮೂಲಕ ಅವರು ಸೇಡು ತೀರಿಸಿಕೊಂಡರು.

    ಇನ್ನು ಸೋನು ಗೌಡ ಬಿಗ್ ಬಾಸ್ ಬಂದಿದ್ದಕ್ಕೆ ಗ್ರ್ಯಾಂಡ್ ಲಾಂಚ್ ವೇಳೆಯೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಮೊದಲ ವಾರದಲ್ಲಿ ಕೂಡ ಸೋನು ನಾಮೀನೇಟ್ ಆಗಿದ್ದರು. ಆದರೆ ಮೊದಲ ವಾರ ಸೇಫ್ ಆಗಿ, ಮಾಡೆಲ್ ಕಿರಣ್ ಮನೆಯಿಂದ ಹೊರನಡೆದರು. ಈಗ ಎರಡನೇ ವಾರ ನಾಮಿನೇಟ್ ಆಗಿರುವ ಸೋನು, ಈ ವಾರವೂ ಸೇಫ್ ಆಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ರೋಡೀಸ್’ ರಿಯಾಲಿಟಿ ಶೋ ಗೆದ್ದ ಬೆಂಗಳೂರಿನ ಹುಡುಗಿ : ಗೆಲುವು ಸುಲಭದ್ದಲ್ಲ ಎಂದ ನಂದಿನಿ

    ‘ರೋಡೀಸ್’ ರಿಯಾಲಿಟಿ ಶೋ ಗೆದ್ದ ಬೆಂಗಳೂರಿನ ಹುಡುಗಿ : ಗೆಲುವು ಸುಲಭದ್ದಲ್ಲ ಎಂದ ನಂದಿನಿ

    ಬಾಲಿವುಡ್ ನ ಸುಪ್ರಸಿದ್ಧ ರಿಯಾಲಿಟಿ ಶೋ ರೋಡೀಸ್ ಮುಕ್ತಾಯವಾಗಿದೆ. ಈ ಬಾರಿ ಸೌತ್ ಆಫ್ರಿಕಾದಲ್ಲಿ ನಡೆದ ಈ ರಿಯಾಲಿಟಿ ಶೋನಲ್ಲಿ ಸಾಕಷ್ಟು ಸ್ಪರ್ಧಿಗಳು ಭಾಗಿಯಾಗಿದ್ದರು. ಅದರಲ್ಲೂ ಬೆಂಗಳೂರಿನ ನಂದಿನಿ ಮತ್ತು ಆಶೀಶ್ ಭಾಟಿಯಾ ಜೋಡಿ ಇಡೀ ಶೋನಲ್ಲಿ ಉತ್ತಮವಾಗಿ ಆಡಿದ್ದರು. ಅನೇಕ ಸಾಹಸಮಯ ಟಾಸ್ಕ್ ಗಳನ್ನು ಪೂರ್ಣಿಗೊಳಿಸಿದ್ದರು. ಈ ಜೋಡಿಯ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ನಂಬಿಕೆ ಇತ್ತು. ಕೊನೆಗೂ ಆ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಈ ಜೋಡಿ.

    ಸೌತ್ ಆಫ್ರಿಕಾದ ಪ್ರಮುಖ ಸ್ಥಳಗಳಲ್ಲಿ ನಡೆದ ಸಾಹಸಮಯ ಟಾಸ್ಕ್ ಗಳನ್ನು ಆಶೀಶ್ ಮತ್ತು ನಂದಿನಿ ಸಮರ್ಥವಾಗಿಯೇ ನಿಭಾಯಿಸಿದ್ದರಿಂದ, ಇವರಿಗೆ ಗೆಲುವಿನ ಪಟ್ಟ ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಅದು ಈಗ ನಿಜವಾಗಿದೆ ರೋಡೀಸ್ 18 ಪಟ್ಟವನ್ನು ಆಶೀಶ್ ಭಾಟಿಯಾ ಮತ್ತು ಬೆಂಗಳೂರಿನ ನಂದಿನಿ ಅಲಂಕರಿಸಿದ್ದಾರೆ. ಇದೊಂದು ಅಡ್ವೆಂಚರ್ ರಿಯಾಲಿಟಿ ಶೋ ಆಗಿದ್ದು, ಈ ಹಿಂದೆ ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗ್ಡೆ ಕೂಡ ಈ ಶೋನಲ್ಲಿ ಭಾಗಿಯಾಗಿದ್ದರು. ಆದರೆ, ಅವರಿಗೆ ಗೆಲುವು ಆಗಿರಲಿಲ್ಲ. ಇದನ್ನೂ ಓದಿ:ಆಗಸ್ಟ್ ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕರ ಸಿನಿಮಾ ಟೈಟಲ್ ಲಾಂಚ್ : ಶಿವರಾಜ್ ಕುಮಾರ್ ಹೀರೋ

    ತಮ್ಮ ಗೆಲುವಿಗೆ ಕಾರಣವನ್ನು ಹಂಚಿಕೊಂಡಿರುವ ನಂದಿನಿ, ಈ ಶೋನಲ್ಲಿ ಅನೇಕ ಟಾಸ್ಕ್ ಗಳು ಸಾಹಸಮಯವಾಗಿದ್ದವು. ಆದರೂ, ನಾನು ಹೆದರಲಿಲ್ಲ. ಅನೇಕ ಎಲಿಮಿನೇಷನ್ ನಿಂದ ಪಾರಾದೆ, ಕಾರ್ಯಕ್ರಮದ ಆಯೋಜಕರು ನೀಡುತ್ತಿದ್ದ ತಿರುವುಗಳನ್ನು ಅರ್ಥ ಮಾಡಿಕೊಂಡು ಆಡಿದೆ. ಹಾಗಾಗಿ ಗೆಲುವು ಸಾಧ್ಯವಾಗಿದೆ ಎಂದಿದ್ದಾರೆ. ಈ ಬಾರಿ ಇಡೀ ಶೋ ಆಫ್ರಿಕಾದಲ್ಲಿ ನಡೆದಿದ್ದು, ಸೋನು ಸೂದ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ನೇಹಾ ಧೂಪಿಯಾ, ವಿಜೇಂದರ್ ಸಿಂಗ್, ನಿಖಿಲ್ ಚಿನ್ನಪ್ಪ ಸೇರಿದಂತೆ ಹಲವರು ಈ ಶೋನಲ್ಲಿ ಭಾಗಿಯಾಗಿದ್ದರು.

    ಈ ಶೋ ಗೆದ್ದ ನಂದಿನಿ ಮತ್ತು ಆಶೀಶ್ ಜೋಡಿಗೆ ಒಟ್ಟು ಹತ್ತು ಲಕ್ಷ ರೂಪಾಯಿಗಳ ಬಹುಮಾನ ಸಿಕ್ಕಿದೆ. ಅಲ್ಲದೇ, ಸ್ಮಾರ್ಟ್ ಫೋನ್, ಇನ್ ಫಿನಿಕ್ಸ್ ಇನ್ ಬುಕ್ ಮತ್ತು ಅನೇಕ ಉಡುಗೆಗಳನ್ನೂ ನೀಡಲಾಗಿದೆ. ಈ ಬಾರಿ ಕರ್ನಾಟಕವನ್ನು ಇಬ್ಬರು ಪ್ರತಿನಿಧಿಸಿದ್ದು, ಬೆಂಗಳೂರಿನ ನಂದಿನಿ ಜೊತೆ ಕೊಡಗಿನ ಜಶ್ವಂತ್ ಬೋಪಣ್ಣ ಕೂಡ ಭಾಗಿಯಾಗಿದ್ದರು. ಜಶ್ವಂತ್ ಈ ಶೋನಲ್ಲಿ ರನರ್ ಅಪ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]