Tag: ಜವಾಹರಲಾಲ್ ನೆಹರು

  • ಇಂದು ಜವಾಹರಲಾಲ್ ನೆಹರು 60ನೇ ಪುಣ್ಯತಿಥಿ- ಪ್ರಧಾನಿ ಮೋದಿ ಗೌರವ ನಮನ

    ಇಂದು ಜವಾಹರಲಾಲ್ ನೆಹರು 60ನೇ ಪುಣ್ಯತಿಥಿ- ಪ್ರಧಾನಿ ಮೋದಿ ಗೌರವ ನಮನ

    – ಸೋನಿಯಾ, ಖರ್ಗೆ ಸೇರಿದಂತೆ ಗಣ್ಯರಿಂದ ಪುಷ್ಪ ನಮನ

    ನವದೆಹಲಿ: ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರು 60 ನೇ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೌರವ ನಮನ ಅರ್ಪಿಸಿದರೆ, ಇತ್ತ ಸೋನಿ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ ನಾಯಕರು ಪುಷ್ಪ ನಮನ ಸಲ್ಲಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು (Narendra Modi) ತಮ್ಮ ಎಕ್ಸ್‌ ಖಾತೆಯಲ್ಲಿ, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಜಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ನೆಹರೂ ಅವರ ಪುಣ್ಯತಿಥಿಯಂದು ಕಾಂಗ್ರೆಸ್ ನಾಯಕರು ಪುಷ್ಪ ನಮನ ಸಲ್ಲಿಸಿದರು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಸೇರಿದಂತೆ ಹಲವು ಗಣ್ಯರು ರಾಷ್ಟ್ರ ರಾಜಧಾನಿಯಲ್ಲಿನ ಅವರ ಸ್ಮಾರಕ ಶಾಂತಿವನಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

    ಖರ್ಗೆ ತಮ್ಮ ಎಕ್ಸ್‌ ನಲ್ಲಿ, ವೈಜ್ಞಾನಿಕ, ಆರ್ಥಿಕ, ಕೈಗಾರಿಕಾ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಮುಂದಕ್ಕೆ ಕೊಂಡೊಯ್ದ ಆಧುನಿಕ ಭಾರತದ ವಾಸ್ತುಶಿಲ್ಪಿ ಪಂಡಿತ್ ಜವಾಹರಲಾಲ್ ನೆಹರು ಅವರ ಅತ್ಯುತ್ತಮ ಕೊಡುಗೆಯಿಲ್ಲದೆ ಭಾರತದ ಇತಿಹಾಸವು ಅಪೂರ್ಣವಾಗಿದೆ. ಅವರ ಪುಣ್ಯತಿಥಿಯಂದು “ಹಿಂದ್ ಕೆ ಜವಾಹರ್” ಅವರಿಗೆ ನಮ್ಮ ನಮ್ರ ನಮನಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: IPL 2024: ದಣಿವರಿಯದೇ ದುಡಿದ ಕ್ರೀಡಾ ಸಿಬ್ಬಂದಿಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್‌ ಶಾ

    ಪಂಡಿತ್ ಜವಾಹರಲಾಲ್ ನೆಹರು ಅವರು ದೇಶದ ರಕ್ಷಣೆ, ದೇಶದ ಪ್ರಗತಿ, ದೇಶದ ಏಕತೆ ನಮ್ಮೆಲ್ಲರ ರಾಷ್ಟ್ರೀಯ ಧರ್ಮ. ನಾವು ವಿವಿಧ ಧರ್ಮಗಳನ್ನು ಅನುಸರಿಸಬಹುದು, ವಿವಿಧ ರಾಜ್ಯಗಳಲ್ಲಿ ವಾಸಿಸಬಹುದು, ವಿವಿಧ ಭಾಷೆಗಳನ್ನು ಮಾತನಾಡಬಹುದು. ಆದರೆ ಅದು ನಮ್ಮ ನಡುವೆ ಯಾವುದೇ ಗೋಡೆಯನ್ನು ಸೃಷ್ಟಿಸಬಾರದು. ಎಲ್ಲಾ ಜನರು ಪ್ರಗತಿಯಲ್ಲಿ ಸಮಾನ ಅವಕಾಶವನ್ನು ಪಡೆಯಬೇಕು. ನಮ್ಮ ದೇಶದಲ್ಲಿ ಕೆಲವರು ಶ್ರೀಮಂತರಾಗಿರಲು ಮತ್ತು ಹೆಚ್ಚಿನ ಜನರು ಬಡವರಾಗಲು ನಾವು ಬಯಸುವುದಿಲ್ಲ ಎಂದಿದ್ದರು. ಇಂದಿಗೂ ಕಾಂಗ್ರೆಸ್ ಪಕ್ಷವು ಅದೇ “ನ್ಯಾಯ” ಮಾರ್ಗವನ್ನು ಅನುಸರಿಸುತ್ತಿದೆ ಎಂದು ಖರ್ಗೆ ತಿಳಿಸಿದ್ದಾರೆ.

    ಜವಾಹರಲಾಲ್ ನೆಹರು ಅವರು 1889ರ ನವೆಂಬರ್ 14 ರಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಜನಿಸಿದರು. 1964 ರ ಮೇ 27 ರಂದು ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು. ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರವನ್ನು ಅನುಸರಿಸಿ 1947 ರ ಆಗಸ್ಟ್ 15 ರಂದು ಭಾರತದ ಮೊದಲ ಪ್ರಧಾನಿಯಾದರು. ಭಾರತದಲ್ಲಿ ಆರಂಭಲ್ಲಿ ನವೆಂಬರ್ 20 ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು. ಕಾರಣ ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಣೆ ಮಾಡಿತ್ತು. ಆದರೆ ಜವಾಹರಲಾಲ್‌ ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ.

  • ಮೀಸಲಾತಿಗೆ ನೆಹರು ವಿರೋಧ, ಅಂಬೇಡ್ಕರ್‌ಗೆ ಭಾರತರತ್ನ ಕೊಡುವ ಮನಸ್ಸು ಕಾಂಗ್ರೆಸ್‌ಗೆ ಇರಲಿಲ್ಲ: ಮೋದಿ ಕಿಡಿ

    ಮೀಸಲಾತಿಗೆ ನೆಹರು ವಿರೋಧ, ಅಂಬೇಡ್ಕರ್‌ಗೆ ಭಾರತರತ್ನ ಕೊಡುವ ಮನಸ್ಸು ಕಾಂಗ್ರೆಸ್‌ಗೆ ಇರಲಿಲ್ಲ: ಮೋದಿ ಕಿಡಿ

    ನವದೆಹಲಿ: ಉದ್ಯೋಗದಲ್ಲಿ ಮೀಸಲಾತಿ (Reservation in Job) ನೀಡುವುದನ್ನು ಜವಾಹರಲಾಲ್‌ ನೆಹರು (Jawaharlal Nehru) ವಿರೋಧಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

    ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಭಾಷಣ ಮಾಡಿದ ಅವರು, ಅಂಬೇಡ್ಕರ್‌ (Ambedkar) ಅವರ ಹೋರಾಟದಿಂದಾಗಿ ಮೀಸಲಾತಿ ಸಿಕ್ಕಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರಿಗೆ ದಶಕಗಳವರೆಗೆ ಭಾರತರತ್ನ (Bharat Ratna) ಸಿಕ್ಕಿರಲಿಲ್ಲ. ಕಾಂಗ್ರೆಸ್‌ ನಾಯಕರು ತಮಗೆ ತಾವೇ ಭಾರತರತ್ನ ಪ್ರಶಸ್ತಿ ಪಡೆದುಕೊಂಡರು ಎಂದು ವಾಗ್ದಾಳಿ ನಡೆಸಿದರು.

     

    ಕಾಂಗ್ರೆಸ್ಸಿಗೆ ಅಂಬೇಡ್ಕರ್‌ ಅವರಿಗೆ ಭಾರತರತ್ನ ಕೊಡುವ ಮನಸ್ಸು ಇರಲಿಲ್ಲ. ಅದರೆ ಬಿಜೆಪಿ ಬೆಂಬಲಿತ ಸರ್ಕಾರ ಅಂಬೇಡ್ಕರ್‌ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿತು ಎಂದು. ದಿನ ದಲಿತರ ನಾಯಕ ಸೀತಾರಾಮ್‌ ಕೇಸರಿ ಅವರಿಗೂ ಕಾಂಗ್ರೆಸ್‌ ಅವಮಾನ ಮಾಡಿತ್ತು ಎಂದು ಕಿಡಿಕಾರಿದರು.  ಇದನ್ನೂ ಓದಿ: ಕಾಂಗ್ರೆಸ್‌ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ

    ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿರುವುದನ್ನು ಕಾಂಗ್ರೆಸ್‌ ಸಹಿಸಲಿಲ್ಲ. ಈಗ ಕಾಂಗ್ರೆಸ್ಸಿಗರು ರಾಷ್ಟ್ರಪತಿ ಕುರಿತು ಅಗೌರವದಿಂದ ಮಾತನಾಡುತ್ತಿದ್ದಾರೆ. ಆದಿವಾಸಿ ಮಹಿಳೆ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಸಮಯದಲ್ಲಿ ಅಭ್ಯರ್ಥಿಯನ್ನು ಹಾಕದೇ ಬೆಂಬಲ ವ್ಯಕ್ತಪಡಿಸಬೇಕಿತ್ತು ಎಂದು ಹೇಳಿದರು.

     

  • 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

    2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

    – ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿದ್ದುದು ನೆಹರು ಅವರ ವಾಕಿಗ್ ಸ್ಟಿಕ್ ಹೆಸರಲ್ಲಿ

    ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆ ವಿವಾದದೊಂದಿಗೆ ಇದೀಗ ಪ್ರತಿಪಕ್ಷಗಳು ‘ಸೆಂಗೋಲ್’ (Sengol) ವಿವಾದವನ್ನೂ ಎಳೆದುತಂದಿದೆ. 7 ದಶಕಗಳ ಕಾಲ ಈ ಚಿನ್ನದ ಸೆಂಗೋಲ್ ಅನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ (Allahabad Museum) ಇಡಲಾಗಿದ್ದು, ಇದೀಗ ಸಂಸತ್ ಭವನ (New Parliament Building) ಉದ್ಘಾಟನೆ ವೇಳೆ ಸ್ಪೀಕರ್ ಆಸನದ ಬಳಿ ಇರಿಸಲಾಗುತ್ತಿದೆ.

    ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal Nehru) ಅವರಿಗೆ ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ಮಾಡುವ ಸಂಕೇತವಾಗಿ ಸೆಂಗೋಲ್ ಅನ್ನು ನೀಡಲಾಗಿತ್ತು ಎಂಬ ಮಾತು ಕೇಳಿಬಂದರೂ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಆದರೆ ಇವೆಲ್ಲದಕ್ಕೂ ಬಿಜೆಪಿ ನಾಯಕರು ಉತ್ತರ ನೀಡಿದ್ದಾರೆ. ಇದನ್ನು ಹುಡುಕಲು 2 ವರ್ಷವೇ ಬೇಕಾಯಿತು ಎಂಬ ಸಂಗತಿ ಅತ್ಯಂತ ಕುತೂಹಲ ಮೂಡಿಸಿದೆ.

    ಸೆಂಗೋಲ್ ಬೆಳಕಿಗೆ ಬಂದಿದ್ದು ಯಾವಾಗ?
    2021ರಲ್ಲಿ ಅಂಕಣಕಾರ ಎಸ್ ಗುರುಮೂರ್ತಿ ಅವರು ‘ತುಘಲಕ್’ ಪತ್ರಿಕೆಯಲ್ಲಿ ಬರೆದ ಲೇಖನವೊಂದರಿಂದ ಸೆಂಗೋಲ್ ಹುಡುಕಾಟ ಆರಂಭವಾಯಿತು. ಬಳಿಕ ಸತತ 2 ವರ್ಷಗಳ ಕಾಲ ಕೇಂದ್ರ ಸರ್ಕಾರ ಸೆಂಗೋಲ್ ಹುಡುಕಾಟ ನಡೆಸಿತು. 1947ರ ಆಗಸ್ಟ್ 14ರ ರಾತ್ರಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ‍್ಯ ಸಿಕ್ಕಿದಾಗ ಅಧಿಕಾರ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ಅನ್ನು ಹಸ್ತಾಂತರಿಸುವ ಸಮಾರಂಭ ನಡೆದಿತ್ತು ಎಂಬುದನ್ನು ಸರ್ಕಾರ ಖಚಿತಪಡಿಸಿಕೊಂಡಿತು. ಇದೀಗ 77 ವರ್ಷ ಹಳೆಯ ಸೆಂಗೋಲ್ ಅನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಮಾಡಲು ಸರ್ಕಾರ ನಿರ್ಧಾರಿಸಿದೆ.

    ಗುರುಮೂರ್ತಿ ಬರೆದ ಲೇಖನದಲ್ಲೇನಿತ್ತು?
    ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ತಮಿಳುನಾಡಿನ ಸ್ವಾಮೀಜಿಯೊಬ್ಬರು ದೇಶದ ಸ್ವಾತಂತ್ರ‍್ಯ ಹಾಗೂ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ಅನ್ನು ಹಸ್ತಾಂತರ ಮಾಡಿದ್ದರು ಎಂದು ಗುರುಮೂರ್ತಿ ಲೇಖನ ಬರೆದಿದ್ದರು. ಈ ಲೇಖನ ಪ್ರಕಟವಾದ ಕೆಲ ದಿನಗಳ ಬಳಿಕ ಖ್ಯಾತ ನೃತ್ಯಗಾರ್ತಿ ಡಾ.ಪದ್ಮಾ ಸುಬ್ರಮಣ್ಯಂ ಅವರು ಅದರ ಇಂಗ್ಲಿಷ್ ಪ್ರತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದ್ದರು. ಅದರೊಂದಿಗೆ ಪತ್ರವನ್ನೂ ಕಳುಹಿಸಿ, ಈ ಪವಿತ್ರ ಹಾಗೂ ಐತಿಹಾಸಿಕ ಸಂಗೋಲ್ ಹಸ್ತಾಂತರ ಸಮಾರಂಭದ ಇತಿಹಾಸವನ್ನು ಜನರಿಂದ ಮರೆಮಾಚಲಾಗಿದೆ. ಈ ವಿಚಾರವನ್ನು ಮೋದಿ ಸರ್ಕಾರ 2021ರ ಸ್ವಾತಂತ್ರ್ಯೋತ್ಸವದಂದು ಬಹಿರಂಗಪಡಿಸಬೇಕು ಎಂದು ಕೋರಿಕೊಂಡಿದ್ದರು.

    2 ವರ್ಷ ಸೆಂಗೋಲ್‌ಗಾಗಿ ಹುಡುಕಾಟ:
    ಪದ್ಮಾ ಸುಬ್ರಮಣ್ಯಂ ಅವರ ಪತ್ರವನ್ನು ಗಮನಿಸಿದ ಪ್ರಧಾನಿ ಕಾರ್ಯಾಲಯ ಹಾಗೂ ಸಂಸ್ಕೃತಿ ಸಚಿವಾಲಯ ಹಳೆಯ ದಾಖಲೆಗಳ ಹುಡುಕಾಟ ನಡೆಸಿತು. ಸೆಂಗೋಲ್‌ನ ಅಸ್ಥಿತ್ವ ನಿಜವೇ ಅಥವಾ ಹುಸಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಹಳೆಯ ಪತ್ರಿಕಾ ಲೇಖನ, ಪುಸ್ತಕಗಳು ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿದರು. ಇದನ್ನೂ ಓದಿ: ಹೊಸ ಸಂಸತ್‌ನಲ್ಲಿ `ಸೆಂಗೋಲ್’ ಸಮರ – ಅಧಿಕಾರ ಹಸ್ತಾಂತರದ ರಾಜದಂಡಕ್ಕೆ ಸಾಕ್ಷ್ಯವೇ ಇಲ್ಲ ಅಂತಿದೆ ಕಾಂಗ್ರೆಸ್

    ಕೊನೆಗೆ ನೆಹರು ಅವರಿಗೆ ತಮ್ಮ ನಿವಾಸದಲ್ಲಿಯೇ ಸೆಂಗೋಲ್ ಅನ್ನು ಹಸ್ತಾಂತರ ಮಾಡಲಾಗಿತ್ತು ಎಂಬುದು ತಿಳಿದುಬಂತು. ಇದನ್ನು ಖಚಿತಪಡಿಸಿಕೊಳ್ಳಲು ಸಮಾರಂಭದ ಫೋಟೋಗಾಗಿ ಹುಡುಕಾಟ ನಡೆಸಲಾಯಿತು. ನೆಹರು ಅವರ ಖಾಸಗಿ ದಾಖಲೆಗಳನ್ನೂ ಪರಿಶೀಲಿಸಲು ಮನವಿ ಮಾಡಲಾಯಿತು. ಈ ವೇಳೆ 1947ರ ಆಗಸ್ಟ್ 25 ರಂದು ‘ಟೈಮ್’ ನಿಯತಕಾಲಿಕೆಯಲ್ಲಿ ಸೆಂಗೋಲ್ ಸಮಾರಂಭದ ಕುರಿತು ವಿವರವಾಗಿ ಬರೆಯಲಾಗಿದ್ದ ವರದಿ ಲಭಿಸಿತು.

    ನೆಹರು ವಾಕಿಂಗ್ ಸ್ಟಿಕ್ ಹೆಸರಲ್ಲಿ ಪ್ರದರ್ಶನ:
    ಸೆಂಗೋಲ್ ಸಿಕ್ಕಿದ್ದು ನಿಜ ಆದರೆ ಅದು ಎಲ್ಲಿದೆ ಎನ್ನುವುದು ಪತ್ತೆಯಾಗಲಿಲ್ಲ. ಸರ್ಕಾರ ಹಲವು ಮ್ಯೂಸಿಯಂಗಳಲ್ಲಿ ಸೆಂಗೋಲ್ ಹುಡುಕಾಟ ಆರಂಭಿಸಿತು. ಕೊನೆಗೆ ಈ ಸೆಂಗೋಲ್ 70 ವರ್ಷಗಳಿಂದ ಅಲಹಾಬಾದ್‌ನ ಮ್ಯೂಸಿಯಂನಲ್ಲಿ ಇರುವುದು ತಿಳಿದುಬಂತು. ಆದರೆ ಅದಕ್ಕೆ ನೆಹರು ಅವರು ಬಳಸುತ್ತಿದ್ದ ಚಿನ್ನದ ವಾಕಿಂಗ್ ಸ್ಟಿಕ್ ಎಂಬ ಅಡಿಬರಹದೊಂದಿಗೆ ಪ್ರದರ್ಶನಕ್ಕೆ ಇಡಲಾಗಿತ್ತು.

    ಇದೀಗ ಮರೆಮಾಚಲಾಗಿದ್ದ ಇತಿಹಾಸವನ್ನು ಬಯಲಿಗೆ ತಂದು ಸರ್ಕಾರ ಸೆಂಗೋಲ್ ಅನ್ನು ಮ್ಯೂಸಿಯಂನಿಂದ ತರಿಸಿ ಹೊಸದಾಗಿ ನಿರ್ಮಾಣವಾಗಿರುವ ಸಂಸತ್ ಭವನದಲ್ಲಿ ಪ್ರತಿಷ್ಟಾಪಿಸಲು ನಿರ್ಧರಿಸಿದೆ. ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ವಿಶೇಷ ನಾಣ್ಯ ಬಿಡುಗಡೆ

  • 2013ರಿಂದ ಇಂದಿರಾ ಗಾಂಧಿ ಹುಟ್ಟಿದ ಮನೆಯ ತೆರಿಗೆ ಪಾವತಿಸಿಲ್ಲ

    2013ರಿಂದ ಇಂದಿರಾ ಗಾಂಧಿ ಹುಟ್ಟಿದ ಮನೆಯ ತೆರಿಗೆ ಪಾವತಿಸಿಲ್ಲ

    – 4.35 ಕೋಟಿ ರೂ.ತೆರಿಗೆ ಬಾಕಿ
    – ಸೋನಿಯಾ ಗಾಂಧಿ ಒಡೆತನದಲ್ಲಿರುವ ಕಟ್ಟಡ

    ಲಕ್ನೋ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನಿಸಿದ ಉತ್ತರ ಪ್ರದೇಶದ ಪ್ರಯಾಗರಾಜ್‍ನಲ್ಲಿನ ಆನಂದ ಭವನದ ತೆರಿಗೆಯನ್ನು ಪಾವತಿಸದೆ ವರ್ಷಗಳೇ ಕಳೆದಿದ್ದು, ಒಟ್ಟು 4.35 ಕೋಟಿ ರೂ. ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆ.

    ವಸತಿ ರಹಿತ ವರ್ಗದಡಿಯಲ್ಲಿ ತೆರಿಗೆ ವಿಧಿಸಲಾಗಿದ್ದು, 2013ರಿಂದ ಈ ಮನೆಯ ತೆರಿಗೆ ಪಾವತಿಸಲಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಆನಂದ ಭವನ ಗಾಂಧಿ ಕುಟುಂಬದ ನೆಲೆಯಾಗಿತ್ತು. ಇದೀಗ ಆ ಬಂಗಲೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ನಡೆಸಲಾಗುತ್ತಿದೆ.

    ನಗರಸಭೆ ಕಾಯ್ದೆ ಮತ್ತು ಆಸ್ತಿ ತೆರಿಗೆ ನಿಯಮಗಳ ಅಡಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಪ್ರಯಾಗರಾಜ್ ಮುನ್ಸಿಪಲ್ ಕಾರ್ಪೋರೇಶನ್(ಪಿಎಂಸಿ)ನ ಮುಖ್ಯ ತೆರಿಗೆ ಮೌಲ್ಯಮಾಪನ ಅಧಿಕಾರಿ ಪಿ.ಕೆ.ಮಿಶ್ರಾ ತಿಳಿಸಿದ್ದಾರೆ.

    ತೆರಿಗೆ ಮೊತ್ತವನ್ನು ನಿರ್ಧರಿಸಲು ಸಮೀಕ್ಷೆ ನಡೆಸಿದ್ದೇವೆ. ಮೌಲ್ಯಮಾಪನದ ಬಗ್ಗೆ ಆಕ್ಷೇಪಣೆಯನ್ನು ಸಹ ಆಹ್ವಾನಿಸಿದ್ದೆವು ಆದರೆ ಯಾವುದನ್ನೂ ಸ್ವೀಕರಿಸಿಲ್ಲ. ಹೀಗಾಗಿ ನಾವು ನಮ್ಮ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನೋಟಿಸ್ ನೀಡಿದ್ದೇವೆ ಎಂದು ಮಿಶ್ರಾ ತಿಳಿಸಿದ್ದಾರೆ.

    ಪಿಎಂಸಿ ಮಾಜಿ ಮೇಯರ್ ಚೌಧರಿ ಜಿತೇಂದ್ರನಾಥ್ ಸಿಂಗ್ ಈ ಕುರಿತು ಮಾಹಿತಿ ನೀಡಿ, ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ಎಲ್ಲ ರೀತಿಯ ತೆರಿಗೆಗಳಿಂದ ವಿನಾಯಿತಿ ಪಡೆದಿರುವ ಹಿನ್ನೆಲೆ ಆನಂದ್ ಭವನಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ ಎಂದರು.

    ಆನಂದ್ ಭವನಕ್ಕೆ ತೆರಿಗೆ ವಿಧಿಸುವುದು ತಪ್ಪು. ಈ ಕಟ್ಟಡ ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ಅಡಿಯಲ್ಲಿ ಬರುತ್ತದೆ. ಇದಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದು ಸ್ವಾತಂತ್ರ್ಯ ಹೋರಾಟದ ಸ್ಮಾರಕ ಹಾಗೂ ಸ್ಮರಣಿಕೆಗಳ ವಸ್ತು ಸಂಗ್ರಹಾಲಯವಾಗಿದೆ. ಅಲ್ಲದೆ ಇದು ಶಿಕ್ಷಣದ ಕೇಂದ್ರವಾಗಿದೆ ಎಂದು ಸಿಂಗ್ ಅಭಿಪ್ರಾಯಪಟ್ಟರು.

    ರಾಜಕೀಯದ ಭಾಗವಾಗಿ ಬಿಜೆಪಿ ಸರ್ಕಾರ ಆನಂದ ಭವನಕ್ಕೆ ತೆರಿಗೆ ವಿಧಿಸಿದೆ. ಆನಂದ್ ಭವನ ಸ್ವಾತಂತ್ರ್ಯ ಹೋರಾಟದ ದೇವಾಲಯವಾಗಿದೆ. ತೆರಿಗೆ ವಿಧಿಸುವುದು ಕಾಂಗ್ರೆಸ್ ಮುಕ್ತ ಭಾರತ ಹಾಗೂ ನೆಹರು ಮುಕ್ತ ಜಗತ್ತಿನ ಬಿಜೆಪಿಯ ಕಾರ್ಯಸೂಚಿಗೆ ಅನುಗುಣವಾಗಿದೆ. ಇದನ್ನು ಸರ್ಕಾರದ ಸೂಚನೆ ಮೇರೆಗೆ ಮಾಡಲಾಗಿದೆ ಎಂದು ನಗರದ ನಿವಾಸಿ ಅಭ್ಯ ಅವಸ್ಥಿ ಆರೋಪಿಸಿದ್ದಾರೆ.