Tag: ಜವಾನ್

  • `ಜವಾನ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ

    `ಜವಾನ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ

    `ಪಠಾಣ್’ (Pathaan) ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ಶಾರುಖ್‌ಗೆ(Sharukh Khan) ಇದೀಗ ಗೆಲುವಿನ ಸರದಾರ ಶಿವರಾಜ್‌ಕುಮಾರ್ (Shivarajkumar) ಸಾಥ್ ನೀಡುತ್ತಿದ್ದಾರೆ. ಬಾಲಿವುಡ್ (Bollywood) ಎಸ್‌ಆರ್‌ಕೆ ಜೊತೆ ಸ್ಯಾಂಡಲ್‌ವುಡ್ ಎಸ್‌ಆರ್‌ಕೆ ಜೊತೆಯಾಗುತ್ತಿದ್ದಾರೆ. ಇಂತಹದೊಂದು ಸುದ್ದಿ ಸಿನಿನಗರಿಯಲ್ಲಿ ಹರಿದಾಡುತ್ತಿದೆ.

    ಶಾರುಖ್ ಖಾನ್ ಸದ್ಯ `ಜವಾನ್’ (Jawan) ಪ್ರಾಜೆಕ್ಟ್ ಕಡೆ ಗಮನ ಕೊಡುತ್ತಿದ್ದಾರೆ. `ಪಠಾಣ್’ ಚಿತ್ರದ ಸಕ್ಸಸ್ ನಂತರ ಜವಾನ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಜವಾನ್ ಚಿತ್ರದ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿದ್ದಾರೆ. `ಜವಾನ್’ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಎಂಟ್ರಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಗೌರಿ ಖಾನ್ (Gowri Khan Productions) ನಿರ್ಮಾಣದ ಈ ಚಿತ್ರದಲ್ಲಿ ದಕ್ಷಿಣದ ಸ್ಟಾರ್ ಕಲಾವಿದರನ್ನ ಈ ಚಿತ್ರದಲ್ಲಿ ಸೇರಿಸುವ ಪ್ರಯತ್ನ ನಡೆಯುತ್ತಿದೆಯಂತೆ. ಸ್ಟಾರ್ ಕಲಾವಿದರ ದಂಡೇ ಈ ಚಿತ್ರದಲ್ಲಿ ಇರಲಿದೆ. ಜವಾನ್‌ಗೆ ನಾಯಕಿಯಾಗಿ ನಯನತಾರಾ (Nayanatara) ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕನ್ನಡದಿಂದ ಸೆಂಚುರಿ ಸ್ಟಾರ್ ಶಿವಣ್ಣಗೆ (Shivanna) ಚಿತ್ರದಲ್ಲಿ ನಟಿಸಲು ಶಾರುಖ್ ಟೀಂ ಅಪ್ರೋಚ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ ಶಿವಣ್ಣ ರಜನೀಕಾಂತ್ (Rajanikanth) ಜೊತೆ `ಜೈಲರ್’ನಲ್ಲಿ ನಟಿಸಿ ಬಂದಿದ್ದಾರೆ. ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸಲು ಶಿವಣ್ಣ ಪ್ರಾರಂಭ ಮಾಡಿದ್ದಾರೆ. ಹಾಗಾಗಿ ಶಾರುಖ್ ಖಾನ್ ಚಿತ್ರದಲ್ಲಿ ಶಿವಣ್ಣ ನಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಅಧಿಕೃತ ಅಪ್‌ಡೇಟ್‌ಗಾಗಿ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

  • ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಬಿಟೌನ್ ಸೂಪರ್ ಸ್ಟಾರ್ ಶಾರುಖ್ ಖಾನ್ (Sharukh Khan) ನಟಿಸಿರುವ ಸಿನಿಮಾಗಳು ಮಕಾಡೆ ಮಲಗಿದ್ದ ಬೆನ್ನಲ್ಲೇ ಸಿನಿಮಾದಿಂದ ಸರಿದಿದ್ದರು. ಇದೀಗ ಲಾಂಗ್ ಗ್ಯಾಪ್‌ನ ನಂತರ ಮತ್ತೆ `ಜವಾನ್’ (Jawan) ಚಿತ್ರದ ಮೂಲಕ ಶಾರುಖ್ ಖಾನ್ ಕಂಬ್ಯಾಕ್ ಆಗುತ್ತಿದ್ದಾರೆ. ಜೊತೆಗೆ ಈ ಚಿತ್ರದ ಒಟಿಟಿ ಹಕ್ಕು 100 ಕೋಟಿ ರೂಪಾಯಿಗೆ ಸೋಲ್ಡ್ ಔಟ್ ಆಗಿದೆ.

    ಅಟ್ಲೀ ನಿರ್ದೇಶನದ ಸಿನಿಮಾ `ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಈ ಚಿತ್ರದ ಕೊನೆಯ ಹಂತದ ಶೂಟಿಂಗ್‌ನಲ್ಲಿರುವ ಬೆನ್ನಲ್ಲೇ 100 ಕೋಟಿ(100 Crore) ರೂಪಾಯಿಗೆ ಒಟಿಟಿಗೆ ಸೇಲ್ ಆಗಿದೆ. ಚಿತ್ರಮಂದಿರಲ್ಲಿ ಬಂದ ನಂತರ ಒಟಿಟಿಗೆ ಲಗ್ಗೆ ಇಡಲಿದೆ. ಇದನ್ನೂ ಓದಿ:ಕೇಂದ್ರ ಸಚಿವ ಠಾಕೂರ್ ಭೇಟಿ ಮಾಡಿದ ‘ಕಾಂತಾರ’ ನಿರ್ಮಾಪಕ ವಿಜಯ್ ಕಿರಗಂದೂರ

    ಬಾಲಿವುಡ್‌ನಲ್ಲಿ (Bollywood) ಇದೀಗ ಸೌತ್ ಸಿನಿಮಾಗಳೇ ಸೂಪರ್ ಡೂಪರ್ ಹಿಟ್ ಆಗುತ್ತಿದೆ. ಹಿಂದಿ ಚಿತ್ರಗಳು ಗಟ್ಟಿ ನೆಲೆ ಕಾಣದೇ ಮಕಾಡೆ ಮಲಗುತ್ತಿದೆ. ಆದರೆ ಈಗ ಜವಾನ್ ಚಿತ್ರ ಬಹುಕೋಟಿ ವೆಚ್ಚಕ್ಕೆ ಒಟಿಟಿಗೆ ಸೇಲ್ ಆಗಿರುವುದು ಬಾಲಿವುಡ್‌ಗೆ ಮರುಜೀವ ಕೋಟಿ ಕೊಟ್ಟಿದೆ. 100 ಕೋಟಿ ರೂಪಾಯಿಗೆ ಸೇಲ್ ಆಗುವ ಮೂಲಕ ಜವಾನ್ ಹಿಸ್ಟರಿ ಕ್ರಿಯೇಟ್ ಮಾಡಿದೆ.

    `ಜವಾನ್’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಸೋಲಿನ ರುಚಿ ಕಂಡಿರುವ ಶಾರುಖ್‌ಗೆ ಈ ಸಿನಿಮಾ ಗೆಲುವಿನ ಸಿಹಿ ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮ ಸಂಭಾವನೆಯಲ್ಲಿ ʼಜವಾನ್‌ʼ ಚಿತ್ರಕ್ಕಾಗಿ 5 ಕೋಟಿ ಹೆಚ್ಚಿಸಿಕೊಂಡ  ವಿಜಯ್ ಸೇತುಪತಿ!

    ತಮ್ಮ ಸಂಭಾವನೆಯಲ್ಲಿ ʼಜವಾನ್‌ʼ ಚಿತ್ರಕ್ಕಾಗಿ 5 ಕೋಟಿ ಹೆಚ್ಚಿಸಿಕೊಂಡ ವಿಜಯ್ ಸೇತುಪತಿ!

    ಕಾಲಿವುಡ್‌ನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಸದ್ಯ ಹಿಂದಿ ಸಿನಿಮಾಗಳ ಮುಖ ಮಾಡಿದ್ದಾರೆ. ಶಾರುಖ್ ನಟನೆಯ `ಜವಾನ್’ ಚಿತ್ರತಂಡಕ್ಕೆ ವಿಜಯ್ ಸೇರಿಕೊಂಡಿದ್ದಾರೆ. ಇದೀಗ ಈ ಚಿತ್ರಕ್ಕೆ ಪಡೆದಿರುವ ಸಂಭಾವನೆ ವಿಚಾರವಾಗಿ ವಿಜಯ್ ಸೇತುಪತಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

    ದಕ್ಷಿಣದ ಸಿನಿಮಾಗಳ ಮೂಲಕ ಸಕ್ಸಸ್‌ಫುಲ್ ನಟನಾಗಿ ಗುರುತಿಸಿಕೊಂಡಿರುವ ವಿಜಯ್ ಸೇತುಪತಿಗೆ ಬಾಲಿವುಡ್‌ನಲ್ಲೂ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನಿರ್ದೇಶಕ ಅಟ್ಲೀ ತಮ್ಮ ಮುಂಬರುವ `ಜವಾನ್’ ಚಿತ್ರಕ್ಕೆ ವಿಜಯ್ ಸೇತುಪತಿ ಅವರೇ ತಮ್ಮ ಪ್ರಾಜೆಕ್ಟ್‌ಗೆ ಬೇಕು ಎಂದು ಒಂದೊಳ್ಳೆ ಸಂಭಾವನೆ ನೀಡಿ, ಈ ಸಿನಿಮಾಗೆ ಫಿಕ್ಸ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್

    ಶಾರುಖ್ ಖಾನ್ ಮುಂದೆ ಪವರ್‌ಫುಲ್ ಪಾತ್ರದಲ್ಲಿ ನಟಿಸಲು ತಮಗೆ ಅರಸಿ ಬಂದಿದ್ದ ಸಾಕಷ್ಟು ಪ್ರಾಜೆಕ್ಟ್ ಅನ್ನ ವಿಜಯ್ ಕೈಬಿಟ್ಟಿದ್ದಾರೆ. 15 ಕೋಟಿ ಇದ್ದ ತಮ್ಮ ಸಂಭಾವನೆಯನ್ನ 20 ಕೋಟಿಗೆ ಹೆಚ್ಚಿಕೊಂಡಿದ್ದಾರೆ.

    `ಜವಾನ್’ ಚಿತ್ರದಲ್ಲಿ ಶಾರುಖ್ ಮತ್ತು ನಯನತಾರಾ ಎದುರು ವಿಜಯ್ ಸೇತುಪತಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಸ್ಪೇನ್‌ನ ಬಾರ್ಸಿಲೋನಗೆ ಹಾರಿದ್ದಾರೆ. ಬಾರ್ಸಿಲೋನದ ಬೀದಿ ಬೀದಿಗಳಲ್ಲಿ ನಯನತಾರಾ ದಂಪತಿ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Vignesh Shivan (@wikkiofficial)

    ನಯನತಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ತಿಂಗಳು ಕಳೆದಿದೆ. ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದತ್ತ ಗಮನ ನೀಡುತ್ತಿರುವ ನಯನತಾರಾ ಸದ್ಯ ಪತಿಯ ಜತೆ ಸ್ಪೇನ್‌ಗೆ ಹಾರಿದ್ದಾರೆ. ಬಾರ್ಸಿಲೋನದ ಸುಂದರ ಪ್ರದೇಶಗಳಿಗೆ ನಯನತಾರಾ ದಂಪತಿ ಸುತ್ತಾಡುತ್ತಿದ್ದಾರೆ. ಇದನ್ನೂ ಓದಿ:ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

     

    View this post on Instagram

     

    A post shared by Vignesh Shivan (@wikkiofficial)

    ಈ ವರ್ಷ ಜೂನ್ 9ರಂದು ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ಹಾರಿದ್ದರು. ಬಳಿಕ ಶಾರುಖ್ ಖಾನ್ ನಟನೆಯ `ಜವಾನ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗ ಬಾರ್ಸಿಲೋನದಲ್ಲಿ ನಯನತಾರಾ ದಂಪತಿ ಪ್ರವಾಸವನ್ನ ಏಂಜಾಯ್ ಮಾಡ್ತಿದ್ದಾರೆ.

    Live Tv

  • ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿಗೆ ಡಬಲ್ ಧಮಾಕಾ

    ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿಗೆ ಡಬಲ್ ಧಮಾಕಾ

    ಮಿಳು ಸಿನಿಮಾ ರಂಗದ ಖ್ಯಾತ ನಟ ವಿಜಯ್ ಸೇತುಪತಿ ಬಹುಬೇಡಿಕೆಯ ನಟರಾಗಿ ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಕಮಲ್ ಹಾಸನ್ ಜೊತೆ ನಟಿಸಿರುವ ವಿಕ್ರಮ್ ಸಿನಿಮಾ ಕೋಟಿ ಕೋಟಿ ಬಾಚಿತು. ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಕಮಲ್ ಹಾಸನ್ ಮಾತ್ರವಲ್ಲ, ವಿಜಯ್ ಸೇತುಪತಿ ಪಾತ್ರದ ಬಗ್ಗೆಯೂ ಒಳ್ಳೆಯ ಮಾತುಗಳು ಕೇಳಿ ಬಂದವು. ಇದರ ಬೆನ್ನಲ್ಲೇ, ಅಭಿಮಾನಿಗಳಿಗೆ ಮತ್ತಷ್ಟು ಸಿಹಿ ಸುದ್ದಿ ಕೊಟ್ಟಿದ್ದಾರೆ ವಿಜಯ್ ಸೇತುಪತಿ.

    ಕೇವಲ ತಮಿಳಿನಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲೂ ವಿಜಯ್ ಸೇತುಪತಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಶಾರುಖ್ ಖಾನ್ ಮತ್ತು  ಸಲ್ಮಾನ್ ಖಾನ್ ಟೀಮ್ ನಿಂದ ವಿಜಯ್ ಸೇತುಪತಿಗೆ ಕರೆ ಬಂದಿದ್ದು, ಸಲ್ಮಾನ್ ಸಿನಿಮಾಗಿಂತ ಶಾರುಖ್ ಖಾನ್ ಚಿತ್ರದ ಮೇಲೆ ಅವರಿಗೆ ಒಲವಿದೆಯಂತೆ. ಹಾಗಾಗಿ ಶಾರುಖ್ ಖಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನುವ ಸುದ್ದಿಯಿದೆ. ಈ ಸಿನಿಮಾದಲ್ಲಿ ವಿಜಯ್ ಅವರದ್ದು ನೆಗೆಟಿವ್ ಪಾತ್ರವಂತೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

    ಪುಷ್ಪಾ 2 ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಅದು ಈಗ ನಿಜವಾಗಿದೆ. ಈ ಸಿನಿಮಾದಲ್ಲಿ ಅವರು ಪೊಲೀಸ್ ಆಫೀಸರ್ ಪಾತ್ರವನ್ನು ಮಾಡಲಿದ್ದಾರೆ. ಪುಷ್ಪನನ್ನು ಅರೆಸ್ಟ್ ಮಾಡುವುದೇ ಈ ಪೊಲೀಸ್ ಇನ್ಸೆಪೆಕ್ಟರ್ ಎನ್ನುವ ಸುದ್ದಿಯೂ ಇದೆ. ಹಾಗಾಗಿ ವಿಜಯ್ ಸೇತುಪತಿ ಎರಡು ಭಾರೀ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಹಜವಾಗಿಯೇ ಅಭಿಮಾನಿಗಳಿಗೆ ಈ ವಿಷಯ ಸಂಭ್ರಮ ತರಿಸಿದೆ.

     

    Live Tv
    [brid partner=56869869 player=32851 video=960834 autoplay=true]

  • ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಹನಿಮೂನ್‌ಗಾಗಿ ವಿದೇಶಕ್ಕೆ ಹಾರಿದ್ದ ಈ ಜೋಡಿ ಇದೀಗ ಹಿಂದಿರುಗಿದ್ದಾರೆ. ಈ ಬೆನ್ನಲ್ಲೇ ಶಾರುಖ್ ನಟನೆಯ `ಜವಾನ್’ ಸಿನಿಮಾಗೂ ಹಾಜರಾಗಿದ್ದಾರೆ.

    ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ನಿರ್ದೇಶಕ ವಿಘ್ನೇಶ್ ಮತ್ತು ನಯನತಾರಾ ಜೂನ್ ೯ರಂದು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಬಳಿಕ ಹನಿಮೂನ್‌ಗಾಗಿ ಈ ಜೋಡಿ ವಿದೇಶಕ್ಕೆ ಹಾರಿತ್ತು. ಈಗ ಮತ್ತೆ ಮನೆಗೆ ವಾಪಸ್ ಆಗಿದ್ದು, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರೀಕರಣದಲ್ಲಿ ಭಾಗಿಯಾಲಿದ್ದಾರೆ.

    ಹನಿಮೂನ್‌ನಿಂದ ನೇರವಾಗಿ ಮುಂಬೈಗೆ ಬಂದಿರುವ ನಯನತಾರಾ, ಅಟ್ಲೀ ನಿರ್ದೇಶನದ ಜವಾನ್ ಚಿತ್ರೀಕರಣದಲ್ಲಿ ನಯನತಾರಾ ಭಾಗಿಯಾಗಲಿದ್ದಾರೆ. ಜುಲೈ ಎರಡನೇ ವಾರದ ಅಂತ್ಯದವೆಗೆಗೂ ಶೂಟಿಂಗ್ ಇರಲಿದೆ. ಶಾರುಖ್‌ಗೆ ಮೊದಲ ಬಾರಿಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಳ್ತಿದ್ದಾರೆ. ಟೀಸರ್‌ನಿಂದ ಹೈಪ್‌ ಕ್ರಿಯೇಟ್‌ ಮಾಡಿರುವ ʻಜವಾನ್‌ʼ , ಚಿತ್ರಮಂದಿರದಲ್ಲಿ ಹೇಗೆಲ್ಲಾ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv

  • ಕಾರು ಡಿಕ್ಕಿಯಾಗಿ ಕರ್ತವ್ಯನಿರತ ಪೇದೆ, ಐಆರ್‌ಬಿ ಜವಾನ ಸಾವು

    ಕಾರು ಡಿಕ್ಕಿಯಾಗಿ ಕರ್ತವ್ಯನಿರತ ಪೇದೆ, ಐಆರ್‌ಬಿ ಜವಾನ ಸಾವು

    ಪಣಜಿ: ವೇಗವಾಗಿ ಬಂದ ಕಾರ್‍ವೊಂದು ಮಧ್ಯರಾತ್ರಿ ನಾಕಾಬಂದಿ ಕರ್ತವ್ಯ ನಿರತ ಕಾನ್‍ಸ್ಟೇಬಲ್ ಮತ್ತು (ಐಆರ್‌ಬಿ) ಭಾರತೀಯ ರಿಸರ್ವ್ ಬೆಟಾಲಿಯನ್ ಜವಾನ್‍ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ದಕ್ಷಿಣ ಗೋವಾದ ಸೆರೌಲಿಮ್ ಗ್ರಾಮದ ಪೊಲೀಸ್ ಚೆಕ್‍ ಪೋಸ್ಟ್‌ ನಲ್ಲಿ ನಡೆದಿದೆ.

    ಕಾನ್‍ಸ್ಟೇಬಲ್ ಶೈಲೇಶ್ ಗಾಂವ್ಕರ್ ಮತ್ತು (ಐಆರ್‌ಬಿ) ಜವಾನ್ ವಿಶ್ವಾಸ್ ಡೇಕರ್ ಮೃತ ದುರ್ದೈವಿಗಳು. ಕಾನ್‍ಸ್ಟೇಬಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಜವಾನ್ ವಿಶ್ವಾಸ್‍ರನ್ನು (ಜಿಎಂಸಿ) ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸುವಾಗ ರಸ್ತೆ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಕಾರ್ ಚಾಲಕನನ್ನು ಸಿರಾಗ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಬಿಜೆಪಿಯ ದ್ವೇಷದ ರಾಜಕಾರಣ ಭಾರತಕ್ಕೆ ಹಾನಿಕಾರಕ: ರಾಹುಲ್ ಗಾಂಧಿ

    ಕೊಲ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಸೆರೌಲಿಮ್ ಗ್ರಾಮದಲ್ಲಿ ಕಾನ್‍ಸ್ಟೇಬಲ್, (ಐಆರ್‌ಬಿ) ಜವಾನ್ ಮತ್ತು ಹೋಮ್ ಗಾರ್ಡ್ ‘ನಾಕಾಬಂದಿ’ ಕರ್ತವ್ಯ ನಿರತರಾಗಿದ್ದಾಗ ಶನಿವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

    ಘಟನೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್