Tag: ಜವಾನ್

  • ರೆಡ್ ಡ್ರೆಸ್‌ನಲ್ಲಿ ದೀಪಿಕಾ ಪಡುಕೋಣೆ ಗ್ಲ್ಯಾಮರಸ್ ಫೋಟೋಶೂಟ್

    ರೆಡ್ ಡ್ರೆಸ್‌ನಲ್ಲಿ ದೀಪಿಕಾ ಪಡುಕೋಣೆ ಗ್ಲ್ಯಾಮರಸ್ ಫೋಟೋಶೂಟ್

    ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮುದ್ದು ಮಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರೇಕ್‌ನ ಬಳಿಕ ಮತ್ತೆ ನಟಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ರೆಡ್ ಡ್ರೆಸ್‌ನಲ್ಲಿ ದೀಪಿಕಾ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

    ಮಗುವಿನ ತಾಯಿ ಆದ್ಮೇಲೆಯೂ ದೀಪಿಕಾ ಫಿಟ್‌ನೆಸ್ ಕಡೆ ಹೆಚ್ಚು ಗಮನ ವಹಸುತ್ತಿದ್ದಾರೆ. ಬ್ಯೂಟಿ, ಫಿಟ್‌ನೆಸ್, ವರ್ಕೌಟ್ ಅಂತ ಮಗುವಿನ ಪಾಲನೆಯೊಂದಿಗೆ ಮಾಡುತ್ತಿದ್ದಾರೆ. ಇದರ ನಡುವೆ ನಟಿಯ ಸ್ಟೈಲೀಶ್ ಫೋಟೋಶೂಟ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಇದನ್ನೂ ಓದಿ:ಯಶಸ್ಸಿಗಾಗಿ ‘ವಿಲನ್’ ಆದ ‘ಬಿಗ್ ಬಾಸ್’ ಶೈನ್ ಶೆಟ್ಟಿ

    ಕೆಂಪು ಬಣ್ಣದ ಗೌನ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ಜವಾನ್ ಬೆಡಗಿ ಫೋಟೋಶೂಟ್ ಮಾಡಿಸಿದ್ದಾರೆ. ಗೌನ್ ಜೊತೆ ದುಬಾರಿ ಬೆಲೆ ಆಭರಣ ಧರಿಸಿ ಗ್ಲ್ಯಾಮರಸ್ ಅವತಾರ ತಾಳಿದ್ದಾರೆ. ಇದನ್ನೂ ಓದಿ:ಇದು ನಿಮ್ಮ ಫೆಮಿನಿಸಂ?- ದೀಪಿಕಾ ಪಡುಕೋಣೆ ವಿರುದ್ಧ ಸಂದೀಪ್ ರೆಡ್ಡಿ ಆಕ್ರೋಶ

    ಇದೀಗ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಲು ನಟಿ ಸಜ್ಜಾಗಿದ್ದಾರೆ. ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪವರ್‌ಫುಲ್ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಶಾರುಖ್ ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ.

    ‘ಸ್ಪಿರಿಟ್’ ಸಿನಿಮಾ (Spirit) ದೀಪಿಕಾ ಕೈತಪ್ಪಿದ್ರೂ ಕೂಡ ಅವರಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ‘ಕಲ್ಕಿ 2878 ಎಡಿ’ ಸಿನಿಮಾದ ಪಾರ್ಟ್ 2ನಲ್ಲಿ ನಟಿಸಲಿದ್ದಾರಂತೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಪ್ರಿ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ ಎನ್ನಲಾಗಿದೆ. ಇದರೊಂದಿಗೆ ದಕ್ಷಿಣದ ಸಿನಿಮಾದಲ್ಲಿ ನಟಿಸಲು ಅವರಿಗೆ ಅವಕಾಶ ಅರಸಿ ಬರುತ್ತಿವೆ.

  • ಅಟ್ಲಿ ಜೊತೆಗಿನ ಚಿತ್ರಕ್ಕಾಗಿ ಅಲ್ಲು ಅರ್ಜುನ್ ತಯಾರಿ ಹೇಗಿದೆ?- ಹೊರಬಿತ್ತು ಅಪ್‌ಡೇಟ್

    ಅಟ್ಲಿ ಜೊತೆಗಿನ ಚಿತ್ರಕ್ಕಾಗಿ ಅಲ್ಲು ಅರ್ಜುನ್ ತಯಾರಿ ಹೇಗಿದೆ?- ಹೊರಬಿತ್ತು ಅಪ್‌ಡೇಟ್

    ‘ಪುಷ್ಪ 2′ ಸಕ್ಸಸ್ ಬಳಿಕ ಡೈರೆಕ್ಟರ್ ಅಟ್ಲಿ (Atlee) ಜೊತೆಗಿನ ಸಿನಿಮಾಗಾಗಿ ಅಲ್ಲು ಅರ್ಜುನ್ (Allu Arjun) ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಫಿಟನೆಸ್ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಅದಕ್ಕಾಗಿ ಪ್ರಖ್ಯಾತ ಫಿಟ್ನೆಸ್ ಟ್ರೈನರ್ ಲಾಯ್ಡ್ ಸ್ಟೀವನ್ಸ್ (Lloyd Stevens) ಅವರನ್ನು ನಟ ನೇಮಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಮಂತಾ ನಿರ್ಮಾಣದ ‘ಶುಭಂ’ ಚಿತ್ರದ ಸಾಂಗ್ ರಿಲೀಸ್

    ಅಟ್ಲಿ ಜೊತೆಗಿನ ಸಿನಿಮಾದಲ್ಲಿ ಅಲ್ಲು ಅರ್ಜುನ್ ತ್ರಿಬಲ್ ರೋಲ್‌ನಲ್ಲಿ ನಟಿಸಲಿದ್ದಾರೆ. ಅವರ ಪಾತ್ರಕ್ಕೆ ವರ್ಕೌಟ್, ಫಿಟ್‌ನೆಸ್ ಅಗತ್ಯವಿದೆ. ಅದಕ್ಕಾಗಿ ಅವರು ದೇಹವನ್ನು ಹುರಿಗೊಳಿಸುವ ಅಗತ್ಯವಿದೆ. ಹೀಗಾಗಿ ಮಹೇಶ್ ಬಾಬು, ಜ್ಯೂ.ಎನ್‌ಟಿಆರ್‌ಗೆ ಫಿಟ್‌ನೆಸ್ ಟ್ರೈನರ್ ಆಗಿದ್ದ ಲಾಯ್ಡ್ ಸ್ಟೀವನ್ಸ್ ಅವರನ್ನು ಅಲ್ಲು ಅರ್ಜುನ್ ನೇಮಿಸಿಕೊಂಡಿದ್ದಾರೆ. ಲಾಯ್ಡ್ ಸ್ಟೀವನ್ಸ್ (Lloyd Stevens) ಅವರು ನಟನ ಜೊತೆಗಿನ ಫೋಟೋಗೆ ಲೋಡಿಂಗ್‌ ಎಂದು ಅಡಿಬರಹ ನೀಡಿದ್ದಾರೆ. ಈ ಮೂಲಕ ಅಪ್‌ಡೇಟ್ ಹೊರಬಿದ್ದಿದೆ. ಇದನ್ನೂ ಓದಿ:‘ಟೋಬಿ’ ನಟಿಗೆ ಬೇಡಿಕೆ- ಸೌತ್‌ ಸಿನಿಮಾಗಳಲ್ಲಿ ಚೈತ್ರಾ ಆಚಾರ್‌ ಬ್ಯುಸಿ

     

    View this post on Instagram

     

    A post shared by Lloyd Stevens (@lloydstevenspt)

    ಅಂದಹಾಗೆ, ಅಲ್ಲು ಅರ್ಜುನ್ ಹೊಸ ಸಿನಿಮಾದಲ್ಲಿ 3 ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಿದ್ದಾರೆ. ಹೀಗಾಗಿ ಅವರ ಚಿತ್ರದಲ್ಲಿ ಜಾನ್ವಿ ಕಪೂರ್, ಮೃಣಾಲ್ ಠಾಕೂರ್, ಅನನ್ಯಾ ಪಾಂಡೆ ನಾಯಕಿಯರಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡವೇ ತಿಳಿಸಬೇಕಿದೆ.

  • ಚಿರಂಜೀವಿ ಜೊತೆ ನಟಿಸಲು ಅಬ್ಬಬ್ಬಾ 18 ಕೋಟಿ ಡಿಮ್ಯಾಂಡ್ ಮಾಡಿದ್ರಾ ನಯನತಾರಾ?

    ಚಿರಂಜೀವಿ ಜೊತೆ ನಟಿಸಲು ಅಬ್ಬಬ್ಬಾ 18 ಕೋಟಿ ಡಿಮ್ಯಾಂಡ್ ಮಾಡಿದ್ರಾ ನಯನತಾರಾ?

    ಸೌತ್ ನಟಿ ನಯನತಾರಾಗೆ (Nayanthara) 40 ವರ್ಷವಾದ್ರೂ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆಯಿದೆ. ಇದೀಗ ಚಿರಂಜೀವಿ ಜೊತೆ ನಟಿಸಲು 18 ಕೋಟಿ ಸಂಭಾವನೆಗೆ ನಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ಶೌರ್ಯ ಶಶಾಂಕ್

    ಡೈರೆಕ್ಟರ್‌ ಅನಿಲ್‌ ರವಿಪುಡಿ ನಿರ್ದೇಶನದ ಮತ್ತು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕಾಂಬಿನೇಷನ್‌ ಚಿತ್ರದಲ್ಲಿ ನಟಿಸಲು ನಯನತಾರಾಗೆ ಅವಕಾಶ ಅರಸಿ ಬಂದಿದೆ. ಪ್ರಮುಖ ಪಾತ್ರದಲ್ಲೇ ನಟಿಸಲು ಅವರಿಗೆ ಆಫರ್ ನೀಡಲಾಗಿದೆ. ಹೀಗಾಗಿ ಈ ಚಿತ್ರದಲ್ಲಿ ನಟಿಸಲು 18 ಕೋಟಿ ರೂ. ಸಂಭಾವನೆಯನ್ನು ನಯನತಾರಾ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಅವರ ಸಂಭಾವನೆ ವಿಚಾರ ಕೇಳಿ ಸಿನಿಮಾ ಮಂದಿ ಶಾಕ್ ಆಗಿದ್ದಾರೆ. ಈ ವಿಚಾರ ಚಿತ್ರರಂಗದಲ್ಲಿ ಹಾಟ್‌ ಟಾಪಿಕ್‌ ಆಗಿದೆ. ಇದನ್ನೂ ಓದಿ: ವರುಣ್ ಧವನ್ ಸಿನಿಮಾಗೆ KGF ನಟಿ ಮೌನಿ ರಾಯ್ ಎಂಟ್ರಿ

    ನಯನತಾರಾ ಕೇಳಿದಷ್ಟು ಸಂಭಾವನೆಯನ್ನು ನೀಡಲು ಚಿತ್ರತಂಡ ಒಪ್ಪಿಕೊಂಡಿದೆಯಾ. ಅವರು ಈ ಚಿತ್ರದ ಭಾಗವಾಗ್ತಾರಾ? ಎಂಬುದನ್ನು ಚಿತ್ರತಂಡ ತಿಳಿಸುವವರೆಗೂ ಕಾದುನೋಡಬೇಕಿದೆ.


    ಅಂದಹಾಗೆ, ಈ ಹಿಂದೆ ‘ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸಲು 10 ಕೋಟಿ ರೂ. ಸಂಭಾವನೆ ನಟಿ ಪಡೆದಿದ್ದರು ಎನ್ನಲಾದ ಸುದ್ದಿ ಹರಿದಾಡಿತ್ತು.

  • ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ? ಎಂದವರಿಗೆ ತಕ್ಕ ಉತ್ತರ ಕೊಟ್ಟ ನಯನತಾರಾ

    ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ? ಎಂದವರಿಗೆ ತಕ್ಕ ಉತ್ತರ ಕೊಟ್ಟ ನಯನತಾರಾ

    ಕಾಲಿವುಡ್ ಸೂಪರ್ ಸ್ಟಾರ್ ನಯನತಾರಾ (Nayanthara) ಅವರು ‘ಜವಾನ್’ (Jawan) ಸಿನಿಮಾದ ಸಕ್ಸಸ್ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಸಂದರ್ಶನವೊಂದರಲ್ಲಿ ಎದುರಿಸುತ್ತಿರುವ ಟೀಕೆಗಳಿಗೆ ನಟಿ ಉತ್ತರ ನೀಡಿದ್ದಾರೆ. ನಟಿ ಸುಂದರವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಿಸಿಕೊಂಡಿದ್ದಾರೆ, ಅವರದ್ದು ಸಹಜ ಸೌಂದರ್ಯ ಅಲ್ಲ ಎಂದವರಿಗೆ ನಯನತಾರಾ ಖಡಕ್ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಕೇರಳದ ಹೇಮಾ ಕಮಿಟಿ ಮೂಲಕ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ ವರ್ಗಾವಣೆ

    ಸಾಕಷ್ಟು ಬಾರಿ ನಯನತಾರಾ ಬ್ಯೂಟಿ ಬಗ್ಗೆ ಇಲ್ಲ ಸಲ್ಲದ ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡುತ್ತಿದ್ದರು. ಅವರು ತೆಳ್ಳಗೆ ಮತ್ತು ಬೆಳ್ಳಗೆ ಕಾಣಲು ಸರ್ಜರಿ ಮಾಡಿಸಿದ್ದಾರೆ ಎನ್ನಲಾದ ಟೀಕೆಗಳು ಎದುರಾಗಿತ್ತು. ಅದಕ್ಕೆ ನಟಿ ಸಂದರ್ಶನದಲ್ಲಿ ತಕ್ಕ ಉತ್ತರ ಕೊಟ್ಟಿದ್ದಾರೆ. ನಾನು ಪ್ರತಿಯೊಂದು ಕಾರ್ಯಕ್ರಮಕ್ಕೆ ಹೋಗುವ ಮುನ್ನ ನಾನು ನನ್ನ ಹುಬ್ಬುಗಳನ್ನು ಶೇಪ್ ಮಾಡಿಸುತ್ತೇನೆ. ನನ್ನ ಮುಖ ಬದಲಾದಂತೆ ಕಾಣಲು ಇದೇ ಕಾರಣ ಎನ್ನುವುದು ನನ್ನ ಭಾವನೆ ಎಂದಿದ್ದಾರೆ. ಹುಬ್ಬುಗಳನ್ನು ಶೇಪ್ ಮಾಡಿಸುವುದರಿಂದ ನನ್ನ ಮುಖದಲ್ಲಿನ ಬದಲಾವಣೆಯನ್ನು ನೋಡಿ ಅನೇಕರು ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಅಂದುಕೊಂಡಿದ್ದಾರೆ. ಅದು ಸುಳ್ಳು ಎಂದಿದ್ದಾರೆ.

    ನಾನು ಡಯಟ್ ಮಾಡುತ್ತೇನೆ ಈ ಕಾರಣಕ್ಕೆ ನನ್ನ ದೇಹದ ತೂಕದಲ್ಲಿ ಆಗಾಗ ಏರಿಳಿತವಾಗುತ್ತಿರುತ್ತೆ ಎಂದಿದ್ದಾರೆ. ಇದರಿಂದ ನನ್ನ ಕೆನ್ನೆ ಕೆಲ ಒಮ್ಮೆ ಒಳಗೆ ಹೋದಂತೆ ಕಾಣುತ್ತದೆ. ಇನ್ನೂ ಕೆಲವೊಮ್ಮೆ ಕೆನ್ನೆ ಊಡಿಕೊಂಡಂತೆ ಕಾಣಿಸುತ್ತೆ ಎಂದಿದ್ದಾರೆ. ಬೇಕಿದ್ದರೆ ನೀವು ನನ್ನನ್ನು ಮುಟ್ಟಿ ನೋಡಬಹುದು, ಸಮಾಧಾನ ಆಗದಿದ್ದರೆ ಸುಟ್ಟು ನೋಡಬಹುದು. ಆಗ ನಿಮಗೆ ಯಾವ ಪ್ಲಾಸ್ಟಿಕ್ ಇಲ್ಲ ಎನ್ನುವುದು ಮನದಟ್ಟಾಗಬಹುದು ಎಂದು ಕೂಡ ನಯನತಾರಾ ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ನಯನತಾರಾ ಅವರು ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಯಶ್‌ಗೆ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಬೆಂಗಳೂರಿಗೆ ಬಂದು ತಮ್ಮ ಭಾಗದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದರು ಎನ್ನಲಾಗಿದೆ. ಟಾಕ್ಸಿಕ್‌ ತಂಡದಿಂದ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾದುನೋಡಬೇಕಿದೆ.

  • ಮಕ್ಕಳ ಜೊತೆ ಗ್ರೀಸ್‌ನಲ್ಲಿ ನಯನತಾರಾ ವೆಕೇಷನ್

    ಮಕ್ಕಳ ಜೊತೆ ಗ್ರೀಸ್‌ನಲ್ಲಿ ನಯನತಾರಾ ವೆಕೇಷನ್

    ಸೌತ್ ನಟಿ ನಯನತಾರಾ (Nayanthara) ಸಿನಿಮಾ ಕೆಲಸಗಳ ನಡುವೆ ಫ್ಯಾಮಿಲಿಗೂ ಸಮಯ ಮೀಸಲಿಡುತ್ತಾರೆ. ಸದ್ಯ ಮಕ್ಕಳ ಜೊತೆ ನಟಿ ಗ್ರೀಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಮಕ್ಕಳ ಜೊತೆಗಿನ ಕ್ಯೂಟ್ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ‘ಮೈ ಹಾರ್ಟ್’ ಎಂದು ಅಡಿಬರಹ ನೀಡಿ, ಮಕ್ಕಳ ಜೊತೆಗಿನ ಮುದ್ದಾದ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್ಸ್ ಹರಿದು ಬರುತ್ತಿವೆ. ಇದನ್ನೂ ಓದಿ:24 ಸಾವಿರ ಡ್ಯಾನ್ಸ್‌ ಸ್ಟೆಪ್ಸ್‌ ಮಾಡಿದ ಹೆಗ್ಗಳಿಕೆ- ಮೆಗಾಸ್ಟಾರ್ ಚಿರಂಜೀವಿ ಗಿನ್ನಿಸ್ ದಾಖಲೆ

     

    View this post on Instagram

     

    A post shared by N A Y A N T H A R A (@nayanthara)

    ಇನ್ನೂ ಇತ್ತೀಚೆಗೆ ಪತಿ ವಿಘ್ನೇಶ್ ಬರ್ತ್‌ಡೇಗೆ ವಿಶೇಷವಾಗಿ ನಟಿ ಶುಭಕೋರಿದ್ದರು. ಜನ್ಮದ ದಿನದ ಶುಭಾಶಯಗಳು. ಪದಗಳಲ್ಲಿ ವಿವರಿಸಲು ಸಾಧ್ಯವಾಗದಷ್ಟು ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಪತಿಗೆ ನಯನತಾರಾ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದರು.

    ಇನ್ನೂ ಹಲವು ವರ್ಷಗಳ ಪ್ರೀತಿಗೆ 2022ರಲ್ಲಿ ಮದುವೆಯ ಮುದ್ರೆ ಒತ್ತಿದ್ದರು. ಬಾಡಿಗೆ ತಾಯ್ತನ ಮೂಲಕ ಇಬ್ಬರೂ ಮಕ್ಕಳನ್ನು ನಟಿ ಬರಮಾಡಿಕೊಂಡರು.

    ಅಂದಹಾಗೆ, ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾದಲ್ಲಿ ನಯನತಾರಾ ನಟಿಸಿದ ಮೇಲೆ ಅವರ ಬೇಡಿಕೆ ಹೆಚ್ಚಾಗಿದೆ. ಬಹುಭಾಷೆಗಳಲ್ಲಿ ನಟಿಸುತ್ತಾ ನಟಿ ಸಕ್ರಿಯರಾಗಿದ್ದಾರೆ. ಸದ್ಯ ಅವರು ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

  • 100 ಕೋಟಿ ಮೌಲ್ಯದ ಮನೆಗೆ ಶಿಫ್ಟ್ ಆಗಲಿದ್ದಾರೆ ದೀಪಿಕಾ ಪಡುಕೋಣೆ ದಂಪತಿ

    100 ಕೋಟಿ ಮೌಲ್ಯದ ಮನೆಗೆ ಶಿಫ್ಟ್ ಆಗಲಿದ್ದಾರೆ ದೀಪಿಕಾ ಪಡುಕೋಣೆ ದಂಪತಿ

    ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್‌ವೀರ್ ಸಿಂಗ್ (Ranveer Singh) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗುವಿಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಚೊಚ್ಚಲ ಮಗುವಿನ ಆಗಮನಕ್ಕೂ ಮುನ್ನ 100 ಕೋಟಿ ರೂ. ಐಷಾರಾಮಿ ಮನೆಗೆ ಶಿಫ್ಟ್ ಆಗಲಿದ್ದಾರೆ. ಇದನ್ನೂ ಓದಿ:ನನ್ನ ಸೋಲಿಗಾಗಿ ಒಂದು ವರ್ಗ ಕಾಯುತ್ತಿದೆ: ಕೃತಿ ಶೆಟ್ಟಿ

     

    View this post on Instagram

     

    A post shared by Viral Bhayani (@viralbhayani)

    ಮನ್ನತ್‌ನ ಶಾರುಖ್ ಖಾನ್ ಮನೆಯ ಸಮೀಪ ರಣವೀರ್ ಸಿಂಗ್ ಹಾಗೂ ದೀಪಿಕಾ 100 ಕೋಟಿ ರೂ. ಮೌಲ್ಯದ ಫ್ಲ್ಯಾಟ್‌ ಖರೀದಿಸಿದ್ದಾರೆ. ನಾಲ್ಕು ಪ್ಲೋರ್‌ನ ಮನೆ ಇದಾಗಿದೆ. ಈ ಮನೆ ಸಮುದ್ರ ತೀರದಲ್ಲಿದೆ. ಈ ಮನೆಯ ಅಳತೆ 11,266 ಚದರ ಅಡಿ ಇದೆ. ಇದರ ಜೊತೆಗೆ ಟೆರೇಸ್ ಕೂಡ ಇದೆ. ನಟಿಯ ಹೊಸ ಮನೆ ಕೆಲಸ ಅಂತಿಮ ಹಂತದಲ್ಲಿದೆ. ಇನ್ನೂ ಮುಂಬೈನ ಮನ್ನತ್‌ನಲ್ಲಿ ಬಹುತೇಕ ಸೆಲೆಬ್ರಿಟಿಗಳು ಇಲ್ಲಿಯೇ ವಾಸವಾಗಿದ್ದಾರೆ.

    ದೀಪಿಕಾ ಪಡುಕೋಣೆ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಇತ್ತೀಚೆಗೆ ಪಠಾಣ್, ಜವಾನ್, ಫೈಟರ್, ‘ಕಲ್ಕಿ 2898 ಎಡಿ’ ರೀತಿಯ ಹಿಟ್ ಚಿತ್ರಗಳಲ್ಲಿ ದೀಪಿಕಾ ನಟಿಸಿ ಟಾಪ್ ಲಿಸ್ಟ್‌ನಲ್ಲಿದ್ದಾರೆ. ಇನ್ನೂ ಬೇಡಿಕೆ ಇರುವಾಗಲೇ ತಾಯಿ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ತಾಯಿ ಆಗುವ ಘೋಷಣೆ ಮಾಡಿದರು. ಸೆಪ್ಟೆಂಬರ್‌ನಲ್ಲಿ ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಲಿದ್ದಾರೆ.

  • ಶಾರುಖ್ ಆಯ್ತು ಸಲ್ಮಾನ್ ಖಾನ್ ಜೊತೆ ಅಟ್ಲಿ ಹೊಸ ಸಿನಿಮಾ

    ಶಾರುಖ್ ಆಯ್ತು ಸಲ್ಮಾನ್ ಖಾನ್ ಜೊತೆ ಅಟ್ಲಿ ಹೊಸ ಸಿನಿಮಾ

    ಸೌತ್ ಡೈರೆಕ್ಟರ್ ಅಟ್ಲಿ (Atlee) ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಸದ್ದು ಮಾಡುತ್ತಿದ್ದಾರೆ. ‘ಜವಾನ್’ (Jawan) ಸಿನಿಮಾದಲ್ಲಿ ಶಾರುಖ್‌ಗೆ ಆ್ಯಕ್ಷನ್ ಕಟ್ ಹೇಳಿದ ಬಳಿಕ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹೊಸ ಚಿತ್ರಕ್ಕಾಗಿ ಸಲ್ಮಾನ್ ಖಾನ್ (Salman Khan) ಜೊತೆ ಕೈಜೋಡಿಸಿದ್ದಾರೆ.

    ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ. ಈಗ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ನಟನೆಯ ಹೊಸ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಸಲ್ಮಾನ್ ಖಾನ್‌ಗೆ ಹೊಸ ಕಥೆ ಬರೆದಿದ್ದಾರೆ. ಸಿನಿಮಾ ಕಥೆಯ ಬಗ್ಗೆ ನಟನಿಗೂ ಅಟ್ಲಿ ವರದಿ ಒಪ್ಪಿಸಿದ್ದಾರೆ.

    ಸಾಲು ಸಾಲು ಸಿನಿಮಾಗಳ ಸೋಲಿನ ರುಚಿ ಕಂಡಿರುವ ಸಲ್ಮಾನ್ ಖಾನ್ ಈಗ ಸೌತ್ ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಈ ಬೆನ್ನಲ್ಲೇ ಮತ್ತೊಬ್ಬ ಸೌತ್‌ ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 30ರಂದು ಈ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಸದ್ಯಕ್ಕಂತೂ ಈ ಬಗ್ಗೆ ನಟನ ಕಡೆಯಿಂದಾಗಲಿ, ಅಟ್ಲಿ ಕಡೆಯಿಂದಾಗಲಿ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

    ಇನ್ನೂ ಅಟ್ಲಿ ಜೊತೆ ಸಿನಿಮಾ ಮಾಡಿದರೆ ಸಲ್ಮಾನ್ ಖಾನ್‌ಗೆ ಖಂಡಿತವಾಗಿ ಭರ್ಜರಿ ಗೆಲುವು ಸಿಗಲಿದೆ ಎಂಬ ಅಭಿಪ್ರಾಯ ಅಭಿಮಾನಿಗಳಿಗೆ ಇದೆ. ಸ್ವತಃ ಸಲ್ಲು ಕೂಡ ಇದೇ ಆಲೋಚನೆ ಮಾಡಿದಂತಿದೆ.

  • ಅಂಬಾನಿ ಮದುವೆಯಲ್ಲಿ ಯಶ್ ಜೊತೆ ‘ಜವಾನ್’ ಡೈರೆಕ್ಟರ್ ಮಾತುಕತೆ- ವಿಡಿಯೋ ವೈರಲ್

    ಅಂಬಾನಿ ಮದುವೆಯಲ್ಲಿ ಯಶ್ ಜೊತೆ ‘ಜವಾನ್’ ಡೈರೆಕ್ಟರ್ ಮಾತುಕತೆ- ವಿಡಿಯೋ ವೈರಲ್

    ಚಿತ್ರರಂಗದಲ್ಲಿ ಸದ್ಯ ಭಾರೀ ಸುದ್ದಿಯಾಗ್ತಿರುವ ವಿಚಾರ ಅಂದರೆ ಅನಂತ್ (Anant Ambani) ಮತ್ತು ರಾಧಿಕಾ (Radhika Merchant) ಅದ್ಧೂರಿ ಮದುವೆ ಮ್ಯಾಟರ್. ಈ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು.‌ ಹಾಗಾಗಿ ಹೆಚ್ಚುಚ್ಚು ಈ ವಿಚಾರ ಹೈಲೆಟ್‌ ಆಗ್ತಿದೆ. ಇದರ ನಡುವೆ ಯಶ್ (Yash) ಜೊತೆ ಜವಾನ್ ಡೈರೆಕ್ಟರ್ ಅಟ್ಲಿ ಮಾತುಕತೆ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

    ಹೈಪ್ರೊಪೈಲ್ ಅತಿಥಿಗಳ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡದ ನಟ ಯಶ್‌ಗೆ ಅಂಬಾನಿ ಮಗನ ಮದುವೆಗೆ ವಿಶೇಷವಾಗಿ ಆಮಂತ್ರಣ ನೀಡಿದ್ದು, ಪತ್ನಿ ರಾಧಿಕಾ ಪಂಡಿತ್ (Radhika Pandit) ಜೊತೆ ಯಶ್ ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗಾಗಿ ದೇವರ ಮೊರೆ ಹೋದ ಫ್ಯಾನ್ಸ್

     

    View this post on Instagram

     

    A post shared by YASH BOSS FAN’S (@yashfansnetwork)

    ಇದರ ನಡುವೆ ಯಶ್ ಮತ್ತು ‘ಜವಾನ್’ (Jawan) ನಿರ್ದೇಶಕ ಅಟ್ಲಿ (Director Atlee) ಕೆಲ ಸಮಯ ಒಟ್ಟಿಗೆ ಕುಳಿತು ಮಾತುಕತೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಒಟ್ನಲ್ಲಿ ಯಶ್ ಈ ಮಟ್ಟಿಗೆ ಬೆಳೆದಿರುವ ಪರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    ಇನ್ನೂ ಯಶ್ ‘ಟಾಕ್ಸಿಕ್’ (Toxic) ಸಿನಿಮಾ ಮತ್ತು ‘ರಾಮಾಯಣ’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ‘ಕೆಜಿಎಫ್ 2’ (KGF 2) ನಂತರದ ‘ಟಾಕ್ಸಿಕ್’ ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

  • ಬಾಹುಬಲಿ ಶಿವಗಾಮಿ ರೀತಿ ನೀರಿನಲ್ಲಿ ಮುಳುಗಿ ಮಕ್ಕಳನ್ನು ಎತ್ತಿದ ನಯನತಾರಾ ಪತಿ

    ಬಾಹುಬಲಿ ಶಿವಗಾಮಿ ರೀತಿ ನೀರಿನಲ್ಲಿ ಮುಳುಗಿ ಮಕ್ಕಳನ್ನು ಎತ್ತಿದ ನಯನತಾರಾ ಪತಿ

    ಕಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ನಯನತಾರಾ (Nayanthara) ಮತ್ತು ವಿಘ್ನೇಶ್ (Vignesh Shivan) ಮತ್ತೆ ಸುದ್ದಿಯಲ್ಲಿದ್ದಾರೆ. ವಿಶ್ವ ತಂದೆಯಂದಿರ ದಿನದಂದು ವಿಶೇಷ ಫೋಟೋವನ್ನು ಹಂಚಿಕೊಂಡು ಬಾಹುಬಲಿ (Bahubali) ದೃಶ್ಯವನ್ನು ನಯನತಾರಾ ಪತಿ ಮರುಸೃಷ್ಟಿಸಿದ್ದಾರೆ. ಇದನ್ನೂ ಓದಿ:ಆ್ಯನಿಮೇಷನ್ ಪಾತ್ರದ ಲುಕ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    ಈ ಚಿತ್ರದಲ್ಲಿ ರಮ್ಯಕೃಷ್ಣರವರು ಶಿವಗಾಮಿ ಪಾತ್ರದಲ್ಲಿ ನೀರಿನಲ್ಲಿ ಮುಳುಗುತ್ತಿರುವಾಗ ಬಾಹುಬಲಿಯನ್ನು ಕೈಯಲ್ಲಿ ಎತ್ತಿ ಹಿಡಿದಿರುವ ದೃಶ್ಯ ಇಂದಿಗೂ ಎಲ್ಲರ ಮನದಲ್ಲಿ ನೆಲೆಯೂರಿದೆ. ಅಂತಹ ದೃಶ್ಯವನ್ನು ಇದೀಗ ವಿಘ್ನೇಶ್ ಅವರು ರೀ ಕ್ರಿಯೇಟ್ ಮಾಡಿದ್ದಾರೆ. ತಮ್ಮ ಮಕ್ಕಳಿಗೆ ಬಾಹುಬಲಿ ಸಾಂಪ್ರದಾಯಿಕ ಉಡುಗೆಯನ್ನು ತೊಡಿಸಿ, ವಿಘ್ನೇಶ್ ಅವರು ನೀರಿನಲ್ಲಿ ಮುಳುಗಿಕೊಂಡು ತಮ್ಮ ಮಕ್ಕಳನ್ನು ಕೈಯಲ್ಲಿ ಎತ್ತಿ ಹಿಡಿದಿದ್ದಾರೆ.

     

    View this post on Instagram

     

    A post shared by Vignesh Shivan (@wikkiofficial)

    ಬಾಹುಬಲಿ ದೃಶ್ಯವನ್ನು ಮರುಸೃಷ್ಟಿಸಿದ ಪೋಸ್ಟ್‌ಗೆ ‘ನನ್ನು ಪ್ರೀತಿಯ ಬಾಹುಬಲಿ 1 ಹಾಗೂ 2, ನಿಮ್ಮಿಬ್ಬರಿಂದ ಹ್ಯಾಪಿ ಫಾದರ್ಸ್ ಡೇ. ನಿಮ್ಮಿಬ್ಬರ ಜೊತೆ ಜೀವನ ಬಹಳ ಸೊಗಸಾಗಿದೆ. ತೃಪ್ತಿದಾಯಕವಾಗಿದೆ. ಲವ್ ಯುವ ನನ್ನ ಉಯಿರ್ ಹಾಗೂ ಉಳಗ್’ ಎಂದು ವಿಘ್ನೇಶ್ ಶಿವನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ, 2022ರಲ್ಲಿ ನಟಿ ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಈ ಜೋಡಿ ಅವಳಿ ಮಕ್ಕಳನ್ನು ಬರಮಾಡಿಕೊಂಡರು.

  • ಕನ್ನಡದ ಕಿರುತೆರೆಯಲ್ಲಿ ಶಾರುಖ್ ನಟನೆಯ ‘ಜವಾನ್’ ಸಿನಿಮಾ

    ಕನ್ನಡದ ಕಿರುತೆರೆಯಲ್ಲಿ ಶಾರುಖ್ ನಟನೆಯ ‘ಜವಾನ್’ ಸಿನಿಮಾ

    ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ ಕನ್ನಡದ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು, ಮುಂದಿನ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ (TV) ಪ್ರಸಾರವಾಗಲಿದೆ. ಈಗಾಗಲೇ ವಾಹಿನಿಯು ಪ್ರೋಮೋ ಕೂಡ ರಿಲೀಸ್ ಮಾಡಿದೆ.

    ಜವಾನ್ ಸಿನಿಮಾ ಒಟ್ಟು ಕಲೆಕ್ಷನ್ 1103.27 ಕೋಟಿ ರೂಪಾಯಿ ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಘೋಷಣೆ ಮಾಡಿದೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲಿ ಎಂಟರ್ ಟೇನ್ಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದನ್ನು ಹಂಚಿಕೊಳ್ಳುವ ಮೂಲಕ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ. ಇದು ವಿಶ್ವದಾದ್ಯಂತ ಬಂದ ಒಟ್ಟು ಕಲೆಕ್ಷನ್ ಆಗಿದೆ.

    ವಿಶ್ವದಾದ್ಯಂತ ‘ಜವಾನ್’ ಸಿನಿಮಾ ದಾಖಲೆ ರೀತಿಯಲ್ಲಿ ಕಲೆಕ್ಷನ್ (Collection) ಮಾಡಿದರೆ, ಭಾರತದಲ್ಲೇ ಅದು ಗಳಿಸಿದ ಒಟ್ಟು ಮೊತ್ತ ಅಂದಾಜು 600 ಕೋಟಿ ರೂಪಾಯಿಗೂ ಹೆಚ್ಚು ಆಗಿದೆ. ಈ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ ಮೊದಲ ಹಿಂದಿ ಸಿನಿಮಾ ಎನ್ನುವ ದಾಖಲೆ ಕೂಡ ಬರೆದಿದೆ. ಇದೆಲ್ಲವೂ ಅಧಿಕೃತ ಘೋಷಣೆ ಎನ್ನುವುದು ವಿಶೇಷ.

    ಸಿನಿಮಾ ಭರ್ಜರಿ ಗೆಲುವು ಕಾಣುತ್ತಿದ್ದಂತೆಯೇ ಸಿನಿಮಾ ನಿರ್ದೇಶಕ ಅಟ್ಲಿ (Atli) ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ (Jawan 2) ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ (Shahrukh Khan) ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ.

     

    ಜವಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿದೆ. ಈ ಖುಷಿಯಲ್ಲೇ ಅಟ್ಲಿ ಜವಾನ್ 2 ಸಿನಿಮಾ ಘೋಷಣೆ ಮಾಡಿದ್ದಾರೆ. ಜೊತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ.