Tag: ಜವಾನ

  • 15 ಕೋಟಿ ರೂ ಖರ್ಚು ಮಾಡಿ ಒಂದು ಸಾಂಗ್ ಶೂಟ್ ಮಾಡಿದ ಜವಾನ

    15 ಕೋಟಿ ರೂ ಖರ್ಚು ಮಾಡಿ ಒಂದು ಸಾಂಗ್ ಶೂಟ್ ಮಾಡಿದ ಜವಾನ

    ಶಾರುಖ್ ಖಾನ್ (Shah Rukh Khan) ನಟನೆಯ ಜವಾನ (Jawan) ಸಿನಿಮಾದ ಒಂದೊಂದೆ ಇಂಟ್ರಸ್ಟಿಂಗ್ ಸಂಗತಿಗಳು ಹೊರ ಬೀಳುತ್ತಿವೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಿದ್ದಾರೆ ಎನ್ನುವುದು ಒಂದು ಸುದ್ದಿಯಾಗಿದ್ದಾರೆ, ಯಾರು ಯಾವ ಪಾತ್ರ ಮಾಡಿದ್ದಾರೆ ಎನ್ನುವುದು ಮತ್ತೊಂದು ವಿಶೇಷವಾಗಿತ್ತು. ಇದೀಗ ಹಾಡುಗಳ ಸರದಿ. ಒಂದೇ ಒಂದು ಹಾಡಿಗಾಗಿ ನಿರ್ದೇಶಕ ಅಟ್ಲಿ (Atlee) ಬರೋಬ್ಬರಿ 15 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಹಾಡಿಗೆ ಸಾವಿರಾರು ಹುಡುಗಿಯರು ಶಾರುಖ್ ಜೊತೆಯಾಗಿದ್ದಾರೆ.

    ಹೈದರಾಬಾದ್, ಚೆನ್ನೈ, ಮುಂಬೈ ಸೇರಿದಂತೆ ಹಲವು ರಾಜ್ಯಗಳಲ್ಲಿ ಲೇಡಿ ಡಾನ್ಸರ್ ಹುಡುಕಿ, ಈ ಹಾಡಿನಲ್ಲಿ (Song) ಬಳಸಿಕೊಳ್ಳಲಾಗಿದೆ ಎಂದಿದೆ ಚಿತ್ರತಂಡ. ಈ ಹಾಡಿಗೆ ಶೋಬಿ ನೃತ್ಯ ಸಂಯೋಜನೆ ಮಾಡಿದ್ದು ಅನಿರುದ್ಧ ರವಿಚಂದ್ರನ್ (Aniruddha Ravichandran) ಅವರ ಸಂಗೀತವಿದೆ. ವಿಶೇಷ ಕಾಸ್ಟ್ಯೂಮ್ ನಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದು, ಇದು ಇವರ ಇಂಟ್ರಡಕ್ಷನ್ ಹಾಡು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಕೀರ್ತಿ ಪಾತ್ರಕ್ಕೆ ಗುಡ್ ಬೈ ಹೇಳಿದ ತನ್ವಿ ರಾವ್

    ‘ಜವಾನ್’ ಸಿನಿಮಾದಲ್ಲಿ ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ ಮಾತ್ರವಲ್ಲ, ಮತ್ತೋರ್ವ ಸೂಪರ್ ಸ್ಟಾರ್ ದಳಪತಿ ವಿಜಯ್ (Dalpati Vijay) ಕೂಡ ಇದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಈ ಸಿನಿಮಾದಲ್ಲಿ ಅವರದ್ದು ಅತಿಥಿ ಪಾತ್ರವಂತೆ. ಆ ಕ್ಯಾರೆಕ್ಟರ್ ಏನು ಎನ್ನುವುದನ್ನು ಚಿತ್ರತಂಡ ಬಹಿರಂಗ ಪಡಿಸಿಲ್ಲ.

     

    ಮೊನ್ನೆ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್ ಸೇತುಪತಿ ಅವರ ಮೊದಲ ನೋಟವನ್ನು (First Look) ಶಾರುಖ್ ಖಾನ್ (Shah Rukh Khan) ಬಿಡುಗಡೆ ಮಾಡಿದ್ದಾರೆ. ವಿಜಯ್ ಸೇತುಪತಿ ಅವರನ್ನು ಚಿತ್ರದಲ್ಲಿ ‘ಸಾವಿನ ವ್ಯಾಪಾರಿ’ ಎಂದು ಶಾರುಖ್ ಬಣ್ಣಿಸಿದ್ದು, ಈ ಚಿತ್ರದಲ್ಲಿ ಅವರೊಂದಿಗೆ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಹೀಗೆ ಹತ್ತು ಹಲವಾರು ವಿಶೇಷತೆಗಳನ್ನು ಇಟ್ಟುಕೊಂಡು ಜವಾನ ಕುತೂಹಲ ಮೂಡಿಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಯನತಾರಾ ಅವರನ್ನ ಹಾಡಿ ಹೊಗಳಿದ ಶಾರುಖ್ ಖಾನ್

    ನಯನತಾರಾ ಅವರನ್ನ ಹಾಡಿ ಹೊಗಳಿದ ಶಾರುಖ್ ಖಾನ್

    ಳೆದ ಒಂದು ವಾರದಿಂದ ನಿರಂತರವಾಗಿ ದಕ್ಷಿಣದ ನಟಿ ನಯನತಾರಾ ಅವರನ್ನು ಹಾಡಿ ಹೊಗಳುತ್ತಿದ್ದಾರೆ ಶಾರುಖ್ ಖಾನ್. ಜವಾನ್ ಸಿನಿಮಾದ ಪೋಸ್ಟರ್, ಪ್ರಿವ್ಯೂ ರಿಲೀಸ್ ಆಗುತ್ತಿದ್ದಂತೆಯೇ ನಯನತಾರಾ ಅವರನ್ನು ಬಿರುಗಾಳಿಗೆ ಹೋಲಿಸಿದ್ದಾರೆ. ಸಿನಿಮಾದಲ್ಲಿ ಇನ್ನೂ ಹಲವರು ನಾಯಕಿಯರಿದ್ದರೂ ನಯನತಾರಾ ಅವರದ್ದು  ಪವರ್ ಫುಲ್ ಪಾತ್ರವಾಗಿದ್ದರಿಂದ ಅವರನ್ನು ಮೆಚ್ಚಿ ಮಾತನಾಡುತ್ತಿದ್ದಾರೆ ಎನ್ನುವುದು ಗುಟ್ಟಿನ ಸಂಗತಿಯೇನೂ ಅಲ್ಲ.

    ಇತ್ತೀಚೆಗಷ್ಟೇ ಬಿಡುಗಡೆಯಾದ ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ (Jawan) ಚಿತ್ರದ ಪ್ರಿವ್ಯೂ, ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ. ಈಗ ಚಿತ್ರದಲ್ಲಿನ ನಯನತಾರಾ ಅವರ ಪಾತ್ರದ ಪೋಸ್ಟರ್ (Poster) ಅನ್ನು ನಾಯಕ ನಟ ಶಾರುಖ್ ಖಾನ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ಇಂಟರ್ನೆಟ್ ನಲ್ಲಿ ಸಾಕಷ್ಟು ವೈರಲ್ ಆಗಿದೆ.

    ಪ್ರಿವ್ಯೂನಲ್ಲಿ ನಯನತಾರಾ (Nayantara) ಅವರನ್ನು ಸಾಹಸ ದೃಶ್ಯಗಳಲ್ಲಿ ಪ್ರೇಕ್ಷಕರು ನೋಡಿ ಅವಕ್ಕಾಗಿದ್ದರು. ಆಕೆಯನ್ನು ಇನ್ನಷ್ಟು ನೋಡಬಯಸಿದ್ದರು. ಈಗ ನಯನತಾರಾ ಪೋಸ್ಟರ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನಯನತಾರಾ ಅವರ ಪಾತ್ರವನ್ನು ‘ಬಿರುಗಾಳಿಗೂ ಮುಂಚೆ ಬರುವ ಗುಡುಗು’ ಎಂದು ಶಾರುಖ್ ಖಾನ್ ವರ್ಣಿಸಿದ್ದು, ಆಕೆಯ ಪಾತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ:ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ‘ಪಠಾಣ್’ ಬೆಡಗಿ

    ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಮತ್ತು ನಯನತಾರಾ, ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಜವಾನ್’ನಲ್ಲಿ ನಯನತಾರಾ, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಇಡೀ ಚಿತ್ರದ ಹೈಲೈಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಸಾಕಷ್ಟು ಸಾಹಸಮಯ ದೃಶ್ಯಗಳಲ್ಲಿ ನಯನತಾರಾ ಕಾಣಿಸಿಕೊಂಡಿದ್ದಾರೆ.

     

    ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಗೌರಿ ಖಾನ್ ನಿರ್ಮಿಸಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಗೌರವ್ ವರ್ಮ ಈ ಚಿತ್ರದ ಸಹನಿರ್ಮಾಪಕರು. ಸೆಪ್ಟೆಂಬರ್ 7ರಂದು ಈ ಚಿತ್ರವು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 36 ಕೋಟಿ ರೂ. ಗೆ ಮಾರಾಟವಾಯ್ತು ‘ಜವಾನ್’ ಆಡಿಯೋ ರೈಟ್ಸ್

    36 ಕೋಟಿ ರೂ. ಗೆ ಮಾರಾಟವಾಯ್ತು ‘ಜವಾನ್’ ಆಡಿಯೋ ರೈಟ್ಸ್

    ಶಾರುಖ್ ಖಾನ್ (Shahrukh Khan) ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂ. ಗಳಿಕೆ ಮಾಡುವ ಮೂಲಕ ಬ್ಲಾಕ್ಬಸ್ಟರ್ ಆಗಿತ್ತು. ಇದರಿಂದ ಸಹಜವಾಗಿಯೇ ಅವರ ಮುಂದಿನ ಚಿತ್ರ ‘ಜವಾನ್’ (Jawana) ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿದ್ದು, ಈ ಪೈಕಿ ಚಿತ್ರದ ಆಡಿಯೋ (Audio) ಹಕ್ಕುಗಳು ದಾಖಲೆಯ 36 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿರುವ ಸುದ್ದಿ ಬಂದಿದೆ.

    ‘ಜವಾನ್’ ಚಿತ್ರದ ಆಡಿಯೋ ಹಕ್ಕುಗಳನ್ನು ಭಾರತದ ಖ್ಯಾತ ಆಡಿಯೋ ಸಂಸ್ಥೆಯಾದ ಟಿ-ಸೀರೀಸ್ ತನ್ನದಾಗಿಸಿಕೊಂಡಿದ್ದು, 36 ಕೋಟಿ ರೂ.ಗಳನ್ನು ಕೊಟ್ಟು ಹಕ್ಕುಗಳನ್ನು ಪಡೆದಿದೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ (Aniruddha Ravichandran), ಈ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ನಿರ್ಮಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ.

     

    ‘ಜವಾನ್’ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಯೋಗಿ ಬಾಬು, ಸುನೀಲ್ ಗ್ರೋವರ್, ಸಾನ್ಯಾ ಮಲ್ಹೋತ್ರಾ ಸೇರಿದಂತ ಹಲವು ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ. ದೀಪಿಕಾ ಪಡುಕೋಣೆ, ಸಂಜಯ್ ದತ್ ಮತ್ತು ವಿಜಯ್ ಅತಿಥಿ ಕಲಾವಿದರಾಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಲೀಸ್ ಗೂ ಮುನ್ನವೇ ಜವಾನ ದೃಶ್ಯ ಲೀಕ್ : ಹೈಕೋರ್ಟ್ ಮೆಟ್ಟಿಲೇರಿದ ಶಾರುಖ್ ಖಾನ್

    ರಿಲೀಸ್ ಗೂ ಮುನ್ನವೇ ಜವಾನ ದೃಶ್ಯ ಲೀಕ್ : ಹೈಕೋರ್ಟ್ ಮೆಟ್ಟಿಲೇರಿದ ಶಾರುಖ್ ಖಾನ್

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shahrukh Khan) ನಟನೆಯ ‘ಜವಾನ’ (Jawan) ಸಿನಿಮಾ ಜೂನ್ ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಈ ಚಿತ್ರದ ಮಹತ್ವದ ದೃಶ್ಯಗಳು ಮತ್ತು ಫೋಟೋಗಳು ಲೀಕ್ (Leake) ಆಗಿವೆ. ಈ ಕುರಿತು ಸ್ವತಃ ಶಾರುಖ್ ಖಾನ್ ಗರಂ ಆಗಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳಬೇಕಾದ ದೃಶ್ಯ ಮತ್ತು ಫೋಟೋಗಳು ಲೀಕ್ ಆಗುತ್ತಿರುವುದಕ್ಕೆ ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಸಿನಿಮಾವನ್ನು ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಶಾರುಖ್ ಖಾನ್, ದೃಶ್ಯಗಳು ಸೋರಿಕೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಲಿದೆ. ಹೀಗಾಗಿ ಲೀಕ್ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಶಾರುಖ್ ಖಾನ್ ಮನವಿಯನ್ನು ಪುರಸ್ಕರಿಸಿರುವ ದೆಹಲಿ ಹೈಕೋರ್ಟ್ (High Court) , ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವ ದೃಶ್ಯಗಳನ್ನು ಕೂಡಲೇ ಡಿಲಿಟ್ ಮಾಡಬೇಕು ಎಂದು ಆದೇಶ ನೀಡಿದೆ. ಯುಟ್ಯೂಬ್, ವೆಬ್ ಸೈಟ್ ಸೇರಿದಂತೆ ಜವಾನ ದೃಶ್ಯಗಳನ್ನು ಅಪ್ ಲೋಡ್ ಮಾಡಿದವರು ಕೂಡಲೇ ಡಿಲಿಟ್ ಮಾಡಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

    ಜವಾನ ಬಹುತಾರಾಗಣ ಹೊಂದಿರುವ ಸಿನಿಮಾ. ಶಾರುಖ್ ಜೊತೆ ದೀಪಿಕಾ ಪಡುಕೋಣೆ (Deepika Padukone) ಹಾಗೂ ನಯನತಾರಾ ನಟಿಸಿದ್ದಾರೆ. ಈ ಮೂವರ ಸಂಗಮದ ಮೊದಲ ಸಿನಿಮಾ ಇದಾಗಿದೆ. ಇವರ ಜೊತೆ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದೆ.

  • ಉತ್ತರ ಕನ್ನಡ ಸರ್ಕಾರಿ ಆಸ್ಪತ್ರೆಯಲ್ಲಿ ಜವಾನನೇ ವೈದ್ಯನಾಗಿ ಬದಲಾದ!

    ಉತ್ತರ ಕನ್ನಡ ಸರ್ಕಾರಿ ಆಸ್ಪತ್ರೆಯಲ್ಲಿ ಜವಾನನೇ ವೈದ್ಯನಾಗಿ ಬದಲಾದ!

    ಕಾರವಾರ: ಸರ್ಕಾರಿ ಆಸ್ಪತ್ರೆಯಲ್ಲಿ ಜವಾನನೇ ವೈದ್ಯನಾಗಿ ಬದಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ನಡೆದಿದೆ.

    ದೀಪಕ್ ನಾಯ್ಕ ವೈದ್ಯನಾಗಿ ಬದಲಾದ ಜವಾನ, ಇಲ್ಲಿ ಮೊದಲಿನಿಂದಲೂ ವೈದ್ಯರ ನೇಮಕವಾಗದೇ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಅಲ್ಲದೇ 12 ಸಿಬ್ಬಂದಿ ಇರಬೇಕಾದ ಆಸ್ಪತ್ರೆಯಲ್ಲಿ ಕೇವಲ ಇಬ್ಬರು ಮಾತ್ರ ಇದ್ದಾರೆ. ಬದಲಿ ವೈದ್ಯರು ಇದ್ದರೂ ಆಸ್ಪತ್ರೆಗೆ ಬರುವುದಿಲ್ಲ. ಕೊರೊನಾ ಸಂದರ್ಭವಾದರೂ, ಆಸ್ಪತ್ರೆ ಕಡೆಗೆ ವೈದ್ಯರು ಬರುವುದಿರಲಿ, ತಲೆಯನ್ನೂ ಹಾಕುವುದಿಲ್ಲ. ಹೀಗಾಗಿ ಇರುವ ಇಬ್ಬರು ಸಿಬ್ಬಂದಿಗೆನೇ ಔಷಧಿ ಬರೆದುಕೊಡುವಂತೆ ವೈದ್ಯರು ಹೇಳಿರುವುದಾಗಿ ಸ್ಥಳೀಯರು ದೂರಿದ್ದಾರೆ.

    ಜವಾನನೇ ವೈದ್ಯನಂತಾಗಿರುವುದರಿಂದ ರೋಗಿಗಳಿಗೆ ನರ್ಸ್ ಮೂಲಕವೂ ತಪಾಸಣೆ ನಡೆಸದೇ, ಜವಾನನೇ ಚಿಕಿತ್ಸೆ ನೀಡುತಿದ್ದಾರೆ. ರೋಗಿಗಳು ಬಂದರೆ ಅವರಿಗೆ ಏನು ತೊಂದರೆ ಎಂದು ಕೇಳಿ ತನಗೆ ಗೊತ್ತಿರುವ ಮಾತ್ರೆಯನ್ನು ಜವಾನ ನೀಡುತ್ತಾರೆ. ಬಿಪಿ, ಷುಗರ್ ರೋಗಿಗಳು ಬಂದರೆ ತನಗೆ ಗೊತ್ತಿರುವ ಮಾತ್ರೆ ನೀಡಿ ಕಳುಹಿಸುತಿದ್ದಾರೆ.

    ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ. ಹೀಗಾಗಿ ಕಳೆದ ತಿಂಗಳು ಹೊಸದಾಗಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಂಕೋಲದ ಭಾಗದಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇದಾಗಿದೆ. ಹೀಗಿದ್ದರೂ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಸ್ಥಳೀಯರು ಜಿಲ್ಲಾ ಆರೋಗ್ಯ ಇಲಾಖೆಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ. ಕೊರೊನಾ ಸಮಯದಲ್ಲಿಯೂ ಇಲ್ಲಿರೋ ವೈದ್ಯರು ಸೇವೆಯಲ್ಲಿ ಇರದಿರುವುದಕ್ಕೆ ಸ್ಥಳೀಯರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಜವಾನ ತನಗೆ ತೋಚಿದ ಔಷಧಿ ನೀಡಿ, ಮುಂದೆ ರೋಗಿಗಳಿಗೆ ತೊಂದರೆ ಆದರೆ ಗತಿ ಏನು ಎಂಬ ಆತಂಕ ಸ್ಥಳೀಯರದ್ದು. ಈ ಬಗ್ಗೆ ಅಂಕೋಲದ ಪ್ರತಾಪ್ ದುರ್ಗೇಕರ್ ಅವರು ಇಲ್ಲಿನ ಆಸ್ಪತ್ರೆ ಸಮಸ್ಯೆ ಬಗ್ಗೆ ದೂರು ಸಹ ನೀಡಿದ್ದಾರೆ, ಆದರೂ ಪ್ರಯೋಜನವಾಗಿಲ್ಲ.