Tag: ಜವಹಾರ್ ಲಾಲ್ ನೆಹರು

  • ನೆಹರು ಫೋಟೋ ಕೈಬಿಟ್ಟ ಮಮತಾ

    ನೆಹರು ಫೋಟೋ ಕೈಬಿಟ್ಟ ಮಮತಾ

    ಕೋಲ್ಕತ್ತಾ: ಕರ್ನಾಟಕ ಸರ್ಕಾರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಕಟಿಸಿದ ಜಾಹೀರಾತಿನಲ್ಲಿ ಜವಹಾರ್ ಲಾಲ್ ನೆಹರು ಫೋಟೋವನ್ನು ಬಿಟ್ಟಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ ಸರ್ಕಾರ ನೆಹರೂ ಭಾವಚಿತ್ರವನ್ನು ಕೈಬಿಟ್ಟಿದೆ.

    ಸಿಎಂ ಮಮತಾ ಬ್ಯಾನರ್ಜಿ ಅವರು ಮಹಾತ್ಮ ಗಾಂಧೀಜಿ, ಅಂಬೇಡ್ಕರ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸೇರಿದಂತೆ ಹಲವು ನಾಯಕರ ಭಾವಚಿತ್ರ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್‌ ಫೋಟೋವನ್ನಾಗಿ ಹಾಕಿದ್ದಾರೆ.

    ಕರ್ನಾಟಕ ಸರ್ಕಾರ ಸ್ವಾತಂತ್ರ್ಯ ದಿನದ ಜಾಹೀರಾತು ಪ್ರಕಟವಾಗುವ ಮೊದಲೇ ಆಗಸ್ಟ್‌ 14 ರಂದು ಟಿಎಂಸಿ ನಾಯಕರು ಹೊಸ ಪ್ರೊಫೈಲ್‌ ಫೋಟೋವನ್ನು ಬದಲಾಯಿಸಿಕೊಂಡಿದ್ದಾರೆ.

    ಈ ಚಿತ್ರದಲ್ಲಿ ನೆಹರು ಫೋಟೋವನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಮಮತಾ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪುತ್ರಿ ಬರೆದಿರುವ ಸ್ವಾತಂತ್ರ್ಯ ದಿನದ ಚಿತ್ರದಲ್ಲಿ ನೆಹರು ಫೋಟೋ ಇರುವುದನ್ನು ಟ್ವಿಟ್ ಮಾಡಿ, ‘ಪುಟ್ಟ ಬಾಲಕಿಯಿ೦ದ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸಿಗೆ ಇತಿಹಾಸ ಪಾಠ’ ಎಂದು ಬರೆದು ತಿರುಗೇಟು ನೀಡಿದೆ.

    ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ಅಮೃತಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದ ಪ್ರೊಫೈಲ್‌ ಫೋಟೋದಲ್ಲಿ ರಾಷ್ಟ್ರಧ್ವಜವನ್ನು ಹಾಕಬೇಕೆಂದು ಜನತೆಗೆ ಕರೆ ಕೊಟ್ಟಿದ್ದರು. ಈ ಕರೆಯ ಬೆನ್ನಲ್ಲೇ ಕಾಂಗ್ರೆಸ್‌ ಜವಹಾರ್ ಲಾಲ್ ನೆಹರು‌ ರಾಷ್ಟ್ರಧ್ವಜ ಹಿಡಿದಿರುವ ಫೋಟೋವನ್ನು ಬಿಡುಗಡೆ ಮಾಡಿತ್ತು ಅಲ್ಲದೇ ಕಾಂಗ್ರೆಸ್‌ ನಾಯಕರು ಈ ಫೋಟೋವನ್ನು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಡಿಸ್ಪ್ಲೇ ಫೋಟೋವನ್ನಾಗಿ ಹಾಕಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕುಂಭಮೇಳಕ್ಕಾಗಿ ನೆಹರು ಮೂರ್ತಿ ಸ್ಥಳಾಂತರಿಸಿದ ಯುಪಿ ಸರ್ಕಾರ

    ಕುಂಭಮೇಳಕ್ಕಾಗಿ ನೆಹರು ಮೂರ್ತಿ ಸ್ಥಳಾಂತರಿಸಿದ ಯುಪಿ ಸರ್ಕಾರ

    -ದೀನ್ ದಯಾಳು ಉಪಾಧ್ಯಾಯ ಪ್ರತಿಮೆಯನ್ನ ಹಾಗೆ ಬಿಟ್ಟಿದ್ದಕ್ಕೆ ಕೈ ಆಕ್ರೋಶ

    ಲಕ್ನೋ: ಉತ್ತರ ಪ್ರದೇಶದಲ್ಲಿ 2019ರ ಜನವರಿಯಲ್ಲಿ ಕುಂಭಮೇಳ ನಡೆಯಲಿದೆ. ಇದರ ಸಿದ್ಧತೆಗಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರು ಪ್ರತಿಮೆಯನ್ನು ಸ್ಥಳಾಂತರ ಮಾಡಿದ್ದು, ಇದಕ್ಕೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸಿದೆ.

    ಅಲಹಾಬಾದ್‍ನ ಬಲ್ಸಾನ್ ಚೌರಾಹ ಪ್ರದೇಶದಲ್ಲಿ ರಸ್ತೆ ಮಧ್ಯದಲ್ಲಿ ನೆಹರು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷ ನಡೆಯುವ ಕುಂಭ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಹೀಗಾಗಿ ರಸ್ತೆಗಳ ಅಗಲೀಕರಣಕ್ಕೆ ಸರ್ಕಾರವು ಮುಂದಾಗಿದೆ. ಹೀಗಾಗಿ ರಸ್ತೆ ಮಧ್ಯದಲ್ಲಿರುವ ನೆಹರು ಅವರ ಪ್ರತಿಮೆಯನ್ನು ಪಕ್ಕದ ಉದ್ಯಾನಕ್ಕೆ ಸ್ಥಳಾಂತರಿಸಿದೆ.

    ಪ್ರತಿಮೆಯನ್ನು ಸ್ಥಳಾಂತರ ಮಾಡುವ ಮೂಲಕ ಭಾರತದ ಪ್ರಥಮ ಪ್ರಧಾನಿ ನೆಹರು ಅವರಿಗೆ ಯೋಗಿ ಆದಿತ್ಯನಾಥ್ ಸರ್ಕಾರವು ಅವಮಾನ ಮಾಡಿದೆ. ನೆಹರು ತತ್ವಾದರ್ಶಗಳಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.

    ಗುರುವಾರ ಸ್ವಜನ ಪಕ್ಷ ಹಾಗೂ ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು. ನೆಹರು ಪ್ರತಿಮೆಯನ್ನು ಸ್ಥಳಾಂತರ ಮಾಡುತ್ತಿದ್ದ ಕ್ರೇನ್ ತಡೆದು, ಕೆಲ ಹೊತ್ತು ಯೋಗಿ ಆದಿತ್ಯನಾಥ್ ವಿರುದ್ಧ ಘೋಷನೆ ಕೂಗಿದರು. ‘ಇದೇ ರಸ್ತೆಯಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆಯನ್ನು ಹಾಗೆ ಬಿಟ್ಟು, ಕೇವಲ ನೆಹರು ಪ್ರತಿಮೆಯನ್ನು ಏಕೆ ಸ್ಥಳಾಂತರ ಮಾಡುತ್ತಿರುವಿರಿ’ ಎಂದು ಪ್ರತಿಭಟನೆ ನಿರತರು ಪ್ರಶ್ನಿಸಿದ್ದಾರೆ.

    ರಸ್ತೆ ಅಗಲೀಕರಣಕ್ಕೆ ಹಾಗೂ ನಗರವನ್ನು ಸುಂದರವಾಗಿಸಲು ನೆಹರು ಪ್ರತಿಮೆಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಉತ್ತರ ಕೊಟ್ಟಿದ್ದಾರೆ. ಆದರೆ ದೀನ್ ದಯಾಳು ಉಪಾಧ್ಯಾಯ ಪ್ರತಿಮೆಯನ್ನು ಏಕೆ ಹಾಗೆ ಬಿಡಲಾಗಿದೆ ಎನ್ನುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಜಾರಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2018ರ ಸ್ವಾತಂತ್ರ್ಯ ಭಾಷಣ ಮೋದಿಯ ಮೂರನೇ ದೀರ್ಘ ಭಾಷಣ

    2018ರ ಸ್ವಾತಂತ್ರ್ಯ ಭಾಷಣ ಮೋದಿಯ ಮೂರನೇ ದೀರ್ಘ ಭಾಷಣ

    ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ದೆಹಲಿ ಕೆಂಪು ಕೋಟೆ ಮೇಲೆ ಇಂದು ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ್ದು, ಬಳಿಕ ಮಾಡಿದ ಭಾಷಣವು ಮತ್ತೊಂದು ದಾಖಲೆ ಬರೆದಿದೆ. ಮೋದಿ ತಮ್ಮ ಅಧಿಕಾರ ಅವಧಿಯ ಐದನೇ ಭಾಷಣ ಇದಾಗಿದ್ದು, ಇಂದು 82 ನಿಮಿಷ ಮಾತನಾಡಿದ್ದಾರೆ.

    2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಹೀಗಾಗಿ ಈ ಸರ್ಕಾರದ ಕೊನೆಯ ಭಾಷಣ ಕೂಡಾ ಆಗಿದ್ದು, ಕೇಂದ್ರ ಸರ್ಕಾರದ ಅನೇಕ ಯೋಜನೆ, ಸಾಧನೆಗಳನ್ನು ಹಾಗೂ ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಸ್ಥಾನ ಹೆಚ್ಚುತ್ತಿರುವ ಬಗ್ಗೆ ಮೋದಿ ವಿವರಿಸಿದ್ದಾರೆ.

    2016ರಲ್ಲಿ ನರೇಂದ್ರ ಮೋದಿ 96 ನಿಮಿಷಗಳ ಭಾಷಣ ಮಾಡಿದ್ದು, ಇದು ಭಾರತ ಇತಿಹಾಸದಲ್ಲಿಯೇ ದೀರ್ಘ ಭಾಷಣವಾಗಿದೆ. 2017ರಲ್ಲಿ 57 ನಿಮಿಷ ಮಾತನಾಡಿದ್ದು ಇದು ಅವರ ಅತ್ಯಂತ ಕಡಿಮೆ ಸಮಯದ ಭಾಷಣವಾಗಿದೆ. 2014ರಲ್ಲಿ 65 ನಿಮಿಷ ಹಾಗೂ 2015ರಲ್ಲಿ 86 ನಿಮಿಷ ಭಾಷಣ ಮಾಡಿದ್ದರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2005 ಮತ್ತು 2006 ರಲ್ಲಿ 50 ನಿಮಿಷ ಭಾಷಣ ಮಾಡಿದ್ದರು. ಅವರ 10 ವರ್ಷದ ಅಧಿಕಾರ ಅವಧಿಯಲ್ಲಿ ಈ ಎರಡು ಭಾಷಣ ಬಿಟ್ಟರೆ ಉಳಿದ 8 ವರ್ಷ 32 ರಿಂದ 45 ನಿಮಿಷದಲ್ಲಿ ಭಾಷಣ ಮುಗಿಸಿದ್ದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಅಧಿಕಾರ ಅವಧಿಯಲ್ಲಿ ಸಾಮಾನ್ಯವಾಗಿ 30 ರಿಂದ 35 ನಿಮಿಷ ಭಾಷಣ ಮಾಡುತ್ತಿದ್ದರು. 2002ರಲ್ಲಿ 25 ನಿಮಿಷ ಭಾಷಣ ಮಾಡಿದರೆ, 2003ರಲ್ಲಿ 30 ನಿಮಿಷಗಳ ದೀರ್ಘ ಭಾಷಣದಲ್ಲಿ 17 ನೇ ಶತಮಾನದ ಮೊಘಲ್ ಸಾಮ್ರಾಜ್ಯದ ಬಗ್ಗೆ ವಿವರಿಸಿದ್ದರು.

    ಪ್ರಥಮ ಪ್ರಧಾನಿ ಜವಹಾರ್ ಲಾಲ್ ನೆಹರು ಸ್ವಾತಂತ್ರ್ಯ ಭಾರತದ ಮೊದಲ ಭಾಷಣದಲ್ಲಿ 72 ನಿಮಿಷ ದೀರ್ಘ ಭಾಷಣ ಮಾಡಿದ್ದರು. ಅಲ್ಲಿಂದ 2015ರ ವರೆಗೆ ಯಾವುದೇ ಪ್ರಧಾನಿಗಳು ನೆಹರು ಭಾಷಣದ ದಾಖಲೆಯನ್ನು ದಾಟಿರಲಿಲ್ಲ. ಆದರೆ ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೊದಲ ಸ್ವಾತಂತ್ರ್ಯ ಭಾಷಣದಲ್ಲಿಯೇ 86 ನಿಮಿಷ ಭಾಷಣ ಮಾಡಿ, ದೀರ್ಘ ಭಾಷಣ ಮಾಡಿದ ಪ್ರಧಾನಿ ದಾಖಲೆಯನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದರು.

    ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಾನು ದೀರ್ಘ ಭಾಷಣ ಮಾಡುತ್ತೇನೆ. ಹೀಗಾಗಿ ಭಾಷಣದ ಅವಧಿಯನ್ನು ಕಡಿಮೆ ಮಾಡುವಂತೆ ಹಲವು ಮಂದಿ ಪತ್ರ ಬರೆದು ದೂರು ನೀಡಿದ್ದಾರೆ. ಈ ಕಾರಣಕ್ಕಾಗಿ ನನ್ನ ಭಾಷಣದ ಅವಧಿಯನ್ನು ಕಡಿತಗೊಳಿಸುತ್ತೇನೆ ಎಂದು ಕಳೆದ ವರ್ಷದ ಮನ್ ಕೀ ಬಾತ್ ನಲ್ಲಿ ಮೋದಿ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಪಣಜಿ: ಗೋವಾದ 10ನೇ ತರಗತಿ ಪುಸ್ತಕದಲ್ಲಿದ್ದ ಮಾಜಿ ಪ್ರಧಾನಿ ಜವಹಾರ್ ಲಾಲ್ ಭಾವಚಿತ್ರದ ತಗೆದು ಆರ್‌ಎಸ್‌ಎಸ್ ಸಹ ಸಂಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾರ್ವಕರ್ ಫೋಟೋ ಬಳಕೆ ಮಾಡಲಾಗಿದ್ದು, ಇದಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‍ಎಸ್‍ಯುಐ) ಭಾರೀ ವಿರೋಧ ವ್ಯಕ್ತಪಡಿಸಿದೆ.

    10ನೇ ತರಗತಿಯ ಸಮಾಜವಿಜ್ಞಾನ ವಿಷಯ ಪುಸ್ತಕದಲ್ಲಿ ನೆಹರು ಫೋಟೋ ಇತ್ತು. ಅದು 1935ರಲ್ಲಿ ಮಹಾರಾಷ್ಟ್ರದ ವಾರ್ದಾದಲ್ಲಿ ಜವಹಾರ್ ಲಾಲ್ ನೆಹರು ಅವರು ಮಹಾತ್ಮಾ ಗಾಂಧೀಜಿ ಹಾಗೂ ಮೌಲಾನ್ ಅಬ್ದುಲ್ ಕಲಾಂ ಆಜಾದ್ ಜೊತೆಗೆ ಇದ್ದ ಭಾವಚಿತ್ರ. ಆದರೆ ನೆಹರು ಫೋಟೋ ತಗೆದು ಅಲ್ಲಿ ವಿ.ಡಿ.ಸಾರ್ವಕರ್ ಫೋಟೋ ಹಾಕಲಾಗಿದೆ ಎಂದು ದೂರಿದೆ.

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಲಪಂತಿಯ ವಿಚಾರಗಳನ್ನು ಎತ್ತಿ ಹಿಡಿಯುತ್ತಿದೆ. ಅಷ್ಟೇ ಅಲ್ಲದೇ ಬಿಜೆಪಿಯವರು ಇತಿಹಾಸವನ್ನು ತಿರುಚಲು ಹಾಗೂ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಮರೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎನ್‍ಎಸ್‍ಯುಐ ಗೋವಾ ರಾಜ್ಯ ಅಧ್ಯಕ್ಷ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮುಂದಿನ ದಿನಗಳಲ್ಲಿ ಮಹಾತ್ಮಾ ಗಾಂಧಿ ಕಾಂಗ್ರೆಸ್ಸಿಗೆ ಸೇರಿದವರು ಎನ್ನುವ ಕಾರಣಕ್ಕೆ ಅವರ ಫೋಟೋವನ್ನು ತಗೆದು ಹಾಕಬಹುದು. 60 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎನ್ನುವುದದು ಬಿಜೆಪಿ ವಾದವಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ನೀಡಿದ ಕೊಡುಗೆಯನ್ನು ಇತಿಹಾಸದಿಂದ ಅಳಿಸಿ ಹಾಕಲು ಬಿಜೆಪಿಯವರಿಗೆ ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದರು.

    ಫೋಟೋ ಬದಲಾಯಿಸಿದ್ದಕ್ಕೆ ಕಾರಣ ನೀಡುವಂತೆ ಉನ್ನತ ಹಾಗೂ ಮಾಧ್ಯಮಿಕ ಪರೀಕ್ಷಾ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕ ಗಜಾನನ ಪಿ ಭಟ್ ತಿಳಿಸಿದ್ದು, ಇತ್ತ ಶಿಕ್ಷಣ ಮಂಡಳಿಯ ಅಧ್ಯಕ್ಷ ರಾಮಕೃಷ್ಣ ಸಮಂತ್ ತನಿಖೆಗೆ ಆದೇಶ ನೀಡಿದ್ದಾರೆ.

    ವೃತ್ತಿ ಅನುಭವ ಹಾಗೂ ಹಿನ್ನಲೆ ಆಧಾರದ ಮೇಲೆ ಶಿಕ್ಷಕರನ್ನು ಪುಸ್ತಕದ ವಿಷಯ ಬದಲಾವಣೆಗೆ ಆಯ್ಕೆ ಮಾಡಲಾಗುತ್ತದೆ. ಎಲ್ಲ ಕಡೆಗೂ ಬದಲಾವಣೆ ಮಾಡುವ ಅಧಿಕಾರ ಅವರಿಗೆ ಇರುವುದಿಲ್ಲ. ಅವಶ್ಯಕತೆ ಇರುವಲ್ಲಿ ವಿಷಯ ಬದಲಾವಣೆಗೆ ಸಲಹೆ ನೀಡಬಹುದು. ಆದರೆ ಅವರು ಏಕೆ ಫೋಟೋ ಬದಲಾವಣೆ ಮಾಡಿದರು ಎನ್ನುವುದು ತಿಳಿದಿಲ್ಲ. ಹೀಗಾಗಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ರಾಮಕೃಷ್ಣ ಸಮಂತ್ ತಿಳಿಸಿದ್ದಾರೆಂದು ವರದಿಯಾಗಿದೆ.

    ಮೇ ತಿಂಗಳಿನಲ್ಲಿ ಹೊಸ ಪಠ್ಯ ಬಿಡುಗಡೆಯಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.