Tag: ಜಲ ಮಂಡಳಿ

  • BBMP ವ್ಯಾಪ್ತಿಯ 110 ಹಳ್ಳಿ ನಿವಾಸಿಗಳಿಗೆ ಗುಡ್‌ನ್ಯೂಸ್; ದಸರಾ ಮುಗಿದ ಬೆನ್ನಲ್ಲೇ ಹರಿಯಲಿದೆ ಕಾವೇರಿ

    BBMP ವ್ಯಾಪ್ತಿಯ 110 ಹಳ್ಳಿ ನಿವಾಸಿಗಳಿಗೆ ಗುಡ್‌ನ್ಯೂಸ್; ದಸರಾ ಮುಗಿದ ಬೆನ್ನಲ್ಲೇ ಹರಿಯಲಿದೆ ಕಾವೇರಿ

    ಬೆಂಗಳೂರು: ಹತ್ತಾರು ವರ್ಷಗಳಿಂದ ಕಾವೇರಿ ನೀರಿಗಾಗಿ (Bengaluru) ಕಾದು ಕುಳಿತಿದ್ದ ಬೆಂಗಳೂರು ಹೊರವಲಯದ ಜನಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಬಿಬಿಎಂಪಿ (BBMP) ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಹರಿಯಲು ಮೂಹೂರ್ತ ಫಿಕ್ಸ್ ಆಗಿದೆ.

    ಹೌದು. ಇದೇ ಅಕ್ಟೋಬರ್‌ 16ರಂದು ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ಸಿಗಲಿದ್ದು, ಬೆಂಗಳೂರು ಹೊರವಲಯದ ಹಳ್ಳಿ ನಿವಾಸಿಗಳ ಬಹುದಿನಗಳ ಕನಸು ನನಸಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ದಸರಾ ಉತ್ಸವ ಮುಗಿದ ಬಳಿಕ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಹರಿಯಲಿದೆ. ಇದನ್ನೂ ಓದಿ: ಉದ್ಯಮಿ ಮುಮ್ತಾಜ್‌ ಅಲಿ ಸಾವು ಪ್ರಕರಣ – ಆರೋಪಿ ಮಹಿಳೆ ಬಂಧನ

    2019 ರಲ್ಲಿ ಕಾವೇರಿ 5ನೇ ಹಂತ ಯೋಜನೆ ಕಾಮಗಾರಿ ಆರಂಭ ಮಾಡಿದ್ದ ಜಲಮಂಡಳಿ, ಇದೀಗ ಸುಮಾರು 5,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕಾಮಗಾರಿ ಮುಗಿಸಿದೆ. ಅ.16ರಂದು ಟಿಕೆ ಹಳ್ಳಿಯ ಜಲಮಂಡಳಿ ಆವರಣದಲ್ಲಿ ಸಿಎಂ, ಡಿಸಿಎಂ ಕಾವೇರಿ 5ನೇ ಹಂತ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಕಳೆಗಟ್ಟಿದ ಚೆಲುವ ಚಾಮರಾಜನಗರ ದಸರಾ ಮಹೋತ್ಸವ – ಗಡಿನಾಡ ಜನತೆಯ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

    ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಒಟ್ಟು 5 ಲಕ್ಷ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ನಿವಾಸಿಗಳು ನೀರಿನ ಸಂಪರ್ಕ ಹೊಂದಿದ್ದಾರೆ. ಮೊದಲ ಹಂತದಲ್ಲಿ 170 MLD ನೀರು ಪೂರೈಕೆಯಾಗಲಿದ್ದು, ಉಳಿದ ನೀರನ್ನು ಹಂತಹಂತವಾಗಿ ಪೂರೈಸಲು ಜಲ ಮಂಡಳಿ ನಿರ್ಧರಿಸಿದೆ. ಯಶವಂತಪುರ, ದಾಸರಹಳ್ಳಿ, ಬೊಮ್ಮನಹಳ್ಳಿ, ಮಹಾದೇವಪುರ, ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಗೆ ಕಾವೇರಿ ನೀರು ಹರಿಯಲಿದೆ. ಇದನ್ನೂ ಓದಿ: `ಅಹಿಂದ’ ನಾಯಕರ ಡಿನ್ನರ್‌ ಮೀಟಿಂಗ್‌ – ರಾಜ್ಯ ರಾಜಕೀಯದಲ್ಲಿ ಸಂಚಲನ

  • BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!

    BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!

    ಬೆಂಗಳೂರು: ಹತ್ತಾರು ವರ್ಷಗಳಿಂದ ಕಾವೇರಿ ನೀರಿಗಾಗಿ (, Bengaluru, DK )ಕಾದು ಕುಳಿತಿದ್ದ ಬೆಂಗಳೂರು ಹೊರವಲಯದ ಜನಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಬಿಬಿಎಂಪಿ (BBMP) ವ್ಯಾಪ್ತಿಯ 110 ಹಳ್ಳಿಗಳಿಗೆ ಕೊನೆಗೂ ಕಾವೇರಿ ಹರಿಯಲು ಮೂಹೂರ್ತ ಫಿಕ್ಸ್ ಆಗಿದೆ.

    ಕಳೆದ 17 ವರ್ಷಗಳ ಹಿಂದೆ ಬಿಬಿಎಂಪಿ ತೆಕ್ಕೆ ಸೇರಿದ್ದ 110 ಹಳ್ಳಿಗಳ ಜನರಿಗೆ ಕೊನೆಗೂ ಕಾವೇರಿ ನೀರು ಕುಡಿಯುವ ಭಾಗ್ಯ ಬಂದೊದಗಿದೆ. ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಪೂರೈಸಲು ಜಲಮಂಡಳಿ ಸಜ್ಜಾಗಿದ್ದು, ಮುಂದಿನ ವಾರ ಕಾವೇರಿ 5 ಹಂತ ಯೋಜನೆಗೆ ಸರ್ಕಾರದಿಂದಲೇ ಹಸಿರು ನಿಶಾನೆ ಸಿಗಲಿದೆ.

    ನಗರದ ಹೊರವಲಯದ 110 ಹಳ್ಳಿಗಳಿಗೆ ಜೂನ್ ಅಂತ್ಯದೊಳಗೆ ಕಾವೇರಿ ನೀರು ಪೂರೈಸುವುದಾಗಿ ಜಲಮಂಡಳಿ ಭರವಸೆ ನೀಡಿತ್ತು. ಆದರೆ, ಕಾಮಗಾರಿ ವಿಳಂಬ, ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದ ಯೋಜನೆ ಪೂರ್ಣ ಆಗಿರಲಿಲ್ಲ. ಈಗ ಇದ್ದ ಅಡೆತಡೆಗಳೆಲ್ಲ ಕಳೆದಿದ್ದು ಸಮಯ ಕೂಡಿ ಬಂದಿದೆ. ಆಗಸ್ಟ್ ತಿಂಗಳು ಪೂರ್ತಿ ಟ್ರಯಲ್ ರನ್ ಮಾಡಲಾಗಿದ್ದು, 110 ಹಳ್ಳಿಗಳಿಗೆ ಅಳವಡಿಸಿರುವ ನೂರಾರು ಕಿಮೀ ಉದ್ದದ ಕೊಳವೆಗಳನ್ನು ಹಂತ ಹಂತವಾಗಿ ಪರೀಕ್ಷಿಸಲಾಗುತ್ತಿದೆ.

    ಬಹುತ್ತೇಕ ಕಡೆ ಕೊಳವೆಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ನೀರು ಹರಿಸಲು ಯೋಗ್ಯವಾಗಿದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ. ಹೀಗಾಗಿ ಮುಂದಿನವಾರವೇ ಯೋಜನೆ ಜಾರಿಗೊಳಿಸಲು ಜಲಮಂಡಳಿ ತಯಾರಿ ಆರಂಭಿಸಿದೆ. ಇದನ್ನೂ ಓದಿ: ಲೆಬನಾನ್ ಪೇಜರ್ ಸ್ಫೋಟದ ಹಿಂದೆ ಟ್ಯಾಲೆಂಟೆಡ್ ಬ್ಯೂಟಿ!

    ಇನ್ನೂ ಜಲಮಂಡಳಿ ಯೋಜನೆ ಜಾರಿಗೆ ಸಿದ್ದವಾಗಿರೋ ಸುಳಿವು ನೀಡಿದ ಬೆನ್ನಲ್ಲೇ, ಸೋಮವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಕಾವೇರಿ 5ನೇ ಹಂತದ ಯೋಜನೆ ಪರಿಶೀಲನೆ ನಡೆಸಲಿದ್ದಾರೆ. ಬಳಿಕ 5ನೇ ಹಂತದ ಯೋಜನೆಗೆ ಚಾಲನೆ ಸಿಗಲಿದೆ. ಕಾವೇರಿ 5ನೇ ಹಂತದ ಯೋಜನೆಯಡಿ 110 ಹಳ್ಳಿಗಳಿಗೆ ನಿತ್ಯ 775 ಎಂಎಲ್‌ಡಿ ನೀರು ಪೂರೈಕೆಯಾಗಲಿದೆ. ಒಟ್ಟು 5 ಲಕ್ಷ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ 55 ಸಾವಿರ ಸಂಪರ್ಕ ನೀಡಲಾಗಿದೆ. ಮೊದಲ ಹಂತದಲ್ಲಿ 100-200 ಎಂಎಲ್ಡಿ ನೀರು ಹರಿಸುವ ಗುರಿ ಹೊಂದಿದೆ. ಹಂತ ಹಂತವಾಗಿ ನೀರು ಪೂರೈಸುವ ಯೋಜನೆ ರೂಪಿಸಿರುವುದನ್ನು ಹೆಚ್ಚು ಮಾಡುವುದಾಗಿ ಜಲಮಂಡಳಿ ತಿಳಿಸಿದೆ. ಇದನ್ನೂ ಓದಿ: ಅರ್ಕಾವತಿ ರೀಡೂ ಪ್ರಕರಣದತ್ತ ರಾಜ್ಯಪಾಲರ ಚಿತ್ತ – ಸಿಎಂಗೆ ಮತ್ತೊಂದು ಸಂಕಷ್ಟ?

    ಒಟ್ಟಾರೆ 2019ರಲ್ಲಿ ಆರಂಭಗೊಂಡ ಕಾವೇರಿ 5ನೇ ಹಂತದ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ವಾರದಿಂದ 110 ಹಳ್ಳಿಗಳಿಗೆ ಕಾವೇರಿ ನೀರು ಹರಿಸಲು ಸಿದ್ಧವಾಗಿದ್ದು, ಈ ಮೂಲಕ ಈ ಭಾಗದ ಜನರ ಬಹುದಿನದ ಕನಸು ಹಾಗೂ ದಾಹಕ್ಕೆ ಎರಡು ಕೂಡ ತೀರಲಿದೆ. ಇದನ್ನೂ ಓದಿ: Chhattisgarh | ತಲೆಗೆ 11 ಲಕ್ಷ ಬಹುಮಾನ ಹೊಂದಿದ್ದ ಮೂವರು ಸೇರಿ 8 ನಕ್ಸಲರು ಶರಣು

  • ಜಲಮಂಡಳಿ ತೋಡಿದ ಗುಂಡಿಗೆ ಬಿದ್ದು ಯುವಕ ಸಾವು, ಇಬ್ಬರು ಗಂಭೀರ

    ಜಲಮಂಡಳಿ ತೋಡಿದ ಗುಂಡಿಗೆ ಬಿದ್ದು ಯುವಕ ಸಾವು, ಇಬ್ಬರು ಗಂಭೀರ

    ಬೆಂಗಳೂರು: ಜಲಮಂಡಳಿ (BWSSB) ತೋಡಿದ ಗುಂಡಿಗೆ ಬಿದ್ದು ಓರ್ವ ಯುವಕ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕೆಂಗೇರಿ ಬಳಿಯ ಕೊಮ್ಮಘಟ್ಟ ಸರ್ಕಲ್‌ನಲ್ಲಿ ನಡೆದಿದೆ.

    ಸದ್ದಾಂ ಪಾಷಾ(20) ಸಾವನ್ನಪ್ಪಿದ್ದರೆ, ಉಮ್ರಾನ್ ಪಾಷಾ ಮತ್ತು ಮುಬಾರಕ್‌ ಪಾಷಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೆಜೆ ನಗರ (JJ Nagara) ಮೂಲದ ಇವರು ಒಂದೇ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಮೋದಿ ಬಂದರೂ ಪ್ರತಿಷ್ಠೆ ಬಿಡದ ಪ್ರೀತಂಗೌಡ, ಪ್ರಜ್ವಲ್!

    ಜಲ ಮಂಡಳಿಯವರು ಪೈಪ್ ಹಾಕಲು ಹಳ್ಳ ತೆಗೆದು ಬ್ಯಾರಿಕೇಡ್ ಹಾಕಿದ್ದರು. ಕೊಮ್ಮಘಟ್ಟ ಸರ್ಕಲ್‌ ಬಳಿ ಬರುವಾಗ ಬ್ಯಾರಿಕೇಡ್‌ ನಡುವಿನ ಸಣ್ಣ ಜಾಗದಲ್ಲಿ ವೇಗವಾಗಿ ದ್ವಿಚಕ್ರ ಚಲಾಯಿಸಿದ ಪರಿಣಾಮ ಸವಾರ ಸದ್ದಾಂ ಪಾಷಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಕೂಡಲೇ ನೆರವಿಗೆ ದಾಖಲಿಸಿದ ಸ್ಥಳೀಯರು ಗಾಯಾಳುಗಳನ್ನು ಗುಂಡಿಯಿಂದ ಮೆಲಕ್ಕೆ ಎತ್ತು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ಹಿಂದುತ್ವದ ಭದ್ರಕೋಟೆಯಲ್ಲಿ‌ ಮೋದಿ‌‌ ಕಮಾಲ್- ಫೋಟೋಗಳಲ್ಲಿ ನೋಡಿ

     

  • ಯಮುನಾ ಜಲ ಶುದ್ಧವಾಗಿದೆ ಎಂದು ನಿರೂಪಿಸಲು ಅದೇ ನೀರಿನಲ್ಲಿ ಸ್ನಾನ ಮಾಡಿದ ಜಲಮಂಡಳಿ ನಿರ್ದೇಶಕ

    ಯಮುನಾ ಜಲ ಶುದ್ಧವಾಗಿದೆ ಎಂದು ನಿರೂಪಿಸಲು ಅದೇ ನೀರಿನಲ್ಲಿ ಸ್ನಾನ ಮಾಡಿದ ಜಲಮಂಡಳಿ ನಿರ್ದೇಶಕ

    ನವದೆಹಲಿ: ಯಮುನಾ ಜಲ (Yamuna River) ಕಲುಷಿತವಾಗಿದೆ ಎಂದು ಆರೋಪಗಳು ಕೇಳಿ ಬಂದ ಹಿನ್ನೆಲೆ ನೀರು ಶುದ್ಧವಾಗಿದೆ ಎಂದು ನಿರೂಪಿಸಲು ದೆಹಲಿಯ ಜಲ ಮಂಡಳಿ ನಿರ್ದೇಶಕರು (Delhi Jal Board Director)  ಅದೇ ನೀರಿನಲ್ಲಿ ಸ್ನಾನ ಮಾಡಿರುವ ಪ್ರಸಂಗ ನಡೆದಿದೆ.

    ದೆಹಲಿಯಲ್ಲಿ ಛತ್ ಪೂಜೆ (Chhath Puja) ಸಮೀಪಿಸುತ್ತಿದ್ದಂತೆ ಯಮುನಾ ನದಿ ನೀರಿಗೆ ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಲಾಗಿದೆ. ಇದರಿಂದ ನದಿ ನೀರು ವಿಷಪೂರಿತವಾಗಿದ್ದು, ಕಲುಷಿತಗೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಜಲ ಮಂಡಳಿ ನಿರ್ದೇಶಕ ಸಂಜಯ್ ಶರ್ಮಾ (Sanjay Sharma) ಯಮುನಾ ನೀರಿನಲ್ಲಿ ಸ್ಥಳದಲ್ಲೇ ಸ್ನಾನ ಮಾಡಿ ನೀರು ಕಲುಷಿತಗೊಂಡಿಲ್ಲ ಎಂಬುದನ್ನು ನಿರೂಪಿಸಲು ವೀಡಿಯೋ ಮಾಡಿ ಜಲ ಮಂಡಳಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಯಮುನಾ ನದಿ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿ ಮೇಲೆ ಬಿಜೆಪಿ ಸಂಸದರ ದರ್ಪ

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಜಯ್ ಶರ್ಮಾ, ನೀರಿಗೆ ರಾಸಾಯನಿಕ ಸಿಂಪಡಿಸುವ ಮುನ್ನ ಈ ಬಗ್ಗೆ ಎಲ್ಲಾ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ಹಾಗಾಗಿ ನೀರು ಕಲುಷಿತಗೊಂಡಿಲ್ಲ. ಈ ನೀರಿನಿಂದ ಯಾವುದೇ ಸಮಸ್ಯೆಯಾಗಿಲ್ಲ. ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ನಿರೂಪಿಸಲು ಸ್ವತಃ ನಾನೇ ನೀರಿನಲ್ಲಿ ಸ್ನಾನ ಮಾಡಿದ್ದೇನೆ. ಸುಳ್ಳು ಆರೋಪಗಳು ಕೇಳಿ ಬಂದ ಕಾರಣ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್‍ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್​ರನ್ನು ಪ್ರಶಂಸಿಸಿದ ಮೋದಿ

    ಛತ್ ಪೂಜೆಗೂ ಮುನ್ನ ಯಮುನಾ ನದಿಗೆ ರಾಸಾಯನಿಕ ಸಿಂಪಡಿಸುತ್ತಿದ್ದ ದೆಹಲಿ ಜಲ ಮಂಡಳಿ (DJB) ಅಧಿಕಾರಿಗಳೊಂದಿಗೆ ನಿನ್ನೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ (Parvesh Verma) ವಾಗ್ದಾಳಿ ನಡೆಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು – ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಪೈಪ್‍ಲೈನ್ ಪರಿಶೀಲನೆ

    ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು – ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಪೈಪ್‍ಲೈನ್ ಪರಿಶೀಲನೆ

    ಧಾರವಾಡ: ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು ಬರುತ್ತಿರುವ ಸುದ್ದಿ ಪಬ್ಲಿಕ್ ಟಿವಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ಭೇಟಿಯಾಗಿ ಪರಿಶೀಲನೆ ನಡೆಸಿದ್ದಾರೆ.

    ಇಂದು ಬೆಳಗ್ಗೆ ಪಬ್ಲಿಕ್ ಟಿವಿಯಲ್ಲಿ ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯ ನಲ್ಲಿಗಳಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿರುವ ಬಗ್ಗೆ ಸುದ್ದಿ ಪ್ರಸಾರವಾಗುತಿತ್ತು. ಪಬ್ಲಿಕ್ ಟಿವಿ ವರದಿ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಕಾರ್ಯನಿರ್ವಾಹಕ ಅಭಿಯಂತರ ವೆಂಕಟರಾವ್ ನೇತೃತ್ವದಲ್ಲಿ ಅಧಿಕಾರಿಗಳು ಕಾಲೋನಿಗೆ ಹೋಗಿ ನೀರು ಸರಬರಾಜು ಪೈಪ್‍ಲೈನ್ ಪರಿಶೀಲನೆ ಮಾಡಿದ್ದಾರೆ. ಕಸಾಯಿಖಾನೆಯಿಂದ ಬರುವ ನೀರನ್ನು ಬೇರೆ ಪೈಪ್‍ಲೈನ್ ಮೂಲಕ ಹೋಗುವಂತೆ ಮಾಡುತ್ತೇವೆ. ಕುಡಿಯುವ ನೀರು ಪೂರೈಕೆ ಮತ್ತು ಕಸಾಯಿ ಖಾನೆ ನೀರಿ ಪೈಪ್‍ಲೈನ್ ಸಂಪರ್ಕ ಹೊಂದದಂತೆ ಕ್ರಮ ಕೈಗೊಳ್ಳುತ್ತೇವೆ. ಸಂಜೆ ವೇಳೆಗೆ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಕಳೆದ 15 ದಿನದಿಂದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಹಾಕಲಾಗಿದ್ದ ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು ಹೊರ ಬರುತಿತ್ತು. ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನು ನೀಡಿದ್ದರು. ಆದರೆ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲೀಜು ನೀರು ಕೂಡುತ್ತಿರುವುದರಿಂದ ಕುಡಿಯುವ ನೀರಿನಲ್ಲಿ ರಕ್ತದ ನೀರು ಬರುತಿತ್ತು.

  • ನೀರಿಗಾಗಿ ಕಾದು ಕುಳಿತಿದ್ದವರು ನಲ್ಲಿ ತಿರುವಿದ ತಕ್ಷಣ ಬಂತು ರಕ್ತ

    ನೀರಿಗಾಗಿ ಕಾದು ಕುಳಿತಿದ್ದವರು ನಲ್ಲಿ ತಿರುವಿದ ತಕ್ಷಣ ಬಂತು ರಕ್ತ

    ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ.

    ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ.

    ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲೀಜು ನೀರು ಕೂಡುತ್ತಿರುವುದರಿಂದ ಕುಡಿಯುವ ನೀರಿನಲ್ಲಿ ರಕ್ತದ ನೀರು ಬರುತ್ತಿದೆ. ಈ ಹಿಂದೆ ಕೂಡಾ ರಸ್ತೆಯ ಮೇಲೆಯೇ ಕಸಾಯಿ ಖಾನೆಯ ನೀರು ಹರಿಯುತ್ತಿತ್ತು. ಆದರೆ ಈಗ ಅದೇ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲಿಜು ನೀರು ಜನರ ಮನೆಗೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಒಂದೆಡೆ ಬರಗಾಲದಿಂದ ಕುಡಿಯಲು ನೀರಿಲ್ಲದೇ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರೆ ಇಲ್ಲಿಯ ಜನರಿಗೆ ಕುಡಿಯುವ ನೀರು ಹೋಗಲಿ ಬಳಸಲು ಕೂಡ ನೀರಿಲ್ಲದಂತೆ ಆಗಿದೆ. ಇದಕ್ಕೆಲ್ಲ ಪಾಲಿಕೆ ಹಾಗೂ ಜಲ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

  • ಬೆಂಗಳೂರಿಗರಿಗೆ ಜಲಮಂಡಳಿಯಿಂದ ಬಿಗ್ ಶಾಕ್-ಸಾರ್ವಜನಿಕರ ಮೇಲೆ ಬೀಳಲಿದೆ ಇನ್ನಷ್ಟು ವಾಟರ್ ಬಿಲ್!

    ಬೆಂಗಳೂರಿಗರಿಗೆ ಜಲಮಂಡಳಿಯಿಂದ ಬಿಗ್ ಶಾಕ್-ಸಾರ್ವಜನಿಕರ ಮೇಲೆ ಬೀಳಲಿದೆ ಇನ್ನಷ್ಟು ವಾಟರ್ ಬಿಲ್!

    ಬೆಂಗಳೂರು: ಬೇಸಿಗೆಯಲ್ಲಿ ಉತ್ತರ ಕರ್ನಾಟಕ ಮಾತ್ರವಲ್ಲದೇ ಬೆಂಗಳೂರಿನಲ್ಲಿ ನೀರಿನ ಬರ ಇರುತ್ತದೆ. ಈಗ ಬೆಂಗಳೂರಿಗರಿಗೆ ಜಲಮಂಡಳಿ ಮತ್ತೊಂದು ಬಿಗ್ ಶಾಕ್ ಕೊಟ್ಟಿದೆ. ಕಾವೇರಿ ನೀರಿನ ದರ ಶೇ. 15 ರಷ್ಟು ಏರಿಕೆ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಪ್ರತ್ಯೇಕ ಕಮಿಟಿ ಕೂಡ ಮಾಡಿಕೊಂಡಿದೆ. ಶೇಕಡಾ 15 ರಷ್ಟು ಅಂದ್ರೆ 100 ರೂಪಾಯಿಗೆ 15 ರೂಪಾಯಿನಷ್ಟು ದರ ಹೆಚ್ಚಾಗಲಿದೆ.

    ನೀರು ಪೂರೈಕೆ ಪ್ರಸ್ತುತ ದರದ ವಿವರ
    * ಗೃಹ ಸಂಪರ್ಕ- ಪ್ರತಿ ಸಾವಿರ ಲೀಟರ್ 7 ರೂ.
    * ನೀರು ಬಳಸುವ ಕಟ್ಟಡಗಳಿಗೆ- 8,001-25 ಸಾವಿರ ಲೀಟರ್ ವರೆಗೆ- ಪ್ರತಿ ಸಾವಿರ ಲೀಟರ್ ಗೆ 11 ರೂ.
    * 25,001 ರಿಂದ 50 ಸಾವಿರ ಲೀಟರ್ ವರಗೆ- 26 ರೂ.
    * 50 ಸಾವಿರ ಲೀ. ಮೇಲ್ಪಟ್ಟು ನೀರು ಬಳಸುವ ಕಟ್ಟಡ- ಪ್ರತಿ ಸಾವಿರ ಲೀಟರ್ ಗೆ 45 ರೂ.
    * ಬೋರ್‍ವೆಲ್‍ಗಳಿಗೆ: 100 ರೂ.
    * ಕೈಗಾರಿಕೆ, ಈಜುಕೊಳ, ಬಿಡದಿ ಕೈಗಾರಿಕಾ ಪ್ರದೇಶಗಳಿಗೆ- 90 ರೂ.
    * ಸಗಟು ಬಳಕೆದಾರರಿಗೆ: ಪ್ರತಿ ಸಾವಿರ ಲೀಟರ್ ಗೆ- 10 ರೂ.

    2014ರ ನಂತರ ಜಲಮಂಡಳಿ ನೀರಿನ ದರ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ನಿರ್ವಹಣೆ ದುಬಾರಿ ಆಗ್ತಿರೋ ಹಿನ್ನೆಲೆ, ನೀರಿನ ದರವನ್ನ ಹೆಚ್ಚು ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗ್ತಿದೆ. ಜಲಮಂಡಳಿಯಲ್ಲಿ ಸಿಬ್ಬಂದಿ ಕೊರತೆಯೂ ಕೂಡ ಉಂಟಾಗಿದ್ದು 3 ಸಾವಿರದ 500 ಹುದ್ದೆಗಳ ಪೈಕಿ, 1945 ಹುದ್ದೆಗಳ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಒಂದಡೆ ಬೆಂಗಳೂರಲ್ಲಿ ನೀರಿಗಾಗಿ ಜನ ಪರದಾಡ್ತಿದ್ರೆ, ಮತ್ತೊಂದಡೆ ಜಲಮಂಡಳಿಯಲ್ಲಿ ಅಧಿಕಾರಿಗಳ ಕೊರತೆ ಕಾಣುತ್ತಿದೆ. ಹೀಗಿರುವಾಗ ಜನರಿಗೆ ಜಲಮಂಡಳಿ ಸಮರ್ಪಕವಾಗಿ ನೀರು ಹೇಗೆ ಒದಗಿಸುತ್ತೆ ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.