Tag: ಜಲ್ಲಿ

  • ಬೆಂಗ್ಳೂರಿನ ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಆಗಲ್ಲ – ಜಲ್ಲಿ ಕೊರತೆ ಇದೆ: BBMP

    ಬೆಂಗ್ಳೂರಿನ ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಆಗಲ್ಲ – ಜಲ್ಲಿ ಕೊರತೆ ಇದೆ: BBMP

    – ಇನ್ನೂ ಇವೆ 11 ಸಾವಿರ ಗುಂಡಿಗಳು

    ಬೆಂಗಳೂರು: ನಗರದಲ್ಲಿರುವ ರಸ್ತೆ (Road) ಗುಂಡಿ (Potholes) ಮುಕ್ತ ನಗರ ಅಂತಾ ಘೋಷಣೆ ಮಾಡಲು ಬಿಬಿಎಂಪಿ (BBMP) ಸಿದ್ಧತೆ ಮಾಡಿತ್ತು. ಆದರೆ ಈಗ ಬೆಂಗಳೂರು ಗುಂಡಿ ಮುಕ್ತ ಆಗಿಲ್ಲ ಅಂತಾ ಪಾಲಿಕೆ ಒಪ್ಪಿಕೊಂಡಿದೆ. ರಸ್ತೆ ಗುಂಡಿ ಮುಚ್ಚಲು ಜಲ್ಲಿ ಕೊರತೆ ಇದೆ ಎಂದು ಉತ್ತರಿಸಿದೆ.

    ರಾಜಧಾನಿ ಬೆಂಗಳೂರಿಗೆ (Bengaluru) ಗುಂಡಿ ಮುಕ್ತಿ ಅದ್ಯಾವಾಗ ಆಗುತ್ತೋ? ವಾಹನ ಸವಾರರು ಭಯವಿಲ್ಲದೇ ಪ್ರಯಾಣ ಮಾಡುವ ಕಾಲ ಅದ್ಯಾವಾಗ ಬರುತ್ತೋ, ಇನ್ನೂ ಅದೆಷ್ಟು ಮಂದಿ ಜೀವತೆತ್ತ ಮೇಲೆ ಬಿಬಿಎಂಪಿ ಬುದ್ಧಿ ಕಲಿಯುತ್ತೋ ಗೊತ್ತಿಲ್ಲ. ಯಾಕಂದ್ರೆ, ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳಿಗೆ ಮುಕ್ತಿ ಕಾಣುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹೊಸ ವರ್ಷಕ್ಕೆ ಬೆಂಗಳೂರಲ್ಲಿ ಇರುವ ಎಲ್ಲಾ ಗುಂಡಿಗಳನ್ನು ಮುಚ್ಚಿ ಗುಂಡಿ ಮುಕ್ತ ನಗರ ಅಂತಾ ಘೋಷಣೆ ಮಾಡೋದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಗಡುವು ನೀಡಿದ್ರು. ಆದರೆ ಬೆಂಗಳೂರು ಇನ್ನೂ ಗುಂಡಿ ಮುಕ್ತ ನಗರ ಆಗಿಲ್ಲ ಅಂತಾ ಸ್ವತಃ ಬಿಬಿಎಂಪಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಕಾರಣ ಇಲ್ಲ ಸಲ್ಲದ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಇದನ್ನೂ ಓದಿ: BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆ

    ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚುವುದು ಇನ್ನೂ ಬಾಕಿ ಇದೆ. ಆದ್ರೆ, ರಸ್ತೆ ಗುಂಡಿ ಮುಚ್ಚುವುದಕ್ಕೆ ತಡವಾಗ್ತಿದೆ. ಇದಕ್ಕೆ ಕಾರಣ ಜಲ್ಲಿ ಕಲ್ಲು ಕೊರತೆಯಂತೆ. ಕ್ವಾರಿ ಮತ್ತು ಕ್ರಷರ್ ಪ್ರತಿಭಟನೆಯಿಂದ ಕಳೆದ 15 ದಿನಗಳಿಂದ ಜಲ್ಲಿ, ಕಲ್ಲು ಪೂರೈಕೆ ಆಗುತ್ತಿಲ್ಲ. ಹಾಗಾಗಿ ರಸ್ತೆ ಗುಂಡಿ ಮುಚ್ಚುವುದಕ್ಕೆ ತಡ ಆಗ್ತಾ ಇದೆ ಎಂದು ಪಾಲಿಕೆಯ ಮುಖ್ಯ ಇಂಜಿನಿಯರ್ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಿಟ್ & ರನ್‍ಗೆ ಮಹಿಳೆಯರಿಬ್ಬರು ಬಲಿ- ಮೂವರ ಸ್ಥಿತಿ ಗಂಭೀರ

    ಇತ್ತ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‍ನಲ್ಲಿ (Fixmy Street App) ರಸ್ತೆ ಗುಂಡಿಗಳ ದೂರುಗಳ ಸುರಿಮಳೆಯೇ ಆಗ್ತಿದೆ. ಫಿಕ್ಸ್ ಮೈ ಸ್ಟ್ರೀಟ್‍ನಲ್ಲಿ 11 ಸಾವಿರ ರಸ್ತೆ ಗುಂಡಿಗಳು ಇರೋದಾಗಿ ದೂರುಗಳು ದಾಖಲಾಗಿವೆ. ಇದುವರೆಗೂ 26 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ. ಇನ್ನೂ 11 ಸಾವಿರ ಗುಂಡಿಗಳನ್ನು ಮುಚ್ಚಬೇಕಿದೆ. ಗುಂಡಿ ಮುಚ್ಚುವುದಕ್ಕೆ ಡೆಡ್ ಲೈನ್ ಕೊಡೋಕೆ ಆಗಲ್ಲ. ಮಳೆ ಬರ್ತಾ ಇರುತ್ತೆ. ಗುಂಡಿಗಳು ಬೀಳ್ತಾ ಇರುತ್ತೆ, ಹಾಗಾಗಿ ನಿರಂತರವಾಗಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಾ ಇರುತ್ತೆ ಎಂಬ ಉತ್ತರ ಅಧಿಕಾರಿಗಳಿಂದ ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಬಿಎಂಪಿ ಜಲ್ಲಿ ಸಮಮಾಡುವ ಯಂತ್ರಕ್ಕೆ ಬಾಲಕ ಬಲಿ!

    ಬಿಬಿಎಂಪಿ ಜಲ್ಲಿ ಸಮಮಾಡುವ ಯಂತ್ರಕ್ಕೆ ಬಾಲಕ ಬಲಿ!

    ಬೆಂಗಳೂರು: ಬಿಬಿಎಂಪಿಯ ಜಲ್ಲಿಕಲ್ಲು ಸಮಮಾಡುವ ಯಂತ್ರ ಹರಿದು ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೆಮ್ಮಿಗೆಪುರ ವಾರ್ಡ್ 198 ರಲ್ಲಿನ ರಸ್ತೆಗೆ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ 11 ವರ್ಷದ ಮನು ಎಂಬ ಬಾಲಕ ಸೈಕಲ್ ತುಳಿಯುತ್ತಾ ಬಂದಿದ್ದಾನೆ. ಆದ್ರೆ ಇದನ್ನು ಗಮನಿಸದ ಚಾಲಕ, ಬಾಲಕನ ಮೇಲೆ ಜಲ್ಲಿ ಸಮ ಮಾಡುವ ಯಂತ್ರವನ್ನ ಹರಿಸಿದ್ದಾನೆ.

    ಪರಿಣಾಮ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಸುಬ್ರಹ್ಮಣ್ಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.