Tag: ಜಲಾಶಯ

  • ಡ್ಯಾಂ ನೀರಿನ ಮಟ್ಟ ಬಹುತೇಕ ಕುಸಿತ – ಕಳೆದ ವರ್ಷ ಎಷ್ಟಿತ್ತು? ಈಗ ಎಷ್ಟಿದೆ?

    ಡ್ಯಾಂ ನೀರಿನ ಮಟ್ಟ ಬಹುತೇಕ ಕುಸಿತ – ಕಳೆದ ವರ್ಷ ಎಷ್ಟಿತ್ತು? ಈಗ ಎಷ್ಟಿದೆ?

    ಬೆಂಗಳೂರು: ರಾಜ್ಯದ ಜಲಾಶಯಗಳ ನೀರಿನ ಮಟ್ಟ (Dam Water level) ಬಹುತೇಕ ಕುಸಿದಿದ್ದು ಸರಿಯಾದ ಸಮಯದಲ್ಲಿ ಮಳೆ (Rain) ಸುರಿಯದೇ ಇದ್ದರೆ ಕಷ್ಟ ಎದುರಾಗುವ ಸಾಧ್ಯತೆಯಿದೆ.

    ಮುಂಗಾರು ಮಳೆ (Monsoon Rain) ಇನ್ನೂ ಶುರುವಾಗಿಲ್ಲ. ಒಂದು ವಾರದ ನಂತರ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆಯಿದೆ. ಮುಂಗಾರು ಪೂರ್ವದಲ್ಲಿ ಸುರಿದ ಮಳೆಯಿಂದ ನದಿ ಹಳ್ಳ ಕೊಳ್ಳಗಳು ತುಂಬಿ ಹರಿದಿಲ್ಲ. ಇದರ ನೇರ ಪರಿಣಾಮ ಜಲಾಶಯಗಳ ಮೇಲೆ ಬಿದ್ದಿದ್ದು, ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ತಳಕಾಣುತ್ತಿದೆ.

    ಲಿಂಗನಮಕ್ಕಿ ಜಲಾಶಯದಲ್ಲಿ (Linganamakki Dam) ನೀರು ಬರಿದಾಗುತ್ತಿದ್ದು ಸದ್ಯ ಇರುವ ನೀರಿನಿಂದ ಇನ್ನು 25 ದಿನಗಳಷ್ಟೇ ವಿದ್ಯುತ್ (Hydel Power) ಉತ್ಪಾದಿಸಬಹುದಾಗಿದೆ. ಶರಾವತಿ ನದಿಪಾತ್ರದಲ್ಲಿ ಬೇಗ ಮಳೆಯಾಗದೇ ಇದ್ದರೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಬರೀ ಇದೊಂದೇ ಅಲ್ಲ. ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳ ಪರಿಸ್ಥಿತಿ  ಇದೇ ರೀತಿಯಿದೆ. ಹೀಗಾಗಿ ಕಳೆದ ವರ್ಷದ ಜೂನ್‌ 6 ರಂದು ನೀರು ಎಷ್ಟಿತ್ತು? ಇಂದು ಎಷ್ಟಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.  ಇದನ್ನೂ ಓದಿ: ಬಾಡಿಗೆದಾರರೇ ನಿಮಗೆ ಉಚಿತ ವಿದ್ಯುತ್‌ ಬೇಕೇ – ಷರತ್ತುಗಳನ್ನು ಪೂರ್ಣಗೊಳಿಸಿದ್ರೆ ಮಾತ್ರ ಫ್ರೀ

    ಯಾವ ಜಲಾಶಯದಲ್ಲಿ ನೀರು ಎಷ್ಟಿದೆ?
    ಡ್ಯಾಂ – ಲಿಂಗನಮಕ್ಕಿ
    ಸಾಮರ್ಥ್ಯ– 151 ಟಿಎಂಸಿ
    2023 – 15.44 ಟಿಎಂಸಿ
    2022 – 22.02 ಟಿಎಂಸಿ

    ಡ್ಯಾಂ – ಆಲಮಟ್ಟಿ
    ಸಾಮರ್ಥ್ಯ– 123.08 ಟಿಎಂಸಿ
    2023 – 21.04 ಟಿಎಂಸಿ
    2022 – 47.73 ಟಿಎಂಸಿ

    ಡ್ಯಾಂ – ತುಂಗಭದ್ರಾ
    ಸಾಮರ್ಥ್ಯ – 105.79 ಟಿಎಂಸಿ
    2023 – 5.02 ಟಿಎಂಸಿ
    2022 – 39.48 ಟಿಎಂಸಿ

    ಡ್ಯಾಂ – ಕೆಆರ್‌ಎಸ್‌
    ಸಾಮರ್ಥ್ಯ – 49.45 ಟಿಎಂಸಿ
    2023 – 11.21 ಟಿಎಂಸಿ
    2022 – 26.77 ಟಿಎಂಸಿ

    ಡ್ಯಾಂ – ಹೇಮಾವತಿ
    ಸಾಮರ್ಥ್ಯ – 37.10 ಟಿಎಂಸಿ
    2023 – 15.68 ಟಿಎಂಸಿ
    2022 – 22.90 ಟಿಎಂಸಿ

    ಡ್ಯಾಂ – ಕಬಿನಿ
    ಸಾಮರ್ಥ್ಯ -19.52 ಟಿಎಂಸಿ
    2023 – 4.30 ಟಿಎಂಸಿ
    2022 – 8.15 ಟಿಎಂಸಿ

    ಡ್ಯಾಂ – ಹಾರಂಗಿ
    ಸಾಮರ್ಥ್ಯ – 8.50 ಟಿಎಂಸಿ
    2023 -2.60 ಟಿಎಂಸಿ
    2022 – 6.01 ಟಿಎಂಸಿ

    ಡ್ಯಾಂ – ಭದ್ರಾ
    ಸಾಮರ್ಥ್ಯ – 71.54 ಟಿಎಂಸಿ
    2023 – 25.18 ಟಿಎಂಸಿ
    2022 -34.78 ಟಿಎಂಸಿ


    ಡ್ಯಾಂ – ನಾರಾಯಣಪುರ
    ಸಾಮರ್ಥ್ಯ – 33.31 ಟಿಎಂಸಿ
    2023 – 15.51 ಟಿಎಂಸಿ
    2022 -26.31 ಟಿಎಂಸಿ

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.
  • ಕಳೆದ 5 ವರ್ಷಗಳಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ಕೆಆರ್‌ಎಸ್‌ ಡ್ಯಾಂ ನೀರು ಸಂಗ್ರಹ

    ಕಳೆದ 5 ವರ್ಷಗಳಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ಕೆಆರ್‌ಎಸ್‌ ಡ್ಯಾಂ ನೀರು ಸಂಗ್ರಹ

    ಮಂಡ್ಯ: ದಕ್ಷಿಣ ಒಳನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರೆ (Rain) ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Basin) ಮಳೆ ಸುರಿಯದೇ ಇರುವುದು ಈಗ ಆತಂಕಕ್ಕೆ ಕಾರಣವಾಗಿದೆ.

    ಮಳೆ ಕಡಿಮೆಯಾದ ಪರಿಣಾಮ ಕಳೆದ ಐದು ವರ್ಷದಲ್ಲಿ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ (KRS Dam) ನೀರಿನ ಮಟ್ಟ (Water Level) ಕುಸಿದಿದೆ. ಸದ್ಯ ಕೆಆರ್‌ಎಸ್‌ ಡ್ಯಾಂನಲ್ಲಿ 82 ಅಡಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಕೊನೆಗೂ ಡಿಕೆಶಿಗೆ ಸಿಕ್ತು ಅದೃಷ್ಟದ ಮನೆ – ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್ – ಯಾರಿಗೆ ಯಾವ ಮನೆ?

     

    ಸರಿಯಾದ ಪ್ರಮಾಣದಲ್ಲಿ ಮುಂಗಾರು ಬೀಳದೇ ಇದ್ದರೆ ಕೆಆರ್‌ಎಸ್‌ ಡ್ಯಾಂ ಬರಿದಾಗುವ ಸಾಧ್ಯತೆ ಇದೆ. ಇದರಿಂದಾಗಿ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು. ಕಡಿಮೆ ಪ್ರಮಾಣದ ನೀರು ಸಂಗ್ರಹಗೊಂಡಿರುವುದರಿಂದ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರಿಗೆ ಆತಂಕ ಶುರುವಾಗಿದೆ. ಜಲಾಶಯ 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 11.990 ಟಿಎಂಸಿಯಷ್ಟು ನೀರು ಸಂಗ್ರಹವಿದೆ.

     

    ಪ್ರಸ್ತುತ ಜಲಾಶಯದಲ್ಲಿ ಕುಡಿಯುವ ನೀರಿಗೆ ಅಗತ್ಯವಿರುವಷ್ಟುನೀರು ಮಾತ್ರ ಸಂಗ್ರಹವಾಗಿದೆ. ಬೇಸಿಗೆ ಮುಗಿಯುವವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ಕಳೆದ ವರ್ಷ ಮಾರ್ಚ್‌, ಏಪ್ರಿಲ್‌, ಮೇ  ತಿಂಗಳಿನಲ್ಲಿ ಮುಂಗಾರು ಪೂರ್ವ ಮಳೆ ಚೆನ್ನಾಗಿ ಸುರಿದಿತ್ತು. ಇದರ ಪರಿಣಾಮ ಬೇಸಿಗೆ ಅವಧಿಯಲ್ಲೇ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿತ್ತು.

  • ಜಲಾಶಯ ನೋಡಲು ಗೆಳೆಯನೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿ

    ಜಲಾಶಯ ನೋಡಲು ಗೆಳೆಯನೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿ

    ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ನೋಡಲು ಬೆಂಗಳೂರಿನಿಂದ ಆಗಮಿಸಿದ್ದ ವಿದ್ಯಾರ್ಥಿನಿಯೊಬ್ಬಳು (Student) ಅಪಘಾತಕ್ಕೆ (Accident) ಬಲಿಯಾಗಿರುವ ರ್ದುಘಟನೆ ಚಿಕ್ಕಬಳ್ಳಾಪುರ (Chikkaballapura) ನಗರದ ವಾಪಸಂದ್ರ ಸೇತುವೆಯ ಕೆಳ ಭಾಗದಲ್ಲಿ ನಡೆದಿದೆ.

    ಬೆಂಗಳೂರಿನ ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜಿನ (Seshadripuram College) ಪ್ರಥಮ ವರ್ಷದ ಬಿಕಾಂ (B’com Student) ವಿದ್ಯಾರ್ಥಿನಿ ಚೈತ್ರಾ (18) (Chitra) ಮೃತ ದುರ್ದೈವಿ. ಅಂದಹಾಗೆ ಎಂಇಎಸ್ ಕಾಲೇಜಿನ(MES Collage) ತನ್ನ ಸ್ನೇಹಿತ ಲಿಖಿತ್ ಗೌಡನೊಂದಿಗೆ ಹೊಂಡಾ ಆಕ್ಸೆಸ್ ಗಾಡಿಯೊಂದಿಗೆ ಆಗಮಿಸಿದ್ದ ಚೈತ್ರಾ, ಶ್ರೀನಿವಾಸ ಸಾಗರ ಜಲಾಶಯ (Srinivasa Sagara Dam) ನೋಡಿಕೊಂಡು ಬೆಂಗಳೂರಿನತ್ತ ವಾಪಾಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ತಿಂಗಳಾದ್ರೂ ಶಾಲಾ ಆವರಣದ ನೀರು ಹೊರಹಾಕದೇ ನಿರ್ಲಕ್ಷ್ಯ- ಇದು ಹೆಚ್‍ಡಿಕೆ ಸ್ವಕ್ಷೇತ್ರದ ದುಸ್ಥಿತಿ

     

    ಚಿಕ್ಕಬಳ್ಳಾಪುರ ನಗರದ ಮೂಲಕ ವಾಪಸಂದ್ರದ ಸೇತುವೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ (National Highway) ಕಡೆ ಬರುವಾಗ ಬಾಗೇಪಲ್ಲಿ (Bagepalli) ಕಡೆಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ (Tipper Lorry) ಆಕ್ಸೆಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಕ್ಸೆಸ್ ಚಾಲನೆ ಮಾಡುತ್ತಿದ್ದ ಲಿಖಿತ್ ಗೌಡನ ಕಾಲಿಗೆ ಗಾಯವಾಗಿ ಕೆಳಗೆ ಬಿದ್ದಿದ್ದಾನೆ. ಮತ್ತೊಂದೆಡೆ ರಸ್ತೆಯಲ್ಲಿ ಬಿದ್ದ ಚೈತ್ರಾ ಮೇಲೆ ಟಿಪ್ಪರ್ ಲಾರಿ ಹರಿದಿದೆ. ಟಿಪ್ಪರ್ ಹರಿದ ಪರಿಣಾಮ ಚೈತ್ರಾ ದೇಹ ನಜ್ಜುಗುಜ್ಜಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

    ಕಾಲಿಗೆ ಗಾಯವಾಗಿರುವ ಕಾರಣ ಲಿಖಿತ್ ಗೌಡನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚೈತ್ರಾ ಬೆಂಗಳೂರಿನ ಕೆ.ಆರ್. ಪುರಂ (K.R. Puram) ನಿವಾಸಿ ಅಂತ ತಿಳಿದುಬಂದಿದ್ದು, ಲಿಖಿತ್ ಗೌಡ ಮಲ್ಲೇಶ್ವರಂನ(Malleshwaram) ಎಂಇಎಸ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪ್ಯಾಲೇಸ್ ಗುಟ್ಟಹಳ್ಳಿಯ ನಿವಾಸಿಯಾಗಿದ್ದಾನೆ. ಘಟನೆ ನಂತರ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್

    Live Tv
    [brid partner=56869869 player=32851 video=960834 autoplay=true]

  • ಶ್ರೀನಿವಾಸ ಸಾಗರ ಜಲಾಶಯದ ಬಳಿ ನೀರಿನಲ್ಲಿ ಮುಳುಗಿ ಇಬ್ಬರ ಸಾವು

    ಶ್ರೀನಿವಾಸ ಸಾಗರ ಜಲಾಶಯದ ಬಳಿ ನೀರಿನಲ್ಲಿ ಮುಳುಗಿ ಇಬ್ಬರ ಸಾವು

    ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದ ಬಳಿ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ನಡೆದಿದೆ.

    ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಚ್ಚಿದಾನಂದ ಹಾಗೂ ಗೌರಿಬಿದನೂರು ತಾಲೂಕು ರಾಮಚಂದ್ರಪುರ ಗ್ರಾಮದ ನರೇಶ್ ಬಾಬು ಮೃತ ಯುವಕರು. ಇದನ್ನೂ ಓದಿ: ಜನಸ್ಪಂದನಕ್ಕೆ ಕರಾಳೋತ್ಸವದ ಬಿಸಿ – ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

    2ನೇ ಶನಿವಾರದ ಹಿನ್ನೆಲೆ ಮೆಡಿಕಲ್ ಕಾಲೇಜಿಗೆ ರಜೆ ಇದ್ದುದರಿಂದ ಸಚ್ಚಿದಾನಂದ ತನ್ನ 4 ಮಂದಿ ಸ್ನೇಹಿತರೊಂದಿಗೆ ಆಟೋ ಮೂಲಕ ಶ್ರೀನಿವಾಸ ಸಾಗರ ಜಲಾಶಯಕ್ಕೆ ತೆರಳಿದ್ದ. ಈ ವೇಳೆ ಸಚ್ಚಿದಾನಂದ ಜಲಾಶಯದ ಮುಂಭಾಗದ ಬಳಿ ಇರುವ ಹೊಂಡದಲ್ಲಿ ಈಜಲು ಹೋಗಿ, ನೀರಿನಲ್ಲಿ ಮುಳುಗಿದ್ದಾನೆ. ಸಚ್ಚಿದಾನಂದನ ರಕ್ಷಣೆಗೆ ಹೋಗಿದ್ದ ನರೇಶ್ ಬಾಬು ಕೂಡಾ ಸಚ್ಚಿದಾನಂದನ ಜೊತೆಯಲ್ಲೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದ ವೃದ್ಧ ಹೃದಯಾಘಾತದಿಂದ ಸಾವು

    ಜನ ನೋಡ ನೋಡುತ್ತಿದ್ದಂತೆಯೇ ಇಬ್ಬರು ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ವಿಷಯ ತಿಳಿದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಇಬ್ಬರ ಮೃತ ದೇಹಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಫಸ್ಟ್‌ ಟೈಂ ಬಯಲುಸೀಮೆ ಕೋಲಾರದ ಏಕೈಕ ಜಲಾಶಯ ಯರಗೋಳ್ ಡ್ಯಾಂ ಭರ್ತಿ

    ಫಸ್ಟ್‌ ಟೈಂ ಬಯಲುಸೀಮೆ ಕೋಲಾರದ ಏಕೈಕ ಜಲಾಶಯ ಯರಗೋಳ್ ಡ್ಯಾಂ ಭರ್ತಿ

    ಕೋಲಾರ: ಕಳೆದ ಐದು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಯರಗೋಳ ಡ್ಯಾಂ ಭರ್ತಿಯಾಗಿದೆ.

    ಬಂಗಾರಪೇಟೆ ತಾಲೂಕಿನ ಯರಗೋಳ ಡ್ಯಾಂ, ಸುಮಾರು 100 ಅಡಿ ಎತ್ತರವಿದ್ದು ಈಗ ಸಂಪೂರ್ಣ ಭರ್ತಿಯಾಗಿದೆ. ಬಯಲುಸೀಮೆ ಏಕೈಕ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

    ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣ ಸೇರಿ 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಈ ಯರಗೋಳ್ ಯೋಜನೆ ಸಹಕಾರಿಯಾಗಲಿದೆ. ಇದನ್ನೂ ಓದಿ: ರಸ್ತೆಬದಿ ಕಟ್ಟಡ ಅಂಕುಶಕ್ಕೆ ನಿಯಮ: ಸಚಿವ ಸಿ.ಸಿ.ಪಾಟೀಲ್

    ಇತ್ತೀಚೆಗೆ ಬಂದ ಮಳೆಗೆ ಕಳೆದ 14 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಲಾಶಯ ಇಂದು ತುಂಬಿರುವುದು ಜಿಲ್ಲೆಯ ಜನರಲ್ಲಿ ಖುಷಿ ತಂದುಕೊಟ್ಟಿದೆ. ಸುಮಾರು 315 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ: ಮಂತ್ರಾಲಯ ಶ್ರೀಗಳಿಂದ ನದಿ ಪೂಜೆ

    ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ: ಮಂತ್ರಾಲಯ ಶ್ರೀಗಳಿಂದ ನದಿ ಪೂಜೆ

    ರಾಯಚೂರು: ತುಂಗಭದ್ರಾ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿ ಮಠದ ಶ್ರೀಗಳಾದ ಸುಬುಧೇಂದ್ರ ತೀರ್ಥ ಸ್ವಾಮಿಗಳು ತುಂಗಭದ್ರಾ ನದಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಜಲಾಶಯದಿಂದ ತುಂಗಭದ್ರಾ ನದಿಗೆ 1 ಲಕ್ಷ 41 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರೆ ಮೈದುಂಬಿ ಹರಿಯುತ್ತಿದ್ದಾಳೆ. ಮಂತ್ರಾಲಯಕ್ಕೆ ಭಾರೀ ಪ್ರಮಾಣದ ನೀರು ತಲುಪಿದ ಹಿನ್ನೆಲೆ ವಿಶೇಷ ಪೂಜೆಯ ಮೂಲಕ ಶ್ರೀಗಳು ತುಂಗಭದ್ರೆಯನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಮೂರು ತಿಂಗಳ ಮೊದಲೇ KRS ಡ್ಯಾಂ ಸಂಪೂರ್ಣ ಭರ್ತಿ

    ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಮಂತ್ರಾಲಯ ರಾಯರ ಮಠದ ಬಳಿ ನದಿ ಪಾತ್ರಕ್ಕೆ ತೆರಳದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಪುಣ್ಯ ಸ್ನಾನಕ್ಕೆ ತೆರಳುವ ಭಕ್ತರಿಗೆ ನದಿ ಬಳಿ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಮಾಲ್‌ನಲ್ಲಿ ನಮಾಜ್ – ಮಾಲ್ ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳಿಂದ ಕರೆ

    Live Tv
    [brid partner=56869869 player=32851 video=960834 autoplay=true]

  • ಬಸವಸಾಗರ ಜಲಾಶಯ ಬಹುತೇಕ ಭರ್ತಿ- ರಾಯಚೂರಿನಲ್ಲಿ ಪ್ರವಾಹ ಭೀತಿ

    ಬಸವಸಾಗರ ಜಲಾಶಯ ಬಹುತೇಕ ಭರ್ತಿ- ರಾಯಚೂರಿನಲ್ಲಿ ಪ್ರವಾಹ ಭೀತಿ

    ರಾಯಚೂರು: ಮಹಾರಾಷ್ಟ್ರದಲ್ಲಿ ಅತಿಯಾದ ಮಳೆ ಹಿನ್ನೆಲೆ ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗಿದೆ. 492.25 ಮೀಟರ್ ಎತ್ತರದ ಜಲಾಶಯದಲ್ಲಿ 491.03 ಮೀಟರ್ ನೀರು ಸಂಗ್ರಹವಾಗಿದೆ. ಹೀಗಾಗಿ 10,000 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡಲು ಅಧಿಕಾರಿಗಳ ನಿರ್ಧಾರ ಮಾಡಿದ್ದಾರೆ.

    ಸದ್ಯ 3,892 ಕ್ಯೂಸೆಕ್ ಒಳಹರಿವು ಇದ್ದು, ಯಾವ ಸಂದರ್ಭದಲ್ಲಿ ಬೇಕಾದರೂ ಜಲಾಶಯದಿಂದ ನೀರನ್ನು ಬಿಟ್ಟು ಹೊರಹರಿವು ಹೆಚ್ಚಿಸುವ ಸಾಧ್ಯತೆ. ಹೀಗಾಗಿ ಲಿಂಗಸುಗೂರು ಹಾಗೂ ರಾಯಚೂರು ತಾಲೂಕಿನ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ನೀಡಿದೆ. ಇದನ್ನೂ ಓದಿ: ಗೋವಾದಲ್ಲೂ ಆಪರೇಷನ್‍ಗೆ ಮುಂದಾಗಿದ್ಯಾ ಬಿಜೆಪಿ..? – ಕಾಂಗ್ರೆಸ್ ಶಾಸಕರಿಗೆ 40 ಕೋಟಿ ಆಫರ್

    ಮೈಕ್‍ಗಳಲ್ಲಿ ಡಂಗೂರ ಸಾರುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ನದಿ ದಡಕ್ಕೆ ತೆರಳದಂತೆ, ಜಾನುವಾರು ಬಿಡದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಪ್ರವಾಹ ಸಮಯಲ್ಲಿ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯುವಂತೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಕೆನಡಾ ಸಂಸದ ಚಂದ್ರ ಆರ್ಯ ಹುಟ್ಟೂರು ತುಮಕೂರಿಗೆ ಭೇಟಿ

    Live Tv
    [brid partner=56869869 player=32851 video=960834 autoplay=true]

  • ಚಾಮರಾಜನಗರದ ಅವಳಿ ಜಲಾಶಯ ಭರ್ತಿ – ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಲು ಒತ್ತಾಯ

    ಚಾಮರಾಜನಗರದ ಅವಳಿ ಜಲಾಶಯ ಭರ್ತಿ – ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಲು ಒತ್ತಾಯ

    ಚಾಮರಾಜನಗರ: ಜಿಲ್ಲೆಯಲ್ಲಿರುವ ಜಲಾಶಯಗಳು ಭರ್ತಿಯಾಗೋದೆ ತಮಿಳುನಾಡಿನಲ್ಲಿ ಉತ್ತಮ ಮಳೆಯಾದ್ರೆ. ಅಸನಿ ಚಂಡಮಾರುತದ ಎಫೆಕ್ಟ್‌ನಿಂದಾಗಿ ತಮಿಳುನಾಡಿನ ದಿಂಬಂ, ತಾಳವಾಡಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಈ ಹಿನ್ನೆಲೆ ಹಲವು ದಶಕದ ಬಳಿಕ ಅಕ್ಟೋಬರ್, ನವೆಂಬರ್‌ನಲ್ಲಿ ಭರ್ತಿಯಾಗ್ತಿದ್ದ ಅವಳಿ ಜಲಾಶಯಗಳು ಮೇ ನಲ್ಲೇ ಭರ್ತಿಯಾಗಿದೆ.

    ಚಾಮರಾಜನಗರದ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯ ಹಿಂದೆಲ್ಲಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಡ್ಯಾಂಗಳು ಭರ್ತಿಯಾಗುತ್ತಿದ್ದವು. ಆದರೆ ಈ ವರ್ಷ ಮೇ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿದ್ದು ಜಲ ವೈಭವ ವೀಕ್ಷಣೆಗೆ ಸಾರ್ವಜನಿಕರು ಬರುತ್ತಿದ್ದಾರೆ. ಕರ್ನಾಟಕಕ್ಕೆ ಸೇರಿರುವ ಬೇಡಗುಳಿ, ತಮಿಳುನಾಡಿನ ದಿಂಬಂ, ಹಾಸನೂರು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಜಲಾಶಯಗಳಿಗೆ ಜೀವಕಳೆ ತಂದಿದೆ. ಸುವರ್ಣಾವತಿ ಜಲಾಶಯದ ನೀರು ಸಂಗ್ರಹಣದ ಗರಿಷ್ಠ ಮಟ್ಟ 2,455 ಅಡಿ. ಎರಡು ಅಡಿ ಬಾಕಿಯಿದ್ದು, ಬಹುತೇಕ ಭರ್ತಿ ಹಂತದಲ್ಲಿದೆ. ಅದೇ ರೀತಿ ಚಿಕ್ಕಹೊಳೆ 2,449 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಭರ್ತಿಯಾಗಿದೆ. ಸುವರ್ಣಾವತಿ ಜಲಾಶಯ 6,400 ಎಕರೆ ಹಾಗೂ ಚಿಕ್ಕಹೊಳೆ 4,000 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಅಸನಿ ಚಂಡಮಾರುತದಿಂದ ಹವಾಮಾನದಲ್ಲಿ ಉಂಟಾದ ಬದಲಾವಣೆಯಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಳೆ ಸುರಿದಿದ್ದು, ಜಲಾಶಯಗಳು ನಳನಳಿಸುತ್ತಿವೆ. ಇದನ್ನೂ ಓದಿ: ಜಪಾನ್‌ ಯುವಕರು ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕು: ಮೋದಿ ಆಹ್ವಾನ

    ಈ ಜೋಡಿ ಜಲಾಶಯ ತುಂಬಿರುವುದರಿಂದ ಕೂಡಲೇ ರೈತರಿಗೆ ನೀರು ಹರಿಸುವಂತೆ ಒತ್ತಾಯ ಮಾಡ್ತಿದ್ದಾರೆ. ಅಲ್ಲದೇ ಕೇರಳ, ತಮಿಳುನಾಡು ಸೇರಿದಂತೆ ಎಲ್ಲೆಡೆಯಿಂದ ಪ್ರವಾಸಿಗರು ಬರುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಕೊಟ್ರೆ ಆದಾಯ ಬರುತ್ತೆ. ಬರದನಾಡು ಚಾಮರಾಜನಗರದ ಅವಳಿ ಜಲಾಶಯಗಳು ಅವಧಿಗೂ ಮುಂಚೆಯೇ ತುಂಬಿದ್ರಿಂದ ರೈತರು ಕೂಡ ಖುಷಿಯಲ್ಲಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲಗಳಿಗೆ ಸಚಿವ ಬಿ.ಸಿ.ನಾಗೇಶ್ ತೆರೆ – ಏನಿರುತ್ತೆ, ಏನಿರಲ್ಲ?

  • ಮಸ್ಕಿ ಮಾರಲದಿನ್ನಿ ಜಲಾಶಯಕ್ಕೆ ವಲಸೆ ಬಂದ ವಿದೇಶಿ ಪಕ್ಷಿಗಳು

    ಮಸ್ಕಿ ಮಾರಲದಿನ್ನಿ ಜಲಾಶಯಕ್ಕೆ ವಲಸೆ ಬಂದ ವಿದೇಶಿ ಪಕ್ಷಿಗಳು

    ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ಜಲಾಶಯಕ್ಕೆ ಆಹಾರ ಅರಸಿ ವಿದೇಶಿ ಪಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ವಲಸೆ ಬಂದಿವೆ.

    20 ರಿಂದ 25 ಜಾತಿಯ ಪಕ್ಷಿಗಳು ಜಲಾಶಯದ ಹಿನ್ನಿರಿನಲ್ಲಿ ಕಲರವ ಸೃಷ್ಟಿಸಿವೆ. ಪ್ರತಿವರ್ಷ ಈ ವೇಳೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಪಕ್ಷಿಗಳು ಈ ವರ್ಷ ರಾಯಚೂರಿನಲ್ಲಿ ಪ್ರತ್ಯಕ್ಷವಾಗಿವೆ.

    Foreign Birds

    ಏಷಿಯನ್ ಓಪನ್ ಬಿಲ್, ಶೆಲ್‍ಡಕ್, ಬ್ಲಾಕ್ ವಿಂಗೆಡ್, ಸ್ತಿಲ್ಟ್ ಬ್ಲಾಕ್, ಸ್ಟಾರ್ಟ್ ಜಾತಿಯ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಮುಂಗೋಲಿಯಾ, ಟಿಬೆಟ್, ಚೀನಾ ಮೂಲದ ಪಕ್ಷಿಗಳು ಬೇಸಿಗೆ ಸಮಯದಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಇದರಲ್ಲಿ ಬಾರ್ ಹೆಡೆಡ್ ಗೂಸ್ ಪಕ್ಷಿ 20 ಸಾವಿರ ಅಡಿ ಎತ್ತರದಲ್ಲಿ ಹಾರಬಲ್ಲ ವಿಶಿಷ್ಟ ಜಾತಿಯ ಪಕ್ಷಿಯಾಗಿದೆ. ಇದನ್ನೂ ಓದಿ: ಬೈಕ್ ಅಪಘಾತ – ಟಿಎಂಸಿ ನಾಯಕ ಮದನ್ ಮಿತ್ರಾಗೆ ಗಾಯ

    ಮಾರ್ಚ್ ಅಂತ್ಯದವರೆಗೆ ಇಲ್ಲೇ ಇರುವ ಈ ಪಕ್ಷಿಗಳು ಆಹಾರಕ್ಕಾಗಿ 20 ಕಿ.ಮೀವರೆಗೆ ಹಾರಿ ಶೇಂಗಾ, ಕಡಲೆ, ಅಲಸಂದೆ ಹಾಗೂ ಕೆರೆ ಕುಂಟೆಗಳಲ್ಲಿ ಹುಲ್ಲಿನ ಚಿಗುರು ತಿನ್ನುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬಂದಿರುವುದು ನೋಡುಗರ ಕಣ್ಮನ ಸೆಳೆಯುತ್ತಿವೆ. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

  • ಜಲಾಶಯದಲ್ಲಿ ಹೊರಹರಿವಿನಲ್ಲಿ ಕೊಚ್ಚಿ ಹೋದ ನಾಲ್ವರು

    ಜಲಾಶಯದಲ್ಲಿ ಹೊರಹರಿವಿನಲ್ಲಿ ಕೊಚ್ಚಿ ಹೋದ ನಾಲ್ವರು

    ತುಮಕೂರು: ಕುಣಿಗಲ್ ತಾಲೂಕಿನ ಗಡಿಭಾಗದಲ್ಲಿನ ಮಾರ್ಕೋನಹಳ್ಳಿ ಜಲಾಶಯದ ಕೋಡಿ ನೀರಿನಲ್ಲಿ ಆಟವಾಡಲು ಹೋದ ನಾಲ್ವರು ಕೊಚ್ಚಿ ಹೋಗಿರುವ ದುರಂತ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

    ಪರ್ವಿನ್‍ತಾಜ್ (23) ಮತ್ತು ಸಾದೀಯ(17) ರಾಜು(23) ಮತ್ತು ಅಪ್ಪು(20) ನೀರಿನಲ್ಲಿ ಕೊಚ್ಚಿಹೋಗಿರುವ ಮೃತದುರ್ದೈವಿಗಳು. ಜಲಾಶಯದ ಕೋಡಿ ನೀರಿನಲ್ಲಿ ಆಟವಾಡಲು ಹೋದ ನಾಲ್ವರು ಕೊಚ್ಚಿ ಹೋಗಿದ್ದಾರೆ.

    ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾಕೋರ್ನಹಳ್ಳಿ ಜಲಾಶಯವು ತುಂಬಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ ಪ್ರವಾಸಿಗರು ಹೆಚ್ಚಾಗುತ್ತಿದ್ದು, ಭಾನುವಾರ ರಜೆ ಇದ್ದ ಹಿನ್ನೆಯಲ್ಲಿ ಜಲಾಶಯದ ಬಲಭಾಗದ ಕೋಡಿ ಹಳ್ಳದಲ್ಲಿ ಆಟವಾಡುತ್ತಿದ್ದರು. ಆಟವಾಡುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಧಿಡೀರನೇ ಮಾರ್ಕೋನಹಳ್ಳಿ ಜಲಾಶಯಕ್ಕೆ ಎರಡು ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಾಗಿ, ಕೋಡಿ ಸೈಪೋನ್‌ನಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

    ಘಟನೆ ನೋಡಿದ ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ತಮ್ಮ ಕುಟುಂಬದ ಸದಸ್ಯರು ಕಣ್ಣುಮುಂದೆಯೇ ಕೊಚ್ಚಿಹೋಗುತ್ತಿರುವ ದೃಶ್ಯ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟುವಂತಿದೆ. ಕೊಚ್ಚಿಹೋಗಿರುವ ಮೃತ ದೇಹಗಳ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು ಶವಗಳು ಇದುವರೆಗೂ ಪತ್ತೆಯಾಗಿಲ್ಲ. ಜಲಾಶಯದ ನೀರಿನ ಹೊರಹರಿವು ಹೆಚ್ಚಿರುವ ಕಾರಣ ಶವಗಳ ಹುಡುಕಾಟ ಕಾರ್ಯ ಕಷ್ಟಕರವಾಗಿದ್ದು ಮೃತದೇಹಗಳ ಹುಡುಕಾಟ ತಲೆನೋವಾಗಿ ಪರಿಣಮಿಸಿದ್ದು ಶಿಂಷಾ ನದಿಯಲ್ಲಿ ಹುಡುಕಾಟ ಕಾರ್ಯ ಮುಂದುವರಿದಿದೆ.