Tag: ಜಲಸಂಪನ್ಮೂಲ ಇಲಾಖೆ

  • ಜಲಸಂಪನ್ಮೂಲ ಇಲಾಖೆ ಸಾಹುಕಾರನಿಗೆ ಟಫ್?- ಯಡಿಯೂರಪ್ಪ ಕಿವಿಮಾತು

    ಜಲಸಂಪನ್ಮೂಲ ಇಲಾಖೆ ಸಾಹುಕಾರನಿಗೆ ಟಫ್?- ಯಡಿಯೂರಪ್ಪ ಕಿವಿಮಾತು

    ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಕ್ಯಾಬಿನೆಟ್‍ನಲ್ಲಿ ತಲೆನೋವಾಗಿರುವುದು ಜಲಸಂಪನ್ಮೂಲ ಖಾತೆ ನಿರ್ವಹಣೆ. ಹಠಕ್ಕೆ ಬಿದ್ದು ಸವಾಲು ಗೆಲ್ಲಲು ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆಯನ್ನ ಪಡೆದುಕೊಂಡ್ರು. ಆದರೆ ಇದೀಗ ಮಹಾದಾಯಿ ಸೇರಿದಂತೆ ಅಂತಾರಾಜ್ಯ ನದಿ ವಿವಾದಗಳನ್ನ ಬಹಳ ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಬೇಕಿದೆ. ಮಹಾದಾಯಿ ನ್ಯಾಯಧೀಕರಣದ ತೀರ್ಪು ಗೆಜೆಟ್ ನೋಟಿಫಿಕೇಶನ್ ಕೂಡ ಆಗಿದ್ದು, ಜಲಸಂಪನ್ಮೂಲ ಇಲಾಖೆಗೆ ಮಹತ್ತರ ಪಾತ್ರವಿದೆ. ಈ ಹಿನ್ನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಕರೆದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.

    ಅಂದಹಾಗೆ ಸಾಹುಕಾರನಿಗೆ ಜಲಸಂಪನ್ಮೂಲ ಆಳ ಆಗಲ ಫುಲ್ ಟಫ್ ಆಗ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಮಹಾದಾಯಿ ಗೆಜೆಟ್ ನೋಟಿಫಿಕೇಶ್ ಆದ ಬೆಳಗ್ಗೆಯೇ ರಮೇಶ್ ಜಾರಕಿಹೊಳಿಯನ್ನ ಯಡಿಯೂರಪ್ಪ ತಮ್ಮ ಡಾಲರ್ಸ್ ಕಾಲೋನಿ ನಿವಾಸಕ್ಕೆ ಕರೆಸಿಕೊಂಡಿದ್ರು. ಆಗ ರಮೇಶ್ ಎಚ್ಚರಿಕೆಯಿಂದ ಇಲಾಖೆ ನೋಡ್ಕೊಬೇಕಪ್ಪಾ ಅಂತ ಕಿವಿಮಾತನ್ನ ಹೇಳಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ.

    ಜಲಸಂಪನ್ಮೂಲ ಇಲಾಖೆಯಲ್ಲಿ ಡಿಕೆಶಿ, ರೇವಣ್ಣಗೆ ಕೆಲವು ಎಂಜಿನಿಯರ್‍ಗಳು ಬಹಳ ಕ್ಲೋಸ್ ಇದ್ದಾರೆ. ಸ್ವಲ್ಪ ಯಮಾರಿದ್ರೂ ಆಪ್ತ ಎಂಜಿನಿಯರ್‍ಗಳ ಮೂಲಕ ಅವರಿಬ್ಬರೇ ಹಳ್ಳ ತೋಡ್ತಾರೆ. ಹಾಗಾಗಿ ಎಚ್ಚರಿಕೆಯಿಂದ ಎಲ್ಲೂ ಹಾದಿ ತಪ್ಪದೇ ಜಲಸಂಪನ್ಮೂಲ ಇಲಾಖೆ ನೋಡ್ಕೋಬೇಕು ಅಂತ ರಮೇಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ಷ್ಮವಾಗಿ ಹೇಳಿದ್ದಾರಂತೆ.

    ಅಷ್ಟೇ ಅಲ್ಲ ಜಲಸಂಪನ್ಮೂಲ ಇಲಾಖೆ ಬಗ್ಗೆ ಯಡಿಯೂರಪ್ಪ ಹೆಚ್ಚು ಗಮನ ಹರಿಸ್ತಿದ್ದಾರೆ ಎನ್ನಲಾಗಿದೆ. ಅಂತಾರಾಜ್ಯ ನದಿ ವಿವಾದಗಳನ್ನು ಎಚ್ಚರಿಕೆಯಿಂದ ಹ್ಯಾಂಡಲ್ ಮಾಡಿಕೊಳ್ಳಬೇಕು. ಅಧಿಕಾರಿಗಳಿಂದ ಚೆನ್ನಾಗಿ ಬ್ರೀಫಿಂಗ್ ತೆಗೆದುಕೊಂಡು ಅಧ್ಯಯನ ಮಾಡಬೇಕು. ಯಾವುದೇ ಕಾರಣಕ್ಕೂ ವಿವಾದಾತ್ಮಕ ಹೇಳಿಕೆಯನ್ನ ಕೊಡಬಾರದೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಾಕೀತು ಮಾಡಿದ್ದಾರೆ ಅನ್ನೋದು ಸರ್ಕಾರ ಮಟ್ಟದಲ್ಲಿ ಹೆಚ್ಚು ಚರ್ಚೆ ಆಗ್ತಿದೆ.

  • ಈ ಬಾರಿ ಬೇಸಿಗೆ ಬೆಳೆಗೆ ನೀರು ಕಟ್- ಸರ್ಕಾರದ ಪತ್ರದಲ್ಲಿ ಏನಿದೆ?

    ಈ ಬಾರಿ ಬೇಸಿಗೆ ಬೆಳೆಗೆ ನೀರು ಕಟ್- ಸರ್ಕಾರದ ಪತ್ರದಲ್ಲಿ ಏನಿದೆ?

    ಬೆಂಗಳೂರು: ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯ ಇಳಿಕೆ ಹಿನ್ನಲೆಯಲ್ಲಿ ಈ ಬಾರಿ ಬೇಸಿಗೆ ಬೆಳೆಗೆ ರೈತರ ಜಮೀನಿಗೆ ನೀರು ಬಿಡದಂತೆ ಜಲಸಂಪನ್ಮೂಲ ಇಲಾಖೆಯ ಸೂಚನೆ ನೀಡಿದೆ.

    ರಾಜ್ಯದ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಕೊರತೆ ಉಂಟಾಗುತ್ತದೆ. ಸದ್ಯ ಜಲಾಶಯಗಳಲ್ಲಿ ಇರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಬಳಸಬೇಕು. ಯಾವುದೇ ಕಾರಣಕ್ಕೂ ಬೇಸಿಗೆ ಬೆಳೆಗೆ ನೀರು ಬಿಡುಗಡೆ ಮಾಡಬಾರದು ಎಂದು ಜಲಸಂಪನ್ಮೂಲ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಪತ್ರದ ಮೂಲಕ ವಿವಿಧ ಜಲಾಶಯಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಬೆಳಗಾವಿ, ಕಲಬುರಗಿ, ಬೆಂಗಳೂರು, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಹಾಗೂ ಬೆಂಗಳೂರಿನ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಾವೇರಿ ನಿರಾವರಿ ನಿಗಮ ನಿಯಮಿತ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಬೇಸಿಗೆ ಬೆಳಗೆ ರೈತರಿಗೆ ನೀರು ಬಿಡದಂತೆ ಸೂಚಿಸಲಾಗಿದೆ.

    ಪತ್ರದಲ್ಲಿ ಏನಿದೆ?
    ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿನ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರನ್ನು ಬೇಸಿಗೆಯಲ್ಲಿ ಹಾಗೂ ನೀರಿನ ಅಭಾವವಿರುವ ಪರಿಸ್ಥಿತಿಯಲ್ಲಿ ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ನಿರ್ಧರಿಸಲು ಆಯಾ ಪ್ರಾದೇಶಿಕ ಆಯುಕ್ತರುಗಳಿಗೆ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗಿದೆ. 2018 ಡಿಸೆಂಬರ್ 16ರಂದು ಕಂದಾಯ ಸಚಿವರ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಮಳೆ ಕೊರತೆಯ ಹಿನ್ನೆಲೆಗಳಲ್ಲಿ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಲಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಜಲಾಶಯದ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲು ನಿರ್ಣಯಿಸಲಾಗಿದೆ.

    ಪ್ರಸ್ತುತ ಜಲಾಶಯಗಳಲ್ಲಿ ಒಳಹರಿವು ಇಲ್ಲದ ಕಾರಣದಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವವನ್ನು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗುವುದನ್ನು ತಪ್ಪಿಸಲು, ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ವ್ಯವಸ್ಥಿತವಾಗಿ ಆಧ್ಯತೆಯ ಮೇರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಕೆಶಿಯ ಜಲಸಂಪನ್ಮೂಲ ಇಲಾಖೆಗೆ ಸಿಕ್ಕಿದ್ದೇನು?

    ಡಿಕೆಶಿಯ ಜಲಸಂಪನ್ಮೂಲ ಇಲಾಖೆಗೆ ಸಿಕ್ಕಿದ್ದೇನು?

    ಬೆಂಗಳೂರು: ರಾಜ್ಯ ಬಜೆಟ್‍ನಲ್ಲಿ ಡಿಕೆ ಶಿವಕುಮಾರ್ ನೇತೃತ್ವ ವಹಿಸಿರುವ ಜಲಸಂಪನ್ಮೂಲ ಇಲಾಖೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ನೋಡುವುದಾದರೆ, ಮೇಕೆದಾಟು ಯೋಜನೆಗೆ ಚುರುಕು, ಯೋಜನೆ ಕಾರ್ಯಗತಗೊಳಿಸಲು ಕ್ರಮಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.

    ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆ.ಆರ್.ಎಸ್ ಅಭಿವೃದ್ಧಿಗೆ ಕಾರ್ಯಯೋಜನೆ ಸಿದ್ಧಪಡಿಸಲು 5 ಕೋಟಿ ರೂ. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಬಂಡವಾಳ ಹೂಡಲು ವಿಶ್ವಮಟ್ಟದ ಉದ್ಯಮಿಗಳು ಉತ್ಸುಕರಾಗಿದ್ದಾರೆ.

    ಮಹದಾಯಿ ನದಿ ವಿವಾದದ ತೀರ್ಪು ಇದೇ ಆಗಸ್ಟ್ ನಲ್ಲಿ ಬರಲಿದ್ದು ಇದಾದ ಬಳಿಕ ನ್ಯಾಯಾಧಿಕರಣ ತೀರ್ಪಿನಂತೆ ಕಾಮಗಾರಿ ಕೈಗೊಳ್ಳಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡಸಲು ತೀರ್ಮಾನ. ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಕ್ಕೆ ಒತ್ತು. ಈಗ ಪ್ರಗತಿಯಲ್ಲಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಮುಂದಿನ 5 ವರ್ಷಗಳಲ್ಲಿ ರಾಜ್ಯ ಸರ್ಕಾರ ಪೂರ್ಣಗೊಳಿಸಲಿದೆ.

    ಒಟ್ಟಾಗಿ ಜಲಸಂಪನ್ಮೂಲ ಕ್ಷೇತ್ರಕ್ಕೆ ಕುಮಾರಸ್ವಾಮಿಯವರು ಒಟ್ಟು 18,142 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ.

  • ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ರಾಜ್ಯ ಬಾಜೆಟ್‍ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಹಾಗೂ ಸಣ್ಣ ನೀರಾವರಿಗೆ ಸಿಕ್ಕ ಸನುದಾನವೆಷ್ಟು, ಘೋಷಣೆಗಳೇನು ಎಂಬ ಮಾಹಿತಿ ಇಲ್ಲಿದೆ.

    ಸಣ್ಣ ನೀರಾವರಿ ಇಲಾಖೆಗೆ ಒಟ್ಟು ಅನುದಾನ – 2099 ಕೋಟಿ ರೂ.

    – ಕೆರೆಗಳ ಹೂಳೆತ್ತಲು ಕೆರೆ ಸಂಜೀವಿನಿ ಯೋಜನೆ – 100 ಕೋಟಿ ರೂ.
    – ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ- 100 ಕೋಟಿ ರೂ.
    – ಅಂತರ್ಜಲ ತೀವ್ರವಾಗಿ ಕುಸಿದಿರುವ ಬೀದರ್, ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಚೆಕ್ ಡ್ಯಾಮ್ ನಿರ್ಮಾಣ- 50 ಕೋಟಿ ರೂ.ವೆಚ್ಚ
    – ಕಲಬುರಗಿಯ ಅಳಂದ ತಾಲೂಕಿನಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ವಿಶೇಷ ಯೋಜನೆ

    ಜಲಸಂಪನ್ಮೂಲ ಇಲಾಖೆಗೆ ಒಟ್ಟು ಅನುದಾನ – 15,929 ಕೋಟಿ ರೂ

    * 6 ಸಾವಿರ ಕೋಟಿ ರೂ. ಮೊತ್ತದಲ್ಲಿ ಕೆಳಕಂಡ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶ
    – ನಾರಾಯಣಪುರ ಎಡದಂಡೆ ಕಾಲುವೆ ಜಾಲದ ಆಧುನೀಕರಣ ಯೋಜನೆಯಡಿ ಎಸ್‍ಸಿಎಡಿಎ ಬೇಸ್ಡ್ ಆಟೋಮೇಷನ್ ಅನುಷ್ಠಾನ.
    – ಕೆಂಪೇವಾಡ ಏತ ನೀರಾವರಿ ಯೋಜನೆ.
    – ಹಗರಿಬೊಮ್ಮನಹಳ್ಳಿಯ ಚಿಲವಾರ ಬಂಡಿ ಏತ ನೀರಾವರಿ ಯೋಜನೆ.
    – ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ.
    – ಹನಗೋಡು ಸರಣಿ ನಾಲೆಗಳ ಆಧುನೀಕರಣ.
    – ಎತ್ತಿನಹೊಳೆ ಯೋಜನೆಯಡಿ, ಭೈರಗೊಂಡ್ಲು ಜಲಾಶಯ ನಿರ್ಮಾಣ, ಕಾಲುವೆ ಕಾಮಗಾರಿ ಆರಂಭ.
    – 68,264 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ.
    – 35 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆ ನಿರ್ಮಾಣ.
    – 12,500 ಹೆಕ್ಟೇರ್ ಪ್ರದೇಶದ ಸವಳು- ಜವಳು ಭೂಮಿ ಅಭಿವೃದ್ಧಿ
    – 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಸಿಗಾಲುವೆ ನಿರ್ಮಾಣ.

    * ಕಾವೇರಿ ಕೊಳ್ಳದಲ್ಲಿ 374 ಕಿಮೀ ನಾಲೆ ಅಭಿವೃದ್ಧಿ – 509 ಕೋಟಿ ರೂ.
    * ಹಾರಂಗಿ ಎಡದಂಡೆ ನಾಲೆಯ ಸರಪಳಿ 27.083 ಕಿ.ಮೀ ನಿಂದ 149.38 ಕಿ.ಮೀ ವರೆಗಿನ ಆಧುನೀಕರಣ.
    * ಕಣ್ವ ನಾಲೆಗಳ ಆಧುನೀಕರಣ.
    * ಕೆಆರ್‍ಎಸ್ ಯೋಜನೆಯ ಆರ್‍ಬಿಎಲ್‍ಎಲ್ ಆಧುನೀಕರಣ.
    * ಮಾರ್ಕೋನಹಳ್ಳಿ ಎಡ, ಬಲದಂಡೆ ನಾಲೆ ಆಧುನೀಕರಣ.
    * ಹಾರೋಹಳ್ಳಿ ಮೇಲ್ಮಟ್ಟದ ನಾಲೆ ಆಧುನೀಕರಣ.
    * ತೀವ್ರ ಬರಗಾಲ ಎದುರಿಸುತ್ತಿರುವ ಪ್ರದೇಶಗಳಲ್ಲಿ ಮೋಡಬಿತ್ತನೆ- 30 ಕೋಟಿ ರೂ.