ಭುವನೇಶ್ವರ: ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಯೂಟ್ಯೂಬರ್ (YouTuber) ಕೊಚ್ಚಿಹೋದ ಘಟನೆ ಒಡಿಶಾದ (Odisha) ಕೊರಾಪುಟ್ (Koraput) ಜಿಲ್ಲೆಯಲ್ಲಿ ನಡೆದಿದೆ.
ದುಡುಮಾ ಜಲಪಾತದಲ್ಲಿ (Duduma Waterfall) ಘಟನೆ ನಡೆದಿದೆ. ನೀರಿನಲ್ಲಿ ಸಿಲುಕಿ ಬೆರ್ಹಾಂಪುರ್‌ನ ಸಾಗರ್ ತುಡು (22) ಎಂಬ ಯೂಟ್ಯೂಬರ್ ನಾಪತ್ತೆಯಾಗಿದ್ದಾನೆ. ಸಾಗರ್ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ಪ್ರಮುಖ ಪ್ರವಾಸಿ ತಾಣಗಳ ವೀಡಿಯೋಗಳನ್ನು ಚಿತ್ರೀಕರಿಸಲು ಬಂದಿದ್ದಾಗ ಘಟನೆ ಸಂಭವಿಸಿದೆ. ಇದನ್ನೂ ಓದಿ: ಬೆಂಗಳೂರು ಟೆಕ್ಕಿಗೆ 2.65 ಲಕ್ಷ ವಂಚನೆ – ಟ್ರಾಫಿಕ್ ಫೈನ್ ಕಟ್ಟೋ ಮುನ್ನ ಎಚ್ಚರವಾಗಿರಿ
ಕಟಕ್‌ನಿಂದ ತನ್ನ ಸ್ನೇಹಿತ ಅಭಿಜಿತ್ ಬೆಹೆರಾ ಜೊತೆ ಕೊರಾಪುಟ್‌ಗೆ ಬಂದಿದ್ದ ಸಾಗರ್ ಜಲಪಾತದಲ್ಲಿ ಡ್ರೋನ್ ಕ್ಯಾಮೆರಾ ಬಳಸಿ ರೀಲ್ ರೆಕಾರ್ಡ್ ಮಾಡುತ್ತಿದ್ದಾಗ ಘಟನೆ ನಡೆದಿದೆ. ಜಲಪಾತದಲ್ಲಿ ಹಠಾತ್ ನೀರಿನ ಪ್ರಮಾಣ ಏರಿಕೆಯಾದ ಪರಿಣಾಮ ಬಂಡೆಯ ಮೇಲೆ ನಿಂತಿದ್ದ ಸಾಗರ್ ಕೊಚ್ಚಿಹೋಗಿದ್ದಾನೆ. ನಾಪತ್ತೆಯಾಗಿರುವ ಸಾಗರ್‌ಗಾಗಿ ಅಗ್ನಿಶಾಮಕ ದಳ ರಕ್ಷಣಾ ಪಡೆಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ನಿಷೇಧ – BCCI ಪ್ರಾಯೋಜಕತ್ವದಿಂದ ಹಿಂದೆ ಸರಿದ Dream11
ತುಮಕೂರು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆರೆಕೋಡಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವತಿ ಸಾವನ್ನು ಗೆದ್ದು ಬಂದಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ತುಮಕೂರು ಜಿಲ್ಲೆ ಗುಬ್ಬಿ (Gubbi) ತಾಲೂಕಿನ ಶಿವರಾಂಪುರ ಗ್ರಾಮದ ಹಂಸಾ (19) ತುಮಕೂರು ಜಿಲ್ಲೆಯ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಭಾನುವಾರ ಕೊಚ್ಚಿ ಹೋಗಿದ್ದಳು. ಸತತ 12 ಗಂಟೆಗಳ ಕಾರ್ಯಾಚರಣೆ ಮೂಲಕ ಅಗ್ನಿ ಶಾಮಕ ದಳದವರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: Tourism| ಕೇಂದ್ರದ ಯೋಜನೆಯಡಿ ಆಲಮಟ್ಟಿ, ಹರಕಲ್ ಗ್ರಾಮಗಳ ಅಭಿವೃದ್ಧಿ
ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸಾ, ಮಂದಾರಗಿರಿ ನೋಡಿಕೊಂಡು ಜಲಪಾತ ನೋಡಲು ನಾನು ಮತ್ತು ನನ್ನ ಸ್ನೇಹಿತೆ ಕೀರ್ತನಾ ಹೋಗಿದ್ದೆವು. ಸೆಲ್ಫಿ ಮುಗಿಸಿಕೊಂಡು ವಾಪಸ್ ಬರುವಾಗ ಬಂಡೆ ಜಾರಿ ಕೆಳಕ್ಕೆ ಬಿದ್ದೆ. ನನಗೆ ಈಜು ಬರೋದಿಲ್ಲ. ಪುಣ್ಯಕ್ಕೆ ಬಂಡೆ ಮಧ್ಯೆ ಸಿಲುಕಿಕೊಂಡೆ. ಬಂಡೆಯೊಳಗೆ ಸ್ವಲ್ಪ ಆಕಾಶ ಕಾಣಿಸುತ್ತಿತ್ತು. ಇಂಥ ಜಾಗಕ್ಕೆ ಹೋಗುವಾಗ ಜಾಗೃತೆಯಿಂದ ಹೋಗಬೇಕು. ಮಂಡಿ ಮೇಲೆ ನಿಂತಿದ್ದರಿಂದ ಮಂಡಿ ನೋವಿದೆ. ಮಂಡಿ ಸಪೋರ್ಟ್ ಬಿಟ್ಟರೆ ನಾನು ನೀರಿನಲ್ಲಿ ಕೊಚ್ಚಿ ಹೋಗುತಿದ್ದೆ. ಅಲ್ಲದೇ ತಹಶಿಲ್ದಾರ್ ಹಾಗೂ ಅಗ್ನಿ ಶಾಮಕ ದಳದವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾಳೆ. ಇದನ್ನೂ ಓದಿ: ದೀಪಾವಳಿಗೂ ಮುನ್ನವೇ ಗ್ಯಾಸ್ ಚೇಂಬರಾಗುವ ಭೀತಿಯಲ್ಲಿ ದೆಹಲಿ
ಸೌಂದರ್ಯದ ಗಣಿಯನ್ನೇ ಒಡಲೊಳಗೆ ಇಟ್ಟುಕೊಂಡಿದ್ದರೂ ಬೆಳಕಿಗೆ ಬಾರದ ಜಲಪಾತವೆಂದರೆ ಅದು ದಿಡುಪೆಯ ಆನಡ್ಕ ಫಾಲ್ಸ್ (Didupe Falls).
ಹೌದು. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯ ಆನಡ್ಕ ಫಾಲ್ಸ್ ಹಚ್ಚ ಹಸಿರಿನ ನಡುವೆ ಸ್ವಚ್ಛಂದವಾಗಿ ಹರಿಯುತ್ತಿದೆ. ಆದರೆ ಈ ಜಲಪಾತ ಮಾತ್ರ ಇನ್ನೂ ಬೆಳಕಿಗೆ ಬಂದಿಲ್ಲ. ಧರ್ಮಸ್ಥಳದ ಸಮೀಪ ಅಂದರೆ ಉಜಿರೆಯಿಂದ 23 ಕಿ.ಮೀ ದೂರದ ದಿಡುಪೆ ಎಂಬ ಹಳ್ಳಿಯಲ್ಲಿರುವುದರಿಂದಾಗಿ ಇದಕ್ಕೆ `ದಿಡುಪೆ ಫಾಲ್ಸ್’ ಎಂದೂ ಕರೆಯುತ್ತಾರೆ. ಆನಡ್ಕ, ಬಂಡಾಜೆ (Bandaje), ಎಂಬ ಹೆಸರೂ ಇದೆ.
ವಿಶೇಷತೆ ಏನು..?: ಈ ಜಲಪಾತದ ಜಾಡು ಚಾರ್ಮಾಡಿ ಘಾಟ್‍ನ (Charmady Ghat) ತಳದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿ ಬಹು-ಮಡಿಸಿದ ದಿಡುಪೆ ಜಲಪಾತವು ಶಾಂತ ಕೊಳದ ರಚನೆಯನ್ನು ಸೃಷ್ಟಿಸುತ್ತದೆ. ಕಡಿದಾದ ಏರುವಿಕೆಯಿಂದಾಗಿ ಮೇಲಕ್ಕೆ ಪ್ರಯಾಣವು ಕಷ್ಟಕರವಾಗಿದೆ, ಆದರೆ ಇದು ಯೋಗ್ಯವಾಗಿದೆ. ಆರಂಭಿಕರು ದಿಡುಪೆ ಜಲಪಾತದಲ್ಲಿ ವಿರಾಮ ತೆಗೆದುಕೊಳ್ಳಬಹುದು, ಅಲ್ಲಿ ಅವರು ಈಜಬಹುದು ಮತ್ತು ಪ್ರಕೃತಿಯನ್ನು ವೀಕ್ಷಿಸಬಹುದು. ಹೆಚ್ಚು ಧೈರ್ಯವಿರುವವರು ಎರ್ಮಾಯಿ ಜಲಪಾತದಲ್ಲಿ ಚಾರಣದ ಶಿಖರವನ್ನು ತಲುಪಬಹುದು.
ಈಜುವುದನ್ನು ಹೊರತುಪಡಿಸಿ, ಪ್ರವಾಸಿಗರು (Tourist) ಇಲ್ಲಿ ಕ್ಯಾಂಪ್ ಮಾಡಬಹುದು. ಈ ಕಷ್ಟಕರವಾದ ಚಾರಣವನ್ನು ಪೂರ್ಣಗೊಳಿಸಿದ ನಂತರ, ಸೂರ್ಯನು ಬಂಡೆಗಳ ಮೇಲೆ ಚಿನ್ನದ ಹೊಳಪನ್ನು ಬೀರುವುದನ್ನು ಮತ್ತು ತೊರೆಗಳಿಗೆ ಅಡ್ಡಲಾಗಿ ಚಿಮ್ಮುವ ಕಪ್ಪೆಗಳನ್ನು ನೋಡುವುದು ತುಂಬಾ ತೃಪ್ತಿಕರವಾಗಿದೆ. ಜಲಪಾತಗಳ ತಳದಲ್ಲಿ ಸುಂದರವಾದ ನೈಸರ್ಗಿಕ ಕೊಳ ಇದೆ. ಇಲ್ಲಿ ಸ್ನಾನ ಮಾಡಬಹುದು ಮತ್ತು ನೀರಿನಿಂದ ಆಟವಾಡಬಹುದು. ಇನ್ನು ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿ ಭೂಕುಸಿತಗಳು ಸಾಮಾನ್ಯವಾಗಿದೆ. ಆದ್ದರಿಂದ ಜಲಪಾತಕ್ಕೆ ಭೇಟಿ ನೀಡಲು ಸ್ಥಳೀಯ ಮಾರ್ಗದರ್ಶಕರನ್ನು ನೇಮಿಸಿಕೊಳ್ಳುವುದು ಯಾವಾಗಲೂ ಉತ್ತಮವಾಗಿದೆ. ಇದನ್ನೂ ಓದಿ: ಇದು ಅಂತಿಂಥ ಕಲ್ಲಲ್ಲ ಗಡದ್ದಾದ ಗಡಾಯಿ ಕಲ್ಲು!
ಹೋಗುವುದು ಹೇಗೆ..?: ಉಜಿರೆಯಿಂದ ಚಾರ್ಮಾಡಿಗೆ (Charmady) ಹೋಗುವ ಮಾರ್ಗದಲ್ಲಿ ನಿಡಗಲ್‍ನಿಂದ ಸೋಮಂತಡ್ಕಕ್ಕೆ ಬಂದು ಅಲ್ಲಿಂದ ಅಡ್ಡರಸ್ತೆಯಲ್ಲಿ ದಿಡುಪೆಗೆ ಹೋಗಬೇಕು. ಅಲ್ಲಿಂದ 3ಕಿ.ಮೀ ಮಣ್ಣಿನ ರಸ್ತೆಯಲ್ಲಿ ಟ್ರೆಕ್ಕಿಂಗ್ ಮಾಡಬೇಕು. ಒಂದು ವೇಳೆ ಟ್ರಕ್ ಮಾಡಲು ಕಷ್ಟವಾದ್ರೆ 150 ರೂ. ಕೊಟ್ಟರೆ ಜೀಪಿನ ವ್ಯವಸ್ಥೆ ಸಹ ಮಾಡಿಕೊಳ್ಳಬಹುದು. ಆದರೂ ಸಹ ಮಣ್ಣಿನ ರಸ್ತೆ ಮುಗಿದ ಮೇಲೆ 1ಕಿ.ಮೀ ಅಲ್ಲಿನ ಸುತ್ತಮುತ್ತಲಿನವರ ತೋಟಗಳನ್ನು, ಹೊಳೆಗಳನ್ನು ದಾಟಿ ಕಾಡಿನಲ್ಲಿ ನಡೆದುಕೊಂಡು ಹೋಗಲೇ ಬೇಕಾಗುತ್ತದೆ. ಈ ವೇಲೆ ಜಿಗಣೆ ಕಾಟವೂ ಎದುರಾಗುತ್ತದೆ. ದಿಡುಪೆಯ ಬಳಿ ಚಿಕ್ಕ ಹೋಟೇಲ್‍ಗಳಿವೆ. ಸಂಜೆ 5 ಗಂಟೆ ಬಳಿಕ ಪ್ರವೇಶವಿಲ್ಲ.
ನೀವು ಬೆಂಗಳೂರಿನಿಂದ (Bengaluru) ಹೋಗಲು ಯೋಜಿಸುತ್ತಿದ್ದರೆ, ಇದು ಎನ್ ಹೆಚ್ 73 ಮತ್ತು ಎನ್ ಹೆಚ್ 75 ಮೂಲಕ ಸುಮಾರು 306 ಕಿಮೀ ಆಗಿದ್ದು, ಇದು ನಿಮಗೆ ಪೂರ್ಣಗೊಳ್ಳಲು ಸುಮಾರು 6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನೀವು ಓಡಿಸಲು ಬಯಸದಿದ್ದರೆ ಬಸ್‍ಗಳು ಸಹ ಲಭ್ಯವಿದೆ. ಇನ್ನು ರೈಲಿನಲ್ಲಿ ಬರುವವರಾದರೆ ಮಂಗಳೂರು ಜಂಕ್ಷನ್ ಸುಮಾರು 51 ಕಿ.ಮೀ ದೂರದಲ್ಲಿರುವ ಉಜಿರೆಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ನೀವು ಮಂಗಳೂರು ಜಂಕ್ಷನ್‍ಗೆ ಟಿಕೆಟ್ ಕಾಯ್ದಿರಿಸಬಹುದು ಮತ್ತು ಅಲ್ಲಿಂದ ನೀವು ಬಸ್ ಅಥವಾ ಜೀಪ್ ಅನ್ನು ತೆಗೆದುಕೊಂಡು ನಂತರ ಉಜಿರೆಗೆ (Ujire) ಹೋಗಬಹುದು.
ಭೇಟಿಗೆ ಉತ್ತಮ ಸಮಯ ಯಾವುದು..?: ನವೆಂಬರ್ ಮತ್ತು ಮಾರ್ಚ್ ನಡುವೆ ಜಲಪಾತವನ್ನು ಭೇಟಿ ಮಾಡುವುದು ಉತ್ತಮ. ಮಾನ್ಸೂನ್ ಸಮಯದಲ್ಲಿ, ನೀರಿನ ಹರಿವು ಹೆಚ್ಚಾಗಬಹುದು, ಬಂಡೆಗಳು ಜಾರಬಹುದು ಮತ್ತು ಭೂಕುಸಿತಗಳು ಸಾಧ್ಯ, ಆದರೆ ಬೇಸಿಗೆಯಲ್ಲಿ ನೀರಿನ ಪ್ರಮಾಣವು ಕಡಿಮೆಯಾಗುತ್ತದೆ. ಪ್ರವಾಸಿಗರಿಗೆ ದಿಡುಪೆ ಜಲಪಾತಕ್ಕೆ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಭೇಟಿ ನೀಡಲು ಅವಕಾಶವಿದೆ. ದಿಡುಪೆ ಜಲಪಾತಕ್ಕೆ ಭೇಟಿ ನೀಡಲು ಯಾವುದೇ ಪ್ರವೇಶ ಶುಲ್ಕವಿಲ್ಲ.
ಅನುಮತಿ ಅತ್ಯಗತ್ಯ: ಪಶ್ಚಿಮ ಘಟ್ಟದಲ್ಲಿ ಇಂತಹ ಅದೆಷ್ಟೋ ಅಗೋಚರ ಜಲಪಾತಗಳಿವೆ. ಇಲ್ಲಿಯ ಈ ಜಲಪಾತ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಚಾರ್ಮಾಡಿ ಘಾಟಿಯೆಡೆಗೆ ಟ್ರಕ್ಕಿಂಗ್ ಹೋಗುವವರಿಗೆ ಮಾತ್ರ ಗೊತ್ತು. ಕುದುರೆಮುಖದ ಉಸ್ತುವಾರಿಗೆ ಒಳಪಟ್ಟಿರುವ ಈ ಜಲಪಾತವನ್ನು ನೋಡಬೇಕೆಂದರೆ ದಿಡುಪೆ ಗ್ರಾಮ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಅತ್ಯಗತ್ಯ.
ಒಟ್ಟಿನಲ್ಲಿ ಇದರ ನೈಜ ಸೌಂದರ್ಯ ಹೀಗೇ ಉಳಿಯಬೇಕಾದರೆ ಹೆಚ್ಚು ಪ್ರಚಾರ ಸಿಗದಿದ್ದರೆ ಒಳಿತು ಎಂದು ಸ್ಥಳೀಯರು ಕಳಕಳಿ ವ್ಯಕ್ತಪಡಿಸುತ್ತಾರೆ. ‘ದಿಡುಪೆ ಫಾಲ್ಸ್’ ಇಂದಿಗೂ ಸುತ್ತಮುತ್ತಲಿನ ತೋಟಗಳ ಮಧ್ಯೆ ಅನಾಮಿಕ ಸುಂದರಿಯಾಗಿ ಮೆರೆಯುತ್ತಿದೆ.
ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಾಣದ, ರಮೇಶ್ ಬೇಗಾರ್ (Ramesh Begar) ನಿರ್ದೇಶನದ ‘ಜಲಪಾತ’ (Jalapata) ಚಿತ್ರಕ್ಕಾಗಿ ರಮೇಶ್ ಬೇಗಾರ್ ಬರೆದಿರುವ ‘ಎದೆಯ ದನಿಯ ಹಾಡು ಕೇಳು’ ಎಂಬ ಪರಿಸರದ ಕುರಿತಾದ ಹಾಡು (Song) ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ (Vijaya Prakash) ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾದ್ವಿನಿ ಕೊಪ್ಪ (Sadwini Koppa) ಸಂಗೀತ ನೀಡಿದ್ದಾರೆ. ಗಾಯಕಿಯಾಗಿ ಜನಪ್ರಿಯರಾಗಿರುವ ಸಾದ್ವಿನಿ, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿದ್ದಾರೆ. ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಜಲಪಾತ ನನ್ನ ಎರಡನೇ ನಿರ್ದೇಶನದ ಚಿತ್ರ. ಪರಿಸರದ ಕುರಿತು ಜಗೃತಿ ಮೂಡಿಸುವ ಹಾಡುಗಳು ಸಾಕಷ್ಟು ಬಂದಿದೆ. ಆದರೆ ಈ ಹಾಡು ಸ್ವಲ್ಪ ವಿಭಿನ್ನ. ಮೊದಲ ನುಡಿಯಲ್ಲಿ ಪರಿಸರ ನಮಗೆ ಏನೆಲ್ಲಾ ನೀಡಿದೆ ಎಂದು ಇದೆ. ಎರಡನೇ ನುಡಿಯಲ್ಲಿ ನಮ್ಮಿಂದ ಪರಿಸರ ಏನಾಗುತ್ತಿದೆ ಎಂದಿದೆ. ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಈ ಹಾಡನ್ನು ಕೇಳುವುದೆ ಸೊಗಸು. ಅಷ್ಟೇ ಚೆನ್ನಾಗಿ ಸಾದ್ವಿನಿ ಸಂಗೀತ ನೀಡಿದ್ದಾರೆ. ರಜನೀಶ್, ನಾಗಶ್ರೀ ಬೇಗಾರ್ ಈ ಚಿತ್ರದ ನಾಯಕ, ನಾಯಕಿ. ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಮಲೆನಾಡ ರಂಗಭೂಮಿ ಪ್ರತಿಭೆಗಳು ಹೆಚ್ಚಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದರು.
ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ನನ್ನ ಗುರುಗಳು ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ರವೀಂದ್ರ ತುಂಬರಮನೆ, ಪರಿಸರದ ಬಗ್ಗೆ ಅರಿವು ಮೂಡಿಸುವ ಚಿತ್ರ ನಿರ್ಮಿಸಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಮಲೆನಾಡ ಸೊಗಡಿನ ಈ ಚಿತ್ರ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು.
ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಕೆಲವು ಬಿಟ್ಸ್ ಗಳಿದೆ. ಈ ಹಾಡಿನ ಸಾಹಿತ್ಯ ನೋಡಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿ ಸೂಕ್ತವೆನಿಸಿತು. ತಮ್ಮ ಕಾರ್ಯದೊತ್ತಡದ ನಡುವೆಯೂ ಈ ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ ಎಂದರು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ. ಚಿತ್ರದ ನಾಯಕ ರಜನೀಶ್ ಹಾಗೂ ನಾಯಕಿ ನಾಗಶ್ರೀ ಬೇಗಾರ್ ಜಲಪಾತ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಟಿ. ಸಿ. ರವೀಂದ್ರ ತುಂಬರಮನೆ ನಿರ್ಮಿಸಿ, ರಮೇಶ್ ಬೇಗಾರ್ (Ramesh Begar) ರಚಿಸಿ ನಿರ್ದೇಶಿಸಿರುವ ‘ಜಲಪಾತ’ (Jalapatha) ಚಿತ್ರದಲ್ಲಿ ಪ್ರಸಿದ್ಧ , ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ (Pramod Shetty) ಒಂದು ಪರಿಪೂರ್ಣ ವಿಭಿನ್ನ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದು ಅವರ ಪಾತ್ರದ ಲುಕ್ ನ ಪೋಸ್ಟರ್ (Poster) ಅನ್ನು ಅವರ ಧರ್ಮಪತ್ನಿ ನಟಿ, ನಿರ್ಮಾಪಕಿ ಸುಪ್ರೀತಾ ಶೆಟ್ಟಿ (Supreeta Shetty) ಬಿಡುಗಡೆಗೊಳಿಸಿದರು.
ಗಂಡನ ಹೊಸ ಅವತಾರವನ್ನು ಹೆಂಡತಿ ಜನರಿಗೆ ತೋರಿಸಿದ ಅಪರೂಪದ ಆಪ್ತ ವಿದ್ಯಮಾನ ಇದಾಗಿದೆ. ಈ ಸಂದರ್ಭದಲ್ಲಿ ಸುಪ್ರೀತಾ ಶೆಟ್ಟಿ ಮಾತನಾಡಿ ಪ್ರಮೋದ್ ಮೊದಲಿನಿಂದಲೂ ವಿಭಿನ್ನ ಪಾತ್ರಗಳು ಮತ್ತು ಹೊಸಬರಿಗೆ ಪ್ರೋತ್ಸಾಹಿಸುವುದನ್ನು ಬಯಸುವವರು. ಅದರಂತೆ ರಮೇಶ್ ಬೇಗಾರ್ ಜೊತೆಗೆ ಪ್ರೀತಿಯಿಂದ 2ನೇ ಪ್ರಾಜೆಕ್ಟ್ ಮಾಡಿದ್ದಾರೆ. ರವೀಂದ್ರ ನಿರ್ಮಾಣದ ಜಲಪಾತದ ಈ ಪೋಸ್ಟರ್ ಏನೋ ವಿಭಿನ್ನತೆ ಇದೆ ಎಂಬುದನ್ನು ಬಲು ಸೊಗಸಾಗಿ ತೋರಿಸಿದೆ. ಪ್ರಮೋದ್ ಲುಕ್ ಭರ್ಜರಿಯಾಗಿದ್ದು ಆ ಪಾತ್ರ ಮತ್ತು ಸಿನಿಮಾ ನೋಡಲು ಕಾತುರಳಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಬೇಗಾರ್ ಪರಿಸರ ಕಾಳಜಿ ಪ್ರಮೋದ್ ಶೆಟ್ಟಿ ಅವರ ವೈಯಕ್ತಿಕ ಆಸಕ್ತಿಯ ವಿಷಯ ಎಂದು ಅವರ ಚಟುವಟಿಕೆಯಿಂದ ಗಮನಿಸಿ ಈ ಪಾತ್ರಕ್ಕೆ ವಿನಂತಿಸಿದೆ. ಸಿನಿಮಾದ ಉದ್ದೇಶ ಅವರನ್ನು ಇಂಪ್ರೆಸ್ಸ್ ಮಾಡಿತು. ಹಾಗಾಗಿ ಈ ಪಾತ್ರ ಒಪ್ಪಿ ಅತ್ಯುತ್ತಮ ನಿರ್ವಹಣೆ ಮಾಡಿದ್ದಾರೆ ಎಂದರು.
ನಿರ್ಮಾಪಕ ರವೀಂದ್ರ ತುಂಬರಮನೆ ಮಾತಾಡಿ, ಪರಿಸರ ರಕ್ಷಣೆ ಮತ್ತು ಅರಿವನ್ನು ಒಂದು ಫೀಲ್ ಗುಡ್ ಜಾನರ್ ನಲ್ಲಿ ಹೇಳಲು ಹೊರಟ ನಮ್ಮ ತಂಡಕ್ಕೆ ಪ್ರಮೋದ್ ಶೆಟ್ಟಿ ಒತ್ತಾಸೆಯಾಗಿ ನಿಂತಿದ್ದಾರೆ ಮಾತ್ರವಲ್ಲ ಚಿತ್ರದ ಮೌಲ್ಯ ಮತ್ತು ಅದ್ಧೂರಿತನವನ್ನು ಎತ್ತಿದ್ದಾರೆ. ಸಿನಿಮಾ ಜನರನ್ನು ಆಕರ್ಷಿಸುವಲ್ಲಿ ಪ್ರಮೋದ್ ಶೆಟ್ಟಿ ಅವರ ಈ ಪೋಸ್ಟರ್ ನಿರ್ಣಾಯಕವಾಗಿದೆ ಎಂದು ತಿಳಿಸಿದರು. ಚಿತ್ರದ ನಾಯಕ ನಟ ರಜನೀಶ್ ಎಂ ಈ ಸಂದರ್ಭ ಉಪಸ್ಥಿತರಿದ್ದರು. ಸಾದ್ವಿನಿಕೊಪ್ಪ ಸಂಗೀತ ನಿರ್ದೇಶನದ , ಶಶೀರ ಕ್ಯಾಮರಾ ಕೆಲಸದ , ಅವಿನಾಶ್ ಸಂಕಲಿಸಿರುವ ಜಲಪಾತ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ.
ಛತ್ತೀಸ್‍ಗಢ: ಇತ್ತೀಚೆಗೆ ಮಕಕ್ಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್ ಬಳಕೆಯಾಗುತ್ತಿದೆ. ಈ ಮೊಬೈಲ್ ಬಳಕೆಯನ್ನು ಮಕ್ಕಳು ಅತಿಯಾಗಿ ಮಾಡಿದರೆ ಪೋಷಕರು ಬುದ್ಧಿ ಮಾತು ಹೇಳುವುದು ಸಹಜ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಮಕ್ಕಳು ತಪ್ಪು ನಿರ್ಧಾರ ತೆಗೆದುಕೊಳ್ಳುವ ಘಟನೆ ಈ ಹಿಂದೆಯೂ ನಡೆದಿದೆ. ಇಂಥದ್ದೇ ಘಟನೆಯೊಂದು ಇದೀಗ ಛತ್ತೀಸ್‍ಗಢದಲ್ಲಿಯೂ ನಡೆದಿದೆ.
ಹೌದು. ಛತ್ತೀಸ್‍ಗಢದ ಬಸ್ತಾರ್‍ನಲ್ಲಿ ಯುವತಿಯೊಬ್ಬಳಿಗೆ ಆಕೆಯ ಪೋಷಕರು ಮೊಬೈಲ್ ಜಾಸ್ತಿ ಬಳಕೆ ಮಾಡದಂತೆ ಬುದ್ಧಿ ಮಾತು ಹೇಳಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಆಕೆ 90 ಅಡಿ ಆಳದ ಚಿತ್ರಕೋಟೆ ಜಲಪಾತಕ್ಕೆ ಧುಮುಕಿದ್ದಾಳೆ.
ಜಲಪಾತದ ಬಳಿಗೆ ಬಂದ ಬಳಿಕ ಯುವತಿ ಸ್ವಲ್ಪ ಹೊತ್ತು ಆ ಕಡೆ ಈ ಕಡೆ ಅಲೆದಾಡುತ್ತಿದ್ದಳು. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಆಕೆಯನ್ನು ಅಲ್ಲಿಂದ ರಕ್ಷಣೆ ಮಾಡಲು ಮನವಿ ಮಾಡಿದರು. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಆಕೆಗೂ ಒತ್ತಾಯಿಸಿದರು. ಆದರೆ ಅವರ ಮಾತುಗಳನ್ನು ಯುವತಿ ಕೇಳಿಸಿಕೊಳ್ಳದೇ ಒತ್ತಡಕ್ಕೆ ಒಳಗಾದವಳಂತೆ ಓಡಾಡುತ್ತಿದ್ದಳು.
ಇತ್ತ ಸ್ಥಳದಲ್ಲಿದ್ದ ಕೆಲವು ಯುವಕರು ತಮ್ಮ ಮೊಬೈಲ್ ಫೋನ್‍ಗಳಲ್ಲಿ ಇಡೀ ಘಟನೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕೂಡಲೇ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಈ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.
ವೈರಲ್ ವೀಡಿಯೋದಲ್ಲಿ ಯುವತಿ ಜಲಪಾತದ ತುದಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನಿಂತಿರುವುದನ್ನು ಕಾಣಬಹುದಾಗಿದೆ. ಕ್ಯಾಮೆರಾ ಚಲಿಸುತ್ತಿದ್ದಂತೆ, ಇಂದ್ರಾವತಿ ನದಿಯ ಬಸ್ತಾರ್‍ನಲ್ಲಿರುವ ಜಗದಲ್‍ಪುರದಿಂದ 38 ಕಿಮೀ ದೂರದಲ್ಲಿರುವ ಚಿತ್ರಕೋಟೆ ಜಲಪಾತದ ಎತ್ತರವನ್ನು ವೀಡಿಯೊ ತೋರಿಸುತ್ತದೆ. ಇದನ್ನು ಸ್ಥಳೀಯರು ‘ಮಿನಿ ನಯಾಗರಾ ಫಾಲ್ಸ್’ ಎಂದು ಕರೆಯುತ್ತಾರೆ. ಯುವತಿ ಜಿಗಿದ ಬಳಿಕ ನೀರಿನಲ್ಲಿ ತೇಲುತ್ತಿದ್ದಳು. ಕೂಡಲೇ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದು, ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಾಲಕಿಯನ್ನು ಆಕೆಯ ಪೋಷಕರು ಗದರಿಸಿದ್ದಾರೆ. ಈ ಕಾರಣಕ್ಕೆ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಯುವತಿಯ ರಕ್ಷಣೆಯ ಬಳಿಕ ಆಕೆಯ ಮನೆಯವರಿಗೆ ಒಪ್ಪಿಸಲಾಯಿತು.
ಚಿತ್ರಕೋಟೆ ಜಲಪಾತವು ತನ್ನ ಮೋಡಿಮಾಡುವ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಮಳೆಗಾಲದಲ್ಲಿ ಪ್ರತಿದಿನ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದಾಗ್ಯೂ, ಪ್ರವಾಸಿಗರಿಗೆ ಯಾವುದೇ ಗಮನಾರ್ಹ ಸುರಕ್ಷತಾ ಕ್ರಮಗಳಿಲ್ಲ. ದುರದೃಷ್ಟವಶಾತ್, ಈ ಹಿಂದೆ ಹಲವಾರು ಅಪಘಾತಗಳು ಇಲ್ಲಿ ಸಂಭವಿಸಿವೆ.
ವೈನಾಡು ಮತ್ತು ಮಲೆನಾಡಿನ ಪ್ರದೇಶದಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು, ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆ ಕಾವೇರಿ ನದಿಗೆ ಕಳೆದ ಆರು ದಿನಗಳಿಂದಲೂ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯ ಬೀಡುತ್ತಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.
ನದಿಯಲ್ಲಿ ನೀರು ಹೆಚ್ಚಾಗಿರುವುದನ್ನು ತಿಳಿದ ಪ್ರವಾಸಿಗರು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಲೂ ಒಂದು ವಾರದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ಬೆಳವಣಿಗೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಜು.12 ರಂದು ಭರಚುಕ್ಕಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ನದಿಯ ಬಳಿ ತೆರಳದಂತೆ ಮೇಲಿಂದ ಮೇಲೆ ಆದೇಶದ ಸುತ್ತೊಲೆ ಹೊರಡಿಸುತ್ತಿದೆ.
ವಿಪರ್ಯಾಸವೆಂದರೆ ಪ್ರವಾಸಿಗರು ಕಾವೇರಿ ನದಿಯಲ್ಲಿ ಇಳಿದು ಮನಬಂದಂತೆ ಆಟವಾಡುವುದು ಮತ್ತು ಈಜುವ ಹುಚ್ಚಾಟವನ್ನು ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ತಂಡೋಪ ತಂಡವಾಗಿ ಬಂದು ನದಿಗಿಳಿಯುತ್ತಿದ್ದಾರೆ. ಭರಚುಕ್ಕಿ ಪ್ರವೇಶಕ್ಕೆ ನಿರ್ಬಂಧವಿರುವುದ್ದರಿಂದ ವೆಸ್ಲಿ ಸೇತುವೆಯಿಂದ ಬಲಗಡೆಗೆ ತೆರಳುವ ಬೂದಗಟ್ಟದೊಡ್ಡಿ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿ ಭರಚುಕ್ಕಿ ಜಲಪಾತ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ.
ಎಚ್ಚರ ತಪ್ಪಿದ್ರೆ ಶಿವನ ಪಾದ
ಭರಚುಕ್ಕಿ ವೀಕ್ಷಣೆಗೆ ಜಲಪಾತದ ತುದಿಗೆ ತೆರಳುತ್ತಿರುವ ಯುವಕ, ಯುವತಿಯರ ಗುಂಪು ತುತ್ತತುದಿಯಲ್ಲಿ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸ ಪ್ರಯತ್ನದಲ್ಲಿ ಮುಳುಗಿದ್ದಾರೆ. ಯುವಕ, ಯುವತಿಯರು, ವಯೋವೃದ್ಧರು, ಮಹಿಳೆಯರು, ಸಣ್ಣ-ಸಣ್ಣ ಮಕ್ಕಳು ಸೇರಿ ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಈ ಚುನಾವಣೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಿರ್ಧರಿಸುತ್ತೆ: ಯಶವಂತ್ ಸಿನ್ಹಾ
ಇವೆಲ್ಲವನ್ನು ನೋಡಿದ ಪ್ರಜ್ಞಾವಂತರು ಎಲ್ಲಿಂದಲು ಇಲ್ಲಿನ ನದಿ, ಜಲಪಾತ ವೀಕ್ಷಣೆಗೆ ಬಂದು ಸಾವು-ನೋವುಗಳು ಸಂಭವಿಸಲು ಕಾರಣವಾಗುತ್ತಿರುವ ಪ್ರವಾಸಿಗರಿಗೆ ಕಡಿವಾಣ ಹಾಕಬೇಕು. ಅಕ್ರಮವಾಗಿ ತೆರಳಿ ಜಲಪಾತ ವೀಕ್ಷಣೆ ಮಾಡುವ ದಾರಿಯನ್ನು ಬಂದ್ ಮಾಡಿ ಪೊಲೀಸರ ನಿಯೋಜನೆ ಮಾಡಬೇಕು. ನದಿಯ ಬಳಿ ಯಾರು ಸುಳಿಯದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ಇಳಿ ಸಂಜೆಯಲ್ಲಿ ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋಗಿ ಯುವಕನೋರ್ವ ಕಾಲು ಜಾರಿ ಬಿದ್ದಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಆಲೇಖಾನ್ ಜಲಪಾತದಲ್ಲಿ ನಡೆದಿದೆ.
ಸಂಜೆಯಾದ್ದರಿಂದ ಸೆಲ್ಫಿ ತೆಗೆಯುವಾಗ ಕಾಲು ಜಾರಿ ಬಿದ್ದ ಯುವಕ ಸುಮಾರು 80 ಅಡಿ ಆಳಕ್ಕೆ ಬಿದ್ದಿದ್ದಾನೆ. ನೀರಿನ ಜೊತೆಯೇ ಬಿದ್ದಿದ್ದರಿಂದ ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾನೆ. 80 ಅಡಿ ಆಳದಿಂದ ಬಿದ್ದ ರಭಸಕ್ಕೆ ಯುವಕನ ಕೈ-ಕಾಲು ಮುರಿದು ಹೋಗಿದ್ದು, ಗಂಭೀರ ಗಾಯದಿಂದ ತೀವ್ರ ಅಸ್ವಸ್ತನಾಗಿದ್ದ ಯುವಕನನ್ನ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಯಾಳುವನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಕಂಪನಿಯೊಂದರ ಟವರ್ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿದ್ದ ತುಮಕೂರು ಜಿಲ್ಲೆ ಪಾವಗಡ ಮೂಲದ ಮೂವರು ಯುವಕರಿದ್ದರು. ಸಂಜೆ 7 ಗಂಟೆ ಸುಮಾರಿಗೆ ಚಾರ್ಮಾಡಿ ಘಾಟಿಯ ಆಲೇಕಾನ್ ಜಲಪಾತ ಬಂದ ವೇಳೆ ಸೆಲ್ಫಿ ತೆಗೆಯುವ ಭರದಲ್ಲಿ ಅಭಿಷೇಕ್ ಕಾಲು ಜಾರಿ ಜಲಪಾತದ ಪ್ರಪಾತಕ್ಕೆ ಬಿದ್ದಿದ್ದಾನೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ RSS ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ: ಬೊಮ್ಮಾಯಿ
ವಿಷಯ ತಿಳಿಯುತ್ತಿದ್ದಂತೆ ಬಣಕಲ್ ಠಾಣೆ ಪೊಲೀಸರು ಹಾಗೂ ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಜಲಪಾತದ ಪ್ರಪಾತಕ್ಕೆ ಬಿದ್ದು ಕೈ-ಕಾಲು ಮುರಿದುಕೊಂಡಿದ್ದ ಕೂಡಲೇ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಲೇಖಾನ್ ಜಲಪಾತದ ಬಳಿ ಈ ಹಿಂದೆ ಕೂಡ ಹಲವರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕೈ-ಕಾಲು ಮುರಿದುಕೊಂಡಿದ್ದಾರೆ. ಜಲಪಾತದ ಬಳಿ ಎಚ್ಚರಿಕೆಯ ಸೂಚನಾ ಫಲಕವನ್ನು ಅಳವಡಿಸಲಾಗಿತ್ತು. ಆದರೆ 2019ರಲ್ಲಿ ಸುರಿದ ಮಳೆಗೆ ಸೂಚನಾ ಫಲಕ ಕೊಚ್ಚಿ ಹೋಗಿದ್ದು ಸೂಚನಾ ಫಲಕ ಇಲ್ಲದಿರುವುದಿಂದ ಜಲಪಾತಕ್ಕೆ ಪ್ರವಾಸಿಗರು ಇಳಿಯುವುದು ಹೆಚ್ಚಾಗಿದೆ. ಜಲಪಾತದ ಬಳಿ ಸಂಬಂಧಪಟ್ಟ ಅಧಿಕಾರಿಗಳು ಸೂಚನಾ ಫಲಕ ಅಳವಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ
ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತಗಳು ಧುಮ್ಮುಕಿ ಹರಿಯುತ್ತಿದೆ.
ಕೊಡಗು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಿನ ವನರಾಶಿ. ಭೂಮಿಗೆ ಮುತ್ತಿಡುತ್ತಿರುವ ಮಂಜು, ಸದಾ ನೀರಿನಿಂದ ಭೋರ್ಗರೆಯುವ ಜಲಪಾತಗಳು. ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಸಾಕು, ಗಿರಿಕಾನನದ ನಡುವಿನಿಂದ ಧುಮ್ಮಿಕ್ಕುವ ಜಲಧಾರೆಗಳ ವಯ್ಯಾರವನ್ನು ನೋಡುವುದೇ ಚೆಂದ, ನೈಜ ಸೌಂದರ್ಯದ ಕೊಡಗಿನಲ್ಲಿಗ ಜಲಸುಂದರಿಯರದ್ದೇ ದರ್ಬಾರ್ ಆಗಿದೆ.
ಕೊಡಗಿನಲ್ಲಿ ಕಳೆದ ಎರಡು, ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗಿನ ಜಲಪಾತಗಳು ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಡಿಕೇರಿಯ ಚೆಟ್ಟಳ್ಳಿ ರಸ್ತೆ ಬದಿಯಲ್ಲಿ ಎತ್ತರದಿಂದ ದುಮ್ಮಿಕ್ಕುತ್ತಿರುವ ಅಭ್ಯಾಲ ಜಲಪಾತ ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಸೆಳೆಯುತ್ತಿದೆ. ಈ ಮಾರ್ಗವಾಗಿ ತೆರಳುತ್ತಿರುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದು ಮುಂದೆ ಸಾಗುತ್ತಿದ್ದಾರೆ.
ಜಿಲ್ಲೆಯ ಇತರ ಭಾಗಗಳ ಜಲಪಾತಗಳು ಕೂಡ ಜಲರಾಶಿಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ಮಾನ್ಸೂನ್ ಕಾಲದ ಪ್ರವಾಸಿಗರಿಗೆ ಇವುಗಳೇ ಆಕರ್ಷಣೀಯ ಕೇಂದ್ರಗಳಾಗಿವೆ. ಪ್ರವಾಸಿಗರು ಸ್ಥಳೀಯರು ಇದೀಗ ಜಲಪಾತದತ್ತ ಮುಖ ಮಾಡುತ್ತಿದ್ದಾರೆ. ಇದನ್ನೂ ಓದಿ:ಮಳೆಯ ನಡುವೆಯೂ ಕೆ.ಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಮೋಜು ಮಸ್ತಿ ಮಾಡುತ್ತಿರುವುದ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದೊಂದು ವಾರದಿಂದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಚಾರ್ಮಾಡಿಯ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಭಾರೀ ಮಳೆಯಿಂದ ಚಾರ್ಮಾಡಿ ರಸ್ತೆಯೂದ್ಧಕ್ಕೂ ನೂರಾರು ಜಲಪಾತಗಳು ಸೃಷ್ಠಿಯಾಗಿವೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಹಾಗೂ ದಾರಿ ಹೊಕ್ಕರು ಪ್ರಕೃತಿಯ ಸೌಂದರ್ಯವನ್ನ ದೂರದಲ್ಲಿ ನಿಂತು ಸವಿಯದೆ ಬಂಡೆಗಳ ಮೇಲೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ನಿರಂತರ ಮಳೆಯಿಂದ ಇಲ್ಲಿನ ಬಂಡೆಗಳು ನಿರಂತರವಾಗಿ ನೀರು ಹರಿದು, ಪಾಚಿ ಬೆಳೆದು ತೀವ್ರವಾಗಿ ಜಾರುತ್ತಿದ್ದು, ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜೀವ ಹೋಗುವಂತಹಾ ಸನ್ನಿವೇಶ ಎದುರಾಗಬಹುದು. ಈಗಾಗಲೇ ಇದೇ ಜಾಗದಲ್ಲಿ ಬಂಡೆ ಮೇಲೆ ಹತ್ತಿ ಬಿದ್ದು ಕೆಲವರು ಸಾವನ್ನಪ್ಪಿದ್ದಾರೆ. ಕೈ-ಕಾಲು ಮುರಿದುಕೊಂಡವರು ಇದ್ದಾರೆ. ಆದರೂ ಜನಸಾಮಾನ್ಯರು, ಪ್ರವಾಸಿಗರ ಬುದ್ಧಿ ಕಲಿತಿಲ್ಲ. ಜಿಲ್ಲಾಡಳಿತ ಪ್ರವಾಸಿಗರು ಬಂಡೆ ಹತ್ತಿ ಮೋಜು-ಮಸ್ತಿ ಮಾಡೋದಕ್ಕೆ ಸಂಪೂರ್ಣ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರವಾಸಿಗರು ಬಂಡೆಗಳ ಮೇಲೆ ಹತ್ತಬಾರದು ಎಂದು ಸರ್ಕಾರದ ಆದೇಶವಿದೆ. ಆದರೆ, ಸರ್ಕಾರದ ಆದೇಶವನ್ನ ಇಲ್ಲಿ ಪಾಲಿಸೋರು ಯಾರು ಇಲ್ಲ. ಸ್ಥಳೀಯರು ಅಪಾಯದ ಸ್ಥಳ ಹಾಗೂ ಪ್ರವಾಸಿಗರು ಬಂಡೆ ಹತ್ತುವ ಜಾಗದಲ್ಲಿ ನಾಮಫಲಕ ಹಾಕಬೇಕಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರೋದು ಪ್ರವಾಸಿಗರ ಹುಚ್ಚಾಟಕ್ಕೆ ಕಾರಣವಾಗಿದೆ. ಪೊಲೀಸರು ಗಸ್ತು ತಿರುಗದಿರೋದು ಕೂಡ ಪ್ರವಾಸಿಗರ ಬೇಜಾವಾಬ್ದಾರಿಗೆ ಕಾರಣವಾಗಿದೆ. ಸ್ಥಳೀಯರು ಹಲವಾರು ಬಾರಿ ಅರಣ್ಯ ಹಾಗೂ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದೊಂದು ದಿನ ದೊಡ್ಡ ಅನಾಹುತವಾಗುವ ಮೊದಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.