ಬರ್ಲಿನ್: ನಾಯಿಯ ವಿಷಯಕ್ಕೆ ಪ್ರಾರಂಭವಾದ ಜಗಳ ಯುವತಿಯನ್ನು ಮಹಿಳೆ ಕಚ್ಚುವುದರಲ್ಲಿ ಮುಕ್ತಾಯವಾದ ವಿಲಕ್ಷಣ ಘಟನೆ ಜರ್ಮನ್ ನಲ್ಲಿ ನಡೆದಿದೆ.
ಜರ್ಮನಿಯ ಥುರಿಂಗಿಯಾ ರಾಜ್ಯದಲ್ಲಿ 51 ವರ್ಷದ ಮಹಿಳೆ, ತನ್ನ ನಾಯಿಯನ್ನು ಹೊಡೆಯುವುದನ್ನು 27 ವರ್ಷದ ಯುವತಿ ನೋಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಯುವತಿ ಮಹಿಳೆಯನ್ನು ಬೈಯಲು ಮುಂದಾಗುತ್ತಾಳೆ. ಈ ವೇಳೆ ಮಹಿಳೆ, ನೀವು ನಾಯಿಯನ್ನು ಸರಿಯಾಗಿ ಬೆಳೆಸಿಲ್ಲ ಎಂದು ಯುವತಿ ಜೊತೆ ಜಗಳವಾಡುತ್ತಾಳೆ. ಇದನ್ನೂ ಓದಿ: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರತನ್ ಟಾಟಾ
ಇದರಿಂದ ರೊಚ್ಚಿಗೆದ್ದ ಯುವತಿ ನನ್ನ ನಾಯಿಗೆ ಹೊಡೆಯುತ್ತೀಯಾ ಎಂದು ಮಹಿಳೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಮಹಿಳೆಯು ಯುವತಿಯನ್ನು ಕಚ್ಚಿ ಗಾಯಗೊಳಿಸಿದ್ದಾಳೆ. ಆದರೆ ನಾಯಿಗಳು ಮಾತ್ರ ಇವರಿಬ್ಬರ ಜಗಳವನ್ನು ನೋಡುತ್ತಿದ್ದವು ಎಂದು ಪೊಲೀಸರಿಗೆ ಸ್ಥಳೀಯರು ತಿಳಿಸಿದರು.
ಬರ್ಲಿನ್: ಒಲಿಂಪಿಕ್ಸ್ ಮುಗಿದು, ಪ್ಯಾರಾ ಒಲಿಂಪಿಕ್ಸ್ ಕೂಡ ಮುಗಿದಿರುವ ಈ ವೇಳೆ ಗಡ್ಡಕ್ಕೂ ಒಲಿಂಪಿಕ್ಸ್ ಸ್ಪರ್ಧೆಯನ್ನು ಜರ್ಮನಿಯಲ್ಲಿ ಮಾಡಲಾಗಿದೆ.
ಜರ್ಮನಿಯಲ್ಲಿ ಶನಿವಾರ ಬಿಯರ್ಡ್ ಒಲಿಂಪಿಕ್ಸ್ ನಡೆದಿದ್ದು, ಇದಕ್ಕೆ ಸ್ಪರ್ಧೆ ಮಾಡಲು ಗಡ್ಡ ಮತ್ತು ಮೀಸೆಯನ್ನು ಹೊಂದಿದ ಸುಮಾರು 100 ಪುರುಷರು ಭಾಗಿಯಾಗಿದ್ದರು. ಇವರಲ್ಲಿ ಯಾರು ಉತ್ತಮ ಮೀಸೆ ಹೊಂದಿರುತ್ತಾರೆ ಅವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತೆ. ಬಿಯರ್ಡ್ ಒಲಿಂಪಿಕ್ಸ್ ಮತ್ತು ಜರ್ಮನ್ ಬಿಯರ್ಡ್ ಚಾಂಪಿಯನ್‍ಶಿಪ್‍ಗಳಲ್ಲಿ ಭಾಗವಹಿಸಲು ನೆದರ್‍ಲ್ಯಾಂಡ್ಸ್, ಆಸ್ಟ್ರಿಯಾ, ಇಟಲಿ, ಸ್ವಿಟ್ಜರ್‍ಲ್ಯಾಂಡ್, ಇಸ್ರೇಲ್ ಹಾಗೂ ಜರ್ಮನಿಯಿಂದ ಬಂದಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 160 ಬಡವರ ಮನೆಗಳ ನೆಲಸಮಕ್ಕೆ ನೋಟಿಸ್ – ಬಲಾಢ್ಯರಿಗೆ ಯಾಕಿಲ್ಲ ನೋಟಿಸ್?
ಈ ಬಿಯರ್ಡ್ ಒಲಿಂಪಿಕ್ಸ್ ಅನ್ನು ಜರ್ಮನಿಯ ಪುಲ್‍ಮ್ಯಾನ್ ಸಿಟಿಯ ವೆಸ್ಟರ್ನ್ ಥೀಮ್ ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಡ್ಡವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಅದಕ್ಕೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಈಸ್ಟ್ ಬವೇರಿಯನ್ ಬಿಯರ್ಡ್ ಮತ್ತು ಮೀಸೆ ಕ್ಲಬ್‍ನ ಅಧ್ಯಕ್ಷ ಕ್ರಿಶ್ಚಿಯನ್ ಫೀಚ್ಟ್ ಹೇಳಿದರು.
7 ಜನ ತೀರ್ಪುಗಾರರು ಗಡ್ಡ, ಮೀಸೆಯ ಉದ್ದ ಲೆಕ್ಕಾಚಾರ ಮಾಡಿ ಫಲಿತಾಂಶ ಪ್ರಕಟಿಸುತ್ತಾರೆ ಎಂದು ವಿವರಿಸಿದರು. ಜರ್ಮನ್ ಬಿಯರ್ಡ್ ಒಲಿಂಪಿಕ್ಸ್ ಚಾಂಪಿಯನ್‍ಶಿಪ್‍ಗಾಗಿ ಸ್ಪರ್ಧಿಸುವವರು ಜರ್ಮನಿಯ ನಿವಾಸಿಗಳಾಗಿರಬೇಕು ಅಥವಾ ಕ್ಲಬ್‍ನ ಸದಸ್ಯರಾಗಿರಬೇಕಾಗುತ್ತದೆ. ಇದನ್ನೂ ಓದಿ: ಜನರನ್ನು ನೇರವಾಗಿ ಮಾತನಾಡಿಸಬೇಕು ಎಂದು ಬುಲೆಟ್ ಪ್ರೂಫ್ ಶೀಲ್ಡ್ ತೆಗೆದ ಶಾ
– ತಂದೆ, ಗಾರ್ಡ್ ಮೇಲೆ ಹಲ್ಲೆ ನಡೆಸಿದ್ರು – ಜಗತ್ತಿಗೆ ಇವರ ಅಸಲಿ ಮುಖ ಅನಾವರಣ ಮಾಡ್ತೀನಿ
ಕಾಬೂಲ್: ತಾಲಿಬಾನಿಗಳು ನನ್ನನ್ನು ಹುಡುಕುತ್ತಾ ನಮ್ಮ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ನನ್ನ ತಂದೆ ಮತ್ತು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಹೋಗಿದ್ದಾರೆ ಎಂದು ಅಫ್ಘಾನಿಸ್ತನದ ಮೊದಲ ಮಹಿಳಾ ಮೇಯರ್ ಜರೀಫಾ ಗಫ್ರಿ ಹೇಳಿದ್ದಾರೆ. ಸದ್ಯ ಜರೀಫಾ ಗಫರ್ ಜರ್ಮನಿಯಲ್ಲಿ ಸುರಕ್ಷಿತವಾಗಿದ್ದಾರೆ.
ಅಫ್ಘಾನಿಸ್ತಾನ ತಾಲಿಬಾನಿಗಳ ಕೈ ವಶವಾಗುತ್ತಿದ್ದ ಅಲ್ಲಿಯ ಮಕ್ಕಳು ಮತ್ತು ಮಹಿಳೆಯರ ಮುಂದಿನ ಭವಿಷ್ಯ ಏನು ಎಂಬುದರ ಪ್ರಶ್ನೆಗೆ ಉತ್ತರ ಸಿಗದಂತಾಗಿದೆ. ಇತ್ತ ತಾಲಿಬಾನಿಗಳು ಸಾಮಾಜಿಕ ಸೇವೆ ಮತ್ತು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಮಹಿಳೆಯರ ಮನೆಗಳ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ವರದಿಯಾಗ್ತಿದೆ.
20 ವರ್ಷ ಪಡೆದುಕೊಂಡಿದ್ದ ಸ್ವಾತಂತ್ರ್ಯ ಇಲ್ಲ:
ನ್ಯೂಸ್ ಏಜೆನ್ಸಿಗೆ ಸಂದರ್ಶನ ನೀಡಿರುವ ಜರೀಫಾ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಆಶ್ರಯ ನೀಡಿರುವ ಜರ್ಮನಿ ಸರ್ಕಾರಕ್ಕೂ ಧನ್ಯವಾದ ಸಲ್ಲಿಸಿದ್ದಾರೆ. ಅಫ್ಘಾನಿಸ್ತಾನದ ಜನರನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಅವರು ಯಾವುದಕ್ಕೂ ಹೆದರಲ್ಲ. ತಾಲಿಬಾನಿ ಉಗ್ರರು ಎಷ್ಟೇ ಜನರನ್ನು ಕೊಂದರೂ ನಮ್ಮ ಹೋರಾಟ ನಿಲ್ಲಲ್ಲ. ಕಳೆದ 20 ವರ್ಷಗಳಲ್ಲಿ ನಾವು ಪಡೆದುಕೊಂಡಿದ್ದು ಎಲ್ಲವೂ ನಮ್ಮೊಂದಿಗೆ ಇಲ್ಲ. ನನ್ನ ದೇಶದ ಮಣ್ಣು ಮಾತ್ರ ಬಳಿಯಲ್ಲಿದೆ ಎಂದು ಭಾವುಕರಾಗಿದ್ದಾರೆ.
ಪಾಕ್ ವಿರುದ್ಧ ಆಕ್ರೋಶ:
ಇಂದಿನ ಅಫ್ಘಾನಿಸ್ತಾನದ ಸ್ಥಿತಿಗೆ ಜನರು, ರಾಜಕೀಯ ಮುಖಂಡರು ಮತ್ತು ನಮ್ಮ ವಿಶ್ವವೇ ಕಾರಣ. ಸ್ಥಳೀಯ ಜನರು ಒಮ್ಮೆಯೂ ಒಗ್ಗಟ್ಟಾಗಿ ಉಗ್ರರ ವಿರುದ್ಧ ಧ್ವನಿ ಎತ್ತುವ ಪ್ರಯತ್ನ ಮಾಡಲಿಲ್ಲ. ಪಾಕಿಸ್ತಾನ ಏನು ಮಾಡಿದೆ ಅನ್ನೋ ವಿಷಯ ಅಫ್ಘಾನಿಸ್ತಾನದ ಪ್ರತಿ ಮಗುವಿಗೆ ಗೊತ್ತಿದೆ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು
ಅಫ್ಘಾನಿಸ್ತಾನ ನಮ್ಮದೇ:
ಇದು ನಮ್ಮ ದೇಶ, ಎಂದಿಗೂ ನಮ್ಮದೇ ಆಗಿರುತ್ತೆ. ಇಂದು ನನ್ನಂತಹ ಮಹಿಳೆಯರು ಅಫ್ಘಾನಿಸ್ತಾದಲ್ಲಿರುವ ಪರಿಸ್ಥಿತಿ ಇಲ್ಲ. ಬೇಟೆಗೂ ಮುನ್ನ ಹುಲಿ ಎರಡು ಹೆಜ್ಜೆ ಹಿಂದೆ ಹಾಕೋದು ಭಯದಿಂದಲ್ಲ. ತನ್ನ ಪೂರ್ಣ ಶಕ್ತಿಯನ್ನು ಪ್ರಯೋಗಿಸಲು ಎಂಬುದನ್ನ ಅಲ್ಲಿದ್ದವರು ಅರ್ಥ ಮಾಡಿಕೊಳ್ಳಬೇಕು. ಜರ್ಮನಿಯಲ್ಲಿರು ನಾವು ಶೇ.99 ಅಫ್ಘನ್ನರು ಮತ್ತು ಮಹಿಳೆಯರ ಧ್ವನಿಯಾಗಿರುತ್ತೇನೆ. ವಿಶ್ವದ ಮುಂದೆ ತಾಲಿಬಾನಿಗಳನ್ನು ಅನಾವರಣಗೊಳಿಸುವ ಕೆಲಸ ಮಾಡಲಿದ್ದೇನೆ. ಇಲ್ಲಿಂದಲೇ ನನ್ನ ಮುಂದಿನ ಕೆಲಸಗಳನ್ನು ಆರಂಭಿಸಲಿದು, ಅವರ ವಿರುದ್ಧ ಧ್ವನಿ ಎತ್ತುತ್ತೇನೆ ಎಂದು ಹೇಳಿದ್ದಾರೆ. ಇಂದು ನಾವು ಎರಡು ಹೆಜ್ಜೆ ಹಿಂದೆ ಬಂದಿರೋದು ಇದೇ ಕಾರಣ ಎಂದು ಹೇಳುವ ತಾಲಿಬಾನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!
ಕಳೆದ ವಾರ ಇಸ್ತಾಂಬುಲ್ ಗೆ ತೆರಳಿದ್ದ ಜರೀಫಾ ಈಗ ಜರ್ಮನಿಯಲ್ಲಿದ್ದಾರೆ. ಸದ್ಯ ಜರೀಫಾ ಜೊತೆ ಅವರ ಕುಟುಂಬ ಸದಸ್ಯರಿದ್ದಾರೆ. ತಾವು ನಿರಾಶ್ರಿತಳಾಗಿ ಜರ್ಮನಿಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇತ್ತ ಜರ್ಮನಿಯಲ್ಲಿ ಅಫ್ಘನ್ನರಿಗೆ ಆಶ್ರಯ ನೀಡುವ ಕುರಿತಿ ಹಲವು ಸಮಸ್ಯೆಗಳು ಎದುರಾಗಿವೆ. ಇದನ್ನೂ ಓದಿ:ಕಾಬೂಲ್‍ನಿಂದ ಉಕ್ರೇನ್ ವಿಮಾನ ಹೈಜಾಕ್
ಟೋಕಿಯೋ: ಭಾರತದ ಪುರುಷರ ಹಾಕಿ ತಂಡ 41 ವರ್ಷದ ಬಳಿಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದುಕೊಂಡಿದೆ. ಜರ್ಮನಿ ತಂಡವನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದೆ.
1980ರ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ಭಾರತ ಪದಕ ಪಡೆದುಕೊಂಡಿತ್ತು. ಅಂದು ವಾಸುದೇವನ್ ಭಾಸ್ಕರ್ ನಾಯಕತ್ವದಲ್ಲಿ ಆಡಿದ್ದ ಟೀಂ ಇಂಡಿಯಾ ಚಿನ್ನಕ್ಕೆ ಮುತ್ತಿಕ್ಕಿತ್ತು. ಇಂದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.
ಎರಡನೇ ಕ್ವಾರ್ಟರ್ ನಲ್ಲಿ 3-1 ಹಿನ್ನಡೆಯಲ್ಲಿದ್ದ ಆಕ್ರಮಣಕಾರಿ ಗೋಲ್ ಗಳ ಮೂಲಕ ಆಟದ ಗತಿಯನ್ನು ಬದಲಿಸಿತು. ಸತತ 4 ಗೋಲ್ ಮಾಡುವ ಮೂಲಕ ಜರ್ಮನಿ ತಂಡವನ್ನು ಒತ್ತಡದಲ್ಲಿ ಸಿಲುಕುವಂತೆ ಮಾಡಿತು. ಭಾರತದ ಸಿಮ್ರನ್‍ಜಿತ್ ಸಿಂಗ್ 17ನೇ, 34ನೇ ಮತ್ತು ಹಾರ್ದಿಕ್ ಸಿಂಗ್ 27 ಹಾಗೂ ಹರ್ಮನ್‍ಪ್ರೀತ್ ಸಿಂಗ್ 29ನೇ, ರೂಪಿಂದರ್ ಸಿಂಗ್ 31ನೇ ನಿಮಿಷದಲ್ಲಿ ಗೋಲ್ ದಾಖಲಿಸಿದರು.
ಇನ್ನು ಮೂರನೇ ಕ್ವಾರ್ಟರ್ ನಲ್ಲಿ ಅರ್ಧ ಸಮಯದ ಅಂತ್ಯಕ್ಕೆ 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಲಾಭ ಪಡೆದ ರವೀಂದ್ರ ಪಾಲ್ ಗೋಲ್ ಮಾಡಿ 4-3ರ ಮುನ್ನಡೆ ತಂದರು. ಇದಾದ ಮೂರು ನಿಮಿಷದ ಬಳಿಕ ಸಿಮ್ರನ್‍ಜಿತ್ ಗೋಲ್ ಮಾಡಿ 5-3ರ ಮುನ್ನಡೆ ಕಾಯ್ದುಕೊಂಡರು.
ಬರ್ಲಿನ್: ವಿಶ್ವದಲ್ಲೇ ಅತ್ಯಂತ ಚಿಕ್ಕ ಊಸರವಳ್ಳಿ ಪತ್ತೆಯಾಗಿದೆ. ಮಾನವನ ಬೆರಳ ತುದಿಯಲ್ಲಿ ಕೂರುವಷ್ಟು ಚಿಕ್ಕದಾದ ಹೊಸ ಪ್ರಭೇದದ ಗೋಸುಂಬೆ (ಊಸರವಳ್ಳಿ)ಯನ್ನು ಮಡಗಾಸ್ಕರ್ ಮತ್ತು ಜರ್ಮನಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ವಿಶ್ವದ ಅತಿ ಚಿಕ್ಕದಾದ ಸರೀಸೃಪಗಳಿಗೆ ಸ್ಪರ್ಧೆ ನೀಡುವಂತಿದೆ ಊಸರವಳ್ಳಿಯಾಗಿದೆ. ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಹೊಸ ಪ್ರಬೇಧವನ್ನು ವರ್ಗೀಕರಿಸಿ, ಅದಕ್ಕೆ ಬ್ರುಕೇಶಿಯಾ ನಾನಾ ಎಂದು ಹೆಸರಿಟ್ಟಿದ್ದು, ಈ ಊಸರವಳ್ಳಿ ಫೋಟೋ ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಜ್ಞಾನಿ ಫ್ರಾಂಕ್ ಗ್ಲಾವ್ ಹೇಳುವ ಪ್ರಕಾರ ಗಂಡು ಮಾದರಿಯ ಹೊಸ ಪ್ರಭೇದದ ದೇಹವು ಕೇವಲ 13.5 ಮಿಲಿಮೀಟರ್ ಉದ್ದವಿದೆ (1/2 ಇಂಚಿಗಿಂತ ಸ್ವಲ್ಪ ಹೆಚ್ಚು) ಇದೆ. ಈ ಹಿಂದೆ ಪತ್ತೆಯಾಗಿ ದಾಖಲೆಯನ್ನು ಸೃಷ್ಟಿಸಿದ್ದ, ಬ್ರೂಕೆಸಿಯಾ ಕುಟುಂಬದ ಮತ್ತೊಂದು ತಳಿಯ ಅಳತೆಗಿಂತ ಇದು ಕನಿಷ್ಠ 1.5 ಮಿ.ಮೀ ಚಿಕ್ಕದಾಗಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿನ ಮ್ಯೂಸಿಕ್‍ನಲ್ಲಿರುವ ಬವೇರಿಯನ್ ರಾಜ್ಯ ಪ್ರಾಣಿಶಾಸ್ತ್ರ ಸಂಗ್ರಹಾಲಯದ ಸರೀಸೃಪಗಳ ತಜ್ಞ ಫ್ರಾಂಕ್ ಗ್ಲಾವ್, 2012 ರಲ್ಲಿ ಸ್ಥಳೀಯ ಮಾರ್ಗದರ್ಶಿಯೊಬ್ಬ ಪರ್ವತದ ಪಕ್ಕದಲ್ಲಿ ಚಿಕ್ಕದಾದ ಗಂಡು ಮತ್ತು ಸ್ವಲ್ಪ ದೊಡ್ಡದಾದ ಹೆಣ್ಣು ಜಾತಿಯ ಗೋಸುಂಬೆಯನ್ನು ಪತ್ತೆ ಮಾಡಿದ್ದರು. ಇಂಥ ಚಿಕ್ಕದಾದ ಗೋಸುಂಬೆ ಪ್ರಭೇದಗಳನ್ನು ಹುಡುಕಬೇಕೆಂದರೆ, ನಿಮ್ಮ ಮೊಣಕಾಲುಗಳನ್ನು ನೆಲಕ್ಕೆ ಒತ್ತಿ ಕುಳಿತು, ಸಣ್ಣ ಕಣ್ಣುಗಳನ್ನು ಮಾಡಿಕೊಂಡು ಅತ್ಯಂತ ಸೂಕ್ಷ್ಮವಾಗಿ ಹುಡುಕಬೇಕು. ಅವು ಅಷ್ಟು ಸಣ್ಣದಾದ ಪ್ರಭೇದಗಳು ಎಂದು ಫ್ರಾಂಕ್ ತಿಳಿಸಿದ್ದಾರೆ.
ಬರ್ಲಿನ್/ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮೆರ್ಕೆಲ್ ದೇಶದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡುವಂತೆ ಬುಧವಾರ ಆದೇಶ ಹೊರಡಿಸಿದ್ದಾರೆ. ಚಳಿಗಾಲದಲ್ಲಿ ಕೊರೊನಾ ವೈರಸ್ ಇನ್‍ಫೆಕ್ಷನ್ ಅಥವಾ ಸೋಂಕು ಹರಡುವಿಕೆ ವೇಗ ಪಡೆದುಕೊಳ್ಳುವ ಆತಂಕದಿಂದ ಸರ್ಕಾರಗಳು ಈ ನಿರ್ಧಾರ ಪ್ರಕಟಿಸಿವೆ. ಫ್ರಾನ್ಸ್ ಇಡೀ ದೇಶವೇ ಲಾಕ್ ಆಗಲಿದೆ. ಇತ್ತ ಜರ್ಮನಿ ನಾಲ್ಕು ವಾರದ ಅವಧಿಗೆ ಲಾಕ್‍ಡೌನ್ ಅಂತ ಆದೇಶಿಸಿದೆ.
ಕಳೆದ ಒಂದು ವಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಡೀರ್ ಅಂತ ಹೆಚ್ಚಳವಾಗುತ್ತಿರುವ ಹಿನ್ನೆಲೆ ಪ್ರಾನ್ಸ್ ಮತ್ತು ಜರ್ಮನಿ ಮತ್ತೆ ಲಾಕ್‍ಡೌನ್ ತಂತ್ರವನ್ನ ಪ್ರಯೋಗಿಸಿವೆ. ಕಳೆದ ವಾರ ಇಡೀ ವಿಶ್ವದಲ್ಲಿ 20.8 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ ಯುರೋಪಿನ ರಷ್ಯಾ, ಟರ್ಕಿ, ಇಜರಾಲ್ ಮತ್ತು ಮಧ್ಯ ಏಷ್ಯಾಗಳಲ್ಲಿಯೇ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಯುರೋಪ್ ರಾಷ್ಟ್ರಗಳಲ್ಲಿ ಕಳೆದ ವಾರ ಸೋಂಕಿತರ ಸಂಖ್ಯೆ ಶೇ.35ರಷ್ಟು ಏರಿಕೆಯಾಗಿದೆ. ಯುರೋಪಿ ಒಕ್ಕೂಟದ ರಾಷ್ಟ್ರಗಳು, ಬ್ರಿಟನ್, ನಾರ್ವೆ, ಸ್ವಿಟ್ಜರ್‍ಲ್ಯಾಂಡ್ ದೇಶಗಳಲ್ಲಿ ಏಳು ದಿನಗಳೊಳಗೆ ಅಂದಾಜು 10 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಮುಂದಿನ ಎರಡ್ಮೂರು ವಾರಗಳಲ್ಲಿ ಈ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆಗಳು ದಟ್ಟವಾಗಿವೆ.
ಲಾಕ್‍ಡೌನ್ ಘೋಷಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಏಂಜೆಲಾ ಮೆರ್ಕೆಲ್, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ತಡೆಗಾಗಿ ಲಾಕ್‍ಡೌನ್ ಮಾಡಲಾಗಿದೆ. ಬಾರ್, ಸಿನಿಮಾ ಥಿಯೇಟರ್, ರೆಸ್ಟೋರೆಂಟ್ ಸೇರಿದಂತೆ ಅತಿಹೆಚ್ಚು ಜನ ಸೇರುವ ಪ್ರದೇಶಗಳು ಮುಂದಿನ ನಾಲ್ಕು ವಾರ ಬಂದ್ ಆಗಲಿವೆ ಎಂದು ತಿಳಿಸಿದ್ದಾರೆ. ಆದೇಶಕ್ಕೂ ಮುನ್ನ ಮೆರ್ಕೆಲ್ 16 ರಾಜ್ಯಗಳ ಗವರ್ನರ್ ಗಳ ಜೊತೆ ವೀಡಿಯೋ ಕಾನ್ಪರೆನ್ಸ್ ಮೂಲಕ ಸುದೀರ್ಘ ಸಭೆ ನಡೆಸಿದ್ದರು. ಎಲ್ಲ ಗವರ್ನರ್, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಆರ್ಥಿಕ- ವೈದ್ಯಕೀಯ ತಜ್ಞರ ಜೊತೆ ಚರ್ಚಿಸಿ ಲಾಕ್‍ಡೌನ್ ವಿಧಿಸುವ ಬಗ್ಗೆ ನಿರ್ಧರಿಸಿದ್ದಾರೆ. ನವೆಂಬರ್ ಅಂತ್ಯದವರೆಗೂ ಜರ್ಮನಿ ಲಾಕ್ ಆಗಲಿದೆ.
ಬರ್ಲಿನ್: ನರಿಯೊಂದು ಬಣ್ಣ ಬಣ್ಣದ ಶೂ, ಚಪ್ಪಲಿಗಳನ್ನ ಕದ್ದಿರುವ ವಿಚಿತ್ರ ಘಟನೆ ಜರ್ಮನಿಯ ಬರ್ಲಿನ್ ನ ಜಹ್ಲೆಂಡೋರ್ಫ್ ನಲ್ಲಿ ನಡೆದಿದೆ. ನರಿ ಶೂ ತೆಗೆದುಕೊಂಡು ಹೋಗುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಹ್ಲೆಂಡೋರ್ಫ್ ನಿವಾಸಿಗಳ ಶೂ, ಚಪ್ಪಲಿ, ಸ್ಯಾಂಡಲ್ ಗಳ ಕಳ್ಳತನವಾಗುತ್ತಿದ್ದವು. ಆದ್ರೆ ಯಾರಿಗೂ ಕಳ್ಳ ಸಿಕ್ಕಿರಲಿಲ್ಲ. ಇದೀಗ ಶೂ ಕದಿಯುತ್ತಿರೋದು ನರಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಕಳೆದ ಎರಡು ವಾರಗಳಿಂದ ಶೂಗಳು ಕಳ್ಳತನವಾಗಿದ್ದು, ನರಿ ಸಂಗ್ರಹಿಸಿಟ್ಟಿದ್ದ ಸ್ಥಳವನ್ನು ಸಹ ನಿವಾಸಿಗಳು ಪತ್ತೆ ಮಾಡಿದ್ದಾರೆ.
ಜಹ್ಲೆಂಡೋರ್ಫ್ ನಿವಾಸಿ ಕ್ರಿಶ್ಚಿಯನ್ ಮೇಯರ್ ತನ್ನ ಹೊಸ ಶೂ ಕಳೆದುಕೊಂಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದರು. ಇದೀಗ ಶೂ ಕಳ್ಳ ಸಿಕ್ಕಿರುವ ಬಗ್ಗೆ ಫೆಲಿಕ್ಸ್ ಎಂಬವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಆದ್ರೆ ಮೇಯರ್ ಕಳೆದುಕೊಂಡಿದ್ದ ಹೊಸ ಬ್ರ್ಯಾಂಡೆಡ್ ಜಿಮ್ ಶೂ ಸಿಕ್ಕಿಲ್ಲ.
ನವದೆಹಲಿ: “ನಿಮ್ಮ ಬಗ್ಗೆ ನಮಗೆ ಹೆಮ್ಮೆ ಆಗುತ್ತಿದೆ” – ಹೀಗೆ ಕರೆಯುವ ಮೂಲಕ ಕೊರೊನಾ ಸಂಕಷ್ಟದ ಸಮಯದಲ್ಲಿ ಭಾರತದ ಸಹಕಾರವನ್ನು ಪಾಕಿಸ್ತಾನ ಶ್ಲಾಘಿಸಿದೆ.
ಹೌದು. ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವಿರುದ್ಧ ಸದಾ ದೂರಿಕೊಂಡೇ ಬರುತ್ತಿರುವ ಪಾಕಿಸ್ತಾನ ಕೊರೊನಾದಿಂದ ಆಗಿರುವ ಸಮಸ್ಯೆಯನ್ನು ಏರ್ ಇಂಡಿಯಾ ಬಗೆ ಹರಿಸುತ್ತಿರುವುದನ್ನು ನೋಡಿ ಮೆಚ್ಚುಗೆ ಸೂಚಿಸಿದೆ.
ಆಗಿದ್ದೇನು?
ಲಾಕ್‍ಡೌನ್ ಘೋಷಣೆಯಾದ ಬಳಿಕ ಭಾರತ ಸರ್ಕಾರ ಸಂಪೂರ್ಣವಾಗಿ ವಿದೇಶಿ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿತ್ತು. ಈ ನಿಷೇಧ ಕೈಗೊಳ್ಳುವ ಮುನ್ನವೇ ಹಲು ದೇಶಗಳಿಂದ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ್ದರು. ವಿಮಾನ ಸೇವೆ ರದ್ದಾದ ಹಿನ್ನೆಲೆಯಲ್ಲಿ ವಿವಿಧ ರಾಯಭಾರ ಕಚೇರಿಗಳ ಮನವಿಗೆ ಸ್ಪಂದಿಸಿದ ಭಾರತ ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಈ ಪ್ರಯಾಣಿಕರನ್ನು ವಿದೇಶಕ್ಕೆ ಕಳುಹಿಸಿಕೊಡುತ್ತಿದೆ.
ಏಪ್ರಿಲ್ 2 ರಂದು ಮುಂಬೈ ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣಕ್ಕೆ ಯುರೋಪ್ ಪ್ರಜೆಗಳನ್ನು ಹೊತ್ತುಕೊಂಡು ಏರ್ ಇಂಡಿಯಾ ಸಾಗುತಿತ್ತು. ಏರ್ ಇಂಡಿಯಾ ಪಾಕಿಸ್ತಾನದ ಫ್ಲೈಟ್ ಇನ್ಫಾರ್ಮೆಶನ್ ರಿಜನ್(ಎಫ್‍ಐಆರ್) ತಲುಪುತ್ತಿದ್ದಂತೆ ಪಾಕಿಸ್ತಾನ ಏರ್ ಟ್ರಾಫಿಕ್ ಕಂಟ್ರೋಲರ್(ಎಟಿಸಿ) ಅಸಲಾಂ ವಾಲಿಕುಮ್ ಎಂದು ಹೇಳಿ ಸ್ವಾಗತಿಸಿದ್ದಾರೆ.
“ಇದು ಫ್ರಾಂಕ್‍ಫರ್ಟ್‍ಗೆ ತೆರಳುತ್ತಿರುವ ಪರಿಹಾರ ವಿಮಾನವಲ್ಲವೇ ದೃಢಪಡಿಸಿ” ಎಂದು ಪಾಕ್ ಎಟಿಸಿ ಹೇಳಿದೆ. ಇದಕ್ಕೆ ಕ್ಯಾಪ್ಟನ್, “ಹೌದು” ಎಂದು ಉತ್ತರಿಸಿದ್ದಾರೆ.
ಈ ವೇಳೆ “ಇಂತಹ ಕಠಿಣ ಪರಿಸ್ಥಿತಿಯಲ್ಲೂ ನೀವು ವಿಶೇಷ ವಿಮಾನ ಸೇವೆ ನೀಡುತ್ತಿದ್ದೀರಿ. ನಮಗೆ ತುಂಬಾ ಹೆಮ್ಮೆ ಆಗುತ್ತಿದೆ. ಗುಡ್ ಲಕ್” ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನು ಕೇಳಿ ಭಾರತದ ಕ್ಯಾಪ್ಟನ್ ಆಶ್ಚರ್ಯಗೊಂಡು “ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದರೆ.
ಪ್ರಯಾಣದ ಸಂದರ್ಭದಲ್ಲಿ ಭಾರತದ ವಿಮಾನಕ್ಕೆ ಇರಾನ್ ವಾಯುಸೀಮೆಯ ರೇಡಾರ್ ಸಂಪರ್ಕಕಕ್ಕೆ ಸಿಕ್ಕಿರಲಿಲ್ಲ. ಈ ವಿಚಾರವನ್ನು ಭಾರತದ ಕ್ಯಾಪ್ಟನ್ ಪಾಕಿಸ್ತಾನದ ಎಟಿಸಿಗೆ ತಿಳಿಸಿದ್ದಾರೆ. ಕೂಡಲೇ ಪಾಕ್ ಎಟಿಸಿ ಇರಾಕ್ ಟೆಹರಾನ್ ಎಟಿಸಿ ಜೊತೆ ಸಂಪರ್ಕಿಸಿ ಸಹಾಯ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಏರ್ ಇಂಡಿಯಾ ಪೈಲಟ್ ಮಾತನಾಡಿ, “ನನ್ನ ಜೀವನದಲ್ಲಿ ಮೊದಲ ಬಾರಿಗೆ ನೇರವಾದ ದಾರಿಯಲ್ಲಿ ಪ್ರಯಾಣಿಸಿದ್ದೇನೆ. ಇರಾನ್ ನೇರ ಮತ್ತು ಹತ್ತಿರವಾದ ದಾರಿಯನ್ನು ಏರ್‍ಲೈನ್ಸ್ ಕಂಪನಿಗಳಿಗಳಿಗೆ ನೀಡುವುದು ಬಹಳ ಅಪರೂಪ. ಈ ವಾಯು ದಾರಿ ಇರಾನಿನ ರಕ್ಷಣೆಗೆ ಮಾತ್ರ ಮೀಸಲು. ಆದರೆ ಇರಾನ್ ಎಟಿಸಿ ನೇರವಾದ ದಾರಿಯನ್ನು ನೀಡಿದ್ದು ಮಾತ್ರವಲ್ಲದೇ ಅವರ ವಾಯು ಸೀಮೆಯನ್ನು ದಾಟುವಾಗ ‘ಆಲ್ ದಿ ಬೆಸ್ಟ್’ ಎಂದು ಹೇಳಿ ಮೆಚ್ಚುಗೆ ಸೂಚಿಸಿದರು ಎಂಬುದಾಗಿ ತಿಳಿಸಿದ್ದಾರೆ.
ಇರಾನ್ ಬಳಿಕ ಟರ್ಕಿ ವಾಯು ಸೀಮೆಯನ್ನು ಬಳಸಿ ಏರ್ ಇಂಡಿಯಾ ವಿಮಾನ ಜರ್ಮನಿಯ ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಏರ್ ಇಂಡಿಯಾ ವಿಮಾನ ಬೆಳಗ್ಗೆ 9:15ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಪಾಕಿಸ್ತಾನ ಮತ್ತು ಎಟಿಸಿ ಅಧಿಕಾರಿಗಳ ಸಹಾಯದಿಂದ 45 ನಿಮಿಷ ಬೇಗ ಅಂದರೆ 8:30ಕ್ಕೆ ಲ್ಯಾಂಡ್ ಆಗಿದೆ.
ಜರ್ಮನಿ, ಫ್ರಾನ್ಸ್, ಐರ್ಲೆಂಡ್ ಮತ್ತು ಕೆನಡಾದ ರಾಯಭಾರ ಕಚೇರಿ ಮನವಿಯ ಮೇರೆಗೆ ಏರ್ ಇಂಡಿಯಾ ಭಾರತದಲ್ಲಿ ಅತಂತ್ರರಾಗಿರುವ ಆ ದೇಶಗಳ ಪ್ರಜೆಗಳನ್ನು 18 ವಿಶೇಷ ವಿಮಾನಗಳ ಮೂಲಕ ಕಳುಹಿಸಿ ಕೊಡುತ್ತಿದೆ. ಈ ವಿಮಾನದಲ್ಲೇ ಚೀನಾದಿಂದ ಬರುತ್ತಿರುವ ಕೊರೊನಾಗೆ ಸಂಬಂಧಿಸಿದ ವೈದ್ಯಕೀಯ ಪರಿಕರಗಳನ್ನು ಏರ್ ಇಂಡಿಯಾ ವಿಮಾನಗಳು ವಿದೇಶಕ್ಕೆ ಕಳುಹಿಸುತ್ತಿವೆ.
ಬ್ಯಾಂಕಾಕ್: ಕೊರೊನಾ ವೈರಸ್ ಭೀತಿಯಿಂದ ಹೋಂ ಕ್ವಾರಂಟೈನ್‍ನಲ್ಲಿರುವವರು ತಮ್ಮ ಮನೆಯವರಿಂದಲೇ ದೂರ ಒಂದು ರೂಮಿನಲ್ಲಿದ್ದಾರೆ. ಆದರೆ ಥೈಲ್ಯಾಂಡ್ ಮಹಾರಾಜ ಭವ್ಯವಾದ ಹೋಟೆಲ್‍ನಲ್ಲಿ ಅದರಲ್ಲೂ ಜೊತೆಗೆ 20 ಮಹಿಳೆಯರ ಜೊತೆ ಐಸೋಲೇಶನ್‍ನಲ್ಲಿದ್ದಾರೆ ಎಂದು ವರದಿಯಾಗಿದೆ.
ರಾಜ ಮಹಾ ವಾಜಿರಲಾಂಗ್ ಕಾರ್ನ್ ಕೊರೊನಾ ವೈರಸ್ ಸಮಯದಲ್ಲಿ ತನ್ನ ದೇಶವನ್ನು ಬಿಟ್ಟು ಜರ್ಮನಿಗೆ ಹೋಗಿದ್ದಾರೆ. ಕೊರೊನಾದಿಂದ ಯಾರೂ ಕೂಡ ಮನೆಯಿಂದ ಹೊರ ಬರುತ್ತಿಲ್ಲ. ಆದರೆ ರಾಜ ಮಾತ್ರ ಪ್ರತ್ಯೇಕವಾಗಿ ಜರ್ಮನಿಗೆ ಹೋಗಿ ಐಸೋಲೇಶನ್‍ನಲ್ಲಿದ್ದಾರೆ. ಬವೇರಿಯಾದ ಐಷಾರಾಮಿ ಹೋಟೆಲ್‍ನಲ್ಲಿ ಉಳಿದಿದ್ದಾರೆ. ಅಲ್ಲದೇ ಇಡೀ ಹೋಟೆಲ್ ಅನ್ನು ರಾಜನೇ ಕಾಯ್ದಿರಿಸಿದ್ದಾರೆ. ಈ ವಾಸ್ತವ್ಯಕ್ಕಾಗಿ ಅವರು ಜಿಲ್ಲಾ ಕೌನ್ಸಿಲ್‍ನಿಂದ ವಿಶೇಷ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.
ಆಶ್ಚರ್ಯಕರ ವಿಚಾರವೆಂದರೆ ರಾಜನ ಜೊತೆಗೆ 20 ಮಹಿಳೆಯರು ಸಹ ಈ ಹೋಟೆಲ್‍ನಲ್ಲಿ ಉಳಿದಿದ್ದಾರೆ. ಅಷ್ಟೇ ಅಲ್ಲದೇ ರಾಜ ಹೆಚ್ಚಿನ ಸಂಖ್ಯೆಯ ಸೇವಕರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ರಾಜನ 4ನೇ ಪತ್ನಿ ಹೋಟೆಲ್‍ನಲ್ಲಿ ಇದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ರಾಜ ಜರ್ಮನಿಯಲ್ಲಿ ವಾಸ್ತವ್ಯ ಮಾಡಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ, ಥೈಲ್ಯಾಂಡ್ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಥೈಲ್ಯಾಂಡ್‍ನಲ್ಲಿ ರಾಜನನ್ನು ಟೀಕಿಸಿದ್ದಕ್ಕಾಗಿ 15 ವರ್ಷಗಳ ಜೈಲು ಶಿಕ್ಷೆ ಇದೆ. ಆದರೂ ‘ನಮಗೆ ರಾಜ ಏಕೆ ಬೇಕು?’ ಎಂದು ಟ್ವಿಟ್ಟರಿನಲ್ಲಿ ರಾಜನನ್ನು ಟೀಕೆ ಮಾಡಲಾಗುತ್ತಿದೆ.
ಇದುವರೆಗೂ ಥೈಲ್ಯಾಂಡ್‍ನಲ್ಲಿ 1,524ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ರೋಗಿಗಳು ಕಂಡುಬಂದಿದ್ದಾರೆ. ಇಲ್ಲಿಯವರೆಗೂ ಒಂಭತ್ತು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ವಜಿರಲೊಂಗ್ ಕಾರ್ನ್ ಅವರಿಗೆ ಈ ಹಿಂದೆಯೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 2019 ರಲ್ಲಿ 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದರು.
ಬರ್ಲಿನ್: ಕೊರೊನಾ ವೈರಸ್ ಪರಿಣಾಮದಿಂದ ದೇಶದ ಅರ್ಥವ್ಯವಸ್ಥೆ ಕುಸಿದಿದದ್ದಕ್ಕೆ ನೊಂದು ಜರ್ಮನಿಯ ಹಣಕಾಸುವ ಸಚಿವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ರೈಲ್ವೇ ಟ್ರ್ಯಾಕ್ ಬಳಿ ವಿತ್ತ ಸಚಿವರ ಮೃತ ದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಥಾಮಸ್ ಶೇಫರ್ ಆತ್ಮಹತ್ಯೆಗೆ ಶರಣಾದ ಹೆಸ್ಸೆ ರಾಜ್ಯದ ಹಣಕಾಸು ಸಚಿವ. ಕೊರೊನಾ ವೈರಸ್ ನಿಂದ ದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದವು. ಆರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಶೇಫರ್ ಹಗಲಿರುಳು ಕೆಲಸ ಮಾಡುತ್ತಿದ್ದರು. ಆದ್ರೂ ಹೆಸ್ಸೆ ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ.
ಜರ್ಮನಿಯಲ್ಲಿ 50 ಸಾವಿರಕ್ಕೂ ಅಧಿಕ ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದರೆ. 400 ಅಧಿಕ ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹೆಸ್ಸೆ ರಾಜ್ಯದ ಮುಖ್ಯಮಂತ್ರಿ ವಾಲ್ಕರ್, ಸಾವಿನ ಸುದ್ದಿ ನಂಬಲು ಆಗುತ್ತಿಲ್ಲ. ಶೇಫರ್ ಆತ್ಮಹತ್ಯೆ ಮಾಡಿಕೊಂಡರು ಎಂದು ನಂಬಲು ಆಗುತ್ತಿಲ್ಲ ಎಂದಿದ್ದಾರೆ.