Tag: ಜರ್ಮನಿ

  • ಜರ್ಮನಿ ಸಚಿವರ ಭಾರತ ಪ್ರವಾಸ – ಹಲವು ಒಪ್ಪಂದಗಳಿಗೆ ಇಂದು ಸಹಿ

    ಜರ್ಮನಿ ಸಚಿವರ ಭಾರತ ಪ್ರವಾಸ – ಹಲವು ಒಪ್ಪಂದಗಳಿಗೆ ಇಂದು ಸಹಿ

    ನವದೆಹಲಿ: ಚೀನಾ (China), ರಷ್ಯಾದೊಂದಿಗೆ (Russia) ಭಾರತದ ಸಂಬಂಧಗಳು ಹಾಗೂ ಭಾರತ ಮತ್ತು ಜರ್ಮನಿ ನಡುವಿನ ಅಭಿವೃದ್ಧಿ ಸಹಕಾರ ಕುರಿತು ಚರ್ಚೆ ನಡೆಸಲು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ (Annalena Baerbock) ಅವರು ಭಾರತದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

    ಅನ್ನಾಲೆನಾ ಬೇರ್ಬಾಕ್ ಎರಡು ದಿನಗಳ ಭೇಟಿಯಾಗಿ ಭಾರತಕ್ಕೆ ಆಗಮಿಸಿದ್ದು, ವಿದೇಶಾಂಗ ಸವಿವ ಜೈಶಂಕರ್ (Jaishankar) ಜೊತೆಗೆ ಮಾತುಕತೆ ನಡೆಸಲಿದ್ದಾರೆ. ರಷ್ಯಾ-ಉಕ್ರೆನ್ ಸಂಘರ್ಷದ (Russia Ukraine War) ಜಾಗತಿಕ ಪರಿಣಾಮಗಳು, ಗಾಲ್ವಾನ್ ಕಣಿವೆ ಘಟನೆಗಳು, ಚೀನಾದೊಂದಿಗೆ ಭಾರತದ ಸಂಬಂಧಗಳ ಕುರಿತು ಉಭಯ ದೇಶಗಳ ಸಚಿವರು ಚರ್ಚೆ ಮಾಡಲಿದ್ದಾರೆ. ಇದನ್ನೂ ಓದಿ: ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರ ಮದುವೆ- ಸ್ವಘೋಷಿತ ಪ್ರವಾದಿ ಅರೆಸ್ಟ್

    ಇದೇ ವೇಳೆ ಎರಡೂ ಕಡೆಯವರು ವಿವಿಧ ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದರಿಂದ ಪರಸ್ಪರ ದೇಶದ ಜನರು ಎರಡೂ ದೇಶಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದನ್ನೂ ಓದಿ: ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆ ಕೊಟ್ಟಿದ್ದ ಮಾಲೀಕ ಶಾಕ್‌!

    ಭಾರತ ಜಿ7 ರಾಷ್ಟ್ರಗಳ (G7 Nations) ಅಧ್ಯಕ್ಷತೆ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಜರ್ಮನ್ ಸಚಿವರು ಭೇಟಿ ನೀಡಿದ್ದಾರೆ. ಜಿ20 ಶೃಂಗ ಸಭೆಯಲ್ಲಿ ಭಾರತವು ಜಾಗತಿಕವಾಗಿ ತನ್ನ ಸಾಮರ್ಥ್ಯ ನಿರ್ವಹಿಸಲು ಸಿದ್ಧವಾಗಿದೆ ಎಂಬುದನ್ನು ತೋರಿಸಿದೆ. ಎಲ್ಲಾ ಆಂತರಿಕ ಹಾಗೂ ಸಾಮಾಜಿಕ ಸವಾಲುಗಳ ನಡುವೆಯೂ ಭಾರತ ವಿಶ್ವದ ಇತರ ದೇಶಗಳಿಗೆ ಮಾದರಿಯಾಗಿದೆ. ಅಲ್ಲದೇ ಕಳೆದ 15 ವರ್ಷಗಳಲ್ಲಿ ಭಾರತವು 400 ಮಿಲಿಯನ್ ಜನರನ್ನು ಸಂಪೂರ್ಣ ಬಡತನದಿಂದ ಹೊರತರುವಲ್ಲಿ ಯಶಸ್ವಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜರ್ಮನಿಗೆ 8.5 ಲಕ್ಷ ರೂ. ದಂಡ ವಿಧಿಸಿದ ಫಿಫಾ

    ಜರ್ಮನಿಗೆ 8.5 ಲಕ್ಷ ರೂ. ದಂಡ ವಿಧಿಸಿದ ಫಿಫಾ

    ಕತಾರ್‌: ಜರ್ಮನಿ ತಂಡಕ್ಕೆ ವಿಶ್ವ ಫುಟ್‌ಬಾಲ್‌ ಸಂಸ್ಥೆ ಫಿಫಾ(FIFA) 10 ಸಾವಿರ ಸ್ವಿಸ್‌ ಫ್ರಾಂಕ್‌(ಅಂದಾಜು 8.5 ಲಕ್ಷ ರೂ.) ದಂಡವನ್ನು ವಿಧಿಸಿದೆ.

    ಸ್ಪೇನ್‌(Spain) ಜೊತೆಗಿನ ಪಂದ್ಯ ನಡೆಯುವುದಕ್ಕೂ ಮೊದಲು ಸುದ್ದಿಗೋಷ್ಠಿಗೆ ಆಟಗಾರನನ್ನು ಜರ್ಮನಿ(Germany) ಕಳುಹಿಸಬೇಕಿತ್ತು. ಆದರೆ ಆಟಗಾರನನ್ನು ಕಳುಹಿಸದ ಹಿನ್ನೆಲೆಯಲ್ಲಿ ಫಿಫಾ ಜರ್ಮನಿ ತಂಡಕ್ಕೆ ದಂಡವನ್ನು ವಿಧಿಸಿದೆ. ಇದನ್ನೂ ಓದಿ: ಮೊರೊಕ್ಕೊ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ತಂಡದ ಕೋಚ್‌ ಹನ್ಸಿ ಫ್ಲಿಕ್‌ ಸೂಚನೆಯಂತೆ ಯಾವೊಬ್ಬ ಆಟಗಾರ ಪ್ರೆಸ್‌ ಮೀಟ್‌ಗೆ ಹಾಜರಾಗಿರಲಿಲ್ಲ. ಪಂದ್ಯದ ಮೇಲೆ ಗಮನ ನೀಡಲು ಆಟಗಾರನನ್ನು ಕೋಚ್‌ ಕಳುಹಿಸಿರಲಿಲ್ಲ. ಜರ್ಮನಿ ಮತ್ತು ಸ್ಪೇನ್‌ ನಡುವಿನ ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಗುಡ್‌ನ್ಯೂಸ್ – ಭಾರತೀಯರಿಗೆ ಜರ್ಮನ್ ವೀಸಾ ಶುಲ್ಕ ಕಡಿತ

    ಗುಡ್‌ನ್ಯೂಸ್ – ಭಾರತೀಯರಿಗೆ ಜರ್ಮನ್ ವೀಸಾ ಶುಲ್ಕ ಕಡಿತ

    ಮುಂಬೈ: ಭಾರತೀಯ ನಾಗರಿಕರಿಗೆ (Indians) ವೀಸಾಗಳ ಶುಲ್ಕ ಕಡಿತಗೊಳಿಸಿರುವುದಾಗಿ ಮುಂಬೈನಲ್ಲಿರುವ ಜರ್ಮನ್ (Germany) ರಾಯಭಾರ ಕಚೇರಿಯು ಘೋಷಿಸಿದೆ.

    ಹೊಸ ನಿಯಮಗಳ ಅನ್ವಯ ಭಾರತೀಯರಿಗೆ ಅಲ್ಪಾವಧಿ ವೀಸಾ ಹಾಗೂ ನ್ಯಾಷನಲ್ ವೀಸಾಗಳ (National Visa) ಶುಲ್ಕವನ್ನು ಕಡಿಮೆ ಮಾಡಿದೆ. ಅಲ್ಪಾವಧಿ ಹಾಗೂ ನ್ಯಾಷನಲ್ ವೀಸಾಗಳು ಗರಿಷ್ಠ 90 ದಿನಗಳ ವರೆಗೆ ಉಳಿಯಲು ಅನುಮತಿಸುತ್ತದೆ. ಜರ್ಮನಿಯಲ್ಲಿ ತಮ್ಮ ಅಧ್ಯಯನ ಮುಂದುವರಿಸುವ ವಿದ್ಯಾರ್ಥಿಗಳಿಗೆ (Students) ನ್ಯಾಷನಲ್ ವೀಸಾಗಳು ಸಹಾಯಕವಾಗಲಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ನಾಗಮಂಟಪ ಉದ್ಘಾಟನೆ – ಜನವರಿಯಲ್ಲಿ ಆದಿಯೋಗಿ ಪ್ರತಿಮೆ ಲೋಕಾರ್ಪಣೆ

    ಅಲ್ಪಾವಧಿ ವೀಸಾಗೆ ವಯಸ್ಕರಿಗೆ 6,400 ರೂ.(80 ಡಾಲರ್), ಅಪ್ರಾಪ್ತರಿಗೆ 3,200 ರೂ. (40 ಡಾಲರ್) ಇರಲಿದ್ದು, ನ್ಯಾಷನಲ್ ವೀಸಾಕ್ಕೆ ವಯಸ್ಕರಿಗೆ 6 ಸಾವಿರ ರೂ (75 ಡಾಲರ್) ಹಾಗೂ ಅಪ್ರಾಪ್ತರಿಗೆ 3 ಸಾವಿರ ರೂ. (37.50 ಡಾಲರ್) ಗಳಷ್ಟು ಶುಲ್ಕ ಇರಲಿದೆ ಎಂದು ರಾಯಭಾರ ಕಚೇರಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • Lufthansa ಪೈಲೆಟ್‌ ಸ್ಟ್ರೈಕ್‌,  800 ವಿಮಾನಗಳ ಹಾರಾಟ ರದ್ದು- ದೆಹಲಿ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ

    Lufthansa ಪೈಲೆಟ್‌ ಸ್ಟ್ರೈಕ್‌, 800 ವಿಮಾನಗಳ ಹಾರಾಟ ರದ್ದು- ದೆಹಲಿ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ

    ನವದೆಹಲಿ: ಪೈಲಟ್‍ಗಳು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ತಾನ್ಸಾ ವಿಮಾನಯಾನಗಳನ್ನು ರದ್ದುಗೊಳಿಸಿದ್ದು ದೆಹಲಿ ವಿಮಾನ ನಿಲ್ದಾಣ ಇದೀಗ ಜನಜಂಗುಳಿಯಿಂದ ತುಂಬಿದೆ.

    ಪೈಲೆಟ್‍ಗಳ ವೇತನ ಹೆಚ್ಚಳ ಕುರಿತಂತೆ ಒಂದು ದಿನದಿಂದ ಮುಷ್ಕರ ನಡೆಸಲಾಗುತ್ತಿದ್ದು, ಲುಫ್ತಾನ್ಸಾ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವಿಮಾನಯಾನವನ್ನು ರದ್ದುಗೊಳಿಸಿರುವುದರಿಂದ ಪ್ರಯಾಣಿಕರು ತಮ್ಮ ವಿಮಾನ ದರವನ್ನು ಮರುಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ವಿಮಾನ ನಿಲ್ದಾಣದಲ್ಲಿರುವ ಪ್ರಯಣಿಕರನ್ನು ದೆಹಲಿ ಪೊಲೀಸರು ಮತ್ತು ಸಿಐಎಸ್‍ಎಫ್ ಅಧಿಕಾರಿಗಳು ಸಮಾಧಾನಪಡಿಸಿ, ಏರ್‌ಲೈನ್ ಕಂಪನಿಯಿಂದ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಚುನಾವಣಾ ವಂಚನೆ ಪ್ರಕರಣದಲ್ಲಿ ಆಂಗ್ ಸಾನ್ ಸೂಕಿ ತಪ್ಪಿತಸ್ಥೆ- 3 ವರ್ಷ ಜೈಲು

    ಫ್ರಾಂಕ್‍ಫರ್ಟ್ ಮತ್ತು ಮ್ಯೂನಿಚ್‍ಗೆ ತೆರಳುತ್ತಿದ್ದ ಪ್ರಯಾಣಿಕರು ನಿರ್ಗಮನ ಗೇಟ್ಸ್ ಸಂಖ್ಯೆ 6 ಮತ್ತು 7 ರಲ್ಲಿ ಚೆಕ್-ಇನ್ ಪ್ರದೇಶದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಅವರಲ್ಲಿ ಕೆಲವರು ಟರ್ಮಿನಲ್‍ನಿಂದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ತಕ್ಷಣವೇ ಸಿಐಎಫ್ ಸಿಬ್ಬಂದಿ ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.

    ಸೆಪ್ಟೆಂಬರ್ 2 ರಂದು ಲುಫ್ತಾನ್ಸಾ 800 ವಿಮಾನಯಾನಗಳನ್ನು ರದ್ದುಗೊಳಿಸಿದ್ದು, ಇದರಿಂದ ಸುಮಾರು 1 ಲಕ್ಷ 30 ಸಾವಿರ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಪ್ರಾಬ್ಲಂ ಬರೋದು ಸಹಜ: ಡಾ. ರಂಗನಾಥ್

    ಪೈಲಟ್‍ಗಳ ವೇತನವನ್ನು ಪ್ರತಿ ತಿಂಗಳಿಗೆ 900 ಯೂರೋ ಹೆಚ್ಚಿಸುವ ಅತ್ಯುತ್ತಮ ಪ್ರಸ್ತಾವನೆಯನ್ನು ಕಂಪನಿ ಮುಂದಿಟ್ಟಿತ್ತು. ಆದರೂ ಈ ಆಫರ್ ಒಪ್ಪಿಕೊಳ್ಳದ ಪೈಲಟ್‍ಗಳ ಕ್ರಮದ ಬಗ್ಗೆ ಕಂಪನಿ ವಿಷಾದ ವ್ಯಕ್ತಪಡಿಸಿದೆ. ಈ ವರ್ಷಾಂತ್ಯಕ್ಕೆ ಶೇ 5.5 ರಷ್ಟು ವೇತನ ಹೆಚ್ಚಳ, ಹಣದುಬ್ಬರಕ್ಕೆ ಪರಿಹಾರ, ಸ್ಯಾಲರಿ ಗ್ರಿಡ್ ಹೊಂದಾಣಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪೈಲಟ್‍ಗಳು ಮುಷ್ಕರ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಟ್ಲರ್‌ ವಾಚ್‌ ಹರಾಜು – ಮೊತ್ತ ಎಷ್ಟು ಗೊತ್ತಾ?

    ಹಿಟ್ಲರ್‌ ವಾಚ್‌ ಹರಾಜು – ಮೊತ್ತ ಎಷ್ಟು ಗೊತ್ತಾ?

    ವಾಷಿಂಗ್ಟನ್: ನಾಜಿ ನಾಯಕ ಅಡಾಲ್ಫ್ ಹಿಟ್ಲರ್‌ಗೆ ಸೇರಿದ್ದು ಎನ್ನಲಾದ ಕೈಗಡಿಯಾರವನ್ನು ಹರಾಜಿಗೆ ಹಾಕಲಾಗಿದ್ದು, ಭಾರೀ ಮೊತ್ತಕ್ಕೆ ಕೈಗಡಿಯಾರ ಮಾರಾಟವಾಗಿದೆ.

    ಅಮೆರಿಕದಲ್ಲಿ ನಡೆದ ಹರಾಜಿನಲ್ಲಿ ಹಿಟ್ಲರ್‌ ವಾಚ್‌ ಬರೋಬ್ಬರಿ 8.70 ಕೋಟಿ ರೂ. (1.1 ಮಿಲಿಯನ್‌ ಯುಎಸ್‌ ಡಾಲರ್‌)ಗೆ ಮಾರಾಟವಾಗಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಒಪ್ಪಿಗೆ ಸಿಗಬೇಕಾದರೆ ಮಾನವ ಹಕ್ಕು ಗೌರವಿಸಿ: ತಾಲಿಬಾನ್‍ಗೆ UN ಖಡಕ್ ಎಚ್ಚರಿಕೆ

    ಅನಾಮಧೇಯ ಬಿಡ್ಡರ್‌ಗೆ ಮಾರಾಟವಾದ ಹ್ಯೂಬರ್ ಕೈಗಡಿಯಾರವು ಸ್ವಸ್ತಿಕ್‌ ಮಾದರಿ ಚಿತ್ರ ಹಾಗೂ AH ಎಂಬ ಆಂಗ್ಲ ಅಕ್ಷರಗಳನ್ನು ಹೊಂದಿದೆ. ಇದನ್ನು ಅಲೆಕ್ಸಾಂಡರ್ ಹಿಸ್ಟಾರಿಕಲ್ ಆಕ್ಷನ್ಸ್ ಹರಾಜು ಹಾಕಿತು. ಇದು ಚಿನ್ನದ ರಿವರ್ಸಿಬಲ್ ವಾಚ್ ಆಗಿದೆ. ಇದನ್ನು ಹಿಟ್ಲರ್‌ಗೆ ಏಪ್ರಿಲ್ 20, 1933 ರಂದು ಅವರ 44ನೇ ಹುಟ್ಟುಹಬ್ಬದಂದು ಉಡುಗೊರೆಯಾಗಿ ನೀಡಲಾಗಿತ್ತು. ಇದನ್ನು ಐತಿಹಾಸಿಕ ಎರಡನೇ ಮಹಾಯುದ್ಧದ ಅವಶೇಷ ಎಂದು ವಿವರಿಸಲಾಗಿದೆ.

    ಗಡಿಯಾರವು ಮೂರು ದಿನಾಂಕಗಳನ್ನು ಒಳಗೊಂಡಿದೆ. ಹಿಟ್ಲರ್‌ನ ಜನ್ಮ ದಿನಾಂಕ, ಅವರು ಚಾನ್ಸೆಲರ್ ಆದ ದಿನಾಂಕ ಮತ್ತು ಮಾರ್ಚ್ 1933 ರಲ್ಲಿ ನಾಜಿ ಪಕ್ಷವು ಚುನಾವಣೆಯಲ್ಲಿ ಗೆದ್ದ ದಿನಾಂಕ ಇದೆ. ಹರಾಜು ಸಂಸ್ಥೆಯ ಪ್ರಕಾರ, ಸುಮಾರು 30 ಫ್ರೆಂಚ್ ಸೈನಿಕರು ಬರ್ಘೋಫ್ ಮೇಲೆ ದಾಳಿ ಮಾಡಿದಾಗ ವಾಚ್ ಅನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಬಿನ್ ಲಾಡೆನ್ ಕುಟುಂಬದಿಂದ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಭಾರೀ ಮೊತ್ತದ ದೇಣಿಗೆ

    ಈ ಕೈಗಡಿಯಾರದ ಹರಾಜನ್ನು ಯಹೂದಿ ನಾಯಕರು ಖಂಡಿಸಿದ್ದರು. ಮಾರಾಟವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದರು. 34 ಯಹೂದಿ ನಾಯಕರು ಸಹಿ ಮಾಡಿದ್ದ ಬಹಿರಂಗ ಪತ್ರದಲ್ಲಿ, ಈ ವಾಚ್‌ ಹರಾಜಿಗೆ ವಿರೋಧ ವ್ಯಕ್ತಪಡಿಸಲಾಗಿತ್ತು ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಸರ್ಜರಿಗಾಗಿ ಸುನೀಲ್ ಶೆಟ್ಟಿ ಪುತ್ರಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    ಸರ್ಜರಿಗಾಗಿ ಸುನೀಲ್ ಶೆಟ್ಟಿ ಪುತ್ರಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    ಬಾಲಿವುಡ್‌ನ ಜೋಡಿ ಹಕ್ಕಿಗಳು ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ಕೆ.ಎಲ್ ರಾಹುಲ್ ಸರ್ಜರಿಗಾಗಿ ಅಥಿಯಾ ಶೆಟ್ಟಿ ಜತೆ ಜರ್ಮನಿಗೆ ಹಾರಿದ್ದಾರೆ. ಸದ್ಯ ಏರ್‌ಪೋರ್ಟ್‌ಗೆ ಆಗಮಿಸಿರುವ ವಿಡಿಯೋ ವೈರಲ್ ಆಗಿದೆ.

    ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಡೇಟಿಂಗ್‌ನಲ್ಲಿದ್ದಾರೆ. ಇವರೆಗೂ ಈ ಕುರಿತು ಯಾವುದೇ ಅಧಿಕೃತ ವಿಚಾರ ಹೊರಬಿದ್ದಿಲ್ಲ. ಇದೀಗ ಈ ಬೆನ್ನಲ್ಲೇ ಕೆ.ಎಲ್ ರಾಹುಲ್ ಶಸ್ತ್ರ ಚಿಕಿತ್ಸೆಗಾಗಿ ಈ ಜೋಡಿ ಜರ್ಮನಿಯತ್ತ ಮುಖ ಮಾಡಿದ್ದಾರೆ. ಈ ವೇಳೆ ಏರಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು, ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್‌ಗೆ ವಿಶೇಷ ಉಡುಗೊರೆ ನೀಡಿದ ಕಪಿಲ್ ದೇವ್

     

    View this post on Instagram

     

    A post shared by Viral Bhayani (@viralbhayani)

    ಅಥಿಯಾ ಮತ್ತು ರಾಹುಲ್ ಜರ್ಮನಿಗೆ ತೆರಳುತ್ತಿದ್ದಾರೆ. ತನ್ನ ತೊಡೆಯ ಸಂದು ಗಾಯಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಗಾಯದ ಸಮಸ್ಯೆಯಿಂದ ಕೆ.ಎಲ್ ಕ್ರಿಕೆಟ್‌ಗೂ ಕೊಂಚ ಬ್ರೇಕ್ ಕೊಟ್ಟು, ಆರೋಗ್ಯದ ಕಡೆ ಗಮನ ಹರಸುತ್ತಿದ್ದಾರೆ. ಇನ್ನು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ರಾಹುಲ್ ಆರೈಕೆಗಾಗಿ, ಅಥಿಯಾ ಕೂಡ ಜರ್ಮನಿಯಲ್ಲೇ ಇದ್ದು, ರಾಹುಲ್ ಅವರನ್ನು ನೋಡಿಕೊಳ್ಳಲಿದ್ದಾರೆ.

    Live Tv

  • ಗೆಳೆಯ ಕೈಕೊಡುವ ಭಯ- ಸೆಕ್ಸ್ ವೇಳೆ ಕಾಂಡೋಮ್‍ನಲ್ಲಿ ರಂಧ್ರ ಮಾಡಿದ ಯುವತಿ!

    ಗೆಳೆಯ ಕೈಕೊಡುವ ಭಯ- ಸೆಕ್ಸ್ ವೇಳೆ ಕಾಂಡೋಮ್‍ನಲ್ಲಿ ರಂಧ್ರ ಮಾಡಿದ ಯುವತಿ!

    ಬರ್ಲಿನ್: ಪ್ರೀತಿ ಅನ್ನೋದು ಕುರುಡು ಅಂತಾರೆ. ಎಷ್ಟೋ ಸಲ ಪ್ರೀತಿಸಿದವರು ಮದುವೆಯಾಗುವುದಿಲ್ಲ. ಹುಡುಗಿ ಮನೆ ಅಥವಾ ಹುಡುಗ ಮನೆಯಲ್ಲಿ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸುವುದು ಉಂಟು. ಹೀಗಾದಾಗ ಕೆಲವೊಮ್ಮೆ ಯುವಕ ಹಾಗೂ ಯುವತಿ ಪರಾರಿಯಾಗಿ ಮದುವೆಯಾಗುತ್ತಾರೆ. ಆದರೆ ಜರ್ಮನಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

    ಹೌದು. ಪಶ್ಚಿಮ ಜರ್ಮನಿಯಲ್ಲಿ ಯುವತಿಯೊಬ್ಬಳು ತಾನು ಪ್ರೀತಿಸಿದವನು ತನ್ನನ್ನು ಬಳಸಿಕೊಂಡು ಕೈಕೊಡುವ ಭಯದಲ್ಲಿದ್ದ ಖತರ್ನಾಕ್ ಉಪಾಯವೊಂದನ್ನು ಹೂಡಿದ್ದಾಳೆ. ಬಾಯ್ ಫ್ರೆಂಡ್ ಜೊತೆ ದೈಹಿಕ ಸಂಪರ್ಕ ನಡೆಸುತ್ತಿದ್ದ ವೇಳೆ ಆತನಿಗೆ ಗೊತ್ತಾಗದ ರೀತಿಯಲ್ಲಿ ಕಾಂಡೋಮ್ ನಲ್ಲಿ ರಂಧ್ರ ಮಾಡಿ, ಇದೀಗ ಆಕೆ ಸಂಕಷ್ಟಕ್ಕೆ ಸಿಲುಕಿದ್ದಾಳೆ.

    39 ವರ್ಷದಾಕೆಗೆ 42 ವರ್ಷದ ವ್ಯಕ್ತಿ ಆನ್‍ಲೈನ್ ಮೂಲಕ ಪರಿಚಯವಾಗಿದ್ದಾನೆ. ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಜೊತೆಗೆ ವಾಸವಾಗಿದ್ದಾರೆ. ಈ ವೇಳೆ ದೈಹಿಕ ಸಂಪರ್ಕವೂ ನಡೆದಿದೆ. ಆತನನ್ನು ವಿಪರೀತ ಹಚ್ಚಿಕೊಂಡ ಯುವತಿ, ಮದುವೆ ಮಾಡಿಕೊಳ್ಳುವಂತೆ ತಿಳಿಸಿದ್ದಾಳೆ. ಆದರೆ ಇದಕ್ಕೆ ಆತ ಸೊಪ್ಪು ಹಾಕಲಿಲ್ಲ. ಇದರಿಂದ ರೋಸಿ ಹೋದ ಯುವತಿ ಈ ಉಪಾಯ ಮಾಡಿದ್ದಾಳೆ. ಇದನ್ನೂ ಓದಿ: ಮೂಗಿ ಅಂತ ಹೀಯಾಳಿಸುತ್ತಿದ್ದ ಗಂಡನ ನಾಲಿಗೆಯನ್ನೇ ಹಲ್ಲಿನಿಂದ ಕಚ್ಚಿ ಕತ್ತರಿಸಿದ ಹೆಂಡತಿ!

    MARRIAGE

    ತಾನು ಗರ್ಭಿಣಿಯಾದರೆ ಆತ ತನನ್ನು ಮದುವೆಯಾಗುತ್ತಾನೆ ಎಮದು ಆಕೆ ಭಾವಿಸಿದ್ದಾಳೆ. ಹೀಗಾಗಿ ದೈಹಿಕ ಸಂಬಂಧದ ವೇಳೆ ಆತನಿಗೆ ತಿಳಿಯದಂತೆ ಕಾಂಡೋಮ್‍ಗೆ ರಂಧ್ರ ಮಾಡಿದ್ದಾಳೆ. ಸೆಕ್ಸ್ ಬಳಿಕ ಆತನಿಗೆ ಮೆಸೇಜ್ ಮಾಡಿ ನಾನು ಗರ್ಭಿಣಿಯಾಗಿದ್ದೇನೆಂದು ಅನಿಸುತ್ತದೆ ಎಂದು ಹೇಳಿದ್ದಾಳೆ. ಅಲ್ಲದೆ ತಾನು ಮಾಡಿರುವ ಕೃತ್ತವನ್ನು ಕೂಡ ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಆಸ್ತಿಯಲ್ಲಿ ಪಾಲು ಕೊಡದಿದ್ದಕ್ಕೆ ಮೂವರು ಮಕ್ಕಳೊಂದಿಗೆ ಬೆಂಕಿಹಚ್ಚಿಕೊಂಡ ತಾಯಿ

    ಇತ್ತ ಯುವತಿ ಮಾತು ಕೇಳಿದ ಯುವಕನಿಗೆ ದಿಕ್ಕೇ ತೋಚದಂತಾಗಿದೆ. ಕೂಡಲೇ ಠಾಣೆಗೆ ತೆರಳಿ ಯುವತಿ ವಿರುದ್ಧ ಕ್ರಿಮಿನಲ್ ದೂರು ದಾಖಲು ಮಾಡಿದ್ದಾನೆ. ಅಲ್ಲದೆ ದೈಹಿಕ ಸಂಬಂಧದ ವೇಳೆ ತನಗೆ ಗೊತ್ತಿಲ್ಲದ ರೀತಿಯಲ್ಲಿ ಕಾಂಡೋಮ್‍ಗೆ ರಂಧ್ರ ಮಾಡಿದ್ದಾಳೆ. ಇದೊಂದು ಕ್ರಿಮಿನಲ್ ಕೇಸ್ ಆಗಿದೆ ಎಂದು ಆತ ಕೋರ್ಟ್ ಮೊರೆ ಹೋಗಿದ್ದಾನೆ. ಹೀಗಾಗಿ ಪಾಲುದಾರನಿಗೆ ಅರಿವಿಲ್ಲದ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಕಾಂಡೋಮ್‍ಗೆ ರಂಧ್ರ ಮಾಡಿದ್ದಕ್ಕಾಗಿ ಆಕೆಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

  • ಮೇ 15ರಿಂದ ರಷ್ಯಾದ ಕಚ್ಚಾತೈಲ ಆಮದು ಕಡಿತ

    ಮೇ 15ರಿಂದ ರಷ್ಯಾದ ಕಚ್ಚಾತೈಲ ಆಮದು ಕಡಿತ

    ಮಾಸ್ಕೋ: ಪ್ರಮುಖ ಜಾಗತಿಕ ವ್ಯಾಪಾರ ಸಂಸ್ಥೆಗಳು ಮೇ 15ರಿಂದ ರಷ್ಯಾದ ರಾಜ್ಯ ನಿಯಂತ್ರಿತ ತೈಲ ಕಂಪನಿಗಳಿಂದ ಕಚ್ಚಾತೈಲ ಖರೀದಿಯನ್ನು ಕಡಿತಗೊಳಿಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

    Russia-S-400

    ಉಕ್ರೇನ್ ಮೇಲಿನ ಆಕ್ರಮಣದ ನಂತರವೂ ಯೂರೋಪ್ ಒಕ್ಕೂಟಗಳು ರಷ್ಯಾದ ತೈಲ ಆಮದಿನ ಮೇಲೆ ನಿರ್ಬಂಧ ವಿಧಿಸಿಲ್ಲ. ಏಕೆಂದರೆ ಜರ್ಮನಿಯಂತಹ ಕೆಲ ದೇಶಗಳೂ ರಷ್ಯಾದ ತೈಲ ಆಮದಿನ ಮೇಲೆಯೇ ಅವಲಂಬಿತವಾಗಿವೆ. ಪರ್ಯಾಯ ಮಾರ್ಗ ಕಂಡುಕೊಳ್ಳಲು ಮೂಲ ಸೌಕರ್ಯ ಹೊಂದಿಲ್ಲದೇ ಇರುವುದು ಬಿಕ್ಕಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್‌ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್‌?

    ಆದಾಗ್ಯೂ, ತೈಲ ಮಾರಾಟ ಕಂಪನಿಗಳು ರಷ್ಯಾದ ಎನರ್ಜಿ ಗ್ರೂಪ್ ರಾಸ್ನೆಫ್ಟ್ನಿಂದ ಖರೀದಿಗಳನ್ನು ಸ್ಥಗಿತಗೊಳಿಸುತ್ತಿವೆ. ಏಕೆಂದರೆ ಅವರು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ರಷ್ಯಾದ ಪ್ರವೇಶವನ್ನು ಮಿತಿಗೊಳಿಸುವ ಉದ್ದೇಶದಿಂದ ಕಡಿತಗೊಳಿಸಲಾಗುತ್ತಿದೆ. ಅದಕ್ಕಾಗಿ ಯೂರೋಪ್‌ನ ಇಂಧನ ಭದ್ರತೆಗಳನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿವೆ.

    OIL 2

    ಯೂರೋಪ್ ಒಕ್ಕೂಟಗಳೂ ಮೇ 15ರಿಂದ ಕೆಲವು ನಿರ್ಬಂಧಗಳನ್ನು ಅನುಸರಿಸಲಿದ್ದು, ತೈಲ ಆಮದನ್ನು ಖಡಿತಗೊಳಿಸಲಿವೆ. ಜೊತೆಗೆ ರಷ್ಯಾದ ಪ್ರಮುಖ ತೈಲ ಖರೀದಿದಾರರಾದ ಟ್ರಾಫಿಗುರಾ ರಾಯಿಟರ್ಸ್ ಸಹ ಎಲ್ಲ ನಿರ್ಬಂಧಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ. ಹಾಗಾಗಿ ವಹಿವಾಟನ್ನು ಮೇ 15 ರಿಂದ ಇನ್ನಷ್ಟು ಕಡಿತಗೊಳಿಸಲಾಗುವುದು ಎನ್ನಲಾಗಿದೆ. ಇದನ್ನೂ ಓದಿ: ಒಂದೇ ಬಾರಿಗೆ 32 ಜನರಿಗೆ ವಾಯ್ಸ್ ಕಾಲ್ – ಹೀಗಿವೆ ವಾಟ್ಸಪ್‌ನ 4 ಹೊಸ ಫೀಚರ್ಸ್

    ಏಪ್ರಿಲ್‌ನಲ್ಲಿ ರಷ್ಯಾದ ರೋಸ್‌ನೆಫ್ಟ್ ಮತ್ತು ಗಾಜ್‌ಪ್ರೊಮ್‌ನೆಫ್ಟ್ನ ಪಶ್ಚಿಮ ಬಂದರುಗಳಿಂದ ಕಚ್ಚಾ ತೈಲ ರಫ್ತು ಶೇ.40 ರಷ್ಟು ಹೆಚ್ಚಾಗಲಿದೆ. ಹಾಗಾಗಿ, ನಿರ್ಬಂಧಗಳನ್ನು ವಿಧಿಸುವ ಮೂಲಕ ಆಮದು ಕಡಿತಗೊಳಿಸಲಾಗುತ್ತದೆ ಎಂದು ಇಂಟರ್‌ನ್ಯಾಷನಲ್ ಎನರ್ಜಿ ಸಂಸ್ಥೆಯೊಂದು ಹೇಳಿದೆ.

  • ಶೀಘ್ರವೇ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿರುವ ಜರ್ಮನಿ

    ಶೀಘ್ರವೇ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿರುವ ಜರ್ಮನಿ

    ಕೀವ್: ರಷ್ಯಾ ವಿರುದ್ಧ ತನ್ನ ರಾಜಧಾನಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು ಇತರೆಗಳನ್ನು ಕಳುಹಿಸಲು ಮತ್ತು ರಷ್ಯಾಕ್ಕೆ ಸ್ವಿಫ್ಟ್ ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲು ಜರ್ಮನಿ ಸಿದ್ಧವಾಗಿದೆ ಎಂದು ಜರ್ಮನ್ ಸರ್ಕಾರ ತಿಳಿಸಿದೆ.

    ಶನಿವಾರ ಸಂಜೆ ಜರ್ಮನಿಯ ಆರ್ಥಿಕ ಮತ್ತು ಹವಾಮಾನ ಸಚಿವಾಲಯವು 1,000 ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಮತ್ತು 500 ಸ್ಟಿಂಗರ್‌ಗಳನ್ನು ಉಕ್ರೇನ್‍ಗೆ ಸಾಧ್ಯವಾದಷ್ಟು ಬೇಗ ರವಾನಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರು

    ಈ ವಿಚಾರವಾಗಿ ಪ್ರತಿಕ್ರಿಯಿಸಿದ ಜರ್ಮನ್ ಓಲಾಫ್ ಸ್ಕೋಲ್ಜ್ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಒಂದು ಮಹತ್ವದ ತಿರುವನ್ನು ಸೂಚಿಸುತ್ತದೆ. ಇದು ನಮ್ಮ ಸಂಪೂರ್ಣ ಯುದ್ಧಾನಂತರದ ಆದೇಶಕ್ಕೆ ಧಕ್ಕೆ ತರುತ್ತದೆ. ಈ ಪರಿಸ್ಥಿತಿಯಲ್ಲಿ, ವ್ಲಾಡಿಮಿರ್ ಪುಟಿನ್ ಅವರ ಆಕ್ರಮಣಕಾರಿ ಸೈನ್ಯದ ವಿರುದ್ಧ ಉಕ್ರೇನ್ ತನ್ನನ್ನು ರಕ್ಷಿಸಿಕೊಳ್ಳಲು ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

    ಉಕ್ರೇನ್ ಸೇರಿದಂತೆ ಸಂಘರ್ಷ ವಲಯಗಳಿಗೆ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡದಿರುವ ನೀತಿಗೆ ಜರ್ಮನಿ ದೀರ್ಘಕಾಲವಾಗಿ ಅಂಟಿಕೊಂಡಿದ್ದು, ಈ ನೀತಿಗೆ ಬದ್ಧರಾಗಿರುವುದಾಗಿ ಶುಕ್ರವಾರ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ರಷ್ಯಾ ಜಾಗತಿಕ ಪಾವತಿ ವ್ಯವಸ್ಥೆ ಕಡಿತ – ಯುಎಸ್, ಮಿತ್ರರಾಷ್ಟ್ರಗಳ ಒಪ್ಪಿಗೆ

    Ukraine

    ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಉಕ್ರೇನ್‍ಗೆ ಸಹಾಯ ಮಾಡಲು ಸಾಕಷ್ಟು ಮಿತ್ರದೇಶಗಳು ಮುಂದೆ ಬಂದಿದ್ದು, ಈಗಾಗಲೇ ಜರ್ಮನಿ ಉಕ್ರೇನ್ ಸೈನಿಕರ ರಕ್ಷಣೆಗೆ 5,000 ಹೆಲ್ಮೆಟ್‍ಗಳನ್ನು ಕೊಡುಗೆಯಾಗಿ ನೀಡಿದೆ. ಇದಲ್ಲದೆ, ಜರ್ಮನಿ 14 ಶಸ್ತ್ರಸಜ್ಜಿತ ವಾಹನಗಳು ಮತ್ತು 10,000 ಟನ್‍ಗಳಷ್ಟು ಇಂಧನವನ್ನು ಉಕ್ರೇನ್‍ಗೆ ಕಳುಹಿಸುವುದಾಗಿ ಹೇಳಿದೆ.

    ರಷ್ಯಾದ ದಾಳಿಯಿಂದ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಶಕ್ತವಾಗಿರಬೇಕು. ಹಾಗಾಗಿ ತುರ್ತಾಗಿ ಅಗತ್ಯವಿರುವ ವಸ್ತುಗಳನ್ನು ಒದಗಿಸುವಲ್ಲಿ ಫೆಡರಲ್ ಸರ್ಕಾರ ಉಕ್ರೇನ್‍ಗೆ ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ಸಚಿವ ಅನ್ನಾಲೆನಾ ಬೇರ್ಬಾಕ್ ಮತ್ತು ಆರ್ಥಿಕ ಸಚಿವ ರಾಬರ್ಟ್ ಹ್ಯಾಬೆಕ್ ಹೇಳಿದ್ದಾರೆ.

  • ಜರ್ಮನಿಯಿಂದ ಭಾರತಕ್ಕೆ ಬಂತು ಟರ್ನ್‌ಟೇಬಲ್‌ ಲ್ಯಾಡರ್ ಅಗ್ನಿಶಾಮಕ ಯಂತ್ರ – ಏನಿದರ ವಿಶೇಷತೆ?

    ಜರ್ಮನಿಯಿಂದ ಭಾರತಕ್ಕೆ ಬಂತು ಟರ್ನ್‌ಟೇಬಲ್‌ ಲ್ಯಾಡರ್ ಅಗ್ನಿಶಾಮಕ ಯಂತ್ರ – ಏನಿದರ ವಿಶೇಷತೆ?

    ನವದೆಹಲಿ: ಬಹುಮಹಡಿ ಕಟ್ಟಡಗಳ ಬೆಂಕಿಯನ್ನು ನಂದಿಸಲು ಸಹಾಯವಾಗಲಿರುವ ಟರ್ನ್‌ಟೇಬಲ್‌ ಲ್ಯಾಡರ್ ಅಗ್ನಿಶಾಮಕ ಯಂತ್ರ ಜನವರಿ 5ರಂದು ಜರ್ಮನಿಯಿಂದ ಭಾರತಕ್ಕೆ ಬಂದಿದೆ. ಎತ್ತರದ ಏಣಿಯನ್ನು ಹೊಂದಿರುವ ಈ ಯಂತ್ರ ಬಹುಮಹಡಿ ಕಟ್ಟಡದಲ್ಲಿ ಹೊತ್ತಿ ಉರಿಯುವ ಬೆಂಕಿಯನ್ನು ನಂದಿಸಲು ಸಹಾಯವಾಗಲಿದೆ.

    ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ 2 ವರ್ಷಗಳಿಂದ ಈ ಯಂತ್ರವನ್ನು ಭಾರತಕ್ಕೆ ತರಿಸಲು ಸಾಧ್ಯವಾಗಿರಲಿಲ್ಲ. ಈ ಯಂತ್ರವನ್ನು ದೆಹಲಿಯ ಅಗ್ನಿಶಾಮಕ ದಳ, ಜರ್ಮನಿಯಿಂದ ತರಿಸಿದೆ.

    ಟರ್ನ್‌ಟೇಬಲ್‌ ಲ್ಯಾಡರ್‌ನ ವಿಶೇಷತೆ:
    32 ಮೀಟರ್ ಉದ್ದದ ಏಣಿಯನ್ನು ಹೊಂದಿರುವ ಯಂತ್ರವು ಎಲ್‌ಇಡಿ ಲೈಟ್, ವಾಟರ್ ಮಾನಿಟರ್ ಸಿಸ್ಟಮ್, ಸೆನ್ಸಾರ್‌ಗಳೊಂದಿಗೆ ಶಸ್ತ್ರಸಜ್ಜಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜನವರಿ 5ರಂದು ತರಿಸಲಾದ ಯಂತ್ರವನ್ನು ದೆಹಲಿಯ ಕನ್ನಾಟ್ ಪ್ರದೇಶದ ಅಗ್ನಿಶಾಮಕ ಕೇಂದ್ರದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಯಾವುದೇ ಆರೋಪವಿಲ್ಲದಿದ್ರೂ 3 ವರ್ಷ ಜೈಲುವಾಸ ಅನುಭವಿಸಿದ ಸೌದಿ ರಾಜಕುಮಾರಿ!

    ಟರ್ನ್‌ಟೇಬಲ್‌ ಲ್ಯಾಡರ್ ಸ್ವಯಂಚಾಲಿತವಾಗಿದ್ದು, ಸುರಕ್ಷತಾ ವ್ಯವಸ್ಥೆಗಳನ್ನೂ ಒಳಗೊಂಡಿದೆ. ಹೀಗೆ ಇದು ಇತರ ಹೈಡ್ರಾಲಿಕ್ ಯಂತ್ರಗಳಿಗಿಂತಲೂ ಭಿನ್ನವಾಗಿದೆ. ಹೈಡ್ರಾಲಿಕ್ ಸಿಸ್ಟಮ್‌ನ ಯಂತ್ರಗಳಲ್ಲಿ ತೈಲ ಸೋರಿಕೆಯಂತಹ ದೋಷಗಳು ಕಂಡುಬಂದರೆ, ಕಾರ್ಯಾಚರಣೆಯಲ್ಲಿ ಅಡೆತಡೆಯಾಗುತ್ತದೆ. ಆದರೆ ಟರ್ನ್‌ಟೇಬಲ್‌ ಲ್ಯಾಡರ್ ಯಂತ್ರ ಹೈಡ್ರಾಲಿಕ್ ಯಂತ್ರಗಳಿಗಿಂತ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಸಂಯೋಜಿತ ಏಕಕಾಲಿಕ ಚಲನೆಗಳೊಂದಿಗೆ ಸಂಪೂರ್ಣ ಸ್ವಯಂಚಾಲಿತ ಟರ್ನ್‌ಟೇಬಲ್‌ ಲ್ಯಾಡರ್ ಎಲ್ಲಾ ಅಗ್ನಿಶಾಮಕ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೆ ಅತೀ ಅಗತ್ಯವಾಗಿದೆ. ವಿಶೇಷವಾಗಿ ಎತ್ತರದ ಕಟ್ಟಡಗಳಲ್ಲಿ ಇದರ ಉಪಯೋಗ ಅಪಾರವಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳದ ನಿರ್ದೇಶಕ ಅತುಲ್ ಗಾರ್ಗ್ ಹೇಳಿದರು. ಇದನ್ನೂ ಓದಿ: ಪಾಕಿಸ್ತಾನದ ಮರ‍್ರೆಯಲ್ಲಿ ಭಾರೀ ಹಿಮಪಾತ – 10 ಮಕ್ಕಳು ಸೇರಿ 22 ಮಂದಿ ಬಲಿ

    ಯಂತ್ರವನ್ನು ದೆಹಲಿ ಮೆಟ್ರೋ ನಿಗಮದ ಮೂಲಕ ಜರ್ಮನಿಯಿಂದ ಖರೀದಿಸಲಾಗಿದೆ. ಇದನ್ನು ಬಳಸುವ ಬಗ್ಗೆ ಜರ್ಮನಿ ತಜ್ಞರ ತಂಡದಿಂದ ಅಗ್ನಿಶಾಮಕ ಇಲಾಖೆಯ ಎಲ್ಲಾ ಶ್ರೇಣಿಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಒಂದು ವಾರದ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.