Tag: ಜರ್ಮನಿ

  • ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ

    ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ

    – ಪರಿಣತ ಭಾರತೀಯರು ಜರ್ಮನಿಗೆ ಬರಬಹುದು ಅಂತ ಬಿಗ್‌ ಆಫರ್‌

    ಬರ್ಲಿನ್: ಅಮೆರಿಕದ H-1B ವೀಸಾ‌ (H-1B Visa) ಶುಲ್ಕ ಹೆಚ್ಚಳ ವಿವಾದದ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಬಿಗ್‌ ಆಫರ್‌ ನೀಡಿದೆ. ವೃತ್ತಿಪರ ಪರಿಣತ ಭಾರತೀಯರಿಗೆ ಜರ್ಮನಿಗೆ ಬರಬಹುದು ಎಂದು ರಾಯಭಾರಿ ಸ್ವಾಗತ ಕೋರಿದ್ದಾರೆ.

    ಎಲ್ಲಾ ಹೆಚ್ಚು ಕೌಶಲ್ಯಪೂರ್ಣ ಭಾರತೀಯರಿಗೆ ನನ್ನ ಕರೆ ಇಲ್ಲಿದೆ. ಜರ್ಮನಿ ತನ್ನ ಸ್ಥಿರ ವಲಸೆ ನೀತಿಗಳೊಂದಿಗೆ ಮತ್ತು ಐಟಿ, ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸುತ್ತದೆ ಎಂದು ಫಿಲಿಪ್ ಅಕೆರ್ಮನ್ ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    ವೀಡಿಯೋ ಕೂಡ ಹಂಚಿಕೊಂಡಿರುವ ಅಕೆರ್ಮನ್‌, ಜರ್ಮನಿಯಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಗುಂಪಿನಲ್ಲಿ ಭಾರತೀಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.

    ಜರ್ಮನಿಯಲ್ಲಿ ಕೆಲಸ ಮಾಡುವ ಭಾರತೀಯರು, ಸ್ಥಳೀಯ ಜರ್ಮನಿಯರಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಏಕೆಂದರೆ, ಭಾರತೀಯರು ನಮ್ಮ ಸಮಾಜ ಮತ್ತು ನಮ್ಮ ಕಲ್ಯಾಣಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ, ಅವರಿಗೆ ಹೆಚ್ಚಿನ ಸಂಬಳ. ನಾವು ಕಠಿಣ ಪರಿಶ್ರಮದ ಜನರಿಗೆ ಉತ್ತಮ ಉದ್ಯೋಗಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

    ಹೆಚ್‌-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿ ಅಮೆರಿಕ ಸರ್ಕಾರ ಆದೇಶ ಹೊರಡಿಸಿದೆ. ಅಮೆರಿಕದ ಸ್ಥಳೀಯರಿಗೆ ಮಣೆ ಹಾಕುವ ಉದ್ದೇಶದಿಂದ ಟ್ರಂಪ್‌ ಅವರು ಈ ಕ್ರಮಕೈಗೊಂಡಿದ್ದಾರೆ. ಇದರಿಂದ ಅಮೆರಿಕದಲ್ಲಿ ಉದ್ಯೋಗ ಬಯಸುವ ಭಾರತ ಸೇರಿದಂತೆ ಇತರೆ ದೇಶಗಳ ಪರಿಣತ ಉದ್ಯೋಗಿಗಳಿಗೆ ತೊಂದರೆ ಆಗಲಿದೆ. ಇಷ್ಟು ಪ್ರಮಾಣದ ಹಣವನ್ನು ಅಮೆರಿಕ ಕಂಪನಿಗಳು ಭರಿಸಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಅಮೆರಿಕ ಕಂಪನಿಗಳು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿದೆ. ಅಮೆರಿಕದಲ್ಲಿ ವಿದೇಶಿಯರಿಗೆ ಉದ್ಯೋಗಾವಕಾಶ ಕಡಿಮೆಯಾಗುವ ಸಾಧ್ಯತೆ ಇದೆ.

  • ಶರಣಪ್ರಕಾಶ್ ಪಾಟೀಲ್ ನಿಯೋಗದಿಂದ ಜರ್ಮನಿ ಪ್ರವಾಸ

    ಶರಣಪ್ರಕಾಶ್ ಪಾಟೀಲ್ ನಿಯೋಗದಿಂದ ಜರ್ಮನಿ ಪ್ರವಾಸ

    – ಜರ್ಮನಿಯ ನಾರ್ತ್ ರೈನ್-ವೆಸ್ಟ್ಫಾಲಿಯಾ, ಡಸೆಲ್ಡಾರ್ಫ್‌ಗೆ ಭೇಟಿ
    – ಕೌಶಲ್ಯ ವಿನಿಯಮ ಒಪ್ಪಂದದ ನಿರೀಕ್ಷೆ

    ಬರ್ಲಿನ್: ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Dr.SharanPrakash Patil) ನೇತೃತ್ವದ ನಿಯೋಗ ಜರ್ಮನಿ (Germany) ಪ್ರವಾಸ ಕೈಗೊಂಡಿದೆ.

    ಸಚಿವರ ನೇತೃತ್ವದ ನಿಯೋಗವು, ಜರ್ಮನಿಯ ನಾರ್ತ್ ರೈನ್-ವೆಸ್ಟ್ಫಾಲಿಯಾ (ಎನ್‌ಆರ್‌ಡಬ್ಲ್ಯೂ), ಡಸೆಲ್ಡಾರ್ಫ್ ಸೇರಿದಂತೆ ಜರ್ಮನಿಯ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ, ಕೌಶಲ್ಯಾಭಿವೃದ್ಧಿ ಹಾಗೂ ಕೌಶಲ್ಯ ವಿನಿಮಯ, ಉದ್ಯೋಗವಾಕಾಶ ಸೇರಿದಂತೆ ಹಲವಾರು ವಿಷಯಗಳ ಕುರಿತು ಅಲ್ಲಿನ ನಿಯೋಗಮಟ್ಟದ ಸಮಾಲೋಚನೆ ಸಭೆ ನಡೆಸಲಿದೆ. ಇದನ್ನೂ ಓದಿ: ಕುರ್ಚಿಯಾಟದಲ್ಲಿ ಸಿಎಂ, ಡಿಸಿಎಂ ಮೈಂಡ್ ಗೇಮ್ – ಟ್ರಿಕ್ಕಿ ಪಾಲಿಟಿಕ್ಸ್‌ನಲ್ಲಿ ಯಾರಾಗ್ತಾರೆ ವಿನ್?

    ಯಾಂತ್ರೀಕೃತ ಕೈಗಾರಿಕೆ, ಮೆಕಾಟ್ರಾನಿಕ್ಸ್ ಮತ್ತು ಸ್ಮಾರ್ಟ್ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಅಪ್ರೆಂಟಿಸ್‌ಶಿಪ್, ಕೌಶಲ್ಯ ಸಹಯೋಗದ ಕುರಿತು ಸಚಿವರ ನೇತೃತ್ವದ ನಿಯೋಗ ಅಧ್ಯಯನ ನಡೆಸಿ, ಕೆಲವು ಮಹತ್ವದ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ. ಇದನ್ನೂ ಓದಿ: ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು – ಸಂಪುಟ ಸಭೆಯಲ್ಲಿ ಹಲವು ಐತಿಹಾಸಿಕ ನಿರ್ಣಯ

    ಷ್ನೇಯ್ಡರ್ ಎಲೆಕ್ಟ್ರಿಕ್, ಡಸೆಲ್ಡಾರ್ಫ್
    ಬೆಂಗಳೂರಿನ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ವೈ.ಕೆ.ದಿನೇಶ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳ ನಿಯೋಗ ಡಸೆಲ್ಡಾರ್ಫ್ನಲ್ಲಿ ಜರ್ಮನ್ ನರ್ಸಿಂಗ್ ಅಪ್ರೆಂಟಿಶಿಪ್, ಕರ್ನಾಟಕ ಮತ್ತು ಎನ್‌ಆರ್‌ಡಬ್ಲ್ಯೂ ನಡುವೆ ರಚನಾತ್ಮಕ ಕೌಶಲ್ಯ ವಲಸೆ ಮಾರ್ಗವನ್ನು ರೂಪಿಸುವ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿತು. ಇದನ್ನೂ ಓದಿ: 5 ದಿನಕ್ಕೆ 10 ಕೋಟಿ – ಇದು ಅಕ್ಷಯ್‌ ಕುಮಾರ್‌ ಕಾಲ್‌ ಶೀಟ್!

    ಜಿಟಿಟಿಸಿಯ ತಾಂತ್ರಿಕ ಪಠ್ಯಕ್ರಮವನ್ನು ಜರ್ಮನ್ ತರಬೇತಿ ಮಾನದಂಡಗಳೊಂದಿಗೆ ಅಳವಡಿಸಿಕೊಳ್ಳುವುದು, ಕರ್ನಾಟಕದ ಯುವಕರಿಗೆ ರಚನಾತ್ಮಕ ಪೂರ್ವ-ನಿರ್ಗಮನ ತರಬೇತಿಯನ್ನು ಪ್ರಾಯೋಗಿಕವಾಗಿ ನೀಡುವ ಬಗ್ಗೆ ಅಧಿಕಾರಿಗಳು ಸಮಾಲೋಚನೆ ನಡೆಸಿದರು.

    ಸನಾ ಕ್ಲಿನಿಕೆನ್
    ಕರ್ನಾಟಕದ ತರಬೇತಿ ಪಡೆದ ನರ್ಸಿಂಗ್ ವೃತ್ತಿಪರರಿಗೆ ಪ್ಫ್ಲೆಜ್ ಆಸ್‌ಬಿಲ್ಡಂಗ್ (ನರ್ಸಿಂಗ್ ಅಪ್ರೆಂಟಿಸ್‌ಶಿಪ್‌ಗಳು) ಮತ್ತು ನೈತಿಕ ವಲಸೆ ಚೌಕಟ್ಟುಗಳಿಗೆ ಮಾರ್ಗಗಳನ್ನು ಅನ್ವೇಷಿಸಲು ಸಚಿವರು ಆರೋಗ್ಯ ಕ್ಷೇತ್ರದ ಪ್ರತಿನಿಧಿಗಳನ್ನು ಸಹ ಭೇಟಿಯಾದರು. ಇದನ್ನೂ ಓದಿ: ಕೊಡಗಿನಲ್ಲಿ ಬಾಂಗ್ಲಾ ನುಸುಳುಕೋರರ ಆತಂಕ – ಕಾರ್ಮಿಕರ ಮೇಲೆ ನಿಗಾ ವಹಿಸುವಂತೆ ಎಚ್ಚರಿಕೆ

    ಕರ್ನಾಟಕ ಮತ್ತು ನಾರ್ತ್ ರೈನ್-ವೆಸ್ಟ್ಫಾಲಿಯಾ ನಡುವೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ದೀರ್ಘಕಾಲೀನ ಕೌಶಲ್ಯ ಪಾಲುದಾರಿಕೆ, ಕರ್ನಾಟಕದ ಸಾವಿರಾರು ಯುವಕರು ಜರ್ಮನಿಯಲ್ಲಿ ಉತ್ತಮ ಗುಣಮಟ್ಟದ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುವ ಕುರಿತು ಸಚಿವರು ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

  • Gold Smuggling Case| ಪ್ರಭಾವಿ ನಾಯಕನ ಜರ್ಮನಿ ಟೂರ್ ಬಗ್ಗೆ ಅನುಮಾನ

    Gold Smuggling Case| ಪ್ರಭಾವಿ ನಾಯಕನ ಜರ್ಮನಿ ಟೂರ್ ಬಗ್ಗೆ ಅನುಮಾನ

    ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಗೆ ಪ್ರಕರಣದ (Gold Smuggling Case) ತನಿಖೆ ತೀವ್ರಗೊಳ್ಳುತ್ತಿದ್ದಂತೆ ಕರ್ನಾಟಕದ (Karnataka) ಪ್ರಭಾವಿ ನಾಯಕನ ಜರ್ಮನಿ (Germany Tour) ಟೂರ್ ಬಗ್ಗೆ ಈಗ ಭಾರೀ ಅನುಮಾನ ಎದ್ದಿದೆ.

    ಹೌದು. ಕಳ್ಳ ಸಾಗಾಣಿಕೆ ಪ್ರಕರಣ ತನಿಖೆಗೆ ಈಗ ಕೇಂದ್ರೀಯ ತನಿಖಾ ದಳ (CBI) ಎಂಟ್ರಿ ಕೊಟ್ಟಿದೆ. ಈ ತನಿಖೆಯಲ್ಲಿ ನಾಲ್ಕೈದು ವರ್ಷದ ವಿದೇಶಿ ಪ್ರವಾಸದ ಲಿಂಕ್ ಜಾಲಾಡುವ ಸಾಧ್ಯತೆಯಿದೆ. ಇದನ್ನೂ ಓದಿ: 2 ವರ್ಷದಲ್ಲಿ ದುಬೈಗೆ 52 ಟ್ರಿಪ್‌ – ಈ ಪೈಕಿ 45 ಬಾರಿ ಒಂದೇ ದಿನದಲ್ಲಿ ಹೋಗಿ ಬಂದಿದ್ದ ರನ್ಯಾ

    ತನ್ನ ಬಗ್ಗೆ ಅನುಮಾನ ಬರುತ್ತಿದ್ದಂತೆ ನನಗೆ ಯಾವುದೇ ಸಂಬಂಧ ಇಲ್ಲ. ನಾನು ವೈಯಕ್ತಿಕ ಪ್ರವಾಸಕ್ಕೆ ಜರ್ಮನಿಗೆ ತೆರಳಿದ್ದೇನೆ ಎಂದು ಆಪ್ತರ ಜೊತೆ ಆ ನಾಯಕ ಹೇಳಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.

    ಜರ್ಮನಿ ಪ್ರವಾಸಕ್ಕೂ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೂ ಯಾವುದೇ ಸಂಬಂಧ ಇಲ್ಲ. ನಾನು ಸ್ನೇಹಿತರ ಜೊತೆ ಜರ್ಮನಿಗೆ ಹೋಗಿದ್ದೇನೆ. ಸಿಬಿಐ ಟೂರ್ ಟ್ರ‍್ಯಾಕ್ ಮಾಡಿದ್ರೂ ತನಗೆ ಸಂಬಂಧ ಇಲ್ಲ ಎಂದು ಸಮರ್ಥನೆ ನೀಡಿದ್ದಾರೆ.

    ಹೀಗಿದ್ದರೂ ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೂ ಆ ವ್ಯಕ್ತಿ ಆತಂಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಸಿಬಿಐ ತನಿಖೆಯಲ್ಲಿ ಹೆಸರು ಬಂದರೆ ರಾಜ್ಯದಲ್ಲಿ ದೊಡ್ಡ ಪೊಲಿಟಿಕಲ್‌ ಟರ್ನ್‌ ತೆಗೆದುಕೊಳ್ಳುವ ಸಾಧ್ಯತೆಯಿದೆ.

     

  • ಜರ್ಮನಿಯ ಕ್ರಿಸ್ಮಸ್‌ ಮಾರುಕಟ್ಟೆಯಲ್ಲಿ ಕಾರು ದಾಳಿ – ಇಬ್ಬರು ಸಾವು, 60 ಮಂದಿಗೆ ಗಾಯ

    ಜರ್ಮನಿಯ ಕ್ರಿಸ್ಮಸ್‌ ಮಾರುಕಟ್ಟೆಯಲ್ಲಿ ಕಾರು ದಾಳಿ – ಇಬ್ಬರು ಸಾವು, 60 ಮಂದಿಗೆ ಗಾಯ

    ಬರ್ಲಿನ್‌: ಜರ್ಮನಿಯ ಮ್ಯಾಗ್ಡೆಬರ್ಗ್‌ನ ಕ್ರಿಸ್‍ಮಸ್ ಮಾರುಕಟ್ಟೆಯಲ್ಲಿ (German Christmas Market) ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ (Car Attack_ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಪೂರ್ವಕ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ.

    ದಾಳಿ ನಡೆಸಿದ ಕಾರು ಚಾಲಕ 50 ವರ್ಷ ವಯಸ್ಸಿನ ವೈದ್ಯನಾಗಿದ್ದು, ಈತ ಮೂಲತಃ ಸೌದಿ ಅರೇಬಿಯಾದವನು (Saudi Man) ಎನ್ನಲಾಗಿದೆ. ಜರ್ಮನಿಯ ಕಾಯಂ ನಿವಾಸಿ ಕಾರ್ಡ್ ಪಡೆದಿದ್ದ. ಸದ್ಯ ಘಟನೆ ಬಳಿಕ ಈತನನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ ಸಂಬಂಧ ಟ್ರಂಪ್‌ ಜೊತೆ ಮಾತುಕತೆಗೆ ಸಿದ್ಧ: ಪುಟಿನ್‌

    ಸದ್ಯಕ್ಕೆ ಆತನೊಬ್ಬನೇ ದಾಳಿಕೋರ ಎಂದು ನಂಬಲಾಗಿದೆ. ನಮಗೆ ತಿಳಿದಂತೆ ಸದ್ಯದಲ್ಲಿ ನಗರಕ್ಕೆ ಬೇರೆ ಯಾವುದೇ ಅಪಾಯ ಇಲ್ಲ ಎಂದು ಸ್ಯಾಕ್ಸೋನಿ-ಅನ್ಹಾಲ್ಟ್ ಗವರ್ನರ್ ರೀನರ್ ಹಸ್ಲೋಫ್ ಸ್ಪಷ್ಟಪಡಿಸಿದ್ದಾರೆ. ಈ ಭಯಾನಕ ದುರಂತದಲ್ಲಿ ಹಲವರು ಸಂತ್ರಸ್ತರಾಗಿದ್ದಾರೆ ಎಂದು ಅವರು ಕಂಬನಿ ಮಿಡಿದಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ಕಪ್ಪು ಕಾರೊಂದು ಜನದಟ್ಟಣೆಯಿದ್ದ ಕಡೆಗೆ ರಭಸದಿಂದ ನುಗ್ಗಿದೆ. ಭಯಭೀತರಾದ ಜನತೆ ಅಡ್ಡಾದಿಡ್ಡಿಯಾಗಿ ಓಡಿಸಿದ ಪರಿಣಾಮ ದುರಂತ ಸಂಭವಿಸಿರುವುದು ಕಂಡುಬಂದಿದೆ. ಇಡೀ ಘಟನಾವಳಿಯ ವಿಡಿಯೋವನ್ನು ನಾಗರಿಕರೊಬ್ಬರು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್‌ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ – ಮುಂದಿನ ವರ್ಷದಿಂದಲೇ ಎಲ್ಲಾ ನಾಗರಿಕರಿಗೂ ಫ್ರೀ!

    https://youtu.be/YlG_OlaLqTs?si=lSo-h5mJkp1GX1qv

    ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಅಂಬುಲೆನ್ಸ್‌ಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಟ್ರೆಚರ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್‌ ಸಂದೇಶ

  • 2007ರ ಘಟನೆ ಉಲ್ಲೇಖಿಸಿ ಎಂಜೆಲಾ ಮರ್ಕೆಲ್ ಬಳಿ ಈಗ ಕ್ಷಮೆ ಕೇಳಿದ ಪುಟಿನ್‌

    2007ರ ಘಟನೆ ಉಲ್ಲೇಖಿಸಿ ಎಂಜೆಲಾ ಮರ್ಕೆಲ್ ಬಳಿ ಈಗ ಕ್ಷಮೆ ಕೇಳಿದ ಪುಟಿನ್‌

    ಮಾಸ್ಕೋ: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಜರ್ಮನಿಯ ಮಾಜಿ ಚಾನ್ಸೆಲರ್ (Germany ex- chancellor) ಎಂಜೆಲಾ ಮರ್ಕೆಲ್ (Angela Merkel) ಅವರಲ್ಲಿ ಕ್ಷಮೆಯಾಚಿಸಿದ್ದಾರೆ.

    2007 ರಲ್ಲಿ ತಮ್ಮ ಮುದ್ದಿನ ಲ್ಯಾಬ್ರಡಾರ್ ನಾಯಿಯನ್ನು (Dog) ಅವರೊಂದಿಗೆ ಸಭೆಗೆ ಕರೆತಂದಾಗ ನಾನು ಅವರನ್ನು ಹೆದರಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ತಿಳಿಸಿದರು.

    ಕಝಕಿಸ್ತಾನದ ರಾಜಧಾನಿ ಅಸ್ತಾನದಲ್ಲಿ ಮಾತನಾಡಿದ ಅವರು, ಅವರು ನಾಯಿಗೆ ಹೆದರುತ್ತಾರೆ ಎನ್ನುವುದು ನನಗೆ ತಿಳಿದಿರಲಿಲ್ಲ. ನಾನು ಮತ್ತೊಮ್ಮೆ ಮಾಧ್ಯಮದ ಮೂಲಕ ಎಂಜೆಲಾ ಮರ್ಕೆಲ್ ಅವರಲ್ಲಿ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ಮತ್ತೆ ರಷ್ಯಾಗೆ ಬನ್ನಿ. ಈ ಭೇಟಿಯ ಸಂದರ್ಭದಲ್ಲಿ ನಾನು ಈ ರೀತಿ ವರ್ತಿಸುವುದಿಲ್ಲ  ಎಂದು ಹೇಳಿದರು.

    ಈಗ ಕ್ಷಮೆ ಕೇಳಿದ್ದು ಯಾಕೆ?
    ಎಂಜೆಲಾ ಮರ್ಕೆಲ್ ಅವರ ಆತ್ಮಚರಿತ್ರೆ ಮಂಗಳವಾರ (ನ.26) ಬಿಡುಗಡೆಯಾಗಿತ್ತು. ಈ ಪುಸ್ತಕದಲ್ಲಿ ನನಗೆ ಇರುಸು ಮುರುಸು ಮಾಡಲೆಂದೇ ಪುಟಿನ್‌ ನಾಯಿ ತಂದಿದ್ದರು ಎಂದು ಬರೆದಿದ್ದರು.

    ಪುಟಿನ್ ಕೆಲವೊಮ್ಮೆ ಸಾಕುಪ್ರಾಣಿಗಳನ್ನು ವಿದೇಶಿ ಅತಿಥಿಗಳ ಜೊತೆಗಿನ ಸಭೆಗೆ ಕರೆತರುವುದು ನನಗೆ ತಿಳಿದಿತ್ತು. ನಾನು ನಾಯಿಗೆ ಹೆದರುವ ಕಾರಣ ಪುಟಿನ್‌ ಜೊತೆಗಿನ ಸಭೆಗೆ ನಾಯಿ ತರದಂತೆ ನಾನು ಹೇಳಿದ್ದೆ. ಹೀಗಿದ್ದರೂ ನಾಯಿಯನ್ನು ತರಲಾಗಿತ್ತು. ನಾನು ನಾಯಿಯನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದ್ದೆ. ನನ್ನ ಪಕ್ಕದಲ್ಲೇ ನಾಯಿ ಸಂಚರಿಸುತ್ತಿದ್ದಾಗ ನನಗೆ ಭಯವಾಗುತ್ತಿತ್ತು. ಪುಟಿನ್‌ ಮುಖಭಾವವನ್ನು ಗಮನಿಸಿದಾಗ ಅವರು ನನ್ನ ಸ್ಥಿತಿಯನ್ನು ನೋಡಿ ಆನಂದಿಸುತ್ತಿದ್ದರು ಎಂದು ಬರೆದಿದ್ದಾರೆ.

    2007 ರಲ್ಲಿ ಎಂಜೆಲಾ ಮರ್ಕೆಲ್ ಅವರನ್ನು ಪುಟಿನ್‌ ಅವರು ರಷ್ಯಾದ ಸೋಚಿಯಲ್ಲಿರುವ ತಮ್ಮ ಬೇಸಿಗೆಯ ನಿವಾಸದಲ್ಲಿ ಭೇಟಿಯಾದರು. ಈ ಭೇಟಿಯ ವೇಳೆ ಪುಟಿನ್‌ ಅವರು ನಾಯಿಯನ್ನು ಕರೆ ತಂದಿದ್ದರು. ಸಭೆಗೆ ನಾಯಿ ತಂದಿದ್ದರಿಂದ ಮರ್ಕೆಲ್ ಭಯಗೊಂಡಿದ್ದರು. ಅಷ್ಟೇ ಅಲ್ಲದೇ ಮರ್ಕೆಲ್‌ ಅಹಿತಕರವಾಗಿ ಕಾಣುವಂತೆ ಫೋಟೋ ತೆಗೆಯಲಾಗಿತ್ತು.

    ಎಂಜೆಲಾ ಮರ್ಕೆಲ್ 22 ನವೆಂಬರ್ 2005 ರಿಂದ 8 ಡಿಸೆಂಬರ್ 2021 ರವರೆಗೆ ಜರ್ಮನಿಯ ಚಾನ್ಸೆಲರ್ ಆಗಿದ್ದರು . ಇಷ್ಟು ದೀರ್ಘ ಅವಧಿವರೆಗೆ ಚಾನ್ಸೆಲರ್ ಆಗಿದ್ದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಎಂಜೆಲಾ ಮರ್ಕೆಲ್ ಪಾತ್ರವಾಗಿದ್ದಾರೆ.

    ವ್ಲಾಡಿಮಿರ್ ಪುಟಿನ್ ಅವರಿಗೆ ನಾಯಿಗಳು ಪ್ರಾಣಿಗಳೆಂದರೆ ಇಷ್ಟ. ಹಿಂದೆ ಹಲವಾರು ಬಾರಿ ವಿಶ್ವದ ನಾಯಕರ ಜೊತೆಗಿನ ಭೇಟಿ ಸಂದರ್ಭದಲ್ಲಿ ನಾಯಿಗಳನ್ನು ಕರೆ ತಂದಿದ್ದರು.

  • ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ

    ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ

    ಬರ್ಲಿನ್‌: ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ (OnePlus Phones) ಮಾರಾಟವನ್ನು ನಿಷೇಧಿಸಲಾಗಿದೆ. ದೇಶದಲ್ಲಿ ಪೇಟೆಂಟ್ ಸಮಸ್ಯೆಗಳ (Patent Dispute) ಕಾನೂನು ವಿವಾದದಿಂದಾಗಿ ಜರ್ಮನ್ (Germany) ಅಧಿಕಾರಿಗಳು ಒನ್‌ಪ್ಲಸ್‌ ಉತ್ಪನ್ನಗಳನ್ನು ನಿಷೇಧಿಸಿದ್ದಾರೆ.

    ವೈರ್‌ಲೆಸ್ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿಯಾದ ಇಂಟರ್‌ಡಿಜಿಟ್‌ ಮತ್ತು ಒನ್‌ ಪ್ಲಸ್‌ ಮಧ್ಯೆ 5ಜಿ ಮತ್ತು ಮೊಬೈಲ್‌ ತಂತ್ರಜ್ಞಾನ ವಿಚಾರವಾಗಿ ತಿಕ್ಕಾಟ ನಡೆಯುತ್ತಿದೆ.
    ಇದನ್ನೂ ಓದಿ: ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಅಸಾಂವಿಧಾನಿಕ – ತಾರತಮ್ಯ ನಡೆದರೆ ಆಯಾ ರಾಜ್ಯಗಳೇ ಹೊಣೆ: ಸುಪ್ರೀಂ

    5ಜಿಯಲ್ಲಿ ತನ್ನ ಪೇಟೆಂಟ್‌ ಅನ್ನು ಒನ್‌ಪ್ಲಸ್‌ ಉಲ್ಲಂಘಿಸಿದೆ ಎಂದು ಇಂಟರ್‌ಡಿಜಿಟ್‌ ಆರೋಪಿಸಿದೆ. ನಿಷೇಧದಿಂದಾಗಿ ಒನ್‌ಪ್ಲಸ್‌ ಓಪನ್‌, ಒನ್‌ಪ್ಲಸ್‌ 12, ಒನ್‌ ಪ್ಲಸ್‌ 11 ಫೋನ್‌ಗಳ ಮಾರಾಟವನ್ನು ಆನ್‌ಲೈನ್‌ ಸ್ಟೋರ್‌ನಿಂದಲೇ ತೆಗೆಯಲಾಗಿದೆ. ಸದ್ಯ ಜರ್ಮನಿಯಲ್ಲಿ ಒನ್‌ಪ್ಲಸ್‌ ಪ್ಯಾಡ್‌ 2 ಮತ್ತು ಒನ್‌ ಪ್ಲಸ್‌ ವಾಚ್‌ 2 ಮಾತ್ರ ಆನ್‌ಲೈನ್‌ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಎರಡೂ ಉತ್ಪನ್ನಗಳಿಗೆ ಸೆಲ್ಯುಲಾರ್ ಬೆಂಬಲದ ಅಗತ್ಯ ಇಲ್ಲದ ಕಾರಣ ಇವುಗಳಿಗೆ ನಿಷೇಧ ಅನ್ವಯವಾಗುವುದಿಲ್ಲ.

    ಈ ಹಿಂದೆ ನೋಕಿಯಾ ಕಂಪನಿಯ ಜೊತೆಗೆ ಒನ್‌ ಪ್ಲಸ್‌ ಸಂಘರ್ಷ ಇತ್ತು.ಇದರಿಂದಾಗಿ ಒನ್‌ಪ್ಲಸ್‌ ಮೇಲೆ ಜರ್ಮನಿಯಲ್ಲಿ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ವಿವಾದ ಪರಿಹಾರವಾದ ನಂತರ ಒನ್‌ಪ್ಲಸ್‌ ಜರ್ಮನಿ ಮಾರುಕಟ್ಟೆಗೆ ಎಂಟ್ರಿಕೊಟ್ಟಿತ್ತು.

     

  • Paris Olympics | ಟೀಂ ಇಂಡಿಯಾದ ಚಿನ್ನದ ಪದಕದ ಕನಸು ಭಗ್ನ

    Paris Olympics | ಟೀಂ ಇಂಡಿಯಾದ ಚಿನ್ನದ ಪದಕದ ಕನಸು ಭಗ್ನ

    – ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೋಲು

    ಪ್ಯಾರಿಸ್‌: 44 ವರ್ಷಗಳ ಬಳಿಕ ಒಲಿಂಪಿಕ್ಸ್‌ (Olympics) ಹಾಕಿಯಲ್ಲಿ (Hockey) ಫೈನಲ್‌ ಪ್ರವೇಶದ ಕನಸು ಕಂಡಿದ್ದ ಟೀಂ ಇಂಡಿಯಾದ (Team India) ಕನಸು ಭಗ್ನಗೊಂಡಿದೆ. ಸೆಮಿಫೈನಲ್‌ನಲ್ಲಿ ಜರ್ಮನಿ (Germany) ವಿರುದ್ಧ 3-2 ಗೋಲುಗಳಿಂದ ಸೋತ ಕಂಚಿನ ಪದಕಕ್ಕೆ ಹೋರಾಡಬೇಕಿದೆ.

    ಆರಂಭದ 7ನೇ ನಿಮಿಷದಲ್ಲಿ ಭಾರತ ಮೊದಲ ಗೋಲು ಬಾರಿಸಿತು. ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮೊದಲ ಗೋಲು ಬಾರಿಸಿದರು. ಆದರೆ 18 ಮತ್ತು 27ನೇ ನಿಮಿಷದಲ್ಲಿ ಜರ್ಮನಿ 2 ಗೋಲು ಬಾರಿಸಿ ಮೊದಲಾರ್ಧದಲ್ಲಿ 2-1 ಮುನ್ನಡೆ ಪಡೆಯಿತು.


    ದ್ವಿತೀಯಾರ್ಧದಲ್ಲಿ ಪ್ರಬಲವಾಗಿ ಹೋರಾಡಿದ ಭಾರತ 36ನೇ ನಿಮಿಷದಲ್ಲಿ ಗೋಲ್‌ ಹೊಡೆಯುವ ಮೂಲಕ ಸಮಬಲ ಸಾಧಿಸಿತು. ಆದರೆ 54ನೇ ನಿಮಿಷದಲ್ಲಿ ಜರ್ಮನಿಯ ಮಿಲ್ಟ್‌ಕಾವು ಗೋಲು ಹೊಡೆದು ಮುನ್ನಡೆ ತಂದುಕೊಟ್ಟರು. ಇದನ್ನೂ ಓದಿ: ವಿನೇಶ್‌ ಫೋಗಟ್‌ ಫೈನಲ್‌ಗೆ ಲಗ್ಗೆ – ಒಲಿಂಪಿಕ್ಸ್‌ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು

    ಕೊನೆಯ 2 ನಿಮಿಷ ಇದ್ದಾಗ ಗೋಲ್‌ಕೀಪರ್‌ ಶ್ರೀಜೇಶ್‌ ಅವರನ್ನು ಹೊರಗಡೆ ಇಟ್ಟು ಹೆಚ್ಚುವರಿ ಆಟಗಾರ ಶಮ್ಶೇರ್‌ ಸಿಂಗ್‌ ಸಿಂಗ್‌ ಅವರನ್ನು ಆಡಿಸಲಾಯಿತು. ಇನ್ನೇನು ಪಂದ್ಯ ಮುಗಿಯುವಷ್ಟರಲ್ಲಿ ಭಾರತ ಗೋಲ್‌ ಹೊಡೆಯುವ ಅವಕಾಶ ಸಿಕ್ಕಿತ್ತು. ಆದರೆ ಚೆಂಡು ಗೋಲು ಪೆಟ್ಟಿಗೆಯ ಮೇಲಕ್ಕೆ ಹೋಗುವ ಮೂಲಕ ಫೈನಲ್‌ ಪ್ರವೇಶಿಸುವ ಕನಸು ಛಿದ್ರಗೊಂಡಿತು. ಆರಂಭದಲ್ಲಿ ಭಾರತಕ್ಕೆ ಹಲವು ಪೆನಾಲ್ಟಿ ಅವಕಾಶ ಸಿಕ್ಕಿತ್ತು. ಆದರೆ ಭಾರತ ಗೋಲು ಹೊಡೆಯುವಲ್ಲಿ ವಿಫಲವಾಗಿತ್ತು.


    ಕಂಚಿಗಾಗಿ ಹೋರಾಟ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಬ್ರಿಟನ್‌ ವಿರುದ್ಧ ಗೆದ್ದು ಕಂಚು ಗೆದ್ದುಕೊಂಡಿತ್ತು. ಗುರುವಾರ ಸ್ಪೇನ್‌ ವಿರುದ್ಧ ಕಂಚಿನ ಪದಕಕ್ಕೆ ಸೆಣಸಾಡಲಿದೆ. ಈ ಹಿಂದೆ 1980 ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿ ಭಾರತ ತಂಡ ಚಿನ್ನವನ್ನು ಗೆದ್ದುಕೊಂಡಿತ್ತು.

  • ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಪ್ರಜ್ವಲ್ ಗರ್ಲ್‍ಫ್ರೆಂಡ್‍ಗೆ SIT ನೋಟಿಸ್

    ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಪ್ರಜ್ವಲ್ ಗರ್ಲ್‍ಫ್ರೆಂಡ್‍ಗೆ SIT ನೋಟಿಸ್

    ಬೆಂಗಳೂರು: ಅತ್ಯಾಚಾರ ಆರೋಪದಡಿಯಲ್ಲಿ ಬಂಧನವಾಗಿರೋ ಹಾಸನದ ಮಾಜಿ ಸಂಸದ ಆರೋಪಿ ಪ್ರಜ್ವಲ್ ರೇವಣ್ಣಗೆ (Prajwal Revanna) ವಿದೇಶದಲ್ಲಿದ್ದಾಗ ಗರ್ಲ್‍ಫ್ರೆಂಡ್ ಸಹಾಯ ಮಾಡಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ವಿಶೇಷ ತನಿಖಾ ದಳ (ಎಸ್‍ಐಟಿ) ತನಿಖೆಯ ವೇಳೆ ಬಹಿರಂಗವಾಗಿದೆ.

    ಆರೋಪಿ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯ ಜೊತೆ ಇರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜರ್ಮನಿಗೆ (Germany) ಹೋಗಿ ಅಡಿಗಿಕೊಂಡಿದ್ದ. ಸುಮಾರು 34 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ಜರ್ಮನಿಯಲ್ಲಿದ್ರು. ಈ ವೇಳೆ ಆರೋಪಿ ಪ್ರಜ್ವಲ್‍ಗೆ ಗರ್ಲ್‍ಫ್ರೆಂಡ್ ಸಹಾಯ ಮಾಡಿರೋದು ಬೆಳಕಿಗೆ ಬಂದಿದೆ.

    ಹಾಗಾಗಿ ಎಸ್‍ಐಟಿ ಅಧಿಕಾರಿಗಳು ಆರೋಪಿ ಪ್ರಜ್ವಲ್ ಸ್ನೇಹಿತೆಗೆ ನೋಟಿಸ್ ಕೊಟ್ಟಿದ್ದಾರೆ. ಪ್ರಜ್ವಲ್‍ಗೆ ವಿದೇಶದಲ್ಲಿರುವಾಗ ಸಹಾಯ ಮಾಡಿರೋ ಬಗ್ಗೆ ದಾಖಲೆಗಳಿದ್ದು, ಪ್ರಕರಣ ಸಂಬಂಧ ಮಾಹಿತಿ ನೀಡುವಂತೆ ಕೋರಿ ಎಸ್‍ಐಟಿ ಅಧಿಕಾರಿಗಳು ಪ್ರಜ್ವಲ್ ಗರ್ಲ್‍ಫ್ರೆಂಡ್‍ಗೆ ನೋಟಿಸ್ ಕೊಟ್ಟಿದೆ. ಇದನ್ನೂ ಓದಿ: ಗುಜರಿ ಗೋಡೌನ್‍ನಲ್ಲಿ ವಿಷಾನಿಲ ಸೋರಿಕೆ- 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಐವರ ಸ್ಥಿತಿ ಗಂಭೀರ

  • ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಪ್ರಜ್ವಲ್‌

    ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಪ್ರಜ್ವಲ್‌

    ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna) ಜರ್ಮನಿಯ ಮ್ಯೂನಿಕ್‌ನಿಂದ (Munich Airport) ಬೆಂಗಳೂರಿಗೆ (Bengaluru) ಪ್ರಯಾಣ ಬೆಳೆಸಿದ್ದಾರೆ.

    ಮ್ಯೂನಿಕ್‌ ವಿಮಾನ ನಿಲ್ದಾಣದ ವಲಸೆ ವಿಭಾಗ ಬೆಂಗಳೂರು ವಿಮಾನ ನಿಲ್ದಾಣದ ವಲಸೆ ವಿಭಾಗಕ್ಕೆ  ಪ್ರಯಾಣಿಕರ ಪಟ್ಟಿ ಕಳುಹಿಸಿದೆ. ಈ ಪಟ್ಟಿಯಲ್ಲಿ ಪ್ರಜ್ವಲ್‌ ರೇವಣ್ಣ ಹೆಸರು ಇರುವುದನ್ನು ಎಸ್‌ಐಟಿ ಖಚಿತ ಪಡಿಸಿದೆ.

    ಲುಫ್ತನ್ಸಾ ವಿಮಾನದಲ್ಲಿ 3 ಲಕ್ಷ ರೂ. ಖರ್ಚು ಮಾಡಿ ಬಿಸಿನೆಸ್‌ ದರ್ಜೆಯ (Business Class) ಟಿಕೆಟ್‌ ಖರೀದಿಸಿ ಪ್ರಜ್ವಲ್‌ ಪ್ರಯಾಣ ಮಾಡುತ್ತಿದ್ದಾರೆ. ಒಟ್ಟು 23 ಬಿಸಿನೆಸ್‌ ದರ್ಜೆಯ ಟಿಕೆಟ್‌ ಪೈಕಿ 8 ಮಂದಿ ಮಾತ್ರ ಬುಕ್‌ ಮಾಡಿದ್ದಾರೆ. ಪ್ರಜ್ವಲ್‌ ರೇವಣ್ಣ ಒಬ್ಬಂಟಿಯಾಗಿ ವಿಂಡೋ ಸೀಟ್‌ನಲ್ಲಿ ಕುಳಿತಿದ್ದಾರೆ.

    ಭಾರತೀಯ ಕಾಲಮಾನ ಸಂಜೆ 4:09ಕ್ಕೆ ವಿಮಾನ ಟೇಕಾಫ್‌ ಆಗಿದ್ದು ಮಧ್ಯರಾತ್ರಿ 1:05 ರ ವೇಳೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್‌ ಆಗಲಿದೆ. ಈಗಾಗಲೇ ಎಸ್‌ಐಟಿ ತಂಡ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದು, ಪ್ರಜ್ವಲ್‌ ಚೆಕ್‌ ಔಟ್‌ ಆಗುತ್ತಿದ್ದಂತೆ ಅವರನ್ನು ಬಂಧಿಸಲಿದ್ದಾರೆ.

  • ಪ್ರಜ್ವಲ್ ರೇವಣ್ಣ ಜರ್ಮನಿ ಟೂರ್: 7 ದಿನದ ರಹಸ್ಯ

    ಪ್ರಜ್ವಲ್ ರೇವಣ್ಣ ಜರ್ಮನಿ ಟೂರ್: 7 ದಿನದ ರಹಸ್ಯ

    ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revnna) 7 ದಿನಗಳ ಕಾಲ ಜರ್ಮನಿಯಲ್ಲಿ (Germany) ಮಾಡಿದ್ದೇನು? ಆಗಿದ್ದೇನು? ಎಂಬ ಕುತೂಹಲಕಾರಿ ಸಂಗತಿ ಹೊರಬಿದ್ದಿದೆ.

    ಹಣೆಯಲ್ಲಿ ಕುಂಕುಮ, ಶೇಪ್ ಕೊಟ್ಟು ಟ್ರಿಮ್ ಮಾಡಿದ್ದ ಗಡ್ಡ, ಸ್ವಲ್ಪ ಊದಿದ್ದ ಮುಖ,ನಾನು ತಪ್ಪೇ ಮಾಡಿಲ್ಲ ಎನ್ನುವ ಔಟ್ ಲುಕ್. ಇದು ಮೊನ್ನೆ ಪ್ರಜ್ವಲ್ ರೇವಣ್ಣ ತಿಂಗಳ ಬಳಿಕ ಕಾಣಿಸಿಕೊಂಡ ಖದರ್‌. ಒಳಗೊಳಗೆ ಪುಕಪುಕ ಅಂತಿದ್ರೂ ಮೇಲ್ನೋಟಕ್ಕೆ ಲಕಲಕ ಅಂತಿದ್ದ ಪ್ರಜ್ವಲ್‌ಗೆ  7 ದಿನ‌ ಕಾಲ ಕೌನ್ಸೆಲಿಂಗ್ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ.‌ ಜರ್ಮನಿಯಲ್ಲೇ 7 ದಿನಗಳ ಕಾಲ ಮನಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ (Counseling) ನಡೆದಿತ್ತು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಏರ್‌ಪೋರ್ಟ್‌ಗೆ ಬರುತ್ತಿದ್ದಂತೆ ಬಂಧನ: ಗೃಹ ಸಚಿವ ಪರಮೇಶ್ವರ್

     

    ಆ 7 ದಿನಗಳೇ ಪ್ರಜ್ವಲ್ ವಾಪಸ್ ಆಗಲು ವರವಾಯ್ತಾ ಎಂಬ ಚರ್ಚೆ ಶುರುವಾಗಿದೆ. ಪೆನ್ ಡ್ರೈವ್ ಬಿಡುಗಡೆ ಪ್ರಕರಣದಿಂದ ಡಿಸ್ಟರ್ಬ್ ಆಗಿದ್ದ ಪ್ರಜ್ವಲ್‌ಗೆ ಕೌನ್ಸಿಲಿಂಗ್ ಅಗತ್ಯವಿತ್ತಂತೆ. ಹಾಗಾಗಿ 7 ದಿನಗಳ ಕಾಲ ಜರ್ಮನಿಯಲ್ಲೇ ಕೌನ್ಸಿಲಿಂಗ್ ನಡೆದ ಬಳಿಕ ಹೋಮ್ ಐಸೋಲೇಶನ್‌ನಲ್ಲಿ (Home Isolation) ಪ್ರಜ್ವಲ್ ರೇವಣ್ಣ ಇರುತ್ತಿದ್ದರು.

    ಕುಟುಂಬದ ಹಿರಿಯೊಬ್ಬರ ಸಲಹೆ ಮೇರೆಗೆ ಆಪ್ತರ ಮೂಲಕ ಪ್ರಜ್ವಲ್‌ಗೆ ಮನಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ ನಡೆದಿದೆ ಎಂಬುದನ್ನು ಮಾಹಿತಿ ಇದೆ. ಅದಾದ ಬಳಿಕ ಪ್ರಜ್ವಲ್ ಮಾನಸಿಕವಾಗಿ ರೆಡಿಯಾಗಿ ಭಾರತಕ್ಕೆ (India) ವಾಪಸ್ ಆಗುವ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದು ಎನ್ನಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಐಟಿ ಕಂಪನಿ ಖಾತೆಗೆ ಅಕ್ರಮ ವರ್ಗಾವಣೆ!