Tag: ಜರೀನಾ ರೋಷನ್ ಖಾನ್

  • ಕಿರುತೆರೆ ಹಿರಿಯ ನಟಿ ಜರೀನಾ ರೋಷನ್ ಖಾನ್ ನಿಧನ

    ಕಿರುತೆರೆ ಹಿರಿಯ ನಟಿ ಜರೀನಾ ರೋಷನ್ ಖಾನ್ ನಿಧನ

    ಮುಂಬೈ: ಅನರೋಗ್ಯದಿಂದ ಬಳಲುತ್ತಿದ್ದ ಕಿರುತೆರೆ ಹಿರಿಯ ನಟಿ ಜರೀನಾ ರೋಷನ್ ಖಾನ್ ಇಂದು ನಿಧನರಾಗಿದ್ದಾರೆ. ಕಾರ್ಡಿಯಾಕ್ ಅರೆಸ್ಟ್ ನಿಂದ ಜರೀನಾ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    54 ವರ್ಷದ ಜರೀನಾ ಖಾನ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರೂ, ಕಿರುತೆರೆಯ ಧಾರಾವಾಹಿಗಳು ಅವರಿಗೆ ಹೆಸರು ತಂದು ಕೊಟ್ಟಿದ್ದವು. ಖಾಸಗಿ ವಾಹಿನಿಯ ಏ ರಿಶ್ತಾ ಕ್ಯಾ ಕೆಹಲತಾ ಹೈ, ಕುಂಕುಮ್ ಭಾಗ್ಯ ಧಾರಾವಾಹಿಗಳ ಮೂಲಕ ಜರೀನಾ ಮನೆಮಾತಾಗಿದ್ದರು. ಕುಂಕುಮ್ ಭಾಗ್ಯ ಧಾರಾವಾಹಿಯಲ್ಲಿನ ಇಂದೂ ಸೂರಿ ಪಾತ್ರ ಜನರಿಗೆ ಇಷ್ಟವಾಗಿತ್ತು.

    https://www.instagram.com/p/CGfcxd-B5gN/?utm_source=ig_embed

    ಜರೀನಾ ಅವರ ನಿಧನಕ್ಕೆ ಕಿರುತೆರೆಯ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಕುಂಕುಮ್ ಭಾಗ್ಯ ಧಾರಾವಾಹಿ ಬಹುತೇಕ ಕಲಾವಿದರು ಜರೀನಾ ಅವರ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಕಂಬನಿ ಮಿಡಿದಿದ್ದಾರೆ.

    https://www.instagram.com/p/CGfbKwpJp1A/?utm_source=ig_embed&utm_campaign=loading