Tag: ಜಯಶ್ರೀ

  • ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

    ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

    ರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಲ್ಲೂ ಭವಿಷ್ಯ ಹೇಳಲು ಶುರು ಮಾಡಿದ್ದಾರೆ. ತಮ್ಮ ಸಹ ಸ್ಪರ್ಧಿ ಜಯಶ್ರೀಗೆ ಭವಿಷ್ಯ ಹೇಳುವ ಮೂಲಕ ಆತಂಕ ಮೂಡಿಸಿದ್ದಾರೆ. ಈಗಾಗಲೇ ಮದುವೆ ಆದ ವ್ಯಕ್ತಿಯ ಜೊತೆ ರಿಲೇಷನ್ ಶಿಪ್ ನಲ್ಲಿ ಇದ್ದೆ ಎಂದು ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ ಹೇಳಿಕೊಂಡಿದ್ದರು. ಆದರೂ, ಅವರಿಗೆ ಎರಡು ಮದುವೆ ಆಗುತ್ತವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

    ನಿನಗೆ ಎರಡು ಮದುವೆ ಆಗುತ್ತವೆ. ಚೆನ್ನಾಗಿರೋ ಮಕ್ಕಳು ಹುಟ್ತವೆ. ಮಕ್ಕಳನ್ನು ನೀನು ಚೆನ್ನಾಗಿಯೇ ನೋಡ್ಕೋತೀಯಾ. ನಿನಗೆ ಹುಟ್ಟಿರುವ ಮಕ್ಕಳು ನಿನಗಿಂತೂ ಎತ್ತರವಾಗಿ ಬೆಳೆಯುತ್ತವೆ. ನಿನ್ನ ಮಕ್ಕಳು ಪುಣ್ಯ ಮಾಡಿರುತ್ತವೆ ಎಂದು ಭವಿಷ್ಯ ನುಡಿದಿರುವ ಆರ್ಯವರ್ಧನ್ ಗುರೂಜಿ. ಮದುವೆ ಬಗ್ಗೆ ಜಯಶ್ರೀ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ

    ಇದೇ ಸಂದರ್ಭದಲ್ಲಿ ಜಯಶ್ರೀ ತನ್ನ ಬ್ಯುಸಿನೆಸ್ ಬಗ್ಗೆಯೂ ಭವಿಷ್ಯ ಕೇಳಿದರು. ಅದಕ್ಕೂ ಉತ್ತರ ನೀಡಿದ ಆರ್ಯವರ್ಧನ್ ಗುರೂಜಿ, ನಿನಗೆ ಯಾರು ಸಿಗುತ್ತಾರೋ ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊ ಎಂದು ಕರೆ ನೀಡುತ್ತಾರೆ. ಜಯಶ್ರೀ ನಟಿಸುವ ಸಿನಿಮಾಗಳು ಗೆಲ್ಲದೇ ಇದ್ದರೂ, ಸಿನಿಮಾ ಮಾಡುತ್ತೀಯಾ ಎಂದೂ ಹೇಳಿದ್ದಾರೆ. ಅಲ್ಲದೇ, ಜಯಶ್ರೀಗೆ ದುಡ್ಡು ಮುಖ್ಯ ಎಂದು, ನಿನಗೆ ಮೋಸ ಮಾಡುವವರು ಇರುತ್ತಾರೆ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

    ಜಯಶ್ರೀಗೆ ಭವಿಷ್ಯ ನುಡಿದದ್ದು ಬಿಗ್ ಬಾಸ್ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೊದಲಿನಿಂದಲೂ ಬಿಗ್ ಬಾಸ್ ಮನೆಯ ಹಲವು ಸದಸ್ಯರು ಆರ್ಯವರ್ಧನ್ ಗುರೂಜಿ ಭವಿಷ್ಯದ ಬಗ್ಗೆ ಅಪನಂಬಿಕೆ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಬರೀ ಸುಳ್ಳುಗಳನ್ನು ಹೇಳುತ್ತಾರೆ ಎಂದು ಟೀಕೆ ಮಾಡಿದ್ದಾರೆ. ಯಾವ ಭವಿಷ್ಯವೂ ನಿಜವಾಗುವುದಿಲ್ಲ, ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದವರು ಇದ್ದಾರೆ. ಇದೀಗ ಜಯಶ್ರೀ ಈ ಭವಿಷ್ಯವನ್ನು ಯಾವ ರೀತಿ ತಗೆದುಕೊಳ್ಳುತ್ತಾರೋ ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್: ನಂದು ವಿರುದ್ಧ ಜಯಶ್ರೀ ಆರಾಧ್ಯ ಫುಲ್ ಗರಂ

    ಬಿಗ್‌ ಬಾಸ್: ನಂದು ವಿರುದ್ಧ ಜಯಶ್ರೀ ಆರಾಧ್ಯ ಫುಲ್ ಗರಂ

    ಬಿಗ್ ಬಾಸ್ ಮನೆ ಇದೀಗ ರಣರಂಗವಾಗಿದೆ. ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರವಾಗಿ ಸುದ್ದಿ ಮಾಡುತ್ತಲೇ ಇದ್ದಾರೆ. ಇದೀಗ ಬಿಗ್ ಬಾಸ್ ನೀಡಿರುವ ಟಾಸ್ಕ್‌ನಲ್ಲಿ ಮನೆ ಮಂದಿ ಟಾರ್ಗೆಟ್ ಆಗಿದ್ದಾರೆ. ಚೈತ್ರಾ ಮತ್ತು ಜಯಶ್ರೀ ಮಾಡಿರುವ ಎಡವಟ್ಟಿನಿಂದ ಮನೆ ಮಂದಿಗೆ ಕುತ್ತು ತಂದಿದೆ.

    ಬೆಳ್ಳಂಬೆಳ್ಳಗೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಮನೆಯ ಸದಸ್ಯರು ಯಾವುದೇ ಸೌಲಭ್ಯ ಬಳಸುವ ಮತ್ತು ಮನೆಯ ಯಾವುದೇ ಕಡೆ ಹೋಗಬೇಕಾದೆ, ಮನೆಯ ಇಬ್ಬರು ಸದಸ್ಯರು ಗಡಿಯಾರವನ್ನು ತಿರುಗಿಸುತ್ತಿರಬೇಕು. ಯಾವುದೇ ಕೊಠಡಿಗೆ ಹೋಗಬೇಕಾದರು ನಾಲ್ಕು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಟಾಸ್ಕ್ ಬಳಿಕ ಮನೆಯಿಂದ ಚೈತ್ರಾ ಮತ್ತು ಜಯಶ್ರೀ, ಲಿಪ್ ಸ್ಟಿಕ್ ಮತ್ತು ಟಿಶ್ಯೂ ಪೇಪರ್ ಅನ್ನು ಹೊರಗೆ ತಂದಿದ್ದರು. ಈ ನಡೆ ರೂಲ್ಸ್ಗೆ ವಿರುದ್ಧವಾಗಿತ್ತು. ಇದೀಗ 4 ಜನ ಮನೆ ಪ್ರವೇಶಿಸಲು ನೀಡಿದ್ದ ಅನುಮತಿಯನ್ನ ರದ್ದು ಮಾಡಿದ್ದು, ಇಬ್ಬರಿಗೆ ಮಾತ್ರ ಅವಕಾಶ ಕೊಡುವುದಾಗಿ ಬಿಗ್ ಬಾಸ್ ತಿಳಿಸಿದ್ದರು.

    ಈ ವೇಳೆ ನಂದು, ಜಯಶ್ರೀ ವಿರುದ್ಧ ಕಿಡಿಕಾರಿದರು. ನಾನು ಮೊದಲೇ ಹೇಳಿದ್ದೆ, ಅನುಮತಿ ಇಲ್ಲದೇ ಯಾವುದೇ ವಸ್ತು ಬಳಸಬೇಡಿ ಎಂದು ಹೇಳಿದರು ಆದರು ನೀವು ಹೀಗೆ ಮಾಡಿದ್ದೀರಿ ಎಂದು ನಂದು ಮಾತನಾಡಿದ್ದರು. ನೀವು ಲಿಪ್ ಸ್ಟಿಕ್ ತಂದಿದ್ರಿ ಎಂದು ಹಾಕಿಕೊಟ್ಟಿದ್ದಾರೆ ಎಂದು ನಂದು, ಚೈತ್ರಾ ಅವರ ಬಳಿ ಹೇಳಿಕೊಂಡರು. ಈ ಸಂದರ್ಭದಲ್ಲಿ ನಂದು ಜಯಶ್ರೀ ನಡುವೆ ಮಾತಿನ ಚಕಮಕಿ ಜೋರಾಗಿದೆ. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

    ನೀವ್ಯಾಕೆ ಹಾಕಿಕೊಟ್ಟಿದ್ದಾರೆ ಎಂದು ಹೇಳುತ್ತೀರಿ, ತಂದು ಇಡುವ ಬುದ್ಧಿ ಅಂದರೆ ಇದೆ ಎಂದು ನಂದುಗೆ ಜಯಶ್ರೀಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ನಂದು ಕ್ಷಮೆ ಕೇಳಿದ ಮೇಲೂ ಜಯಶ್ರೀ ವಾದ ಮನೆಯ ಕಲಹಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

    ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

    ಬಿಗ್ ಬಾಸ್ ಮನೆಯ ಚಿತ್ರಣ ಇದೀಗ ಬದಲಾಗಿದೆ. ದಿನದಿಂದ ದಿನಕ್ಕೆ ಒಂದಲ್ಲಾ ಒಂದು ವಿಚಾರಕ್ಕೆ ಜಗಳ, ಭಿನ್ನಾಭಿಪ್ರಾಯ ಜೋರಾಗುತ್ತಿದೆ. ಇದೀಗ ಊಟದ ವಿಚಾರಕ್ಕೆ ಮನೆಯಲ್ಲಿ ಮಾತಿನ ಚಕಮಕಿ ಜೋರಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಇದೀಗ ಮೂರನೇ ವಾರದ ಜಟಾಪಟಿ ಜೋರಾಗಿದೆ. ಸ್ಪರ್ಧಿಗಳ ನಡುವೆ ಕಾಂಪಿಟೇಷನ್ ಕೂಡ ಮತ್ತಷ್ಟು ಜಟಿಲವಾಗಿದೆ. ಮನೆಯಿಂದ ಒಬ್ಬಬ್ಬರಾಗಿ ಎಲಿಮಿನೇಟ್ ಆಗಿ ಹೋಗುತ್ತಿದ್ದಾರೆ. ಇನ್ನು ಇದೀಗ ಊಟದ ವಿಚಾರಕ್ಕೆ ಜಗಳ ಅಗಿದೆ. ಜಯಶ್ರೀ ತಮಗೆ ಹೊಟ್ಟೆ ಹಸಿವು ಎಂಬ ಕಾರಣಕ್ಕೆ ಬೇಗ ತಿಂಡಿ ತಿನ್ನುತ್ತಿದ್ದರು. ಈ ವೇಳೆ ಅನ್ನ ಬೆಂದಿಲ್ಲ, ಹಾಗೆ ಹೀಗೆ ಎಂದು ಸೋನು ಖ್ಯಾತೆ ತೆಗೆದರು. ಇದನ್ನೂ ಓದಿ:ಮೂರನೇ ವಾರ ನಾಮಿನೇಷನ್‌ ಸ್ಟಾರ್ಟ್‌: ಉದಯ್‌ ಸೂರ್ಯಗೆ ಮನೆಯಿಂದ ಗೇಟ್‌ ಪಾಸ್?

    ಅದಕ್ಕೆ ಜಯಶ್ರೀ ನನಗೆ ತಿಂಡಿ ಚೆನ್ನಾಗಿದೆ ನಾನು ತಿನ್ನುತ್ತಿದ್ದೇನೆ. ಯಾರಿಗೆ ಸರಿ ಆಗಿಲ್ಲ, ಮತ್ತೆ ಕುಕ್ಕರ್ ವಿಸಿಲ್ ಹೊಡಿಸಿ, ತಿನ್ನಲಿ ಬಿಡಿ ಎಂದು ಆರ್ಯವರ್ಧನ್ ಬಳಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಸೋನು ಕೂಡ ,ನಾನು ಯಾರಿಗೂ ಡಿಪೆಂಡ್ ಆಗಲ್ಲಾ ಎಂದು ಮಾತನಾಡಿದ್ದಾರೆ. ರೂಪೇಶ್ ಶೆಟ್ಟಿ ಕೂಡ ಧ್ವನಿಗೂಡಿಸಿ, ನಿಮ್ಮ ಮಾತಿಗೆ ಬದ್ದರಾಗಿರಿ ಎಂದು ಸೋನುಗೆ ರೂಪೇಶ್ ಟಾಂಗ್ ಕೊಟ್ಟಿದ್ದಾರೆ. ಸೋನು ಕೂಡ ತನಗೆ ಹೇಗೆ ಬೇಕೋ ತಾನೇ ಮಾಡಿಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ.

    ಈ ಮೊದಲು ಮೊಟ್ಟೆ ವಿಚಾರಕ್ಕೆ ಸೋನು ಜಗಳ ಆಡಿದ್ದರು. ಇದೀಗ ಊಟದ ವಿಚಾರಕ್ಕೆ ಮತ್ತೆ ಧ್ವನಿ ಎತ್ತಿದ್ದಾರೆ. ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುವ ಸೋನು ಮೂರನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಲ್ಲಿ ಜಯಶ್ರೀ ಕಡೆಯಿಂದ ಮೇಕಪ್  ಮಾಡಿಸಿಕೊಂಡ ಆರ್ಯವರ್ಧನ್ ಗುರೂಜಿ

    ‘ಬಿಗ್ ಬಾಸ್’ ಮನೆಯಲ್ಲಿ ಜಯಶ್ರೀ ಕಡೆಯಿಂದ ಮೇಕಪ್ ಮಾಡಿಸಿಕೊಂಡ ಆರ್ಯವರ್ಧನ್ ಗುರೂಜಿ

    ದೊಡ್ಮನೆ ಕಾಳಗ ಈಗಾಗಲೇ ಶುರುವಾಗಿ ಒಂದು ವಾರ ಪೂರೈಸಿದೆ. ಬಿಗ್ ಬಾಸ್ ಮನೆ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇದೆ. ಸ್ಪರ್ಧಿಗಳು ನಾ‌ನಾ ವಿಚಾರವಾಗಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಜಯಶ್ರೀ ಆರಾಧ್ಯ ಅವರು ಗುರೂಜಿ ಆರ್ಯವರ್ಧನ್ ಮೇಕಪ್ ಮಾಡಿರೋದು ನೆಟ್ಟಿಗರ ಗಮನ ಸೆಳೆದಿದೆ.

    ನಂಬರ್ ಅಂದ್ರೆ ನಾನು​, ನಾನು ಅಂದ್ರೆ ನಂಬರ್ ಎಂದು ಭವಿಷ್ಯ ಹೇಳುವ ಆರ್ಯವರ್ಧನ್​ ಗುರೂಜಿ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೊಂದಿಗೆ ಬೆರೆತುಕೊಂಡು ಭಿನ್ನವಾಗಿ ಆಡುತ್ತಿದ್ದಾರೆ. ಹೀಗೆ ಬಿಗ್​ ಬಾಸ್​ ಮನೆಯ ಹೊರಾಂಗಣದಲ್ಲಿರುವಾಗ ಮೇಕಪ್​ ಹಚ್ಚಿಕೊಳ್ಳುವ ಬಯಕೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಈ ವೇಳೆ ಹಿರಿಯ ಕಲಾವಿದೆ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಅವರು ಆರ್ಯವರ್ಧನ್​ ಗುರೂಜಿಗೆ ಮೇಕಪ್​ ಮಾಡಿದ್ದಾರೆ. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಜಯಶ್ರೀ ಅವರ ಸಹಾಯದಿಂದ ಕಣ್ಣಿಗೆ ಕಾಜಲ್​, ಮುಖಕ್ಕೆ ಮೇಕಪ್​, ತುಟಿಗೆ ಲಿಪ್​ಸ್ಟಿಕ್​​ ಹಾಕಿಕೊಂಡಿದ್ದಾರೆ. ಬಳಿಕ ತುಟಿಗೆ ಹಚ್ಚಿರುವ ಮೇಕಪ್​ ಕೊಂಚ ಜಾಸ್ತಿಯಾದಂತೆ ಗುರೂಜಿಗೆ ಕಂಡಿದೆ. ಕೂಡಲೇ ಉಜ್ಜಲು ಪ್ರಯತ್ನಿಸಿದ್ದಾರೆ. ಈ ವೇಳೆ ಹತ್ತಿರವಿದ್ದ ಸ್ಪರ್ಧಿ ಸೋಮಣ್ಣ ಮಾಚಿವಾಡ ಅವರು ಗುರೂಜಿಗೆ ಹಾಗೆಯೇ ಇರಲಿ ತೆಗೆಯಬೇಡಿ ಎಂದು ಹೇಳಿದ್ದಾರೆ. ಕನ್ನಡಿ ನೋಡಿದ ಗುರೂಜಿ ಜಯಶ್ರೀ ಅವರ ಬಳಿ, ಇಷ್ಟೇನಾ ಮೇಕಪ್​ ಕರ್ರಗೆ ಕಾಣಿಸ್ತಾ ಇದ್ದೇನೆ, ಬೆಳ್ಳಗೆ ಮಾಡಿ ಎಂದಿದ್ದಾರೆ. ಒಟ್ನಲ್ಲಿ‌ ಈಗ ಗುರೂಜಿ ಹೊಸ ಲುಕ್ ಜತೆಗೆ ಜಯಶ್ರೀ ಮೇಕಪ್ ಮಾಡಿರುವ ರೀತಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ತಾಯಿಯಿಂದಲೇ ಹೆರಿಗೆ ಮಾಡಿಸಿಕೊಂಡ ಅನುಭವ ಹಂಚಿಕೊಂಡ ಪ್ರಣಿತಾ ಸುಭಾಷ್

    ತಾಯಿಯಿಂದಲೇ ಹೆರಿಗೆ ಮಾಡಿಸಿಕೊಂಡ ಅನುಭವ ಹಂಚಿಕೊಂಡ ಪ್ರಣಿತಾ ಸುಭಾಷ್

    ಸ್ಯಾಂಡಲ್‌ವುಡ್ ಬ್ಯೂಟಿ ಪ್ರಣಿತಾ ಸುಭಾಷ್ ಮುದ್ದಾದ ಹೆಣ್ಣು ಮುಗುವಿಗೆ ತಾಯಿಯಾಗಿದ್ದಾರೆ. ಇತ್ತೀಚೆಗಷ್ಟೇ ಮಗುವಿನ ಫೋಟೋ ಕೂಡ ಹಂಚಿಕೊಂಡಿದ್ದರು. ಇದೀಗ ತಾಯಿಯಿಂದಲೇ ಹೆರಿಗೆ ಮಾಡಿಸಿಕೊಂಡ ಅನುಭವದ ಕುರಿತು ಪ್ರಣಿತಾ ಸುಭಾಷ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ನಟಿ ಪ್ರಣಿತಾಗೆ ಮೊದಲ ಮಗುವಿನ ಹೆರಿಗೆ ವಿಶೇಷ ಈ ಕುರಿತು ಸ್ವತಃ ಪ್ರಣಿತಾ ಅವರೇ ಹೇಳಿಕೊಂಡಿದ್ದಾರೆ. ಅವರ ಹೆರಿಗೆಯ ಜವಾಬ್ದಾರಿಯನ್ನು ಗೈನಕಲಾಜಿಸ್ಟ್ ಆಗಿರುವ ತಾಯಿ ಡಾ.ಜಯಶ್ರೀ ಅವರೇ ವಹಿಸಿಕೊಂಡಿದ್ದರು. ತನ್ನ ತಾಯಿಯೇ ಹೆರಿಗೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು

    ಯಾವುದೇ ಹುಡುಗಿ ಕೇಳಬಹುದಾದ ಉತ್ತಮ ವಿಚಾರ ಅಂದ್ರೆ ಗೈನಕಲಾಜಿಸ್ಟ್ ಆಗಿರುವ ತಾಯಿ, ತನ್ನ ಮಗಳಿಗೆ ಹೆರಿಗೆ ಮಾಡಿಸುವುದು ಅತ್ಯಂತ ಸವಾಲಿನ ಸಂಗತಿ. ಭಾವನಾತ್ಮಕವಾಗಿ ಇದು ಕಠಿಣವಾದ ವಿಚಾರ. ಹೆರಿಗೆಯಲ್ಲಿ ಆಗುವ ಏರುಪೇರಿನ ಬಗ್ಗೆ ಚೆನ್ನಾಗಿ ಅವರಿಗೆ ತಿಳಿದಿರುತ್ತದೆ ಎಂದು ನಟಿ ಪ್ರಣಿತಾ ಹೇಳಿಕೊಂಡಿದ್ದಾರೆ.

    ತಾಯಿ ಹೆರಿಗೆ ಮಾಡಿಸಿದ ವಿಚಾರಕ್ಕೆ `ಮುನ್ನಾಭಾಯಿ ಎಂಬಿಬಿಎಸ್’ ಚಿತ್ರದ ದೃಶ್ಯವೊಂದನ್ನು ನೆನಪಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬೋಮನ್ ಇರಾನಿ ತನ್ನ ಮಗಳಿಗೆ ಆಪ್‌ರೇಷನ್ ಮಾಡಲು ಕೈ ನಡಗುತ್ತದೆ ಎಂದು ಹೇಳಿದನ್ನು ಈ ವೇಳೆ ನಟಿ ನೆನಪಿಸಿಕೊಂಡಿದ್ದಾರೆ. ಹೆರಿಗೆಯನ್ನು ಮತ್ತಷ್ಟು ನೆಮ್ಮದಿಯುತ ಅನುಭವ ಆಗಿಸಿದ್ದಕ್ಕೆ ಥ್ಯಾಂಕ್ಸ್ ಅಮ್ಮಾ ಎಂದಿದ್ದಾರೆ. ಅಮ್ಮ ಯಾಕೆ ಹೊತ್ತಲ್ಲದ ಹೊತ್ತಲ್ಲಿ ಆಸ್ಪತ್ರೆಗೆ ಹೋಗುತ್ತಿದ್ರು ಅಂತಾ ಈಗ ತಿಳಿಯಿತು ಎಂದು ತಾಯಿಯ ಕುರಿತು ಮೆಚ್ಚುಗೆ ಮಾತನ್ನು ಆಡಿದ್ದಾರೆ. ಈ ಪೋಸ್ಟ್‌ಗೆ ಅಭಿಮನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

  • ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ

    ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ

    – ಸುಹಾಸ್ ಆಟವಾಡೋದನ್ನು ಕಂಡರೆ ಭಯ

    ಟೋಕಿಯೋ: ಪ್ಯಾರಾಲಂಪಿಕ್ಸ್ ಬ್ಯಾಡ್ಮಿಂಟನ್‍ನಲ್ಲಿ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿರುವ ಬಗ್ಗೆ ಅವರ ಪತ್ನಿ ರಿತು ಮೆಚ್ಚುಗೆ ಸೂಚಿಸಿದ್ದು, ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ ಎಂದು ಅವರ ಪತಿಯ ಸಾಧನೆಯನ್ನು ಕೊಂಡಾಡಿದ್ದಾರೆ.

    ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿರುವ ಸುಹಾಸ್ ಯತಿರಾಜ್, ತಮ್ಮ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮತ್ತು ಮಂಡ್ಯದಲ್ಲಿ ಪೂರೈಸಿದ್ದರು. ಬಳಿಕ ಐಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಐಎಎಸ್ ಪಾಸಾಗಿದ್ದರು. ಪ್ರಸ್ತುತ ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಹಾಸ್ ಕುಟುಂಬ ಸಮೇತರಾಗಿ ದೆಹಲಿಯ ನೋಯ್ಡಾದಲ್ಲಿ ನೆಲೆಸಿದ್ದಾರೆ.

    ಪ್ಯಾರಾಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಖುಷಿಯನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡ ಸುಹಾಸ್ ಪತ್ನಿ ರಿತು, ನಮಗೆ ತುಂಬಾ ಸಂತೋಷವಾಗಿದೆ. ಈ ದಿನಕ್ಕಾಗಿ ಕಳೆದ 6 ವರ್ಷಗಳಿಂದ ಸುಹಾಸ್ ಅವರು ಕಷ್ಟ ಪಟ್ಟಿದ್ದರು. ಅವರು ಪದಕ ಗೆಲ್ಲುತ್ತಾರೆ ಎಂದು ನಿರೀಕ್ಷೆ ಇತ್ತು, ನಾವು ದೇವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ

    ಅವರು ಜಿಲ್ಲಾಧಿಕಾರಿಯಾಗಿದ್ದರು ಕೂಡ ಅಥ್ಲೆಟಿಕ್‍ನ್ನು ಸಮಾನವಾಗಿ ನಿರ್ವಹಿಸಿದ್ದರು. ತುಂಬಾ ಶ್ರಮದಿಂದ ದಿನಗಳನ್ನು ಕಳೆಯುತ್ತಿದ್ದರು. ಕ್ರೀಡೆ ಮತ್ತು ಡಿಸಿಯಾಗಿ ಎರಡು ಕೆಲಸಗಳ ಜವಾಬ್ದಾರಿ ಅವರ ಮೇಲೆ ತುಂಬಾ ಇತ್ತು. ಎರಡನ್ನು ಕೂಡ ಸಮಾನವಾಗಿ ಸ್ವೀಕರಿಸಿದ್ದರು. ಪ್ರತಿದಿನ 3 ರಿಂದ 4 ಗಂಟೆಗಳ ಕಾಲ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ಹಬ್ಬ ಹರಿದಿನಗಳನ್ನು ತೊರೆದು ಕ್ರೀಡೆಗಾಗಿ ಅವರ ಗುರಿಗಾಗಿ ಶ್ರಮ ವಹಿಸುತ್ತಿದ್ದರು. ಮೊದಲು ಬ್ಯಾಡ್ಮಿಂಟನ್‍ನ್ನು ಹವ್ಯಾಸವಾಗಿಸಿಕೊಂಡಿದ್ದರು ಬಳಿಕ ವೃತ್ತಿಪರವಾಗಿ ತೆಗೆದುಕೊಂಡು ಯಶಸ್ಸುಗಳಿಸಿದ್ದಾರೆ ಎಂದರು.

    ಅಷ್ಟು ದೊಡ್ಡ ಕ್ರೀಡಾಕೂಟದಲ್ಲಿ ಆಟವಾಡುವ ಬಗ್ಗೆ ತುಂಬಾ ದೊಡ್ಡ ಗುರಿ ಹೊಂದಿದ್ದರು. ನಾನು ಅವರೊಂದಿಗೆ ನಿಮ್ಮ ನೈಜಾ ಸಾಮಥ್ರ್ಯದೊಂದಿಗೆ ಆಟವಾಡಿ ಎಂದಿದ್ದೆ. ಆದರೆ ನಾನು ಮಾತ್ರ ಅವರ ಆಟವನ್ನು ಯಾವತ್ತು ನೋಡುವುದಿಲ್ಲ. ನನಗೆ ತುಂಬಾ ಹೆದರಿಕೆ ಆದರೆ ದೇವರೊಂದಿಗೆ ಪ್ರಾರ್ಥಿಸುತ್ತಿದ್ದೆ. ನಾನು ಮ್ಯಾಚ್ ನೋಡಿಲ್ಲ ಆದರು ಕೂಡ ಅಂಕಗಳನ್ನು ತಿಳಿದುಕೊಳ್ಳುತ್ತಿದ್ದೆ. ಅವರ ಪಂದ್ಯ ನಡೆಯುತ್ತಿದ್ದಾಗ ನಾನು ವಾಕಿಂಗ್ ಮಾಡುತ್ತಿದೆ ಒಂದು ಗಂಟೆಗಳ ಒಂದ್ಯದಲ್ಲಿ ಅವರು ಆಡುತ್ತಿದ್ದರೆ ನಾನು ಇಲ್ಲಿ 6 ಕಿಮೀ. ವಾಕಿಂಗ್ ಮಾಡಿದ್ದೇನೆ. ನನಗೆ ಕುಳಿತುಕೊಳ್ಳಲು ಆಗದೆ ಓಡಾಡಿಕೊಂಡು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಅವರಿಂದ ನಾನು ಕಲಿಯಲು ಇನ್ನು ಇದೆ. ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಖುಷಿಪಟ್ಟರು. ಇದನ್ನೂ ಓದಿ: ಬೆಂಬಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ: ಸುಹಾಸ್

    ನನ್ನ ಮಗ ಎಲ್ಲರಿಗೂ ಕೂಡ ಸ್ಪೂರ್ತಿ:
    ಸುಹಾಸ್ ತಾಯಿ ಜಯಶ್ರೀ ಮಾತನಾಡಿ, ನಮಗೆ ತುಂಬಾ ಸಂತೋಷವಾಗಿದೆ. ಅವನ ಒಂದು ಗುರಿಯಾಗಿತ್ತು ಈ ಕ್ರೀಡಾಕೂಟದ ಸಾಧನೆ. ನಾನು ಸಾಧನೆ ಮಾಡಬೇಕೆಂಬ ಹಂಬಲ ಇತ್ತು ದೇವರು ನೇರವೇರಿಸಿದ್ದಾನೆ. ಅವನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಅವನು ಎಲ್ಲರಿಗೂ ಕೂಡ ಸ್ಪೂರ್ತಿ ಎಂದು ಸಂಭ್ರಮಿಸಿದರು.

    ಫೈನಲ್‍ನಲ್ಲಿ ವಿರೋಚಿತ ಸೋಲು ಕಂಡರು ಕೂಡ ಅವನ ಆಟ ತುಂಬಾ ಖುಷಿಯಾಯಿತು. ಆತ ಛಲವಾದಿ. ಆತನ ಪರಿಶ್ರಮ ಮತ್ತು ಗುರಿ ಆತನಿಗೆ ಯಶಸ್ಸು ತಂದು ಕೊಟ್ಟಿದೆ. ಕೆಲಸ ಮುಗಿಸಿ 10 ಗಂಟೆಗೆ ಬಂದರು ಕೂಡ ಅಭ್ಯಾಸವನ್ನು ಮಾತ್ರ ಯಾವತ್ತೂ ನಿಲ್ಲಿಸುತ್ತಿರಲಿಲ್ಲ. ಅವನು ತುಂಬಾ ಬುದ್ಧಿವಂತ ಎಂದು ಮಗನ ಸಾಧನೆಗೆ ಸಂಭ್ರಮ ಪಟ್ಟಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಅವಳಿ ಪದಕ- ಪ್ರಮೋದ್ ಭಗತ್‍ಗೆ ಚಿನ್ನ, ಮನೋಜ್ ಸರ್ಕಾರ್‌ಗೆ ಕಂಚು

  • ಸಾಂತ್ವನ ಹೇಳಿ ಧೈರ್ಯ ತುಂಬಿದ್ದೆ- ನಟಿ ಅಶ್ವಿತಿ ಶೆಟ್ಟಿ

    ಸಾಂತ್ವನ ಹೇಳಿ ಧೈರ್ಯ ತುಂಬಿದ್ದೆ- ನಟಿ ಅಶ್ವಿತಿ ಶೆಟ್ಟಿ

    ಬೆಂಗಳೂರು:  ಕಳೆದ ಬಾರಿ ಜಯಶ್ರೀ ಆತ್ಮಹತ್ಯೆ ಮಾಡುತ್ತೇನೆ ಎಂದಾಗ ನಾನು ಸಾಂತ್ವನ ಹೇಳಿ ಧೈರ್ಯ ತುಂಬಿದ್ದೆ ಎಂದು ನಟಿ ಅಶ್ವಿತಿ ಶೆಟ್ಟಿ ಹೇಳಿದ್ದಾರೆ.

    ಬಿಗ್‌ ಬಾಸ್ ಜಯಶ್ರೀ ಆತ್ಮಹತ್ಯೆ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ ಪ್ರತಿಕ್ರಿಯಿಸಿದ ಅವರು, ಅವರನ್ನು ಮಾತಾಡಿಸಿ ತುಂಬಾ ದಿನ ಆಯ್ತು. ಕಳೆದ ಬಾರಿ ನಾನು ಸಾಂತ್ವನ ಹೇಳಿದ್ದೆ ಎಂದು ತಿಳಿಸಿದರು.

    ಸಾಂತ್ವನ ಹೇಳಿದ ಬಳಿಕ ನಾನು ಜಯಶ್ರೀ ಸಂಪರ್ಕಕ್ಕೆ ಬಂದಿಲ್ಲ. ಒಮ್ಮೆ ಒಮ್ಮೆ ಕಾಲ್ ಮಾಡಿ ನಾನು ಆರಾಮವಾಗಿದ್ದೇನೆ. ಡ್ಯಾನ್ಸ್ ಕ್ಲಾಸ್ ಸೇರಿದ್ದೇನೆ ಎಂದು ತಿಳಿಸಿದ್ದರು. ಅದಾದ ಮೇಲೆ ನನ್ನ ಸಂಪರ್ಕಕ್ಕೆ ಸಿಗಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ತಿಂಗಳ ಹಿಂದೆಯಷ್ಟೇ ವೃದ್ಧಾಶ್ರಮ ಸೇರಿದ್ದ ಜಯಶ್ರೀ!

    ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಜಯಶ್ರೀ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಜಯಶ್ರೀ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

    ಈ ಹಿಂದೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದ ಜಯಶ್ರೀ, ‘ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಸ್ವಲ್ಪ ಸಮಯದ ನಂತರ ಆ ಪೋಸ್ಟನ್ನು ಡಿಲೀಟ್ ಮಾಡಿ, ‘ನಾನು ಆರಾಮಾಗಿ, ಸುರಕ್ಷಿತವಾಗಿದ್ದೀನಿ’ ಎಂದು ಮತ್ತೆ ಪೋಸ್ಟ್ ಮಾಡಿದ್ದರು. ಮಾನಸಿಕ ಖಿನ್ನತೆಗೆ ಜಾರಿದ್ದ ಜಯಶ್ರೀ ಇಂದು ನೇಣಿಗೆ ಶರಣಾಗಿದ್ದಾರೆ.

  • ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ಆತ್ಮಹತ್ಯೆಗೆ ಶರಣು

    ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ಆತ್ಮಹತ್ಯೆಗೆ ಶರಣು

    ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಜಯಶ್ರೀ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

    ಈ ಹಿಂದೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದ ಜಯಶ್ರೀ, ‘ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಸ್ವಲ್ಪ ಸಮಯದ ನಂತರ ಆ ಪೋಸ್ಟನ್ನು ಡಿಲೀಟ್ ಮಾಡಿ, ‘ನಾನು ಆರಾಮಾಗಿ, ಸುರಕ್ಷಿತವಾಗಿದ್ದೀನಿ’ ಎಂದು ಮತ್ತೆ ಪೋಸ್ಟ್ ಮಾಡಿದ್ದರು.

    ಆ ಬಳಿಕ ಫೇಸ್‍ಬುಕ್‍ನಲ್ಲಿ ಕೆಲವು ನಿಮಿಷ ಲೈವ್ ಬಂದಿದ್ದ ಜಯಶ್ರೀ, ‘ಎಲ್ಲರಿಗೂ ಹಾಯ್, ನಾನು ಇದನ್ನು ಪಬ್ಲಿಸಿಟಿಗೋಸ್ಕರ ಮಾಡುತ್ತಿಲ್ಲ. ನನಗೆ ಸುದೀಪ್ ಸರ್ ಅವರಿಂದ ಒಂದು ರೂಪಾಯಿಯಷ್ಟು ಆರ್ಥಿಕ ಸಹಾಯದ ನಿರೀಕ್ಷೆ ಇಲ್ಲ. ನನಗೆ ಬೇಕಾಗಿರುವುದು ಒಂದೇ ನನ್ನ ಸಾವು. ನಾನು ತುಂಬಾ ಖಿನ್ನತೆಯಲ್ಲಿದ್ದೇನೆ, ಕುಟುಂಬದ ಸಮಸ್ಯೆಗಳನ್ನು ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಆರ್ಥಿಕವಾಗಿ ಚೆನ್ನಾಗಿಯೇ ಇದ್ದೇನೆ. ಆದರೆ ನನಗೆ ಎಲ್ಲವೂ ಮೋಸ ನಡೆದಿದೆ. ಚಿಕ್ಕ ವಯಸ್ಸಿನಲ್ಲಿ ನನಗೆ ಆಗಬಾರದ ಘಟನೆ ನಡೆದಿವೆ. ಅದನ್ನು ಮರೆಯಲು ಆಗುತ್ತಿಲ್ಲ’ ಎಂದು ತಮ್ಮ ಅಳಲನ್ನು ಹೇಳಿಕೊಡಿದ್ದರು.

    ಅಲ್ಲದೇ “ಫೇಸ್‍ಬುಕ್‍ನಲ್ಲಿ ನನಗೆ ಬಂದಿರುವ ಕಮೆಂಟ್ಸ್ ನೋಡುತ್ತಿದ್ದೇನೆ. ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಅದರ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ನಾನೊಬ್ಬಳು ಲೂಸರ್, ನಾನು ಹುಚ್ಚಿ, ನಾನು ಸಾಯಬೇಕು ಎಂದುಕೊಂಡಿದ್ದೇನೆ. ನಾನು ಬಯಸುತ್ತಿರುವುದು ಒಂದೇ ನನ್ನ ಸಾವು. ಹೀಗಾಗಿ ನನಗೆ ದಯಾಮರಣ ನೀಡಿದರೆ ಸಾಕು. ನಾನು ಆರಾಮಾಗಿ ಇರುತ್ತೇನೆ. ನನಗೆ ದಯಾಮರಣ ನೀಡಿ. ನಾನು ಒಳ್ಳೆಯ ಹುಡುಗಿ ಅಲ್ಲ. ಪ್ಲೀಸ್ ಪ್ಲೀಸ್ ಎಂದು ಅವರು ಕಣ್ಣೀರಿಟ್ಟಿದ್ದರು. ನಂತರ ಈ ವಿಡಿಯೋವನ್ನು ಜಯಶ್ರೀ ಡಿಲೀಟ್ ಮಾಡಿದ್ದರು.

    ಇಷ್ಟೆಲ್ಲಾ ಆದ ಬಳಿಕ ಸುದೀಪ್ ಅವರು ಜಯಶ್ರೀ ಜೊತೆ ಫೋನಿನಲ್ಲಿ ಮಾತನಾಡಿ ಧೈರ್ಯ ತುಂಬಿದ್ದರು. ಇದನ್ನು ನಟಿ ಜಯಶ್ರೀ ಫೇಸ್‍ಬುಕ್‍ನಲ್ಲಿ ಬರೆದುಕೊಳ್ಳುವ ಮೂಲಕ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದರು. “ನಿಮ್ಮ ಕಾಳಜಿಗೆ ಧನ್ಯವಾದಗಳು ಸುದೀಪ್ ಸರ್. ನೀವು ನನ್ನನ್ನು ಬದುಕಿಸಿದ್ದೀರಿ. ಸುದೀಪ್ ಅವರ ತಂಡದ ಸದಸ್ಯರು, ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾನು ತುಂಬಾ ಪ್ರೀತಿಸುತ್ತೇನೆ. ನಿಮ್ಮನ್ನೆಲ್ಲ ಆತಂಕಗೊಳ್ಳುವಂತೆ ಮಾಡಿದ್ದಕ್ಕೆ ಕ್ಷಮಿಸಿ. ನಾನು ಮತ್ತೆ ಸಹಜ ಸ್ಥಿತಿಗೆ ಬಂದಿದ್ದೇನೆ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದು ಜಯಶ್ರೀ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.

    https://youtu.be/kzd0jz-E6nk

  • ರೈತ ಸಂಘದ ಜಿಲ್ಲಾಧ್ಯಕ್ಷರನ್ನ ಏಕವಚನದಲ್ಲಿ ತರಾಟೆ ತೆಗೆದುಕೊಂಡ ರೈತ ಮಹಿಳೆ ಜಯಶ್ರೀ

    ರೈತ ಸಂಘದ ಜಿಲ್ಲಾಧ್ಯಕ್ಷರನ್ನ ಏಕವಚನದಲ್ಲಿ ತರಾಟೆ ತೆಗೆದುಕೊಂಡ ರೈತ ಮಹಿಳೆ ಜಯಶ್ರೀ

    ಬೆಳಗಾವಿ: ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಮತ್ತು ರೈತ ಮಹಿಳೆ ಜಯಶ್ರೀ ನಡುವೆ ಸಾರ್ವಜನಿಕವಾಗಿ ವಾಗ್ವಾದ ನಡೆದಿರುವ ಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ನಡೆದಿದೆ.

    ಕೊಡಿಹಳ್ಳಿ ಚಂದ್ರಶೇಖರ ಅವರ ವಿರುದ್ಧ ಜಯಶ್ರೀ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ಸಂಘದ ಅಧ್ಯಕ್ಷ ಸತ್ಯಪ್ಪಾ ಅವರು ಏಕವಚನದಲ್ಲಿ ಜಯಶ್ರೀ ಅವರ ಕುರಿತು ಮಾತನಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜಯಶ್ರೀ ಅವರು ನನ್ನ ಬಗ್ಗೆ ಮಾತನಾಡ ಬೇಡ. ನನ್ನ ಬಗ್ಗೆ ಕೇವಲವಾಗಿ ಮಾತನಾಡಿದರೆ ಸರಿ ಇರುವುದಿಲ್ಲ. ನಿನ್ನ ಹಿಂದೆ ಎಷ್ಟು ಜನ ಬರುತ್ತಾರೆ ಎಂದು ಏಕವಚನದಲ್ಲೇ ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದಾರೆ.

    ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಮುಂದಾಳತ್ವದಲ್ಲಿ ಇಂದಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಘಟನೆ ನಡೆದಿದ್ದು, ಇಬ್ಬರ ಜಗಳವನ್ನು ಕಂಡ ಸಂಘದ ಇತರೇ ಸದಸ್ಯರು ಜಗಳ ಬಿಡಿಸಿದ್ದಾರೆ. ಬಳಿಕ ಸ್ಥಳದಿಂದ ರೈತ ಮಹಿಳೆ ಜಯಶ್ರೀ  ತೆರಳಿದ್ದಾರೆ.

    ಬೆಳಗಾವಿ ಅಧಿವೇಶನಕ್ಕೂ ಮುನ್ನ ಜಿಲ್ಲಾ ರೈತ ಸಂಘದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆ ಬಳಿಕ ಸಂಘ ಎರಡು ಬಣಗಳಾಗಿ ವಿಭಜನೆ ಆಗಿದೆ ಎನ್ನಲಾಗಿದೆ. ಅಧಿವೇಶನಕ್ಕೂ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೂಡ ಸಂಘದಲ್ಲಿ ಉಂಟಾದ ಬಿರುಕಿನಿಂದ ಅಸಮಾಧಾನಗೊಂಡಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಅಂದು ಉಂಟಾದ ಅಸಮಾಧಾನವೇ ಇಂದು ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ಬೆಳಗಾವಿ: ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದ್ದು, ಇದರಿಂದ ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರಿಟ್ಟಿದ್ದಾರೆ.

    ಇಂದು ಮತ್ತೆ ಬೆಳಗಾವಿ ಡಿಸಿ ಕಚೇರಿ ಎದುರು ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ರೈತರು ಇಂದಿನಿಂದ ಆಹೋ ರಾತ್ರಿ ಧರಣಿ ಆರಂಭಿಸಿದ್ದಾರೆ. ಈ ವೇಳೆ ಜಯಶ್ರೀ ಹೆಸರಿಗೆ ಒಂದು ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದೆ. ಪತ್ರ ನೋಡುತ್ತಿದ್ದಂತೆ ಜಯಶ್ರೀ ಕಣ್ಣೀರಿಟ್ಟಿದ್ದಾರೆ.

    ಪತ್ರ ನಾಲ್ಕು ಪುಟಗಳಲ್ಲಿದ್ದು, ರೈತ ಮಹಿಳೆ ಜಯಶ್ರೀಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತರೇ ಇದನ್ನ ಮಾಡಿರುವದಾಗಿ ಜಯಶ್ರೀ ಆರೋಪಿಸಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬುದ್ಧಿವಾದ ಹೇಳುವಂತೆ ಜಯಶ್ರೀ ಮನವಿ ಮಾಡಿದ್ದಾರೆ.

    ಬೆಳಗಾವಿಯಲ್ಲಿ ತಣ್ಣಗಾಗಿದ್ದ ಕಬ್ಬು ಬೆಳೆಗಾರರ ಹೋರಾಟ ಮತ್ತೆ ಆರಂಭಾವಾಗಿದೆ. ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಮನೆಯಿಂದ ಊಟ ತಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕಳಸಾ ಬಂಡೂರಿ ಹೋರಾಟಗಾರರು ಸಾಥ್ ನೀಡಿದ್ದು, ತಕ್ಷಣವೇ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿ ಆರಂಭವಾಗಬೇಕು ಹಾಗೂ ರೈತರ ಸಮಸ್ಯೆ ಬಗೆ ಹರಿಸಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ.

    ಈ ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಕುಮಾರಸ್ವಾಮಿ ಅವರು, ಇಷ್ಟು ದಿನ ಎಲ್ಲಿ ಮಲಗಿದ್ದೆ? ಎಂದು ರೈತ ಮಹಿಳೆ ಜಯಶ್ರೀಗೆ ಪ್ರಶ್ನಿಸಿದ್ದರು. ಇದರಿಂದ ಜಯಶ್ರೀ ತನ್ನ ವ್ಯಕ್ತಿತ್ವಕ್ಕೆ ಚ್ಯುತಿ ತಂದಿದೆ ಎಂದು ಕಣ್ಣೀರಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv