Tag: ಜಯಶ್ರೀ

  • ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

    ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

    ಬಿಗ್ ಬಾಸ್ (Bigg Boss) ಮನೆಯಲ್ಲಿ ಮುಗ್ಧರು ಯಾರು ಅಂತ ಯಾರಾದರೂ ಕೇಳಿದರೆ ಅದು ಆರ್ಯವರ್ಧನ್ ಗುರೂಜಿ (Aryavardhan Guruji) ಎಂದೇ ಮನೆ ಮಂದಿಯೆಲ್ಲಾ ವೋಟ್ ಹಾಕತ್ತಾ ಇದ್ದರು. ಸುದೀಪ್ (Kichcha Sudeepa) ಕೂಡ ಆರ್ಯವರ್ಧನ್ ಅವರಿಗೆ ಏನು ಅರ್ಥವಾಗುವುದಿಲ್ಲ ಅಂತ ಹೇಳಿದ್ದರು. ವೀಕೆಂಡ್ ವೇದಿಕೆಯಲ್ಲಂತೂ ಗುರೂಜಿ ನಡವಳಿಕೆ ಸಖತ್ ಕಾಮಿಡಿ ಕೊಡುತ್ತಿದೆ. ಆದರೆ ಗುರೂಜಿ ನಿಜವಾಗಿಯೂ ಅಷ್ಟು ಮುಗ್ಧರಾ ಎಂಬುದು ಇದೀಗ ಬಯಲಾಗಿದೆ.

    ಆರ್ಯವರ್ಧನ್‍ಗೆ ಬಿಗ್ ಬಾಸ್ ಸ್ಪೆಷಲ್ ಅವಕಾಶವೊಂದನ್ನು ನೀಡಿದೆ. ಅದು 9 ಟಾಸ್ಕ್ ಇರುತ್ತದೆ. ಆ ಟಾಸ್ಕ್ ನ ಮುಂದಾಳತ್ವವನ್ನು ಆರ್ಯವರ್ಧನ್ ವಹಿಸಿಕೊಳ್ಳಬೇಕು. ಆ 9 ಟಾಸ್ಕ್ ಗಳು ಕೂಡ ಈ ಹಿಂದೆ ಆಡಿರುವಂತದ್ದೇ ಆಗಿದೆ. ಮೊದಲ ಆಟದಲ್ಲಿ ಕಲ್ಲಾಟ ಆಯ್ಕೆ ಮಾಡಿಕೊಂಡಿದ್ದಾರೆ. ಈ ಆಟದಲ್ಲಿ ಸ್ವಿಮ್ಮಿಂಗ್ ಪೂಲ್ (Swimming Pool) ನಲ್ಲಿ ಕಲ್ಲುಗಳನ್ನು ಹುಡುಕುವುದಾಗಿದೆ. ಈ ಆಟಕ್ಕೆ ಆರ್ಯವರ್ಧನ್, ಸೋಮಣ್ಣ (Somanna) ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿಯ ತನಕ ಯಾರಿಗೆ ಏನೂ ಅನ್ನಿಸಿರಲಿಲ್ಲ.

    ಈವೆನ್ ಸೋಮಣ್ಣನಿಗೆ ಕೂಡ ಅದು ನೆಗೆಟಿವ್ ಪಾಯಿಂಟ್ ಎಂದು ಅನ್ನಿಸಿ ಇರಲಿಲ್ಲ. ಬದಲಿಗೆ ನಾನು ಗೆಲ್ಲಲಿ ಎಂಬುದು ಅವರಿಗೆ ಇದೆ ಎಂದುಕೊಂಡಿದ್ದರು. ಇತ್ತ ಸ್ವಿಮ್ಮಿಂಗ್ ಪೂಲ್‍ನಲ್ಲಿ ಆಟ ಶುರುವಾದಾಗ ಗುರೂಜಿ ಒಂದಷ್ಟು ಕಲ್ಲುಗಳನ್ನು ಸೋಮಣ್ಣನ ಕಡೆಗೆ ಎಸೆದರು. ಇದನ್ನು ಜಯಶ್ರೀ (Jayashree) ಗಮನಿಸಿದ್ದು, ಗುರೂಜಿ ಅಂದುಕೊಂಡಂತೆಯೇ ಸೋಮಣ್ಣ ಸೋತರು. ಆಗ ಜಯಶ್ರೀಯು ಗುರೂಜಿ ಸ್ಟಾಟರ್ಜಿ ಬಗ್ಗೆ ಮಾತನಾಡಿದ್ದಳು. ಇದನ್ನೂ ಓದಿ: ಬಿಗ್ ಬಾಸ್ ಮನೆ ಕಂಡ ಅಚ್ಚರಿಯ ಕ್ಷಣಗಳು

    ಅವರು ತಾವೂ ಗೆಲ್ಲಬೇಕು ಅಂತ ನೋಡುತ್ತಿದ್ದಾರೆಯೇ ವಿನಃ, ನೀವೂ ಗೆಲ್ಲಲಿ ಎಂಬುದು ಅವರ ಮನಸ್ಸಲ್ಲಿ ಇರಲಿಲ್ಲ. ಈಗ ನೆಕ್ಸ್ಟ್ ನನ್ನ ಆಯ್ಕೆ ಮಾಡಿಕೊಳ್ಳುತ್ತೀನಿ ಎಂದಿದ್ದಾರಲ್ಲ ಆಗ ಬಾಲ್ ಆಟ ಆಕೆ ಮಾಡಿಕೊಳ್ಳುತ್ತಾರೆ. ಯಾಕೆಂದ್ರೆ ಅದರಲ್ಲಿ ಅವರು ಗೆದ್ದಿದ್ದರು, ನಾನು ಸೋತಿದ್ದೆ ಎಂದಿದ್ದಾಳೆ. ಬಿಗ್ ಬಾಸ್ ನೆಕ್ಸ್ಟ್ ಗೇಮ್ ಆಡುವ ಸಮಯ ನೀಡಿದಾಗ ಜಯಶ್ರೀ ಹೇಳಿದ್ದೇ ಪ್ರೂವ್ ಆಯ್ತು. ಆ ಆಟದಲ್ಲಿ ಜಯಶ್ರೀ ಸೋತು, ಗುರೂಜಿ ಮತ್ತೊಂದು ಅವಕಾಶ ನೀಡಿದರು. ಆದರೆ ಅಷ್ಟರಲ್ಲಾಗಲೇ ಓವರ್ ಕಾನ್ಫಿಡೆನ್ಸ್ ಗುರೂಜಿಗೆ ಬಂದಿತ್ತು.

    ಆಗ ಮುಂದಿನ ಆಟ ಕ್ಯಾನ್ ನಿಂದ ಬಾಲ್ ಶಿಫ್ಟ್ ಮಾಡುವುನ್ನು ಆಯ್ಕೆ ಮಾಡಿಕೊಂಡರು. ಅದಕ್ಕೂ ಮತ್ತೆ ಜಯಶ್ರೀಯನ್ನೇ ಆಯ್ಕೆ ಮಾಡಿದರು. ನಿರೀಕ್ಷೆಯಂತೆ ಅವರೇ ಗೆದ್ದರು. ಆದರೆ ಮಾಡಿದ ಸಣ್ಣ ಮಿಸ್ಟೇಕ್ ಆಟದಿಂದ ಔಟ್ ಆದರೂ, ಅಧಿಕಾರ ಮನೆಮಂದಿಗೆ ವೋಟ್ (Vote) ಮಾಡಿ ಅಥವಾ ಒಮ್ಮತದಿಂದ ಆಯ್ಕೆ ಮಾಡುವ ಅವಕಾಶ ಸಿಕ್ಕಿತು. ಇದರಿಂದ ಇಡೀ ಮನೆ ಮಂದಿಗೆ ಗುರೂಜಿ ಏನು, ಅವರ ಟ್ರಿಕ್ಸ್ ಏನು ಎಂಬುದು ಪ್ರೂವ್ ಆಯ್ತು.

    ಜಯಶ್ರೀ ತನ್ನನ್ನು ಮೊದಲ ಬಾರಿ ಆಯ್ಕೆ ಮಾಡಿಕೊಂಡಾಗ ಖುಷಿಯಾದಳು. ನಾನು ಸೋಲುತ್ತೀನಿ ಅಂತ ಗೊತ್ತಿದ್ದರೂ ಬೇಕಂತಲೇ ಮಾಡಿದ್ದಾರೆ ಎಂದುಕೊಂಡಳು. ಆದರೆ ಮತ್ತೊಂದು ಸಲ ಆಯ್ಕೆ ಮಾಡಿದಾಗ ತಮಾಷೆಯಾಗಿ ನೀವೂ ನನ್ನನ್ನ ಆಯ್ಕೆ ಮಾಡಿ, ನಾನು ಗೆದ್ದರೆ ಮತ್ತೆ ನಿಮ್ಮನ್ನೆ ಆಯ್ಕೆ ಮಾಡುತ್ತೀನಿ ಎಂದಿದ್ದಳು. ಅದಾದ ಬಳಿಕ ಮುಂದಿನ ಆಟಕ್ಕೆ ನನ್ನನ್ನು ಆಯ್ಕೆ ಮಾಡಬೇಡಿ ಎಲ್ಲರೂ ಬೇಜಾರು ಮಾಡಿಕೊಳ್ಳುತ್ತಾರೆ. ಇದು ಕೊನೆ ವಾರ ಎಲ್ಲರಿಗೂ ಅವಕಾಶ ಸಿಗಲಿ ಎಂದೇ ಹೇಳಿದ್ದಳು. ಇದನ್ನೂ ಓದಿ: ಸೋನು ಗೌಡ ಪ್ರಕಾರ ಆರ್ಯವರ್ಧನ್‌ ಗುರೂಜಿ ಕಳ್ಳ ಸ್ವಾಮಿ ಅಂತೆ

    Live Tv
    [brid partner=56869869 player=32851 video=960834 autoplay=true]

  • ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    ಬಿಗ್ ಬಾಸ್ (Bigg Boss) ಇನ್ನು ಕೇವಲ ಒಂದೇ ವಾರ ಇರುವುದು. ಏಳು ದಿನವಾದ ಮೇಲೆ ಮನೆಯ ಸದಸ್ಯರು ಮನೆಯ ಹೊರಗೆ ಇರುತ್ತಾರೆ. ಈ ಬಗ್ಗೆ ಕಿಚ್ಚ ಸುದೀಪ್ (Kichcha Sudeepa) ವಾರದ ಕಥೆಯಲ್ಲೂ ಕನ್ಫರ್ಮ್ ಮಾಡಿದ್ದಾರೆ. ಹೀಗಿರುವಾಗ ಮನೆಯಲ್ಲಿ ಉಳಿದಿರುವವರ ನಡುವೆಯೇ ಒಂದೊಳ್ಳೆ ಬಾಂಧವ್ಯ, ಒಂದೊಳ್ಳೆ ಒಡನಾಟವಿರಬೇಕು. ಆದ್ರೆ ಈಗಲೂ ಅಂತ ಒಡನಾಟ ಕೆಲವರಲ್ಲಿ ಆಗುತ್ತಿಲ್ಲ. ಒಂಟಿತನ ಎಂಬುದು ಹಲವರಲ್ಲಿ ಕಾಡುತ್ತಿದೆ. ನಿನ್ನೆಯೆಲ್ಲಾ ಸೋಮಣ್ಣ (Somanna Machimada) ಕೂಡ ನನಗು ಒಂದು ಕಂಪನಿ ಬೇಕು ಅಂತ ಫುಲ್ ಫೀಲ್ ಮಾಡಿಕೊಳ್ಳುತ್ತಿದ್ದರು. ಆದ್ರೆ ಆ ಸರದಿ ಇಂದು ಜಯಶ್ರೀಯದ್ದಾಗಿದೆ.

    ಜಯಶ್ರೀಗೆ ಚೈತ್ರಾ ಇದ್ದಾಗ ದಿನ ಹೋಗುತ್ತಿದ್ದದ್ದು ಗೊತ್ತೇ ಆಗುತ್ತಿರಲಿಲ್ಲ. ಆದರೆ ಚೈತ್ರಾ (Chaitra Hallikere) ಹೋದ ಮೇಲೆ ಅಕ್ಷರಶಃ ಕುಗ್ಗಿ ಹೋಗಿದ್ದಳು. ದಿನ ಕಳೆದರೆ ಅಳುತ್ತಾ ಕೂರುತ್ತಿದ್ದಳು. ನಂಗೆ ಇರುವುದಕ್ಕೆ ಆಗುತ್ತಿಲ್ಲ. ದಯವಿಟ್ಟು ನನ್ನನ್ನು ಕಳುಹಿಸಿ ಬಿಡಿ ಎನ್ನುತ್ತಿದ್ದಳು. ಆದ್ರೆ ಅದು ಎರಡು ದಿನ ಮಾತ್ರ. ಬಳಿಕ ಮಾಮೂಲಿಯಂತೆ ಎಲ್ಲರ ಜೊತೆ ಜಗಳವಾಡುತ್ತಾ, ಮಾತನಾಡುತ್ತಾ ಇದ್ದಾಳೆ. ಆದ್ರೆ ಅದ್ಯಾಕೋ ಬಿಗ್ ಬಾಸ್ ಮನೆಯಲ್ಲಿರುವ ಹುಡುಗರು ಇವಳನ್ನು ನೋಡುತ್ತಿಲ್ಲ ಎಂಬ ಬೇಸರ ಅವಳನ್ನು ಕಾಡುತ್ತಿದೆ. ಆ ಬಗ್ಗೆ ಗುರೂಜಿ (Aryavardhan Guruji) ಹತ್ರ ಹೇಳಿಕೊಂಡು ಗೊಳೋ ಅಂತಿದ್ದಾಳೆ. ಇದನ್ನೂ ಓದಿ: ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

    ಬೆಳಗ್ಗೆ ಗೂರೂಜಿ, ಸೋನು (Sonu Srinivas Gowda) ಜೊತೆ ಕುಳಿತು ತಿನ್ನುತ್ತಾ ಕುಳಿತಿದ್ದಳು. ಆಗ ಏನೋ ಗುರುಗಳೇ ಎಷ್ಟೇ ಚೆನ್ನಾಗಿದ್ದರೂ, ಯಾವ ಹುಡುಗರು ನನ್ನ ಮಾತನಾಡಿಸುವುದೇ ಇಲ್ಲ ಅಂತಾರಲ್ಲ ಅಂದಿದ್ದಾಳೆ. ಆಗ ಗುರೂಜಿ ಆಯ್ತು ಬಿಡು ನಾನು ಒಂದೆರಡು ಹುಡುಗರನ್ನು ಕಳುಹಿಸಿ ಕೊಡುತ್ತೀನಿ ಎಂದಿದ್ದಾರೆ. ನಾನು ಇಷ್ಟು ಚೆನ್ನಾಗಿದ್ರು ಯಾರು ನನ್ನ ಮಾತನಾಡಿಸಲ್ಲ ಅಂತಿದ್ದಾಳೆ. ಅದ್ಕೆ ನಾನು ಹೇಳಿದ್ದೀನಿ, ಸುಮ್ನೆ ಇರು ನಮ್ಮ ಆಫೀಸಿನಲ್ಲಿ ಇರುವ ಹುಡುಗರನ್ನು ಕಳುಹಿಕೊಡ್ತೀನಿ ಅಂತ ಹೇಳಿದೆ ಎಂದು ಸೋನು ಬಳಿ ಹೇಳಿಕೊಂಡು ಗುರೂಜಿ ನಗುತ್ತಾರೆ. ಇದನ್ನೂ ಓದಿ: ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ನಾನು ಹೇಳುತ್ತಾ ಇರುವುದು ಬಿಗ್ ಬಾಸ್ ಮನೆಯಲ್ಲಿ ಹೊರಗಡೆಯಲ್ಲ. ಹೊರಗಡೆ ಏನು ಬೇಡ ನಂಗೆ ಎಂದಿದ್ದಾಳೆ. ಆಗ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಅವರವರನ್ನು ಮಾತನಾಡಿಸುವುಕ್ಕೆ ಸಮಯ ಇಲ್ಲ. ಇನ್ನು ನಿನ್ನ ಮಾತನಾಡಿಸುತ್ತಾರಾ ಅಂತ ಕಾಮಿಡಿ ಮಾಡಿದ್ದಾರೆ. ನಿಮಗೆ ಯಾಕೆ ಸುಮ್ನೆ ಇರು ಹೊರಗೆ ಹೋದ ಮೇಲೆ ಕಳುಹಿಸಿಕೊಡ್ತೀನಿ ಅಂದಾಗ, ಸೋನು ಮಾತನಾಡಿ, ಗುರೂಜಿಗಿಂತ ಬೇಕೆನೆ ನಿಂಗೆ. ನಮ್ಮ ಜನಗಳಿಗೆ ಎಷ್ಟು ದುರಾಸೆ ಅಂದ್ರೆ ಸಿಕ್ಕಿರುವುದನ್ನು ಬಿಟ್ಟು ಬಿಡುತ್ತಾರೆ ಎಂದಾಗ ಗುರೂಜಿ ಕೂಡ ಅದೇ ಡೈಲಾಗ್ ಹೊಡೆದಿದ್ದಾರೆ. ಗುರೂಜಿ ಯುವಕ ಅಲ್ವಲ್ಲ ಎಂದು ಜಯಶ್ರೀ (Jayashree) ಹೇಳಿದರೆ, ಗುರೂಜಿಯಲ್ಲಿಯೇ ಯುವಕನನ್ನು ನೋಡು. ಯಾಕೆ ಮಾತನಾಡಲ್ವಾ, ತುಂಟ ತುಂಟ ಮಾತನಾಡಲ್ವಾ, ಯೂಸ್ ಲೆಸ್ ಮಾತುಗಳು ಎಂದು ಸೋನು ಹೇಳಿದ್ದಾಳೆ.

    ಆಗ ಜಯಶ್ರೀ ನೋಡಿ ಗುರೂಜಿ ನಿಮ್ಮನ್ನೆ ಯೂಸ್ ಲೆಸ್ ಅಂತಿದ್ದಾಳೆ ಅಂತ ಹಾಕೊಟ್ಟಿದ್ದಾಳೆ. ಆಗ ಗುರೂಜಿ ಅವಳಿಗೆ ನಾನು ಆ ರೀತಿ ಕಂಡಿರಬಹುದು. ಆದರೆ ನಾನು ಅದಲ್ವಲ್ಲ. ನೀನು ನನ್ನಲ್ಲಿ ಒಳ್ಳೆಯವನನ್ನು ನೋಡಿದ್ದೀಯಾ, ಅವಳು ನನ್ನಲ್ಲಿ ಕೆಟ್ಟವಳನ್ನು ನೋಡಿದ್ದಾಳೆ. ಅದಕ್ಕೆ ನಾನ್ಯಾಕೆ ತಪ್ಪು ತಿಳಿದುಕೊಳ್ಳಲಿ ಅಂತ ಗುರೂಜಿ ಬುದ್ಧಿವಂತಿಕೆಯ ಮಾತನಾಡಿದ್ದಾರೆ. ಅಲ್ಲಿಗೆ ಬಂದ ರಾಕಿ(Rakesh Adiga) ಗೂ ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಮೇಲೆ ಸೋನು ಮೇಲೆ ಒಂದು ಹಾಡನ್ನು ರಚಿಸಿ ಕಾಮಿಡಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಾಲಕ್ಷ್ಮಿ ಮಲಗಲು ಮಂಚಕ್ಕೆ ಬಂಗಾರದ ಲೇಪನ ಮಾಡಿಸಿದ ಪತಿ ರವೀಂದರ್

    ಮಹಾಲಕ್ಷ್ಮಿ ಮಲಗಲು ಮಂಚಕ್ಕೆ ಬಂಗಾರದ ಲೇಪನ ಮಾಡಿಸಿದ ಪತಿ ರವೀಂದರ್

    ನಟಿ ಮಹಾಲಕ್ಷ್ಮಿಯನ್ನು ಮದುವೆಯಾಗಲು ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravinder Chandrasekaran) ದುಬಾರಿ ಗಿಫ್ಟ್ ಗಳನ್ನೇ ನೀಡಿದ್ದಾರಂತೆ. ಮದುವೆಗೆ ಏನೆಲ್ಲ ಉಡುಗೊರೆ ನೀಡಿದ್ದಾರೆ ಎನ್ನುವ ಕುರಿತು ತಮಿಳು ಸುದ್ದಿ ಮಾಧ್ಯಮಗಳು ರಸವತ್ತಾಗಿ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಮದುವೆಗೂ ಮುನ್ನ ಮಹಾಲಕ್ಷ್ಮಿ (Mahalakshmi) ಇಂತಹ ಉಡುಗೊರೆಗಳನ್ನು ಆಫರ್ ಮಾಡಿದ್ದರಾ ಅಥವಾ ಇಷ್ಟಪಟ್ಟು ರವೀಂದರ್ ಅವರೇ ಅವುಗಳನ್ನು ನೀಡಿದ್ದಾರಾ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿವೆ.

    ಮಹಾಲಕ್ಷ್ಮಿ ಮಲಗಲು ಬಂಗಾರದ ಲೇಪನವಿರುವ ಮಂಚವನ್ನು ರವೀಂದರ್ ಉಡುಗೊರೆಯಾಗಿ ನೀಡಿದ್ದಾರಂತೆ. ಅಲ್ಲದೇ, ಬರೋಬ್ಬರಿ ಮುನ್ನೂರು ರೇಷ್ಮೆ ಸೀರೆಗಳನ್ನು ಖರೀಸಿದ್ದಾರಂತೆ. ದುಬಾರಿಯ ಫ್ಲ್ಯಾಟ್ ವೊಂದನ್ನು ಹೆಂಡತಿಗೆ ಕೊಡಲು ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಕೋಟಿ ಕೋಟಿ ಬೆಲೆಬಾಳುವ ಬಂಗಾರದ ಒಡವೆಗಳನ್ನು ಈಗಾಗಲೇ ಮದುವೆ ಸಂದರ್ಭದಲ್ಲಿ ರವೀಂದರ್ ನೀಡಿದ್ದಾರಂತೆ. ಅಲ್ಲದೇ, ಹೆಂಡತಿ ಬಯಸುವ ಮತ್ತಷ್ಟು ಉಡುಗೊರೆಗಳನ್ನೂ ಕೊಡುವುದಾಗಿ ಅವರು ಹೇಳಿದ್ದಾರಂತೆ. ಇದನ್ನೂ ಓದಿ:ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ

    ಈ ನಡುವೆ ಮತ್ತೊಂದು ಸ್ಪೂಟಕ ಸುದ್ದಿ ಹೊರ ಬಂದಿದ್ದು, ಮಹಾಲಕ್ಷ್ಮಿಗೆ ಈ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳು ಕೂಡ ಇವೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ತಮ್ಮೊಂದಿಗೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸ್ವತಃ ಈಶ್ವರ್ ಅವರ ಪತ್ನಿಯೇ ಆರೋಪ ಮಾಡಿದ್ದಾರೆ. ನನ್ನ ಗಂಡನ ಜೊತೆ ಮಹಾಲಕ್ಷ್ಮಿ ದಿನ ರಾತ್ರಿಯೂ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಸಾಕ್ಷಿ ನನ್ನ ಬಳಿ ಇದೆ ಎಂದು ಈಶ್ವರ್ ಪತ್ನಿ ಜಯಶ್ರೀ (Jayashree) ಆರೋಪ ಮಾಡಿದ್ದರು.

    ರವೀಂದರ್ ಚಂದ್ರಶೇಖರನ್ ಜೊತೆ ಮಹಾಲಕ್ಷ್ಮಿ ಮದುವೆ ಆಗುತ್ತಿದ್ದಂತೆಯೇ ಈ ವಿಷಯ ತಮಿಳು ಮಾಧ್ಯಮದಲ್ಲಿ ಮತ್ತೆ ಪ್ರಮುಖ ಸುದ್ದಿಯಾಗಿದೆ. ಮಹಾಲಕ್ಷ್ಮಿ ಮತ್ತು ಈಶ್ವರ್ ಲವ್ವಿ ಡವ್ವಿ ವಿಚಾರ ರವೀಂದರ್ ಅವರಿಗೂ ಗೊತ್ತಿತ್ತು ಎಂದು ವರದಿಯಾಗಿದೆ. ಎಲ್ಲ ಗೊತ್ತಿದ್ದರೂ ಮಹಾಲಕ್ಷ್ಮಿಯನ್ನು ರವೀಂದರ್ ಮದುವೆ ಆಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಮದುವೆ ಅವರ ಸ್ವಂತ ವಿಚಾರ. ಅಷ್ಟಕ್ಕೂ ಇಬ್ಬರೂ ಕಾನೂನು ಬದ್ಧವಾಗಿಯೇ ಮದುವೆಯಾಗಿದ್ದಾರೆ. ಆದರೂ, ಜಯಶ್ರೀ ಆರೋಪ ಇದೀಗ ಮುನ್ನೆಲೆಗೆ ಬಂದಿದೆ.

    ರವೀಂದರ್ ಮತ್ತು ಮಹಾಲಕ್ಷ್ಮಿ ಮದುವೆ (marriage) ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೂ, ಈ ಜೋಡಿ ಇದೀಗ ಹನಿಮೂನ್ ಗೆ ಹೊಗಲು ಸಿದ್ಧತೆ ಮಾಡಿಕೊಂಡಿದೆ. ಪರಸ್ಪರ ಇಬ್ಬರೂ ಗೌರವದ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀಗ್ಯಾಕೆ ನಂದು ಮೇಲೆ ಕೋಪ: ನಂದು ಮೇಲೆ ಕಿಡಿಕಾರಿದ ಜಯಶ್ರೀ

    ಜಯಶ್ರೀಗ್ಯಾಕೆ ನಂದು ಮೇಲೆ ಕೋಪ: ನಂದು ಮೇಲೆ ಕಿಡಿಕಾರಿದ ಜಯಶ್ರೀ

    ಬಿಗ್ ಬಾಸ್ (Bigg boss) ಮನೆಯಲ್ಲಿ ಭಿನ್ನ ಮನಸ್ಥಿತಿಯ ವ್ಯಕ್ತಿತ್ವ ಹೊಂದಿರುವವರಿದ್ದಾರೆ. ದೊಡ್ಮನೆಯಲ್ಲಿ ಫ್ರೆಂಡ್ ಶಿಪ್ ಕೂಡ ಎಷ್ಟು ಹೈಲೈಟ್ ಆಗಿದ್ಯೋ ಅಷ್ಟೇ ಜಗಳ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಇನ್ನು ಶುರುವಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ನಂದು ಮತ್ತು ಜಯಶ್ರೀ ನಡುವೆ ಕಿರಿಕ್ ನಡೆಯುತ್ತಲೇ ಇದೆ. ಈಗ ನಂದು ಮತ್ತು ಜಶ್ವಂತ್ ಬಗ್ಗೆ ಮತ್ತೆ ಜಯಶ್ರೀ ಮಾತನಾಡಿದ್ದಾರೆ. ನಂದು ಬಗ್ಗೆ ಜಯಶ್ರೀ ಕಿಡಿಕಾರಿದ್ದಾರೆ.

    ದೊಡ್ಮನೆಯಲ್ಲಿ ಇರಲು ಟಾಸ್ಕ್, ಅಡುಗೆ, ಮನರಂಜನೆ, ಹೀಗೆ ಸಾಕಷ್ಟು ವಿಚಾರಗಳಲ್ಲಿ ಸ್ಪರ್ಧಿ ಆಕ್ಟೀವ್ ಆಗಿರಬೇಕಾಗುತ್ತದೆ. ಇದೀಗ ನಂದು ಮತ್ತು ಜಶ್ವಂತ್ (Nandu & Jashwanth) ಇವರೆಗೂ ಮನೆಯಲ್ಲಿ ಸೇವ್ ಆಗಿ ಉಳಿದುಕೊಂಡಿರುವುದರ ಬಗ್ಗೆ ಜಯಶ್ರೀ ಮಾತನಾಡಿದ್ದಾರೆ. ನಂದು ಮತ್ತು ಜಶ್ವಂತ್ ಕಪಲ್ ಆಗಿ ಬಂದಿರೋದಕ್ಕೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂದು ಈ ಜೋಡಿಯ ಬಗ್ಗೆ ಜಯಶ್ರೀ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ:ಸೋಮಣ್ಣ – ಗುರೂಜಿ ಗೆಲುವು ನೋಡಿ, ಗಳಗಳನೆ ಅತ್ತ ಸಾನ್ಯ ಅಯ್ಯರ್

    ನಂದು ಮತ್ತು ಜಶ್ವಂತ್ ಇಷ್ಟು ದಿನ ಉಳಿದುಕೊಂಡಿರೋದೇ ಕಪಲ್ ಆಗಿರುವ ಕಾರಣ, ಅವರಲ್ಲಿ ಅಂತಹ ಸ್ಪೆಷಲಿಟಿ ಏನೀದೆ. ಟಾಸ್ಕ್ನಲ್ಲಿ ಸ್ಟ್ರಾಂಗ್ ಆಗಿ ಇದ್ದಾರೆ. ಮನರಂಜನೆಯ ವಿಚಾರಕ್ಕೆ ಬಂದರೆ ಅವರಲ್ಲಿ ರಂಜಿಸುವ ಗುಣ ನೋಡಿಲ್ಲ ಎಂದು ಜಯಶ್ರೀ ಸೋಮಣ್ಣ, ಗುರೂಜಿ ಮುಂದೆ (Jayashree)  ಮಾತನಾಡಿದ್ದಾರೆ.

    ಈ ವೇಳೆ ಸೋನು ಬಗ್ಗೆ ಕೂಡ ಮಾತನಾಡಿರುವ ಜಯಶ್ರೀ, ನೀನು ಬಿಡು ಎಂಟರ್ಟೈನ್ಮೆಂಟ್ ಪ್ಯಾಕ್, ಆದರೆ ನೀನು ಯಾರಿಗೂ ಗೌರವ ಕೊಡದೇ ಮಾತನಾಡುತ್ತೀಯಾ ಅದೇ ನೀನಾ ವಿಕ್ ನೆಸ್ ಎಂದು ಸೋನುಗೆ ನೇರವಾಗಿ ಜಯಶ್ರೀ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರವೀಂದರ್ ಮದುವೆಗೂ ಮುನ್ನ ಸಹ ನಟನೊಂದಿಗೆ ಮಹಾಲಕ್ಷ್ಮಿಗೆ ಸಂಬಂಧವಿತ್ತು: ಸ್ಪೋಟಕ ಹೇಳಿಕೆ ನೀಡಿದ ನಟನ ಪತ್ನಿ

    ರವೀಂದರ್ ಮದುವೆಗೂ ಮುನ್ನ ಸಹ ನಟನೊಂದಿಗೆ ಮಹಾಲಕ್ಷ್ಮಿಗೆ ಸಂಬಂಧವಿತ್ತು: ಸ್ಪೋಟಕ ಹೇಳಿಕೆ ನೀಡಿದ ನಟನ ಪತ್ನಿ

    ಳೆದ ನಾಲ್ಕೈದು ದಿನದಿಂದ ತಮಿಳು ನಾಡು ಮಾಧ್ಯಮಗಳಲ್ಲಿ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಮದುವೆಯದ್ದೇ ಸುದ್ದಿ. ಇಬ್ಬರದ್ದೂ ಎರಡನೆಯ ಮದುವೆ ಅಂತಾದರೆ, ಮತ್ತೊಂದು ಮಿಸ್ ಮ್ಯಾಚ್ ಮದುವೆ ಎಂಬ ಟ್ರೋಲ್. ಅಲ್ಲದೇ, ರವೀಂದರ್ ಬಳಿ ಇರುವ ಆಸ್ತಿಗಾಗಿ ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎನ್ನುವ ಆರೋಪ. ಈ ನಡುವೆ ಮಹಾಲಕ್ಷ್ಮಿ ಬಗ್ಗೆ ಹಿಂದೆ ನಡೆದಿದೆ ಎನ್ನಲಾದ ಸ್ಪೂಟಕ ವಿಷಯವೊಂದು ಮತ್ತೆ ಮುನ್ನೆಲೆಗೆ ಬಂದಿದೆ.

    ಮಹಾಲಕ್ಷ್ಮಿಗೆ ಈ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳು ಕೂಡ ಇವೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ತಮ್ಮೊಂದಿಗೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸ್ವತಃ ಈಶ್ವರ್ ಅವರ ಪತ್ನಿಯೇ ಆರೋಪ ಮಾಡಿದ್ದಾರೆ. ನನ್ನ ಗಂಡನ ಜೊತೆ ಮಹಾಲಕ್ಷ್ಮಿ ದಿನ ರಾತ್ರಿಯೂ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಸಾಕ್ಷಿ ನನ್ನ ಬಳಿ ಇದೆ ಎಂದು ಈಶ್ವರ್ ಪತ್ನಿ ಜಯಶ್ರೀ ಆರೋಪ ಮಾಡಿದ್ದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ರಿಚಾ ಚಡ್ಡಾ, ಅಲಿ ಫಜಲ್

    ರವೀಂದರ್ ಚಂದ್ರಶೇಖರನ್ ಜೊತೆ ಮಹಾಲಕ್ಷ್ಮಿ ಮದುವೆ ಆಗುತ್ತಿದ್ದಂತೆಯೇ ಈ ವಿಷಯ ತಮಿಳು ಮಾಧ್ಯಮದಲ್ಲಿ ಮತ್ತೆ ಪ್ರಮುಖ ಸುದ್ದಿಯಾಗಿದೆ. ಮಹಾಲಕ್ಷ್ಮಿ ಮತ್ತು ಈಶ್ವರ್ ಲವ್ವಿ ಡವ್ವಿ ವಿಚಾರ ರವೀಂದರ್ ಅವರಿಗೂ ಗೊತ್ತಿತ್ತು ಎಂದು ವರದಿಯಾಗಿದೆ. ಎಲ್ಲ ಗೊತ್ತಿದ್ದರೂ ಮಹಾಲಕ್ಷ್ಮಿಯನ್ನು ರವೀಂದರ್ ಮದುವೆ ಆಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಮದುವೆ ಅವರ ಸ್ವಂತ ವಿಚಾರ. ಅಷ್ಟಕ್ಕೂ ಇಬ್ಬರೂ ಕಾನೂನು ಬದ್ಧವಾಗಿಯೇ ಮದುವೆಯಾಗಿದ್ದಾರೆ. ಆದರೂ, ಜಯಶ್ರೀ ಆರೋಪ ಇದೀಗ ಮುನ್ನೆಲೆಗೆ ಬಂದಿದೆ.

    ರವೀಂದರ್ ಮತ್ತು ಮಹಾಲಕ್ಷ್ಮಿ ಮದುವೆ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೂ, ಈ ಜೋಡಿ ಇದೀಗ ಹನಿಮೂನ್ ಗೆ ಹೊಗಲು ಸಿದ್ಧತೆ ಮಾಡಿಕೊಂಡಿದೆ. ಪರಸ್ಪರ ಇಬ್ಬರೂ ಗೌರವದ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ

    ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ

    ಕೆಲವೊಂದು ಸಲ ನಮ್ಮ ನಮ್ಮ ರಿಯಾಲಿಟಿ ಗುಣಗಳೇ ಎಲ್ಲರಿಗೂ ಇಷ್ಟವಾಗಿ ಬಿಡುತ್ತದೆ. ಒರಟುತನ ಅಂದರೂ, ಬಾಯಿ ಸರಿ ಇಲ್ಲ ಅಂತ ಅಷ್ಟು ಸಲ ಹೇಳಿದರೂ, ಸೋನು ಯಾವತ್ತಿಗೂ ತನ್ನ ಗುಣದಲ್ಲಿ ಬದಲಾವಣೆ ಮಾಡಿಕೊಳ್ಳಲೇ ಇಲ್ಲ. ಆದರೆ ಈಗ ಆಕೆಯನ್ನೇ ಮನೆಯ ಪ್ರತಿಯೊಬ್ಬರು ತಮ್ಮದೇ ರೀತಿಯಲ್ಲಿ ಹೊಗಳುವುದಕ್ಕೆ ಶುರು ಮಾಡಿದ್ದಾರೆ. ಆದರೆ ರಾಕಿಗೆ ಕೊಂಚ ಸ್ಪೆಷಲ್ ಅಟ್ರಾಕ್ಷನ್ ಬಂದಿದೆ ಎನಿಸುತ್ತಿದೆ. ಅವಳು ತನ್ನ ಬಗ್ಗೆ ಯಾವ ಒಪಿನಿಯನ್ ಇಟ್ಟುಕೊಂಡಿದ್ದಾಳೆ ಎಂಬ ಕುತೂಹಲ ಹೆಚ್ಚಾಗಿದೆ. ಅದನ್ನು ತಿಳಿಯುವುದಕ್ಕೆ ತಾನು ಟ್ರೈ ಮಾಡಿದ್ದಲ್ಲದೆ, ಮನೆಯವರಿಂದಾನು ಆ ಕಾರ್ಯಕ್ಕೆ ಕೈ ಹಾಕಿದ್ದಾನೆ.

    ಸೋನು ಕೂಡ ಇತ್ತೀಚೆಗೆ ರಾಖಿ ವಿಚಾರದಲ್ಲಿ ತುಂಬಾನೆ ಕಾಳಜಿ ತೆಗೆದುಕೊಳ್ಳುತ್ತಿದ್ದಾಳೆ. ರಾಕಿಗೋಸ್ಕರ ಎಲ್ಲರ ಬಳಿ ಜಗಳವಾಡಿ ಮೂರು ಪೀಸ್ ಪಪ್ಪಾಯ ಎತ್ತಿಟ್ಟಿದ್ದಾಳೆ. ಅವನಿಗೋಸ್ಕರ ಅಂತ ಸಮಯ ಇಡುತ್ತಾಳೆ. ಸುಮ್ಮನೆ ಸುಮ್ಮನೆ ಇದ್ದವಳೂ ಡೈನಿಂಗ್ ಟೇಬಲ್ ನಲ್ಲಿ ಹೊಡಿಬೇಕು ಅನಿಸುತ್ತಿದ್ದರೆ ಹೊಡೆದು ಬಿಡಬೇಕು, ಮಾತನಾಡಿಸಬೇಕು ಎನಸಿದರೆ ಮಾತನಾಡಿಬಿಡಬೇಕು, ಬೈಬೇಕು ಅನಿಸಿದರೆ ಬೈದು ಬಿಡಬೇಕು, ಏನನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಅನ್ನಿಸಿದ್ದೆಲ್ಲವನ್ನು ಹೇಳಿಬಿಡಬೇಕು ಎಂದಿದ್ದಾಳೆ.  ಇದನ್ನೂ ಓದಿ: ಜಶ್ವಂತ್- ನಂದಿನಿ ಮಧ್ಯೆ ಇದ್ದ ಮನಸ್ತಾಪ ರೂಪೇಶ್‍ನಿಂದ ಸರಿ ಆಯ್ತಾ?

    ಹಾಗೇ ರಾಕಿ ವಿಚಾರ ಬಂದಾಗ ಮನಸ್ಸಲ್ಲೇ ನಗುತ್ತಾನೆ. ಆದರೆ ಅವನು ಫೀಲಿಂಗ್ಸ್‍ಗೆ ವ್ಯಾಲ್ಯೂ ಕೊಡಲ್ಲ ಎಂಬ ಬೇಸರ ಕೂಡ ಇದೆ. ಜಯಶ್ರೀ ಬಳಿ ಅದನ್ನೇ ಹೇಳಿದ್ದಾಳೆ. ಬಳಿಕ ಮಧ್ಯಾಹ್ನ ಸೋಯಾ ಫ್ರೈ ತಿನ್ನುವಾಗ ರಾಕಿಗೆ ತಿನ್ನಿಸಲು ಹೋಗಿದ್ದಾಳೆ ಬೇಡ ಎಂದಿದ್ದಾನೆ. ಇದೆಲ್ಲಾ ಮುಗಿದ ಮೇಲೆ ಸೋನು ಲೈಟ್ ಆಗಿ ಟಚ್ ಅಪ್ ಮಾಡಿಕೊಳ್ಳಲು ಪೌಡರ್ ರೂಮಿಗೆ ಹೋಗಿದ್ದಳು. ಆಗ ಹಿಂದೆಯೇ ಸದ್ದು ಮಾಡದಂತೆ ಬಂದ ರೂಪೇಶ್ ಅವಳು ಏನು ಮಾತನಾಡುತ್ತಿದ್ದಾಳೆ ಅಂತ ಕೇಳಿಸಿಕೊಂಡಿದ್ದಾನೆ.

    ಸೋನು, ರಾಕಿ ಬಗ್ಗೆ ಗಮನವೇ ಇಲ್ಲದಂತೆ ಅವನ ಬಗ್ಗೆಯೇ ಮಾತನಾಡುತ್ತಿದ್ದಾಳೆ. ನೀನ್ಯಾಕೆ ಅವನ ಸಹವಾಸಕ್ಕೆ ಹೋಗ್ತೀಯಾ. ಏನೋ ಮಿಸ್ಸಾಗಿ ಬಿದ್ದಿದ್ದಕ್ಕೇನೆ ಅಯ್ಯಯ್ಯಾ ಅಂದುಬಿಟ್ಟಾ. ಈಗ ನೀನು ಹೋಗಿ ಅವನನ್ನು ಕೇರ್ ಮಾಡೋದು, ತಿನ್ನಿಸೋದನ್ನ ನೋಡಿದರೆ ಮಖ್ ಮಖ್‍ಕ್ಕೆ ಹೊಡೆದಾಕಿ ಬಿಡುತ್ತೇನೆ. ಬೇಕು ಅಂತ ಏನು ಮಾಡಿದ್ದಲ್ಲ. ಅವನು ಯಾವ ಸೀಮೆ ಫ್ರೆಂಡು ಅಂತ ಒಬ್ಬೊಬ್ಬಳೆ ಮಾತನಾಡಿಕೊಂಡು ಹೊರಗೆ ಬಂದಿದ್ದಾರೆ. ಅಲ್ಲೆ ಕದ್ದು ಕುಳಿತಿದ್ದ ರಾಕೇಶ್ ಅವಳನ್ನು ಹೆದರಿಸಿದ್ದಾರೆ.

    ಮಧ್ಯಾಹ್ನ 2.30 ಗಂಟೆ ಆಗಿತ್ತು. ಜಯಶ್ರೀ ಹಾಗೂ ಸೋನು ಒಂದು ಬೆಡ್ ಮೇಲೆ ಮಲಗಿದ್ದರು. ರಾಕೇಶ್ ಅದರ ಎದುರುಗಡೆ ಮಲಗಿದ್ದ. ಆಗ ಅವನು ಹೋದ ಬಿಡು ಅಂತ ಹೇಳಿದ ಜಯಶ್ರೀ, ರಾಕಿ ಬಗ್ಗೆ ಕೇಳಿದ್ದಾಳೆ. ಸೋನು ಮಾತನಾಡುವಾಗ. ಓಓ ನಿಂಗೆ ಏನ್ ಅನ್ನಿಸುತ್ತದೆ ನಿಜ ಹೇಳು. ಅವನತ್ತಿರ ಯಾವ ಫೀಲಿಂಗ್ಸ್‍ಗೂ ವ್ಯಾಲ್ಯೂ ಇಲ್ಲ ಎಂದಾಗ ಜಯಶ್ರೀ ನಿನಗಿದ್ಯಲ್ಲ ಅಂದಾಗ ಸೋನು ನನಗೂ ಇಲ್ಲ ಎಂದಿದ್ದಾಳೆ. ಆಗ ಜಯಶ್ರೀ, ಹಾಗಾದರೆ ಸುಮ್ನೆ ನೋಡೋದು ಮಾತನಾಡೋದೆಲ್ಲ ಏನು ಎಂದಿದ್ದಾಳೆ. ಇದನ್ನೂ ಓದಿ: ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು

    ಅದಕ್ಕೆ ಸೋನು ಸುಮ್ನೆ ಅದೆಲ್ಲ. ಅಂದರೆ ಕೇರ್ ಮಾಡುತ್ತಾನೆ. ಆದರೆ ಫೀಲಿಂಗ್ಸ್‍ಗೆಲ್ಲಾ ಬೆಲೆ ಇಲ್ಲ. ಅವನ ಸ್ಟೋರಿಯಲ್ಲಿ ಪಾಪ ಅವನು ಬೇಜಾರಾಗಿದ್ದಾನೆ. ಕಷ್ಟ ಸುಖ ಮೋಸ ಎಲ್ಲದನ್ನು ನೋಡಿದ್ದಾನೆ. ಆರು ಜನರನ್ನು ಲವ್ ಮಾಡಿದ್ದಾನೆ. ಯಾರು ಆ ರೀತಿಯೆಲ್ಲಾ ಯಾರು ನಿಜ ಒಪ್ಪಿಕೊಳ್ಳಲ್ಲ. ತುಂಬಾ ಜೆನ್ಯೂನು ಇದ್ದಾನೆ ಅಂದಾಗ ಜಯಶ್ರೀ ಓ ಅವತ್ತಿನಿಂದಾನೇ ನಿಂಗೆ ಲವ್ ಆಗಿದ್ದ ಎಂದಾಗ ಸಡನ್ ಅರ್ಥ ಮಾಡಿಕೊಂಡ ಸೋನು, ಲವ್ ಅಂದರೆ ಕಪಾಳಕ್ಕೆ ಹೊಡಿತೀನಿ ಅಂತ ಹೇಳಿ ಮಾತು ಮುಂದುವರೆಸಿದ್ದಾಳೆ. ಅವತ್ತು ನಾನು ಅಂದುಕೊಂಡಿದ್ದೆ ಬೇಡ ಈ ಹುಡುಗನ ಸಹವಾಸ ಅಂತ. ಬಳಿಕ ಅದನ್ನು ನೆಗೆಟಿವ್ ಆಗಿ ಯಾಕೆ ಥಿಂಕ್ ಮಾಡಬೇಕು. ಬೇರೆ ಯಾವ ಹುಡುಗರು ಈ ರೀತಿ ಮಾತನಾಡಲ್ಲ. ನೀನೇ ನನ್ನ ಗರ್ಲ್ ಫ್ರೆಂಡ್ ಅಂತ ಹೇಳಿ ಮೋಸ ಮಾಡುತ್ತಾರೆ. ಆದರೆ ಇವನು ತುಂಬಾ ಜೆನ್ಯೂನ್ ಇದ್ದಾನೆ ಅನ್ನಿಸಿ, ಇವನೊಬ್ಬನೆ ಸಾಕು ಎಂದುಕೊಂಡೆ ಎಂದಿದ್ದಾಳೆ. ಮಧ್ಯೆ ಮಧ್ಯೆ ಜಯಶ್ರೀ ಕೂಡ ರೇಗಿಸಿದ್ದಾರೆ. ಆಮೇಲೆ ಹಿಂದೆನೆ ಕೂತಿದ್ದ ರಾಕಿ ಬಗ್ಗೆಯೂ ಹೇಳಿದ್ದಾರೆ. ರಾಖಿ ಒಂದು ಸುಂದರ ನಗು ಬೀರಿ ಸೋನು ಕಡೆ ದಿಂಬೆಸೆದಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಊಹೆಗೂ ಮೀರಿದ ಟ್ವೀಸ್ಟ್‌ಗಳು ನಡೆಯುತ್ತಿದೆ. ದಿನ ಕಳೆದಂತೆ ಮನೆಯ ರಂಗು ಹೆಚ್ಚುತ್ತಿದೆ. ಬಿಗ್ ಬಾಸ್ ಓಟಿಟಿ ಮುಗಿಯಲು ಎರಡು ವಾರಗಳಿವೆ. ಇದೀಗ ಒಬ್ಬಬ್ಬರೇ ಮನೆಯಿಂದ ಎಲಿಮೀನೇಟ್ ಆಗಿ ಹೊರಬರುತ್ತಿದ್ದಾರೆ. ಆದರೆ ಈ ವಾರದ ಡಬಲ್ ಎಲಿಮಿನೇಷನ್ ಮನೆಮಂದಿಗೆ ಶಾಕ್ ಕೊಟ್ಟಿದೆ. ದೊಡ್ಮನೆಯಿಂದ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಹೊರನಡೆದಿದ್ದಾರೆ. ಈ ಎಲ್ಲಾ ಬೆಳವಣಿಕೆಗಳ ನಡುವೆ ಜಯಶ್ರೀ ಆರಾಧ್ಯಗೆ ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಜಯಶ್ರೀ ಕಣ್ಣೀರಿಟ್ಟಿದ್ದಾರೆ.

    ದೊಡ್ಮನೆ ಬಿಗ್ ಬಾಸ್ ಸಾಕಷ್ಟು ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ಆಟ ಮತ್ತಷ್ಟು ಟಫ್ ಆಗುತ್ತಿದೆ. ಇದೀಗ ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರಕ್ಕೆ ಚೈತ್ರಾ ಮತ್ತು ಅಕ್ಷತಾ ಕುಕ್ಕಿ ಔಟ್ ಆಗಿದ್ದಾರೆ. ಆತ್ಮೀಯ ಗೆಳತಿ ಚೈತ್ರಾ ಅವರಿಗಾಗಿ ಜಯಶ್ರೀ ಗಳಗಳನೆ ಅತ್ತಿದ್ದಾರೆ.

    ಜಯಶ್ರೀ ಅವರಿಗೆ ಮೊದಲಿನಿಂದಲೂ ಚೈತ್ರ ಅವರಿರೊಂದಿಗೆ ಒಳ್ಳೆಯ ಒಡನಾಟವಿತ್ತು. ಮನೆಯಲ್ಲಿ ಇದ್ದಷ್ಟು ದಿನ ಒಬ್ಬರಿಗೊಬ್ಬರು ಕೆಲಸಗಳಲ್ಲಿ ಮತ್ತು ಟಾಸ್ಕ್ನಲ್ಲಿ ಸಾಥ್ ನೀಡುತ್ತಲೇ ಬಂದಿದ್ದರು. ಆದರೆ ಈಗ ಮನೆಯಿಂದ ಚೈತ್ರ ಹೊರನಡೆದಿರುವುದು ಜಯಶ್ರೀ ಅವರಿಗೆ ಒಂಟಿತನ ಕಾಡಿದೆ. ಚೈತ್ರಾ ಎಲಿಮಿನೇಟ್ ಆದ ದಿನವೇ ಜಯಶ್ರೀ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದರು. ಬಿಗ್ ಬಾಸ್ ನನಗೆ ಇಲ್ಲಿ ಇರಲು ಆಗುತ್ತಿಲ್ಲ. ತುಂಬಾ ಒಂಟಿತನ ಫೀಲ್ ಆಗುತ್ತಿದೆ. ತುಂಬಾ ವೀಕ್ ಆದಂತೆ ಅನಿಸುತ್ತಿದೆ. ಎಂದು ಗಳಗಳನೆ ಅತ್ತಿದ್ದಾರೆ. ಈ ವೇಳೆ ಇತರ ಸ್ಪರ್ಧಿಗಳು ಸಮಾಧಾನಿಸಲು ಪ್ರಯತ್ನ ಪಟ್ಟಿದ್ದಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ಹೊರಗಡೆ ಜೀವನದಲ್ಲಿ ಈ ರೀತಿ ಆದಾಗ ಬೇರೆ ಆಯ್ಕೆ ಇರುತ್ತದೆ. ಮೊಬೈಲ್ ಇರುತ್ತದೆ. ಆದರೆ ಇಲ್ಲಿ ಸಂಪೂರ್ಣ ಒಂಟಿ ಎಂದೆನಿಸುತ್ತಿದೆ ಎಂದು ಜಯಶ್ರೀ ಹೇಳಿಕೊಂಡಿದ್ದಾರೆ. ಚೈತ್ರ ಅವರಿಗಾಗಿ ಜಯಶ್ರೀ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಬಿಗ್ ಬಾಸ್ ನೀಡಿದ ಆಟಗಳು ಸಖತ್ ಮಜಾ ಕೊಟ್ಟಿದೆ. ಫನ್ ಎನಿಸುವ ಈ ಆಟದಲ್ಲಿ ಮನೆಯ ಸದಸ್ಯರ ನೆನಪಿನ ಶಕ್ತಿಯನ್ನು ಪರೀಕ್ಷಿಸುವುನ್ನು ನೀಡಡಲಾಗಿತ್ತು. ಅದರಲ್ಲಿ ಪವರ್ ಸ್ಟಾರ್ ಟೀಂ 110, ಟೀಂ ಜಿಂಕಾಲಕ ಟೀಂ ಪಡೆದುಕೊಂಡಿದ್ದು 20 ಅಂಕ. ಈ ಆಟದಲ್ಲಿ ಟೀಂ ಪವರ್ ಸ್ಟಾರ್ ನಿಂದ ಜಯಶ್ರೀ ಬಂದಿದ್ದರು. ಹೆಚ್ಚು ಉತ್ತರವನ್ನು ಅವರೇ ನೀಡಿದ್ದರು.

    ಗೆದ್ದ ಬಳಿಕ ಚೈತ್ರಾ ಬಳಿ ಆ ಖುಷಿಯನ್ನು ವ್ಯಕ್ತಪಡಿಸಿದರು. ಒಬ್ಬರಿಗೆ ಶಕ್ತಿ ಕೊಟ್ಟರೆ ಇನ್ನೊಬ್ಬರಿಗೆ ಯುಕ್ತಿ ಕೊಟ್ಟಿರುತ್ತಾನೆ ಎಂದು ಅವತ್ತೇ ಹೇಳಿದ್ದೆ ಅಂತ ಕುಣಿದು ಕುಪ್ಪಳಿಸಿದ್ದಾಳೆ. ಬಳಿಕ ದೇವರ ಬಳಿ ಹೋಗಿ ತನ್ನ ಕೋರಿಕೆ ಈಡೇರಿಸಿದ್ದಕ್ಕಾಗಿ ಖುಷಿ ವ್ಯಕ್ತಪಡಿಸುತ್ತಿದ್ದರು. ಈ ಗೆಲುವು ತುಂಬಾ ಮುಖ್ಯವಾಗಿತ್ತು ಬೇಕೆ ಬೇಕು ಅಂತ. ದೇವರು ನಂಗೆ ಆ ಗೆಲುವು ಕೊಟ್ಟ. ಥ್ಯಾಂಕ್ಯೂ ಥ್ಯಾಂಕ್ಯೂ ಅಂತ ಮೂರ್ನಾಲ್ಕು ಸಲ ಹೇಳಿದ ಜಯಶ್ರೀ, ಲೈಫ್ ನಲ್ಲಿ ಸೋತವರಿಗೆ ಹಠ ಇರುತ್ತೆ ಅಂತ ನಾನು ಎಲ್ಲರನ್ನು ಕರೆದುಕೊಂಡೆ. ನಾನು ಸದಸ್ಯರನ್ನು ಸೆಲೆಕ್ಟ್ ಮಾಡಿದಾಗ ಇವಳು ದಡ್ಡಿ, ಅವಳು ಬುದ್ಧಿವಂತೆ, ಇನ್ಯಾರೋ ಕ್ಲೆವರ್, ದಡ್ಡತನ ಮಾಡಿಕೊಂಡಳು ಅಂತ ಇನ್ಯಾರೋ ಮಾತನಾಡಿಕೊಂಡರು ಎಂದು ಜಯಶ್ರೀ ಹೇಳಿದ್ದೇ ತಡ ದೊಡ್ಡ ಗಲಾಟೆಯೇ ನಡೆದಿದೆ.

    ಅಲ್ಲಿಯೇ ಇದ್ದ ಅಕ್ಷತಾ ಅದಕ್ಕೆ ಕ್ಲಾರಿಟಿ ಕೊಡುವುದಕ್ಕೆ ಬಂದಾಗ, ಜಯಶ್ರೀ ತಿರುಗೇಟು ನೀಡಿದ್ದಾಳೆ. ನಾನು ಖುಷಿಯಲ್ಲಿದ್ದೀನಿ. ಆ ಖುಷಿ ಮೂಮೆಂಟ್ ಎಂಜಾಯ್ ಮಾಡಬೇಕು. ನಿನ್ನ ಮಾತು ಕೇಳುವುದಕ್ಕೆ ಇಷ್ಟಪಡಲ್ಲ ಎಂದು ಕಿವಿ ಮುಚ್ಚಿಕೊಂಡಿದ್ದಾಳೆ. ಇದು ಸ್ಟುಪ್ಪಿಡಿಟಿ. ಆಕೆ ಬೆಳಗ್ಗೆನೆ ಮೆನ್ಶನ್ ಮಾಡಿದ್ದಳು. ಸೋನುನು ಏನೂ ಇಲ್ಲ. ಒಂದು ಟಾಸ್ಕ್ ಅಷ್ಟೆ ವಿನ್ ಆಗಿರೋದು ಅಂತ ಹೇಳಿದ್ದಳು ಎಂದಾಗ ಮತ್ತೆ ಜಯಶ್ರೀ ತಿರುಗಿಬಿದ್ದಿದ್ದಾಳೆ. ಬೇರೆಯವರನ್ನ ದಡ್ಡರು ಅಂತ ಹೇಳಿಲ್ಲ ಹೋಗಮ್ಮ ಸುಮ್ಮನೆ ಎಂದು ರೇಗಿದ್ದಾಳೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಆದರೆ ಇಷ್ಟಕ್ಕೆ ಅಕ್ಷತಾ ಬಿಡಬೇಕಲ್ಲ. ನೋವೇ ಚಾನ್ಸೆ ಇಲ್ಲ. ನನ್ನ ಖುಷಿ ಮೂಮೆಂಟ್ ನ ಎಂಜಾಯ್ ಮಾಡುವುದಕ್ಕೆ ಬಿಡು ಅಂತ ಕಿವಿ ಮುಚ್ಚಿಕೊಂಡು ಓಡಿ ಹೋಗಿದ್ದ ಜಯಶ್ರೀ ಹಿಂದೆ ಹಿಂದೆಯೇ ಅಕ್ಷತಾ ಹೋಗಿದ್ದಾಳೆ. ಮಾತನಾಡುವಾಗ ಯೋಚನೆ ಮಾಡಿ ಮಾತಾಡು ಜಯಶ್ರೀ. ನಾನು ಖುಷಿನೇ ಪಟ್ಟಿದ್ದೀನಿ. ಅದರೆ ಅದನ್ನು ಅಷ್ಟು ದೊಡ್ಡದ್ದನ್ನು ಮಾಡಿ ಮಾತಾಡುವ ಅವಶ್ಯಕತೆ ಇಲ್ಲ ಎಂದು ಅಕ್ಷತಾ ಹೇಳಿದ್ದಾಳೆ. ಇನ್ನು ಜಯಶ್ರೀ ಕೂಡ ಅದೇ ಸ್ಟೈಲ್ ನಲ್ಲಿ ಮನೆಯಲ್ಲೆಲ್ಲಾ ಓಡಾಡಿ, ನಾನು ದೇವರ ಹತ್ತಿರ ಮಾತನಾಡುವುದಕ್ಕೂ ಬಿಡಲ್ಲ ಎಂದು ಗೋಳಾಡಿದ್ದಾಳೆ.

    ಇತ್ತ ಸೋನು ಮತ್ತು ರಾಕೇಶ್ ಕುಳಿತಿದ್ದಾಗ ಅಕ್ಷತಾ ನಡೆದ್ದನ್ನು ಹೇಳಿದ್ದಾಳೆ. ದೇವರತ್ರ ನಿಂತು ಎಲ್ಲಾ ಹೇಳುತ್ತಿದ್ದಳು. ಕ್ಲೆವರ್ ಚಾಯ್ಸ್ ಬಗ್ಗೆ ಹೇಳುತ್ತಿದ್ದಳು. ಆ ಮಾತನ್ನು ನನಗೆ ಹೇಳಿದ್ದು. ಎಲ್ಲಾರು ನನ್ನ ಡಬ್ಬ ಅಂತ ಅಂದುಕೊಂಡಿದ್ದರು ಅಂತ ಬೇರೆ ಬೇರೆ ಮಾತು ಬಂತು. ಆಗ ನಾನು ಹೋಗಿ ಹೇಳಿದೆ. ಜಯಶ್ರೀ ಅದು ಹಂಗ್ ಇರಲಿಲ್ಲ. ನೀನು ಸೋನು ಇದ್ದರೂ ನಡೆಯುತ್ತೆ. ಇಲ್ಲದೆ ಇದ್ದರೂ ನಡೆಯುತ್ತೆ ಅಂತ ಬೆಳಗ್ಗೆ ಹೇಳಿದ್ದೆ. ಅದನ್ನು ಓಪನ್ ಮಾಡಿರಲಿಲ್ಲ ಈಗ ಓಪನ್ ಮಾಡಿದೆ ಎಂದಿದ್ದೆ ತಡ, ಅಕ್ಷತಾ ಮಾತಿಗೆ ಆ ಕಡೆ ಸೋನು ಕೆಂಡಾಮಂಡಲವಾಗಿದ್ದಾಳೆ. ಇತ್ತ ಜಯಶ್ರೀ, ಚೈತ್ರಾ, ನಂದಿನಿ ಮುಂದೆ ಎಲ್ಲಾ ಅಳುತ್ತಲೇ ಹೇಳಿದ್ದಾಳೆ. ನಾನು ಖುಷಿಯಲ್ಲಿದ್ದಾಗ ಬಂದಿದ್ದಾಳೆ. ನಂದೊಂದು ಎಲ್ಲಿ ಇಡಲಿ ಅಂತ ಬರುತ್ತಾಳೆ ಎಂದಾಗ ನಂದಿನಿ ಕೂಡ ಜಯಶ್ರೀಗೆ ಸಮಾಧಾನ ಮಾಡಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‍ಬಾಸ್ ಮನೆಯಲ್ಲಿ ನೆಗೆಟಿವ್ ಎಂದರೆ ಅದು ಜಯಶ್ರೀ ಮಾತ್ರನಾ?

    ಬಿಗ್‍ಬಾಸ್ ಮನೆಯಲ್ಲಿ ನೆಗೆಟಿವ್ ಎಂದರೆ ಅದು ಜಯಶ್ರೀ ಮಾತ್ರನಾ?

    ಬಿಗ್‍ಬಾಸ್ ಮನೆಯಲ್ಲಿ ಬದಲಾವಣೆ ತುಂಬಾ ಅನಿವಾರ್ಯತೆ. ಆದರೆ ಅದ್ಯಾಕೋ ಜಯಶ್ರೀ ಮತ್ತೆ ಬದಲಾದಂತೆ ಕಾಣುತ್ತಲೇ ಇಲ್ಲ. ಯಾಕೆಂದರೆ ಇಂದು ಮನೆಯವರೆಲ್ಲಾ ಸೇರಿ ಕಷ್ಟದ ಗಿಫ್ಟ್ ನೀಡಿದಾಗಲೇ ಜಯಶ್ರೀ ಮೇಲಿರುವ ಒಪಿನಿಯನ್ ಇನ್ನು ಕೂಡ ಬದಲಾಗಿಲ್ಲ ಎಂಬುದು ತಿಳಿದುಬಂದಿದೆ. ಕಳೆದ ವಾರ ಸುದೀಪ್ ಕೂಡ ಜಯಶ್ರೀಗೆ ಕಿವಿ ಮಾತು ಹೇಳಿದ್ದರು. ರಿವೆಂಜ್ ತಪ್ಪು ಎಂಬುದನ್ನು ಮನವರಿಕೆ ಮಾಡಿದ್ದರು. ಹೌದು ಈ ಬಗ್ಗೆ ರಿಯಲೈಸ್ ಆಗಿದೆ. ಸರಿ ಮಾಡಿಕೊಳ್ಳುತ್ತೀನಿ ಎಂದಿದ್ದ ಜಯಶ್ರೀ ಇನ್ನು ಸರಿಯಾಗಿಲ್ಲ ಎಂಬ ಅನುಮಾನ ಕಾಡುವುದಕ್ಕೆ ಶುರುವಾಗಿದೆ.

    ಇಂದು ಇಷ್ಟ ಕಷ್ಟದ ಆಟ ಆಡುವುದಕ್ಕೆ ಬಿಗ್‍ಬಾಸ್ ಸ್ಪರ್ಧಿಗಳಿಗೆ ಹೇಳಿತ್ತು. ಅದಕ್ಕೆಂದೇ ಒಂದಷ್ಟು ಗಿಫ್ಟ್‌ಗಳಿರುವ ಬಾಕ್ಸ್ ಅನ್ನು ನೀಡಿತ್ತು. ಇಷ್ಟವಾದವರಿಗೆ ಇಷ್ಟದ ಗಿಫ್ಟ್, ಕಷ್ಟ ಎನಿಸಿದವರಿಗೆ ಕಷ್ಟದ ಗಿಫ್ಟ್ ನೀಡಬೇಕಾಗಿತ್ತು. ಹೆಚ್ಚಿನ ಸದಸ್ಯರು ಇಷ್ಟದ ಗಿಫ್ಟ್ ನೀಡಲು ಆರ್ಯವರ್ಧನ್ ಗುರೂಜಿಯವರನ್ನು ಆಯ್ದುಕೊಂಡರು. ಅದೇ ರೀತಿ ಹೆಚ್ಚು ಜನ ಕಷ್ಟದ ಗಿಫ್ಟ್ ನೀಡಲು ಜಯಶ್ರೀಯನ್ನು ಆಯ್ದುಕೊಂಡರು. ಬೇಡ ಎಂಬ ವಿಚಾರ ಬಂದಾಗೆಲ್ಲಾ ಹೆಚ್ಚಿನ ಬಾರಿ ಆಯ್ಕೆಯಾಗುತ್ತಿರುವುದು ಜಯಶ್ರೀಯವರಾಗಿದ್ದಾರೆ.

    ಮೊದಲಿಗೆ ನಂದಿನಿ ತಮ್ಮ ಗಿಫ್ಟ್ ನೀಡಲು ಬಂದರು. ಬೆಸ್ಟ್ ಗಿಫ್ಟ್ ತೆಗೆದುಕೊಂಡು ಸಾನ್ಯಾಗೆ ಪ್ರಿಫರೆನ್ಸ್ ನೀಡಿದರು. ಸಾನ್ಯಾ ಬಗ್ಗೆ ತಮಗಿರುವ ಒಪಿನಿಯನ್ ಕೂಡ ಹಂಚಿಕೊಂಡರು. ಆ ಗಿಫ್ಟ್ ಕೊಟ್ಟು ಲೈಫ್ ಲಾಂಗ್ ಫ್ರೆಂಡ್ ಅಂತ ತಬ್ಬಿದರು. ನಂತರ ಕಷ್ಟದ ಗಿಫ್ಟ್ ನೀಡಬೇಕಾಗಿತ್ತು. ಆ ವೇಳೆ ಜಯಶ್ರೀಯನ್ನು ಆಯ್ಕೆ ಮಾಡಿಕೊಂಡರು. ಬೇರೆ ಯಾವ ಕಾರಣವೂ ಇಲ್ಲ. ಆದರೆ ಮಾತು ಕಡಿಮೆ ಮಾಡಿದರೆ ಬೆಟರ್ ಎಂದುಕೊಂಡು ಈ ಗಿಫ್ಟ್ ಅನ್ನು ಜಯಶ್ರೀಗೆ ನೀಡುತ್ತಿದ್ದೇನೆ ಎಂದರು. ಗಿಫ್ಟ್ ತೆಗೆದುಕೊಂಡ ಜಯಶ್ರೀ ಮುಖದಲ್ಲಿ ನಂದಿನಿ ಕಂಡರೆ ಇಷ್ಟವಿಲ್ಲದ ರೀತಿಯ ಭಾವವೇ ಎದ್ದು ಕಾಣುತ್ತಿತ್ತು. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ನೆಕ್ಸ್ಟ್ ಸೋಮಣ್ಣ ಕೂಡ ಎರಡು ಗಿಫ್ಟ್ ಆಯ್ಕೆ ಮಾಡಿಕೊಂಡರು. ಮೊದಲು ಇಷ್ಟದ ಗಿಫ್ಟ್ ಅನ್ನು ಆರ್ಯವರ್ಧನ್ ಅವರಿಗೆ ನೀಡಲಾಯಿತು. ಅದಕ್ಕೆ ಕಾರಣವೆಂದರೆ ಆರ್ಯವರ್ಧನ್ ಮಾಡುತ್ತಿದ್ದ ಕೇರಿಂಗ್. ಸೋಮಣ್ಣ ಅವರು ಆ ಬಗ್ಗೆ ಹಂಚಿಕೊಂಡಿದ್ದು ಹೀಗೆ, ನನಗೆ ಸೋದರ ಭಾವ ಬರಿಸಿದರು. ಊಟದ ವಿಚಾರದಲ್ಲಿ ಅಣ್ಣನ ಸ್ಥಾನದಲ್ಲಿ ನಿಂತು ನನ್ನನ್ನು ಕೇರ್ ಮಾಡಿದ್ದಾರೆ. ಒಮ್ಮೊಮ್ಮೆ ಊಟ ಸಾಕಾಗಿಲ್ಲ ಎಂದಾಗ ಅವರ ಊಟದಲ್ಲಿ ಯಾರಿಗೂ ಕಾಣದ ಹಾಗೇ ತಂದು ನನಗೆ ಕೊಟ್ಟಿದ್ದಾರೆ. ಗಂಜಿಗೆ ತುಪ್ಪ ಬೆರೆಸಿಕೊಂಡು ಬಂದು ತಿನ್ನು ಎನ್ನುತ್ತಿದ್ದರು. ಹೀಗಾಗಿ ಈ ಗಿಫ್ಟ್ ಅವರಿಗೆ ಕೊಡಬೇಕು ಎಂದು ಕೊಟ್ಟಿದ್ದಾರೆ.

    ಕಷ್ಟದ ಗಿಫ್ಟ್ ಅನ್ನು ಜಯಶ್ರೀಗೆ ನೀಡಿದ್ದು, ಈ ಮನೆಯಲ್ಲಿ ಕೆಲವೊಂದು ಸಲ ಒಳ್ಳೆಯದ್ದನ್ನು ಹೇಳಿದರೂ ತಪ್ಪಾಗುತ್ತದೆ. ಆದರೆ ಈ ಮನೆಯಲ್ಲಿ ಸ್ವಲ್ಪ ಅವರು ಬದಲಾಗಬೇಕು ಎಂಬುದಷ್ಟೇ. ಬೇರೆ ಏನನ್ನು ಯೋಚಿಸಬೇಡ ಎಂದು ಜಯಶ್ರೀಗೆ ಹೇಳಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್‌ ಮನೆಯಲ್ಲಿ ನಿಜ ವಯಸ್ಸು ರಿವೀಲ್‌ ಮಾಡಿದ ಸೋನು ಗೌಡ..!

    ನಂತರ ಬಂದ ಸಾನ್ಯಾ ತಮ್ಮ ಬೆಸ್ಟ್ ಗಿಫ್ಟ್, ಪ್ಲಾಂಟ್ ಅನ್ನು ರೂಪೇಶ್‍ಗೆ ಕೊಟ್ಟಿದ್ದಾರೆ. ನೀನು ಮಂಗಳೂರಲ್ಲಿ ಇರುತ್ತೀಯಾ ಬೆಂಗಳೂರಲ್ಲಿ ಇರಲ್ಲ ಮಿಸ್ ಮಾಡಿಕೊಳ್ಳುತ್ತೇನೆ. ನಿನ್ನ ಆಫೀಸ್ ಅಥವಾ ಮನೆಯಲ್ಲಿ ಇಟ್ಟುಕೋ ನೋಡಿದಾಗೆಲ್ಲಾ ನಾನೇ ಕೊಟ್ಟಿದ್ದು ಎಂದು ನೆನಪಾಗಲಿ ಎಂದಿದ್ದಾರೆ. ಅಟ್ ದಿ ಸೇಮ್ ಟೈಮ್ ಕಷ್ಟದ ಉಡುಗೊರೆಯನ್ನು ಜಯಶ್ರೀಗೆ ನೀಡಿದ್ದಾರೆ. ಈ ಮನೆಯಲ್ಲಿ ಪ್ರತಿಯೊಂದನ್ನು ದುರ್ಬಿನ್ ಹಾಕಿ ಹುಡುಕುತ್ತಾರೆ. ಪ್ರತಿಯೊಂದು ಪಾಯಿಂಟ್ ಮಾಡಿ ಹೇಳುವುದನ್ನು ನಿಲ್ಲಿಸಬೇಕು. ನಾವೆಲ್ಲರೂ ಮನುಷ್ಯರೇ ತಪ್ಪು ಮಾಡುತ್ತೀವಿ. ಅದನ್ನು ತಿದ್ದಿಕೋ. ಇದನ್ನು ಬಿಸಿಲಿನಲ್ಲಿ ಹಿಡಿದು ನೋಡು ವಜ್ರದಂತೆ ಹೊಳೆಯುತ್ತೀಯಾ ಎಂದು ಕಾಮಿಡಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀ ಮೇಲೆ ಸುದೀಪ್ ದೂರುಗಳ ಸುರಿಮಳೆ – ಕಣ್ಣೀರಾಕುತ್ತಾ ನಟಿ ಕ್ಷಮೆ

    ಜಯಶ್ರೀ ಮೇಲೆ ಸುದೀಪ್ ದೂರುಗಳ ಸುರಿಮಳೆ – ಕಣ್ಣೀರಾಕುತ್ತಾ ನಟಿ ಕ್ಷಮೆ

    ಬಿಗ್ ಬಾಸ್ ಮನೆಯಲ್ಲಿ ಈ ವಾರ ಜಯಶ್ರೀ ನಡವಳಿಕೆ ಸ್ವಲ್ಪ ಕಿರಿಕಿರಿ ಉಂಟುಮಾಡಿದೆ. ಮನೆಯವರ ಜೊತೆ ತುಂಬಾನೇ ಒರಟಾಗಿ ನಡೆದುಕೊಳ್ಳುತ್ತಿದ್ದ ಅವರು ಏನಾದರೂ ಹೇಳಿದರೆ ಅದನ್ನು ಕೂಲಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಜಶ್ವಂತ್ ಕ್ಯಾಪ್ಟನ್ಸಿಯಲ್ಲಿಯೂ ಮನಸ್ತಾಪಗಳನ್ನು ಮಾಡಿಕೊಂಡಿದ್ದರು. ನನ್ನನ್ನು ಯಾಕೆ ಆಟಕ್ಕೆ ತೆಗೆದುಕೊಳ್ಳಲ್ಲ ಎಂದು ಗದರಿದ್ದು, ಕೆಲವೊಂದು ರಿವೇಂಜ್‌ಗಳನ್ನು ತೀರಿಸಿಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸಿದ್ದ ಸುದೀಪ್ ಇದೀಗ ಜಯಶ್ರೀಗೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಒಂದು ಆಟ ಅಂತ ಬಂದಾಗ ಯಾವ ಪ್ಯಾರಾ ಮೀಟರ್ಸ್ ಇಟ್ಟುಕೊಂಡು ಕಂಟೆಸ್ಟೆಂಟ್‌ನ ಆಯ್ಕೆ ಮಾಡಬೇಕು ಎಂದು ಜಯಶ್ರೀಯನ್ನೇ ಸುದೀಪ್ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಜಯಶ್ರೀ, ಆ ಟಾಸ್ಕ್ ಏನಿರುತ್ತೆ, ಅದಕ್ಕೆ ಸೂಕ್ತವಾದ ವ್ಯಕ್ತಿಯನ್ನು ನೋಡಿ ಸೆಲೆಕ್ಟ್ ಮಾಡುತ್ತಾರೆ ಎದು ಜಯಶ್ರೀಯೇ ಉತ್ತರ ನೀಡಿದ್ದಾರೆ. ಜೊತೆಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಇದ್ದ ಆಟದಲ್ಲಿ ನಾನು ಆಡಬಲ್ಲೆ ಎಂದು ಹೇಳಿದರೂ ತೆಗೆದುಕೊಳ್ಳಲಿಲ್ಲ. ಹೊರಗಡೆ ಬಂದಾಗ ನಾನು ಕೇಳಿದಾಗಲೂ ಸರಿಯಾದ ಕಾರಣ ಕೊಡಲೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ತಕ್ಷಣ ಸುದೀಪ್ ಅವರು ಜಶ್ವಂತ್ ಬಳಿ ಕ್ಲಾರಿಟಿ ತೆಗೆದುಕೊಂಡಿದ್ದಾರೆ.

    ಕ್ಯಾಪ್ಟನ್ ಅಂತ ಬಂದಾಗ ಅವರವರ ಅಭಿಪ್ರಾಯವನ್ನಿಟ್ಟುಕೊಂಡು ಹೋಗುತ್ತಾರೆ. ಮುಂದೆ ನೀವೂ ಕ್ಯಾಪ್ಟನ್ ಆದಾಗ ಇದೇ ರೀತಿ ನಡೆದುಕೊಳ್ಳಬಹುದು. ಸಾಕಷ್ಟು ಜನ ಇದ್ದಾಗ ಕ್ಯಾಪ್ಟನ್ ಒಂದೆರಡು ಜನರನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವೂ ಏನೇನೋ ತಲೆಯಲ್ಲಿ ಇಟ್ಟುಕೊಂಡು ಯೋಚನೆ ಮಾಡುತ್ತೀರಾ. ಮಾತಾಡುವಾಗ ಸೆಲೆಕ್ಟ್ ಆಗಿಲ್ಲ ಎಂಬ ಕಾರಣಕ್ಕೆ ನೀವಾಡುವ ಮಾತುಗಳಿಗೆ ಅವರು ರಿಯಾಕ್ಟ್ ಕೂಡ ಮಾಡುವುದಕ್ಕೆ ಆಗಲ್ಲ. ಏಕೆಂದರೆ ಅವರು ಕ್ಯಾಪ್ಟನ್. ಇಲ್ಲಿ ಬರೀ ನೀವು ಮಾತ್ರವಲ್ಲ. ಹೊರಗಡೆಯವರು ಕೂಡ ನಿಮ್ಮನ್ನು ನೋಡುತ್ತಿರುತ್ತಾರೆ ಎಂದು ಒಂದಷ್ಟು ಬುದ್ದಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಔಟ್

    ಬಳಿಕ ಒಂದಷ್ಟು ಮಾತು ಕತೆಗಳು ಮುಗಿದು, ಮತ್ತೆ ಜಯಶ್ರೀ ವಿಚಾರಕ್ಕೆ ಬಂದಿರುವ ಸುದೀಪ್, ಮನೆ ಮಂದಿ ಕ್ಷಮೆ ಕೇಳುವುದರಲ್ಲಿ ಪ್ರಾಮಾಣಿಕತೆ ಇತ್ತಾ ಎಂದು ಪ್ರಶ್ನೆ ಮಾಡಿದರು. ಸಾನ್ಯಾ ಹಾಗೂ ನಂದಿನಿ ಇಬ್ಬರು ಕೂಡ ಜಯಶ್ರೀ ವಿಚಾರವಾಗಿಯೇ ಮಾತನಾಡಿದರು. ಖಂಡಿತ ಇಲ್ಲ ಸರ್, ಕ್ಷಮೆ ಕೇಳಿದರೆ ಆ ಮೂಮೆಂಟ್‌ಗೆ ಜಗಳ ಎಂಡ್ ಆಗುತ್ತೆ ಎಂಬಂತೆ ಕ್ಷಮೆ ಕೇಳಿದ್ದುಂಟು. ಆ ಕ್ಷಣಕ್ಕೆ ಅದು ಮುಗಿದು ಹೋಗಲಿ. ಮೀನ್ ಮಾಡಿಲ್ಲ ಎಂದಿದ್ದಾರೆ. ಈ ಕ್ಷಮೆ ಬಗ್ಗೆ ಜಯಶ್ರೀ ಬಳಿಯೂ ಸುದೀಪ್ ಸ್ಪಷ್ಟನೆ ಕೇಳಿದ್ದಾರೆ. ಇದಕ್ಕೆ ಸುದೀಪ್ ಉದಾಹರಣೆ ಕೊಟ್ಟು ಬುದ್ದಿ ಮಾತು ಹೇಳಿದ್ದಾರೆ. ಯಾರಾದರೂ ಬುದ್ದಿ ಹೇಳಿದರೆ ಅದಕ್ಕೆ ತಿರುಗಿ ಉತ್ತರ ನೀಡುತ್ತೀರಿ. ಚೈತ್ರಾ ಅವರಿಗೆ ಕೇಳುತ್ತೀರಿ ನೀವೂ ಲಿಪ್ ಸ್ಟಿಕ್ ತಂದಿಲ್ವಾ ಅಂತ ಹೇಳಿ ಓಲೆ ತರುತ್ತೀರಿ. ನೀವೂ ನಿಮ್ಮ ತಪ್ಪನ್ನು ಹೇಳಿದಾಗ ಅವರು ಮಾಡಿದಾರೆ ನಾನು ಮಾಡಿದ್ದೀನಿ ಎಂದು ರಕ್ಷಣೆ ಮಾಡಿಕೊಳ್ಳುತ್ತೀರಿ ಎಂದಿದ್ದಾರೆ.

    ಅದಕ್ಕೆ ಉತ್ತರ ನೀಡಿದ ಜಯಶ್ರೀ, ನಾನು ಮಾಡಿದ ತಪ್ಪು ನನಗೆ ಅರಿವಾಗಿದೆ. ಬಿಗ್ ಬಾಸ್‌ನಿಂದ ಆದೇಶ ಬಂದ ಮೇಲೆ ರಿಗ್ರೇಟ್ ಮಾಡಿಕೊಂಡಿದ್ದೀನಿ. ಆ ಒಂದು ನಡವಳಿಕೆಯನ್ನು ನಾನು ಬದಲಾಯಿಸಿಕೊಳ್ಳಬೇಕೆಂದುಕೊಂಡಿದ್ದೇನೆ ಎಂದಿದ್ದಾರೆ. ಮುಂದುವರೆದು ದೂರುಗಳ ಸುರಿಮಳೆಯನ್ನೇ ಸುರಿಸಿದ ಸುದೀಪ್, ಟಿಶ್ಯು ಪೇಪರ್ ಹೊರ ತರುವಾಗ ಉದಯ್ ಬೇಡ ಅಂತ ಹೇಳುತ್ತಾರೆ. ಕಂಟೆಸ್ಟೆಂಟ್ ಮೇಲೆ ನೀರು ಹಾಕುವಾಗ ಮೈಕ್ ಹಾಳಾಗುತ್ತೆ ಅಂತ ಕೆಲವರು ಹೇಳುತ್ತಾರೆ. ಆದರೂ ಗಮನಿಸಲಿಲ್ಲ. ಆ ಸಮಯದಲ್ಲಿ ನಿಮ್ಮ ಬಾಯಿಂದ ಬಂದ ಮಾತು ಏನಿತ್ತು ಗೊತ್ತಾ? ನನ್ನ ಮೈಕ್ ಚೇಂಜ್ ಮಾಡಿದ್ದಾರೆ ನಿಮ್ಮ ಮೈಕ್ ಚೇಂಜ್ ಮಾಡುತ್ತಾರೆ ಬಿಡಿ. ಬೇರೆ ಏನು ಕೆಲಸ ಇರುತ್ತೆ ಬಿಗ್ ಬಾಸ್‌ಗೆ ಎಂಬ ಅರ್ಥದಲ್ಲಿ ಹೇಳಿದ್ದೀರಿ ಎಂದಾಗ ಜಯಶ್ರೀ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಕಣ್ಣಿಗೆ ಸ್ಪ್ರೇ ಮಾಡುವಾಗ ಅದು ಡೇಂಜರ್ ಎಂದು ರಾಕೇಶ್ ಹೇಳಿದಾಗಲೂ ನಂದಿನಿ ಕಣ್ಣಿಗೆ ಸ್ಪ್ರೇ ಮಾಡಿದ್ದಾರೆ. ಈ ನಡವಳಿಕೆ ಬಗ್ಗೆಯೂ ಸುದೀಪ್ ಮನವರಿಕೆ ಮಾಡಿದ್ದು, ಜಯಶ್ರೀ ಕಣ್ಣೀರು ಹಾಕುತ್ತಾ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

    Live Tv
    [brid partner=56869869 player=32851 video=960834 autoplay=true]