ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಮಾರಿಮುತ್ತು (Marimuttu) ಮೊಮ್ಮಗಳು ಜಯಶ್ರೀ ಆರಾಧ್ಯ ಕೂಡ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಶೋ (Bigg Boss Kannada) ಮುಗಿದ ಮೇಲೆ ತಮ್ಮ ಬ್ಯುಸಿನೆಸ್ ಕಡೆ ಗಮನ ಕೊಡುತ್ತಿದ್ದ ನಟಿ ಈಗ ಥೈಲ್ಯಾಂಡ್‌ಗೆ ಹಾರಿದ್ದಾರೆ. ಬಿಕಿನಿ ಧರಿಸಿ ಕಡಲ ಕಿನಾರೆಯಲ್ಲಿ ಮಿಂಚಿದ್ದಾರೆ.
‘ಪುಟ್ಟರಾಜು’ (Puttaraju) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಜಯಶ್ರೀ ಆರಾಧ್ಯ ಅವರು ಒಟಿಟಿ ಬಿಗ್ ಬಾಸ್‌ಗೆ ಕಾಲಿಟ್ಟಿದ್ದರು. ನಂದು ಜೊತೆಗಿನ ಗುದ್ದಾಟದ ಮೂಲಕ ಜಯಶ್ರೀ ಹೈಲೆಟ್ ಆಗಿದ್ದರು. ಸದಾ ಒಂದಲ್ಲಾ ಒಂದು ಕಿರಿಕ್ ಮಾಡಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ರು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಹೇಳಿಕೊಳ್ಳುವಂತಹ ಅವಕಾಶ ಚಿತ್ರರಂಗದಲ್ಲಿ ಜಯಶ್ರೀ ಆರಾಧ್ಯಗೆ(Jayashree Aradhya) ಸಿಗಲಿಲ್ಲ.
ಈ ವರ್ಷದ ಆರಂಭದಲ್ಲಿ ಜಯಶ್ರೀ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಬಾಯ್‌ಫ್ರೆಂಡ್ ಸ್ಟಿವನ್ ಜೊತೆ ಬ್ಯುಸಿನೆಸ್ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ಈಗ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ ದೂರದ ಥೈಲ್ಯಾಂಡ್‌ಗೆ ಹಾರಿದ್ದಾರೆ. ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಇದನ್ನೂ ಓದಿ:ವಿಶೇಷ ಆಮ್ಲಜನಕ ಚಿಕಿತ್ಸೆಯ ಮೊರೆ ಹೋದ ಸಮಂತಾ
ಥೈಲ್ಯಾಂಡ್‌ನ ಸುಂದರ ತಾಣಗಳಿಗೆ ನಟಿ ಭೇಟಿ ನೀಡ್ತಿದ್ದಾರೆ. ಜಯಶ್ರೀ ಆರಾಧ್ಯ ಟ್ರಿಪ್‌ಗೆ ವೈನಿಧಿ ಕೂಡ ಸಾಥ್ ನೀಡಿದ್ದಾರೆ. ಜೈಜಗದೀಶ್ ಪುತ್ರಿ ಕೂಡ ಇದ್ದಾರೆ. ಇಬ್ಬರ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.
ಇನ್ನೂ ಸಾಕಷ್ಟು ವರ್ಷದಿಂದ ಸ್ಟೀವನ್ ಎಂಬುವವರ ಜೊತೆ ಜಯಶ್ರೀ ಡೇಟ್ ಮಾಡ್ತಿದ್ದಾರೆ. ಇಬ್ಬರ ಪ್ರೀತಿಗೆ ಗುರುಹಿರಿಯರ ಸಮ್ಮತಿಯುಯಿದೆ. ಸದ್ಯದಲ್ಲೇ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಕಾದುನೋಡಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

























ಇನ್ನು ಜಯಶ್ರೀ ಮತ್ತು ನಂದಿನಿ ಮಾತನಾಡುವಾಗ ಸೋನು ಮೂಗು ತೂರಿಸಿದ್ದಾರೆ. ಬಳಿಕ ಇಬ್ಬರು ಮಾತನಾಡಬೇಕಾದರೆ ಮಧ್ಯೆ ಮಾತನಾಡಬೇಡ ಎಂದು ಜಯಶ್ರೀ, ಸೋನುಗೆ ವಾರ್ನಿಂಗ್ ಕೊಟ್ಟಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆಯೂ ಕೂಡ ಜಟಾಪಟಿ ಜೋರಾಗಿದೆ.



