Tag: ಜಯಪ್ರದಾ

  • 40 ಸಾವಿರ ನೀಡಿದ್ರೂ ಶೋ ಸಿಕ್ಕಿಲ್ಲ – ಡ್ಯಾನ್ಸ್‌ ಆಯೋಜಕಿಗೆ ಪೋಷಕರ ತರಾಟೆ

    40 ಸಾವಿರ ನೀಡಿದ್ರೂ ಶೋ ಸಿಕ್ಕಿಲ್ಲ – ಡ್ಯಾನ್ಸ್‌ ಆಯೋಜಕಿಗೆ ಪೋಷಕರ ತರಾಟೆ

    ಬೆಂಗಳೂರು: ಮಕ್ಕಳ ನೃತ್ಯ ಪ್ರದರ್ಶನಕ್ಕೆ (Dace Show) 40 ರಿಂದ 60 ಸಾವಿರ ರೂ. ಪಡೆದು ಕೊನೆಗೆ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡದ್ದಕ್ಕೆ ಪೋಷಕರು ಆಯೋಜಕಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಟೌನ್‌ಹಾಲ್‌ನಲ್ಲಿ (Town Hall) ನಡೆದಿದೆ.

    ನಗರದ ಟೌನ್‌ಹಾಲ್‌ನಲ್ಲಿ ನೃತ್ಯಾಂಗನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಹೀನಾ ಜೈನ್ ಎಂಬವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟಿ ಜಯಪ್ರದಾ (Jaya Prada) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

    ಸಮಯದ ಅಭಾವ ಹಾಗೂ ಬಿಸಿನೆಸ್ ಅವಾರ್ಡ್ ನೆಪದಲ್ಲಿ ಡ್ಯಾನ್ಸ್ ಗ್ರೂಪ್‌ಗಳಿಗೆ ಆಯೋಜಕರು ಅವಕಾಶ ನೀಡಿರಲಿಲ್ಲ. ಮಕ್ಕಳ ನೃತ್ಯ ಪ್ರದರ್ಶನಕ್ಕೆ ಸಿಟ್ಟಾದ ಪೋಷಕರು ಆಯೋಜಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಹೃದಯಾಘಾತಕ್ಕೆ 13 ಬಲಿ – ಕೋವಿಡ್ ಲಸಿಕೆ ಕಾರಣವಲ್ಲ ತನಿಖೆಯಲ್ಲಿ ಬಯಲು

     

    ಸುಮಾರು 100ಕ್ಕೂ ಹೆಚ್ಚು ನೃತ್ಯ ತಂಡಗಳು ಆಗಮಿಸಿವೆ. 3-4 ನಿಮಿಷದ ನೃತ್ಯಕ್ಕೆ ಒಬ್ಬ ವಿದ್ಯಾರ್ಥಿಯಿಂದ 2-3 ಸಾವಿರ ರೂ. ಪಡೆಯಲಾಗಿದೆ.  ಒಂದೊಂದು ತಂಡದಿಂದ 40 ರಿಂದ 60 ಸಾವಿರ ರೂ. ಹಣವನ್ನು ಪಡೆದಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಕಾದಿದ್ದೆವು. ಆದರೆ ನಮ್ಮ ಮಕ್ಕಳ ನೃತ್ಯಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ನಾವು ಪಾವತಿಸಿದ್ದ ಹಣವನ್ನು ವಾಪಸ್‌ ನೀಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

    ಪೋಷಕರ ಆರೋಪಕ್ಕೆ ಅಯೋಜಕಿ ಹೀನಾ ಜೈನ್ ಪ್ರತಿಕ್ರಿಯಿಸಿ, ನಾವು ಯಾರಿಗೂ ಮೋಸ ಮಾಡಿಲ್ಲ, ಸಮಯದ ಅಭಾವವಿತ್ತು. ಜಯಪ್ರದಾ ಅವರು ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಬಂದಿದ್ದರಿಂದ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗಿಲ್ಲ. ಸುಮಾರು 110 ಡ್ಯಾನ್ಸ್ ತಂಡಗಳು ಹೆಸರು ಕೊಟ್ಟಿದ್ದರಿಂದ ಎಲ್ಲರಿಗೂ ಅವಕಾಶ ಸಿಗಲಿಲ್ಲ. ಕಾರ್ಯಕ್ರಮದಲ್ಲಿ ಸ್ವಲ್ಪ ವ್ಯತ್ಯಾಸಗಳು ಆಗಿವೆ. ಪೂರ್ತಿ ಹಣವನ್ನು ವಾಪಸ್ ನೀಡಲು ಸಾಧ್ಯವಿಲ್ಲ. 1 ತಿಂಗಳ ಸಮಯಾವಕಾಶ ನೀಡಿದರೆ ಸ್ವಲ್ಪ ಹಣ ಹಣ ವಾಪಸ್ ಮಾಡಲಾಗುವುದು ಎಂದು ತಿಳಿಸಿದರು.

  • ನಟಿ ಜಯಪ್ರದಾ ಸಹೋದರ ನಿಧನ

    ನಟಿ ಜಯಪ್ರದಾ ಸಹೋದರ ನಿಧನ

    ನ್ನಡದ ಶಬ್ದವೇಧಿ, ಈ ಬಂಧನ ಖ್ಯಾತಿಯ ನಟಿ ಜಯಪ್ರದಾ (Jaya Prada) ಅವರ ಹಿರಿಯ ಸಹೋದರ ರಾಜಾ ಬಾಬು (Raja Babu) ವಿಧಿವಶರಾಗಿದ್ದಾರೆ. ಸಹೋದರನ ನಿಧನದ ಕುರಿತು ನಟಿ ಭಾವನ್ಮಾತಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ

    ನನ್ನ ಹಿರಿಯ ಸಹೋದರ ರಾಜಾ ಬಾಬು ಅವರ ನಿಧನದ ಬಗ್ಗೆ ನಾನು ತುಂಬಾ ದುಃಖದಿಂದ ತಿಳಿಸುತ್ತಿದ್ದೇನೆ. ಅವರು ಇಂದು ಮಧ್ಯಾಹ್ನ 3:26ಕ್ಕೆ ಹೈದರಾಬಾದ್‌ನಲ್ಲಿ ನಿಧನರಾದರು. ದಯವಿಟ್ಟು ಅವರ ಮೇಲೆ ನಿಮ್ಮ ಪ್ರಾರ್ಥನೆ ಇರಲಿ. ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ನಟಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Jaya Prada (@jayapradaofficial)

    ಇನ್ನೂ ಜಯಪ್ರದಾ ಅವರು ವರನಟ ರಾಜ್‌ಕುಮಾರ್, ವಿಷ್ಣುವರ್ಧನ್ ಅವರೊಂದಿಗೆ ಕನ್ನಡದ ಅನೇಕರ ಸಿನಿಮಾಗಳಲ್ಲಿ ನಟಿಸಿದ್ದಾರೆ. 70-80ರ ದಶಕದ ಟಾಪ್ ನಟಿಯಾಗಿ ಜಯಪ್ರದಾ ಸದ್ದು ಮಾಡಿದ್ದರು. ಬಾಲಿವುಡ್‌ನಲ್ಲೂ ಮಿಂಚಿದ್ದರು.

  • ನಟಿ ಜಯಪ್ರದಾರನ್ನು ಕೂಡಲೇ ಬಂಧಿಸಿ: ಆಘಾತದಲ್ಲಿ ನಟಿ

    ನಟಿ ಜಯಪ್ರದಾರನ್ನು ಕೂಡಲೇ ಬಂಧಿಸಿ: ಆಘಾತದಲ್ಲಿ ನಟಿ

    ಅಂದುಕೊಂಡಂತೆ ಆಗಿದ್ದರೆ, ಕೋರ್ಟ್ ಆದೇಶದಂತೆ ನಟಿ ಜಯಪ್ರದಾ ಅವರನ್ನು ಜನವರಿ 10ರೊಳಗೆ ಬಂಧಿಸಿ ಕೋರ್ಟಿಗೆ ಹಾಜರು ಪಡಿಸಬೇಕಿತ್ತು. ಆದರೆ, ಪೊಲೀಸರ ಕೈಗೆ ಸಿಗದಂತೆ ಜಯಪ್ರದಾ ತಪ್ಪಿಸಿಕೊಳ್ಳುತ್ತಿದ್ದಾರಂತೆ. ಹಾಗಾಗಿ ಮಧ್ಯ ಪ್ರದೇಶದ ಹೈಕೋರ್ಟ್ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಫೆಬ್ರವರಿ 27ರಂದು ಬಂಧಿಸಿ ಕೋರ್ಟಿಗೆ ಹಾಜರು ಪಡಿಸುವಂತೆ ಸೂಚಿಸಿದೆ.

    ಏನಿದು ಪ್ರಕರಣ?

    ಥಿಯೇಟರ್ ಕಾಂಪ್ಲೆಕ್ಸ್ ನ ನೌಕರರ ರಾಜ್ಯ ವಿಮೆ (ಇಎಸ್.ಐ) ನಿಧಿಯ ಪಾಲನ್ನು ಪಾವತಿಸದೇ ಇರುವುದಕ್ಕಾಗಿ  ನ್ಯಾಯಾಲಯವು ನಟಿ ಜಯಪ್ರಯಾ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ  (Punishment)ವಿಧಿಸಿತ್ತು. ಈ ಶಿಕ್ಷೆಯನ್ನು ರದ್ದುಗೊಳಿಸುವಂತೆ ನಟಿ ಜಯಪ್ರದಾ ಅವರು ಹೈಕೋರ್ಟ್ (High Court) ಗೆ ಮೊರೆ ಹೋಗಿದ್ದರು. ಮಾನ್ಯ ನ್ಯಾಯಾಲಯವು ಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದೆ. ಸಹಜವಾಗಿಯೇ ನಟಿಗೆ ಶಾಕ್ ಆಗಿದೆ.

    ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಜಯಪ್ರದಾ (Jayaprada) ಅವರಿಗೆ ಚೆನ್ನೈನ (Chennai) ಎಗ್ಮೋರ್ ನ್ಯಾಯಾಲಯವು ಆರು ತಿಂಗಳ ಕಾಲ ಜೈಲು ಶಿಕ್ಷೆ  ಪ್ರಕಟಿಸಿತ್ತು. ನಟಿಯ ವಿರುದ್ಧ ಸರಕಾರದ ಲೇಬರ್ ಇನ್ಶುರೆನ್ಸ್ ಕಾರ್ಪೋರೇಷನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿ ಜಯಪ್ರದಾಗೆ ಸೋಲಾಗಿತ್ತು.

    ಭಾರತೀಯ ಸಿನಿಮಾ ರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಜಯಪ್ರದಾ, ಸಿನಿಮಾ ಪ್ರದರ್ಶಕಿಯೂ ಹೌದು. ಚೆನ್ನೈನಲ್ಲೇ ಇವರ ಹೆಸರಿನಲ್ಲಿ ಎರಡು ಚಿತ್ರಮಂದಿರಗಳಿವೆ. ಈ ಎರಡು ಚಿತ್ರ ಮಂದಿರಗಳಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಇ.ಎಸ್.ಐ ಹಣವನ್ನು ಕಡಿತ ಮಾಡಿಕೊಂಡು ಕಾರ್ಮಿಕ ಇಲಾಖೆಗೆ ಅದನ್ನು ಪಾವತಿಸಿಲ್ಲ ಎನ್ನುವ ಕಾರಣಕ್ಕಾಗಿ ದೂರು ನೀಡಲಾಗಿತ್ತು.

     

    ಈಗಾಗಲೇ ಅವರು ಮಾಲೀಕರಾಗಿರುವ ಆ ಎರಡೂ ಚಿತ್ರಮಂದಿರಗಳ ಮೇಲೆ ಕೇಸ್ ದಾಖಲಾಗಿದೆ. ಆಸ್ತಿ ತೆರಿಗೆಯನ್ನು ಕಟ್ಟದೇ ಇರುವ ಕಾರಣಕ್ಕಾಗಿ ಜಪ್ತಿ ಕೂಡ ಮಾಡಲಾಗಿದೆ. ಆದರೂ ಇ.ಎಸ್.ಐ ಕಟ್ ಮಾಡಿಯೂ ಕಾರ್ಮಿಕ ಇಲಾಖೆಗೆ ಅವರು ಪಾವತಿ ಮಾಡಿರಲಿಲ್ಲ ಎನ್ನುವುದು ಅಧಿಕಾರಿಗಳ ಆರೋಪವಾಗಿತ್ತು. ಹಾಗಾಗಿ ಶಿಕ್ಷೆ ನೀಡಲಾಗಿತ್ತು. ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

  • ನಟಿ ಜಯಪ್ರದಾ ಶಿಕ್ಷೆ ರದ್ದು ಮಾಡಲು ಹೈಕೋರ್ಟ್ ನಕಾರ

    ನಟಿ ಜಯಪ್ರದಾ ಶಿಕ್ಷೆ ರದ್ದು ಮಾಡಲು ಹೈಕೋರ್ಟ್ ನಕಾರ

    ಥಿಯೇಟರ್ ಕಾಂಪ್ಲೆಕ್ಸ್ ನ ನೌಕರರ ರಾಜ್ಯ ವಿಮೆ (ಇಎಸ್.ಐ) ನಿಧಿಯ ಪಾಲನ್ನು ಪಾವತಿಸದೇ ಇರುವುದಕ್ಕಾಗಿ  ನ್ಯಾಯಾಲಯವು ನಟಿ ಜಯಪ್ರಯಾ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ  (Punishment)ವಿಧಿಸಿತ್ತು. ಈ ಶಿಕ್ಷೆಯನ್ನು ರದ್ದುಗೊಳಿಸುವಂತೆ ನಟಿ ಜಯಪ್ರದಾ ಅವರು ಮದ್ರಾದ್ ಹೈಕೋರ್ಟ್ (High Court) ಗೆ ಮೊರೆ ಹೋಗಿದ್ದರು. ಮಾನ್ಯ ನ್ಯಾಯಾಲಯವು ಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದೆ. ಸಹಜವಾಗಿಯೇ ನಟಿಗೆ ಶಾಕ್ ಆಗಿದೆ.

    ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಜಯಪ್ರದಾ (Jayaprada) ಅವರಿಗೆ ಚೆನ್ನೈನ (Chennai) ಎಗ್ಮೋರ್ ನ್ಯಾಯಾಲಯವು ಆರು ತಿಂಗಳ ಕಾಲ ಜೈಲು ಶಿಕ್ಷೆ  ಪ್ರಕಟಿಸಿತ್ತು. ನಟಿಯ ವಿರುದ್ಧ ಸರಕಾರದ ಲೇಬರ್ ಇನ್ಶುರೆನ್ಸ್ ಕಾರ್ಪೋರೇಷನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿ ಜಯಪ್ರದಾಗೆ ಸೋಲಾಗಿತ್ತು.

     

    ಭಾರತೀಯ ಸಿನಿಮಾ ರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಜಯಪ್ರದಾ, ಸಿನಿಮಾ ಪ್ರದರ್ಶಕಿಯೂ ಹೌದು. ಚೆನ್ನೈನಲ್ಲೇ ಇವರ ಹೆಸರಿನಲ್ಲಿ ಎರಡು ಚಿತ್ರಮಂದಿರಗಳಿವೆ. ಈ ಎರಡು ಚಿತ್ರ ಮಂದಿರಗಳಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಇ.ಎಸ್.ಐ ಹಣವನ್ನು ಕಡಿತ ಮಾಡಿಕೊಂಡು ಕಾರ್ಮಿಕ ಇಲಾಖೆಗೆ ಅದನ್ನು ಪಾವತಿಸಿಲ್ಲ ಎನ್ನುವ ಕಾರಣಕ್ಕಾಗಿ ದೂರು ನೀಡಲಾಗಿತ್ತು.

     

    ಈಗಾಗಲೇ ಅವರು ಮಾಲೀಕರಾಗಿರುವ ಆ ಎರಡೂ ಚಿತ್ರಮಂದಿರಗಳ ಮೇಲೆ ಕೇಸ್ ದಾಖಲಾಗಿದೆ. ಆಸ್ತಿ ತೆರಿಗೆಯನ್ನು ಕಟ್ಟದೇ ಇರುವ ಕಾರಣಕ್ಕಾಗಿ ಜಪ್ತಿ ಕೂಡ ಮಾಡಲಾಗಿದೆ. ಆದರೂ ಇ.ಎಸ್.ಐ ಕಟ್ ಮಾಡಿಯೂ ಕಾರ್ಮಿಕ ಇಲಾಖೆಗೆ ಅವರು ಪಾವತಿ ಮಾಡಿರಲಿಲ್ಲ ಎನ್ನುವುದು ಅಧಿಕಾರಿಗಳ ಆರೋಪವಾಗಿತ್ತು. ಹಾಗಾಗಿ ಶಿಕ್ಷೆ ನೀಡಲಾಗಿತ್ತು. ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ ಪ್ರಕಟ

    ಖ್ಯಾತ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ ಪ್ರಕಟ

    ನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಜಯಪ್ರದಾ (Jayaprada) ಅವರಿಗೆ ಚೆನ್ನೈನ (Chennai) ಎಗ್ಮೋರ್ ನ್ಯಾಯಾಲಯವು ಆರು ತಿಂಗಳ ಕಾಲ ಜೈಲು ಶಿಕ್ಷೆ  ಪ್ರಕಟಿಸಿದೆ. ನಟಿಯ ವಿರುದ್ಧ ಸರಕಾರದ ಲೇಬರ್ ಇನ್ಶುರೆನ್ಸ್ ಕಾರ್ಪೋರೇಷನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿ ಜಯಪ್ರದಾಗೆ ಸೋಲಾಗಿದೆ.

    ಭಾರತೀಯ ಸಿನಿಮಾ ರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಜಯಪ್ರದಾ, ಸಿನಿಮಾ ಪ್ರದರ್ಶಕಿಯೂ ಹೌದು. ಚೆನ್ನೈನಲ್ಲೇ ಇವರ ಹೆಸರಿನಲ್ಲಿ ಎರಡು ಚಿತ್ರಮಂದಿರಗಳಿವೆ. ಈ ಎರಡು ಚಿತ್ರ ಮಂದಿರಗಳಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಇ.ಎಸ್.ಐ ಹಣವನ್ನು ಕಡಿತ ಮಾಡಿಕೊಂಡು ಕಾರ್ಮಿಕ ಇಲಾಖೆಗೆ ಅದನ್ನು ಪಾವತಿಸಿಲ್ಲ ಎನ್ನುವ ಕಾರಣಕ್ಕಾಗಿ ದೂರು ನೀಡಲಾಗಿತ್ತು.

    ಈಗಾಗಲೇ ಅವರು ಮಾಲೀಕರಾಗಿರುವ ಆ ಎರಡೂ ಚಿತ್ರಮಂದಿರಗಳ ಮೇಲೆ ಕೇಸ್ ದಾಖಲಾಗಿದೆ. ಆಸ್ತಿ ತೆರಿಗೆಯನ್ನು ಕಟ್ಟದೇ ಇರುವ ಕಾರಣಕ್ಕಾಗಿ ಜಪ್ತಿ ಕೂಡ ಮಾಡಲಾಗಿದೆ. ಆದರೂ ಇ.ಎಸ್.ಐ ಕಟ್ ಮಾಡಿಯೂ ಕಾರ್ಮಿಕ ಇಲಾಖೆಗೆ ಅವರು ಪಾವತಿ ಮಾಡಿರಲಿಲ್ಲ ಎನ್ನುವುದು ಅಧಿಕಾರಿಗಳ ಆರೋಪವಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫೋಟೋ ಆಲ್ಬಂ : ‘ಕ್ಲಬ್ ಅವಿವಾ-ಅಭಿ’ ಪಾರ್ಟಿಯಲ್ಲಿ ಪಾಲ್ಗೊಂಡ ತಾರೆಯರು

    ಫೋಟೋ ಆಲ್ಬಂ : ‘ಕ್ಲಬ್ ಅವಿವಾ-ಅಭಿ’ ಪಾರ್ಟಿಯಲ್ಲಿ ಪಾಲ್ಗೊಂಡ ತಾರೆಯರು

    ಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ್ಪ ಮದುವೆ ನಂತರ ಅವರ ಆಪ್ತರಿಗಾಗಿ ಪಾರ್ಟಿಯೊಂದನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಹಲವು ತಾರೆಯರು ಆಗಮಿಸಿದ್ದರು. ಅಂಬರೀಶ್ ಅವರ ಜನಪ್ರಿಯ ಹಾಡಿಗೆ ನೃತ್ಯ ಕೂಡ ಮಾಡಿದರು.

    ಅದರಲ್ಲೂ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಫೇಮಸ್ ಸಾಂಗ್ ‘ಹೇ ಜಲೀಲಾ..’ ಹಾಡಿಗೆ ಸುಮಲತಾ (Sumalatha) ಅಂಬರೀಶ್ ಜೊತೆ ಯಶ್ (Yash) ಡಾನ್ಸ್ ಮಾಡಿದರು. ನಂತರ ಇವರಿಗೆ ಅಭಿಷೇಕ್ ಮತ್ತು ಅವಿವಾ ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು.

    ಕಬ್ಲ್ ಅವಿವಾ (Club Aviva) ಹೆಸರಿನಲ್ಲಿ ಆಯೋಜನೆಯಾಗಿದ್ದ ಪಾರ್ಟಿಯಲ್ಲಿ (Aviva, Party) ಜಯಪ್ರದಾ, ಮಾಲಾಶ್ರೀ, ರಮ್ಯಕೃಷ್ಣ, ಯಶ್, ರಾಕ್ ಲೈನ್ ವೆಂಕಟೇಶ್, ಸೇರಿದಂತೆ ಹಲವು ನಾಯಕಿಯರು ಕೂಡ ಹಾಜರಿದ್ದರು. ಇದನ್ನೂ ಓದಿ:ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್‌ ಎಂಗೇಜ್‌ಮೆಂಟ್

    ಅಭಿಷೇಕ್ ಅಂಬರೀಶ್ (Abhishek Ambarish) ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವಿವಾ ಬಿಡಪ್ಪ (Aviva Bidappa) ಮೊನ್ನೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೌಡರ ಸಂಪ್ರದಾಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದ್ದಾರೆ.

    ಈ ಮದುವೆಗೆ (Marriage) ಅನೇಕ ಗಣ್ಯರು ಸಾಕ್ಷಿಯಾಗಿದ್ದರು ನಟ ರಜನಿಕಾಂತ್, ತೆಲುಗು ನಟ ಚಿರಂಜೀವಿ,  ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು.

     

    ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವಾರಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿತ್ತು. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿತ್ತು. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿತ್ತು.

  • ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಜಯಪ್ರದಾ

    ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಜಯಪ್ರದಾ

    ಡುಪಿ (Udupi) ಜಿಲ್ಲೆಯ  ಕಾಪು (Kapu) ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಾಜಿ ಲೋಕಸಭೆ ಹಾಗೂ ಹಾಲಿ ರಾಜ್ಯಸಭೆ ಸದಸ್ಯೆ, ಚಿತ್ರನಟಿ  ಜಯಪ್ರದಾ (Jayaprada) ಭೇಟಿ ನೀಡಿದ್ದಾರೆ. ಮಾರಿಯಮ್ಮ ಉಚ್ಚಂಗಿ ದೇವಿಯ ದರ್ಶನ ಪಡೆದು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಾರಿಯಮ್ಮನ ದೇವಸ್ಥಾನವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ ರವರು ದೇವರಲ್ಲಿ ಪ್ರಾರ್ಥಿಸಿ ಜಯಪ್ರಧಾ ಅವರಿಗೆ ಪ್ರಸಾದ ನೀಡಿದರು.

    ಕಾಪು ಹೊಸ ಮಾರಿಗುಡಿ (Marigudi Temple) ದೇವರಲ್ಲಿ ಜಯಪ್ರದಾ ಹರಕೆ ಹೊತ್ತಿದ್ದರು ಎಂದು ಹೇಳಲಾಗುತ್ತಿದೆ. ಆ ಹರಕೆಯನ್ನು ತೀರಿಸುವುದಕ್ಕಾಗಿಯೇ ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಸ್ವಲ್ಪ ಹೊತ್ತು ದೇವಸ್ಥಾನದಲ್ಲಿ ಇದ್ದು, ಪೂಜೆ ಸಲ್ಲಿಸಿ ನಂತರ ಅಲ್ಲಿಂದ ತೆರಳಿದ್ದಾರೆ. ಅವರೊಂದಿಗೆ ಅವರ ಆಪ್ತರು ಕೂಡ ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಗುಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ:ಕಾಂತಾರ 1 ಕೋಟಿ ಟಿಕೆಟ್ಸ್ ಮಾರಾಟ: ದಾಖಲೆಗಳು ಪುಡಿಪುಡಿ

    ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಣಧಿಕಾರಿ ಪ್ರಶಾಂತ್ ಶೆಟ್ಟಿ , ಆಡಳಿತ ಮುಖ್ಯಸ್ಥರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಉಪಾಧ್ಯಕ್ಷರಾದ ಮಾಧವ ಪಾಲನ್ ,ಗಂಗಾಧರ ಸುವರ್ಣ,ದೇವಿಪ್ರಸಾದ್ ಶೆಟ್ಟಿ,ಕಾಪು ದಿವಾಕರ ಶೆಟ್ಟಿ,ಅನಿಲ್ ಬಳ್ಳಾಲ್, ಮೊದಲಾದವರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ

    ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ

    ಬೆಂಗಳೂರು: ನಟಿ ಜಯಪ್ರದಾ ಅವರು ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಹಿನ್ನಲೆ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪ್ಪು ನಮ್ಮ ಜೊತೆಯಲ್ಲಿ ಇಲ್ಲ ಎನ್ನುವುದು ತುಂಬಾ ಕಷ್ಟವಾಗಿದೆ. ಈ ಕುಟುಂಬ ಎಂದರೆ ನನಗೆ ತುಂಬಾ ಇಷ್ಟವಾಗಿದೆ. ರಾಜ್‍ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್ ಅವರ ಈ ಕುಟುಂಬದಲ್ಲಿ ನಾನು ಒಬ್ಬಳಾಗಿದ್ದೇನು. ಅಪ್ಪ ಇಂದು ಇಲ್ಲ ಎನ್ನುವುದು ತುಂಬಾ ಕಷ್ಟವಾಗಿದೆ ಎಂದು ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

    ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕುಟುಂಬದವರು ಕಷ್ಟದಲ್ಲಿ ಧರ್ಯ ತೆಗೆದುಕೊಳ್ಳಬೇಕು. ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಮನಸ್ಪೂರ್ತಿಯಾಗಿ ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾ ಅಪ್ಪು ನಿಧನದಕುರಿತಾಗಿ ಕಂಬನಿ ಮೀಡಿದಿದ್ದಾರೆ. ಇದನ್ನೂ ಓದಿ: ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು, ಆದ್ರೆ ಅಪ್ಪು ಬರಲ್ಲ: ರಮೇಶ್ ಅರವಿಂದ್

    ಪುನೀತ್ ರಾಜಕುಮಾರ್ ಸಮಾಧಿಯ ದರ್ಶನ ಪಡೆದು, ಚಿತ್ರರಂಗದ ಹಲವರು ನಮನ ಸಲ್ಲಿಸುತ್ತಿದ್ದಾರೆ. ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಬೇರೆ ಭಾಷಯೆ ನಟ, ನಟಿಯರು ಅಪ್ಪು ಮನೆಗೆ ಭೇಟಿಕೊಟ್ಟು ಕುಟುಂಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.

  • ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷೆಯಾದ ಕನ್ನಡತಿ

    ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷೆಯಾದ ಕನ್ನಡತಿ

    ಬೆಂಗಳೂರು: ಲಂಡನ್‍ನ ವರ್ಲ್ಡ್  ಬುಕ್ ಆಫ್ ರೆಕಾಡ್ರ್ಸ್‍ನ ಉಪಾಧ್ಯಕ್ಷರಾಗಿ ವಸಂತ ಕವಿತಾ ಆಯ್ಕೆಯಾಗಿದ್ದಾರೆ.

    ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ಫೇರ್ ಫೌಂಡೇಶನ್ ಸ್ಥಾಪಕಿ, ಕಾರ್ಯದರ್ಶಿ ಮತ್ತು ತಿರುಪತಿ ತಿರುಮಲ ದೇವಸ್ಥಾನ ಎಲ್.ಎ.ಸಿ ಬೆಂಗಳೂರು ಕರ್ನಾಟಕ ಹಾಗೂ ಲಾಯನ್ ಕ್ಯಾನ್ಬೆರಾ ಇಂಟರ್‍ನ್ಯಾಷನಲ್ ಕ್ಲಬ್‍ನಲ್ಲಿ ವಸಂತ ಕವಿತಾ ಅಧ್ಯಕ್ಷರಾದ್ದರು. ಇದನ್ನೂ ಓದಿ: ಒಳ್ಳೆಯ ಕೆಲಸ ಮಾಡಿದ್ದರೆ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸುತ್ತಿರಲಿಲ್ಲ: ಡಿಕೆಶಿ

    ಈಗ ವಸಂತ ಕವಿತಾ ಅವರನ್ನು ಕರ್ನಾಟಕ ರಾಜ್ಯಕ್ಕಾಗಿ ಲಂಡನ್‍ನ ವರ್ಲ್ಡ್ ಬುಕ್ ಆಫ್ ರೆಕಾಡ್ರ್ಸ್‍ನ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಕ್ಲಬ್ ಅಧ್ಯಕ್ಷರಾದ ಡಾ.ದಿವಾಕರ್ ಶುಕ್ಲಾ, ಸಂತೋಷ್ ಶುಕ್ಲಾ ಮತ್ತು ಶಿಖಾ ಶರ್ಮಾ ಪತ್ರ ನೀಡಿ ಗೌರವಿಸಿದರು. ಇದನ್ನೂ ಓದಿ: ಸಾಲದ ಕಂತನ್ನು ಪಾವತಿ ಮಾಡದ್ದಕ್ಕೆ ಅಣ್ಣನನ್ನೆ ಕೊಂದ ಪಾಪಿ ತಮ್ಮ

    ಸಚಿವ ರಾಮ್ ದಾಸ್ ಅಠವಾಲೆ, ಬಾಲಿವುಡ್ ಗೀತರಚನೆಕಾರ ಸಮೀರ್ ಅಂಜಾಮ್ ಮತ್ತು ಹಾಡುಗಾರರಾದ ಉದಿತ್ ನಾರಾಯಣ್ ಸೇರಿದಂತೆ ನಟಿ ಜಯಪ್ರದಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ನಟಿ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

    ನಟಿ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

    ಲಕ್ನೋ: ಖ್ಯಾತ ಹಿರಿಯ ನಟಿ ಮತ್ತು ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಉತ್ತರ ಪ್ರದೇಶದ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಹೀಗಾಗಿ ನಟಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.

    2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಯಪ್ರದಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲದೇ ಈ ಕುರಿತು ಕಳೆದ ವರ್ಷ ಪ್ರಕರಣ ಸಹ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈಗ ಉತ್ತರ ಪ್ರದೇಶದ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿದೆ.

    ಈ ಪ್ರಕರಣದ ವಿಚಾರಣೆಗೆ ಜಯಪ್ರದಾ ಪದೇ ಪದೇ ಗೈರಾಗುತ್ತಿದ್ದರು. ಇದೇ ಕಾರಣದಿಂದ ಇದೀಗ ಸ್ಥಳೀಯ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 20 ರಂದು ನಡೆಯಲಿದೆ.

    ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಮಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಸಮಾಜವಾದಿ ಪಕ್ಷದ ಆಜಮ್ ಖಾನ್ ಅವರ ವಿರುದ್ಧ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯಪ್ರದಾ ಅವರನ್ನು ಸೋಲಿಸಿದ್ದರು.

    ಪಂಚಭಾಷಾ ನಟಿಯಾಗಿರುವ ಜಯಪ್ರದಾ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ.