Tag: ಜಯದೇವ ಆಸ್ಪತ್ರೆ

  • ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಡಾ. ಬಿ.ದಿನೇಶ್‌ ಅಧಿಕಾರ ಸ್ವೀಕಾರ

    ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಡಾ. ಬಿ.ದಿನೇಶ್‌ ಅಧಿಕಾರ ಸ್ವೀಕಾರ

    ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (Jayadeva Hospital) ನೂತನ ನಿರ್ದೇಶಕರಾಗಿ ಡಾ. ಬಿ.ದಿನೇಶ್‌ ಅವರು ಅಧಿಕಾರ ಸ್ವೀಕಾರ ವಹಿಸಿಕೊಂಡರು.

    ಬುಧವಾರ ಸಂಜೆ ಡಾ. ಬಿ.ದಿನೇಶ್ ಅವರು ನಿರ್ದೇಶಕರಾಗಿ ಕರ್ತವ್ಯಕ್ಕೆ‌ ವರದಿ ಮಾಡಿಕೊಂಡರು. ನೂತನ ನಿರ್ದೇಶಕರನ್ನು ಜಯದೇವ ಆಸ್ಪತ್ರೆಯ ಹಿಂದಿನ ನಿರ್ದೇಶಕ ಡಾ. ಕೆ.ಎಸ್ ರವೀಂದ್ರನಾಥ್ ಹಾಗೂ ಸಿಬ್ಬಂದಿ ಸ್ವಾಗತಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಹುಡುಗಾಟಿಕೆ ಬಿಟ್ಟು ಕಲ್ಲು ತೂರಿದ ಅಯೋಗ್ಯರನ್ನು ಒದ್ದು ಒಳಗೆ ಹಾಕಲಿ: ವಿಜಯೇಂದ್ರ

    ಡಾ. ಬಿ.ದಿನೇಶ್ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  • ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆ ಇನ್ಮುಂದೆ 24 ಗಂಟೆ ಓಪನ್

    ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆ ಇನ್ಮುಂದೆ 24 ಗಂಟೆ ಓಪನ್

    – ಮಲ್ಲೇಶ್ವರಂನ ಜಯದೇವ ಆಸ್ಪತ್ರೆಯ ಉಪ ಕೇಂದ್ರ 24 ಗಂಟೆ ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ

    ಬೆಂಗಳೂರು: ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಗುಡ್‌ನ್ಯೂಸ್ ಕೊಟ್ಟಿದೆ. ಮಲ್ಲೇಶ್ವರಂನ (Malleshwaram) ಕೆಸಿ ಜನರಲ್ ಆಸ್ಪತ್ರೆ ಬಳಿ ಇರುವ ಜಯದೇವ ಆಸ್ಪತ್ರೆ 24 ಗಂಟೆಗಳ ಓಪನ್ ಇರಲಿದೆ. ಸಂಜೆ 4 ಗಂಟೆಗೆ ಕ್ಲೋಸ್ ಆಗುತ್ತಿತ್ತು. ಸಿಎಂ ಸೂಚನೆ ಮೇರೆಗೆ 24 ಗಂಟೆ ತೆರೆಯಲಿದೆ. ಅಂಜಿಯೋಗ್ರಾಂ, ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ 24 ಗಂಟೆ ಸಿಗಲಿದೆ.

    ಜಯದೇವ ಆಸ್ಪತ್ರೆ (Jayadeva Hospital) ಓಪನ್ ಆಗಿ ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗುತ್ತಿದೆ. ಆದರೆ ಸಂಜೆ ನಾಲ್ಕು ಗಂಟೆಗೆ ಕ್ಲೋಸ್ ಆಗಿ, ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತರಲಿಲ್ಲ. ಕಳೆದ ಮೂರು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು 24 ಗಂಟೆ ಓಪನ್‌ಗೆ ಸೂಚಿಸಿದ್ದರು. ಹೀಗಾಗಿ ಇಂದಿನಿಂದ 24 ಗಂಟೆ ಜಯದೇವ ಆಸ್ಪತ್ರೆ ಓಪನ್ ಇರಲಿದೆ. ಇದನ್ನೂ ಓದಿ: ಕಳಿಸಿದ ಲೊಕೇಷನ್‍ಗೆ ಬರಲಿಲ್ಲ ಎಂದು ಕೊರಿಯರ್ ಬಾಯ್‍ಗೆ ಚಾಕು ಇರಿದ ದುಷ್ಕರ್ಮಿ!

    ಅಂಜಿಯೋಗ್ರಾಮ್, ಅಂಜಿಯೋಪ್ಲಾಸ್ಟಿ ಸೇರಿದಂತೆ ಹಲವು ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ಸಿಗಲಿದೆ. ಈ ಹಿಂದೆ ಸಾರ್ವಜನಿಕರು ಸಂಜೆ ವೇಳೆಗೆ ಬಂದರೆ ಚಿಕಿತ್ಸೆ ಸಿಗುತ್ತಿರಲಿಲ್ಲ. ಈಗ ಸಂಜೆವರೆಗೂ ಓಪನ್ ಮಾಡೋದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಸೂಚಿಸಿದ್ದು, ಸಾರ್ವಜನಿಕರು 24 ಗಂಟೆಗಳ ಕಾಲ ಮಲ್ಲೇಶ್ವರಂ ಬಳಿ ಇರುವ ಜಯದೇವ ಆಸ್ಪತ್ರೆ ಓಪನ್ ಇರಲಿದೆ. ಎಮರ್ಜೆನ್ಸಿ ಕೇಸ್, ಓಪಿಡಿ ಜೊತೆಗೆ ಸುಸಜ್ಜಿತ ವಾರ್ಡ್ ವ್ಯವಸ್ಥೆ ಇರುವ ಆಸ್ಪತ್ರೆ ಇದಾಗಿದೆ.

    ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ತುಮಕೂರು, ನೆಲಮಂಗಲ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ತುಂಬಾ ಸನಿಹ ಆಗುವ ಈ ಆಸ್ಪತ್ರೆ 24 ಗಂಟೆ ತೆರೆಯುವುದರಿಂದ ತುಂಬಾ ಅನುಕೂಲಕತೆ ಆಗಲಿದ್ದು, ಸಾರ್ವಜನಿಕರು ಸೇವೆಯನ್ನ ಪಡೆಯಬಹುದಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿಯ ʻವಿದ್ಯಾಮಂದಿರʼ ಪಿಜಿ ಶೈಕ್ಷಣಿಕ ಮೇಳ – ಇಂದು ಕೊನೇ ದಿನ, ಬನ್ನಿ ಸದುಪಯೋಗಪಡಿಸಿಕೊಳ್ಳಿ..

  • ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ, ನಾನು ಯೋಚನೆ ಮಾಡುತ್ತಿದ್ದೇನೆ: ಡಾ. ಮಂಜುನಾಥ್

    ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ, ನಾನು ಯೋಚನೆ ಮಾಡುತ್ತಿದ್ದೇನೆ: ಡಾ. ಮಂಜುನಾಥ್

    ಮೈಸೂರು: ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕು ಎಂದು ಜನ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಕೂಡ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ಜಯದೇವ ಆಸ್ಪತ್ರೆಯ (Jayadeva Hospital) ನಿವೃತ್ತ ನಿರ್ದೇಶಕ ಡಾ. ಮಂಜುನಾಥ್ ಹೇಳಿದರು.

    ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್‌ ಮಂಜುನಾಥ್‌ (Dr C.N. Manjunath) ಅವರಿಗಾಗಿ ಮೈಸೂರಿನ (Mysuru) ನಾಗರಿಕರ ಪರವಾಗಿ ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ:ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

     
    ಹೆಚ್‌ಆರ್‌ ರಂಗನಾಥ್‌ (HR Ranganath) ಮಾತನಾಡುವಾಗ ಹಲವು ಸಲಹೆ ಕೊಟ್ಟಿದ್ದಾರೆ. ಪ್ರಶಸ್ತಿಗಳು ಮತ್ತು ಸನ್ಮಾನಗಳು ಇನ್ನು ಹೆಚ್ಚಿನ ಜವಾಬ್ದಾರಿ ನೀಡುತ್ತದೆ. ಜನರ ಆಶೋತ್ತರ, ಬಯಕೆಗೆ ಸ್ಪಂದಿಸುವ ಕೆಲಸ ಮಾಡಬೇಕಾಗಬಹುದೇನೋ? ಆದರೆ ಇನ್ನೂ ನಾನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಡಾ.ಮಂಜುನಾಥ್‌ ಹೇಳಿದರು. ಇದನ್ನೂ ಓದಿ: ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಶರೀರದ ತೂಕ ಹೆಚ್ಚಾದರೆ ವ್ಯಾಯಾಮ ಮಾಡಬೇಕು. ಮನಸ್ಸಿನ ತೂಕ ಹೆಚ್ಚಾದರೆ ಧ್ಯಾನ ಮಾಡಬೇಕು. ಜೇಬಿನ ತೂಕ ಹೆಚ್ಚಾದರೆ ದಾನ ಮಾಡಬೇಕು. ಈಗ ಸನ್ಮಾನ ಮಾಡುವ ಮೂಲಕ ನನಗೆ ಇನ್ನೂ ಹೆಚ್ಚಿನ  ಜವಾಬ್ದಾರಿ ಸಿಕ್ಕಂತಾಗಿದೆ.  ತೂಕ ಜಾಸ್ತಿಯಾಗಿದೆ  ಎಂದರು.

     

    ಮೊದಲು ಮಾತನಾಡಿದ್ದ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌, ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ. ಸುಸಂಸ್ಕೃತರು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸಕ್ಕೆ ಬರಬೇಕು. ವೈದ್ಯ ವೃತ್ತಿಯಲ್ಲಿ ಇದ್ದಾಗ ಒಂದು ಕ್ಷಣವೂ ರಾಜಕೀಯ ಸುಳಿಗೆ ಸಿಲುಕದೇ ಇದ್ದದ್ದು ಒಂದು ಅಚ್ಚರಿ. ರಾಜಕಾರಣ ಕೆಟ್ಟದಲ್ಲ. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಜನರ ಒತ್ತಾಸೆಯನ್ನು ನಮ್ರತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದ್ದರು.

  • ಪ್ರತಿಷ್ಠಿತ ಆಸ್ಪತ್ರೆಗಳ ಒಕ್ಕೂಟದ ಸಾರಥಿಯಾಗ್ತಾರಾ ಡಾ.ಸಿ.ಎನ್ ಮಂಜುನಾಥ್?

    ಪ್ರತಿಷ್ಠಿತ ಆಸ್ಪತ್ರೆಗಳ ಒಕ್ಕೂಟದ ಸಾರಥಿಯಾಗ್ತಾರಾ ಡಾ.ಸಿ.ಎನ್ ಮಂಜುನಾಥ್?

    ಬೆಂಗಳೂರು: ಕಳೆದ ಜನವರಿ 31ರಂದು ಜಯದೇವ ಆಸ್ಪತ್ರೆ ನಿರ್ದೇಶಕರ ಸ್ಥಾನದಿಂದ ನಿವೃತ್ತಿ ಹೊಂದಿದ್ದ ಡಾ.ಸಿ.ಎನ್ ಮಂಜುನಾಥ್ ಅವರ ಹೆಗಲಿಗೆ ಮತ್ತೊಂದು ಮಹತ್ತರ ಜವಾಬ್ದಾರಿಗೆ ಚಿಂತನೆ ನಡೆದಿದ್ದು, ಅದಕ್ಕೆ ಡಾ.ಮಂಜುನಾಥ್ (Dr. CN Manjunath) ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಹೌದು. ಜಯದೇವ ಆಸ್ಪತ್ರೆಯ (Jayadeva Hospital) ತಮ್ಮ ಸುಧೀರ್ಘ 16 ವರ್ಷಗಳ ಸೇವೆಯಿಂದ ನಿವೃತ್ತಿಯಾಗಿದ್ದ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಮತ್ತೊಂದು ಮಹತ್ತರ ಜವಾಬ್ದಾರಿ ತೆಗೆದುಕೊಳ್ಳುವಂತೆ ಒತ್ತಡ ಹೆಚ್ಚಾಗಿದ್ದು, ಪ್ರತಿಷ್ಠಿತ ಆಸ್ಪತ್ರೆಗಳ ಒಕ್ಕೂಟದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವಂತೆ ಕೂಗು ಕೇಳಿಬಂದಿದೆ.

    ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ, ಕಿಮ್ಸ್ ಆಸ್ಪತ್ರೆಗಳು ಮತ್ತು ಒಕ್ಕಲಿಗರ ಸಂಘದ ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯಗಳ ಮೇಲುಸ್ತುವಾರಿ ತೆಗೆದುಕೊಳ್ಳುವಂತೆ ಒಕ್ಕಲಿಗರ ಸಂಘ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಮನವಿ ಮಾಡಿದೆ. ಈ ಸಂಬಂಧ ಜನವರಿ 31 ರಂದು ಸಭೆ ಮಾಡಿದ್ದ ಸಂಘ, ತನ್ನ ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆಯಲ್ಲಿ 35 ನಿರ್ದೇಶಕರ ಒಮ್ಮತದ ನಿರ್ಧಾರದೊಂದಿಗೆ ಮಂಜುನಾಥ್‌ರನ್ನ ಉಸ್ತುವಾರಿಯಾಗಿ ನೇಮಕ ಮಾಡಲು ಒಪ್ಪಿಗೆ ಸೂಚಿಸಿದೆ. ಈ ಬೆನ್ನಲ್ಲೇ ಒಕ್ಕಲಿಗರ ಸಂಘ ಕೂಡ ಅಧ್ಯಕ್ಷರ ನೇತೃತ್ವದಲ್ಲಿ ಡಾ.ಮಂಜುನಾಥ್‌ಗೆ ಮನವಿ ಸಲ್ಲಿಸಿದೆ.

    ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ, ಕೆಂಪೇಗೌಡ ಆಸ್ಪತ್ರೆ, ವೈದ್ಯಕೀಯ ವಿದ್ಯಾಲಯಗಳು, ಕಿಮ್ಸ್ಗೆ ಒಳಪಟ್ಟ ಆಸ್ಪತ್ರೆಗಳು ಹಾಗೂ ಹೊಸದಾಗಿ ಆರಂಭವಾಗುವ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಳ ಸಂಪೂರ್ಣ ಜವಬ್ದಾರಿ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದು, ಮಂಜುನಾಥ್ ಅವರೂ ಸಹ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಂಘಧ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ನಿರ್ವಹಿಸಲಾಗದೆ ಕೇಂದ್ರದ ಅನುದಾನ ಬಂದಿಲ್ಲ ಅಂತಿದ್ದಾರೆ ಕಾಂಗ್ರೆಸ್‌ನವ್ರು: ಜೋಶಿ ಆರೋಪ

    ಈ ಬಗ್ಗೆ ಡಾ.ಸಿ.ಎನ್ ಮಂಜುನಾಥ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಂಘ ಈಗಾಗಲೇ ಮನವಿ ಮಾಡಿದೆ. ಆದರೆ ಸದ್ಯಕ್ಕೆ ನಾನು ಸಲಹೆಗಾರನಾಗಿ ಇರುತ್ತೇನೆ ಎಂದು ತಿಳಿಸಿದ್ದೇನೆ. ಈ ಜವಾಬ್ದಾರಿ ತೆಗೆದುಕೊಳ್ಳುವ ಸಂಬಂಧ ನಿರ್ಧಾರ ಮಾಡಲು ಸಮಯಾವಕಾಶ ಕೇಳಿದ್ದೇನೆ. ಯೋಜಿಸಿ ನಿರ್ಧಾರ ಮಾಡೋದಾಗಿ ತಿಳಿಸಿದ್ದಾರೆ.  ಇದನ್ನೂ ಓದಿ: ಪಂಜಾಬ್‌ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ 

  • ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ 21 ವೈದ್ಯರಿಂದ ಅರ್ಜಿ

    ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ 21 ವೈದ್ಯರಿಂದ ಅರ್ಜಿ

    – 11 ಮಂದಿಗಿದೆ ಹುದ್ದೆಗೆ ಬೇಕಾದ ಅರ್ಹತೆ

    ಬೆಂಗಳೂರು: ಜಯದೇವ ಆಸ್ಪತ್ರೆಯ ನಿರ್ದೇಶಕರ (Jayadeva Hospital Director) ಸ್ಥಾನದಿಂದ ಡಾ. ಸಿಎನ್ ಮಂಜುನಾಥ್ (CN Manjunath) ಅವರು ನಿವೃತ್ತಿಯಾದ ಹಿನ್ನೆಲೆ, ಇದೀಗ ನಿರ್ದೇಶಕರ ಹುದ್ದೆಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಗೆ 21 ವೈದ್ಯರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಲಾಖೆಯ ಉನ್ನತ ಅಧಿಕಾರಿಗಳು ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ.

    ವೈದ್ಯಕೀಯ ಕಾಲೇಜ್‍ಗಳಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ, ಬೆಂಗಳೂರು ಮತ್ತು ಮೈಸೂರು ಭಾಗದವರಿಂದ ಅರ್ಜಿ ಸಲ್ಲಿಕೆಯಾಗಿದೆ. ಈ 21 ಅರ್ಜಿಯಲ್ಲಿ 11 ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ಇನ್ನುಳಿದ 10 ಅರ್ಜಿಗಳಿಗೆ ಹುದ್ದೆಗೆ ಬೇಕಾದ ಅರ್ಹತೆ ಇಲ್ಲ ಎಂದು ತಿಳಿದು ಬಂದಿದೆ. ಸರ್ಕಾರ ಮುಂದಿನವಾರ ಜಯದೇವ ಆಸ್ಪತ್ರೆಯ ನಿರ್ದೇಶಕರನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಡಾ.ಮಂಜುನಾಥ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿ: ಸಿಎಂಗೆ ಆರ್‌.ಅಶೋಕ್‌ ಮನವಿ

    ಈಗ ಜಯದೇವ ಆಸ್ಪತ್ರೆಯ (Jayadeva Hospital) ಪ್ರಭಾರ ನಿರ್ದೇಶಕರಾಗಿ ಡಾ. ರವೀಂದ್ರ ಅವರನ್ನು ನೇಮಿಸಲಾಗಿದೆ. ಡಾ. ರವೀಂದ್ರ ಅವರು ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಜಯದೇವ ಆಸ್ಪತ್ರೆ ನಿರ್ದೇಶಕ ಹುದ್ದೆ ಯಾರಿಗೆ ಒಲಿಯಲಿದೆ ಎಂಬುದೇ ಇದೀಗ ಕುತೂಹಲ ಮೂಡಿಸಿದೆ.

    ಅರ್ಜಿ ಸಲ್ಲಿಸಲು ಅರ್ಹತೆ ಏನು?
    ವೈದ್ಯಕೀಯ ಕಾಲೇಜ್‍ಗಳಲ್ಲಿ 5 ವರ್ಷ ಸೇವೆ ಸಲ್ಲಿಸಿರಬೇಕು ಹಾಗೂ ಪ್ರೊಫೆಸರ್ ಆಗಿರಬೇಕು. ಈ ಅರ್ಹತೆ ಇದ್ದವರು ಆಸ್ಪತ್ರೆಯ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಇದನ್ನೂ ಓದಿ: ಮಂಜುನಾಥ್‌ರಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ: ಹೆಚ್‌.ಡಿ ದೇವೇಗೌಡ

  • ಡಾ.ಮಂಜುನಾಥ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿ: ಸಿಎಂಗೆ ಆರ್‌.ಅಶೋಕ್‌ ಮನವಿ

    ಡಾ.ಮಂಜುನಾಥ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿ: ಸಿಎಂಗೆ ಆರ್‌.ಅಶೋಕ್‌ ಮನವಿ

    ಬೆಂಗಳೂರು: ಬಡವರ ಪಾಲಿನ ಆಶಾಕಿರಣ ಡಾ.ಸಿ.ಎನ್.ಮಂಜುನಾಥ್‌ (CN Manjunath) ಅವರಿಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ವಿಪಕ್ಷ ನಾಯಕ ಆರ್‌.ಅಶೋಕ್‌ (R Ashok) ಮನವಿ ಮಾಡಿದ್ದಾರೆ.

    ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಮಂಜುನಾಥ್‌ ಅವರು ಇಂದು (ಬುಧವಾರ) ನಿವೃತ್ತರಾಗಲಿದ್ದಾರೆ. ಅವರ ಸಾಧನೆ ಸ್ಮರಿಸಿರುವ ಆರ್‌.ಅಶೋಕ್‌ ಸೋಷಿಯಲ್‌ ಮೀಡಿಯಾದ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ.

     

    ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತರಾಗುತ್ತಿರುವ ನಾಡಿನ ಪ್ರಖ್ಯಾತ ವೈದ್ಯರಾದ ಡಾ.ಸಿ.ಎನ್.ಮಂಜುನಾಥ್ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಮನಸಾರೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.

    ಬಡರೋಗಿಗಳ ಪಾಲಿನ ಆಶಾಕಿರಣವಾಗಿ “ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್” ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ಕೊಟ್ಟ ಡಾ.ಮಂಜುನಾಥ್ ಅವರು ಬಡವರ ಪಾಲಿನ ಧನ್ವಂತರಿ ಅಂದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದ್ದಾರೆ.

    ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಯಾವುದೇ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಬಡವರಿಗೆ ಕೈಗೆಟಕುವ ದರದಲ್ಲಿ ಉತ್ಕೃಷ್ಟ ಆರೋಗ್ಯ ಸೇವೆ ನೀಡುವ ಮಟ್ಟಕ್ಕೆ ಒಂದು ಸರ್ಕಾರಿ ಸಂಸ್ಥೆಯನ್ನು ಕಟ್ಟಿಬೆಳೆಸಿದ ಅನನ್ಯ ಸಾಧನೆ ಮಾಡಿದ ಡಾ.ಸಿ.ಎನ್.ಮಂಜುನಾಥ್ ಅವರು ಕರ್ನಾಟಕದ ಹೆಮ್ಮೆಯ ಸುಪುತ್ರ. ಡಾ.ಸಿ.ಎನ್.ಮಂಜುನಾಥ್ ಅವರ ಸಾಧನೆಯನ್ನು ಗುರುತಿಸಿ, ಗೌರವಿಸಲು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

  • ಜ.31 ರಂದು ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್ ನಿವೃತ್ತಿ

    ಜ.31 ರಂದು ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್ ನಿವೃತ್ತಿ

    – ರಾಜಕೀಯಕ್ಕೆ ಹೋಗಲ್ಲ ಎಂದ ಡಾಕ್ಟರ್

    ಬೆಂಗಳೂರು: ಜಯದೇವ ಆಸ್ಪತ್ರೆ (Jayadev Hospital) ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ (CN Manjunath) ಸೇವಾವಧಿ ಇದೇ ತಿಂಗಳ 31ರಂದು ಮುಕ್ತಾಯವಾಗಲಿದೆ. ಡಾ.ಸಿ.ಎನ್ ಮಂಜುನಾಥ್ ಅವರನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಸಿಲ್ಲ. ಹೀಗಾಗಿ ಡಾ.ಸಿ.ಎನ್ ಮಂಜುನಾಥ್ ಅವರು ಜನವರಿ 31ರಂದು ನಿವೃತ್ತಿ ಪ್ರಕಟಿಸಲು ತಯಾರಿ ನಡೆಸಿದ್ದಾರೆ. ಅಲ್ಲದೇ, ತಮ್ಮನ್ನು ರಾಜ್ಯ ಸರ್ಕಾರ ಸರಿಯಾಗಿ ಬೀಳ್ಕೊಡದ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಇನ್ನೂ ಚುನಾವಣೆಯಲ್ಲಿ (Election) ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಯನ್ನು ಮಂಜುನಾಥ್ ತಳ್ಳಿ ಹಾಕಿದ್ದಾರೆ. ಕಳೆದ ಬಾರಿ ಡಾ.ಮಂಜುನಾಥ್ ಸೇವಾವಧಿ ಮುಕ್ತಾಯವಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರ ಆರು ತಿಂಗಳ ಕಾಲ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸಿತ್ತು. ಡಾ.ಮಂಜುನಾಥ್ ನಿವೃತ್ತಿ ಆಗುತ್ತಿರುವ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಈಗಾಗಲೇ 15ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನಡುವೆ ಸಿಎಂ ಆಪ್ತ, ಮೈಸೂರು ಮೂಲದ ವೈದ್ಯರೊಬ್ಬರನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಒಂದೇ ದಿನ ಚುನಾವಣೆ, ರಾಜ್ಯ ಬಜೆಟ್ ಬೇಡ – ರಾಜ್ಯಪಾಲರಿಗೆ ಬಿಜೆಪಿ ದೂರು

    ಈ ಕುರಿತು ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್, ಕಲಬುರಗಿ ಜಯದೇವ ಕಂಪ್ಲೀಟ್ ಮಾಡಿ ನಿವೃತ್ತಿ ಆಗಬೇಕು ಎಂದು ಇದ್ದೆ. ಆದರೆ ಇಷ್ಟರ ಒಳಗಡೆ ಈ ರೀತಿ ನಿರ್ಧಾರ ಆಗಿದೆ. ಜನಸಾಮಾನ್ಯರು, ಜನರು ನನಗೆ ಗೌರವ ಕೊಡುತ್ತಾ ಇದ್ದಾರೆ. ಗೌರವಯುತವಾಗಿ ಕಳಹಿಸಿಕೊಡುತ್ತಿದ್ದಾರೆ. ರಾಜಕೀಯಕ್ಕೆ ನಾನು ಹೋಗಲ್ಲ. ನನ್ನ ಮೊದಲ ಆಯ್ಕೆ ನನ್ನ ವೃತ್ತಿ. ಇಲ್ಲಿಂದ ಹೊರ ಹೋದ ಮೇಲೂ ನಾನು ನನ್ನ ವೃತ್ತಿಯಲ್ಲಿ ಮುಂದುವರೆಯುತ್ತೇನೆ. ರಾಜಕೀಯ ಇದೆಲ್ಲ ಗಾಳಿ ಸುದ್ದಿ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ತಿಂಗಳ ಅಂತ್ಯದಲ್ಲಿ ಜಾತಿ ಜನಗಣತಿ ವರದಿ ಸರ್ಕಾರಕ್ಕೆ ಕೊಡುತ್ತೇವೆ: ಜಯಪ್ರಕಾಶ್ ಹೆಗ್ಡೆ

  • ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

    ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

    ಬೆಂಗಳೂರು: ಜಯದೇವ ಆಸ್ಪತ್ರೆ ನಿರ್ದೇಶಕರನ್ನಾಗಿ ಡಾ. ಮಂಜುನಾಥ್‍ರನ್ನು (Dr Manjunath) ಮುಂದುವರಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಟ್ಟಿದೆ. ಜನವರಿ 31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ (Jayadeva Hospital Director) ಡಾ. ಮಂಜುನಾಥ್ ಅವಧಿ ಮುಕ್ತಾಯವಾಗಲಿದೆ.

    ಕಳೆದ ಬಾರಿ ಅವಧಿ ಮುಕ್ತಾಯ ಬಳಿಕ ಜನರ ಒತ್ತಾಯ ಕೇಳಿ ಬಂದ ಹಿನ್ನೆಲೆ 6 ತಿಂಗಳ ಕಾಲ ಹುದ್ದೆಯಲ್ಲಿ ಸರ್ಕಾರ ಮುಂದುವರಿಸಿತ್ತು. ಎನ್‍ಎಂಸಿ ಆಕ್ಟ್ ಪ್ರಕಾರ 70 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿದೆ. ಡಾ. ಮಂಜುನಾಥ್ ಅವರಿಗೆ 67 ವರ್ಷವಾಗಿದ್ದು, ಇನ್ನು 3 ವರ್ಷಗಳ ಕಾಲ ಸೇವೆ ಸಲ್ಲಿಸಬಹುದಾಗಿದೆ. ಆದರೆ ಸರ್ಕಾರ ಮುಂದುವರಿಸುವ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಜನವರಿ 31ಕ್ಕೆ ಡಾ. ಮಂಜುನಾಥ್ ನಿವೃತ್ತಿ ಘೋಷಣೆ ಮಾಡಲಿದ್ದಾರೆ.

    ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದ್ದು, 15ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನಡುವೆ ಮೈಸೂರು ಮೂಲದ ಸಿಎಂ ಆಪ್ತರಿಗೆ ನಿರ್ದೇಶಕರ ಹುದ್ದೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಅನ್ನೋ ಚರ್ಚೆ ಜೋರಾಗಿದೆ.

    ಚುನಾವಣೆಗೆ ಸ್ಪರ್ಧಿಸ್ತಾರೆ ಎಂಬ ಚರ್ಚೆ ಜೋರಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್ ಅವರು, ಆ ರೀತಿ ಏನಿಲ್ಲ ಚುನಾವಣೆಗೆ ನಿಲ್ಲೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 3 ದಿನ ಲಾಡ್ಜ್‌ನಲ್ಲಿಟ್ಟು ಚಿತ್ರಹಿಂಸೆ ಕೊಟ್ಟ ಆರೋಪ- ಕಾಟನ್‍ಪೇಟೆ ಪೊಲೀಸರ ವಿರುದ್ಧ ವ್ಯಕ್ತಿ ದೂರು

  • ತೂಕ ಕಡಿಮೆ ಮಾಡುವ ಉತ್ಸಾಹ ಬೇಡ, ಅತಿಯಾದ ಒತ್ತಡವೂ ಹೃದಯದ ಸಮಸ್ಯೆಗಳಿಗೆ ಕಾರಣ: ಡಾ. ಮಂಜುನಾಥ್

    ತೂಕ ಕಡಿಮೆ ಮಾಡುವ ಉತ್ಸಾಹ ಬೇಡ, ಅತಿಯಾದ ಒತ್ತಡವೂ ಹೃದಯದ ಸಮಸ್ಯೆಗಳಿಗೆ ಕಾರಣ: ಡಾ. ಮಂಜುನಾಥ್

    – 10 ವರ್ಷದಲ್ಲಿ ಹೃದಯಾಘಾತ ಪ್ರಮಾಣ 22% ಹೆಚ್ಚಾಗಿದೆ

    ಬೆಂಗಳೂರು: ಯುವ ಜನರಿಗೆ ತೂಕ ಕಡಿಮೆ ಮಾಡುವ ಉತ್ಸಾಹ ಬೇಡ. ಅತೀ ವ್ಯಾಯಾಮದಿಂದ ರಕ್ತನಾಳಗಳಿಗೆ ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ಹೃದಯಾಘಾತದ (Heart Attack) ಸುಳಿವು ಸಿಗುತ್ತದೆ. ಇನ್ನೂ ಕೆಲವರಿಗೆ ಸುಳಿವು ಸಿಗುವುದಿಲ್ಲ ಎಂದು ಜಯದೇವ ಆಸ್ಪತ್ರೆಯ (Jayadeva Hospital) ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ (DR.C.N Manjunath) ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯುವಕರಲ್ಲಿ ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತದ ಪ್ರಮಾಣ ಕಳೆದ 10 ವರ್ಷದಲ್ಲಿ 22% ಹೆಚ್ಚಾಗಿದೆ. ಕೆಲವರು ನಾರ್ಕೋಟಿಕ್ ಡ್ರಗ್ಸ್, ಹುಕ್ಕಾ ಬಾರ್, ಗಾಂಜಾ ಸೇವಿಸುತ್ತಿದ್ದಾರೆ. ಕಳೆದ 6 ವರ್ಷಗಳಲ್ಲಿ 5500ಕ್ಕೂ ಹೆಚ್ಚು ಯುವಕರಿಗೆ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಪಂದನಾ ವಿಜಯ ರಾಘವೇಂದ್ರ ನಿಧನಕ್ಕೆ ಗಣ್ಯರು ಸಂತಾಪ

    ಹೆಚ್ಚಾಗಿ ದುಶ್ಚಟಗಳು ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಧೂಮಪಾನ, ಮಧ್ಯಪಾನ, ಒತ್ತಡ ಹಾಗೂ ಅಧಿಕ ರಕ್ತದೊತ್ತಡದಿಂದ ಹೃದಯಾಘಾತ ಸಂಭವಿಸುತ್ತಿವೆ. ಜಂಕ್ ಫುಡ್ ಸಹ ಇದಕ್ಕೆ ಕಾರಣವಾಗಿದ್ದು ಅದನ್ನು ತ್ಯೆಜಿಸುವುದೇ ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

    ಹೆಚ್ಚಿನ ಶ್ರಮದಾಯಕ ವ್ಯಾಯಾಮ ಮಾಡುವುದು ಹಾಗೂ ಎನರ್ಜಿ ಡ್ರಿಂಕ್ಸ್ ಬಳಕೆ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಈ ಬಗೆಯ ಶ್ರಮದಾಯಕ ವ್ಯಾಯಾಮ ಮಾಡುವವರು ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲವರಿಗೆ ಆರೋಗ್ಯದ ಸಮಸ್ಯೆ ಇಲ್ಲದೆಯೂ ಹೃದಯಾಘಾತಗಳು ಆಗುತ್ತಿವೆ. ಅಲ್ಲದೇ ಅಂತವರಿಗೆ ಯಾವುದೇ ದುಶ್ಚಟಗಳು ಇಲ್ಲದೇ ಹೃದಯಾಘಾತಗಳಾಗಿವೆ. ಹೀಗಾಗಿ 35 ವರ್ಷ ಹೆಚ್ಚಾದ ಮೇಲೆ ವಾರ್ಷಿಕವಾಗಿ ಒಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು.

    ಅನುವಂಶಿಯತೆಯಿಂದ 17% ಹೃದಯಾಘಾತವಾಗುತ್ತಿದೆ. ಫ್ಯಾಟ್ ಲಿವರ್, ಮಹಿಳೆಯರಲ್ಲಿ ಪಿಒಸಿಡಿ, ಅತೀಯಾದ ಗೋರಕೆ ಹಾಗೂ ವಾಯುಮಾಲಿನ್ಯ ಸಹ ಹೃದಯಾಘಾತಕ್ಕೆ ಹೊಸ ಕಾರಣಗಳಾಗಿವೆ. ಈಗ ಒತ್ತಡವೇ ಸಿಗರೇಟ್ ರೀತಿ ಕೆಲಸ ಮಾಡುತ್ತಿದೆ. ಇದರಿಂದ ಹೆಚ್ಚಿನ ಹೃದಯಾಘಾತಗಳು ಸಂಭವಿಸುತ್ತಿವೆ. ಲೋ ಬಿಪಿ ಇರುವಂತವರು ಹೆಚ್ಚು ನೀರನ್ನು ಕುಡಿಯಬೇಕು. ಹೆಚ್ಚು ಹಣ್ಣುಗಳನ್ನು ಸೇವಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಸ್ಪಂದನಾ ನಿಧನ: ಕೋವಿಡ್ ನಂತರ ಹೃದಯಾಘಾತ ಹೆಚ್ಚಾಗುತ್ತಿವೆ ಎಂದ ಮಾಜಿ ಸಿಎಂ ಕುಮಾರಸ್ವಾಮಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಡಾ. ಮಂಜುನಾಥ್ ಮತ್ತೆ ಮುಂದುವರಿಕೆ

    ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಡಾ. ಮಂಜುನಾಥ್ ಮತ್ತೆ ಮುಂದುವರಿಕೆ

    ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (Jayadeva Hospital) ನಿರ್ದೇಶಕರಾಗಿರುವ ಡಾ.ಸಿಎನ್ ಮಂಜುನಾಥ್ (Dr. CN Manjunath) ಅವರ ಸೇವಾವಧಿಯನ್ನು ಮುಂದಿನ 6 ತಿಂಗಳವರೆಗೆ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

    ಮಂಜುನಾಥ್ ಅವರ ನಿರ್ದೇಶಕ ಸ್ಥಾನದ ಅವಧಿ ಕಳೆದ ವರ್ಷವೇ ಮುಕ್ತಾಯವಾಗಿತ್ತು. ಬಳಿಕ ಹಿಂದಿನ ಬಿಜೆಪಿ (BJP) ಸರ್ಕಾರ ಅವರನ್ನು 1 ವರ್ಷಗಳ ಕಾಲ ನಿರ್ದೇಶಕರಾಗಿ ಮುಂದುವರಿಸಲು ನಿರ್ಧರಿಸಿತ್ತು. ಇದೀಗ ಮತ್ತೆ ಅವರನ್ನು ಮುಂದಿನ 6 ತಿಂಗಳುಗಳ ಕಾಲ ಸೇವಾವಧಿಯನ್ನು ಮುಂದುವರಿಸಲು ಕಾಂಗ್ರೆಸ್ ಸರ್ಕಾರ (Congress) ತೀರ್ಮಾನಿಸಿದೆ. ಇದನ್ನೂ ಓದಿ: ಎನ್‌ಡಿಎ ಜೊತೆ ಮೈತ್ರಿಗೆ ಜೆಡಿಎಸ್ ರೆಡಿ – ಬಿಜೆಪಿ ಪ್ಲಾನ್‌ ಏನು?

    ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಆಡಳಿತ ಮಂಡಳಿಯ ಸಭೆ ನಡೆಯಿತು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಸಂಸ್ಥೆಯ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ವಿರೋಧಿಗಳ ರಣಕಹಳೆ – ಯಾವೆಲ್ಲ ಪಕ್ಷಗಳು ಭಾಗಿ ಆಗುತ್ತಿವೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]