Tag: ಜಯಕುಮಾರ್‌ ಗೋರೆ

  • ಸೇತುವೆಯಿಂದ 30 ಅಡಿ ಆಳಕ್ಕೆ ಬಿದ್ದ ಕಾರು – ಬಿಜೆಪಿ ಶಾಸಕ ಸಹಿತ ಮೂವರಿಗೆ ಗಾಯ

    ಸೇತುವೆಯಿಂದ 30 ಅಡಿ ಆಳಕ್ಕೆ ಬಿದ್ದ ಕಾರು – ಬಿಜೆಪಿ ಶಾಸಕ ಸಹಿತ ಮೂವರಿಗೆ ಗಾಯ

    ಮುಂಬೈ: ಮಹಾರಾಷ್ಟ್ರದ (Maharashtra) ಬಿಜೆಪಿ (BJP) ಶಾಸಕ ಜಯಕುಮಾರ್ ಗೋರೆ (Jaykumar Gore) ಸಂಚರಿಸುತ್ತಿದ್ದ ಕಾರು (Car) ಸೇತುವೆಯ ಮೇಲಿಂದ ಪಲ್ಟಿಯಾಗಿ 30 ಅಡಿ ಆಳಕ್ಕೆ ಬಿದ್ದಿರುವ ಘಟನೆ ಫಾಲ್ಟನ್‍ನಲ್ಲಿ ನಡೆದಿದೆ.

    ಜಯಕುಮಾರ್ ಗೋರೆ ತಮ್ಮ ನಿವಾಸ ಸತ್ರಾದಿಂದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಫಾಲ್ಟನ್ ಬಳಿ ಬರುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಪರಿಣಾಮ ಸೇತುವೆಯ ಮೇಲಿಂದ 30 ಅಡಿ ಆಳಕ್ಕೆ ಬಿದ್ದಿದೆ. ಘಟನೆಯಲ್ಲಿ ಜಯಕುಮಾರ್ ಗೋರೆ ಸಹಿತ 3 ಬಾಡಿಗಾರ್ಡ್‍ಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ- ಶಬರಿಮಲೆಯಿಂದ ಹಿಂದಿರುಗುತ್ತಿದ್ದ 8 ಯಾತ್ರಿಕರು ಸಾವು

    ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು 30 ಅಡಿ ಆಳಕ್ಕೆ ಬಿದ್ದಿದೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್ ಪಲ್ಟಿ – ನಾಲ್ವರು ವಿದ್ಯಾರ್ಥಿಗಳು ಸೇರಿ ಏಳು ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]