Tag: ಜಮ್ಮು ಮತ್ತು ಕಾಶ್ಮೀರ

  • ಪಾಕ್‌ನಿಂದ ಶೆಲ್ ದಾಳಿ – ಸ್ಥಳಾಂತರಗೊಂಡ ಜನರೊಂದಿಗೆ ಕ್ರಿಕೆಟ್ ಆಡಿದ ಜಮ್ಮು ಸಿಎಂ

    ಪಾಕ್‌ನಿಂದ ಶೆಲ್ ದಾಳಿ – ಸ್ಥಳಾಂತರಗೊಂಡ ಜನರೊಂದಿಗೆ ಕ್ರಿಕೆಟ್ ಆಡಿದ ಜಮ್ಮು ಸಿಎಂ

    ಶ್ರೀನಗರ: ಎಲ್‌ಒಸಿಯಲ್ಲಿ ಪಾಕಿಸ್ತಾನ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ ಹಾನಿಗೊಳಗಾದ ನಿವಾಸಿಗಳಿಗೆ ಆಶ್ರಯ ನೀಡಲು ಸ್ಥಾಪಿಸಲಾದ ನಿರಾಶ್ರಿತರ ಕೇಂದ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ(Jammu and Kashmir) ಸಿಎಂ ಒಮರ್ ಅಬ್ದುಲ್ಲಾ(Omar Abdullah) ಕ್ರಿಕೆಟ್ ಆಡಿದರು.

    ಸಾಂಬಾದಲ್ಲಿನ(Samba)  ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸ್ಥಳೀಯರನ್ನು ಭೇಟಿಯಾದ ಸಂದರ್ಭದಲ್ಲಿ ಒಮರ್ ಅಬ್ದುಲ್ಲಾ ಅವರು ಪುಟ್ಟ ಬಾಲಕನೊಂದಿಗೆ ಕ್ರಿಕೆಟ್ ಆಡಿದ್ದು, ಅವರು ಬ್ಯಾಟ್ ಬೀಸಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹರಿದಾಡುತ್ತಿವೆ. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ – ಕುತುಬ್ ಮಿನಾರ್ ಸೇರಿ ದೆಹಲಿಯ ಹಲವು ಐತಿಹಾಸಿಕ ತಾಣಗಳಿಗೆ ಬಿಗಿಭದ್ರತೆ

    ಗುರುವಾರ, ಜಮ್ಮು ಮತ್ತು ಪೂಂಚ್ ಜಿಲ್ಲೆಗಳಲ್ಲಿ ಪಾಕ್ ನಡೆಸಿದ ಡ್ರೋನ್, ಕ್ಷಿಪಣಿ ಹಾಗೂ ಶೆಲ್ ದಾಳಿಯನ್ನು ಒಮರ್ ಅಬ್ದುಲ್ಲಾ ಅವರು ತೀವ್ರವಾಗಿ ಖಂಡಿಸಿದರು. ಈ ಕುರಿತು ಮಾಧ್ಯಮಳೊಂದಿಗೆ ಮಾತನಾಡಿದ ಅವರು, ನಾವು ಈ ಪರಿಸ್ಥಿತಿಯನ್ನು ಸೃಷ್ಟಿಸಲಿಲ್ಲ. ಪಹಲ್ಗಾಮ್‌ನಲ್ಲಿ(Pahalgam Attack) ಪಾಕ್ ಉಗ್ರರು ನಮ್ಮ ಜನರ ಮೇಲೆ ದಾಳಿ ನಡೆಸಿ ಅಮಾಯಕರನ್ನ ಕೊಂದರು. ಅವರ ಈ ದಾಳಿಗೆ ನಾವು ಪ್ರತಿಕ್ರಿಯಿಸಬೇಕಾಯಿತು ಎಂದರು. ಇದನ್ನೂ ಓದಿ: ಭಾರತ-ಪಾಕ್ ನಡುವೆ ಉದ್ವಿಗ್ನ ಹೊತ್ತಲ್ಲೇ ದಿಟ್ಟ ನಿರ್ಧಾರ ಕೈಗೊಂಡ ಕಮಲ್ ಹಾಸನ್

    ಗುರುವಾರ ರಾತ್ರಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಮುಂದಾಗಿತ್ತು. ಈ ವೇಳೆ ನಮ್ಮ ಸೇನೆಯು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್‌ನ ಪಟ್ಟಣಗಳಲ್ಲಿ ಸೈರನ್ ಮೊಳಗಿಸಿ ಜನರಿಗೆ ಮುನ್ನೆಚ್ಚರಿಕೆ ನೀಡಿತು. ಅಲ್ಲದೇ ಪಾಕ್‌ನ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಯಿತು ಎಂದು ಹೇಳಿದರು.

     

  • ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    – ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳೂ ಬಂದ್

    ನವದೆಹಲಿ/ಇಸ್ಲಾಮಾಬಾದ್‌: ಭಾರತೀಯ ರಕ್ಷಣಾ ಪಡೆಗಳ ದಾಳಿಗೆ ತತ್ತರಿಸಿರುವ ಪಾಪಿ ಪಾಕಿಸ್ತಾನ (Pakistan) ಗಡಿ ಮೀರಿ ಭಾರತದ ಮೇಲೆ ದಾಳಿ ಮಾಡುತ್ತಿದೆ.

    ಕೈಯಲ್ಲಾಗದವರು ಮೈ ಪರಚಿಕೊಂಡದೇ ಸೇನೆ ವಿರುದ್ಧ ಸೆಣಸಲಾಗದ ಪಾಕ್‌ ಶೆಲ್ ದಾಳಿ (Missile Attack) ನಡೆಸಿ ಅಮಾಯಕರನ್ನ ಟಾರ್ಗೆಟ್‌ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ (Himachal Pradesh) ತುರ್ತು ಪರಿಸ್ಥಿತಿ ಹೇರಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಬೆಳಗ್ಗಿನವರೆಗೂ ಬ್ಲಾಕ್‌ಔಟ್ ಘೋಷಿಸಲಾಗಿತ್ತು.

    10 ಸಾವಿರ ಮಂದಿ ಸ್ಥಳಾಂತರ?
    ಭಾರತ ಮತ್ತು ಪಾಕ್‌ (India vs Pakistan) ನಡುವೆ ಉದ್ವಿಗ್ನತೆ ಹೆಚ್ಚಿದ ಬೆನ್ನಲ್ಲೇ ಗಡಿ ಗ್ರಾಮಗಳಿಂದ ಸುಮಾರು 10,000 ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಈ ಹೊತ್ತಿನಲ್ಲೇ ಪಾಕ್‌ ಅಮಾಯಕರನ್ನ ಗುರಿಯಾಗಿಸಿ ಶೆಲ್‌ ದಾಳಿ ನಡೆಸಿದೆ. ಪಾಕ್‌ ದಾಳಿಯಿಂದ ಪೂಂಚ್‌ ಜಿಲ್ಲೆ ಮಾತ್ರವಲ್ಲದೆ, ಉರಿ, ಬಾರಾಮುಲ್ಲಾ, ಕರ್ನಾ, ತಂಗ್ಧರ್, ಮೆಂಧರ್‌ ಸೇರಿದಂತೆ ವಿವಿಧೆಡೆ ನಾಗರಿಕರ ಮನೆ ಮಳಿಗೆಗಳು ಹಾನಿಗೊಳಗಾಗಿವೆ.

    ಹೀಗಾಗಿ ಪಾಕಿಸ್ತಾನಕ್ಕೆ ಸೈನ್ಯದ ಜೊತೆ ಹೋರಾಡುವ ಶಕ್ತಿ ಇಲ್ಲ-ಅದಕ್ಕೆ ನಾಗರಿಕರ ಮೇಲೆ ದಾಳಿ ಮಾಡ್ತಿದೆ-ಬೆಳಗ್ಗೆ 4-30 ಕ್ಕೂ ಸ್ಫೋಟದ ಸದ್ದು ಕೇಳಿದೆ ಎಂದು ಜಮ್ಮುವಿನ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.

    ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳೂ ಬಂದ್
    ಭಾರತ-ಪಾಕಿಸ್ತಾನ ಸಂಘರ್ಷದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳು ಇಂದು ಕೂಡಾ ಬಂದ್ ಆಗಲಿದೆ. ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸಲಾಗಿದೆ.

    ಮಿಲಿಟರಿ ಕಂಟೋನ್ಮೆಂಟ್‌ಗಳೇ ಶಿಫ್ಟ್‌
    ಇನ್ನೂ ಭಾರತೀಯ ರಕ್ಷಣಾ ಪಡೆಗಳ ದಿಟ್ಟ ಉತ್ತರಕ್ಕೆ‌ ಕಕ್ಕಾಬಿಕ್ಕಿಯಾಗಿರುವ ಪಾಕಿಸ್ತಾನದ ಸಿಂಧ್, ಪಂಜಾಬ್ ಕಂಟೋನ್ಮೆಂಟ್‌ಗಳಲ್ಲಿ ಭೀತಿ ಹೆಚ್ಚಾಗಿದೆ. ಹೀಗಾಗಿ ಮಿಲಿಟರಿ ಕಂಟೋನ್ಮೆಂಟ್‌ಗಳನ್ನ ಸಾಮೂಹಿಕವಾಗಿ ಸ್ಥಳಾಂತರ ಮಾಡಿಕೊಳ್ಳುತ್ತಿದೆ.

  • ಜಮ್ಮುವಿನ ಮೇಲೆ ದಾಳಿಗೆ ಯತ್ನಿಸಿದ್ದ ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಮಟಾಶ್‌

    ಜಮ್ಮುವಿನ ಮೇಲೆ ದಾಳಿಗೆ ಯತ್ನಿಸಿದ್ದ ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಮಟಾಶ್‌

    – ಪೂಂಚ್, ರಜೌರಿ ಜಿಲ್ಲೆಗಳಲ್ಲೂ ಸ್ಫೋಟದ ಸದ್ದು

    ನವದೆಹಲಿ: ಜಮ್ಮುವಿನ ಮೇಲೆ ಪಾಕ್‌ 100 ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಕೌಂಟರ್‌ ಅಟ್ಯಾಕ್‌ ಮಾಡಿರುವ ಭಾರತ ಲಾಹೋರ್‌ (Lahore) ಮೇಲೆ ಮಿಸೈಲ್‌ಗಳ ಸುರಿಮಳೆ ಗರೆದಿದೆ. ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್‌ ಮತ್ತು ಅಲ್ಲಿನ ಜನತೆ ತತ್ತರಿಸಿದೆ. ಇಷ್ಟಾಗಿಯೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ.

    ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್‌ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್‌ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಆದ್ರೆ ಭಾರತೀಯ ಸೇನೆ ಎಲ್ಲಾ ದಾಳಿಯನ್ನ ವಿಫಲಗೊಳಿಸಿದೆ. ಇದನ್ನೂ ಓದಿ: ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌

    ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿದ್ದ 9 ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಉಗ್ರರನ್ನು ಧ್ವಂಸಮಾಡಿದೆ, ಇದಕ್ಕೆ ಪ್ರತಿಯಾಗಿ ಪಾಕ್ ಭಾರತದ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿ 16 ಜನರನ್ನು ಕೊಂದಿದೆ. ಅಲ್ಲದೆ ಉದ್ಧಟತನ ತೋರಿರುವ ಪಾಕಿಸ್ತಾನ ಸೈನ್ಯ ಗುರುವಾರ ಸಂಜೆಯಿಂದ ಕ್ಷಿಪಣಿ ದಾಳಿ ಮಾಡಿದೆ. ಜಮ್ಮುವಿನ ಮೇಲೆ ದಾಳಿ ಮುಂದುವರಿಸಿದೆ. ಭಾರತ ಪ್ರತಿದಾಳಿ ಮಾಡಿ, ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಇದನ್ನೂ ಓದಿ: ಗಡಿ, ಏರ್‌ಪೋರ್ಟ್‌ಗಳ ಭದ್ರತೆ ಪರಿಶೀಲನೆ – ಉನ್ನತ ಅಧಿಕಾರಿಗಳೊಂದಿಗೆ ಅಮಿತ್‌ ಶಾ ಚರ್ಚೆ

    ಪೂಂಚ್ ಹಾಗೂ ರಜೌರಿಯಲ್ಲಿ ಸ್ಫೋಟಗಳ ಸದ್ದು:
    ಇನ್ನೂ ಲೈನ್ ಆಫ್ ಕಂಟ್ರೋಲ್ ಬಳಿ ಉದ್ವಿಗ್ನತೆ ಹೆಚ್ಚಾಗಿದೆ, ಜಮ್ಮುವಿನ ಪೂಂಚ್ ಹಾಗೂ ರಜೌರಿ ಜಿಲ್ಲೆಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಜನರಿಗೆ ಧೈರ್ಯ ತುಂಬಿದ್ದು, ಜನರು ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಲೈಟ್ ಆಫ್ ಮಾಡಿ, ಕಿಟಕಿಗಳಿಗೆ ಪರದೆ ಹಾಕಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಂಬಾದಲ್ಲಿ ಹಲವು ಪಾಕ್ ಉಗ್ರರ ಹತ್ಯೆ

    ಅಮೃತಸರ DPRO ಮಾತನಾಡಿ, ಯಾವುದೇ ಕಾರಣಕ್ಕೂ ಭಯಪಡಬೇಡಿ. ಸೈರನ್ ಮೊಳಗುತ್ತದೆ. ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಸಂದೇಶ ರವಾನಿಸುತ್ತೇವೆ. ನಮ್ಮ ಸೈನಿಕರು ಕಾರ್ಯಪ್ರವೃತ್ತರಾಗಿದ್ದಾರೆ. ನಾವೆಲ್ಲರೂ ಮನೆಯಲ್ಲಿಯೇ ಇದ್ದು ಅವರಿಗೆ ಬೆಂಬಲ ನೀಡಬೇಕು. ಭಯಪಡುವ ಅಗತ್ಯವಿಲ್ಲ,” ಎಂದು ಅವರು ಹೇಳಿದ್ದಾರೆ. ಈ ಮಾತನ್ನು ಅವರು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ನ ಪ್ರಮುಖ ಎಫ್‌-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ

  • ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಶ್ರೀನಗರ (ರಾಂಬನ್): ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಎರಡು ಪ್ರಮುಖ ಜಲವಿದ್ಯುತ್ ಯೋಜನೆಗಳಾದ ಸಲಾಲ್ ಮತ್ತು ಬಾಗ್ಲಿಹಾರ್ ಡ್ಯಾಂಗಳಲ್ಲಿ (Salal And Baglihar Dam) ಜಲಾಶಯ ಸಾಮರ್ಥ್ಯವನ್ನು ಹೆಚ್ಚಿಸುವ ಕಾಮಗಾರಿಯನ್ನು ಭಾರತ ಆರಂಭಿಸಿದೆ. ಈ ಕಾಮಗಾರಿಯಿಂದ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

    ಸಲಾಲ್ (690 ಮೆಗಾವ್ಯಾಟ್) ಮತ್ತು ಬಾಗ್ಲಿಹಾರ್ (900 ಮೆಗಾವ್ಯಾಟ್) ಜಲವಿದ್ಯುತ್ ಯೋಜನೆಗಳಲ್ಲಿ ಜಲಾಶಯದಲ್ಲಿ ಶೇಖರವಾದ ಹೂಳು ತೆಗೆದುಹಾಕಲು ʻಫ್ಲಶಿಂಗ್ʼ ಪ್ರಕ್ರಿಯೆಯನ್ನು ಮೇ 1 ರಿಂದ 3 ದಿನಗಳ ಕಾಲ ನಡೆಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!

    ಈ ಕಾಮಗಾರಿಯನ್ನು ಭಾರತದ (India) ಅತಿದೊಡ್ಡ ಜಲವಿದ್ಯುತ್ ಕಂಪನಿಯಾದ ರಾಷ್ಟ್ರೀಯ ಜಲವಿದ್ಯುತ್ ನಿಗಮ (NHPC) ಹಾಗೂ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಜಂಟಿಯಾಗಿ ನಿರ್ವಹಿಸಿದ್ದಾರೆ. ಈ ಪ್ರಕ್ರಿಯೆಯಿಂದ ಜಲಾಶಯದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಟರ್ಬೈನ್‌ಗಳಿಗೆ ಹಾನಿಯಾಗದಂತೆ ರಕ್ಷಿಸಿ, ವಿದ್ಯುತ್ ಉತ್ಪಾದನೆಯ ದಕ್ಷತೆಯನ್ನು ಸುಧಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿದೇಶಿ ಕಂಪನಿಗಳಿಂದಲೂ ಶಾಕ್‌ – ಭಾರತಕ್ಕೆ ಬಿಸಿ ಮುಟ್ಟಿಸಲು ಹೋಗಿ ಕೈ ಸುಟ್ಟುಕೊಂಡ ಪಾಕ್‌!

    ಸಿಂಧೂ ನದಿ ಜಲ ಒಪ್ಪಂದದ ಪ್ರಕಾರ, ಭಾರತವು ಚಿನಾಬ್, ಝೇಲಂ ಮತ್ತು ಸಿಂಧೂ ನದಿಗಳಲ್ಲಿ ಜಲಾಶಯಗಳನ್ನು ಸಂಗ್ರಹಿಸುವ ಡ್ಯಾಂಗಳನ್ನು ನಿರ್ಮಿಸದೆ ಕೇವಲ ʻರನ್-ಆಫ್-ದಿ-ರಿವರ್ʼ ಜಲವಿದ್ಯುತ್ ಯೋಜನೆಗಳನ್ನು (Hydroelectric Projects) ನಿರ್ಮಿಸಬಹುದಾಗಿತ್ತು. ಆದರೆ, ಈ ಒಪ್ಪಂದವನ್ನು ಏಪ್ರಿಲ್ 2025ರಲ್ಲಿ ಭಾರತವು ಸ್ಥಗಿತಗೊಳಿಸಿದ ಬಳಿಕ, ಈ ಯೋಜನೆಗಳಲ್ಲಿ ಫ್ಲಶಿಂಗ್ ಕಾಮಗಾರಿಯನ್ನು ಆರಂಭಿಸಿದೆ. ಇದನ್ನೂ ಓದಿ: ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ

    ಪಾಕಿಸ್ತಾನದ ಕೃಷಿ ಮತ್ತು ಜಲವಿದ್ಯುತ್ ಉತ್ಪಾದನೆಗೆ ಭಾರತದ ಮೂಲಕ ಹರಿಯುವ ನದಿಗಳು ಅತಿ ಮುಖ್ಯವಾಗಿವೆ. ಒಪ್ಪಂದದ ಸ್ಥಗಿತಗೊಳಿಕೆಯಿಂದಾಗಿ ಪಾಕಿಸ್ತಾನದ 80% ಕೃಷಿ ಭೂಮಿಗೆ ನೀರಿನ ಪೂರೈಕೆ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಪಾಕಿಸ್ತಾನವು ಈ ಕ್ರಮವನ್ನು ಯುದ್ಧದ ಕೃತ್ಯ ಎಂದು ಕರೆದಿದ್ದು, ಅಂತಾರಾಷ್ಟ್ರೀಯ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದೆ.

    ಫ್ಲಶಿಂಗ್ ಪ್ರಕ್ರಿಯೆಯು ಜಲಾಶಯವನ್ನು ಬಹುತೇಕ ಖಾಲಿ ಮಾಡಿ, ಹೂಳು ತೆಗೆದುಹಾಕುವ ಕಾರ್ಯವಾಗಿದೆ. ಈ ಕೆಸರಿನ ಶೇಖರಣೆಯಿಂದಾಗಿ ಸಲಾಲ್ ಮತ್ತು ಬಾಗ್ಲಿಹಾರ್ ಯೋಜನೆಗಳ ವಿದ್ಯುತ್ ಉತ್ಪಾದನೆ ಸಾಮರ್ಥ್ಯವು ಗಣನೀಯವಾಗಿ ಕಡಿಮೆಯಾಗಿತ್ತು. ಈ ಪ್ರಕ್ರಿಯೆಯಿಂದ ವಿದ್ಯುತ್ ಉತ್ಪಾದನೆಯ ದಕ್ಷತೆ ಹೆಚ್ಚಾಗುತ್ತದೆ ಮತ್ತು ಟರ್ಬೈನ್‌ಗಳಿಗೆ ಹಾನಿಯಾಗದಂತೆ ರಕ್ಷಿಸಲಾಗುತ್ತದೆ ಎಂದು ಒಬ್ಬ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಉಗ್ರರ ದಾಳಿ ಖಂಡಿಸಿ, ತನಿಖೆಗೆ ಸಹಕರಿಸಿ: ಪಾಕ್‌ಗೆ ಬುದ್ದಿಮಾತು ಹೇಳಿದ ಅಮೆರಿಕ

  • ದೊಡ್ಡ ದುರಂತ ತಪ್ಪಿಸಿದ ಭಾರತೀಯ ಸೇನೆ – 5 ಜೀವಂತ ಬಾಂಬ್ ವಶಕ್ಕೆ

    ದೊಡ್ಡ ದುರಂತ ತಪ್ಪಿಸಿದ ಭಾರತೀಯ ಸೇನೆ – 5 ಜೀವಂತ ಬಾಂಬ್ ವಶಕ್ಕೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ (Poonch) ಭಯೋತ್ಪಾದಕರು ಬಳಸುತ್ತಿದ್ದ ಭೂಗತ ಅಡಗುತಾಣವನ್ನು ಸೇನೆ ಭೇದಿಸಿದ್ದು, 5 ಜೀವಂತ ಬಾಂಬ್ ವಶಕ್ಕೆ ಪಡೆದಿದೆ. ಈ ಮೂಲಕ ಭಾರತೀಯ ಸೇನೆಯು (Indian Army) ಅತಿದೊಡ್ಡ ದುರಂತವನ್ನು ತಪ್ಪಿಸಿದೆ.

    ಭಾನುವಾರ ಸಂಜೆ ಪೂಂಚ್‌ನ ಸುರನ್‌ಕೋಟ್(Surankot) ಅರಣ್ಯದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರರ ಅಡಗುತಾಣದಲ್ಲಿ 5 ಸ್ಫೋಟಕಗಳು, ಐಇಡಿಯಿದ್ದ 3 ಟಿಫನ್ ಬಾಕ್ಸ್, 2 ಸ್ಟೀಲ್ ಬಕೆಟ್ ಪತ್ತೆಯಾಗಿವೆ. ಇದನ್ನೂ ಓದಿ: ಅಮೆರಿಕದ ಹೊರಗಡೆ ತಯಾರಾದ ಸಿನಿಮಾಗಳಿಗೆ 100% ಸುಂಕ – ಟ್ರಂಪ್ ಘೋಷಣೆ

    ಭದ್ರತಾ ಪಡೆಯು ಅಡಗುತಾಣದಲ್ಲಿ ಪತ್ತೆಯಾದ ಸಂಹವನ ಉಪಕರಣವನ್ನು ವಶಕ್ಕೆ ಪಡೆದಿದೆ. ಕಳೆದ ಕೆಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಭಯೋತ್ಪಾದಕ ಕೇಂದ್ರಬಿಂದುವಾಗಿದೆ. ಇದನ್ನೂ ಓದಿ: ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

    ಭಯೋತ್ಪಾದಕರ (Terrorists) ಈ ಅಡಗುತಾಣವನ್ನು ಪತ್ತೆ ಹಚ್ಚುವ ಮೂಲಕ ಸೇನೆಯು ಅತಿದೊಡ್ಡ ದುರಂತವನ್ನೇ ತಪ್ಪಿಸಿದೆ. ಅಲ್ಲದೇ ಪಹಲ್ಗಾಮ್ ದಾಳಿಯ(Pahalgam Attack) ಬಳಿಕ ಉಗ್ರರು ಜಮ್ಮು ಕಾಶ್ಮೀರದಲ್ಲಿ ಮತ್ತೆ ದಾಳಿಗೆ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

  • ಉಗ್ರರಿಗೆ ಆಹಾರ, ಆಶ್ರಯ ನೀಡಿದ್ದ ವ್ಯಕ್ತಿ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಸಾವು

    ಉಗ್ರರಿಗೆ ಆಹಾರ, ಆಶ್ರಯ ನೀಡಿದ್ದ ವ್ಯಕ್ತಿ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಉಗ್ರರಿಗೆ ಆಹಾರ ಮತ್ತು ಆಶ್ರಯ ನೀಡಿ ಸಹಾಯ ಮಾಡಿದ್ದ ವ್ಯಕ್ತಿಯೊಬ್ಬ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವಾಗ ನದಿಗೆ ಹಾರಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    23 ವರ್ಷದ ಇಮಿತಿಯಾಜ್ ಅಹ್ಮದ್ ಮ್ಯಾಗ್ರೆ ನದಿಗೆ ಹಾರಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹೌತಿ ಬಂಡುಕೋರ ಮೇಲೆ ಸರಣಿ ದಾಳಿ ನಡೆಸಿ ಪೆಟ್ಟು ಕೊಡ್ತೇವೆ: ಬೆಂಜಮಿನ್ ನೆತನ್ಯಾಹು

    ಶನಿವಾರ (ಮೇ 3) ಪೊಲೀಸರು ಮ್ಯಾಗ್ರೆನನ್ನ ಬಂಧಿಸಿದ್ದರು. ವಿಚಾರಣೆ ವೇಳೆ ಕುಲ್ಗಾಮ್‌ನ ತಂಗ್‌ಮಾರ್ಗ್‌ನಲ್ಲಿರುವ ಕಾಡಿನಲ್ಲಿ ಅಡಗಿರುವ ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿರುವುದಾಗಿ ಆತ ಒಪ್ಪಿಕೊಂಡಿದ್ದ. ಬಳಿಕ ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಲು ಭದ್ರತಾ ಪಡೆ ಅಧಿಕಾರಿಗಳು ಆರೋಪಿಯನ್ನು ಕರೆದೊಯ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ರಜೆ ರದ್ದು – ಅತ್ತ DRDOದಿಂದ ಏರ್‌ಶಿಪ್‌ ಪ್ರಯೋಗ ಯಶಸ್ವಿ

    ಭಾನುವಾರ ಬೆಳಗ್ಗೆ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ನಡೆಸುವ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ವೇಶಾವ್‌ ನದಿಗೆ ಹಾರಿದ್ದಾನೆ. ಆದರೆ ನೀರಿನ ರಭಸಕ್ಕೆ ಸಿಲುಕಿ, ನೀರಿನಲ್ಲೇ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ ನೀರಿನಲ್ಲಿ ಮುಳುಗುತ್ತಿರುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಪಹಲ್ಗಾಮ್‌ ದಾಳಿಯ ಬಳಿಕ ಫಸ್ಟ್‌ ಟೈಂ ಮೋದಿ ಭೇಟಿಯಾದ ಜಮ್ಮು-ಕಾಶ್ಮೀರ ಸಿಎಂ

    ಪಹಲ್ಗಾಮ್‌ ದಾಳಿಯ ಬಳಿಕ ಫಸ್ಟ್‌ ಟೈಂ ಮೋದಿ ಭೇಟಿಯಾದ ಜಮ್ಮು-ಕಾಶ್ಮೀರ ಸಿಎಂ

    ಶ್ರೀನಗರ: ಕಳೆದ ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ (Pahalgam Terrorist Attack) ಬಳಿಕ ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್‌ ಅಬ್ದುಲ್ಲಾ (Omar Abdullah) ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನ ಭೇಟಿಯಾಗಿದ್ದಾರೆ.

    ದೆಹಲಿಯ (Delhi) ಪ್ರಧಾನಿ ನಿವಾಸದಲ್ಲಿಂದು ಮೋದಿ ಭೇಟಿಯಾದ ಒಮರ್‌ ಅಬ್ಲುಲ್ಲಾ ಅವರು ಉಗ್ರರ ದಾಳಿ ಹಾಗೂ ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಹಾಗೂ ದೇಶದ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಸರ್ಕಾರ (Central Government) ಯಾವುದೇ ನಿರ್ಧಾರ ತೆಗೆದುಕೊಂಡರೂ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.  ಇದನ್ನೂ ಓದಿ: ಜಲ ಮಾರ್ಗ ಬಂದ್ – ಪಾಕ್‌ಗೆ ಹೋಗುವ, ಬರುವ ಹಡಗುಗಳ ಸಂಚಾರಕ್ಕೆ ಬ್ರೇಕ್ ಹಾಕಿದ ಭಾರತ

    ಇನ್ನೂ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಭದ್ರತಾ ಸವಾಲುಗಳು ಹೆಚ್ಚಾಗುತ್ತಿದ್ದು, ಕೇಂದ್ರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚೆನ್ನೈಗೆ ಬಂದು ಶ್ರೀಲಂಕಾಗೆ ಹೋದ್ರಾ ಪಹಲ್ಗಾಮ್ ಉಗ್ರರು? – ಶ್ರೀಲಂಕಾ ಏರ್‌ಪೋರ್ಟಲ್ಲಿ ತಪಾಸಣೆ

    ಜನರು ಒಗ್ಗಟ್ಟಿನಿಂದ ಇರಬೇಕು: ಫಾರೂಕ್
    ಇದಕ್ಕೂ ಮುನ್ನ ಜೆ&ಕೆ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ದಾಳಿಯನ್ನು ಖಂಡಿಸಿದರು. ಭಯೋತ್ಪಾದನೆಯ ವಿರುದ್ಧ ದೇಶದ ಜನ ಒಗ್ಗಟ್ಟಿನಿಂದ ನಿಲ್ಲುವಂತೆ ಮನವಿ ಮಾಡಿದರು. ದಾಳಿಯಲ್ಲಿ ಭಾಗಿಯಾಗಿರುವವರು ಮಾನವೀಯತೆಯ ಶತ್ರುಗಳು, ಅವರು ನರಕದಲ್ಲಿ ಕೊಳೆಯುತ್ತಾರೆ. ಪಾಕ್‌ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಿಂಧೂ ನದಿ ನೀರು ಒಪ್ಪಂದವನ್ನು ಪುನರುಚ್ಚರಿಸಬೇಕು ಎಂದು ಒತ್ತಾಯಿಸಿದರು.  ಇದನ್ನೂ ಓದಿ: ಎಲ್ಲಾ ಹಿಂದೂಗಳನ್ನು ಸಾಲಾಗಿ ನಿಲ್ಲುವಂತೆ ಹೇಳಿದ್ರು: ಪಹಲ್ಗಾಮ್‌ ಭೀಕರತೆ ಬಿಚ್ಚಿಟ್ಟ ಸುಬೋಧ್‌

    ಏ.22ರಂದು ನಡೆದಿತ್ತು ನರಮೇಧ
    ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್‌ನಲ್ಲಿ ಕಳೆದ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಸೇರಿ 26 ಮಂದಿ ಬಲಿಯಾಗಿದ್ದಾರೆ. 2019ರಲ್ಲಿ 40 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಉಗ್ರರು ಕಣಿವೆಯಲ್ಲಿ ನಡೆಸಿದ ಭೀಕರ ದಾಳಿ ಇದಾಗಿದೆ. ಇದುವರೆಗೂ ಭದ್ರತಾಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಉಗ್ರರು, ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಮಾಯಕ ಪ್ರವಾಸಿಗರನ್ನು ಟಾರ್ಗೆಟ್‌ ಮಾಡಿ ಹತ್ಯೆ ಗೈದಿದ್ದರು. ಈ ಘಟನೆ ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ತಂದೊಡ್ಡಿದೆ.

  • Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

    Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

    ನವದೆಹಲಿ: ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ (Pahalgam Terrorist Attack) ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಬುಧವಾರ (ಏ.30) ಮಹತ್ವದ ಸರಣಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ.

    ಬೆಳಗ್ಗೆ 11 ಗಂಟೆ ಸುಮಾರಿಗೆ ರಾಷ್ಟ್ರೀಯ ಭದ್ರತೆಯ ಕುರಿತು ದೇಶದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಭದ್ರತಾ ಸಂಪುಟ ಸಮಿತಿ (CCS) ಸಭೆ ನಡೆಸಲಿದೆ. ಇದಾದ ಬಳಿಕ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ (CCPA), ನಂತರ ಕೇಂದ್ರ ಸಂಪುಟ ಸಮಿತಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದೆ. ಇದನ್ನೂ ಓದಿ: 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್‌ ಪ್ರಜೆಗಳಿಗೆ ಭಾರತ ವಾರ್ನಿಂಗ್‌ – ಪಾಕ್‌ ಸಂಬಂಧಕ್ಕೆ ಎಳ್ಳುನೀರು

    ಪಹಲ್ಗಾಮ್ ದಾಳಿಯ ನಂತರ ನಡೆಯುತ್ತಿರುವ ಅತ್ಯುನ್ನತ ಮಟ್ಟದ 2ನೇ ಸುತ್ತಿನ ಸಭೆ ಇದಾಗಿದ್ದು, ಭದ್ರತೆ ಸಿದ್ಧತೆಗಳ ಕುರಿತು ಚರ್ಚೆ ನಡೆಯಲಿದೆ. ಜೊತೆಗೆ ಪಾಕಿಸ್ತಾನದ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಆರೋಗ್ಯ ಸಚಿವ ಜೆ.ಪಿ ನಡ್ಡಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರ ಹಿರಿಯ ಸಚಿವರೂ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಆರ್ಥಿಕ ವ್ಯವಹಾರಗಳ ಸಮಿತಿ ಸಭೆ ನಡೆಸಲಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ 48 ಪ್ರವಾಸಿ ತಾಣಗಳು ಬಂದ್‌ – ಉಗ್ರರ ಸಂಭಾವ್ಯ ದಾಳಿಯ ಎಚ್ಚರಿಕೆ ಕೊಟ್ಟ ಗುಪ್ತಚರ

    ಏ.23ರಂದು ಪ್ರಧಾನಿ ಮೋದಿ ನೇತೃತ್ವದಲ್ಲೇ ಸತತ 3 ಗಂಟೆಗಳ ಕಾಲ ಕೇಂದ್ರ ಸಂಪುಟ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್‌ (Attari Border) ಅನ್ನು ತಕ್ಷಣದಿಂದ ಮುಚ್ಚುವುದು, ಸಾರ್ಕ್ ವಿಸಾ ವಿನಾಯಿತಿ ಯೋಜನೆ ಪಾಕಿಸ್ತಾನದವರಿಗೆ ರದ್ದು, ರಾಯಭಾರ ಕಚೇರಿ ಸಿಬ್ಬಂದಿ ಹಂತಹಂತವಾಗಿ ಕಡಿತಗೊಳಿಸುವುದು ಮತ್ತು 1960ರ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಸಮಿತಿ ತೆಗೆದುಕೊಂಡಿತ್ತು. ಈ ಮೂಲಕ ಪಾಕಿಸ್ತಾನ ಜೊತೆಗಿನ ರಾಜತಾಂತ್ರಿಕ ಸಂಬಂಧಕ್ಕೆ ಎಳ್ಳುನೀರು ಬಿಡಲಾಗಿತ್ತು. ಇದನ್ನೂ ಓದಿ: Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

  • ಪಹಲ್ಗಾಮ್ ದಾಳಿ ಬಳಿಕ ಪಾಕ್‌ನಿಂದ ಆಮದಾಗ್ತಿದ್ದ ಡ್ರೈಫ್ರೂಟ್ಸ್‌ ಪೂರೈಕೆಯಲ್ಲಿ ವ್ಯತ್ಯಯ – ಬೆಲೆ ಏರಿಕೆ ಆತಂಕ!

    ಪಹಲ್ಗಾಮ್ ದಾಳಿ ಬಳಿಕ ಪಾಕ್‌ನಿಂದ ಆಮದಾಗ್ತಿದ್ದ ಡ್ರೈಫ್ರೂಟ್ಸ್‌ ಪೂರೈಕೆಯಲ್ಲಿ ವ್ಯತ್ಯಯ – ಬೆಲೆ ಏರಿಕೆ ಆತಂಕ!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ (Pehalgam Terrorist Attack) ಮೆರೆದಿದ್ದು, ಸುಮಾರು 28 ಪ್ರವಾಸಿಗರು ಉಗ್ರರ ದಾಳಿಗೆ ಸಾವನ್ನಪ್ಪಿದ್ರು. ಇದರ ಎಫೆಕ್ಟ್ ನಿಂದಾಗಿ ಕಾಶ್ಮೀರದಿಂದ ಬೆಂಗಳೂರಿಗೆ ಬರಬೇಕಾಗಿದ್ದ ಡ್ರೈಫ್ರೂಟ್ಸ್‌ (Dry Fruits) ಹಾಗೂ ಹಣ್ಣುಗಳ ಸರಬರಾಜಿನಲ್ಲಿ ಕೆಲವೆಡೆ ವ್ಯತ್ಯಯವಾಗ್ತಿದೆ.

    ಕಾಶ್ಮೀರ ಭೂ ಲೋಕದ ಸ್ವರ್ಗ.., ಹಿಮನದಿಗಳ ಭೂಸಿರಿಯಂತಲೇ ಫೇಮಸ್ ಆಗಿದೆ. ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ಮಸಾಲೆ ಪದಾರ್ಥಗಳು, ಡ್ರೈ ಫ್ರೂಟ್ಸ್‌ ಹಾಗೂ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಕಾಶ್ಮೀರದಿಂದ ದೇಶದ ನಾನಾ ಭಾಗಗಳಿಗೆ ಡ್ರೈಫ್ರೂಟ್ಸ್‌ಗಳು ಸರಬರಾಜು ಆಗ್ತಿದ್ದವು. ಆದ್ರಲ್ಲೂ ಶ್ರೀನಗರ, ಜಮ್ಮು ಹಾಗೂ ಪಹಲ್ಗಾಮ್ ನಿಂದ ಒಣಹಣ್ಣುಗಳು ಪೂರೈಕೆಯಾಗ್ತಿದ್ದವು. ಅದ್ಯಾವಾಗ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದ್ರೋ.. ಅಲ್ಲಿಂದ ಭಾರತ ಆಮದು-ರಪ್ತುಗಳ ವಿಚಾರದಲ್ಲಿ ಕಡಿವಾಣ ಹಾಕಿದೆ. ಇದರಿಂದ ಭಾರತದ ವಿವಿಧೆಡೆಗೆ ಬರುತ್ತಿದ್ದ ಕೆಲ ಡ್ರೈಫ್ರೂಟ್ಸ್‌ ಹಣ್ಣಗಳ ಬೆಲೆ ಗಗನಕ್ಕೇರಿದೆ.

    ಹಾಗಿದ್ರೆ.., ಯಾವೆಲ್ಲ ಡ್ರೈಫ್ರೂಟ್ಸ್‌ಗಳ ಬೆಲೆ ದುಬಾರಿಯಾಗಲಿದೆ.. ಅವುಗಳ ಜೊತೆ ಬೇರೆ ವಸ್ತುಗಳು ಗಗನಕ್ಕೇರುವ ಸಾಧ್ಯತೆಗಳಿವೆ ಅನ್ನೋದರ ಡಿಟೇಲ್ಸ್‌ ಇಲ್ಲಿದೆ. ಇದನ್ನೂ ಓದಿ: ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು

    ಯಾವೆಲ್ಲಾ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಸಾಧ್ಯತೆ?
    ಪಾಕ್‌ನಿಂದ ಭಾರತಕ್ಕೆ ಆಮದು ಆಗ್ತಿದ್ದ ಡ್ರೈಫ್ರೂಟ್ಸ್‌ ಪೈಲಿ ಬಾದಾಮಿ, ಗೋಡಂಬಿ, ಪಿಸ್ತಾ, ಕರ್ಜೂರ, ಒಣದ್ರಾಕ್ಷಿ, ವಾಲ್‌ನಟ್ಸ್, ಒಣ ಅಪ್ರಿಕಾಟ್‌ಗಳೂ ದುಬಾರಿಯಾಗುವ ಸಾಧ್ಯತೆಗಳಿವೆ. ಇದರೊಂದಿಗೆ ಜೊತೆಗೆ ಕಲ್ಲು ಉಪ್ಪು, ಕನ್ನಡಕದಲ್ಲಿ ಬಳಸಲಾಗುವ ಆಪ್ಟಿಕಲ್ ಲೆನ್ಸ್‌, ಗೋಧಿ, ಅಕ್ಕಿ, ದ್ವಿದಳ ಧಾನ್ಯಗಳು, ಸಿಮೆಂಟ್ ಕಲ್ಲು, ಸುಣ್ಣ, ಹತ್ತಿ, ಉಕ್ಕು, ಚರ್ಮದ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಇನ್ನು, 20-25 ತರಹದ ಒಣಹಣ್ಣುಗಳು ಕಾಶ್ಮೀರದಿಂದ ಬೆಂಗಳೂರಿಗೆ ಬರುತ್ತಿದ್ದವು. ಇದೀಗ ಆಮದು ಬಂದ್ ಆಗಿರೋದ್ರಿಂದ ಗ್ರಾಹಕರ ಡಿಮ್ಯಾಂಡ್ ಹೆಚ್ಚಾಗಿದ್ದು, ಪೂರೈಕೆಯಲ್ಲಿ ವ್ಯತ್ಯಾಯವಾಗಿದೆ. ಹೀಗೆ ಮುಂದುವರೆದ್ರೇ ಬೆಲೆ ಏರಿಕೆಯಾಗಲಿದೆ ಅಂತಾರೆ ಡ್ರೈ ಪ್ರೂಟ್ಸ್ ವ್ಯಾಪಾರಿಗಳು. ಇದನ್ನೂ ಓದಿ: ಕೋಲಾರದಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ – ಬೆಂಗಳೂರು ಮೂಲದ ವ್ಯಕ್ತಿ ಸಾವು!

  • ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ ಹಿಡಿದಿದ್ದ ರೀಲ್ಸ್‌ ವಿಡಿಯೋಗ್ರಾಫರ್‌ ಎನ್‌ಐಎಗೆ ಪ್ರಮುಖ ಸಾಕ್ಷಿ

    ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ ಹಿಡಿದಿದ್ದ ರೀಲ್ಸ್‌ ವಿಡಿಯೋಗ್ರಾಫರ್‌ ಎನ್‌ಐಎಗೆ ಪ್ರಮುಖ ಸಾಕ್ಷಿ

    ಶ್ರೀನಗರ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯ (Pahalgam Terrorist Attack) ಕುರಿತು ತನಿಖೆ ಶುರು ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಪ್ರಮುಖ ಸಾಕ್ಷಿ ಸಿಕ್ಕಿದೆ. ದಾಳಿ ನಡೆಯುವ ವೇಳೆ ಬೈಸರನ್‌ನಲ್ಲಿ (Baisaran) ಪ್ರವಾಸಿಗರಿಗಾಗಿ ರೀಲ್ಸ್‌ ಚಿತ್ರೀಕರಿಸುತ್ತಿದ್ದ ಸ್ಥಳೀಯ ವಿಡಿಯೋ ಗ್ರಾಫರ್‌ ಪ್ರಮುಖ ಸಾಕ್ಷಿದಾರನಾಗಿ ಮುಂದೆ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಹೌದು. ಕೇಂದ್ರ ಗೃಹಸಚಿವಾಲಯ ನೀಡಿದ ನಿರ್ದೇಶದ ಮೇರೆಗೆ ಏ.22ರಂದು ಪಹಲ್ಗಾಮ್‌ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ. ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡದೊಂದಿಗೆ ಘಟನಾ ಸ್ಥಳದಲ್ಲೇ ಬೀಡುಬಿಟ್ಟಿರುವ ಎನ್‌ಐಎ ಸಾಕ್ಷ್ಯ ಹುಡುಕಾಟವನ್ನು ತೀವ್ರಗೊಳಿಸಿದೆ. ಈ ಮಧ್ಯೆ ಪ್ರಮುಖ ಸಾಕ್ಷಿಯೊಂದು ಎನ್‌ಐಎಗೆ ಸಿಕ್ಕಿದೆ. ಇದನ್ನೂ ಓದಿ: ಭಾರತದಲ್ಲಿ ಪಟಾಕಿ ಸಿಡಿದರೂ, ಪಾಕಿಸ್ತಾನವನ್ನೇ ದೂಷಿಸುತ್ತಾರೆ: ಶಾಹಿದ್‌ ಅಫ್ರಿದಿ

    ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆಯುತ್ತಿದ್ದಂತೆ ಭಯಕ್ಕೆ ಮರ ಏರಿದ್ದ ರೀಲ್ಸ್‌ ವಿಡಿಯೋ ಗ್ರಾಫರ್‌ ಇಡೀ ಕೃತ್ಯವನ್ನು ಮರದ ಮೇಲೆ ಕುಳಿತುಕೊಂಡೆ ಸೆರೆ ಹಿಡಿಯುತ್ತಿದ್ದರು. ಇದೀಗ ಎನ್‌ಐಎಗೆ ಆ ವಿಡಿಯೋ ಗ್ರಾಫರ್‌ (Reels Videographer) ಪ್ರಮುಖ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ ಇರ್ತಾರೆ ಹೋಗ್ತಾರೆ, ಆದ್ರೆ ನಮ್ಗೆ ದೇಶ ರಕ್ಷಣೆ ಮುಖ್ಯ: ಮಲ್ಲಿಕಾರ್ಜುನ ಖರ್ಗೆ

    ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ:
    ಸದ್ಯ ಲಭ್ಯವಾಗಿರುವ ವಿಡಿಯೋ ಪ್ರಕಾರ, ನಾಲ್ವರು ಉಗ್ರರು ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದರು. ಇಬ್ಬರು ಹುಲ್ಲುಗಾವಲು ಪ್ರದೇಶದ ಎರಡೂ ಬದಿ ಅವಿತುಕೊಂಡಿದ್ದರೆ, ಮತ್ತಿಬ್ಬರು ಅಲ್ಲೇ ಇದ್ದ ತಿಂಡಿ ಅಂಗಡಿ ಬಳಿ ಅವಿತಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ, ಅಂಗಡಿಗಳ ಹಿಂದೆ ಅಡಗಿಕೊಂಡಿದ್ದ ಇಬ್ಬರು ಭಯೋತ್ಪಾದಕರು ಹೊರಬಂದರು. ಆಗ ಅಲ್ಲಿ ತಿಂಡಿ ತಿನ್ನುತ್ತಿದ್ದ ಸ್ಥಳೀಯರಲ್ಲದವರನ್ನ ಧರ್ಮದ ಬಗ್ಗೆ ಕೇಳುತ್ತಾ ಬಂದವರು. ಕೆಲವರು ತಪ್ಪಿಸಿಕೊಳ್ಳು ತಾನು ಮುಸ್ಲಿಂ ಎಂದು ಹೇಳಿದಾಗ ಕಲಿಮಾ ಪಠಿಸಲು ಹೇಳಲಾಯಿತು. ಬಳಿಕ ಕಲಿಮಾ ಪಠಿಸಲು ಸಾಧ್ಯವಾಗದವರನ್ನ ಪಾಯಿಂಟ್‌ ಬ್ಲಾಕ್‌ನಲ್ಲಿ ಶೂಟ್‌ ಮಾಡುತ್ತಾ ಬಂದರು. ಗುಂಡು ಹಾರಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಭೀತಿ ಉಂಟಾಗಿ ಕೆಲವರು ದಿಕ್ಕಾಪಾಲಾಗಿ ಓಡಿದರು. ಈ ಸಂದರ್ಭದಲ್ಲಿ ಹುಲ್ಲುಗಾವಲಿನ ಜಿಪ್‌ಲೈನ್‌ನಲ್ಲಿ ಅವಿತಿದ್ದವರೂ ಗುಂಡು ಹಾರಿಸಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಗಳು ತಿಳಿಸಿವೆ.

    ಪ್ರತ್ಯಕ್ಷದರ್ಶಿಗಳ ವಿಚಾರಣೆ
    ಸದ್ಯ ಸ್ಥಳದಲ್ಲಿ ಬೀಡುಬಿಟ್ಟಿರುವ ಎನ್‌ಐಎ ತಂಡ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸುತ್ತಿದೆ. ಜೊತೆಗೆ ಉಗ್ರರ ಕ್ರಿಯಾಯೋಜನೆಯ ಬಗ್ಗೆ ಸುಳಿವು ಪಡೆಯಲು ಎಂಟ್ರಿ, ಎಕ್ಸಿಟ್‌ ಸ್ಥಳಗಳನ್ನ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಶಿಫ್ಟ್ ಆಗೋದು ಒಳ್ಳೆದು: ಜಗದೀಶ್ ಶೆಟ್ಟರ್