Tag: ಜಮ್ಮು ಮತ್ತು ಕಾಶ್ಮೀರ

  • 100 ಮೀ. ಆಳದ ಕಂದಕಕ್ಕೆ ಬಿದ್ದ ಬಸ್-11 ಸಾವು

    100 ಮೀ. ಆಳದ ಕಂದಕಕ್ಕೆ ಬಿದ್ದ ಬಸ್-11 ಸಾವು

    ಶ್ರೀನಗರ: ಚಾಲಕನ ನಿಯಂತ್ರಣ ತಪ್ಪಿ ಬಸ್‍ವೊಂದು 100 ಮೀ. ಆಳದ ಪ್ರಪಾತಕ್ಕೆ ಬಿದ್ದು 11 ಜನರು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಡಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಲಾಗುತ್ತಿದೆ. ಶ್ರೀನಗರದಿಂದ 175 ಕಿ.ಮೀ. ದೂರದಲ್ಲಿ ಈ ಅವಘಡ ಸಂಭವಿಸಿದೆ.

    ಘಟನೆಯ ವಿವರ:
    ಪ್ರಯಾಣಿಕರನ್ನು ಹೊತ್ತ ಬಸ್ ಇಂದು ಲೋರನ್ ನಿಂದ ಪೂಂಜ್‍ಗೆ ಹೊರಟಿತ್ತು. ಕಿರಿದಾದ ರಸ್ತೆಯಲ್ಲಿ ಚಾಲಕ ಸಾಗುತ್ತಿದ್ದಾಗ ತಿರುವು ಬಂದಿದೆ. ಈ ವೇಳೆ ಚಾಲಕ ನಿಯಂತ್ರಣ ತಪ್ಪಿ ಬಸ್ 100 ಮೀ. ಆಳದ ಪ್ರಪಾತಕ್ಕೆ ಬಿದ್ದಿದೆ. ಬಸ್ ಪಲ್ಟಿ ಹೊಡೆಯುತ್ತಾ ಎರಡು ಕಂದಕದ ಮಧ್ಯದಲ್ಲಿ ಹರಿಯುವ ಕಿರಿದಾದ ನದಿಯಲ್ಲಿ ಬಿದ್ದಿದೆ. ಬಸ್ ಸಂಪೂರ್ಣವಾಗಿ ಜಖಂಗೊಂಡಿದೆ.

    ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಸ್ ನಲ್ಲಿದ್ದ 11 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಕ್ಸಲ್ ಚಟುವಟಿಕೆ ತೊರೆದು ಆರ್ಮಿ ಸೇರಿದ್ದ ಯೋಧ ವೀರ ಮರಣ

    ನಕ್ಸಲ್ ಚಟುವಟಿಕೆ ತೊರೆದು ಆರ್ಮಿ ಸೇರಿದ್ದ ಯೋಧ ವೀರ ಮರಣ

    ಶ್ರೀನಗರ: ನಕ್ಸಲ್ ಚಟುವಟಿಕೆ ಬಿಟ್ಟು ಭಾರತೀಯ ಸೇನೆ ಸೇರಿ, ಉಗ್ರರ ವಿರುದ್ಧ ಹೋರಾಡುತ್ತಲೇ ಯೋಧರೊಬ್ಬರು ವೀರ ಮರಣವಪ್ಪಿದ್ದಾರೆ.

    ಭಾರತೀಯ ಸೇನೆಯ ಲ್ಯಾನ್ಸ್ ನಾಯಕ ನಝೀರ್ ಅಹ್ಮದ್ ವಾನಿ ಮೃತ ಯೋಧ. ಉಗ್ರರು ನಡೆಸಿದ ದಾಳಿಯಲ್ಲಿ ಗುಂಡು ತಾಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಝೀರ್ ಅವರು ಸೋಮವಾರ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಇಬ್ಬರು ಮಕ್ಕಳಿದ್ದಾರೆ ಎಂದು ವರದಿಯಾಗಿದೆ.

    ಭಾರತೀಯ ಸೇನೆ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ 6 ಜನ ಉಗ್ರರನ್ನು ಸೈನಿಕರು ಹತ್ಯೆ ಮಾಡಿದ್ದರು. ಆದರೆ ನಝೀರ್ ಅಹ್ಮದ್ ವಾನಿ ಅವರಿಗೆ ಉಗ್ರರು ಸಿಡಿಸಿದ ಗುಂಡು ತಾಕಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಕೊನೆ ಉಸಿರೆಳಿದಿದ್ದಾರೆ.

    ನಝೀರ್ ಯಾರು?:
    ನಝೀರ್ ಅಹ್ಮದ್ ವಾನಿ ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನ ಚೆಕಿ ಅಸ್ಮುಜಿ ಗ್ರಾಮದ ನಿವಾಸಿ. ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಪರವಾಗಿದ್ದ ನಝೀರ್ ಅವರು ಉಗ್ರವಾದಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು. ಆದರೆ ನಾನು ಹೋಗುತ್ತಿರುವ ದಾರಿ ಸರಿಯಲ್ಲ ಅಂತಾ ಅರಿತ ನಝೀರ್ ಅವರು, ನಕ್ಸಲ್ ಚಟುವಟಿಕೆಯಿಂದ ಹೊರಬಂದು ಭಾರತೀಯ ಸೈನ್ಯಕ್ಕೆ ಶರಣಾಗಿದ್ದರು. ಇದನ್ನು ಓದಿ: ಉಗ್ರರೊಂದಿಗೆ ಹೋರಾಟ-ವೀರ ಮರಣವನ್ನಪ್ಪಿದ ಬೆಳಗಾವಿ ಯೋಧ

    ಬಳಿಕ ಸೇನೆ ನೀಡಿದ ಅವಕಾಶ ಪಡೆದುಕೊಂಡು ನಝೀರ್ ಅವರು 2004ರಲ್ಲಿ 162ನೇ ಟೆರಿಟೋರಿಯಲ್ ಆರ್ಮಿ ಬಟಾಲಿಯನ್‍ಗೆ ಸೇರಿಕೊಂಡಿದ್ದರು. ಉತ್ತಮ ಸೇವೆ, ನಿಷ್ಠೆಗೆ ಹೆಸರಾಗಿ ಲ್ಯಾನ್ಸ್ ನಾಯಕ ಆಗಿ ನೇಮಕಗೊಂಡಿದ್ದರು. ನಝೀರ್ ಅವರಿಗೆ 2007ರಲ್ಲಿ ಶೌರ್ಯ ಪ್ರಶಸ್ತಿ ಕೂಡ ಲಬಿಸಿತ್ತು.

    ಆರ್ಮಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಆರ್ಮಿ ಹಿರಿಯ ಅಧಿಕಾರಿಗಳು ನಝೀರ್ ಅಹ್ಮದ್ ವಾನಿ ಅವರ ವೀರ ಮರಣಕ್ಕೆ ಸಂತಾಪ ಸೂಚಿಸಿದ್ದಾರೆ. ನಝೀರ್ ಅವರ ಸೇವೆ ಹಾಗೂ ಭಾರತೀಯ ಸೇನೆಗೆ ದೇಶದ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹಿಮಪಾತಕ್ಕೆ ಸೇಬು ಬೆಳೆ ಹಾನಿ- ಸಂಚಾರ, ವಿದ್ಯುತ್ ಅಸ್ತವ್ಯಸ್ತ

    ಹಿಮಪಾತಕ್ಕೆ ಸೇಬು ಬೆಳೆ ಹಾನಿ- ಸಂಚಾರ, ವಿದ್ಯುತ್ ಅಸ್ತವ್ಯಸ್ತ

    -ಕ್ಯಾಂಡಲ್ ಬೆಳಕಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದ್ದು, ರಸ್ತೆ, ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಸೇಬು ಗಿಡಗಳ ಮೇಲೆ ಹಿಮ ಬಿದ್ದ ಪರಿಣಾಮ ಭಾರೀ ಹಾನಿ ಉಂಟಾಗಿದೆ.

    ಬೃಹತ್ ಪ್ರಮಾಣದಲ್ಲಿ ಸೇಬು ಗಿಡಗಳು ಹಾಳಾಗಿವೆ. ಇದರಿಂದಾಗಿ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ ಅವರು ಇಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸೇಬು ಬೆಳೆಗಾರರಿಗೆ ಆಗಿರುವ ನಷ್ಟವನ್ನು ಭರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ನವೆಂಬರ್ ಆರಂಭದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹಿಮಪಾತ ಕಂಡು ಬಂದಿದೆ. ಇದೇ ರೀತಿ 2009, 2008 ಮತ್ತು 2004ರಲ್ಲಿ ಹಿಮಪಾತ ಸಂಭವಿಸಿತ್ತು ಅಂತ ಹವಾಮಾನ ಇಲಾಖೆ ತಿಳಿಸಿದೆ ಎಂದು ವರದಿಯಾಗಿದೆ.

    ಕಾಶ್ಮೀರದ ಗುಲ್ಮರ್ಗ್ ಕನಿಷ್ಠ ಮೂರು ಡಿಗ್ರಿ ಸೆಲ್ಸಿಯಸ್ ಹಾಗೂ ಶ್ರೀನಗರದಲ್ಲಿ 1.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ವಿದ್ಯುತ್ ಕಡಿತವಾಗಿದ್ದು, ವಿದ್ಯಾರ್ಥಿಗಳು ಕ್ಯಾಂಡಲ್ ಬೆಳಕಿನಲ್ಲಿ ಪರೀಕ್ಷೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಆಸ್ಪತ್ರೆಗಳಿಗೆ ವಿದ್ಯುತ್ ಕಡಿತದ ಬಿಸಿ ತಟ್ಟಿದೆ. ಹೀಗಾಗಿ ವಿದ್ಯುತ್ ದುರಸ್ತಿ ಕಾರ್ಯದಲ್ಲಿ 7 ಸಾವಿರ ಸಿಬ್ಬಂದಿ ತೊಡಗಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಮುಖಂಡ, ಸಹೋದರನನ್ನು ಗುಂಡಿಕ್ಕಿ ಕೊಲೆಗೈದ ಉಗ್ರರು

    ಬಿಜೆಪಿ ಮುಖಂಡ, ಸಹೋದರನನ್ನು ಗುಂಡಿಕ್ಕಿ ಕೊಲೆಗೈದ ಉಗ್ರರು

    ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಹಿರಿಯ ನಾಯಕ ಹಾಗೂ ಅವರ ಸಹೋದರರನ್ನು ಉಗ್ರರು ಕಿಶ್ತ್‍ವಾರ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

    ರಾಜ್ಯ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹಾರ್ ಹಾಗೂ ಸಹೋದರ ಅಜಿತ್ ಉಗ್ರರ ಗುಂಡಿಗೆ ಬಲಿಯಾದ ದುರ್ದೈವಿಗಳು. ಇಬ್ಬರು ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದರು. ರಾತ್ರಿಯಾಗಿದ್ದರಿಂದ ತಿರುವಿನಲ್ಲಿ ರಸ್ತೆ ವಾಹನ ತಡೆದ ಉಗ್ರರು, ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.

    ಉಗ್ರರ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಸಮೀಪ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ತನಿಖೆ ಆರಂಭವಾಗಿದೆ ಎಂದು ಪೊಲೀಸ್ ಆಯುಕ್ತ ಸಂಜೀವ್ ವರ್ಮಾ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಲ್ಲಾಸ್ಪತ್ರೆಯಲ್ಲಿ  ಕುಡಿಯಲು ಬಾಟಲ್ ಗೆ ನೀರು ತುಂಬಿದ್ರೆ, ನೀರಿನೊಂದಿಗೆ ಬಂತು ಹಾವಿನ ಮರಿ

    ಜಿಲ್ಲಾಸ್ಪತ್ರೆಯಲ್ಲಿ ಕುಡಿಯಲು ಬಾಟಲ್ ಗೆ ನೀರು ತುಂಬಿದ್ರೆ, ನೀರಿನೊಂದಿಗೆ ಬಂತು ಹಾವಿನ ಮರಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ಉಧಮ್‍ಪುರ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಟರ್ ಕೂಲರ್ ನಿಂದ ಬಾಟಲ್ ಗೆ ನೀರು ತುಂಬಿಕೊಳ್ಳುವಾಗ ನೀರಿನೊಂದಿಗೆ ಹಾವಿನ ಮರಿಯೊಂದು ಬಂದಿದೆ.

    ಉಧಮ್‍ಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯ ತಂದೆಯೊಬ್ಬರು ಮಗನಿಗಾಗಿ ವಾಟರ್ ಕೂಲರ್ ನಿಂದ ನೀರು ತುಂಬಿಕೊಳ್ಳುವಾಗ ಕೂಲರ್ ನಿಂದ ಹಾವಿನ ಮರಿಯೊಂದು ಹೊರ ಬಂದಿದೆ.

    ನಾನು ನನ್ನ ಮಗನಿಗೆ ಕುಡಿಯಲು ನೀರು ತುಂಬಿಕೊಂಡು ಬಂದೆ. ನನ್ನ ಮಗ ನೀರು ಕುಡಿಯುವಾಗ ಬಾಟಲ್ ನಲ್ಲಿ ಹಾವಿನ ಮರಿಯೊಂದು ನೋಡಿದೆ. ಕೂಡಲೇ ಅವನಿಂದ ಬಾಟಲ್ ಕಸಿದುಕೊಂಡೆ ಎಂದು ರೋಗಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಇದು ಆಸ್ಪತ್ರೆಯ ಸಿಬ್ಬಂದಿಗೆ ಬೇಜವಬ್ದಾರಿಯನ್ನು ತೋರಿಸುತ್ತದೆ. ಜನರು ರೋಗ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾದರೆ ಇಂತಹ ನೀರನ್ನು ಕುಡಿದರೆ ಮತ್ತಷ್ಟು ಆರೋಗ್ಯ ಕೆಡುತ್ತದೆ ಎಂದು ರೋಗಿಯ ತಂದೆ ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಅಧೀಕ್ಷಕ ಡಾ. ವಿಜಯ್, ಅಂಡರ್ ಗ್ರೌಂಡ್ ಪೈಪ್ ನ್ನು ಕೂಲರ್ ಗೆ ಅಳವಡಿಸಿರಬಹುದು. ಹೀಗಾಗಿ ಆ ಪೈಪ್ ಮೂಲಕವೇ ಹಾವಿನ ಮರಿ ಹೊಂದಿರಬಹುದು ಅಥವಾ ಕೂಲರ್ ಗೆ ಅಳವಡಿಸಿರುವ ಪೈಪ್ ಎಲ್ಲಾದರೂ ಒಡೆದಿರುವ ಸಾಧ್ಯತೆಗಳಿವೆ. ಈ ಕುರಿತು ಜಲ ನೈರ್ಮಲ್ಯ ಇಲಾಖೆಗೆ ತಿಳಿಸಲಾಗಿದೆ ಅಂತಾ ಹೇಳಿದ್ದಾರೆ.

  • ಪಾಕ್‍ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ- ಇಬ್ಬರು ಮಕ್ಕಳು ಬಲಿ

    ಪಾಕ್‍ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ- ಇಬ್ಬರು ಮಕ್ಕಳು ಬಲಿ

    ಶ್ರೀನಗರ: ಸೋಮವಾರ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘನೆ ಮಾಡಿದ್ದು, ಪೂಂಚ್ ಜಿಲ್ಲೆಯ ಕೆರ್ನಿ ಮತ್ತು ದಿಗ್ವಾರ್ ವಲಯದ ಗಡಿ (ಎಲ್‍ಒಸಿ) ಪ್ರದೇಶದಲ್ಲಿ ದಾಳಿ ನಡೆಸಿದೆ.

    ಈ ದಾಳಿಯಲ್ಲಿ 10 ವರ್ಷದ ಬಾಲಕ ಮತ್ತು ಬಾಲಕಿ ಮೃತ ಪಟ್ಟಿದ್ದು, 9 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಪಾಕ್ ಅಪ್ರಚೋದಿತ ದಾಳಿಗೆ ಭಾರತದ ಸೈನಿಕರು ಸೂಕ್ತ ಪ್ರತ್ಯುತ್ತರವನ್ನು ನೀಡಿದ್ದಾರೆ. ಎರಡೂ ಸೇನೆಯ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಾಕ್ ಸೈನಿಕರು ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ಶೆಲ್ ಹಾಗೂ ಗುಂಡಿನ ದಾಳಿಯನ್ನು ನಡೆಸಿದೆ. ಇದಕ್ಕೆ ಭಾರತೀಯ ಸೇನೆ ತಿರುಗೇಟು ನೀಡಿದೆ. ಪರಸ್ಪರ ಗುಂಡಿನ ದಾಳಿ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

     

  • ಮತ್ತೆ ಪಾಕ್ ಬಣ್ಣ ಬಯಲು: ಗಡಿಯಲ್ಲಿ ಪತ್ತೆ ಆಯ್ತು 14 ಅಡಿ ಉದ್ದದ ಸುರಂಗ

    ಮತ್ತೆ ಪಾಕ್ ಬಣ್ಣ ಬಯಲು: ಗಡಿಯಲ್ಲಿ ಪತ್ತೆ ಆಯ್ತು 14 ಅಡಿ ಉದ್ದದ ಸುರಂಗ

    ಶ್ರೀನಗರ: ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಒಳನುಸುಳಿ ಬರಲು ಉಗ್ರರು ತೋಡಿದ್ದ 14 ಅಡಿ ಉದ್ದ ಬೃಹತ್ ಸುರಂಗವೊಂದು ಜಮ್ಮು-ಕಾಶ್ಮೀರದ ಅರ್ನಿಯಾ ಗಡಿ ಪ್ರದೇಶದಲ್ಲಿ ಪತ್ತೆಯಾಗಿದೆ.

    ಗಡಿ ಪ್ರದೇಶದಲ್ಲಿ ಭಾರತದ ಸೈನಿಕರ ಕಣ್ಣು ತಪ್ಪಿಸಿ ಭಾರತದ ಒಳಗೆ ಪ್ರವೇಶಿಸಲು ಸುರಂಗ ಮಾರ್ಗಗಳನ್ನು ಬಳಕೆ ಮಾಡಲಾಗುತ್ತಿದ್ದು, ಜಮ್ಮುವಿನಲ್ಲಿ ಹಬ್ಬಗಳ ಸಂದರ್ಭದಲ್ಲಿ ಭಾರೀ ವಿದ್ವಾಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಗಡಿ ಭದ್ರತಾ ಪಡೆಗಳು(ಬಿಎಸ್‍ಎಫ್) ತಿಳಿಸಿವೆ.

    ಭಾರತ ಹಾಗೂ ಪಾಕ್ ಗಡಿಯಲ್ಲಿ ಈ ಹಿಂದೆ ಹಲವು ಸುರಂಗ ಮಾರ್ಗಗಳು ಪತ್ತೆಯಾಗಿದ್ದವು. ಕಳೆದ ಬಾರಿ ಸಾಂಭಾ ಜಿಲ್ಲೆಯ ರಾಮ್‍ಗಾರ್ ಪ್ರದೇಶದಲ್ಲಿ ಇಂತದ್ದೆ ಸುರಂಗ ಪತ್ತೆಯಾಗಿತ್ತು. ಈಗ ಮತ್ತೊಂದು ಸುರಂಗ ಪತ್ತೆಯಾದ ಹಿನ್ನೆಲೆಯಲ್ಲಿ ಮತ್ತಷ್ಟು ಸುರಂಗಗಳು ಇರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.

    ಈ ಸುರಂಗ ಮಾರ್ಗ ಪತ್ತೆಯಾಗುವ ಮುನ್ನ ದಿನವೇ ಭಾರತದ ಬಿಎಸ್‍ಎಫ್ ಅಧಿಕಾರಿಗಳು ಪಾಕ್ ರೆಂಜರ್‍ಗಳನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು.

    ಬಿಎಸ್‍ಎಫ್ ಅಧಿಕಾರಿ ರಾಮ್ ಅವತಾರ್ ತಿಳಿಸುವಂತೆ ಉಗ್ರರು ಕಳೆದ 2-3 ದಿನಗಳ ಹಿಂದೆ ಸುರಂಗವನ್ನು ಕೊರೆಯಲು ಆರಂಭಿಸಿದ್ದು, ಈ ಸುರಂಗ ಮಾರ್ಗವು ಸುಮಾರು 14 ಅಡಿ ಉದ್ದವಿದ್ದು, 3 ಅಡಿ ಎತ್ತರ, 2.5 ಅಡಿ ಅಗಲವನ್ನು ಹೊಂದಿದೆ. ಜಮ್ಮುವಿನಲ್ಲಿ ಭಾರೀ ಪ್ರಮಾಣದ ದಾಳಿ ನಡೆಯುವ ಕುರಿತು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆಯನ್ನು ಕೈಗೊಂಡಿರುವುದಾಗಿ ತಿಳಿಸಿದರು.

    ಎಕೆ 47 ಗನ್, ಉಗ್ರರ ಸೇವಿಸಲು ಸಿದ್ಧವಾಗಿದ್ದ ಆಹಾರ ಉತ್ಪನ್ನಗಳು, ಗ್ರೆನೇಡ್, ನಾಲ್ಕು ಸ್ಲೀಪರ್ ಸೆಲ್‍ಗಳು ಮತ್ತು ಹಲವು ಯುದ್ಧ ಸಾಮಾಗ್ರಿಗಳು ಪತ್ತೆಯಾಗಿವೆ ಎಂದು ರಾಮ್ ತಿಳಿಸಿದರು.

    ಅಲ್ಲದೇ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ 10-12 ಜನರ ಶಸ್ತ್ರಸಜ್ಜಿತ ಗುಂಪು ಧಾಮ್ಲ ನಲ್ಲಾ ಪ್ರದೇಶದಲ್ಲಿ ನಮ್ಮ ಮೇಲೆ ದಾಳಿಯನ್ನು ಮಾಡಿತು. ಆದರೆ ನಮ್ಮ ಯೋಧರು ದಾಳಿಯನ್ನು ಎದುರಿಸಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಇದೇ ಸಮಯದಲ್ಲಿ ಪಾಕಿಸ್ತಾನಿ ಯೋಧರು ಮನಬಂದಂತೆ ಗುಂಡು ಹಾರಿಸಿದರು. ಅದರೂ ಬಿಎಸ್‍ಎಫ್ ಯೋಧರು ಸುರಂಗ ಮಾರ್ಗವಿದ್ದ ಸ್ಥಳವನ್ನು ತಲುಪಲು ಯಶಸ್ವಿಯಾಗಿದ್ದಾರೆ ಎಂದು ರಾಮ್ ವಿವರಿಸಿದರು.

    ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ವಿಚಾರವನ್ನು ಭಾರತ ಈಗಾಗಲೇ ವಿಶ್ವದ ಮುಂದೆ ಅನಾವರಣಗೊಳಿಸಿದೆ. ಮೋದಿ ಸರ್ಕಾರವು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಕಾರಣ ನಮ್ಮ ಬಿಎಸ್‍ಎಫ್ ಯೋಧರು ವಿರೋಧಿಗಳ ಪ್ರಯತ್ನಗಳನ್ನು ಸತತವಾಗಿ ಹಿಮ್ಮೆಟಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯಿಸಿದ್ದಾರೆ.

    ಈ ಹಿಂದೆ 2009ರಲ್ಲಿ ಅಕ್ನೋರ್ ವಲಯದಲ್ಲಿ ಹಾಗೂ 2012ರಲ್ಲಿ ಸಾಂಬಾ ವಲಯದಲ್ಲಿ ಸುಮಾರು 400 ಮೀಟರ್ ಉದ್ದದ ಸುರಂಗವನ್ನು ಬಿಎಸ್‍ಎಫ್ ಯೋಧರು ಪತ್ತೆ ಮಾಡಿದ್ದರು.

    ಕಳೆದ 15 ದಿನಗಳಲ್ಲಿ ಭಾರತದ ಗಡಿ ಪ್ರದೇಶದಲ್ಲಿ ಪಾಕ್ ದಾಳಿಯಿಂದ ಬಿಎಸ್‍ಎಫ್ ಯೋಧ ಬಹದ್ದೂರ್ ಸೇರಿದಂತೆ 32 ನಾಗರಿಕರು ಮೃತಪಟ್ಟಿದ್ದಾರೆ.

  • ರಜೆ ಮೇಲೆ ಮನೆಗೆ ಬಂದಿದ್ದ ಬಿಎಸ್‍ಎಫ್ ಯೋಧನನ್ನು ಗುಂಡಿಟ್ಟು ಕೊಂದ ಉಗ್ರರು

    ರಜೆ ಮೇಲೆ ಮನೆಗೆ ಬಂದಿದ್ದ ಬಿಎಸ್‍ಎಫ್ ಯೋಧನನ್ನು ಗುಂಡಿಟ್ಟು ಕೊಂದ ಉಗ್ರರು

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪದಾಕರ ಅಟ್ಟಹಾಸ ಮುಂದುವರೆದಿದ್ದು, ಗುರುವಾರ ಬಿಎಸ್‍ಎಫ್ ಯೋಧನ ಮನೆಯಲ್ಲಿ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಭಯೋತ್ಪದಾಕರ ದಾಳಿಗೆ ಯೋಧ ಮೊಹ್ಮದ್ ರಮ್ಜಾನ್ ಪ್ರಯರ್ ಸ್ಥಳದಲ್ಲಿ ಮೃತಪಟಿದ್ದು, ಕುಟುಂಬದ ನಾಲ್ವರು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.

    ಪ್ರರಯ್ ಜಮ್ಮು ಕಾಶ್ಮೀರ ಗಡಿನಿಯಂತ್ರಣ ಪಡೆಯ 73ನೇ ಬೇಟಾಲಿಯಾನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ರಜೆ ಪಡೆದು ಜಮ್ಮು ಕಾಶ್ಮೀರದ ಬಂಡೀಪುರ ಜಿಲ್ಲೆಯ ನಿವಾಸಿಕ್ಕೆ ಬಂದಿದ್ದರು. ಭಯೋತ್ಪದಾಕರು ರಮ್ಜಾನ್ ಅವರನ್ನು ಅಪಹರಣ ಮಾಡಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಪ್ರತಿರೋಧ ತೋರಿದ ವೇಳೆ ಪ್ರರಯ್‍ರನ್ನು ಮನೆ ಹೊರಗಡೆ ಎಳೆದು ತಂದು ಹತ್ಯೆ ಮಾಡಿದ್ದಾರೆ.

    ಘಟನೆಯ ಕುರಿತು ಟ್ವೀಟ್ ಮಾಡಿರುವ ಉತ್ತರ ಕಾಶ್ಮೀರ ಪೊಲೀಸ್ ಮುಖ್ಯಸ್ಥ ನಿತೀಶ್ ಕುಮಾರ್, ರಮ್ಜಾನ್ ಕುಟುಂಬದ ನಾಲ್ವರು ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಯೋಧ ನಿರಾಯುಧರಾಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿರುವುದು ಅತ್ಯಂತ ಅನಾಗರಿಕ ಮತ್ತು ಅಮಾನವೀಯವಾಗಿದ್ದು, ಭಯೋತ್ಪದಾಕರ ಕೃತ್ಯಕ್ಕೆ ತಕ್ಕ ಶಿಕ್ಷೆಯನ್ನು ನೀಡಲಾಗುವುದು ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್‍ಪಿ ವೈದ್ ಹೇಳಿದ್ದಾರೆ.

    ಪಾಕಿಸ್ತಾನ ಭಯೋತ್ಪಾದರು ಕಳೆದ ಮೇ ತಿಂಗಳಿನಲ್ಲಿ ಲೆ. ಉಮ್ಮರ್ ಫಯಾಜ್(22)ರನ್ನು ಹತ್ಯೆ ಮಾಡಿರುವ ಕುರಿತು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಮಹಾ ಅಧಿವೇಶನದಲ್ಲಿ ಭಾರತ ಪ್ರಸ್ತಾಪ ಮಾಡಿ, ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಗೆ ಉದಾಹರಣೆ ನೀಡಿತ್ತು. ಇದೊಂದು ನೈಜ ಚಿತ್ರಣವಾಗಿದ್ದು, ಕಠಿಣ ವಾಸ್ತವಿಕತೆ ಹಾಗೂ ದುರಂತವನ್ನು ಸೂಚಿಸುತ್ತದೆ ಎಂದು ಭಾರತದ ಪ್ರತಿನಿಧಿ 22 ವರ್ಷದ ಸೇನಾ ಧಿಕಾರಿಯ ಫೋಟೋ ಹಿಡಿದು ಪಾಕಿಸ್ತಾನದ ದುಷ್ಕೃತ್ಯಗಳನ್ನು ವಿವರಿಸಿದ್ದರು.

    https://twitter.com/nitishcop/status/913104415476682752

    ಲೆ.ಉಮ್ಮರ್ ಫಯಾಜ್ ಕೂಡ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ನಿರಾಯುಧರಾಗಿದ್ದಾಗ ಕಿಡ್ನ್ಯಾಪ್ ಆಗಿದ್ದರು. ಸಂಬಂಧಿಗಳ ಮದುವೆಯ ಸಂಭ್ರಮದಲ್ಲಿದ್ದ ಉಮ್ಮರ್‍ರನ್ನು ದಕ್ಷಿಣ ಜಮ್ಮವಿನ ಜಿಲ್ಲೆಯಿಂದ ಅಪಹರಣ ಮಾಡಲಾಗಿತ್ತು. ಉಗ್ರರು ಅವರನ್ನು ಬಿಟ್ಟುಬಿಡುತ್ತಾರೆ ಎಂದುಕೊಂಡು ಕುಟುಂಬಸ್ಥರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಮರುದಿನ ಗ್ರಾಮದ 30 ಕಿ.ಮೀ ದೂರದಲ್ಲಿ ಸೇನಾಧಿಕಾರಿಯ ಮೃತದೇಹ ಪತ್ತೆಯಾಗಿತ್ತು. ಅವರ ತಲೆ ಹಾಗೂ ಹುಟ್ಟೆಯ ಭಾಗದಲ್ಲಿ ಬುಲೆಟ್ ಪತ್ತೆಯಾಗಿತ್ತು.

    ಜಮ್ಮು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ. ಭಯೋತ್ಪಾದಕರ ಕೃತ್ಯ ಅತ್ಯಂತ ಅಸಹನೀಯವಾದುದು ಎಂದು ಹೇಳಿದ್ದಾರೆ.