Tag: ಜಮ್ಮು ಮತ್ತು ಕಾಶ್ಮೀರ

  • ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ – ಪಹಲ್ಗಾಮ್‌ ಪಾತಕಿ ಬೆನ್ನಲ್ಲೇ ಮತ್ತಿಬ್ಬರು ಉಗ್ರರು ಎನ್‌ಕೌಂಟರ್‌

    ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ – ಪಹಲ್ಗಾಮ್‌ ಪಾತಕಿ ಬೆನ್ನಲ್ಲೇ ಮತ್ತಿಬ್ಬರು ಉಗ್ರರು ಎನ್‌ಕೌಂಟರ್‌

    – ಎಲ್‌ಒಸಿಯಲ್ಲಿ ಒಳನುಸುಳಲು ಯತ್ನಿಸಿದ್ದ ಉಗ್ರರು

    ಶ್ರೀನಗರ: ಪಹಲ್ಗಾಮ್‌ ದಾಳಿಯ ಪಾತಕಿ (Pahalgam Attacker) ಹಾಶಿಮ್‌ ಮೂಸಾ ಹತ್ಯೆ ಬೆನ್ನಲ್ಲೇ ಮತ್ತಿಬ್ಬರು ಉಗ್ರರನ್ನ ಸೇನೆ ಬೇಟೆಯಾಡಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ (Gun Fight) ಉಗ್ರರನ್ನ ಯೋಧರು ಹೊಡೆದುರುಳಿಸಿದ್ದಾರೆ.

    ಹತ್ಯೆಯಾದ ಇಬ್ಬರು ಉಗ್ರರು ಕಾಶ್ಮೀರದ ಪೂಂಚ್ (Poonch) ಜಿಲ್ಲೆಯ ದೇಗ್ವಾರ್ ಸೆಕ್ಟರ್‌ನ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಯತ್ನಿಸಿದ್ದರು. ಭಾರೀ ಮಳೆ ನಡುವೆಯೂ ಮೂವರು ಪಿಓಕೆ ಕಡೆಯಿಂದ ಗಡಿ ದಾಟಲು ಯತ್ನಿಸಿದ್ದರು. ಪೂಂಚ್ ಪ್ರದೇಶದಲ್ಲಿ ಬೇಲಿಯ ಉದ್ದಕ್ಕೂ ಇಬ್ಬರು ಶಂಕಿತರ ಚಲನವಲನ ಪತ್ತೆಯಾಗಿತ್ತು. ಭದ್ರತಾ ಪಡೆಗಳ ಎಚ್ಚರಿಕೆ ಬಳಿಕವೂ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ ಭದ್ರತಾಪಡೆ ಉಗ್ರರನ್ನ ಹೊಡೆದುರುಳಿಸಿದೆ (Encounter). ಇದನ್ನೂ ಓದಿ: Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಬೇಟೆ ಯಶಸ್ವಿಯಾಗಿದೆ. ಮೂವರು ಉಗ್ರರು ಒಳನುಸುಳಿದ್ದು, ಇಬ್ಬರನ್ನು ಹತ್ಯೆ ಮಾಡಲಾಗಿದೆ. ಉಳಿದ ಒಬ್ಬನಿಗಾಗಿ ಶೋಧ ಮುಂದುವರಿದಿದೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಹೋರಾಡಲು ಆಗದಿದ್ರೆ ಪಾಕ್‌ಗೆ ಸಹಾಯ ಮಾಡಲು ಸಿದ್ಧ: ರಾಜನಾಥ್‌ ಸಿಂಗ್

    Pahalgam Terrorists 

    ಎರಡು ದಿನಗಳ ಹಿಂದೆಯಷ್ಟೇ ʻಆಪರೇಷನ್‌ ಮಹಾದೇವ್‌ʼ (Operation MAHADEV) ಹೆಸರಿನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ಉಗ್ರರನ್ನ ಹತ್ಯೆಗೈದಿದ್ದವು. ಈ ಪೈಕಿ ಓರ್ವ ಪಹಲ್ಗಾಮ್‌ ದಾಳಿಯ ಮಾಸ್ಟರ್‌ ಮೈಂಡ್‌ ಎಂಬುದು ಖಚಿತವಾಗಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಮಾಡಿದವ್ರು ಪಾಕಿಗಳು, ವೋಟರ್ ಐಡಿ, ಚಾಕ್ಲೆಟ್ ಸಾಕ್ಷ್ಯ – ವಿಪಕ್ಷಗಳಿಗೆ ಎಳೆಎಳೆಯಾಗಿ ಘಟನೆ ವಿವರಿಸಿದ ಅಮಿತ್ ಶಾ

    Jammu And Kashmir

    ಪಾತಕಿ ಹಾಶಿಮ್‌ ಮೂಸಾ ಯಾರು?
    ಹಾಶಿಮ್‌ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಹಲ್ಗಾಮ್ ದಾಳಿಯಲ್ಲಿ ISI ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪಾಕಿಸ್ತಾನದ ಪ್ಯಾರಾ ಕಮಾಂಡೊ (Pakistani Para Commando) ಆಗಿದ್ದ ಮೂಸಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿತ್ತು. ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನಾಗಿದ್ದು, SSG ಕಮಾಂಡೋ ಯುದ್ಧದಲ್ಲಿ ಪರಿಣತಿ ಹೊಂದಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಹಲ್ಗಾಮ್‌ ಪಾತಕಿಗಳನ್ನ ಕೊಂದಿದ್ದೇವೆ – ʻಸಿಂಧೂರʼ ಚರ್ಚೆ ವೇಳೆ ಅಬ್ಬರಿಸಿದ ಅಮಿತ್‌ ಶಾ

  • Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    – ಪಾಕಿಸ್ತಾನದ ಪ್ಯಾರಾ ಕಮಾಂಡೊ ಆಗಿದ್ದ ಹಾಶಿಮ್‌ ಮೂಸ

    ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ (Operation MAHADEV) ಹೆಸರಿನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ. ಹತ್ಯೆಗೈದ ಮೂವರಲ್ಲಿ ಓರ್ವ ಉಗ್ರ ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿದ್ದ ಮುಖ್ಯ ಹಂತಕ ಅನ್ನೋದು ಖಚಿತವಾಗಿದೆ.

    ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಪ್ರಮುಖ ಉಗ್ರ ಹಾಶಿಮ್‌ ಮೂಸಾ ಅಲಿಯಾಸ್‌ ಸುಲೇಮಾನ್‌ ಮೂಸಾನನ್ನ ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮೂಲಗಳು ಮಾಹಿತಿ ಹಂಚಿಕೊಂಡಿವೆ.

    ಹಾಶಿಮ್‌ ಮೂಸಾ ಯಾರು?
    ಹಾಶಿಮ್‌ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಹಲ್ಗಾಮ್ ದಾಳಿಯಲ್ಲಿ ISI ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪಾಕಿಸ್ತಾನದ ಪ್ಯಾರಾ ಕಮಾಂಡೊ (Pakistani Para Commando) ಆಗಿದ್ದ ಮೂಸಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿತ್ತು. ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನಾಗಿದ್ದು, SSG ಕಮಾಂಡೋ ಯುದ್ಧದಲ್ಲಿ ಪರಿಣತಿ ಹೊಂದಿದ್ದ ಎಂದು ತಿಳಿದುಬಂದಿದೆ.

    Pahalgam 7

    ಮೂವರು ವಿದೇಶಿ ಉಗ್ರರ ಹತ್ಯೆ
    ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಆಪರೇಷನ್‌ ಮಹಾದೇವ್‌ ಕಾರ್ಯಾಚರಣೆಯಲ್ಲಿ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಸೇನೆಯ ಚಿನಾರ್ ಕಾರ್ಪ್ಸ್ ನೇತೃತ್ವದಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಲಿಡ್ವಾಸ್‌ನ ದಚಿಗಮ್ ಶ್ರೀನಗರದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಬೆಟ್ಟದ ದುರ್ಗಮ ಹಾದಿಯು ಟ್ರಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿ‌ ಹಿಂದೆಯೂ ಟಿಆರ್‌ಎಫ್‌‌ ಉಗ್ರ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ.

    ಮೂವರು ಉಗ್ರರನ್ನು ಹತ್ಯೆಗೈದ ಬಳಿಕ ದಚಿಗಮ್ ಅರಣ್ಯ ಪ್ರದೇಶದಲ್ಲಿ ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಜನವರಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಟಿಆರ್‌ಎಫ್ ಉಗ್ರರ ಅಡಗು ತಾಣವನ್ನಸೇನೆ ಧ್ವಂಸಗೊಳಿಸಿತ್ತು. ಆದ್ರೆ 2 ದಿನಗಳ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಇನ್ನಷ್ಟು ಉಗ್ರರು ಈ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ.

    ದಚಿಗಮ್ ಅರಣ್ಯವನ್ನ ಈಗಾಗಲೇ ಟಿಆರ್‌ಎಫ್‌ನ ಮುಖ್ಯ ಅಡಗುತಾಣವೆಂದು ಪರಿಗಣಿಸಲಾಗಿದೆ. ಇದೇ ಗುಂಪು ಇತ್ತೀಚೆಗೆ ಎಲ್‌ಒಸಿ ಬಳಿ ನಡೆದಿದ್ದ ನೆಲಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು, ಇದರಲ್ಲಿ ಓರ್ವ ಸೈನಿಕ ಹುತಾತ್ಮರಾಗಿ ಮೂವರು ಗಾಯಗೊಂಡಿದ್ದರು. ಇನ್ನೂ ಕಾರ್ಯಾಚರಣೆ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಆಚೆ ಬರದಂತೆ ಭದ್ರತಾ ಪಡೆದಗಳು ಎಚ್ಚರಿಕೆ ನೀಡಿವೆ.

  • Operation MAHADEV | ಪಹಲ್ಗಾಮ್‌ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ

    Operation MAHADEV | ಪಹಲ್ಗಾಮ್‌ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ

    – ಶ್ರೀನಗರ ಬಳಿಯ ಲಿಡ್ವಾಸ್‌ನಲ್ಲಿ ಎನ್‌ಕೌಂಟರ್

    ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ (Operation MAHADEV) ಅಡಿಯಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯೊಂದರಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ.

    ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಈ ಮೂವರು ಏಪ್ರಿಲ್‌ 22ರ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) ಭಾಗಿಯಾಗಿದ್ದರೆಂದು ಶಂಕಿಸಲಾಗಿದೆ. ಅಲ್ಲದೇ ಲಷ್ಕರ್‌ ಮುಖವಾಣಿ ಟಿಆರ್‌ಎಫ್‌ (The Resistance Front) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಅನ್ಕೋತೀರಿ, ಉಗ್ರರು ದೇಶದೊಳಗೇ ಬೆಳೆದಿರಬಹುದು – ʻಕೈʼ ನಾಯಕ ಚಿದಂಬರಂ ಹೇಳಿಕೆ ವಿವಾದ

    ಸೇನೆಯ ಚಿನಾರ್ ಕಾರ್ಪ್ಸ್ ಕಂಪನಿ ಮತ್ತು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರು ನಡೆಸಿದ ಯಶಸ್ವಿ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಲಿಡ್ವಾಸ್‌ನ ದಚಿಗಮ್ ಶ್ರೀನಗರದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಬೆಟ್ಟದ ದುರ್ಗಮ ಹಾದಿಯು ಟ್ರಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿ‌ ಹಿಂದೆಯೂ ಟಿಆರ್‌ಎಫ್‌‌ ಉಗ್ರ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: UP | ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಕಾಲ್ತುಳಿತ – ಇಬ್ಬರು ಭಕ್ತರು ಸಾವು, 29 ಮಂದಿಗೆ ಗಾಯ

    ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಜನವರಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಟಿಆರ್‌ಎಫ್ ಉಗ್ರರ ಅಡಗು ತಾಣವನ್ನಸೇನೆ ಧ್ವಂಸಗೊಳಿಸಿತ್ತು. ಆದ್ರೆ 2 ದಿನಗಳ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಇನ್ನಷ್ಟು ಉಗ್ರರು ಈ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪೊಲೀಸಪ್ಪನ ಪತ್ನಿಗೆ ಅತ್ತೆ, ಮಾವನಿಂದ ಕಿರುಕುಳ – ವಿಡಿಯೋ ಹರಿಬಿಟ್ಟು ಮಹಿಳೆ ಆತ್ಮಹತ್ಯೆ

    ದಚಿಗಮ್ ಅರಣ್ಯವನ್ನ ಈಗಾಗಲೇ ಟಿಆರ್‌ಎಫ್‌ನ ಮುಖ್ಯ ಅಡಗುತಾಣವೆಂದು ಪರಿಗಣಿಸಲಾಗಿದೆ. ಇದೇ ಗುಂಪು ಇತ್ತೀಚೆಗೆ ಎಲ್‌ಒಸಿ ಬಳಿ ನಡೆದಿದ್ದ ನೆಲಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು, ಇದರಲ್ಲಿ ಓರ್ವ ಸೈನಿಕ ಹುತಾತ್ಮರಾಗಿ ಮೂವರು ಗಾಯಗೊಂಡಿದ್ದರು. ಇನ್ನೂ ಕಾರ್ಯಾಚರಣೆ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಆಚೆ ಬರದಂತೆ ಭದ್ರತಾ ಪಡೆದಗಳು ಎಚ್ಚರಿಕೆ ನೀಡಿವೆ.

  • ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ – ವರುಣಾರ್ಭಟಕ್ಕೆ ಭೂಕುಸಿತ, ಅಲ್ಲಲ್ಲಿ ಅವಾಂತರ

    ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ – ವರುಣಾರ್ಭಟಕ್ಕೆ ಭೂಕುಸಿತ, ಅಲ್ಲಲ್ಲಿ ಅವಾಂತರ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕೆಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಅವಾಂತರ ಸೃಷ್ಠಿಯಾಗಿದೆ.

    ಪೂಂಚ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಮೇಲೆ ಭೂಕುಸಿತವಾಗಿದ್ದು, ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಜೊತೆಗೆ ಮೂವರು ಗಾಯಗೊಂಡಿದ್ದಾರೆ. ಬೈಂಚ್-ಕಾಲ್ಸೇನ್ ಪ್ರದೇಶದಲ್ಲಿರುವ ಶಾಲೆ ಇದಾಗಿದ್ದು, ಶಾಲೆಯ ತಗಡಿನ ಛಾವಣಿ ಮೇಲೆ ದೊಡ್ಡ ಬಂಡೆ ಉರುಳಿದ್ದರಿಂದ ಸಾವು-ನೋವು ಸಂಭವಿಸಿದೆ.ಇದನ್ನೂ ಓದಿ: Breaking | ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ರಾಜೀನಾಮೆ

    ಇನ್ನೂ ರಿಯಾಸಿ ಜಿಲ್ಲೆಯಲ್ಲಿರುವ ಮಾತಾ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಅವಘಡದಲ್ಲಿ ಐವರು ಯಾತ್ರಿಕರು ಸೇರಿದಂತೆ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕುಸಿತ ಉಂಟಾಗಿದ್ದ ಜಾಗದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.

    ಮುಂಬೈನಲ್ಲಿ ಇಡೀ ರಾತ್ರಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಹೈವೇಗಳಲ್ಲೂ ಮಳೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಉತ್ತರಾಖಂಡ್‌ದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಡೆಹ್ರಾಡೂನ್, ತೆಹ್ರಿ, ಪೌರಿ, ನೈನಿತಾಲ್, ಚಂಪಾವತ್ ಮತ್ತು ಉಧಮ್ ಸಿಂಗ್ ನಗರದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, 1ರಿಂದ 12ನೇ ತರಗತಿವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಇದನ್ನೂ ಓದಿ: ಇನ್ಮುಂದೆ VIP ಸಂಚಾರದ ವೇಳೆ ಸೈರನ್ ಬಳಕೆ ನಿಷೇಧ

  • ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್‌ ಸಚಿವ ಇಶಾಕ್‌ ದಾರ್‌

    ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್‌ ಸಚಿವ ಇಶಾಕ್‌ ದಾರ್‌

    ಇಸ್ಲಾಮಾಬಾದ್‌: ಭಾರತ ಭಾರೀ ನಷ್ಟ ಅನುಭವಿಸುತ್ತಿರುವುದರಿಂದ 2 ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆಗಳು ತೀರಾ ಕಡಿಮೆ ಅಂತ ಪಾಕಿಸ್ತಾನದ (Pakistan) ಸಚಿವ ಇಶಾಕ್‌ ದಾರ್‌ (Ishaq Dar) ಹೇಳಿದ್ದಾರೆ.

    ಗಡಿಯಲ್ಲಿ ಭಾರತದಿಂದ ಉಂಟಾದ ಭಾರೀ ನಷ್ಟಗಳ ಬಗ್ಗೆ ವರದಿಯಾಗುತ್ತಿದ್ದಂತೆ ಇಸ್ಲಾಮಾಬಾದ್‌ನಲ್ಲಿ (Islamabad) ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಪಾಕಿಸ್ತಾನ ಶಾಂತಿ ಮಾತುಕತೆಗೆ ಸಿದ್ಧವಾಗಿದ್ದರೂ ಭಾರತ ಆಸಕ್ತಿ ತೋರುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೃಷಿ ಬೆಳೆಯನ್ನೇ ಧ್ವಂಸ ಮಾಡೋ ಅಪಾಯಕಾರಿ ಶಿಲೀಂಧ್ರ ಕಳ್ಳ ಸಾಗಾಣೆ-ಅಮೆರಿಕದಲ್ಲಿ ಇಬ್ಬರು ಚೀನಿಯರು ಅರೆಸ್ಟ್‌

    ಸಿಂಧೂ ಜಲ ಒಪ್ಪಂದ ಸೇರಿದಂತೆ ಬಹು ವಿವಾದಾತ್ಮಕ ವಿಷಯಗಳನ್ನೊಳಗೊಂಡ ಸಮಗ್ರ ಚರ್ಚೆಗೆ ಪಾಕಿಸ್ತಾನ ಮುಕ್ತವಾಗಿದೆ. ಆದ್ರೆ ಭಾರತ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮಾತ್ರ ತೊಡಗಿಕೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರ ಪ್ರೇಮಿ ಪಾಕ್‌ಗೆ ಮಿಲಿಟರಿ ಬಜೆಟ್ಟೇ ಭಸ್ಮಾಸುರ!?

    ಮುಂದುವರಿದು.. ಭಾರತದ ಎಲ್‌ಒಸಿ ಬಳಿ ಗಡಿಯಾಚೆಗಿನ ಭಯೋತ್ಪಾದನೆ ಕಾರ್ಯಾಚರಣೆ ವೇಳೆ ಭಾರೀ ನಷ್ಟ ಅನುಭವಿಸಿದೆ ಅನ್ನೋ ಮಾಹಿತಿಗಳು ಬಂದಿವೆ ಎಂದಿದ್ದಾರೆ. ಆದ್ರೆ ಪಾಕಿಸ್ತಾನದ ಉತ್ತನ ಅಧಿಕಾರಿಗಳು ಈ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆಗಳನ್ನ ನೀಡಿಲ್ಲ. ಇದನ್ನೂ ಓದಿ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು – ಕಾರಣ ಏನು?

    ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಬಳಿಕ ನಡೆದ ಭದ್ರತಾ ಸಂಪುಟ ಸಮಿತಿಯಲ್ಲಿ ಭಾರತ ಸಿಂಧೂ ಜಲಒಪ್ಪಂದವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿತ್ತು. ಆದ್ರೆ ಪಾಕಿಸ್ತಾನದ ಶೇ.80 ರಷ್ಟು ಕೃಷಿ ಭೂಮಿಗೆ ಈ ನೀರಿನ ಮೂಲವೇ ಆಧಾರವಾಗಿದೆ. ಸದ್ಯ ಭಾರತದಿಂದ ನೀರಿನ ಪ್ರಮಾಣ ಇಳಿಕೆ ಮಾಡಿರೋದ್ರಿಂದ ಕೃಷಿಯಲ್ಲೂ ಪಾಕಿಸ್ತಾನ ನಷ್ಟ ಅನುಭವಿಸುವ ಆತಂಕದಲ್ಲಿದೆ ಎಂದು ತಿಳಿದುಬಂದಿದೆ.

  • ಶೋಪಿಯನ್‌ನಲ್ಲಿ ಉಗ್ರರ ಹತ್ಯೆ- ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದ ಭದ್ರತಾ ಪಡೆ

    ಶೋಪಿಯನ್‌ನಲ್ಲಿ ಉಗ್ರರ ಹತ್ಯೆ- ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದ ಭದ್ರತಾ ಪಡೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಶೋಪಿಯಾನ್ (Shopian) ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ(Keller Forest) ಪ್ರದೇಶದಲ್ಲಿ ಮೂವರು ಉಗ್ರರ ಹತ್ಯೆ ಬೆನ್ನಲ್ಲೇ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿವೆ.

    ಮೇ 13ರಂದು ‘ಆಪರೇಷನ್ ಕೆಲ್ಲರ್’ ಅಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದೆ. ಅದಾದ ಒಂದು ದಿನದ ಬಳಿಕ ಬುಧವಾರ ಭದ್ರತಾ ಪಡೆಗಳು ರೈಫಲ್, ಗ್ರೆನೇಡ್‌ಗಳು ಸೇರಿದಂತೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಈ ಶಸ್ತ್ರಾಸ್ತ್ರಗಳು, ಸಾವನ್ನಪ್ಪಿದ್ದ ಮೂವರು ಉಗ್ರರಿಗೆ ಸೇರಿರಬಹುದು ಎನ್ನಲಾಗಿದೆ.ಇದನ್ನೂ ಓದಿ: ʻಬಿಬಿಎಂಪಿʼ ಹೆಸರು ಇತಿಹಾಸ ಪುಟಕ್ಕೆ – ಮೇ 15ರಿಂದ ʻಗ್ರೇಟರ್‌ ಬೆಂಗಳೂರುʼ ಆಡಳಿತ ಜಾರಿ

    ಎನ್‌ಕೌಂಟರ್ ಆದ ಮೂವರು ಭಯೋತ್ಪಾದಕರು ಎಲ್‌ಇಟಿ ಸಂಘಟನೆಗೆ ಸೇರಿದವರಾಗಿದ್ದು, ಆ ಪೈಕಿ ಇಬ್ಬರನ್ನು ಶೋಪಿಯಾನ್‌ನ ಸ್ಥಳೀಯರು ಎನ್ನಲಾಗಿದೆ. ಶಾಹಿದ್ ಕುಟ್ಟಯ್ ಮತ್ತು ಅದ್ನಾನ್ ಶಫಿ ದಾರ್ ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.

    ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಅಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದಾಗ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು.

    ಏ.22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಶಂಕಿಸಲಾಗಿರುವ ಮೂವರು ಪಾಕಿಸ್ತಾನಿ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಪೋಸ್ಟರ್‌ಗಳನ್ನು ಭದ್ರತಾ ಪಡೆಗಳು ಪೋಸ್ಟ್ ಮಾಡಿದ ಬೆನ್ನಲ್ಲೇ ಗುಂಡಿನ ದಾಳಿ ನಡೆದಿತ್ತು.ಇದನ್ನೂ ಓದಿ: ಕರ್ನಲ್ ಸೋಫಿಯಾ ಪತಿ ಮನೆ ಮೇಲೆ RSS ದಾಳಿ ವದಂತಿ – ಸುಳ್ಳು ಸುದ್ದಿ ನಂಬದಂತೆ ಬೆಳಗಾವಿ ಎಸ್ಪಿ ಮನವಿ

  • ಪಹಲ್ಗಾಮ್ ದಾಳಿಯ 3 ಉಗ್ರರ ಫೋಟೋ ರಿಲೀಸ್ – ಸುಳಿವು ಕೊಟ್ಟವರಿಗೆ 20 ಲಕ್ಷ ಬಹುಮಾನ

    ಪಹಲ್ಗಾಮ್ ದಾಳಿಯ 3 ಉಗ್ರರ ಫೋಟೋ ರಿಲೀಸ್ – ಸುಳಿವು ಕೊಟ್ಟವರಿಗೆ 20 ಲಕ್ಷ ಬಹುಮಾನ

    -ಪೋಸ್ಟರ್ ಅಂಟಿಸಿ ಉಗ್ರರ ಬೆನ್ನಟ್ಟಿದ ಜಮ್ಮು ಕಾಶ್ಮೀರ ಪೊಲೀಸರು

    ಶ್ರೀನಗರ: ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ಪೋಸ್ಟರ್‌ಗಳನ್ನು ಜಮ್ಮು ಮತ್ತು ಕಾಶ್ಮೀರ (Jammu Kashmir) ಪೊಲೀಸರು ಬಿಡುಗಡೆಗೊಳಿಸಿದ್ದು, ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

    ಏ.22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಶಂಕಿತ ಪಾಕ್ ಉಗ್ರರ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ. ಆ ಪೋಸ್ಟರ್‌ಗಳನ್ನು ಅಂಟಿಸಿ ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಸುಳಿವು ಕೊಟ್ಟವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಅಮೆರಿಕದಲ್ಲಿ ಕಾರು ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳು ದುರಂತ ಸಾವು

    ಸದ್ಯ ಜಮ್ಮು ಮತ್ತು ಕಾಶ್ಮೀರದಾದ್ಯಂತ `ಭಯೋತ್ಪಾದನೆ ಮುಕ್ತ ಕಾಶ್ಮೀರ’ ಎಂಬ ಸಂದೇಶಗಳನ್ನು ಒಳಗೊಂಡಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಲಷ್ಕರ್-ಇ-ತೈಬಾದ (LET) ಮೂವರು ಭಯೋತ್ಪಾದಕರಾದ ಅನಂತ್‌ನಾಗ್ ನಿವಾಸಿ ಆದಿಲ್ ಹುಸೇನ್ ಥೋಕರ್ ಮತ್ತು ಪಾಕ್ ಪ್ರಜೆಗಳಾದ ಅಲಿ ಭಾಯ್ ಅಕಾ ತಲ್ಹಾ ಭಾಯ್ ಮತ್ತು ಹಶಿಮ್ ಮೂಸಾ ಅಕಾ ಸುಲೇಮಾನ್ ಫೋಟೋಗಳಿವೆ.

    ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು `ಆಪರೇಷನ್ ಸಿಂಧೂರ’ (Operation Sindoor) ಹೆಸರಿನಲ್ಲಿ ಪಾಕ್‌ನ 9 ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತು. ಅದಾದ ಬಳಿಕ ಪಾಕಿಸ್ತಾನ ಹಲವು ಬಾರಿ ಅಪ್ರಚೋದಿತ ದಾಳಿ ನಡೆಸಿದ್ದು, ಮೇ 10ರಂದು ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ.ಇದನ್ನೂ ಓದಿ: ಶಾರುಖ್ ಖಾನ್ ‘ಕಿಂಗ್’ ಸಿನಿಮಾದಲ್ಲಿ ಅನಿಲ್ ಕಪೂರ್

  • ಪಾಕ್‌ನ ಶೆಲ್‌ ತುಣುಕು ಅಮ್ಮನ ಮುಖವನ್ನೇ ಸೀಳಿತು – ʻಪಬ್ಲಿಕ್‌ ಟಿವಿʼ ಬಳಿ ಬಾರಾಮುಲ್ಲಾ ಜನರ ಅಳಲು

    ಪಾಕ್‌ನ ಶೆಲ್‌ ತುಣುಕು ಅಮ್ಮನ ಮುಖವನ್ನೇ ಸೀಳಿತು – ʻಪಬ್ಲಿಕ್‌ ಟಿವಿʼ ಬಳಿ ಬಾರಾಮುಲ್ಲಾ ಜನರ ಅಳಲು

    ಶ್ರೀನಗರ: ಸದ್ಯದಲ್ಲೇ ನನ್ನ ಸಹೋದರಿಯ ಮದುವೆ ನಿಶ್ಚಯವಾಗಿತ್ತು.. ಅಪ್ಪ ಶುಗರ್‌ ಕಾಯಿಲೆಯಿಂದ ಬಳಲುತ್ತಿದ್ರು, ಹಾಗಾಗಿ ಅಮ್ಮ ಎಲ್ಲ ಜವಾಬ್ದಾರಿ ನೋಡಿಕೊಳ್ತಿದ್ರು. ಆದ್ರೆ ಪಾಕಿಸ್ತಾನ (Pakistan) ನಡೆಸಿದ ದಾಳಿಯಲ್ಲಿ ಶೆಲ್‌ ತುಣುಕು ಅಮ್ಮನ ಮುಖ ಸೀಳಿತು. ಆಸ್ಪತ್ರೆಗೆ ಕರೆದುಕೊಂಡು ಹೋದ್ರೂ ಅತಿಯಾದ ರಕ್ತಸ್ರಾವದಿಂದ ನನ್ನಮ್ಮ ಪ್ರಾಣ ಬಿಟ್ಟರು. ಈಗ ಅಮ್ಮನೂ ಇಲ್ಲ.. ಆಶ್ರಯವೂ ಇಲ್ಲದೇ ಅನಾಥವಾಗಿದ್ದೇವೆ….. ಪಾಕಿಸ್ತಾನದ ಶೆಲ್‌ ದಾಳಿಗೆ ಒಳಗಾದ ಕಾಶ್ಮೀರದ ʻಬಾರಾಮುಲ್ಲಾʼ (Baramulla) ಜನ ʻಪಬ್ಲಿಕ್‌ ಟಿವಿʼಜೊತೆಗೆ ಹಂಚಿಕೊಂಡ ಕಣ್ಣೀರ ಕಥೆ ಹೀಗಿತ್ತು..

    ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ (International Boundary) ಭಾರತದ ವಿರುದ್ಧ ಪಾಕಿಸ್ತಾನ (Pakistan) ನಡೆಸಿದ ಶೆಲ್ ದಾಳಿ ಅಮಾಯಕರ ಜೀವವನ್ನೇ ತೆಗೆದಿದೆ. ಇದರಿಂದ ರೋಸಿಹೋಗಿರುವ ಜನ ನಮಗೆ ಯುದ್ಧವೇ ಬೇಡ ಎನ್ನುತ್ತಿದ್ದಾರೆ. 1999ರ ಯುದ್ಧದ ಸಂದರ್ಭಕ್ಕಿಂತಲೂ ಇಂದಿನ ಪರಿಸ್ಥಿತಿ ಕೆಟ್ಟದಾಗಿದೆ. ಯುದ್ಧದಿಂದ ಸಾಧಿಸುವುದಾದರೂ ಏನಿದೆ? ಅಂತ ಪ್ರಶ್ನೆ ಮಾಡಿದ್ದಾರೆ.

    ಬಾರಾಮುಲ್ಲಾ ನಿವಾಸಿ ನೈಸರ್ಗಿಬೇಗಂ ಪುತ್ರಿ ಹೇಳಿದ್ದಿಷ್ಟು..
    ಗ್ರಾಮದ ಮನೆಯಲ್ಲಿದ್ದ ವೇಳೆ ಕರೆಂಟ್ ಹೋಯಿತು.. ಶೆಲ್ ದಾಳಿಯಾಗಿ ನಮ್ಮ ತಾಯಿ ನಮ್ಮನು ಬಿಟ್ಟು ಹೋದಳು… ನಮಗೆ ಆಶ್ರಯ ಇಲ್ಲದಂತಾಗಿದೆ. ಇದನ್ನೇ ಮಾಡುತ್ತಿದ್ದರೆ ನಮ್ಮನ್ನ ಸುರಕ್ಷಿತವಾಗಿ ಸ್ಥಳಾಂತ ಮಾಡಬೇಕಿತ್ತು. ನಮ್ಮ ಪೋಷಕರನ್ನ ಬಲಿ ಪಡೆದು ಯಾವ ಸಾಧನೆ ಮಾಡಿದ್ದಾರೆ? ಇಲ್ಲಿ ಯಾರೊಬ್ಬರ ತಂದೆ… ತಾಯಿ.. ತಮ್ಮ, ಅಣ್ಣ.. ಅಕ್ಕ ಬಲಿಯಾಗುತ್ತಲೇ ಇದ್ದಾರೆ. ಇನ್ನಷ್ಟು ಜನರ ಜೀವನವೇ ಸರ್ವನಾಶ ಮಾಡುತ್ತಿದ್ದಾರೆ, ಇದನ್ನು ಇಲ್ಲಿಗೆ ನಿಲ್ಲಿಸುವಂತೆ ನಾನು ಮನವಿ ಮಾಡುತ್ತೇನೆ. ಮುಖಕ್ಕೆ ಶೆಲ್ ತುಣುಕು ಅಪ್ಪಳಿಸಿ ನನ್ನ ತಾಯಿ ಸಾವನಪ್ಪಿದ್ದರು. ಪಾಕಿಸ್ತಾನವಾಗಲಿ.. ಭಾರತವಾಗಲಿ ಬೇರೆ ಯಾವುದೇ ದೇಶವಾಗಲಿ ಯುದ್ಧದಿಂದ ಅಮಾಯಕ ಜನರು ಸಾಯುತ್ತಾರೆ. ಸೈನಿಕರು ಸಾಯುತ್ತಾರೆ, ಅವರ ಕುಟುಂಬಗಳು ಅನಾಥವಾಗಿವೆ. ಇದನ್ನೇಲ್ಲಾ ಮಾಡಿ ನಿಮಗೆ ಸಿಗುದಾದರೂ ಏನು? ಮೋದಿಜೀ ಸೇಡಿನಿಂದ ಏನು ಸಿಗುತ್ತೆ ನೀವು ಹೇಳಬೇಕು. ಸೇಡಿನಿಂದ ಇಡೀ ಜಗತ್ತು ಸರ್ವನಾಶವಾಗುತ್ತೆ. ಯಾರಿಗೋ ಏನೋ ಸಿಗುವುದಿಲ್ಲ. ಎಲ್ಲರೂ ಅನಾಥರಾಗುತ್ತಾರೆ. ನನ್ನ ಸಹೋದರಿಯ ಮದುವೆ ಇದ್ದು. ನಮ್ಮ ಆಶ್ರಯವನ್ನೆ ಕಳೆದುಕೊಂಡಿದ್ದೇವೆ, ನಮ್ಮ ತಂದೆ ಕೂಡ ಶುಗರ್‌ ಕಾಯಿಲೆಂದ ಬಳಲುತ್ತಿದ್ದಾರೆ. ಈಗ ನಾವು ಎಲ್ಲಿಗೆ ಹೋಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.

    ಮೃತ ನೈಸರ್ಗಿಬೇಗಂ ಪತಿ
    ಪಾಕಿಸ್ತಾನ ಕಡೆಯಿಂದ ದಾಳಿ ಅಯಿತು. ನಾನು ನನ್ನ ಮಗ ಇನ್ನೂಂದು ಗಾಡಿಯಲ್ಲಿ ಬರುತ್ತಿದ್ದ ವೇಳೆ. ಮನೆಯಿಂದ ಫೋನ್‌ ಬಂತು. ಎಲ್ಲರೂ ಆಳುತ್ತಿದ್ದರು, ನನ್ನ ಪತ್ನಿಯ ಮುಖಕ್ಕೆ ಶೆಲ್ ತುಣುಕು ಬಿದ್ದು ಮುಖ ಸೀಳಿಕೊಂಡಿತ್ತು, ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅತಿಯಾದ ರಸ್ತಸ್ರಾವದಿಂದ ನನ್ನ ಪತ್ನಿಯ ಸೇಹ ಸಂಪೂರ್ಣ ರಕ್ತದ ಮಡುವಿನಿಂದ ಕೂಡಿತ್ತು. ದಾಳಿಯ ಭಯದಿಂದ ಊರಿನ ಮನೆ ಬಿಟ್ಟು ಬರುವ ವೇಳೆ ಈ ರೀತಿ ಆಯಿತು. ಕೊನೆಗೆ ಆಕೆ ಸಾವನ್ನಪ್ಪಿದಳು ಎಂದು ಹೇಳಿದ್ದಾರೆ.

    ಮದುವೆಯಾಗಬೇಕಿದ್ದ ನೈಸರ್ಗಿಬೇಗಂ ಪುತ್ರಿ
    ನಾನೂ ಏನೋ ಮಾಡಲು ಅಗುತ್ತೆ. ನಮಗೆ ಮನೆಯಿಂದ ಹೊರಕಳಿಸಿದರು, ಮೊದಲು ನೀವು ಚಿಕ್ಕಮನೆಗೆ ಹೋಗಿ ಅಂತಾ ಇಲ್ಲಿಗೆ ಕಳಿಸಿದರು. ನಾವು ಹೋಗುವುದಿಲ್ಲವೆಂದರು ಒತ್ತಾಯದಿಂದ ಕಳಿಸಿದರು. ನಾನು ಹಿಂದೆ ಬರುತ್ತನೆಂದು ಅಮ್ಮ ಕಳಿಸಿದರು. ಈಗ ನಮ್ಮ ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ದೇವೆ. ನಾವು ನೌಶೇರಾಗೆ ಬಂದು ಫೋನ್‌ ಮಾಡಿದ ಬಳಿಕವೇ ತಾಯಿ ಸಾವಿನ ವಿಷಯ ತಿಳಿಯಿತು ಎಂದು ಅಳಲು ತೋಡಿಕೊಂಡಿದ್ದಾರೆ.

  • ಕಾಶ್ಮೀರ ಗಡಿಯಲ್ಲಿನ ಪಾಕ್ ಉಗ್ರರ ನೆಲೆ ಉಡೀಸ್ – ವೀಡಿಯೋ ಬಿಡುಗಡೆ ಮಾಡಿದ ಸೇನೆ

    ಕಾಶ್ಮೀರ ಗಡಿಯಲ್ಲಿನ ಪಾಕ್ ಉಗ್ರರ ನೆಲೆ ಉಡೀಸ್ – ವೀಡಿಯೋ ಬಿಡುಗಡೆ ಮಾಡಿದ ಸೇನೆ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರ(Jammu and Kashmir) ಹಾಗೂ ಪಂಜಾಬ್‌ನ(Panjab) ಮೇಲೆ ಡ್ರೋನ್ ದಾಳಿಗೆ ಪಾಕ್ ಯತ್ನಿಸಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಮೇ 8 ಮತ್ತು 9 ರಂದು ರಾತ್ರಿ ನಿಯಂತ್ರಣ ರೇಖೆಯ ಬಳಿಯಿದ್ದ ಪಾಕಿಸ್ತಾನದ ಲಾಂಚ್‌ಪ್ಯಾಡ್‌ಗಳನ್ನು(Launchpads) ಧ್ವಂಸಗೊಳಿಸಿದ ವೀಡಿಯೋವನ್ನು ಸೇನೆಯು ಎಡಿಜಿಪಿಐ ಇಂಡಿಯನ್ ಆರ್ಮಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

    ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಲಾಂಚ್‌ಪ್ಯಾಡ್‌ಗಳ ಮೂಲಕವೇ ಪಾಕಿಸ್ತಾನದ ಉಗ್ರರು(Pakistan Terrorists) ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿಯನ್ನು ಯೋಜಿಸುತ್ತಿದ್ದರು. ಭಾರತೀಯ ಸೇನೆಯು ಪಾಕ್ ಉಗ್ರರ ಈ ನೆಲೆಯನ್ನು ಉಡೀಸ್ ಮಾಡುವ ಮೂಲಕ ತಕ್ಕ ಉತ್ತರ ನೀಡಿದೆ. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಮೆಚ್ಚಿ ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಪತ್ರ

    ಭಾರತೀಯ ಸೇನೆಯು(Indian Army) ಭಯೋತ್ಪಾದಕ ಉಡಾವಣಾ ನೆಲೆಗಳನ್ನು ಪುಡಿಪುಡಿ ಮಾಡಿದೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನ ಹಲವಾರು ನಗರಗಳಲ್ಲಿ 2025ರ ಮೇ 8 ಮತ್ತು 9ರಂದು ರಾತ್ರಿ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ಸಂಘಟಿತ ಗುಂಡಿನ ದಾಳಿ ನಡೆಸಿ, ಅವುಗಳನ್ನು ಪುಡಿಪುಡಿ ಮಾಡಿ ನಾಶಮಾಡಿತು. ಇದನ್ನೂ ಓದಿ: ಮನಸ್ಸು ಮಾಡಿದ್ರೆ ಎರಡೇ ದಿನಕ್ಕೆ ಪಾಕಿಸ್ತಾನ ನಿರ್ನಾಮ ಮಾಡ್ಬೋದು: ಜಮೀರ್

    ನಿಯಂತ್ರಣ ರೇಖೆಯ ಬಳಿ ಇರುವ ಭಯೋತ್ಪಾದಕ ಉಡಾವಣಾ ನೆಲೆಗಳು, ಹಿಂದೆ ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವ ಕೇಂದ್ರವಾಗಿತ್ತು. ಭಾರತೀಯ ಸೇನೆಯ ತ್ವರಿತ ಮತ್ತು ನಿರ್ಣಾಯಕ ಕ್ರಮವು ಭಯೋತ್ಪಾದಕ ಮೂಲಸೌಕರ್ಯ ಮತ್ತು ಸಾಮರ್ಥ್ಯಗಳಿಗೆ ಗಮನಾರ್ಹ ಹೊಡೆತ ನೀಡಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.

  • ಪಾಕ್ ಶೆಲ್ ದಾಳಿಗೆ ಜಮ್ಮು ಕಾಶ್ಮೀರದ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು

    ಪಾಕ್ ಶೆಲ್ ದಾಳಿಗೆ ಜಮ್ಮು ಕಾಶ್ಮೀರದ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು

    ಶ್ರೀನಗರ: ರಾಜೌರಿ(Rajouri) ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಜಿಲ್ಲಾಧಿಕಾರಿಗಳ ನಿವಾಸದ ಮೇಲೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜ್ ಕುಮಾರ್ ಥಾಪ್ಪಾ(Raj Kumar Thapa) ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ.

    ಹೆಚ್ಚುವರಿ ಜಿಲ್ಲಾಧಿಕಾರಿ ರಾಜ್ ಕುಮಾರ್ ಅವರ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ(Omar Abdullah) ಅವರು ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: Video | ರಾಜಸ್ಥಾನದ ಪೋಖ್ರಾನ್‌ ಮೇಲೆ ಪಾಕ್‌ ಬಳಸಿದ ಬೃಹತ್‌ ಮಿಸೈಲ್‌ ಉಡೀಸ್‌!

    ರಾಜೌರಿಯಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ನಾವು ಜಮ್ಮು ಮತ್ತು ಕಾಶ್ಮೀರ(Jammu and Kashmir) ಆಡಳಿತ ಸೇವೆಗಳ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಇದ್ದರು. ಅಲ್ಲದೇ ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ್ದರು. ಇಂದು ಅಧಿಕಾರಿಯ ನಿವಾಸದ ಮೇಲೆ ಪಾಕ್ ಶೆಲ್ ದಾಳಿ ನಡಿಸಿದ್ದು, ನಮ್ಮ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜ್ ಕುಮಾರ್ ಥಾಪ್ಪಾ ಸಾವನ್ನಪ್ಪಿದ್ದಾರೆ. ಈ ಭೀಕರ ಜೀವಹಾನಿಯಿಂದ ನನಗೆ ಆಘಾತವಾಗಿದೆ. ಈ ದುಃಖವನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಮರ್ ಅಬ್ದುಲ್ಲಾ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.