Tag: ಜಮ್ಮು ಮತ್ತು ಕಾಶ್ಮೀರ

  • ಜಮ್ಮು-ಕಾಶ್ಮೀರದಲ್ಲಿ 1,800 CRPF ಸೈನಿಕರನ್ನು ನಿಯೋಜಿಸಲು ಮುಂದಾದ ಸರ್ಕಾರ

    ಜಮ್ಮು-ಕಾಶ್ಮೀರದಲ್ಲಿ 1,800 CRPF ಸೈನಿಕರನ್ನು ನಿಯೋಜಿಸಲು ಮುಂದಾದ ಸರ್ಕಾರ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ ಜಿಲ್ಲೆಯಲ್ಲಿ (Rajouri District) ಹಿಂದೂ ಕುಟುಂಬಗಳ (Hindu Families) ಮೇಲಿನ ಭಯೋತ್ಪಾದಕ ದಾಳಿಯಿಂದ ಎಚ್ಚೆತ್ತ ಕೇಂದ್ರ ಸರ್ಕಾರ ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಕ್ರಮಕ್ಕೆ ಮುಂದಾಗಿದೆ.

    ಕಳೆದ ಎರಡು ವಾರಗಳ ಅವಧಿಯಲ್ಲಿ ನಡೆದ ಎರಡು ಭಯೋತ್ಪಾದಕ ದಾಳಿಯಿಂದ (Terror Attacks) ರಾಜೌರಿಗೆ ಜಿಲ್ಲೆಗೆ CRPF ನ (ಕೇಂದ್ರ ಮೀಸಲು ಪೊಲೀಸ್ ಪಡೆ) 1,800 ಸಿಬ್ಬಂದಿ ನಿಯೋಜಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೆಹಲಿಯಲ್ಲಿ ಇನ್ನೊಂದು ಆಘಾತ – ಸ್ನೇಹ ಕೊನೆಗೊಳಿಸಲು ಬಯಸಿದ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ

    ಕಳೆದ ಮೂರು ದಿನಗಳಿಂದಲೂ ರಜೌರಿಯಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಹೆಚ್ಚಿನ ಭದ್ರತಾ ಸಿಬ್ಬಂದಿ ನೇಮಿಸಿದ್ದು, ಶೋಧ ಮುಂದುವರಿದಿದೆ. ಭಾನುವಾರ ಭಯೋತ್ಪಾದಕ ದಾಳಿಯ ನಂತರ ಸೇನೆ, ಪೊಲೀಸರೊಂದಿಗೆ CRPF ತುಕಡಿಗಳು ಕಾರ್ಯಾಚರಣೆ ಆರಂಭಿಸಿವೆ. CRPF ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಅಸ್ತಿತ್ವವ ಹೊಂದಿದೆ. ಇದರೊಂದಿಗೆ ಸಿಆರ್‌ಪಿಎಫ್‌ನ ಒಟ್ಟು ಬಲದ ಮೂರನೇ ಒಂದು ಭಾಗದಷ್ಟು 70ಕ್ಕೂ ಹೆಚ್ಚು ಬೆಟಾಲಿಯನ್‌ಗಳನ್ನು ಕೇಂದ್ರಾಡಳಿತ ಪ್ರದೇಶದಲ್ಲಿ ನಿಯೋಜಿಸಲಾಗಿದೆ.

    2ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: 6 ಮಂದಿಯನ್ನು ಬಲಿಪಡೆದು 11 ಮಂದಿಯನ್ನು ಗಾಯಾಳುಗಳನ್ನಾಗಿ ಮಾಡಿದ ರಜೌರಿಯ ಅವಳಿ ಭಯೋತ್ಪಾದನಾ ದಾಳಿಯ ವಿರುದ್ಧ ಪೂಂಛ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ 2ನೇ ದಿನಕ್ಕೆ ಕಾಲಿಟ್ಟಿದೆ. ಈ ದಾಳಿಯ ವಿರುದ್ಧ ಇಡೀ ಜಮ್ಮುವಿನಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: 1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ

    ಪ್ರತಿಭಟನೆ ವೇಳೆ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, ಅಲ್ಪಸಂಖ್ಯಾತರಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಪಾಕಿಸ್ತಾನದ ಪ್ರತಿಕೃತಿಯನ್ನು ದಹಿಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು

    ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು

    ಶ್ರೀನಗರ: ಭಾನುವಾರ ಭಯೋತ್ಪಾದಕರ (Terrorists) ಗುಂಡಿನ ದಾಳಿಗೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿಯಲ್ಲಿ (Rajouri) ನಡೆದಿತ್ತು. ಇಂದು ದಾಳಿ ನಡೆದ ಮನೆ ಬಳಿಯೇ ಇನ್ನೊಂದು ಸ್ಫೋಟ (Blast)  ಸಂಭವಿಸಿದ್ದು, ಮಗು ಸಾವನ್ನಪ್ಪಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ನಿನ್ನೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಉಗ್ರರು ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮೂರು ಮನೆಗಳಲ್ಲಿ ದಾಳಿ ನಡೆಸಿದ್ದ ಉಗ್ರರು ನಾಲ್ವರನ್ನು ಕೊಂದಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಇಂದು ನಡೆದ ಸ್ಫೋಟ ಡ್ಯಾಂಗ್ರಿ ಗ್ರಾಮದಲ್ಲಿ ವರದಿಯಾಗಿದೆ. ಇದು ನಿನ್ನೆ ಗುಂಡಿನ ದಾಳಿ ನಡೆದ ಮನೆಗಳ ಸಮೀಪವಿದೆ ಎನ್ನಲಾಗಿದೆ. ಘಟನೆಯಲ್ಲಿ ಮಗು ಸಾವನ್ನಪ್ಪಿದೆ. ಗಾಯಗೊಂಡಿರುವ ಐವರ ಪೈಕಿ ಇನ್ನೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದಲ್ಲಿ ಗಾಯಗೊಂಡ ಎಲ್ಲರನ್ನೂ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಜೈಲಿನ ಮೇಲೆ ಗುಂಡಿನ ದಾಳಿ – 10 ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು, 24 ಕೈದಿಗಳು ಎಸ್ಕೇಪ್‌

    ಭದ್ರತಾ ಪಡೆಗಳು ಘಟನಾ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಈ ವೇಳೆ ಇನ್ನೊಂದು ಶಂಕಿತ ಸುಧಾರಿತ ಸ್ಫೋಟಕ ಸಾಧನವನ್ನು (IED) ಪತ್ತೆಮಾಡಿದ್ದಾರೆ. ಭಯೋತ್ಪಾದಕರು ನಿರ್ದಿಷ್ಟ ಸಮುದಾಯದವರ ಮೇಲೆ ದಾಳಿ ನಡೆಸುತ್ತಿದ್ದು, ಅವರ ಪತ್ತೆ ಹಚ್ಚಲು ಹೆಚ್ಚುವರಿ ಸಿಬ್ಬಂದಿಯನ್ನು ಸೇರಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಗ್ರಾಮವೊಂದಕ್ಕೆ ನುಗ್ಗಿದ ಶಂಕಿತ ಉಗ್ರರು ದಾಳಿ ನಡೆಸಿದ ಪರಿಣಾಮ ಮೂವರು ನಾಗರಿಕರು (Civilians) ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.

    ಇಂದು ಸಂಜೆ ಡ್ಯಾಂಗ್ರಿ ಗ್ರಾಮದಲ್ಲಿ ಶಂಕಿತ ಉಗ್ರರು (Suspected Terror) ಗ್ರಾಮಸ್ಥರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 3 ಮನೆಗಳ ಮೇಲೆ ದಾಳಿ ನಡೆದಿದೆ. ಪರಿಣಾಮ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

    ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಸ್ಥಳೀಯ ವರದಿ ಪ್ರಕಾರ ಗಾಯಗೊಂಡ 8 ಜನರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಡಿಕ್ಕಿ ಹೊಡೆದು 12 ಕಿ.ಮೀ ಎಳೆದೊಯ್ದ ಕಾರು, ಯುವತಿ ದುರ್ಮರಣ

    ಕಳೆದ ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ ನಾಗರಿಕರ ಹತ್ಯೆಯ ಎರಡನೇ ಘಟನೆ ಇದಾಗಿದೆ. ಡಿ. 16ರಂದು ರಾಜೌರಿಯ ಸೇನಾ ಶಿಬಿರದ ಹೊರಗೆ ಇಬ್ಬರು ನಾಗರಿಕರು ಕೊಲ್ಲಲ್ಪಟ್ಟರು. ಇದನ್ನೂ ಓದಿ: ಮಹದಾಯಿ ಯೋಜನೆಗೆ ಡಿಪಿಆರ್‌ ಆಗಿದೆ; ಕಾಂಗ್ರೆಸ್‌ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ – ಸಿಎಂ

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಭೂಮಿ ಒತ್ತುವರಿ – ಬುಲ್ಡೋಜರ್ ಬಳಸಿ ಅಮೀರ್ ಖಾನ್ ಮನೆ ಕಾಂಪೌಂಡ್ ಧ್ವಂಸ

    ಸರ್ಕಾರಿ ಭೂಮಿ ಒತ್ತುವರಿ – ಬುಲ್ಡೋಜರ್ ಬಳಸಿ ಅಮೀರ್ ಖಾನ್ ಮನೆ ಕಾಂಪೌಂಡ್ ಧ್ವಂಸ

    ಶ್ರೀನಗರ: ಸರ್ಕಾರಿ ಭೂಮಿ (Government Land) ಒತ್ತುವರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ (Terrorist) ಗುಂಪಿನ ಕಮಾಂಡರ್ ಅಮೀರ್ ಖಾನ್‌ಗೆ (Amir Khan) ಸೇರಿದ ಆಸ್ತಿಯನ್ನು ಜಮ್ಮು ಮತ್ತು ಕಾಶ್ಮೀರ (Jammu and Kashmir) ಆಡಳಿತವು ಬುಲ್ಡೋಜರ್ (Bulldozer) ಬಳಸಿ ಧ್ವಂಸಗೊಳಿಸಿದೆ.

    ಇಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ಜಂಟಿ ಕಾರ್ಯಾಚರಣೆ ನಡೆಸಿ ಅನಂತನಾಗ್ ಜಿಲ್ಲೆಯ ಪಾಹಲ್ಗಾಮ್ ನಲ್ಲಿ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲೇ ಆಸ್ತಿಯನ್ನು ಧ್ವಂಸಗೊಳಿಸಿದೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಆಮೀರ್ ಖಾನ್‌ಗೆ ಸೇರಿದ ಮನೆಯ ಕಾಂಪೌಂಡ್ ಅನ್ನು ಧ್ವಂಸಗೊಳಿಸಲಾಗಿದೆ. ಇದನ್ನೂ ಓದಿ: ಟಿಕೆಟ್ ವಿಚಾರದಲ್ಲಿ ಕಚ್ಚಾಟ – KPCC ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

    ಬಳಿಕ ಮಾತನಾಡಿದ ಅಧಿಕಾರಿಗಳು, ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ಮುಕ್ತಗೊಳಿಸಲು ಮತ್ತು ಸರ್ಕಾರದ ಮೇಲೆ ಜನರಿಗೆ ನಂಬಿಕೆ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಸ್ಯಾಂಡಲ್ ವುಡ್ ಕ್ವೀನ್

    ಮೂಲಗಳ ಪ್ರಕಾರ, ಗುಲಾಂ ನಬಿ ಖಾನ್ ಅಲಿಯಾಸ್ ಅಮೀರ್ ಖಾನ್ ಹಿಜ್ಬುಲ್ ಮುಜಾಹಿದ್ದೀನ್‌ನ ಉನ್ನತ ಕಾರ್ಯಾಚರಣೆಯ ಕಮಾಂಡರ್ ಆಗಿದ್ದರು. 90ರ ದಶಕದ ಆರಂಭದಲ್ಲೇ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್ – 3 ಲಷ್ಕರ್ ಉಗ್ರರ ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಶೋಪಿಯಾನ್ (Shopian) ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ (Terrorists) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (LeT) ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಿಷೇಧಿತ ಭಯೋತ್ಪಾದನಾ ಸಂಘಟನೆ ಎಲ್‌ಇಟಿಯ 3 ಭಯೋತ್ಪಾದಕರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ಅವರ ಗುರುತು ಪತ್ತೆ ಹಚ್ಚುವ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಭದ್ರತಾ ಪಡೆಗಳು ಶೋಪಿಯಾನ್ ಝೈನಾಪೋರಾ ಪ್ರದೇಶದ ಮುಂಜ್ ಮಾರ್ಗ್ನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ಶೋಧಕಾರ್ಯಕ್ಕೆ ತೆರಳಿದ್ದಾರೆ. ಈ ವೇಳೆ ಭಯೋತ್ಪಾದಕರು ಸಿಕ್ಕಿಬಿದ್ದಿದ್ದು, ಗುಂಡಿನ ಚಕಮಕಿ ಪ್ರಾರಂಭವಾಗಿದೆ. ಇದನ್ನೂ ಓದಿ: ಚುನಾವಣೆಗೆ ಸಮೀಪದಲ್ಲಿ ಡಿಕೆಶಿಗೆ ಶಾಕ್ – 5 ವರ್ಷದಲ್ಲಿ ಎಷ್ಟು ಆಸ್ತಿ ಹೆಚ್ಚಾಗಿತ್ತು? ತನಿಖೆ ಎಲ್ಲಿಯವರೆಗೆ ಬಂದಿದೆ?

    ಹತರಾಗಿರುವ ಮೂವರು ಭಯೋತ್ಪಾದಕರಲ್ಲಿ ಇದೀಗ ಇಬ್ಬರ ಗುರುತು ಪತ್ತೆಹಚ್ಚಲಾಗಿದೆ. ಅದರಲ್ಲೊಬ್ಬ ಕಾಶ್ಮೀರ ಪಂಡಿತ್ ಪುರಾಣ ಕೃಷ್ಣ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಲತೀಫ್ ಲೋನ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ನೇಪಾಳದ ಟಿಲ್ ಬಹದ್ದೂರ್ ಥಾಪಾ ಹತ್ಯೆಯಲ್ಲಿ ಭಾಗಿಯಾಗಿದ್ದ ಉಮರ್ ನಜೀರ್ ಎಂದು ಗುರುತಿಸಲಾಗಿದೆ.

    ಉಗ್ರರಿಂದ 1 ಎಕೆ 47 ರೈಫಲ್ ಹಾಗೂ 2 ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಟಿಕೆಟ್ ಫೈಟ್ – ಅಂತರ ಕಾಯ್ದುಕೊಂಡ ಹಾಲಿ ಶಾಸಕರು

    Live Tv
    [brid partner=56869869 player=32851 video=960834 autoplay=true]

  • ವೈಷ್ಣೋದೇವಿ ದರ್ಶನಕ್ಕೆ ಮುಖ ಮುಚ್ಚಿಕೊಂಡು ಬಂದ ಶಾರುಖ್ ಖಾನ್

    ವೈಷ್ಣೋದೇವಿ ದರ್ಶನಕ್ಕೆ ಮುಖ ಮುಚ್ಚಿಕೊಂಡು ಬಂದ ಶಾರುಖ್ ಖಾನ್

    ಮ್ಮ ನಟನೆಯ ಪಠಾಣ್ ಸಿನಿಮಾದ ಚೊಚ್ಚಲು ಹಾಡು ರಿಲೀಸ್ ಆದ ಬೆನ್ನಲ್ಲೇ ಬಾಲಿವುಡ್ ನಟ ಶಾರುಖ್ ಖಾನ್ ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೆಳಗ್ಗೆಯೇ ದೇವಸ್ಥಾನಕ್ಕೆ ಆಗಮಿಸಿದ್ದ ಶಾರುಖ್, ಮುಖ ಮುಚ್ಚಿಕೊಂಡು ದೇವರ ದರ್ಶನ ಪಡೆದಿದ್ದಾರೆ. ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ಬಾಡಿಗಾಡ್ ಜೊತೆ ಕಾರಿನಲ್ಲಿ ಬಂದಿಳಿದ ಶಾರುಖ್, ಕಾರಿನಿಂದ ಇಳಿದು ನೇರವಾಗಿ ವೈಷ್ಣೋದೇವಿ ದೇವಸ್ಥಾನದ ಒಳಗೆ ಹೋಗಿದ್ದಾರೆ. ದೇವಸ್ಥಾನದ ಒಳಗೆ ಬಾಡಿಗಾಡ್ ಜೊತೆ ಹೋಗುತ್ತಿರುವ ಶಾರುಖ್ ವಿಡಿಯೋ ಕೂಡ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಶಾರುಖ್ ಮುಖಕ್ಕೆ ಬಟ್ಟೆಯಿಂದ ಮುಚ್ಚಿದ್ದಾರೆ. ಶಾರುಖ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿದ್ದವರು ಅವರನ್ನು ಸುತ್ತುವರೆದಿದ್ದಾರೆ. ಬಾಡಿಗಾಡ್ ಅಲ್ಲಿ ನೆರದಿದ್ದ ಜನರನ್ನು ಸರಿಸುತ್ತಾ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

    ಪಠಾನ್ ಸಿನಿಮಾ ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾ, ಮೊದಲ ಹಾಡಿನ ಮೂಲಕ ಪ್ರಚಾರ ಆರಂಭಿಸಲಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿಷೇನ್ ನ ಸಿನಿಮಾ ಇದಾಗಿದ್ದು, ಶುರುವಿನಿಂದ ಈವರೆಗೂ ಕುತೂಹಲವನ್ನು ಕಾಪಾಡಿಕೊಂಡೇ ಬರುತ್ತಿದೆ.

    ನಿನ್ನೆ ಹಾಡು ರಿಲೀಸ್ ಆಗುತ್ತಿರುವ ವಿಷಯವನ್ನು ಸ್ವತಃ ಶಾರುಖ್ ಖಾನ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಈ ಹಾಡನ್ನು ನೋಡಲು ತಾವೂ ಕೂಡ ಕಾತರದಿಂದ ಕಾಯುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರು. ಅಲ್ಲದೇ ಅಭಿಮಾನಿಗಳು ಕೂಡ  ಅಷ್ಟೇ ಕುತೂಹಲದಿಂದಲೇ ಹಾಡಿಗಾಗಿ ಕಾದಿದ್ದರು. ಬಿಡುಗಡೆಯಾದ ಹಾಡಿಗೆ ಅಭಿಮಾನಿಗಳು ಕೂಡ ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಇದು ಶಾರುಖ್ ಖಾನ್ ವೃತ್ತಿ ಜೀವನದ ಮಹತ್ವದ ಸಿನಿಮಾ ಎನ್ನಲಾಗುತ್ತಿದ್ದು, ಸತತ ಸೋಲಿನ ಬಳಿಕೆ ಬಾಲಿವುಡ್ ಗೆ ಈ ಸಿನಿಮಾ ಶಕ್ತಿ ತುಂಬಲಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಕಾಂಬಿನೇಷನ್ ಇರುವುದರಿಂದ ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಹಿಟ್ ಆಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇಂದು ಬಿಡುಗಡೆ ಆಗಿರುವ ಹಾಡು ಅಂಥದ್ದೊಂದು ಭರವಸೆಯನ್ನೂ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪುಲ್ವಾಮಾದಲ್ಲಿ ಜೆಇಎಂ ಭಯೋತ್ಪಾದಕನ ಅಕ್ರಮ ಮನೆ ನೆಲಸಮ

    ಪುಲ್ವಾಮಾದಲ್ಲಿ ಜೆಇಎಂ ಭಯೋತ್ಪಾದಕನ ಅಕ್ರಮ ಮನೆ ನೆಲಸಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪುಲ್ವಾಮಾ (Pulwama) ಜಿಲ್ಲೆಯ ನ್ಯೂ ಕಾಲೋನಿಯಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕ (Terrorist) ಆಶಿಕ್ ನೆಂಗ್ರೂನ (Ashiq Nengroo) ಮನೆಯನ್ನು ಅಧಿಕಾರಿಗಳು ಶನಿವಾರ ನೆಲಸಮಗೊಳಿಸಿದ್ದಾರೆ (Demolished).

    ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಇಎಂನ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ ಆರೋಪಿಯಾಗಿರುವ ನೆಂಗ್ರೂನ ಅಕ್ರಮವಾದ 2 ಅಂತಸ್ತಿನ ಮನೆಯನ್ನು ಜಿಲ್ಲಾಡಳಿತ ಪೊಲೀಸರ ಸಮ್ಮುಖದಲ್ಲಿ ನೆಲಸಮಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲಕ್ಕೆ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಆಯ್ಕೆ ಮಾಡಿದ ಕಾಂಗ್ರೆಸ್

    ನೆಂಗ್ರೂ ನಿವಾಸವನ್ನು ಧ್ವಂಸಗೊಳಿಸಿರುವ ನಡೆಯನ್ನು ಉಗ್ರಗಾಮಿ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ವಿರೋಧಿಸಿದೆ. ಧ್ವಂಸಗೊಳಿಸುವ ಕಾರ್ಯವನ್ನು ನಿರ್ವಹಿಸುವ ಅಧಿಕಾರಿಗಳು ಇದರ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.

    ಆಶಿಕ್ ನೆಂಗ್ರೂ ಯಾರು?
    ನೆಂಗ್ರೂ ವಾಂಟೆಡ್ ಜೆಇಎಂ ಕಮಾಂಡರ್ ಮತ್ತು 2019 ರ ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಈ ವರ್ಷ ಏಪ್ರಿಲ್‌ನಲ್ಲಿ, ಕೇಂದ್ರ ಸರ್ಕಾರ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಕಾಯ್ದೆಯಡಿಯಲ್ಲಿ ಜೆಇಎಂ ಕಮಾಂಡರ್ ಅನ್ನು ನಿಯೋಜಿತ ಭಯೋತ್ಪಾದಕ ಎಂದು ಘೋಷಿಸಿದೆ. ಇದನ್ನೂ ಓದಿ: ಮಳೆಬಿಲ್ಲು ಬಣ್ಣದ ಶರ್ಟ್ ಧರಿಸಿ ಬಂಧನವಾಗಿದ್ದ ಅಮೆರಿಕದ ಪತ್ರಕರ್ತ ಕತಾರ್‌ನಲ್ಲಿ ನಿಧನ

    Live Tv
    [brid partner=56869869 player=32851 video=960834 autoplay=true]

  • 24 ಗಂಟೆಯೊಳಗೆ ಸರ್ಕಾರಿ ವಸತಿ ಗೃಹ ಖಾಲಿ ಮಾಡಿ – ಕಾಶ್ಮೀರ ಮಾಜಿ ಸಿಎಂ ಮುಫ್ತಿ ಸೇರಿ 7 ಮಂದಿಗೆ ನೋಟಿಸ್‌

    24 ಗಂಟೆಯೊಳಗೆ ಸರ್ಕಾರಿ ವಸತಿ ಗೃಹ ಖಾಲಿ ಮಾಡಿ – ಕಾಶ್ಮೀರ ಮಾಜಿ ಸಿಎಂ ಮುಫ್ತಿ ಸೇರಿ 7 ಮಂದಿಗೆ ನೋಟಿಸ್‌

    ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹೌಸಿಂಗ್ ಕಾಲೋನಿ ಖಾನಬಲ್ ಪ್ರದೇಶದಲ್ಲಿನ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ (Mehbooba Mufti) ಸೇರಿದಂತೆ ಏಳು ಮಾಜಿ ಶಾಸಕರಿಗೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

    ಅನಂತನಾಗ್‌ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಅವರು ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಈ ನೋಟಿಸ್‌ ಹೊರಡಿಸಿದ್ದಾರೆ. ಮಾಜಿ ಶಾಸಕ ಮೊಹಮ್ಮದ್ ಅಲ್ತಾಫ್ ವಾನಿ, ಮಾಜಿ ಶಾಸಕ ಅಬ್ದುಲ್ ರಹೀಮ್ ರಾಥರ್, ಮಾಜಿ ಶಾಸಕ ಅಬ್ದುಲ್ ಮಜೀದ್ ಭಟ್ ಮತ್ತು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ವಸತಿ ಗೃಹ ತೆರವು ಮಾಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಸೇವೆ ಮಾಡಲು ನೇಮಕವಾಗಿದ್ರು 10 ಜನ!

    ಇವರಿಗೆ ಸೇರಿದ ಸರ್ಕಾರಿ ವಸತಿ ಗೃಹ ಸಂಖ್ಯೆ 1, 4, 6 ಮತ್ತು 7 ರ ನಿವಾಸಗಳನ್ನು ತೆರವು ಮಾಡಲು ತಿಳಿಸಲಾಗಿದೆ. 24 ಗಂಟೆಗಳ ಒಳಗೆ ಖಾಲಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾಜಿ ಶಾಸಕ ಅಲ್ತಾಫ್ ಷಾ ಅಲಿಯಾಸ್ ಕಾಲೋ, ಮಾಜಿ ಎಂಎಲ್‌ಸಿ ಬಶೀರ್ ಶಾ ಅಲಿಯಾಸ್ ವೀರಿ, ಮಾಜಿ ಎಂಎಲ್‌ಸಿ ಚೌಧರಿ ನಿಜಾಮುದ್ದೀನ್, ಮಾಜಿ ಶಾಸಕ ಅಬ್ದುಲ್ ಕಬೀರ್ ಪಠಾಣ್ ಮತ್ತು ಎಂಸಿ ಕೌನ್ಸಿಲರ್ ಶೇಖ್ ಮೊಹಿಯುದ್ದೀನ್ ಸೇರಿದಂತೆ ಇತರರು ಸಹ ಸರ್ಕಾರಿ ವಸತಿ ಗೃಹ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೊಳಿಸಿ – ಗಿರಿರಾಜ್ ಸಿಂಗ್

    ಹೌಸಿಂಗ್ ಕಾಲೋನಿ ಖಾನಬಾಳದಲ್ಲಿ ಸರ್ಕಾರಿ ಕ್ವಾರ್ಟರ್ಸ್ ಇದ್ದು, ನಿಗದಿತ ಸಮಯದೊಳಗೆ ನಿವೇಶನ ತೆರವು ಮಾಡದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತಪ್ಪಿದ ಭಾರೀ ದುರಂತ – ಮಿನಿ ಬಸ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ ಪತ್ತೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೊಲೀಸರು ಶುಕ್ರವಾರ ರಾಂಬನ್ (Ramban) ಜಿಲ್ಲೆಯಲ್ಲಿ ಮಿನಿ ಬಸ್‌ನಲ್ಲಿ (Mini Bus) ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನವನ್ನು (IED) ವಶಪಡಿಸಿಕೊಂಡು, ಅದನ್ನು ನಿಷ್ಕ್ರಿಯಗೊಳಿಸಿರುವುದಾಗಿ ತಿಳಿಸಿದ್ದಾರೆ.

    ಸುಮಾರು 20 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್‌ನಲ್ಲಿ ಅನುಮಾನಾಸ್ಪದ ವಸ್ತುವನ್ನು ಸಾಗಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಬಳಿಕ ಮಿನಿ ಬಸ್ ಒಂದನ್ನು ತಪಾಸಣೆಗೆ ಒಳಪಡಿಸಲಾಯಿತು ಎಂದು ಎಸ್‌ಎಸ್‌ಪಿ ಮೋಹಿತಾ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಕಚೇರಿಯಿಂದ ಕಾಣೆಯಾಯ್ತಾ ಬಿಬಿಎಂಪಿ ಫೈಲ್? – ಸಾವಿರಾರು ಕೋಟಿ ರೂ. ವ್ಯವಹಾರದ ಕಡತ ನಾಪತ್ತೆ

    ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಮೊದಲಿಗೆ ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಬಳಿಕ ಬಸ್ ಅನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಹುಡುಕಾಟದ ವೇಳೆ ಅನುಮಾನಾಸ್ಪದ ಬ್ಯಾಗ್ ಒಂದು ಪತ್ತೆಯಾಗಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ ಐಇಡಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬಣ ಸಂಘರ್ಷ – ಡಿಕೆಶಿ ನಡೆಗೆ ಸಿದ್ದರಾಮಯ್ಯ ಕೊತಕೊತ!

    ಐಇಡಿ ಪತ್ತೆಯಾಗುತ್ತಲೇ ಸಿಆರ್‌ಪಿಎಫ್ ಮತ್ತು ಸೇನೆಯ ತಂಡ ಸ್ಥಳಕ್ಕೆ ಆಗಮಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಮೂಲಕ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಧಗ ಧಗನೆ ಹೊತ್ತಿ ಉರಿದ ಜಮ್ಮು-ಕಾಶ್ಮೀರದ ಜಾಮಿಯಾ ಮಸೀದಿ

    ಧಗ ಧಗನೆ ಹೊತ್ತಿ ಉರಿದ ಜಮ್ಮು-ಕಾಶ್ಮೀರದ ಜಾಮಿಯಾ ಮಸೀದಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ದ್ರಾಸ್‌ನಲ್ಲಿರುವ ಜಾಮಿಯಾ ಮಸೀದಿಯಲ್ಲಿ (Jamia Masjid) ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮಸೀದಿ ಅಪಾರ ಹಾನಿಗೊಳಗಾಗಿದೆ.

    ಭಾರತೀಯ ಸೇನೆ (Indian Army), ಪೊಲೀಸ್ (Police), ಅಗ್ನಿಶಾಮಕ ಹಾಗೂ ತುರ್ತು ವಿಭಾಗದ ಸಹಾಯದಿಂದ ಬೆಂಕಿ ನಂದಿಸಲಾಗಿದೆ. ಮೂಲಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಂಬಳ ನೀಡದಿದ್ದರೆ 108 ಅಂಬುಲೆನ್ಸ್ ಸೇವೆ ಸ್ಥಗಿತ – GVK ಹೊಣೆ ಎಂದ ಚಾಲಕರು

    ಈ ಕುರಿತು ಮಾಹಿತಿ ನೀಡಿರುವ ಜಾಮಿಯಾ ಮಸೀದಿಯ (Jamia Masjid) ಉಸ್ತುವಾರಿ, ದ್ರಾಸ್‌ನ ಅತ್ಯಂತ ಹಳೆಯ ಮಸೀದಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ದುರದೃಷ್ಟಕರ ಸಂಗತಿ. ದ್ರಾಸ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಆದರೆ ಇಲ್ಲಿ ಒಂದೇ ಒಂದು ಅಗ್ನಿಶಾಮಕ ಸೇವೆಯೂ ಇಲ್ಲ. ಇಂತಹ ಘಟನೆಗಳು ಅನೇಕ ಬಾರಿ ನಡೆದಿದ್ದರೂ ಕೇಂದ್ರಾಡಳಿತ ಪ್ರದೇಶ ಇನ್ನೂ ಬುದ್ದಿ ಕಲಿತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ವಿಚಾರಣೆಗೆ ಹೆದರಿ 3 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    Live Tv
    [brid partner=56869869 player=32851 video=960834 autoplay=true]