ಶ್ರೀನಗರ: ಭಾರತೀಯ ಸೇನಾ ಹೆಲಿಕಾಪ್ಟರ್ (Army Helicopter) ಒಂದು ಪತನವಾಗಿರುವ ಆಘಾತಕಾರಿ ಘಟನೆ ಗುರುವಾರ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವರ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಚ್ನಾ ಗ್ರಾಮದ ಬಳಿ ಸೇನೆಯ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಪತನವಾಗಿದೆ. ಅಪಘಾತದ ವೇಳೆ ಹೆಲಿಕಾಪ್ಟರ್‌ನಲ್ಲಿ ಮೂರು ಮಂದಿ ಇದ್ದರು ಎನ್ನಲಾಗಿದೆ. ಇದನ್ನೂ ಓದಿ: ಒಡಿಶಾಗೆ ಅಪ್ಪಳಿಸಲಿದೆ ವರ್ಷದ ಮೊದಲ ಸೈಕ್ಲೋನ್ ಮೋಚಾ
ಹೆಲಿಕಾಪ್ಟರ್ ಪತನದಿಂದಾಗಿ ಪೈಲಟ್‌ಗಳು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಸದ್ಯ ಅವರು ಸುರಕ್ಷಿತರಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾ (Baramulla) ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು (Terrorists) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಇದು 2ನೇ ಎನ್‌ಕೌಂಟರ್ ಆಗಿದೆ. ಮುಂದಿನ ಕೆಲವು ದಿನಗಳಲ್ಲಿ ಭಯೋತ್ಪಾದಕರು ದೊಡ್ಡ ಮಟ್ಟದ ದಾಳಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ ಆಗಿದ್ದಾರೆ.
— Kashmir Zone Police (@KashmirPolice) May 4, 2023
ವನಿಗಮ್ ಗ್ರಾಮದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಬಳಿಕ ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಬಜರಂಗಿ ಸಂಘರ್ಷ – ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಮೊಳಗಲಿದೆ ಹನುಮಾನ್ ಚಾಲೀಸಾ
ಎನ್‌ಕೌಂಟರ್ ನಡೆಸಿದ ಪ್ರದೇಶದಿಂದ ಒಂದು ಎಕೆ ರೈಫಲ್ ಮತ್ತು ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಯಾದ ಭಯೋತ್ಪಾದಕರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬುಧವಾರ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಒಳ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಅಪರಿಚಿತ ಭಯೋತ್ಪಾದಕರನ್ನು ಸೇನೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ನಡೆಸಿದ್ದಾರೆ. ಭಯೋತ್ಪಾದಕರು ಈ ಪ್ರದೇಶದಲ್ಲಿ ಕೆಲವು ಪ್ರಮುಖ ದಾಳಿಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆ ಜಮ್ಮುವಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಯತ್ನಾಳ್, ಪ್ರಿಯಾಂಕ್ ಖರ್ಗೆಗೆ ಶೋಕಾಸ್ ನೋಟಿಸ್ ಜಾರಿ
ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ (Government of India) ಮಹತ್ವದ ಹೆಜ್ಜೆ ಇಟ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರು ಹಾಗೂ ಅವರ ಬೆಂಬಲಿಗರ ನಡುವೆ ಸಂವಹನ ನಡೆಸಲು ಬಳಕೆಯಾಗುತ್ತಿದ್ದ 14 ಅಪ್ಲಿಕೇಷನ್‍ಗಳನ್ನು ಕೇಂದ್ರ ನಿಷೇಧಿಸಿದೆ.
ನಿಷೇಧಿಸಲಾದ ಎಲ್ಲಾ ಅಪ್ಲಿಕೇಷನ್‍ಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ (Terrorist Activities) ತೊಡಗಿದ್ದ ವ್ಯಕ್ತಿಗಳೊಂದಿಗೆ ಸಂದೇಶ ರವಾನಿಸಲು (Messaging Applications) ಬಳಕೆಯಾಗುತ್ತಿತ್ತು. ಈ ಬಗ್ಗೆ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಸೂಕ್ತ ಮಾಹಿತಿ ನೀಡಿದ್ದವು. ಗುಪ್ತಚರ ಸಂಸ್ಥೆಗಳು (Security and Intelligence Agencies) ಸೂಚಿಸಿದ್ದ ಅಪ್ಲಿಕೇಷನ್‍ಗಳಲ್ಲಿ ಪಾಕಿಸ್ತಾನದಿಂದ (Pakistan) ಸೂಚನೆಗಳು ರವಾನೆಯಾಗುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್ ಫೋಟೋ ರಿಲೀಸ್
ನಿಷೇಧಿತ ಅಪ್ಲಿಕೇಷನ್‍ಗಳು:
ಕ್ರಿಪ್‍ವೈಸರ್, ಎನಿಗ್ಮಾ, ಸೇಫ್‍ಸ್ವಿಸ್, ವಿಕ್ರಮ್, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂಡ್‍ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಾಂಗಿ ಮತ್ತು ಥ್ರೀಮಾ ನಿಷೇಧಿತ ಅಪ್ಲಿಕೇಷನ್‍ಗಳಾಗಿವೆ.
ಏ.20 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಸೇನಾ ವಾಹನದ ಮೇಲೆ ನಡೆಸಿದ್ದ ಗ್ರೇನೆಡ್ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದರು. ಈ ವೇಳೆ ಉಗ್ರರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿತ್ತು. ಇದನ್ನೂ ಓದಿ: ಕೇವಲ 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧವಾಗಲಿದೆ ಸ್ಟಾರ್‌ಶಿಪ್: ಮಸ್ಕ್
ಶ್ರೀನಗರ: ಭಾರತದ ಮೊದಲ ಕೇಬಲ್ ನಿರ್ಮಿತ ರೈಲು ಸೇತುವೆಯ ವೀಡಿಯೋ ಒಂದನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಶನಿವಾರ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ರೈಲ್ವೆಯ (Indian Railways) ಅತ್ಯಂತ ಸವಾಲಿನ ಉದಂಪುರ್, ಶ್ರೀನಗರ, ಹಾಗೂ ಬಾರಾಮುಲ್ಲಾ ರೈಲ್ ಲಿಂಕ್ (Udampur-Srinagar-Baramulla-Rail Link) ಯೋಜನೆಯಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಿಯಾಸಿ ಜಿಲ್ಲೆಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆಯು ಜಮ್ಮುವಿನಿಂದ ರಸ್ತೆಯ ಮೂಲಕ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ. ಇದನ್ನೂ ಓದಿ: ಬಿಜೆಪಿ ಸಂಸದನ ವಿರುದ್ಧ ಪ್ರತಿಭಟನೆ – ಕುಸ್ತಿಪಟುಗಳ ಭೇಟಿಯಾದ ಪ್ರಿಯಾಂಕಾ ಗಾಂಧಿ
In 11 months, India’s first cable stayed rail bridge is ready.
All 96 cables set! #AnjiKhadBridge
PS: Total length of cable strands 653 km???? pic.twitter.com/CctSXFxhfa
11 ತಿಂಗಳುಗಳಲ್ಲಿ ಅಂಜಿ ಖಾಡ್ (Anji Khad) ಸೇತುವೆ ನಿರ್ಮಾಣ ಮಾಡಲಾಗಿದೆ. ಒಟ್ಟು 96 ಕೇಬಲ್‍ಗಳನ್ನು ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. ಕೇಬಲ್ ಎಳೆಗಳ ಒಟ್ಟು ಉದ್ದ 653 ಕಿಮೀ. ಆಗಿದೆ. ಅದು ಈಗ ಬಳಕೆಗೆ ಸಿದ್ಧವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ವಾಯು ಮಾರ್ಗದ ವಾಯುಮಾರ್ಗದ ನಿರ್ಬಂಧದ ಕಾರಣದಿಂದ ಕತ್ರಾ (Katra) ತುದಿಯಲ್ಲಿ ವಿಶೇಷ ಪಾಯದ ಮೂಲಕ ಸೇತುವೆಯನ್ನು ಪರ್ವತದ ಇಳಿಜಾರಿನಲ್ಲಿ ಸ್ಥಿರಗೊಳಿಸಲಾಗಿದೆ. 40 ಮೀಟರ್ ಆಳದ ಹೈಬ್ರಿಡ್ ಅಡಿಪಾಯದೊಂದಿಗೆ ಸೇತವೆಯನ್ನು ಭದ್ರಪಡಿಸಲಾಗಿದೆ. ಸೇತುವೆಯ ಒಟ್ಟು ಉದ್ದ 725.5 ಮೀಟರ್ ಇದೆ. ಈ ಸೇತುವೆಯು ಅಡಿಪಾಯದ ಮೇಲ್ಭಾಗದಿಂದ 193 ಮೀಟರ್ ಎತ್ತರದ ಏಕೈಕ ಮುಖ್ಯ ಪಿಲ್ಲರ್‍ನ್ನು ಹೊಂದಿದೆ. ಇದರ ಮೇಲೆ ಗಂಟೆಗೆ 100 ಕಿಮೀ ವೇಗದಲ್ಲಿ ರೈಲು ಸಂಚರಿಸಬಹುದಾಗಿದೆ. ಇದನ್ನೂ ಓದಿ: ಐವರು ಸೈನಿಕರ ದುರ್ಮರಣದ ಹಿಂದೆ ಪಾಕ್ ಕೈವಾಡ – ಡ್ರೋನ್ ಮೂಲಕ ಶಸ್ತ್ರಾಸ್ತ್ರ ಪೂರೈಕೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿ (Poonch Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ದಾಳಿಯ ಒಂದು ವಾರದ ನಂತರ ಭಯೋತ್ಪಾದಕರು ಪಾಕಿಸ್ತಾನದಿಂದ (Pakistan) ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ (Weapons) ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ಸುಮಾರು 12 ಮಂದಿ ಭಯೋತ್ಪಾದಕರು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸೈನಿಕರ ವಾಹನದ ಮೇಲೆ ದಾಳಿ ಪ್ರಕರಣ – 12 ಶಂಕಿತರು ವಶಕ್ಕೆ
ಪೂಂಚ್ ಜಿಲ್ಲೆಯಲ್ಲಿ ಸೈನಿಕರು ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದಾಗ ಐವರು ಸೈನಿಕರು ಸಾವನ್ನಪ್ಪಿದರು. ಮರುದಿನ 12 ಜನ ಶಂಕಿತರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಘಟನೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ನೇತೃತ್ವದ ತಂಡ ಕಳೆದ ಒಂದು ವಾರದಿಂದಲೂ ಭಯೋತ್ಪಾದಕರನ್ನ ಸದೆಬಡಿಯಲು ಬಿಗಿ ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ಮಾಹಿತಿ ಬೆಳಕಿಗೆ ಬಂದಿದೆ. ವಶಕ್ಕೆ ಪಡೆಯಲಾದ ಶಂಕಿತರ ಪೈಕಿ ನಾಸಿರ್ ಅಹ್ಮದ್ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಾಸಿರ್ ಅಹ್ಮದ್‌ನನ್ನ ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಮತ್ತಷ್ಟು ಮಹತ್ವದ ಮಾಹಿತಿ ತಿಳಿದು ಬಂದಿದೆ. ಇದೇ ವೇಳೆ ಈ ಪ್ರದೇಶದಲ್ಲಿ ನೆಲೆಸಿರುವ ಭಯೋತ್ಪಾದಕರಿಗೆ ಪಾಕಿಸ್ತಾನದಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದೆ ಅನ್ನೋದು ಗೊತ್ತಾಗಿದೆ. ಆದ್ರೆ ಅವರನ್ನು ಪತ್ತೆಹಚ್ಚಲು ಮಾಹಿತಿ ಸಹಾಯಕವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: `ಮೋದಿ ವಿಷ ಸರ್ಪ, ಸೋನಿಯಾ ವಿಷಕನ್ಯೆ’ ಹೇಳಿಕೆ – ಖರ್ಗೆ, ಯತ್ನಾಳ್ ವಿರುದ್ಧ ದೂರು
ಈಗಾಗಲೇ 12 ಜನ ಶಂಕಿತರನ್ನ ವಶಕ್ಕೆ ಪಡೆದಿದ್ದು, 200ಕ್ಕೂ ಹೆಚ್ಚು ಜನರನ್ನ ವಿಚಾರಣೆಗೆ ಕರೆಸಲಾಗಿದೆ. ದಾಳಿಕೋರರನ್ನ ಪತ್ತೆಹಚ್ಚಲು ಸತತ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಏನಿದು ಘಟನೆ?
ಸೈನಿಕರು ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿ ಐವರು ಸೈನಿಕರ ಸಾವನ್ನಪ್ಪಿದ್ದರು. ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಅವರು ತನಿಖೆಯ ಮೇಲ್ವಿಚಾರಣೆಗಾಗಿ ನೆರೆಯ ರಜೌರಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದರು. ಇಬ್ಬರು ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದರು. ಡೆಪ್ಯುಟಿ ಇನ್ಸ್‍ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿತ್ತು.
ಪ್ರಾಥಮಿಕ ವರದಿಯಲ್ಲಿ ಸುಮಾರು ಐವರು ಭಯೋತ್ಪಾದಕರು ದಾಳಿಯಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ಇತ್ತು. ಸೇನಾ ಟ್ರಕ್ ಮೇಲೆ ಮೂರು ಕಡೆಗಳಿಂದ ದಾಳಿ ನಡೆದಿತ್ತು. ದಾಳಿಯ ನಂತರ, ಭಯೋತ್ಪಾದಕರು ಗ್ರೆನೇಡ್‍ಗಳು ಮತ್ತು ಬಾಂಬ್‍ಗಳನ್ನು ಬಳಸಿ ವಾಹನವನ್ನು ಸುಟ್ಟು ಹಾಕಿದ್ದರು. ದಾಳಿ ನಡೆಸಿದವರು ಒಂದು ವರ್ಷಕ್ಕೂ ಹೆಚ್ಚು ಕಾಲ ರಜೌರಿ ಮತ್ತು ಪೂಂಚ್‍ನಲ್ಲಿ ವಾಸವಾಗಿದ್ದರು. ಇಂತಹ ಕಠಿಣವಾದ ಭೂಪ್ರದೇಶದ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿದ್ದರು. ಪ್ರಸ್ತುತ ಈ ಪ್ರದೇಶದಲ್ಲಿ 3 ರಿಂದ 4 ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿವೆ ಎಂದು ತೀಳಿದು ಬಂದಿತ್ತು. ಜೈಶ್-ಎ-ಮೊಹಮ್ಮದ್‍ನ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ ನಿಷೇಧಿತ ಭಯೋತ್ಪಾದಕ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಇದು ನಿಷೇಧಿತ ಲಷ್ಕರ್-ಎ-ತೊಯ್ಬಾ ಗುಂಪಿನ ಕೈವಾಡ ಎನ್ನಲಾದ ಮಾಹಿತಿ ಇದೆ ಎಂದೂ ತಿಳಿದುಬಂದಿತ್ತು.
ಶ್ರೀನಗರ: ಸೈನಿಕರು ಸಂಚರಿಸುತ್ತಿದ್ದ ವಾಹನದ (Army Truck) ಮೇಲೆ ಗುರುವಾರ ದಾಳಿ ನಡೆಸಿ ಐವರು ಸೈನಿಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶುಕ್ರವಾರ 12 ಜನ ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳ ಜೊತೆಗಿನ ನಂಟನ್ನು ಖಚಿತಪಡಿಸಿಕೊಳ್ಳಲು ಬಂಧನಕ್ಕೊಳಗಾದವರನ್ನು ವಿವಿಧ ಹಂತಗಳಲ್ಲಿ ಪ್ರಶ್ನಿಸಲಾಗುತ್ತಿದೆ. ಹಾಗೂ ಪೂಂಚ್ ಸೆಕ್ಟರ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಭಯೋತ್ಪಾದಕ ಚಟುವಟಿಕೆಗಳು ಸಕ್ರಿಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯೋಧರ ವಾಹನದ ಮೇಲೆ ಉಗ್ರರಿಂದ ಗುಂಡಿನ ದಾಳಿ – ಗ್ರೆನೇಡ್ ಬಳಕೆ ಸಾಧ್ಯತೆ
ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಅವರು ತನಿಖೆಯ ಮೇಲ್ವಿಚಾರಣೆಗಾಗಿ ನೆರೆಯ ರಜೌರಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದರು. ಇಬ್ಬರು ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಡೆಪ್ಯುಟಿ ಇನ್ಸ್‍ಪೆಕ್ಟರ್ ಜನರಲ್ ಶ್ರೇಣಿಯ (Deputy Inspector General rank officer) ಅಧಿಕಾರಿಯ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ.
ಪ್ರಾಥಮಿಕ ವರದಿಯಲ್ಲಿ ಸುಮಾರು ಐವರು ಭಯೋತ್ಪಾದಕರು ದಾಳಿಯಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ಇದೆ. ಸೇನಾ ಟ್ರಕ್ ಮೇಲೆ ಮೂರು ಕಡೆಗಳಿಂದ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಯ ನಂತರ, ಭಯೋತ್ಪಾದಕರು ಗ್ರೆನೇಡ್‍ಗಳು ಮತ್ತು ಬಾಂಬ್‍ಗಳನ್ನು ಬಳಸಿ ವಾಹನವನ್ನು ಸುಟ್ಟು ಹಾಕಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಭದ್ರತಾ ದೃಷ್ಟಿಯಿಂದ ಭಿಂಬರ್ ಗಲಿ ಮತ್ತು ಜರ್ರಾನ್ ವಾಲಿ ಗಲಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತತ ಎರಡನೇ ದಿನವೂ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆಸಿದವರು ಒಂದು ವರ್ಷಕ್ಕೂ ಹೆಚ್ಚು ಕಾಲ ರಜೌರಿ ಮತ್ತು ಪೂಂಚ್‍ನಲ್ಲಿ ವಾಸವಾಗಿದ್ದರು. ಇಂತಹ ಕಠಿಣವಾದ ಭೂಪ್ರದೇಶದ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿದ್ದರು. ಪ್ರಸ್ತುತ ಈ ಪ್ರದೇಶದಲ್ಲಿ ಮೂರರಿಂದ ನಾಲ್ಕು ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಶ್-ಎ-ಮೊಹಮ್ಮದ್‍ನ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ ನಿಷೇಧಿತ ಭಯೋತ್ಪಾದಕ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದು ನಿಷೇಧಿತ ಲಷ್ಕರ್-ಎ-ತೊಯ್ಬಾ ಗುಂಪಿನ ಕೈವಾಡ ಎನ್ನಲಾದ ಮಾಹಿತಿ ಇದೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದಕರನ್ನು ಪತ್ತೆ ಹಚ್ಚಲು ಡ್ರೋನ್‍ಗಳು ಮತ್ತು ಸ್ನಿಫರ್ ಡಾಗ್‍ಗಳನ್ನು (Sniffer Dogs) ಬಳಸಲಾಗುತ್ತಿದೆ. ಸೇನೆ ಎಂಐ- ಚಾಪರ್‌ನೊಂದಿಗೆ ( MI-chopper) ಪ್ರದೇಶದ ಪರಿಶೀಲನೆಯನ್ನು ಸಹ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿಯ ನಂತರ ಅವರ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಗುರುವಾರ ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿದರು ಮತ್ತು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೊಳಗಾದವರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾದ ರಾಷ್ಟ್ರೀಯ ರೈಫಲ್ಸ್ ಘಟಕದ ಯೋಧರಾಗಿದ್ದು ಅವರ ಮೃತದೇಹಗಳನ್ನು ಅವರವರ ಊರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕಟ್ಟೆಚ್ಚರ ಹೆಚ್ಚಿರುವ ಹಿನ್ನೆಲೆಯಲ್ಲಿ ಅವಳಿ ಗಡಿ ಜಿಲ್ಲೆಗಳಾದ ರಾಜೌರಿ ಮತ್ತು ಪೂಂಚ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಗಜ್ನವಿ ಫೋರ್ಸ್‌ನ ಕಮಾಂಡರ್ ರಫೀಕ್ ಅಹ್ಮದ್ ಅಲಿಯಾಸ್ ರಫೀಕ್ ನಯಿ ಅವರು ಇದೇ ಪ್ರದೇಶದ ನಿವಾಸಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ವಿರುದ್ಧ ಬಿಜೆಪಿ (BJP), ವಿಎಚ್‍ಪಿ (VHP), ಬಜರಂಗದಳ (Bajrang Dal), ಶಿವಸೇನೆ (Shiv Sena), ಡೋಗ್ರಾ ಫ್ರಂಟ್ ಮತ್ತು ಜಮ್ಮು ರಾಜ್ಯತ್ವ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ
ಶ್ರೀನಗರ: ಸೇನಾ ಟ್ರಕ್‌ಗೆ (Truck) ಬೆಂಕಿ ತಗುಲಿದ ಪರಿಣಾಮ ನಾಲ್ವರು ಯೋಧರು (Soldiers) ಸಜೀವದಹನವಾಗಿರುವ ಭೀಕರ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಪ್ರದೇಶದಲ್ಲಿ ನಡೆದಿದೆ.
ಘಟನೆ ಗುರುವಾರ ಭಟ ಧುರಿಯನ್ ಪ್ರದೇಶದ ಬಳಿ ನಡೆದಿರುವುದಾಗಿ ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ ಸಿಡಿಲು ಬಡಿದ ಪರಿಣಾಮ ಯೋಧರನ್ನು ಸಾಗಿಸಲಾಗುತ್ತಿದ್ದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದರ್ಗಾದಲ್ಲಿ ಗಳಗಳನೆ ಅತ್ತ ರಮೇಶ್ ಕುಮಾರ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ ಸೆಕ್ಟರ್‌ನ (Poonch sector) ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆಯು ಭಾನುವಾರ ಮುಂಜಾನೆ ಭಯೋತ್ಪಾದಕನನ್ನು (Terrorist) ಹೊಡೆದುರುಳಿಸಿ ದೇಶದ ಒಳಗೆ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಂಚ್ ಸೆಕ್ಟರ್‌ನ ಎಲ್‍ಒಸಿಯಲ್ಲಿ (LoC) ಗಸ್ತಿನಲ್ಲಿದ್ದ ಭಾರತೀಯ ಸೇನಾ ಪಡೆಗಳು ಅನುಮಾನಾಸ್ಪದ ವ್ಯಕ್ತಿಗಳ ಗುಂಪಿನ ಚಲನೆಯನ್ನು ಪತ್ತೆ ಹಚ್ಚಿದ್ದವು. ಗಡಿಯ ಸಮೀಪದಲ್ಲಿ ಸೇನಾ ಪಡೆಗಳು ಉಗ್ರರನ್ನು ತಡೆಹಿಡಿದ ನಂತರ ಪರಸ್ಪರ ಗುಂಡಿನ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಒಬ್ಬ ಮೃತಪಟ್ಟು, ಉಳಿದ ಕೆಲವು ಉಗ್ರರು ಸಮೀಪದ ಅರಣ್ಯಕ್ಕೆ ಓಡಿಹೋಗಿದ್ದಾರೆ. ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಜಮ್ಮು ಮೂಲದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕಾಡು ಪ್ರಾಣಿಗಳನ್ನು ನೋಡಿದರೆ ಜನ ವೋಟು ಒತ್ತುತ್ತಾರಾ: ಹೆಚ್ಡಿಕೆ ವ್ಯಂಗ್ಯ
ಪಾಕಿಸ್ತಾನವು (Pakistan) ಜಮ್ಮು ಕಾಶ್ಮೀರ ಗಡಿಯಲ್ಲಿ ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ಪುನರಾರಂಭಿಸಿದೆ. ಏ.3 ರಂದು ಗಡಿ ಜಿಲ್ಲೆ ಸಾಂಬಾದ ವಿಜಯಪುರ್‌ನ ರಾಖ್ ಬರುತಿಯಾ (Rakh Barutia) ಗ್ರಾಮದಲ್ಲಿ ಪಾಕಿಸ್ತಾನದ ಡ್ರೋನ್‍ನಿಂದ ಬೀಳಿಸಲಾಗಿದೆ ಎಂದು ಶಂಕಿಸಲಾದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ವಶಕ್ಕೆ ಪಡೆದ ಪ್ಯಾಕೆಟ್‍ನಿಂದ ಚೀನಾ ನಿರ್ಮಿತ ಮೂರು ಪಿಸ್ತೂಲ್‍ಗಳು, ಆರು ಮ್ಯಾಗ್‍ಜೀನ್‍ಗಳು, 48 ಬುಲೆಟ್‍ಗಳು ಮತ್ತು ನಾಲ್ಕು ಚೈನ ನಿರ್ಮಿತ ಹ್ಯಾಂಡ್ ಗ್ರೆನೇಡ್‍ಗಳಿದ್ದವು. ಮಾ.31 ಮತ್ತು ಏ.1 ರ ಮಧ್ಯರಾತ್ರಿಯ ಸಮಯದಲ್ಲಿ, ಸಾಂಬಾ (Samba) ಜಿಲ್ಲೆಯ ರಾಮ್‍ಗಢ ಸೆಕ್ಟರ್‍ನ ಅಂತರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆ ಪಾಕಿಸ್ತಾನದ ಡ್ರೋನ್‍ನ ಮೇಲೆ ಗುಂಡು ಹಾರಿಸಿತ್ತು.
ಮಾ.29 ರಂದು ರಾತ್ರಿ 9:30 ರ ಸುಮಾರಿಗೆ ಕಥುವಾ (Kathua) ಜಿಲ್ಲೆಯ ಹೀರಾನಗರ (Hiranagar) ಸೆಕ್ಟರ್‌ನ ಸನ್ಯಾಲ್‍ನ ಗಡಿಯ ಪೊಲೀಸ್ ಪೋಸ್ಟ್ ಬಳಿ ಪ್ರಬಲ ಸ್ಫೋಟ ಸಂಭವಿಸಿತ್ತು. ಹೀರಾನಗರ ಸೆಕ್ಟರ್‌ನಲ್ಲಿ ಗಡಿ ರೇಖೆಯಿಂದ ಕೇವಲ 4 ಕಿಮೀ ದೂರದಲ್ಲಿ ಸಂಭವಿಸಿದ ಸ್ಫೋಟವು ಗಡಿಯ ನಾಲ್ಕೈದು ಹಳ್ಳಿಗಳಿಗೆ ಕೇಳಿಸಿತ್ತು.
ಶ್ರೀನಗರ: ಭಗವಂತ ಶ್ರೀರಾಮ (Ram) ಕೇವಲ ಹಿಂದೂಗಳಿಗಷ್ಟೇ (Hindu) ದೇವರಲ್ಲ. ಧರ್ಮದ ಹೊರತಾಗಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ದೇವರು ಎಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಮಾಜಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.
ಗುರುವಾರ ಉದಯಪುರದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಪಕ್ಷ ಅಧಿಕಾರದಲ್ಲಿ ಉಳಿಯಲು ರಾಮನ ಹೆಸರನ್ನು ಮಾತ್ರ ಬಳಸುತ್ತಿದೆ. ಆದರೆ ರಾಮ ಕೇವಲ ಹಿಂದೂಗಳ ದೇವರಲ್ಲ ಎಂದು ಕಿಡಿಕಾರಿದ್ದಾರೆ.
ರಾಮ ಕೇವಲ ಹಿಂದೂಗಳ ದೇವರಲ್ಲ. ದಯವಿಟ್ಟು ಈ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ಕಿತ್ತು ಹಾಕಿ. ಭಗವಂತ ರಾಮ ಪ್ರತಿಯೊಬ್ಬನಿಗೂ ದೇವರು. ಅದು ಮುಸ್ಲಿಂ ಆಗಿರಲಿ ಅಥವಾ ಕಿಶ್ಚಿಯನ್ ಆಗಿರಲಿ, ಅಮೆರಿಕನ್ ಅಥವಾ ರಷ್ಯನ್ ಆಗಿರಲಿ. ಆತನ ಮೇಲೆ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಆತ ದೇವರಾಗುತ್ತಾನೆ ಎಂದು ಹೇಳಿದರು. ಇದನ್ನೂ ಓದಿ: ನನ್ನನ್ನು ಶೂರ್ಪನಖಿ ಎಂದ ಮೋದಿ ವಿರುದ್ಧ ಮಾನನಷ್ಟ ಕೇಸ್ ಹಾಕ್ತೀನಿ: ರೇಣುಕಾ ಚೌಧರಿ
ನಾವು ರಾಮನ ಭಕ್ತರು ಎಂದು ನಿಮ್ಮ ಬಳಿಗೆ ಬರುವವರು ಮೂರ್ಖರು. ಅವರು ರಾಮನ ಹೆಸರಿನಲ್ಲಿ ಲಾಭ ಪಡೆದುಕೊಳ್ಳಲು ಬಯಸುತ್ತಾರೆ. ಅವರಿಗೆ ರಾಮನ ಮೇಲೆ ಪ್ರೀತಿ ಇರುವುದಿಲ್ಲ. ಬದಲಿಗೆ ಅಧಿಕಾರದ ಮೇಲೆ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದಾಗ ಅವರು ಸಾಮಾನ್ಯ ಜನರ ಗಮನ ಬೇರೆಡೆಗೆ ತಿರುಗಿಸಲು ರಾಮ ಮಂದಿರವನ್ನು ಉದ್ಘಾಟಿಸುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ. ಆದ್ದರಿಂದ ದಯವಿಟ್ಟು ಜನರ ನಡುವೆ ಹೋಗಿ ದ್ವೇಷದ ಪ್ರಚಾರವನ್ನು ನಿಲ್ಲಿಸಲು ಮನವಿ ಮಾಡುತ್ತೇವೆ ಎಂದಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪುಲ್ವಾಮಾದಲ್ಲಿ (Pulwama) ಭಯೋತ್ಪಾದಕರು (Terrorists) ಹಾಗೂ ಭದ್ರತಾ ಪಡೆಯ (Security forces) ನಡುವೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದು, ಸೈನಿಕರು ಪ್ರತಿದಾಳಿ ನಡೆಸಿದ್ದಾರೆ. ಎನ್‍ಕೌಂಟರ್ (Encounter) ನಡೆಯುತ್ತಿದ್ದು, ಇಲ್ಲಿಯವರೆಗೆ ಎರಡೂ ಕಡೆಯಿಂದ ಯಾವುದೇ ಪ್ರಾಣಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಾಲಕರ ಮುಷ್ಕರ – ರಾತ್ರಿಯಿಡೀ ನಡೆದುಕೊಂಡೇ ಹೋಗಿ ವಧು ಮನೆ ಸೇರಿದ ವರನ ಕುಟುಂಬ