Tag: ಜಮ್ಮು ಮತ್ತು ಕಾಶ್ಮೀರ

  • ಗಡಿಯಲ್ಲಿ ನುಸುಳಲು ಯತ್ನಿಸಿದ ಉಗ್ರನ ಹತ್ಯೆ – ದೇಹವನ್ನು ಪಾಕ್ ಕಡೆಗೆ ಎಳೆದೊಯ್ದ ಸಹಚರರು

    ಗಡಿಯಲ್ಲಿ ನುಸುಳಲು ಯತ್ನಿಸಿದ ಉಗ್ರನ ಹತ್ಯೆ – ದೇಹವನ್ನು ಪಾಕ್ ಕಡೆಗೆ ಎಳೆದೊಯ್ದ ಸಹಚರರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಅಂತಾರಾಷ್ಟ್ರೀಯ ಗಡಿಯಲ್ಲಿ (ಐಬಿ) ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಒಳನುಸುಳಲು ಯತ್ನಿಸಿದ ಭಯೋತ್ಪಾದಕರನ್ನು ಸೇನೆ (Indian Army) ತಡೆದಿದೆ. ಈ ವೇಳೆ ನಡೆದ ಎನ್‍ಕೌಂಟರ್‌ನಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ. ಆತನ ದೇಹವನ್ನು ಜೊತೆಗಿದ್ದ ಉಗ್ರರು ಪಾಕಿಸ್ತಾನದ (Pakistan) ಕಡೆಗೆ ಎಳೆದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಾಲ್ವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಅಖ್ನೂರ್‍ನ ಖೌರ್ ಸೆಕ್ಟರ್‍ನಲ್ಲಿ ಗಡಿಯಿಂದ ಈ ಕಡೆಗೆ ನುಸುಳುತ್ತಿರುವುದನ್ನು ಗಮನಿಸಿದಾಗ ಕಾರ್ಯಾಚರಣೆ ನಡೆದಿದೆ. ಡಿ.23ರ ಮುಂಜಾನೆ ಭಯೋತ್ಪಾದಕರ ಚಲನವಲನಗಳು ಕಂಡು ಬಂದಿದೆ. ಈ ದೃಶ್ಯ ಗಡಿಯಲ್ಲಿನ ಸೇನೆಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹೋಗುವಂತೆ ನಾನು ಕರೆ ಕೊಡುತ್ತೇನೆ: ಯತ್ನಾಳ್‌

    ರಕ್ಷಣಾ ಸಿಬ್ಬಂದಿ ಹಂಚಿಕೊಂಡ ವೀಡಿಯೋ ಕ್ಲಿಪ್‍ನಲ್ಲಿ, ನಾಲ್ವರು ಭಯೋತ್ಪಾದಕರು ಕತ್ತಲಲ್ಲಿ ಗಡಿಯಾಚೆಯಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ. ಈ ವೇಳೆ ಉಗ್ರರ ಮೇಲೆ ಸೇನೆ ಗುಂಡು ಹಾರಿಸಿದ್ದು, ಓರ್ವ ಸಾವಿಗೀಡಾಗಿದ್ದಾನೆ. ಕ್ಯಾಮೆರಾದಲ್ಲಿನ ವೀಡಿಯೋ ಪರಿಶೀಲಿಸಿದಾಗ ಉಳಿದ ಉಗ್ರರು ಮೃತ ಉಗ್ರನ ದೇಹವನ್ನು ಎಳೆದೊಯ್ದಿರುವುದು ಬೆಳಕಿಗೆ ಬಂದಿದೆ.

    ರಕ್ತದ ಕಲೆಗಳು ಭಯೋತ್ಪಾದಕನ ಹತ್ಯೆಯನ್ನು ದೃಢಪಡಿಸಿದ್ದು, ಈ ಪ್ರದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ನಿಷೇಧ ಆದೇಶ ವಾಪಸ್‌ಗೆ ಇನ್ನೂ ತೀರ್ಮಾನಿಸಿಲ್ಲ- ಇಂದು ಉಲ್ಟಾ ಹೊಡೆದ್ರಾ ಸಿಎಂ?

  • ಗುಂಡು ತಗುಲಿದ ಸ್ಥಿತಿಯಲ್ಲಿ ಅಗ್ನಿವೀರನ ಮೃತದೇಹ ಪತ್ತೆ

    ಗುಂಡು ತಗುಲಿದ ಸ್ಥಿತಿಯಲ್ಲಿ ಅಗ್ನಿವೀರನ ಮೃತದೇಹ ಪತ್ತೆ

    ಶ್ರೀನಗರ: ಸೇನಾ ಘಟಕದ (Indian Army) ಕಾವಲಿಗೆ ನೇಮಿಸಿದ್ದ ಅಗ್ನಿವೀರರೊಬ್ಬರು (Agniveer) ಗುಂಡಿನ ಗಾಯಗಳಿಂದ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅಖ್ನೂರ್‌ನಲ್ಲಿ ಸಂಭವಿಸಿದೆ.

    ಅಗ್ನಿವೀರನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿಲ್ಲ. ಅಗ್ನಿವೀರ್‌ಗೆ ಹೇಗೆ ಗುಂಡು ತಗುಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆತನ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿಸಲ್ಪಟ್ಟಿದೆಯೇ? ಅಥವಾ ಆತ್ಮಹತ್ಯೆಯೇ? ಅಥವಾ ಘಟಕದೊಳಗೆ ಇದ್ದ ಬೇರೆಯ ಸಿಬ್ಬಂದಿಯಿಂದ ಗುಂಡು ಹಾರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೇ ಓದಿ: 55 ವರ್ಷದ ವ್ಯಕ್ತಿಯಿಂದ 3ರ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ!

    ಮಂಗಳವಾರ ಸಂಜೆಯ ವೇಳೆಗೆ ಸೇನಾ ಘಟಕದಲ್ಲಿದ್ದ ಇತರರು ಗುಂಡಿನ ಶಬ್ದ ಕೇಳಿ ಹೊರಗೆ ಬಂದಾಗ ಅಗ್ನಿವೀರ ಗಾಯಗೊಂಡು ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೇ ಓದಿ: ಸಮಾಜ ಸೇವೆಗೆ ಹೆಸರಾಗಿದ್ದ ಕಾಪುವಿನ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

  • ಜಮ್ಮು ಕಾಶ್ಮೀರದಲ್ಲಿ ಪೊಲೀಸರ ದಾಳಿ – ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಅರೆಸ್ಟ್

    ಜಮ್ಮು ಕಾಶ್ಮೀರದಲ್ಲಿ ಪೊಲೀಸರ ದಾಳಿ – ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಅರೆಸ್ಟ್

    ಶ್ರೀನಗರ: ಭಯೋತ್ಪಾದನ ಕೃತ್ಯಗಳನ್ನು ನಡೆಸಲು ಉಗ್ರರೊಂದಿಗೆ ಕೈ ಜೋಡಿಸಿದ್ದ ಇಬ್ಬರು ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದ (Jammu And Kashmir) ರಜೌರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಮೊಹಮ್ಮದ್ ಫಾರೂಕ್ ಮತ್ತು ಮೊಹಮ್ಮದ್ ನಜೀರ್ ಎಂದು ಗುರುತಿಸಲಾಗಿದೆ. ಪೊಲೀಸರು ಬುಧಾಲ್ ಪ್ರದೇಶದ ಬೆಹ್ರೋಟ್ ಗ್ರಾಮದಲ್ಲಿ ಶೋಧ ಕಾರ್ಯ ನಡೆಸಿದಾಗ ಸಂದರ್ಭದಲ್ಲಿ ಆರೋಪಿಗಳ ಬಳಿ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳು ಪತ್ತೆಯಾಗಿವೆ. ಆರೋಪಿಗಳು ಉಗ್ರರಿಗೆ ಮಾಹಿತಿ ನೀಡುವುದು ಸೇರಿದಂತೆ ಅನೇಕ ರೀತಿಯ ನೆರವು ನೀಡಿರುವ ಶಂಕೆ ಇದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್‍ನ್ಯೂಸ್

    ಬಂಧಿತರಿಂದ ಒಂದು ಪಿಸ್ತೂಲ್, ಎರಡು ಮ್ಯಾಗ್‍ಜಿನ್, 30 ಸಜೀವ ಗುಂಡುಗಳು, ಎರಡು ಹ್ಯಾಂಡ್ ಗ್ರೆನೇಡ್ ಮತ್ತು ವೈರ್ ಕಟ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತೀಚೆಗೆ ಕಾಶ್ಮೀರದಲ್ಲಿ ಸೇನೆ (Indian Army) ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಇದಾದ ಬಳಿಕ ಸೇನೆ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಸ್ಥಳೀಯವಾಗಿ ಉಗ್ರರಿಗೆ ನೆರವು ನೀಡುವವರ ಮಾಹಿತಿ ಕಲೆ ಹಾಕಿ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಟಿಪ್ಪರ್, ಕಾರಿನ ನಡುವೆ ಭೀಕರ ಅಪಘಾತ ಬಾಲಕಿ ಸೇರಿ ಇಬ್ಬರ ಸಜೀವ ದಹನ

  • ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ಉಗ್ರರಿಬ್ಬರು ಬಲಿ

    ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ಉಗ್ರರಿಬ್ಬರು ಬಲಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿಯಲ್ಲಿ (Rajouri) ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ (Terrorists) ನಡುವೆ ನಡೆದ 24 ಗಂಟೆಗಳ ಸುದೀರ್ಘ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

    ರಾಜೌರಿಯ ಕಲಕೋಟ್ ಅರಣ್ಯದಲ್ಲಿ ನಿನ್ನೆ (ಬುಧವಾರ) ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದರೆ. ಗಾಯಗೊಂಡಿದ್ದ ಮತ್ತೊಬ್ಬ ಯೋಧ ಇಂದು ಸಾವನ್ನಪ್ಪಿದ್ದಾರೆ.

    ಹತ್ಯೆಯಾಗಿರುವ ಉಗ್ರರಲ್ಲಿ ಒಬ್ಬನನ್ನು ಪಾಕಿಸ್ತಾನ ಮೂಲದವನು ಎಂಬುದು ತಿಳಿದುಬಂದಿದೆ. ಆತನನ್ನು ಕ್ವಾರಿ ಎಂದು ಗುರುತಿಸಲಾಗಿದೆ. ಆತ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆದಿದ್ದು, ಲಷ್ಕರ್-ಎ-ತೊಯ್ಬಾದ ಹಿರಿಯ ನಾಯಕನಾಗಿದ್ದ. ಆತ ತನ್ನ ಸಹಚರರೊಂದಿಗೆ ಕಳೆದ ವರ್ಷದಿಂದ ರಾಜೌರಿ-ಪೂಂಚ್ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: 18.70 ಲಕ್ಷ ವಂಚನೆ- ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೂರು ದಾಖಲು

    ಈತ ಧಂಗ್ರಿ ಮತ್ತು ಕಂಡಿಯಲ್ಲಿ ನಡೆದ ಅವಳಿ ದಾಳಿಯ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ. ಈ ಪ್ರಕರಣದಲ್ಲಿ 7 ಜನರು ಸಾವನ್ನಪ್ಪಿದ್ದರು ಮತ್ತು 14 ನಾಗರಿಕರು ಗಾಯಗೊಂಡಿದ್ದರು. ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಮುಂದುವರಿಸಲು ರಾಜೌರಿ-ಪೂಂಚ್‌ಗೆ ತಂಡವನ್ನು ಕಳುಹಿಸಿದ್ದಾಗಿ ಮೂಲಗಳು ತಿಳಿಸಿವೆ.

    ಕ್ವಾರಿ ಸುಧಾರಿತ ಸ್ಫೋಟಕ ಸಾಧನ (IED) ಎಕ್ಸ್‌ಪರ್ಟ್ ಆಗಿದ್ದು, ಅಲ್ಲಿನ ಗುಹೆಗಳಲ್ಲಿ ಅಡಗಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಮತ್ತು ತರಬೇತಿ ಪಡೆದ ಸ್ನೈಪರ್ ಕೂಡ ಆಗಿದ್ದ. ಬುಧವಾರ ರಾಜೌರಿಯಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದ್ದು, ಇದರಲ್ಲಿ ವಿಶೇಷ ಪಡೆಗಳ ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬದಲ್ಲಿ ನೀರವ ಮೌನ – ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ

  • ಕಾಶ್ಮೀರದಲ್ಲಿ ಉಗ್ರರು, ಸೇನೆಯ ನಡುವೆ ಗುಂಡಿನ ಚಕಮಕಿ – ಮೂವರು ಸೇನಾ ಸಿಬ್ಬಂದಿ ಹುತಾತ್ಮ

    ಕಾಶ್ಮೀರದಲ್ಲಿ ಉಗ್ರರು, ಸೇನೆಯ ನಡುವೆ ಗುಂಡಿನ ಚಕಮಕಿ – ಮೂವರು ಸೇನಾ ಸಿಬ್ಬಂದಿ ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಲಕೋಟ್ ಅರಣ್ಯದಲ್ಲಿ ಉಗ್ರರು (Terrorists) ಹಾಗೂ ಸೇನೆಯ (Indian Army) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.

    ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿ ಬಳಿಕ ಸೇನೆಯ ವಿಶೇಷ ಪಡೆಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಭಯೋತ್ಪಾದಕರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಆಸ್ಟ್ರೇಲಿಯಾಗೆ ಬಂದಿಳಿದ ಚಾಂಪಿಯನ್ ಪ್ಯಾಟ್ ಕಮ್ಮಿನ್ಸ್- ಸ್ವಾಗತಿಸಲು ಜನವೇ ಇಲ್ಲ

    ಪಿರ್ ಪಂಜಾಲ್ ಅರಣ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸರಣಿ ಎನ್‍ಕೌಂಟರ್‌ಗಳು ನಡೆದಿದೆ. ಇಲ್ಲಿನ ದಟ್ಟ ಅರಣ್ಯದ ಲಾಭ ಪಡೆದುಕೊಂಡು ಭಯೋತ್ಪಾದಕರು ಅಡಗು ತಾಣಗಳನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಪರ್ವತಗಳಲ್ಲಿಯೂ ಭಯೋತ್ಪಾದಕರು ಆಶ್ರಯ ಪಡೆದುಕೊಂಡಿದ್ದಾರೆ. ಈ ಪ್ರದೇಶ ಭದ್ರತಾ ಪಡೆಗಳಿಗೆ ಸವಾಲಾಗಿದೆ.

    ಕಳೆದ ವಾರ ರಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಓರ್ವ ಭಯೋತ್ಪಾದಕನನ್ನು ಹತ್ಯೆಗೈದಿದ್ದವು. ಇದನ್ನೂ ಓದಿ: 2025 ರೊಳಗೆ ರಕ್ತಹೀನತೆ ಮುಕ್ತ ಆರೋಗ್ಯ ಕರ್ನಾಟಕ ರೂಪಿಸುವ ಗುರಿ: ದಿನೇಶ್ ಗುಂಡೂರಾವ್

  • ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ – ಪ್ರಕರಣಕ್ಕೆ ದುಬೈ ಲಿಂಕ್

    ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ – ಪ್ರಕರಣಕ್ಕೆ ದುಬೈ ಲಿಂಕ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ (Terror Funding) ಮಾಡಿದ ಪ್ರಮುಖ ಪ್ರಕರಣವೊಂದನ್ನು ಎಸ್‍ಐಎ ಅಧಿಕಾರಿಗಳು (State Investigation Agency) ಭೇದಿಸಿದ್ದಾರೆ.

    ಪ್ರಕರಣ ಸಂಬಂಧ ಹಿರಿಯ ಪೊಲೀಸ್ (Police) ಅಧಿಕಾರಿ ಮತ್ತು ಪ್ರಮುಖ ಉದ್ಯಮಿ ಸೇರಿದಂತೆ ಶಂಕಿತರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಭಯೋತ್ಪಾದಕರಿಗೆ ಹಣ ನೀಡಿದ ಇತ್ತೀಚಿನ ಬಹುದೊಡ್ಡ ಪ್ರಕರಣವಾಗಿದೆ. ಕಾಶ್ಮೀರದ ತನಿಖಾ ಸಂಸ್ಥೆ ಎಸ್‍ಐಎ ಬುಧವಾರದಿಂದ ಶುಕ್ರವಾರದವರೆಗೂ ಈ ಪ್ರಕರಣದ ಶಂಕಿತರ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಿ.ಟಿ.ರವಿ ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗ; ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು

    ಪ್ರಕರಣದಲ್ಲಿ 85 ಕೋಟಿ ರೂ. ಮೊತ್ತದ ಹಣವನ್ನು ಸಂಗ್ರಹಿಸಿ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕೆ ಬಳಸಲಾಗಿದೆ ಎಂಬ ಶಂಕೆ ಇದೆ. ವಿಚಾರಣೆಯ ವೇಳೆ 85 ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಆಗಸ್ಟ್‌ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

    ಸುಮಾರು 22 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಕರಣಕ್ಕೆ ದುಬೈ ಲಿಂಕ್ ಇರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಚಿನ್ನ ಕಳ್ಳಸಾಗಾಣಿಕೆ ಮತ್ತು ಇನ್ನಿತರ ಅಕ್ರಮ ಮಾರ್ಗವಾಗಿ ಈ ಹಣ ವರ್ಗಾವಣೆಯಾಗಿದೆ. ಈ ಹಿಂದೆ ಬಯಲಾದ ಪ್ರಕರಣಗಳಿಗಿಂತ ಇದು ದೊಡ್ಡದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸೌಥ್‌ ಇಂಡಿಯನ್‌ ಪೇಪರ್‌ ಮಿಲ್‌ಗೆ ಬೆಂಕಿ – ಲಕ್ಷಾಂತರ ಮೌಲ್ಯದ ಪೇಪರ್‌ ಭಸ್ಮ

  • ಗಡಿ ನುಸುಳಲು ಉಗ್ರರ ಯತ್ನ – ಇಬ್ಬರನ್ನು ಹೊಡೆದುರುಳಿಸಿದ ಸೇನೆ

    ಗಡಿ ನುಸುಳಲು ಉಗ್ರರ ಯತ್ನ – ಇಬ್ಬರನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಗಡಿ ನುಸುಳಲು ಯತ್ನಿಸಿದ ನಾಲ್ವರು ಉಗ್ರರ (Terrorists) ಪೈಕಿ ಇಬ್ಬರನ್ನು ಭದ್ರತಾ ಪಡೆಗಳು (Indian Army) ಹೊಡೆದುರುಳಿಸಿವೆ.

    ಕಾರ್ಯಾಚರಣೆ ವೇಳೆ ಎರಡು ಎಕೆ 47 ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪ್ಪಿಸಿಕೊಂಡ ಇನ್ನಿಬ್ಬರು ಉಗ್ರರಿಗಾಗಿ ಸೇನೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಭಯೋತ್ಪಾದಕರ ಅಡಗು ತಾಣಗಳು ಪತ್ತೆಯಾಗಿದ್ದು ಅವುಗಳನ್ನು ನಾಶಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮತದಾರರು ಪ್ರತಿ ಅಭ್ಯರ್ಥಿಯಿಂದ ಹಣ ಪಡೆದು ಸರಿಯಾದ ವ್ಯಕ್ತಿಗೆ ಮತ ಹಾಕ್ತಾರೆ: ಗಡ್ಕರಿ

    ಅನಂತನಾಗ್‍ನ ದಟ್ಟವಾದ ಕಾಡುಗಳಲ್ಲಿ ಈ ತಿಂಗಳ ಆರಂಭದಲ್ಲಿ ಒಂದು ವಾರದ ಅವಧಿಯಲ್ಲಿ ಎನ್‍ಕೌಂಟರ್ ನಡೆಸಲಾಗಿತ್ತು. ಈ ವೇಳೆ ಲಷ್ಕರ್ ಕಮಾಂಡರ್ ಮತ್ತು ಇನ್ನೊಬ್ಬ ಭಯೋತ್ಪಾದಕನನ್ನು ಹತ್ಯೆಗೈಯಲಾಗಿತ್ತು. ಅಲ್ಲದೇ ಗುಂಡಿನ ಚಕಮಕಿಯಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.

    ಕೆಲವು ತಿಂಗಳ ಹಿಂದೆ ನಡೆದ ಸೇನಾ ವಾಹನದ ಮೇಲಿನ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲದೇ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುವವರ ವಿರುದ್ಧವು ಅಗತ್ಯ ಕ್ರಮ ಜರುಗಿಸಲಾಗುತ್ತಿದೆ. ಇದನ್ನೂ ಓದಿ: 84 ಬ್ಯಾಂಕ್ ಅಕೌಂಟ್, 854 ಕೋಟಿ ವಹಿವಾಟು – ಬೃಹತ್ ಸೈಬರ್ ಕ್ರೈಂ ಜಾಲ ಬೆಳಕಿಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಗ್ರರಿಗೆ ಬೆಂಬಲ – ಇಬ್ಬರು ಮಹಿಳೆಯರು, ಓರ್ವ ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್

    ಉಗ್ರರಿಗೆ ಬೆಂಬಲ – ಇಬ್ಬರು ಮಹಿಳೆಯರು, ಓರ್ವ ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್

    ಶ್ರೀನಗರ: ಉಗ್ರ (Terrorist) ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಓರ್ವ ಅಪ್ರಾಪ್ತ ಸೇರಿ ಆರು ಜನ ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಸೇನೆ (Indian Army) ಬಂಧಿಸಿದೆ.

    ಬಾರಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕರು ಹಾಗೂ ಮತ್ತವರ ಬೆಂಬಲಿಗರ ಜಾಲದ ವಿರುದ್ಧ ಸೇನೆ ಹಾಗೂ ಪೊಲೀಸರು (Police) ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಪಿಸ್ತೂಲ್‍ಗಳು ಮತ್ತು ಐದು ಹ್ಯಾಂಡ್ ಗ್ರೆನೇಡ್‍ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೂದಿ ಮುಚ್ಚಿದ ಕೆಂಡದಂತಾದ ಮಣಿಪುರ – ಇಬ್ಬರು ವಿದ್ಯಾರ್ಥಿಗಳ ಶವದ ಫೋಟೋ ವೈರಲ್‌

    ಬಂಧಿತರಲ್ಲಿ ಸಕ್ರಿಯ ಭಯೋತ್ಪಾದಕ ಯಾಸಿರ್ ಅಹ್ಮದ್ ಶಾ ಕೂಡ ಸೇರಿದ್ದಾನೆ. ಬಾಲಾಪರಾಧಿ ಸೇರಿದಂತೆ ಇತರ ಐವರು ಆತನ ಸಹಚರರಾಗಿದ್ದಾರೆ. ಮಹಿಳೆಯರನ್ನು ಸಾಮಾನ್ಯವಾಗಿ ಅನುಮಾನಿಸದ ಕಾರಣ ಇಂತಹ ಚಟುವಟಿಕೆಗಳಿಗೆ ನೇಮಿಸಿಕೊಂಡಿದ್ದಾರೆ. ಈ ಬಂಧನವು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯನ್ನು ತಡೆಗಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅನಂತ್‍ನಾಗ್‍ನಲ್ಲಿ ಇತ್ತೀಚೆಗೆ ನಡೆದ ಎನ್‍ಕೌಂಟರ್‌ನಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಶಂಕಿತ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

    ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು ಎಂಬ ಕಾರಣಕ್ಕೆ ಮೃದುವಾಗಿ ವರ್ತಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ CWRC ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ

    ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತನಾಗ್‍ನಲ್ಲಿ ಉಗ್ರರು ಹಾಗೂ ಸೇನಾ ಪಡೆಗಳ (Indian Army) ನಡುವೆ ಬುಧವಾರ ಆರಂಭಗೊಂಡಿರುವ ಗುಂಡಿನ ಚಕಮಕಿ ಇಂದು ಮುಂದುವರಿದಿದೆ. ದಾಳಿಯಲ್ಲಿ ಇಂದು ಯೋಧರೊಬ್ಬರು (Soldier) ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೂ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್ ಮನ್‍ಪ್ರೀತ್ ಸಿಂಗ್, ಮೇಜರ್ ಆಶಿಶ್ ಮತ್ತು ಡಿಎಸ್‍ಪಿ ಹುಮಾಯೂನ್ ಭಟ್ ಸೇರಿದಂತೆ ಮೂವರು ಅಧಿಕಾರಿಗಳು ಸಾವನ್ನಪ್ಪಿದ್ದರು. ಇಂದು ಮೃತಪಟ್ಟ ನಾಲ್ಕನೇ ಯೋಧನ ಗುರುತು ಇನ್ನೂ ಬಹಿರಂಗವಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮುಂದುವರಿದ ಎನ್‌ಕೌಂಟರ್‌ – ಓರ್ವ ಯೋಧ ನಾಪತ್ತೆ

    ಅನಂತನಾಗ್‍ನ ಕೋಕರ್‌ನಾಗ್‌ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. ಭಯೋತ್ಪಾದಕರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶುಕ್ರವಾರ ಬೆಳಗ್ಗೆ ಅರಣ್ಯ ಪ್ರದೇಶದಿಂದ ಭಾರೀ ಸ್ಫೋಟಗಳು ಮತ್ತು ಭಾರೀ ಗುಂಡಿನ ಸದ್ದು ಕೇಳಿಬಂದಿತ್ತು. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಪ್ರದೇಶದಲ್ಲಿ ನಿರ್ದಿಷ್ಟವಾಗಿ ಎಷ್ಟು ಜನ ಉಗ್ರರು ಅಡಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಅವರ ಪತ್ತೆಗಾಗಿ ಡ್ರೋನ್‍ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಸೂತ್ರಧಾರ ದೆಹಲಿಯಲ್ಲಿ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧ – ಸುಪ್ರೀಂ ಕೋರ್ಟ್‍ಗೆ ಕೇಂದ್ರ

    ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧ – ಸುಪ್ರೀಂ ಕೋರ್ಟ್‍ಗೆ ಕೇಂದ್ರ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಯಾವುದೇ ಸಮಯದಲ್ಲಿ ಚುನಾವಣೆ (Election) ನಡೆಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್‍ಗೆ (Supreme Court) ಕೇಂದ್ರ ಸರ್ಕಾರ ಹೇಳಿದೆ.

    ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ನಿರ್ದಿಷ್ಟ ಸಮಯ ನೀಡಲು ಸಾಧ್ಯವಿಲ್ಲ. ಆದರೆ ಕೇಂದ್ರಾಡಳಿತ ಸ್ಥಾನಮಾನವು ತಾತ್ಕಾಲಿಕವಾಗಿದೆ. ಈ ನಿಟ್ಟಿನಲ್ಲಿ ಚುನಾವಣೆ ನಡೆಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಕೋರ್ಟ್‍ಗೆ ತಿಳಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ಯಾವಾಗ? – ಕಾಲಮಿತಿ ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಆರ್ಟಿಕಲ್ 370 ರದ್ದು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾ.ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧವಿದ್ದೇವೆ. ಒಟ್ಟು ಮೂರು ಚುನಾವಣೆಗಳು ಬಾಕಿ ಇವೆ. ಮೊದಲ ಬಾರಿಗೆ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಮೊದಲು ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದೆ. ಎರಡನೇಯದಾಗಿ ಪುರಸಭೆ ಚುನಾವಣೆಗಳು ಮತ್ತು ನಂತರ ವಿಧಾನಸಭೆ ಚುನಾವಣೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

    ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣ ರಾಜ್ಯವಾಗಿಸಲು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 2018 ರಿಂದ 2023ಕ್ಕೆ ಹೋಲಿಸಿದರೆ ಭಯೋತ್ಪಾದಕ ಪ್ರಕರಣಗಳು 45.2% ರಷ್ಟು ಕಡಿಮೆಯಾಗಿದೆ. ಭಯೋತ್ಪಾದಕರ ಒಳನುಸುಳುವಿಕೆ 90% ರಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕಲ್ಲು ತೂರಾಟದಂತಹ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳು 97% ರಷ್ಟು ಕಡಿಮೆಯಾಗಿದೆ. ಭದ್ರತಾ ಸಿಬ್ಬಂದಿ ಮೇಲಿನ ದಾಳಿಗಳು 65% ರಷ್ಟು ಕಡಿಮೆಯಾಗಿದೆ. 2018ರಲ್ಲಿ 1,767 ಕಲ್ಲು ತೂರಾಟ ನಡೆದಿದ್ದು, ಈಗ ಅದು ಶೂನ್ಯಕ್ಕೆ ಇಳಿದಿದೆ. 2018 ರಲ್ಲಿ 52 ಸಂಘಟಿತ ಬಂದ್‍ಗಳು ಆಗಿದ್ದವು ಮತ್ತು ಈಗ ಅದು ಶೂನ್ಯವಾಗಿದೆ ಎಂದು ನ್ಯಾಯಾಲಯದ ಮುಂದೆ ಮೆಹ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಯೇ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲು ಪ್ರೇರೇಪಿಸಿತು: ಸುಪ್ರೀಂಗೆ ಕೇಂದ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]