Tag: ಜಮ್ಮು ಮತ್ತು ಕಾಶ್ಮೀರ

  • ಪುಲ್ವಾಮಾದಲ್ಲಿ ಭದ್ರತಾ ಪಡೆಯ ಗುಂಡಿನ ದಾಳಿಗೆ ಉಗ್ರ ಮಟಾಷ್‌

    ಪುಲ್ವಾಮಾದಲ್ಲಿ ಭದ್ರತಾ ಪಡೆಯ ಗುಂಡಿನ ದಾಳಿಗೆ ಉಗ್ರ ಮಟಾಷ್‌

    ಜಮ್ಮು ಮತ್ತು ಕಾಶ್ಮೀರ: ಕಾಶ್ಮೀರದ ಪುಲ್ವಾಮಾದಲ್ಲಿ (Pulwama) ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾಕನನ್ನು ಹೊಡೆದುರುಳಿಸಲಾಗಿದೆ.

    ಪುಲ್ವಾಮಾ ಜಿಲ್ಲೆಯ ಅರ್ಶಿಪೋರಾ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಭದ್ರತಾ ಪಡೆಗಳಿಗೆ ಸುಳಿವು ಸಿಕ್ಕಿದೆ. ಕೂಡಲೇ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

    ಭದ್ರತಾ ಪಡೆಗಳ ಪ್ರತಿ ದಾಳಿಗೆ ಓರ್ವ ಉಗ್ರರ ಮೃತಪಟ್ಟಿರುವುದಾಗಿ ಉನ್ನತ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಭಯೋತ್ಪಾದಕ ಸಿಕ್ಕಿಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಬ್ಬರ ಕೊಲೆ ಮಾಡಿದ ಪಾಪಿ ತಾಯಿ!

  • ಅನಂತನಾಗ್‌ನ ಮಾರ್ತಾಂಡ ಸೂರ್ಯ ದೇವಾಲಯದ ಮರುಸ್ಥಾಪನೆಗೆ ಸಿದ್ಧತೆ – ಈ ದೇವಾಲಯದ ವಿಶೇಷತೆ ಏನು?

    ಅನಂತನಾಗ್‌ನ ಮಾರ್ತಾಂಡ ಸೂರ್ಯ ದೇವಾಲಯದ ಮರುಸ್ಥಾಪನೆಗೆ ಸಿದ್ಧತೆ – ಈ ದೇವಾಲಯದ ವಿಶೇಷತೆ ಏನು?

    – ಶಾರದಾದೇವಿಯ ದೇವಾಲಯ ಪುನರುತ್ಥಾನ
    -ಕಾಶ್ಮೀರದ ಮಂಜಿನಲ್ಲಿ ತಣ್ಣಗೆ ನಿಂತ ಮಂದಿರಗಳು 

    ಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್‌ 370 ರದ್ದಾದ ಬಳಿಕ ರಾಜ್ಯದಲ್ಲಿ ಹಲವಾರು ಬದಲಾವಣೆಗಳ ಗಾಳಿ ಬೀಸಿದೆ. ಸರ್ವಧರ್ಮಗಳ ಕೇಂದ್ರಗಳ ಅಭಿವೃದ್ಧಿ, ದೇವಾಲಯಗಳ ಅಭಿವೃದ್ಧಿಗೆ ಅಲ್ಲಿನ ಸರ್ಕಾರ ಗಮನ ಹರಿಸಿದೆ. ಮುಸ್ಲಿಂ ದೊರೆ ಸಿಕಂದರ್ ಶಾ ಮಿರಿಯ ಕಾಲದಲ್ಲಿ ತೀವ್ರ ಹಾನಿಗೊಳಗಾದ ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿರುವ 8ನೇ ಶತಮಾನದ ಮಾರ್ತಾಂಡ ಸೂರ್ಯ ದೇವಾಲಯವನ್ನು ಪುನರುತ್ಥಾನ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಮಾರ್ತಾಂಡ ಸೂರ್ಯ ದೇಗುಲದ ಆವರಣದಲ್ಲಿ ದೇಗುಲದ ನಿರ್ಮಾತೃ ಚಕ್ರವರ್ತಿ ಲಲಿತಾದಿತ್ಯ ಮುಕ್ತಪೀಡರ ಪ್ರತಿಮೆ ಸ್ಥಾಪಿಸುವ ಕುರಿತು ಚರ್ಚೆ ಸಹ ನಡೆದಿದೆ. ಕಾಶ್ಮೀರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಉಳಿಸುವ ಈ ದೇವಾಲಯವನ್ನು ಸಂರಕ್ಷಿಸುವ ಉದ್ದೇಶವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಮಾರ್ತಾಂಡ ಸೂರ್ಯ ದೇವಾಲಯದ ಇತಿಹಾಸ
    ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಅಡಿಯಲ್ಲಿ ಸಂರಕ್ಷಿತವಾಗಿರುವ ಈ ದೇವಾಲಯವು ಅತ್ಯಂತ ಹಳೆಯ ಸೂರ್ಯ ದೇವಾಲಯವಾಗಿದೆ. ಇದು ಹಿಂದೂ ಧರ್ಮದ ಮುಖ್ಯ ಸೌರ ದೇವತೆಯಾದ ಸೂರ್ಯನ ದೇವಾಲಯವಾಗಿದ್ದು, ಸೂರ್ಯನನ್ನು ಸಂಸ್ಕೃತ ಭಾಷೆಯ ಸಮಾನಾರ್ಥಕ ಮಾರ್ತಾಂಡ ಎಂದು ಕರೆಯಲಾಗುತ್ತದೆ.

    ಕಾರ್ಕೋಟ ರಾಜವಂಶಕ್ಕೆ ಸೇರಿದ ರಾಜ ಲಲಿತಾದಿತ್ಯ ಮುಕ್ತಾಪಿಡ 8 ನೇ ಶತಮಾನದಲ್ಲಿ ಸೂರ್ಯ ದೇವಾಲಯವನ್ನು ನಿರ್ಮಿಸಿದ. ಇದು ಶ್ರೀಮಂತವಾದ ಕಾಶ್ಮೀರಿ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ರಾಜತರಂಗಿಣಿಯಲ್ಲಿ, ಇತಿಹಾಸಕಾರ ಕಲ್ಹಣನು, ಲಲಿತಾದಿತ್ಯನ ಆಳ್ವಿಕೆಯನ್ನು ಹಾಗೂ ಈ ಪ್ರದೇಶದಲ್ಲಿ ಸಮೃದ್ಧಿ ಮತ್ತು ಸಾಂಸ್ಕೃತಿಕ ಪ್ರವರ್ಧಮಾನದ ಅವಧಿ ಎಂದು ಉಲ್ಲೇಖಿಸಿದ್ದಾನೆ.

    1389 ಮತ್ತು 1413ರ ನಡುವಿನ ಅವಧಿಯಲ್ಲಿ ಸಿಕಂದರ್ ಶಾ ಮಿರಿಯ ಆಳ್ವಿಕೆಯಲ್ಲಿ ಇದು ನಾಶವಾಯಿತು ಎಂದು ಹೇಳಲಾಗುತ್ತದೆ. ಸುಮಾರು ಒಂದು ವರ್ಷಗಳ ಕಾಲ ಆತನ ಸೈನಿಕರು ಈ ದೇವಾಲಯ ಹಾಳುಗೆಡವಲು ಸಮಯ ತೆಗೆದುಕೊಂಡಿದ್ದಾರೆ. ಆತ ಮುಸ್ಲಿಮೇತರ ದೇವಸ್ಥಾನಗಳ ಮೇಲಿನ ಆಕ್ರಮಣಕ್ಕಾಗಿ ಮಧ್ಯಕಾಲೀನ ಇಸ್ಲಾಮಿಸ್ಟ್‌ಗಳಿಂದ ‘ಸಿಕಂದರ್ ಬುಟ್ಶಿಕನ್’ (ವಿಗ್ರಹ ಭಂಜಕ) ಎಂಬ ಬಿರುದನ್ನು ಆತ ಗಳಿಸಿದ್ದ.

    ದೇವಾಲಯದ ವಾಸ್ತುಶಿಲ್ಪ
    ಮಾರ್ತಾಂಡ ಸೂರ್ಯ ದೇವಾಲಯ (Martand Sun Temple) ಸಮುದ್ರ ಮಟ್ಟದಿಂದ 5,400 ಅಡಿ ಎತ್ತರದಲ್ಲಿದೆ. ಇದು ಸೂರ್ಯನ ಕಿರಣಗಳು ದಿನವಿಡೀ ಸೂರ್ಯನ ವಿಗ್ರಹದ ಮೇಲೆ ಬೀಳುವಂತೆ ದೇವಾಲಯವನ್ನು ನಿಮಿಸಲಾಗಿದೆ. ಬೂದು ಕಲ್ಲಿನ ಗೋಡೆಗಳು, ನದಿ ನೀರಿನಿಂದ ತುಂಬಿದ ಅಂಗಳ, ಈಜಿಪ್ಟಿನ ದೇವಾಲಯ ಮತ್ತು ಗ್ರೀಸ್‌ನ ವಾಸ್ತುಶಿಲ್ಪದ ಪ್ರಭಾವ ಇದರ ಮೇಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ASI ಪುರಾವೆಗಳ ಪ್ರಕಾರ ಗಾಂಧಾರ, ಗುಪ್ತ ಮತ್ತು ಚೈನೀಸ್ ಶೈಲಿಗಳ ಮಿಶ್ರಣವನ್ನು ಹೊಂದಿದೆ. ದೇವಾಲಯದ ವಾಸ್ತುಶಿಲ್ಪದ ಮೇಲೆ ಗ್ರೀಕ್ ಪ್ರಭಾವ ಹೆಚ್ಚಾಗಿದೆ.

    ದೇವಾಲಯದ ಸುತ್ತಲೂ 84 ಸಣ್ಣ ದೇವಾಲಯಗಳನ್ನು ಹೊಂದಿದೆ. ಇದು 220 ಅಡಿ ಉದ್ದ ಮತ್ತು 142 ಅಗಲವನ್ನು ಹೊಂದಿವೆ. ಪ್ರಾಚೀನ ಹಿಂದೂ ದೇವಾಲಯದ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ಪಶ್ಚಿಮ ಭಾಗದಲ್ಲಿ ಪ್ರಾಥಮಿಕ ಪ್ರವೇಶದ್ವಾರವಿದೆ. ದೇವಾಲಯದ ರಚನೆಯು ಸ್ತಂಭಗಳು, ಆಯತ ಮತ್ತು ತ್ರಿಕೋನಗಳ ಒಂದೇ ರೀತಿಯ ಮತ್ತು ಪುನರಾವರ್ತಿತ ಮಾದರಿಗಳು, ಗೋಡೆಗಳ ಮೇಲೆ ಕೆತ್ತಿದ ದೇವರ ಚಿತ್ರಗಳು ಮತ್ತು ಗ್ರೀಕ್ ಪ್ರತಿಬಿಂಬಿಸುವ ವಾಸ್ತುಶಿಲ್ಪದ ಅಂಶಗಳನ್ನು ಹೊಂದಿದೆ. ಕಾಶ್ಮೀರದ ಶೀತ ಹವಾಮಾನವನ್ನು ಸರಿಹೊಂದಿಸಲು ದೇವಾಲಯಕ್ಕೆ ಕಾಶ್ಮೀರಿ ಕಲ್ಲುಗಳನ್ನೇ ಬಳಸಲಾಗಿದೆ.

    ಹಲವಾರು ಮೂರು ಮುಖದ ವಿಷ್ಣು ದೇವರ ವಿಗ್ರಹಗಳು ಮತ್ತು ಕೆಲವು ಚತುರ್ಭುಜ ವಿಷ್ಣು ಶಿಲ್ಪಗಳು ದೇವಾಲಯದ ಹೊರಾಂಗಣದಲ್ಲಿ ಸುಂದರವಾಗಿ ಕೆತ್ತಲ್ಪಟ್ಟಿವೆ. ಸೂರ್ಯ ದೇವಾಲಯದ ಹಾಲ್‌ನ ಪೂರ್ವ ಗೋಡೆಯ ಬಲ ಹಲಗೆಯಲ್ಲಿ ಎಚ್ಚರಿಕೆಯಿಂದ ಕೆತ್ತಿದ ಅರುಣನ ಆಕೃತಿಯನ್ನು ಈಗಲೂ ಕಾಣಬಹುದು.

    ಭಾರತ-ಪಾಕ್‌ ಗಡಿಯಲ್ಲಿ ಶಾರದಾದೇವಿಯ ದೇಗುಲ ಪುನರ್‌ ನಿರ್ಮಾಣ
    ಉತ್ತರ ಕಾಶ್ಮೀರದ ಗಡಿಭಾಗವಾದ ಕುಪ್ವಾರ ಜಿಲ್ಲೆಯ ಟೀತ್ವಾಲ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಹೊಸದಾಗಿ ನಿರ್ಮಿಸಲಾದ ಶಾರದಾ ದೇವಸ್ಥಾನದಲ್ಲಿ (Kashmir Ancient Shri Sharada Temple) ಶಾರದಾ ದೇವಿಯ ವಿಗ್ರಹವನ್ನು ಗರ್ಭಗುಡಿಯಲ್ಲಿ ಈಗಾಗಲೇ ಇರಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ದೇವಾಲಯವನ್ನು ಉದ್ಘಾಟಿಸಿದ್ದಾರೆ.

    ಈ ದೇವಾಲಯದ ವಾಸ್ತುಶಿಲ್ಪ ಮತ್ತು ನಿರ್ಮಾಣವನ್ನು ಪೌರಾಣಿಕ ಗ್ರಂಥಗಳ ಪ್ರಕಾರ ಶಾರದಾ ಪೀಠದ ಆಶ್ರಯದಲ್ಲಿ ಮಾಡಲಾಗಿದೆ. ಶಾರದಾ ಮಾತೆ ನಾಗರೀಕತೆಯ ಆವಿಷ್ಕಾರ ಮತ್ತು ಶಾರದಾ ಲಿಪಿಯ ಪ್ರಚಾರದ ದಿಕ್ಕಿನಲ್ಲಿ ಕುಪ್ವಾರದಲ್ಲಿರುವ ಮಾ ಶಾರದಾ ದೇವಾಲಯದ ಪುನರ್ನಿರ್ಮಾಣ ಅಗತ್ಯವಾಗಿತ್ತು ಎಂದು ಉದ್ಘಾಟನೆ ವೇಳೆ ಶಾ ಅಭಿಪ್ರಾಯ ಪಟ್ಟಿದ್ದರು.

    ಒಂದು ಕಾಲದಲ್ಲಿ ಶಾರದಾ ಪೀಠವನ್ನು ಭಾರತದಲ್ಲಿ ಜ್ಞಾನದ ಕೇಂದ್ರವೆಂದು ಪರಿಗಣಿಸಲಾಗಿತ್ತು. ದೇಶಾದ್ಯಂತದ ವಿದ್ವಾಂಸರು, ಧರ್ಮಗ್ರಂಥಗಳು ಮತ್ತು ಆಧ್ಯಾತ್ಮಿಕ ಜ್ಞಾನಕ್ಕಾಗಿ ಹುಡುಕಲು ಇಲ್ಲಿಗೆ ಬರುತ್ತಿದ್ದರು. ಶಾರದಾ ಪೀಠವು ಭಾರತದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಪರಂಪರೆಯ ಐತಿಹಾಸಿಕ ಕೇಂದ್ರವಾಗಿದೆ.

    ಶಾರದೆಯ ಪುರಾತನ ದೇವಾಲಯವು 18 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಪಾಳು ಬಿದ್ದಿದ್ದು, ದೇವಾಲಯದ ಮೂಲವನ್ನು ಗುರುತಿಸಲು ಹೆಚ್ಚಿನ ಪುರಾವೆಗಳಿಲ್ಲದಿದ್ದರೂ ಸಹ, ಇದನ್ನು 1 ನೇ ಶತಮಾನದ ಆರಂಭದಲ್ಲಿ ಕುಶಾನ್ ಸಾಮ್ರಾಜ್ಯದ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

    ಕಾಶ್ಮೀರದಲ್ಲಿರುವ ಇನ್ನಿತರ ಪ್ರಮುಖ ದೇವಾಲಯಗಳು ಯಾವುದು?
    ಶಂಕರಾಚಾರ್ಯ ದೇವಾಲಯ
    ಈ ದೇವಾಲಯಕ್ಕೆ ಗೋಪಾದ್ರಿ ಎಂಬ ಹೆಸರಿತ್ತು. 9ನೇ ಶತಮಾನದಲ್ಲಿ ಆದಿಗುರು ಶಂಕರಾಚಾರ್ಯರು ಕಾಶ್ಮೀರಕ್ಕೆ ಭೇಟಿ ಕೊಟ್ಟಾಗ ಈ ಬೆಟ್ಟದ ಮೇಲೆ ಉಳಿದಿದ್ದರು. ನಂತರ ಇಲ್ಲಿಗೆ ಶಂಕರಾಚಾರ್ಯ ದೇವಾಲಯ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು ಕ್ರಿ.ಪೂ 371 ರಲ್ಲಿ ರಾಜ ಗೋಪದಾಟ್ಯ ಕಟ್ಟಿಸಿದ ಎಂದು ಕಲ್ಹಣ ಪುಸ್ತಕದಲ್ಲಿದೆ. ಆ ಸಂದರ್ಭದಲ್ಲಿ ಶಂಕರಾಚಾರ್ಯರು ಜಮ್ಮು ಹಾಗೂ ಕಾಶ್ಮೀರದಲ್ಲಿ ಶಿವನ ಆರಾಧನೆ ಹೆಚ್ಚಲು ಕಾರಣರಾಗಿದ್ದರು. ಮಹಾರಾಜ ಗುಲಾಬ್ ಸಿಂಗ್ ಈ ಬೆಟ್ಟಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದ್ದಾನೆ.

    ಪಂಡ್ರೆತನ್ ದೇವಾಲಯ
    ಸ್ಥಳೀಯವಾಗಿ ಈ ದೇವಾಲಯವನ್ನು ಪಾನಿ ಮಂದಿರ ಎನ್ನಲಾಗುತ್ತದೆ. ಇದು ಶ್ರೀನಗರದಿಂದ 5 ಕಿಲೋಮೀಟರ್ ದೂರದಲ್ಲಿದೆ. ವಿಷ್ಣುವಿನ ದೇವಾಲಯವಾದ ಇದನ್ನು ಮೇರು ವರ್ಧನ ಎಂಬ ರಾಜ ಕಟ್ಟಸಿದ. ದೇವಾಲಯದ ಸುತ್ತ ಕೊಳವಿದ್ದು, ಅದಕ್ಕಾಗಿ ಬಳಸಿದ ಗಣಿತ ಜ್ಞಾನಕ್ಕಾಗಿ ಪ್ರಖ್ಯಾತಿ ಪಡೆದಿದೆ.

    ಪಾಯರ್ ದೇವಾಲಯ
    11ನೇ ಶತಮಾನದ ಪಾಯರ್ ದೇವಾಲಯ ಶಿವನದ್ದಾಗಿದ್ದು, ಪಾಯರ್ ಎಂಬ ಹಳ್ಳಿಯಲ್ಲಿದೆ. ಪುಲ್ವಾಮಾ ಜಿಲ್ಲೆಯಲ್ಲಿರುವ ಈ ದೇವಾಲಯವನ್ನು 10 ಕಲ್ಲುಗಳಿಂದ ಕಟ್ಟಲಾಗಿದೆ.

    ಶಂಕರ ಗುರುವಾರಂ ದೇವಾಲಯ
    ಶಿವನ ದೇವಾಲಯವಾದ ಇದು ಬಾರಾಮುಲ್ಲಾ ಬಳಿಯಿದ್ದು, ಶಂಕರವರ್ಮಾನ್ ರಾಜ ಕಟ್ಟಿಸಿದ. ಪಾಳು ಬಿದ್ದಿರುವ ಈ ದೇವಾಲಯದಲ್ಲಿ ಈಗ ಪೂಜೆ ನಡೆಯುತ್ತಿಲ್ಲ.

    ವಜ್ರ ಭೈರವ ದೇಗುಲ
    ವಜ್ರ ಭೈರವ ದೇಗುಲ ಲೇಹ್‌ನಿಂದ 10 ಕಿ.ಮೀ. ದೂರದಲ್ಲಿದೆ. ಇದನ್ನು ಯಲ್ಲೋವ್ ಹ್ಯಾಟ್ ಪಂಗಡದ ರಕ್ಷಕ ತಾಂತ್ರಿಕ್ ದೇವತೆಯ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಸಾಮಾನ್ಯ ನಾಗರಿಕರು, ಭಕ್ತರ ದರ್ಶನಕ್ಕೆ ಇಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಸಿಗುತ್ತದೆ.

  • 300 ಅಡಿ ಕಣಿವೆಗೆ ಉರುಳಿದ ವಾಹನ – 10 ಮಂದಿ ದುರ್ಮರಣ

    300 ಅಡಿ ಕಣಿವೆಗೆ ಉರುಳಿದ ವಾಹನ – 10 ಮಂದಿ ದುರ್ಮರಣ

    ಶ್ರೀನಗರ: ವಾಹನವೊಂದು 300 ಅಡಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 10 ಜನ ಸಾವಿಗೀಡಾದ ಘಟನೆ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ (Srinagar-Jammu Highway) ನಡೆದಿದೆ. ರಾಂಬನ್ ಜಿಲ್ಲೆಯ ಬ್ಯಾಟರಿ ಚೆಶ್ಮಾ ಎಂಬ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತದಲ್ಲಿ ಮೃತಪಟ್ಟವರೆಲ್ಲ ಶ್ರೀನಗರಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರು ಎಂದು ತಿಳಿದು ಬಂದಿದೆ. ಭಾರೀ ಮಳೆಯ ನಡುವೆ, ರಾಜ್ಯ ವಿಪತ್ತು ನಿರ್ವಹಣಾ ಕಾರ್ಯಕರ್ತರು ಮತ್ತು ಪೊಲೀಸರು ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಬಿಎಂಟಿಸಿ ಬಸ್‌ನಲ್ಲೇ ವ್ಯಕ್ತಿ ಸಾವು

    ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅಪಘಾತದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಸರ್ಕಾರದಿಂದ ಒದಗಿಸಲಾಗುವ ಎಲ್ಲಾ ನೆರವನ್ನು ನೀಡಲು ನಾನು ಜಿಲ್ಲಾ ಆಡಳಿತಕ್ಕೆ ಸೂಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ದಾಳಿಯ ಸಂಚುಕೋರ ಅರೆಸ್ಟ್‌

  • ಕಾಶ್ಮೀರ ಸುರಕ್ಷಿತವಾಗಿದೆ, ನಾನು ಸ್ವತಂತ್ರಳಾಗಿದ್ದೇನೆ – ಬ್ರಿಟನ್ ಸಂಸತ್‌ನಲ್ಲಿ ಕಾಶ್ಮೀರದ ಪತ್ರಕರ್ತೆ ಶ್ಲಾಘನೆ

    ಕಾಶ್ಮೀರ ಸುರಕ್ಷಿತವಾಗಿದೆ, ನಾನು ಸ್ವತಂತ್ರಳಾಗಿದ್ದೇನೆ – ಬ್ರಿಟನ್ ಸಂಸತ್‌ನಲ್ಲಿ ಕಾಶ್ಮೀರದ ಪತ್ರಕರ್ತೆ ಶ್ಲಾಘನೆ

    ಲಂಡನ್‌: ಜಮ್ಮು ಮತ್ತು ಕಾಶ್ಮೀರದ (Jammu and Kashmir) ವಿಚಾರದಲ್ಲಿ ಆಗಾಗ್ಗೆ ಮೂಗು ತೂರಿಸುವ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಪಾಕ್ ಮೂಲದ ಹೋರಾಟಗಾರ್ತಿ ಮಲಾಲಾ ಯೂಸುಫ್‌ಝಾಗೆ ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತೆ, ಪತ್ರಕರ್ತೆ ಯಾನಾ ಮೀರ್ (Yana Mir) ಬ್ರಿಟನ್ ಸಂಸತ್‌ನಲ್ಲಿ ತಿರುಗೇಟು ನೀಡಿದ್ದಾರೆ.

    ನಾನು ಮಲಾಲಾ (Malala Yousafzai) ರೀತಿ ಅಲ್ಲ, ಭಾರತದ ಭಾಗವಾಗಿರುವ ನನ್ನ ತಾಯ್ನಾಡು ಕಾಶ್ಮೀರದಲ್ಲಿ ಸುರಕ್ಷಿತ ಮತ್ತು ಸ್ವತಂತ್ರವಾಗಿದ್ದೇನೆ. ನಾನು ನನ್ನ ದೇಶವನ್ನು ತೊರೆಯಲ್ಲ. ಅಲ್ಲಿ ಶಾಂತಿ ನೆಲೆಸಿದೆ, ಮಾನವಹಕ್ಕುಗಳ ರಕ್ಷಣೆ ಆಗ್ತಿದೆ ಎಂದು ಯಾನಾ ಮೀರ್ ಭಾರತವನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಇಬ್ಬರ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ

    ಜಾಗತಿಕವಾಗಿ ಯಾರೇ ಆಗಲಿ ನನ್ನ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ಸಹಿಸಲ್ಲ. ಸೋಶಿಯಲ್ ಮೀಡಿಯಾದಲ್ಲಿಯೂ ನನ್ನ ಮಾತೃಭೂಮಿ ಬಗ್ಗೆ ಕೆಟ್ಟದಾಗಿ ಮಾತಾಡೋದನ್ನು ಸಹಿಸಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಯಾನಾ ಮೀರ್ ಅವರು ಬ್ರಿಟನ್‌ ಸಂಸತ್‌ನಲ್ಲಿ ಮಾತನಾಡಿರುವ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಕೋಟಿ ಕೋಟಿ ಭಾರತೀಯರು ಯಾನ ಮೀರ್‌ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಾಶ್ಮೀರಕ್ಕೆ ಭೇಟಿ ಕೊಡದೇ ಸೋಶಿಯಲ್‌ ಮೀಡಿಯಾಗಳಲ್ಲಿ ಟೀಕೆ ಮಾಡುವವರನ್ನು ನಾನು ವಿರೋಧಿಸುತ್ತೇನೆ. ಧರ್ಮದ ಆಧಾರದಲ್ಲಿ ಭಾರತೀಯರನ್ನು ಧ್ರುವೀಕರಿಸುವುದನ್ನ ಮೊದಲು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಿಮ್‌ ಜಾಂಗ್‌ ಉನ್‌ಗೆ ವಿಶೇಷ ಕಾರು ಗಿಫ್ಟ್‌ ಕೊಟ್ಟ ರಷ್ಯಾ ಅಧ್ಯಕ್ಷ!

  • ಕರ್ನಾಟಕ, ಜಮ್ಮು- ಕಾಶ್ಮೀರ ಸೇರಿ ದೇಶದ ವಿವಿಗಳ ಅಭಿವೃದ್ಧಿಗೆ 3600 ಕೋಟಿ ರೂ. ಬಿಡುಗಡೆ

    ಕರ್ನಾಟಕ, ಜಮ್ಮು- ಕಾಶ್ಮೀರ ಸೇರಿ ದೇಶದ ವಿವಿಗಳ ಅಭಿವೃದ್ಧಿಗೆ 3600 ಕೋಟಿ ರೂ. ಬಿಡುಗಡೆ

    – ಬೆಳಗಾವಿ ರಾಣಿ ಚನ್ನಮ್ಮ, ಧಾರವಾಡ, ಗುಲ್ಬರ್ಗ ವಿವಿಗಳಿಗೆ ಅನುದಾನ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

    – ಜಮ್ಮುವಿನಲ್ಲಿ ಪ್ರಧಾನಮಂತ್ರಿ ಉಷಾ ಯೋಜನೆಗೆ ಚಾಲನೆ; ನೇರ ಪ್ರಸಾರದಲ್ಲಿ ಸಚಿವ ಪ್ರಹ್ಲಾದ್‌ ಜೋಶಿ, ಸಂಸದೆ ಮಂಗಳಾ ಅಂಗಡಿ ಭಾಗಿ

    ಬೆಳಗಾವಿ: ಕರ್ನಾಟಕ (Karnataka), ಜಮ್ಮು-ಕಾಶ್ಮೀರ (Jammu and Kashmir) ಸೇರಿದಂತೆ ದೇಶದ ಅನೇಕ ವಿಶ್ವವಿದ್ಯಾಲಯಗಳಿಗೆ (University) ಕೇಂದ್ರ ಸರ್ಕಾರ 3600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.

    ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಉಷಾ ಯೋಜನೆಯಡಿ 78 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಅನುದಾನ ನೀಡಿದ್ದಾರೆ. ಇಂದು ಅದರ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: 2013ರ ಸಿದ್ದರಾಮಯ್ಯ ಬೇರೆ, 2024 ಸಿದ್ದರಾಮಯ್ಯ ಬೇರೆ: ಎನ್.ಹೆಚ್ ಶಿವಶಂಕರ ರೆಡ್ಡಿ

    ಉಷಾ ಯೋಜನೆಯಡಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ. ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ಹಾಗೂ ಧಾರವಾಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ದೊರೆಯಲಿದೆ. ಜಮ್ಮು- ಕಾಶ್ಮೀರ ಸೇರಿದಂತೆ ದೇಶದ ಹಲವಾರು ವಿಶ್ವವಿದ್ಯಾಲಯಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಈ ಅನುದಾನ ಬಿಡುಗಡೆ ಮಾಡಿದ್ದಾರೆ. ಸಾಕ್ಷರತೆಯಿಂದ ಮಾತ್ರ ದೇಶದ ನೈಜ ವಿಕಾಸ ಸಾಧ್ಯವೆಂದು ನಂಬಿರುವ ಮೋದಿಯವರು ದೇಶದ ವಿಶ್ವವಿದ್ಯಾಲಯಗಳಿಗೆ ಹೊಸ ಜೀವ ತುಂಬಲು ಈ ಮಹತ್ತರವಾದ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

    ಭಾರತದ ಯುವ ಜನತೆಗೆ ಶಿಕ್ಷಣ ಮತ್ತು ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸಿ ಭಾರತವನ್ನು ವಿಶ್ವಗುರು ಮಾಡುವ ಧ್ಯೇಯ ಪ್ರಧಾನಿಯವರದ್ದಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳ ಅಮೂಲ್ಯ ಜೀವನ ರೂಪಿಸಲು ಪ್ರಧಾನಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಜಮ್ಮು ಅಭಿವೃದ್ಧಿಗೆ ಐತಿಹಾಸಿಕ ಕ್ರಮ ಜಮ್ಮು- ಕಾಶ್ಮೀರ ಎಂದರೆ ಹಿಂಸಾಚಾರ, ಭಯೋತ್ಪಾದನೆಯೇ ಎಲ್ಲರ ಮನದಲ್ಲಿ ಹಾದು ಹೋಗುತ್ತಿತ್ತು. ಈಗ ಅದು ಸಂಪೂರ್ಣ ಬದಲಾಗಿದೆ. ಅಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ವಿಶ್ವವಿದ್ಯಾಲಯಗಳ ಅನುದಾನ ಬಿಡುಗಡೆ ಸೇರಿದಂತೆ ಜಮ್ಮುವಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮೋದಿಯವರು ಇಂದು ಅಲ್ಲಿಂದಲೇ ಚಾಲನೆ ನೀಡಲಿದ್ದಾರೆ. ನಾನು ಮತ್ತು ಸಂಸದೆ ಮಂಗಳಾ ಅಂಗಡಿ ಅವರು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕಮಲ್‌ನಾಥ್‌ ಇಂದು, ಎಂದೆಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ: ದಿಗ್ವಿಜಯ್‌ ಸಿಂಗ್‌

  • ಜಮ್ಮು & ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧೆ- NDA ಸೇರುವ ಸುಳಿವು ಕೊಟ್ರಾ ಫಾರೂಕ್ ಅಬ್ದುಲ್ಲಾ?

    ಜಮ್ಮು & ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧೆ- NDA ಸೇರುವ ಸುಳಿವು ಕೊಟ್ರಾ ಫಾರೂಕ್ ಅಬ್ದುಲ್ಲಾ?

    ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (NC) ಎಲ್ಲಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ. ಈ ಮೂಲಕ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರುವ ಸುಳಿವು ನೀಡಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, I.N.D.I.A ಒಕ್ಕೂಟದ ಜೊತೆ ಸೀಟು ಹಂಚಿಕೆಯ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲ್ಲ. ಬದಲಾಗಿ ತನ್ನ ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರು ಚುಕ್ಕಾಣಿ ಹಿಡಿದಾಗ ನ್ಯಾಷನಲ್ ಕಾನ್ಫರೆನ್ಸ್ ಎನ್‌ಡಿಎ ಭಾಗವಾಗಿತ್ತು.

    ಕಳೆದ ತಿಂಗಳು ಜಮ್ಮು ಪ್ರದೇಶದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನ ಹಲವಾರು ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಬ್ದುಲ್ಲಾ ಅವರ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ತಲಾ ಮೂರು ಸ್ಥಾನಗಳನ್ನು ಗೆದ್ದವು. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ

  • ಆಳವಾದ ಕಂದಕಕ್ಕೆ ಉರುಳಿದ ಕ್ಯಾಬ್ – 7 ಮಂದಿ ದುರ್ಮರಣ

    ಆಳವಾದ ಕಂದಕಕ್ಕೆ ಉರುಳಿದ ಕ್ಯಾಬ್ – 7 ಮಂದಿ ದುರ್ಮರಣ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಬಾರಾಮುಲ್ಲಾ ಜಿಲ್ಲೆಯಲ್ಲಿ ಕ್ಯಾಬ್ ಒಂದು ಸ್ಕಿಡ್ ಆಗಿ ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಏಳು ಜನ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

    ಅಪಘಾತದಲ್ಲಿ (Accident) ಏಳು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾಶ್ಮೀರದ ಟ್ರಾಫಿಕ್ ರೂರಲ್ ಕಾಶ್ಮೀರದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‍ಎಸ್‍ಪಿ) ರವೀಂದರ್ ಪಾಲ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಂತೇವಾಡದಲ್ಲಿ ನಕ್ಸಲರ ಬೃಹತ್ ಸುರಂಗ ಪತ್ತೆ – ಭದ್ರತಾ ಪಡೆಗಳಿಂದ ತೀವ್ರ ಶೋಧ

    ಇನ್ನೂ ಪ್ರತ್ಯೇಕ ಘಟನೆಯಲ್ಲಿ, ಜಮ್ಮು ಪ್ರದೇಶದ ಕಿಶ್ತ್ವಾರ್‌ನ ಮರ್ವಾನ್ ಪ್ರದೇಶದಲ್ಲಿ ರಸ್ತೆ ತೆರವು ಕಾರ್ಯದಲ್ಲಿ ತೊಡಗಿದ್ದ ಸ್ನೋ ಕಟರ್ ಯಂತ್ರ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

    ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವನ್ನು ತ್ವರಿತವಾಗಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು ಎಂದು ಮನೋಜ್ ಸಿನ್ಹಾ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜಿನ ಆರನೇ ಮಹಡಿಯಿಂದ ಜಿಗಿದು ಬಿಬಿಎ ವಿದ್ಯಾರ್ಥಿ ಸಾವು

  • ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಪ್ರಕರಣ – ಉಗ್ರರಿಗೆ ಆಶ್ರಯ ನೀಡಿದ್ದ ಅಪ್ರಾಪ್ತನ ಬಂಧನ

    ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಪ್ರಕರಣ – ಉಗ್ರರಿಗೆ ಆಶ್ರಯ ನೀಡಿದ್ದ ಅಪ್ರಾಪ್ತನ ಬಂಧನ

    ನವದೆಹಲಿ: ಕಳೆದ ವರ್ಷ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಐವರು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಆಪ್ರಾಪ್ತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.  ಆತನನ್ನು ಜಮ್ಮುವಿನ ಆರ್‌ಎಸ್‌ಪುರದ ಬಾಲಮಂದಿರದಲ್ಲಿ ಇರಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

    ಬಂಧಿತ ಅಪ್ರಾಪ್ತ, ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿದ್ದ ಆರೋಪಿಗಳಾದ ನಿಸಾರ್ ಅಹ್ಮದ್ ಅಲಿಯಾಸ್ ಹಾಜಿ ನಿಸಾರ್ ಮತ್ತು ಮುಷ್ತಾಕ್ ಹುಸೇನ್ ಅಲಿಯಾಸ್ ಚಾಚಾ ಎಂಬ ಇಬ್ಬರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: 9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!

    ಹಾಜಿ ನಿಸಾರ್ ಮತ್ತು ಚಾಚಾ ಈ ಇಬ್ಬರು ಆರೋಪಿಗಳು ಎರಡು ತಿಂಗಳಿಗೂ ಹೆಚ್ಚಿನ ಕಾಲ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು. ಅಲ್ಲದೇ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ನಿರ್ವಾಹಕರಾದ ಸೈಫುಲ್ಲಾ ಅಲಿಯಾಸ್ ಸಾಜಿದ್ ಜುಟ್ ಮತ್ತು ಅಬು ಕತಾಲ್ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಯೋತ್ಪಾದಕ ದಾಳಿ ನಡೆದ ಬಳಿಕ ಎನ್‍ಐಎ ಅಧಿಕಾರಿಗಳ ತಂಡ ಆರೋಪಿಗಳ ಪತ್ತೆಗೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ, ಪೂಂಚ್ ಮತ್ತು ರಿಯಾಸಿ ಜಿಲ್ಲೆಗಳ ಗುಡ್ಡಗಾಡು ಪ್ರದೇಶದಲ್ಲಿ ಹಲವಾರು ತಿಂಗಳುಗಳ ಕಾಲ ಅಲ್ಲಿಯೇ ಬೀಡುಬಿಟ್ಟಿತ್ತು.

    2023ರ ಜ.1 ರಂದು ನಡೆದಿದ್ದ ಈ ಭಯೋತ್ಪಾದಕ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೋ

  • ಆರ್ಟಿಕಲ್ 370 ರದ್ದು, ಸರ್ಕಾರದ ಪರ ತೀರ್ಪು – ಆದೇಶ ಮರು ಪರಿಶೀಲನೆಗೆ ಸುಪ್ರೀಂಗೆ ಅರ್ಜಿ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ (Article 370) ವಿಧಿಯನ್ನು ರದ್ದುಗೊಳಿಸಿದ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿರುವ ಸುಪ್ರೀಕೋರ್ಟ್ (Supreme Court) ಆದೇಶವನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಮುಜಾಫರ್ ಇಕ್ಬಾಲ್ ಖಾನ್ ಎಂಬವರು ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್‌ನಿಂದ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ.

    ಡಿಸೆಂಬರ್ 11, 2023 ರಂದು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠವು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019ರ ನಿರ್ಧಾರವನ್ನು ಸರ್ವಾನುಮತದಿಂದ ಎತ್ತಿಹಿಡಿದಿತ್ತು. ಈ ವೇಳೆ ಆರ್ಟಿಕಲ್ 370 ಒಂದು ತಾತ್ಕಾಲಿಕ ನಿಬಂಧನೆ ಎಂದು ನ್ಯಾಯಾಲಯ ಹೇಳಿತ್ತು. ಇದನ್ನೂ ಓದಿ: Article 370 Verdict – ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ಸುಪ್ರೀಂ ಐತಿಹಾಸಿಕ ತೀರ್ಪಿನಲ್ಲಿ ಏನಿದೆ?

    ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ದಾರಿ ಮಾಡಿಕೊಟ್ಟ 2019ರ ಕಾನೂನಿನ ಸಿಂಧುತ್ವವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಬದಲಾಗಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಈ ಪ್ರದೇಶಕ್ಕೆ ರಾಜ್ಯತ್ವವನ್ನು ಮರುಸ್ಥಾಪಿಸಲು ಸೂಚಿಸಿತ್ತು.

    ನ್ಯಾಯಾಲಯದ ಈ ತೀರ್ಪಿಗೆ ಹಲವು ಟೀಕೆಗಳು ಬಂದಿದ್ದವು. ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ತೀರ್ಪು ಗೊಂದಲವನ್ನುಂಟುಮಾಡಿದೆ. ಫೆಡರಲಿಸಂ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ ಮತ್ತು ಸಂವಿಧಾನದ 356 ನೇ ವಿಧಿಯನ್ನು ಬೈಪಾಸ್ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಹೃದ್ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲಿದೆ ರಾಮ್​ ಕಿಟ್​- ಏನಿದು?, ಉಪಯೋಗವೇನು?

  • ಗಡಿಯಲ್ಲಿ ಪಾಕ್ ಕಳ್ಳಾಟ – ಉಗ್ರರಿಗೆ ಡ್ರೋನ್ ಮೂಲಕ ಹಣ, ಶಸ್ತ್ರಾಸ್ತ್ರ ರವಾನೆ

    ಗಡಿಯಲ್ಲಿ ಪಾಕ್ ಕಳ್ಳಾಟ – ಉಗ್ರರಿಗೆ ಡ್ರೋನ್ ಮೂಲಕ ಹಣ, ಶಸ್ತ್ರಾಸ್ತ್ರ ರವಾನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅಖ್ನೂರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿಯ ಗ್ರಾಮವೊಂದರಲ್ಲಿ ಅಪಾರ ಶಸ್ತ್ರಾಸ್ತ್ರ ಮತ್ತು 35,000 ರೂ. ನಗದು ಒಳಗೊಂಡ ಎರಡು ಡ್ರೋನ್ (Drone) ಡ್ರಾಪ್ ಪ್ಯಾಕೆಟ್‍ಗಳನ್ನು ಸೇನೆ (Indian Army) ವಶಪಡಿಸಿಕೊಂಡಿದೆ.

    ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಉಗ್ರರಿಗೆ ತಲುಪಿಸಲು ಪಾಕಿಸ್ತಾನಿ (Pakistan) ಡ್ರೋನ್‍ಗಳು ಈ ಪ್ಯಾಕೆಟ್‍ಗಳನ್ನು ಬೀಳಿಸಿವೆ ಎಂಬ ಶಂಕೆ ಇದೆ. ಖೌರ್ ಪ್ರದೇಶದ ಚನ್ನಿ ದೇವಾನೊ ಗ್ರಾಮದ ಬಯಲು ಪ್ರದೇಶದಲ್ಲಿ ಈ ಪ್ಯಾಕೆಟ್‍ಗಳು ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸೇನೆ ಮತ್ತು ಪೊಲೀಸರು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಪ್ಯಾಕೆಟ್‍ಗಳನ್ನು ತೆರೆದಾಗ ಶಸ್ತ್ರಾಸ್ತ್ರ ಮತ್ತು ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ದಾಳಿ; ಮೂವರು ನಾಗರಿಕರ ಹತ್ಯೆ – 2 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತ

    ಪ್ಯಾಕೆಟ್‍ನಲ್ಲಿ 9 ಎಂಎಂ ಇಟಾಲಿಯನ್ ನಿರ್ಮಿತ ಪಿಸ್ತೂಲ್, ಮೂರು ಮ್ಯಾಗಜೀನ್‍ಗಳು, 30 ರೌಂಡ್‍ಗಳು, ಮೂರು ಸುಧಾರಿತ ಸ್ಫೋಟಕ ಸಾಧನಗಳು, ಮೂರು ಐಇಡಿ ಬ್ಯಾಟರಿಗಳು, ಹ್ಯಾಂಡ್ ಗ್ರೆನೇಡ್ ಮತ್ತು 35,000 ರೂ. ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಶನಿವಾರ ಮುಂಜಾನೆ ಇದೇ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆಯನ್ನು ಸೇನೆ ತಡೆದಿತ್ತು. ಈ ವೇಳೆ ಸೇನೆಯ ದಾಳಿಗೆ ಓರ್ವ ಉಗ್ರ ಸಹ ಸಾವನ್ನಪ್ಪಿದ್ದ. ಇದನ್ನೂ ಓದಿ: ಗಡಿಯಲ್ಲಿ ನುಸುಳಲು ಯತ್ನಿಸಿದ ಉಗ್ರನ ಹತ್ಯೆ – ದೇಹವನ್ನು ಪಾಕ್ ಕಡೆಗೆ ಎಳೆದೊಯ್ದ ಸಹಚರರು