– ಬಾಂಬರ್ ಸಿಗದೇ ಹೋಗಿದ್ರೆ ಬಿಜೆಪಿ ಮುಸ್ಲಿಂರ ಮೇಲೆ ಗೂಬೆ ಕೂರುಸ್ತಿತ್ತು
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ಆತಂಕ ಹುಟ್ಟಿಸುತ್ತಿದೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡ ಶಾಸಕ ಹ್ಯಾರಿಸ್ ಭೇಟಿಯಾಗಿ ಬಳಿಕ ಮಾತನಾಡಿದ ಜಮೀರ್, ಬಿಜೆಪಿ ಸರ್ಕಾರದ ಬಗ್ಗೆ ಅನುಮಾನಗಳು ಕಾಡತೊಡಗಿದೆ. ಶಾಸಕ ಹ್ಯಾರಿಸ್, ತನ್ವೀರ್ ಸೇಠ್ ಮೇಲೆ ನಡೆದ ಘಟನೆಗಳಿಂದ ಒಂದು ರೀತಿ ರಾಜ್ಯದಲ್ಲಿ ಏನ್ ನಡೆಯುತ್ತಿದ್ದೆ ಎಂದು ವಿಚಲಿತರಾಗಿದ್ದೇವೆ. ಬಿಜೆಪಿ ಸರ್ಕಾರ ನನಗೆ ಕೊಟ್ಟಿರುವ ಭದ್ರತೆಯನ್ನ ವಾಪಸ್ ಪಡೆದುಕೊಳ್ಳಲು ಮುಂದಾಗಿದೆ ಎಂದು ನನಗೂ ಮಾಹಿತಿ ಬಂದಿದೆ ಎಂದರು.
ನಾನು ಇತ್ತೀಚಿಗೆ ಎನ್‌ಆರ್‌ಸಿ ವಿರೋಧಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾ ಇದ್ದೀನಿ. ಆ ಕಾರಣಕ್ಕೆ ಭದ್ರತೆಯನ್ನ ವಾಪಸ್ ಪಡೆದುಕೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಭದ್ರತೆ ಇದ್ದರೂ ನಾನು ಎನ್‌ಆರ್‌ಸಿಯನ್ನ ವಿರೋಧಿಸುತ್ತೇನೆ, ಇಲ್ಲದೇ ಹೋದರು ವಿರೋಧಿಸಿ ಪ್ರತಿಭಟನೆ ಮಾಡುತ್ತೇನೆ ಎಂದು ಜಮೀರ್ ಅಹಮ್ಮದ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ವ್ಯಕ್ತಿ ಆದಿತ್ಯ ರಾವ್ ಬುಧವಾರ ಬಂದು ಡಿಜಿ ಕಚೇರಿಯಲ್ಲಿ ಸರೆಂಡರ್ ಆಗಿದ್ದಾನೆ. ಬಾಂಬರ್ ಸಿಗುವುದಕ್ಕೂ ಮುನ್ನ ಬಾಂಬ್ ಇಟ್ಟಿರುವರು ಮುಸ್ಲಿಂರು ಅನ್ನೋ ರೀತಿಯಲ್ಲಿ ಬಿಂಬಿಸತೊಡಗಿದರು. ದೇವರು ದೊಡ್ಡವನು ಬಾಂಬರ್ ಡಿಜಿ ಕಚೇರಿಯಲ್ಲಿ ಸರೆಂಡರ್ ಆಗಿದ್ದಾನೆ. ಬಾಂಬರ್ ಸಿಗದೇ ಹೋಗಿದ್ದರೆ ಮುಸ್ಲಿಂರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಅವರು ಮಾಡುತ್ತಿದ್ದರು ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು: ಐಎಂಎ ಕೇಸಲ್ಲಿ ಮಾಜಿ ಸಚಿವ ರೋಷನ್ ಬೇಗ್ ವಶದ ಹಿಂದೆ ರಾಜಕೀಯ ಥಳಕು ಹಾಕಿತ್ತಾ ಎಂಬ ಅನುಮಾನವೊಂದು ಕಾಡುತ್ತಿದೆ. ಯಾಕಂದ್ರೆ ಜುಲೈ 19ರಂದು ನೋಟಿಸ್ ನೀಡಿದೆ. ಆದರೆ ಅದಕ್ಕೂ ಮೊದಲೇ ರೋಷನ್ ಬೇಗ್ ಅವರನ್ನು ಎಸ್‍ಐಟಿ ವಶಕ್ಕೆ ಪಡೆದಿದ್ಯಾಕೆ ಅನ್ನೋ ಪ್ರಶ್ನೆ ಎದ್ದಿದೆ.
ರೋಷನ್ ಬೇಗ್ ಅವರು ಹೊರ ರಾಜ್ಯ ಅಥವಾ ವಿದೇಶ ಪ್ರವಾಸಕ್ಕೆ ನಿರ್ಬಂಧ ಇತ್ತಾ. ಐಎಂಎ ಕೇಸ್ ನಲ್ಲಿ ಈಗಾಗಲೇ ಜಮೀರ್ ಅಹಮ್ಮದ್, ರೆಹಮಾನ್ ಖಾನ್ ಹೆಸರು ಪ್ರಸ್ತಾಪ ಆಗಿದ್ದರೂ ಕೂಡ ಅವರನ್ನು ಯಾಕೆ ಎಸ್‍ಐಟಿ ವಶಕ್ಕೆ ಪಡೆದಿಲ್ಲ ಎಂಬುದರ ಕುರಿತು ಇದೀಗ ಭಾರೀ ಚರ್ಚೆಯಾಗುತ್ತಿದೆ.
ಗುರುವಾರ ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ರೋಷನ್ ಬೇಗ್ ಎಸ್‍ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ವಿಚಾರದಲ್ಲಿ ರಾಜಕೀಯ ಕೆಸರೆರೆಚಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ರೋಷನ್ ಬೇಗ್ ಅವರು ಇತ್ತೀಚೆಗಷ್ಟೇ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಒಂದು ಮೂಲದ ಪ್ರಕಾರ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸರ್ಕಾರದ ಪರ ಮತಚಲಾಯಿಸಿ ಎಂದು ಕೇಳಿಕೊಂಡಿದ್ದರು. ಒಂದು ವೇಳೆ ಬೇಗ್ ಇದಕ್ಕೆ ಒಪ್ಪಿಕೊಳ್ಳುತ್ತಿದ್ದರೆ ಅವರಿಗೆ ಈ ವಿಚಾರಣೆಯಿಂದ ಮುಕ್ತಿ ಸಿಗುವ ಸಾಧ್ಯತೆಗಳಿತ್ತು. ಆದರೆ ಆ ಡೀಲ್ ಅನ್ನು ಬ್ರೇಕ್ ಮಾಡಿ ಬೇಗ್ ಮುಂಬೈಗೆ ಹೊರಟಿದ್ದರು. ಹೀಗಾಗಿ ಅವರನ್ನು ಎಸ್‍ಐಟಿ ವಶಕ್ಕೆ ಪಡೆದಿದೆ ಎಂಬುದಾಗಿ ತಿಳಿದುಬಂದಿದೆ. ಒಟ್ಟಿನಲ್ಲಿ ಐಎಂಎ ಕೇಸ್ ನಲ್ಲಿ ಮಾಜಿ ಸಚಿವ ರೋಷನ್ ಬೇಗ್ ವಶದ ಹಿಂದೆ ರಾಜಕೀಯ ಕೈವಾಡವಿದೆ ಎಂದು ಹೇಳಲಾಗುತ್ತಿದೆ.
ಎಸ್‍ಐಟಿ ಮುಂದಿವೆ 8 ಪ್ರಶ್ನೆಗಳು:
1. ರೋಷನ್ ಬೇಗ್ ಆರೋಪಿಯೋ..? ಸಾಕ್ಷಿದಾರನೋ..?
2. ರೋಷನ್ ಬೇಗ್‍ಗೆ ಹೊರ ರಾಜ್ಯ, ದೇಶ ಪ್ರವಾಸ ನಿರ್ಬಂಧವಿತ್ತಾ…?
3. ವಿಚಾರಣೆಗೆ ಹಾಜರಾಗಲು ಬೇಗ್‍ಗೆ ಕಾಲಾವಕಾಶ ನೀಡಿದ್ರಾ…?
4. ಜುಲೈ 19ರಂದು ಕಾಲಾವಕಾಶ ನೀಡಿಯೂ ವಶಕ್ಕೆ ಪಡೆದಿದ್ದು ಏಕೆ…?
5. ಕಾಲಾವಕಾಶ ನೀಡಿದ ಹಿಂಬರಹದಲ್ಲಿ ಹೊರರಾಜ್ಯ ಪ್ರಯಾಣ ಉಲ್ಲೇಖ ಇರಲಿಲ್ಲವಾ..?
6. ಮನ್ಸೂರ್ ಅಲಿಖಾನ್ ಹೆಸರಿಸಿದ ಉಳಿದವರಿಗೆ ನೋಟೀಸ್ ನೀಡಿಲ್ಲ ಏಕೆ…?
7. ಬೇಗ್ ತರಹನೇ ಜಮೀರ್, ರೆಹಮಾನ್ ಖಾನ್ ವಶಕ್ಕೆ ಏಕೆ ಪಡೆದಿರಲಿಲ್ಲ….?
8. ಬೇಗ್ ರೀತಿಯೇ ಬೇರೆಯವರಿಗ್ಯಾಕೆ ನೋಟಿಸ್ ನೀಡಲಿಲ್ಲ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸದಲ್ಲಿ ಮುಸ್ಲಿಂ ಧರ್ಮಗುರು ಸನ್ಮಾನ ಮಾಡಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಲಾಯಿತು.
ಬೆಳ್ಳಿ ಖಡ್ಗ, ಬೆಳ್ಳಿ ಹಾರ, ಪೇಟ ತೊಡಿಸಿ ಮುಸ್ಲಿಂ ಧರ್ಮಗುರು ಮಾಜಿ ಸಿಎಂಗೆ ಸನ್ಮಾನ ಮಾಡಿದರು. ಸನ್ಮಾನದ ಬಳಿಕ ಸಿದ್ದರಾಮಯ್ಯ ಮಾತನಾಡಿ, ರಾಜಕೀಯ ಕಾರಣಗಳಿಗೆ ಬಿಜೆಪಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದೆ. ಟಿಪ್ಪು ಖಡ್ಗ ಕೈಯಲ್ಲಿ ಹಿಡಿದು ಪೇಟ ತೊಟ್ಟಾಗ ಬಿಜೆಪಿ ಮುಖಂಡರು ಯಾರೂ ವಿರೋಧ ಮಾಡಲಿಲ್ಲ. ಅಲ್ಲದೇ ಟಿಪ್ಪು ಪುಸ್ತಕಕ್ಕೆ ಜಗದೀಶ್ ಶೆಟ್ಟರ್ ಮುನ್ನುಡಿ ಬರೆದಿದ್ದಾರೆ. ಬಿಜೆಪಿ ನಾಯಕರು ಟಿಪ್ಪು ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ಬಿಜೆಪಿಯವರು ಗೋಮುಖ ವ್ಯಾಘ್ರಗಳು:
ಟಿಪ್ಪು ಸುಲ್ತಾನ್ ಕಾಲದಲ್ಲಿ ಸಾಮರಸ್ಯವಿತ್ತು. ನಮ್ಮ ಕಾಲದಲ್ಲಿ 13 ಜಯಂತಿಗಳನ್ನು ಮಾಡಿದ್ದೇವೆ. ಕಿತ್ತೂರು ರಾಣಿ ಚೆನ್ನಮ್ಮ, ಹೇಮರೆಡ್ಡಿ ಮಲ್ಲಮ್ಮ, ವಾಲ್ಮೀಕಿ ಸೇರಿದಂತೆ 13 ಜನರ ಜಯಂತಿ ಮಾಡಿದ್ದೇವೆ. ಅದರಲ್ಲಿ ಟಿಪ್ಪು ಜಯಂತಿ ಕೂಡ ಒಂದು. ಬಿಜೆಪಿಯವರು ದುರುದ್ದೇಶದಿಂದ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದ್ದು, ಅವರು ಗೋಮುಖ ವ್ಯಾಘ್ರಗಳು. ಟಿಪ್ಪು ಹಿಂದು ವಿರೋಧಿ ಎಂಬುದು ಸುಳ್ಳು. ಅವರ ಕಾಲದಲ್ಲಿ ಹಲವು ಹಿಂದುಗಳು ಪ್ರಮುಖ ಹುದ್ದೆಯಲ್ಲಿದ್ದರು ಎಂದು ಹೇಳುತ್ತಾ ಮಾಜಿ ಸಿಎಂ ರಾಜ್ಯದ ಜನರಿಗೆ ಟಿಪ್ಪು ಜಯಂತಿಯ ಶುಭಾಶಯ ತಿಳಿಸಿದರು.
ಸಿಎಂ, ಡಿಸಿಎಂ ಗೈರಿಗೆ ಸ್ಪಷ್ಟನೆ:
ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರು ಟಿಪ್ಪು ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಮಾತನಾಡಿದ ಅವರು, ಸಿಎಂ ಆರೋಗ್ಯದ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂಬ ವಿಷಯವನ್ನು ಕೇಳಿದೆ. ಸಿಎಂ ಹಾಗೂ ಡಿಸಿಎಂ ಅವರು ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಅವರ ಪರವಾಗಿ ಸರ್ಕಾರದ ವತಿಯಿಂದ ಸಚಿವರಾದ ಜಮೀರ್ ಅಹಮ್ಮದ್, ಜಯಮಾಲಾ, ಶಾಸಕ ರೋಷನ್ ಬೇಗ್ ಹಾಗೂ ಹ್ಯಾರಿಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ ಗೈರಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ಪ್ರತಿಕ್ರಿಯಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಆರೋಗ್ಯ ಸರಿಯಿಲ್ಲ. ಅದೇ ಕಾರಣಕ್ಕೆ ಕುಮಾರಸ್ವಾಮಿ ಹಾಜರಾಗುತ್ತಿಲ್ಲ. ಇದನ್ನ ಅವರೇ ಈಗಾಗಲೇ ಹೇಳಿದ್ದಾರೆ. ಮಾಜಿ ಸಚಿವ ಚೆನ್ನಿಗಪ್ಪ ಆರೋಗ್ಯ ವಿಚಾರಿಸಲು ಪರಮೇಶ್ವರ್ ತೆರಳಿದ್ದಾರೆ. ಚೆನ್ನಿಗಪ್ಪ ಅವರ ಅರೋಗ್ಯ ತೀವ್ರ ಹದಗೆಟ್ಟಿದೆ. ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಚೆನ್ನಿಗಪ್ಪರನ್ನ ನೋಡಲು ವಿದೇಶಕ್ಕೆ ತೆರಳಿದ್ದಾರೆ. ಸಂಜೆ 3 ಗಂಟೆಗೆ ಪರಮೇಶ್ವರ್ ವಾಪಸ್ಸಾಗುತ್ತಿದ್ದಾರೆ ಎಂದರು.
ಈ ಮೊದಲು ಸಂಜೆ 6.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಈಗ ಕಾರ್ಯಕ್ರಮದ ಸಮಯದಲ್ಲಿ ಬದಲಾವಣೆಯಾಗಿದೆ. ಹಾಗಾಗಿ ಪರಮೇಶ್ವರ್ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಮೊದಲಿನಿಂದಲೂ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಇದು ನಾಲ್ಕನೇ ಟಿಪ್ಪು ಜಯಂತಿ ಆಚರಣೆಯಾಗಿದ್ದು, ಕೇವಲ ರಾಜಕೀಯ ಲಾಭಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಅಷ್ಟೇ ಎಂದು ಸಚಿವ ಜಮೀರ್ ಅಹಮ್ಮದ್ ತಿಳಿಸಿದರು.
ಮಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಕರಾವಳಿಗೆ ಬಂದಾಗಲೆಲ್ಲ ಏನಾದ್ರು ಒಂದು ಕಾರಣಕ್ಕೆ ಮಿಂಚುತ್ತಿದ್ದಾರೆ.
ಗುರುವಾರ ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಜಮೀರ್, ಮೀನು ಊಟಕ್ಕಾಗಿ ಮಂಗಳೂರಿನ ಕಂಕನಾಡಿಯ ಲೋವರ್ ಬೆಂದೂರುವೆಲ್ ನಲ್ಲಿರುವ ಫಿಶ್ ಮಾರ್ಕೆಟ್ ಎನ್ನುವ ಸೀ ಫುಡ್ ರೆಸ್ಟೋರೆಂಟಿಗೆ ತೆರಳಿದ್ದರು. ಅಂಜಲ್, ಮಾಂಜಿ, ಸಿಗಡಿ ಹೀಗೆ ಕರಾವಳಿಯ ವಿವಿಧ ಮಾದರಿಯ ಮೀನಿನ ಖಾದ್ಯಗಳನ್ನು ಸವಿದ ಸಚಿವರು, ಬಾಣಸಿಗನನ್ನು ಬರ ಹೇಳಿದ್ದಾರೆ.
ರುಚಿ ಕಟ್ಟಾದ ಮೀನಿನ ಖಾದ್ಯಗಳನ್ನು ರೆಡಿ ಮಾಡಿದ್ದ ಉಳ್ಳಾಲದ ಬೋಳಿಯಾರ್ ನಿವಾಸಿ ಹನೀಫ್‍ರ ಬೆನ್ನು ತಟ್ಟಿ ಅವರಿಗೆ ತನ್ನದೇ ಖರ್ಚಿನಲ್ಲಿ ಪವಿತ್ರ ಮೆಕ್ಕಾ ಯಾತ್ರೆಗೆ ಹೋಗಿ ಬರಲು ವ್ಯವಸ್ಥೆ ಮಾಡಿದ್ದಾರೆ. ಇದನ್ನು ಕೇಳಿದ ಬಡ ಬಾಣಸಿಗನಿಗೆ ಆಶ್ಚರ್ಯ, ಆನಂದ ಎರಡೂ ಉಂಟಾಗಿತ್ತು. ಆ ಬಳಿಕ ಸಚಿವರು ಹೊರಡುವ ಮುನ್ನ ಹೊಟೇಲಿನ ಎಲ್ಲ ಸಿಬ್ಬಂದಿಗಳನ್ನು ಕರೆದು ಒಟ್ಟು 25 ಸಾವಿರ ರೂ. ಟಿಪ್ಸ್ ಕೊಟ್ಟಿದ್ದಾರೆ.
ಶ್ರೀಮಂತಿಕೆ ಹಲವರಲ್ಲಿ ಇರುತ್ತೆ, ಕೈ ಎತ್ತಿ ನೀಡುವ ಜಾಯಮಾನ ಎಲ್ಲರಲ್ಲಿ ಇರುವುದಿಲ್ಲ. ಇಂಥವರ ಪೈಕಿ ಜಮೀರ್ ಅಹ್ಮದ್ ನಡೆ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ಸುಳ್ಯಕ್ಕೆ ಆಗಮಿಸಿದ್ದ ಸಚಿವರು, ಜೋಡುಪಾಲ ದುರಂತದಲ್ಲಿ ಸ್ವಯಂಸೇವಕರಾಗಿ ದುಡಿದವರನ್ನು ಕರೆದು ತಲಾ ಒಂದು ಲಕ್ಷ ರೂ. ನೀಡಿ ಪುಣ್ಯಕ್ಷೇತ್ರ ದರ್ಶನ ಮಾಡುವಂತೆ ಹೇಳಿದ್ದರು. ಅಲ್ಲಿನ ಹಿಂದು ಮತ್ತು ಮುಸ್ಲಿಮ್ ಸ್ವಯಂ ಸೇವಕರಿಗೆ ಇದು ಅಚ್ಚರಿಯ ಕೊಡುಗೆಯಾಗಿತ್ತು.
ತುಮಕೂರು: ಆತ ಪಾಕಿಸ್ತಾನಕ್ಕೆ ಹೋಗಲಿ. ಭಾರತ ಆತನ ತಾತನ ಆಸ್ತಿಯಲ್ಲ ಎಂದು ಸಚಿವ ಜಮೀರ್ ಅಹಮದ್ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಮತ ಹಾಕೋರು ಮುಸಲ್ಮಾನರೇ ಅಲ್ಲ ಎಂದ ಜಮೀರ್ ಅಹಮ್ಮದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇಷ್ಟೊತ್ತಿಗೆ ಸರ್ಕಾರ ಅವರ ಮೇಲೆ ಕ್ರಮ ಕೈಗೊಂಡಿರುತ್ತದೆ ಎಂದು ನಾನು ತಿಳಿದುಕೊಂಡಿದ್ದೆ. ಏಕೆಂದರೆ ದೇಶದ ಸಂಸ್ಕೃತಿ ಬಗ್ಗೆ, ಜನಗಳ ಬಗ್ಗೆ ಜಿನ್ನಾ ಅವನ ಅನುಯಾಯಿಯಾಗಿರುವ ಜಮೀರ್ ಈ ರೀತಿಯ ನಡವಳಿಕೆ ದೇಶದ ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂದು ಕಿಡಿಕಾರಿದರು.
ದೇಶ ವಿಭಜನೆಯಾದಾಗ ಮುಸ್ಲಿಂ ಬಾಂಧವರು 3 ಕೋಟಿ ಇದ್ದರು. ಇದೀಗ 20 ಕೋಟಿ ಆಗಿದ್ದಾರೆ. ನಾವು ಅವರನ್ನ ಅಣ್ಣ ತಮ್ಮಂದಿರೆಂದು ಸಹಿಸಿಕೊಂಡಿದ್ದೇವೆ. ಮೊಘಲರು, ಬ್ರಿಟಿಷರು ಆಳ್ವಿಕೆ ನಡೆಸಿದ್ದರೂ ನಮ್ಮ ಸಂಸ್ಕೃತಿ ಹಾಳಾಗಿರಲಿಲ್ಲ. ಆದರೆ ನಮ್ಮಲ್ಲಿರುವ ಕಿಡಿಗೇಡಿಗಳು, ಪಾಪಿಗಳಿಂದ ನಮ್ಮ ಹಿಂದೂ ಸಮಾಜವನ್ನು ಒಡೆಯುತ್ತಿದ್ದಾರೆ. ನಮ್ಮ ಬಂಧು, ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವ ಯಾವನೇ ವ್ಯಕ್ತಿ ಇದ್ದರೂ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.