Tag: ಜಮೀರ್ ಅಹದ್ಮ್ ಖಾನ್

  • ಹಾವೇರಿ ಜಿಲ್ಲೆಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ- ಊರು ಬಿಟ್ಟ ಮುಸ್ಲಿಂ ಕುಟುಂಬಗಳು

    ಹಾವೇರಿ ಜಿಲ್ಲೆಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ- ಊರು ಬಿಟ್ಟ ಮುಸ್ಲಿಂ ಕುಟುಂಬಗಳು

    -ಕರಾವಳಿ ಭಾಗದಲ್ಲಿ ಮತ್ತೆ ಧರ್ಮದ ದಂಗಲ್ ಚರ್ಚೆ

    ಹಾವೇರಿ: ಹಾವೇರಿ (Haveri) ಜಿಲ್ಲೆಯಲ್ಲಿ ವಕ್ಫ್ ಆಸ್ತಿ ವಿವಾದ ನಡೆದಿದೆ. ಉದ್ರಿಕ್ತರು ಕಲ್ಲು ತೂರಾಟ ಮಾಡಿದ್ದು, ಭಯದಿಂದ ಮುಸ್ಲಿಂ ಕುಟುಂಬಗಳು ಊರನ್ನೇ ತೊರೆದಿದ್ದಾರೆ.

    ಜಿಲ್ಲೆಯ ಸವಣೂರು (Savanuru) ತಾಲೂಕು ಕಡಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ಗಲಾಟೆಯೇ ನಡೆದಿದೆ. ಮಸೀದಿ ಸುತ್ತಮೂತ್ತಲಿನ 60ಕ್ಕೂ ಅಧಿಕ ಮನೆಗಳು, ಮೂರು ದೇವಾಸ್ಥಾನ ಮತ್ತು ಗರಡಿ ಮನೆಗಳು ವಕ್ಫ್ ಆಸ್ತಿಗೆ ಹೋಗುತ್ತಿವೆ ಅನ್ನು ಸುತ್ತೋಲೆಯನ್ನು ನೋಡಿದ ಜನರು ಏಕಾಏಕಿ ಗ್ರಾಮದಲ್ಲಿ ಗಲಾಟೆ ನಡೆಸಿದ್ದಾರೆ. ಈಗ ಬಂಧನ ಭೀತಿಯಿಂದ ಗಲಾಟೆ ನಡೆದ ಓಣಿಯ ಜನರು ಊರನ್ನೇ ಬಿಟ್ಟು ಓಡಿದ್ದಾರೆ. 8ಕ್ಕೂ ಅಧಿಕ ಮನೆಗಳು ಜಖಂಗೊಂಡಿದ್ದು, ಭಯದಿಂದ ಎರಡು ಸಮುದಾಯದ ಜನರು ಗ್ರಾಮವನ್ನು ಬಿಟ್ಟು ಹೋಗಿದ್ದಾರೆ.  ಇದನ್ನೂ ಓದಿ:  ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದ್ರೆ ವಿಜಯೇಂದ್ರನನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೀಬೇಕು: ಯತ್ನಾಳ್

    ವಕ್ಫ್ ಸಚಿವ ಜಮೀರ್ (Zameer Ahmed Khan) ಕಳೆದ ಸೆ.3ರಂದು ನಡೆದ ಸಭೆಯಲ್ಲಿ ನೀಡಿದ ಸೂಚನೆ ಹಿನ್ನಲೆ ಸೆ.27 ರಂದೇ ಜಿ.ಪಂ ಸಿಇಒ ಅಕ್ಷಯ್ ಶ್ರೀಧರ್ ವಕ್ಫ್ ಆಸ್ತಿ ಇಂಡೀಕರಣಕ್ಕೆ ಆದೇಶ ಮಾಡಿದ್ದರು. ಹೀಗಾಗಿ ಸರ್ಕಾರದ ನಡೆಯಿಂದ ಆಕ್ರೋಶಗೊಂಡ ಜನರು ಗಲಾಟೆ ನಡೆಸಿದರು. ಹಾವೇರಿ ಡಿಸಿ ವಿಜಯ್ ಮಹಾಂತೇಶ್, ಎಸ್‌ಪಿ ಅಂಶುಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಮನವೊಲಿಸಿದರು. ಯಾರ ಮನೆಗಳ ದಾಖಲೆಗಳಲ್ಲೂ ವಕ್ಫ್ ಎಂದು ಸೇರಿಸುವುದಿಲ್ಲ ಎಂದು ಡಿಸಿ ಭರವಸೆ ನೀಡಿದರು. ಇದನ್ನೂ ಓದಿ: ವಿಶ್ವದ ಅತ್ಯಂತ ಕಲುಷಿತ ನಗರ ಕುಖ್ಯಾತಿಗೆ ಪಾತ್ರವಾದ ದೆಹಲಿ

    ರಾಜ್ಯದ್ಯಂತ ಜಮೀನು ವಕ್ಫ್ ಬೋರ್ಡ್‌ಗೆ (Waqf Board) ಸೇರಿರುವ ವಿಚಾರ ಚರ್ಚೆಗೆ ಕಾರಣವಾಗಿ ರಾಜಕೀಯ ಜಟಾಪಟಿ ಕೂಡ ನಡೆಯುತ್ತಿದೆ. ಎರಡು ವರ್ಷದ ಹಿಂದೆ ಕರಾವಳಿ ಭಾಗದಲ್ಲಿ ಆರಂಭವಾಗಿ ಭಾರಿ ಜಟಾಪಟಿಗೆ ಕಾರಣವಾಗಿದ್ದ ಧರ್ಮದ ದಂಗಲ್ ಮತ್ತೆ ಚರ್ಚೆಗೆ ಬಂದಿದೆ. ದೀಪಾವಳಿ ಸಂದರ್ಭ ಶ್ರೀರಾಮ ಸೇನೆ (Sri Ram Sena ) ಸಂಘಟನೆ ಹಿಂದೂಗಳು ಹಿಂದೂಗಳಿಂದ ಮಾತ್ರ ವ್ಯಾಪಾರ ಮಾಡಿ ಅನ್ಯ ಧರ್ಮೀಯರ ಜೊತೆ ವ್ಯವಹಾರ ಮಾಡಬೇಡಿ ಎಂದು ಬಹಿಷ್ಕಾರದ ಕರೆ ಕೊಟ್ಟಿದೆ, ಜೊತೆಗೆ ಅಭಿಯಾನಕ್ಕೂ ಕರೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ವಕ್ಫ್ ತಿದ್ದುಪಡಿಗೆ ಮುಂದಾಗಿದ್ದಾರೆ. ಇದು ಮುಂದಿನ ಡಿಸೆಂಬರ್‌ನ ಅಧಿವೇಶನದಲ್ಲಿ ಪ್ರಸ್ತಾಪವಾಗಲಿದೆ ಎಂದು ಸಂಘಟನೆಯ ಸಭೆಗಳಲ್ಲಿ ಪ್ರಚಾರಪಡಿಸಲಾಗುತ್ತಿದೆ. ಇದನ್ನೂ ಓದಿ: ದೀಪಾವಳಿ ಆಚರಣೆ ವೇಳೆ ಎರಡು ಗುಂಪಿನ ನಡುವೆ ಘರ್ಷಣೆ- ಒಂದೇ ಕುಟುಂಬದ ಮೂವರು ಬಲಿ

    ವಕ್ಫ್ ಆಸ್ತಿ ವಿವಾದ ಈಗ ಗ್ರಾಮದಲ್ಲಿ ಕಿಚ್ಚುಹಚ್ಚಿದ್ದು, ಸದ್ಯ ಕಡಕೋಳ ಗ್ರಾಮ ಬೂದಿ ಮುಚ್ಚಿದ ಕೆಂಡದಂತೆ ಇದೆ. ನೂರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಗೆ ಎಚ್ಚರವಹಿಸಲಾಗಿದೆ. ಆದರೆ ಕರಾವಳಿಯಲ್ಲಿ ಇದು ಬೇರೆ ರೂಪಕ್ಕೆ ತಿರುಗಿದೆ. ಇದನ್ನೂ ಓದಿ: ಕನ್ನಡ, ಕನ್ನಡಿಗರನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ – ಸಿಎಂ ಎಚ್ಚರಿಕೆ

  • ಮನೆ ಕಟ್ಟಿಸಿದ್ದೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗ್ತಿದೆ: ಜಮೀರ್ ಅಹ್ಮದ್ ಖಾನ್

    ಮನೆ ಕಟ್ಟಿಸಿದ್ದೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗ್ತಿದೆ: ಜಮೀರ್ ಅಹ್ಮದ್ ಖಾನ್

    ಬೆಂಗಳೂರು: ನಾನು ಮನೆ ಕಟ್ಟಿಸಿದ್ದೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಸಾಲು ಸಾಲು ಟ್ವೀಟ್ ಗಳ ಮೂಲಕ ಇಡಿ ದಾಳಿ ರಾಜಕೀಯ ಪ್ರೇರಿತ ಮತ್ತು ಮುಸ್ಲಿಂ ನಾಯಕರಿಗೆ ಕಿರುಕುಳ ನೀಡುವ ಪ್ರಯತ್ನ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

    ನನ್ನ ಆಸ್ತಿಯೆಂದರೆ ನನ್ನ ಜನ. ನಾನು ರಾಜಕೀಯ ಜೀವನದಲ್ಲಿರುವವರೆಗೆ ನನ್ನ ಜನ ತಲೆತಗ್ಗಿಸುವಂತ ಯಾವ ಕೆಲಸವನ್ನೂ ಮಾಡುವುದಿಲ್ಲ. ನನ್ನ ಆಸ್ತಿಯೂ ಅವರೇ. ಇ.ಡಿ ದಾಳಿಯಿಂದ ಹಲವರ ಅನುಮಾನಗಳು ಪರಿಹಾರವಾದದ್ದೇ ನನಗೆ ಖುಷಿಯ ವಿಚಾರ. ನಾನು ಮನೆಯನ್ನು ಕಟ್ಟಿಸಿದ್ದೆ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಈ ಕಾರಣಕ್ಕಾಗಿ ನನ್ನ ಮೇಲೆ ಇ.ಡಿ ದಾಳಿಯಾಯಿತು. ಇ.ಡಿ ಯವರು ಯಾವ ನಿರೀಕ್ಷೆಯಿಂದ ನನ್ನ ಮೇಲೆ ದಾಳಿ ಮಾಡಿದ್ದರೋ ಆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ಇದನ್ನೂ ಓದಿ: ಶಾಸಕ ಜಮೀರ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ

    ದೇಶದ ವಿವಿಧ ರಾಜ್ಯಗಳ ಪ್ರಬಲ ಮುಸ್ಲಿಂ ನಾಯಕರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅವರಿಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಇಂತಹ ಷಡ್ಯಂತ್ರದ ಭಾಗವಾಗಿ ನನ್ನ ಮೇಲೂ ಹಲವು ರೀತಿ ದಾಳಿಗಳಾಗುತ್ತಿವೆ. ಆದರೆ ಇದ್ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೊಡ್ಡ ದೊಡ್ಡ ರಾಜಕಾರಣಿಗಳು ದೂರು ಕೊಟ್ಟಿರೋ ಅನುಮಾನ ಇದೆ: ಜಮೀರ್ ಬಾಂಬ್

    ಆಗಸ್ಟ್ 5ರಂದು ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಳ್ಳಂಬೆಳಗ್ಗೆ ಮನೆಗೆ ಎಂಟ್ರಿ ನೀಡಿದ್ದ ಅಧಿಕಾರಿಗಳ ದಾಖಲೆಗಳ ಪರಿಶೀಲನೆ ನಡೆಸಿತ್ತು.