Tag: ಜಮೀನು

  • ಜಮೀನಿಗಾಗಿ ಕಬ್ಬಿಣದ ರಾಡ್‌ಗಳಿಂದ ಬಡಿದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ರು

    ಜಮೀನಿಗಾಗಿ ಕಬ್ಬಿಣದ ರಾಡ್‌ಗಳಿಂದ ಬಡಿದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ರು

    ನೆಲಮಂಗಲ: ಜಮೀನು, ಮನೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಕಬ್ಬಿಣದ ರಾಡ್‌ ಹಾಗೂ ಬಡಿಗೆಯಿಂದ ಬಡಿದಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಿಸುವನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನರಸಿಂಹಮೂರ್ತಿ, ನಾಗರಾಜು ಅವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಜಮೀನು, ಮನೆ ವಿಚಾರಕ್ಕಾಗಿಯೇ 2 ಗುಂಪುಗಳ ನಡುವೆ ಗಲಾಟೆಯಾಗಿದ್ದು, ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    ಜಮೀನು ನಮ್ಮದು ಎಂದು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿರುವ ಆರೋಪವನ್ನ ಗಾಯಾಳುಗಳು ಮಾಡಿದ್ದು, ಗಲಾಟೆಯಾಗಿ ಹಲ್ಲೆಯಾದರೂ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾಗಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮಗಳನ್ನ ಜರುಗಿಸಿಲ್ಲ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

  • ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮ

    ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮ

    ಹಾವೇರಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ಆಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೊಸಶಿಡೇನೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಪರಮೇಶಪ್ಪ ನಂದೀಹಳ್ಳಿ ಎಂಬವರಿಗೆ ಸೇರಿದ್ದ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

    ಪರಮೇಶಪ್ಪ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದು, ಸುಮಾರು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯವನ್ನ ಮಾಡಿದ್ದಾರೆ. ರೈತನಿಗೆ ಸೂಕ್ತ ಪರಿಹಾರವನ್ನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಪೊಲೀಸ್ ಮಗಳನ್ನೆ ಕತ್ತು ಹಿಸುಕಿ ಕೊಂದ ಸ್ನೇಹಿತೆಯ ಪತಿ!

    ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • 30 ಗುಂಟೆ ಜಮೀನು ಮಾರಾಟ – 2 ಗುಂಪುಗಳ ನಡುವೆ ಮಾರಾಮಾರಿ

    30 ಗುಂಟೆ ಜಮೀನು ಮಾರಾಟ – 2 ಗುಂಪುಗಳ ನಡುವೆ ಮಾರಾಮಾರಿ

    ರಾಯಚೂರು: 30 ಗುಂಟೆ ಜಮೀನು ಮಾರಾಟದ ವಿಚಾರವಾಗಿ 2 ಗುಂಪುಗಳು ಮನಬಂದಂತೆ ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ಸಿಂಧನೂರು ತಾಲೂಕು ವಿರುಪಾಪೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶರಣಪ್ಪ ಮತ್ತು ನಿರುಪಾದಿ ಕುಟುಂಬದ ನಡುವೆ ಈ ಘರ್ಷಣೆ ನಡೆದಿದೆ. ಶರಣಪ್ಪ ಎಂಬಾತ ನಿರುಪಾದಿಗೆ 30 ಗುಂಟೆ ಜಮೀನು ಮಾರಾಟದ ಬಗ್ಗೆ ಒಪ್ಪಂದ ಆಗಿತ್ತು. ಈ ಹಿನ್ನೆಲೆ ನಿರುಪಾದಿ ಒಪ್ಪಂದದಂತೆ ಮುಂಗಡವಾಗಿ ಶರಣಪ್ಪಗೆ 3 ಲಕ್ಷ ರೂ. ನೀಡಿದ್ದಾನೆ. ಹಣ ಪಡೆದ ಶರಣಪ್ಪಗೆ ಜಮೀನು ಮಾರಾಟ ಮಾಡದಂತೆ ಮನೆಯಲ್ಲಿ ತಕರಾರು ಮಾಡಿದ್ದರು. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    BRIBE

    ಶರಣಪ್ಪ ಮನೆಯಲ್ಲಿ ತಕರಾರು ಮಾಡಿದ್ದರಿಂದ ನಿರುಪಾದಿಗೆ ಹಣ ವಾಪಸ್ ನೀಡಿದ್ದಾರೆ. ಈ ವೇಳೆ ಹಣ ವಾಪಸ್ ಪಡೆದ ನಿರುಪಾದಿ ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ಜಗಳ ತೆಗೆದಿದ್ದಾನೆ. ಜಗಳವು ತಾರಕಕ್ಕೇರಿದ್ದು 2 ಗುಂಪುಗಳು ರಾಡು, ಕಟ್ಟಿಗೆಯಿಂದ ಮನಬಂದಂತೆ ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರೆಸ್ಟ್

    ಶರಣಪ್ಪ ಕಡೆಯವರ ಮೇಲೆ ನಿರುಪಾದಿ ಕಡೆಯವರು ಹಲ್ಲೆ ಮಾಡಿರುವ ಆರೋಪ ವ್ಯಕ್ತವಾಗಿದೆ. ಗಾಯಾಳುಗಳಾದ ಗೋವಿಂದಪ್ಪ, ಶಿವರಾಜ್, ಅಂಬರೀಶ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಹೆತ್ತವರು ಜಮೀನು ಕೊಟ್ಟಿಲ್ಲವೆಂದು ದ್ವೇಷ – ಹಿಪ್ಪು ನೇರಳೆ ಗಿಡಕ್ಕೆ ವಿಷ ಹಾಕಿ ನಾಶ ಮಾಡಿದ ಮಗಳು!

    ಹೆತ್ತವರು ಜಮೀನು ಕೊಟ್ಟಿಲ್ಲವೆಂದು ದ್ವೇಷ – ಹಿಪ್ಪು ನೇರಳೆ ಗಿಡಕ್ಕೆ ವಿಷ ಹಾಕಿ ನಾಶ ಮಾಡಿದ ಮಗಳು!

    ಕೋಲಾರ: ಹೆತ್ತವರು ಜಮೀನು ಕೊಟ್ಟಿಲ್ಲವೆಂದು ಸಿಟ್ಟಿನಿಂದ ಮಗಳು ಗಿಡಗಳಿಗೆ ವಿಷ ಹಾಕಿ ನಾಶಪಡಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಯಳಚೀಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರಾಮಣ್ಣ ಹಾಗೂ ಲಕ್ಷ್ಮಮ್ಮ ಎಂಬ ವೃದ್ಧ ದಂಪತಿ ಬೆಳೆ ಕಳೆದುಕೊಂಡು ಇದೀಗ ಕಣ್ಣೀರಾಕುತ್ತಿದ್ದಾರೆ. ಹಿರಿ ಮಗಳು ಚೌಡಮ್ಮಳಿಗೆ ಜಮೀನು ನೀಡದ್ದಕ್ಕೆ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್

    ಪೋಷಕರು ಜಮೀನು ಕೊಟ್ಟಿಲ್ಲ ಎಂದು ಚೌಡಮ್ಮ ಹಿಪ್ಪುನೇರಳೆ ಬೆಳೆಗೆ ವಿಷ ಸಿಂಪಡಣೆ ಮಾಡಿದ್ದಾಳೆ. ಹೀಗಾಗಿ ವಿಷ ಸಿಂಪಡಣೆ ಮಾಡಿದ ಹಿಪ್ಪು ನೇರಳೆ ಸೊಪ್ಪು ತಿಂದ ಹುಳುಗಳು ಸಾಯುತ್ತಿವೆ. ಪರಿಣಾಮ 150 ಮೊಟ್ಟೆಯ ಸುಮಾರು ಒಂದು ಲಕ್ಷ ಮೌಲ್ಯದ ರೇಷ್ಮೆ ಬೆಳೆ ನಾಶವಾಗಿದೆ ಎಂದು ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.

    ಸಾಲ ಮಾಡಿ ತಮ್ಮ ಜೀವನಕ್ಕೆ ಕಷ್ಟಪಟ್ಟು ರೇಷ್ಮೆ ಬೆಳೆಯನ್ನು ಬೆಳೆದ್ರೆ ವಿಷ ಹಾಕಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. ವೃದ್ಧ ದಂಪತಿಯ ಮಗಳಾದ ಚೌಡಮ್ಮ, ಅಳಿಯ ಲಕ್ಷ್ಮಣ್, ಮೊಮ್ಮಗ ಆನಂದ ಅವರೇ ವಿಷ ಹಾಕಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ:  ಕೈ ನಾಯಕರಿಗೊಂದು ಉದ್ಯೋಗ ಬೇಕಿದೆ, ಅದಕ್ಕೆ ಇಲ್ಲಸಲ್ಲದ ಮಾತುಗಳನ್ನಾಡ್ತಿದ್ದಾರೆ: ಮುನಿರತ್ನ

    ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ದಾಯಾದಿಗಳ ಮಧ್ಯೆ ಗಲಾಟೆ- ಒಂಟಿ ಮನೆಗೆ ನುಗ್ಗಿ ದಾಂಧಲೆ

    ದಾಯಾದಿಗಳ ಮಧ್ಯೆ ಗಲಾಟೆ- ಒಂಟಿ ಮನೆಗೆ ನುಗ್ಗಿ ದಾಂಧಲೆ

    ನೆಲಮಂಗಲ: ಜಮೀನು ವಿಚಾರದಲ್ಲಿ ದಾಯಾದಿಗಳ ಮಧ್ಯೆ ಗಲಾಟೆ ನಡೆದಿದ್ದು, ಮನೆಗೆ ನುಗ್ಗಿ ದಾಂಧಲೆ ಮಾಡಿ  ಪೀಠೋಪಕರಣ, ಬೈಕ್ ಧ್ವಂಸ ಮಾಡಿರುವ ಘಟನೆ ನಡೆದಿದೆ.

    ಒಂಟಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದು, ಜಮೀನು ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಯಾಗಿ ಮಾರಾ ಮರಿಯಾಗಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಎಡೆಹಳ್ಳಿ ಬಳಿ ಈ ರ್ದುಘಟನೆ ನಡೆದಿದೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

    ಮನೆಗೆ ನುಗ್ಗಿ ಮೂವರ ಮೇಲೆ ಹಲ್ಲೆಗೊಳಿಸಿ, ಮನೆಯಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಬೈಕ್ ಧ್ವಂಸ ಮಾಡಿದ್ದಾರೆ. ಮಂಜುನಾಥ್, ಭಾರತಿ, ಕುಸುಮ ಮೇಲೆ ಹತ್ತು ಜನರ ತಂಡದಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ದಾಯಾದಿ ಪುಟ್ಟಗಂಗಯ್ಯ ಸೇರಿದಂತೆ ಹತ್ತು ಮಂದಿಯಿಂದ ಹಲ್ಲೆ ಆರೋಪ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

    ದೊಣ್ಣೆ, ಕಬ್ಬಿಣದ ಸಲಾಖೆ, ಇನ್ನಿತರ ವಸ್ತುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಕೌಟುಂಬಿಕ ಜಮೀನು ವಿವಾದವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಮನೆಯಲ್ಲಿದ್ದ ಪೀಠೋಪಕರಣ ಬೈಕ್ ಜಖಂ ಆಗಿದ್ದು, ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಡಾಬಸ್ ಪೇಟೆ ಪೊಲೀಸರು ಭೇಟಿ ನೀಡಿದ್ದಾರೆ. ಜಮೀನಿನ ಬೆಲೆ ಯಾವಾಗ ಚಿನ್ನದ ಬೆಲೆಯಂತಾಯ್ತೋ ಇಂತಹ ಘಟನೆ ಹೆಚ್ಚಾಗುತ್ತವೆ. ಸಧ್ಯ ಗಾಯಾಳು ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

  • ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಂದ – ಕೊನೆಗೆ ತಾನೂ ಸತ್ತ

    ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಂದ – ಕೊನೆಗೆ ತಾನೂ ಸತ್ತ

    ವಿಜಯಪುರ: ಪತ್ನಿ ಶೀಲ ಶಂಕಿಸಿ ಪತ್ನಿಯ ಕತ್ತು ಹಿಸುಕಿ ಪತಿಯೇ ಕ್ರೂರವಾಗಿ ಹತ್ಯೆಗೈದು, ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.

    ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಆರ್‍ಎಸ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಹೊರ ಭಾಗದ ಜಮೀನಲ್ಲಿರುವ ಶೆಡ್‍ಗೆ ಪತ್ನಿಯನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಗೈದಿದ್ದೇನೆ. ಪತ್ನಿಯ ಹತ್ಯೆಗೈದ ಬಳಿಕ ತಾನು ಕೂಡ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಇದನ್ನೂ ಓದಿ: ಒಬ್ಬ ಕ್ರಿಮಿನಲ್‍ನ ರಕ್ಷಿಸುತ್ತಿದ್ದೀರಾ – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

    ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಶರಣಾದ ವ್ಯಕ್ತಿ ಶಿವಪ್ಪ ಮನಗೂಳಿ (45)ಯಾಗಿದ್ದು, ಹನುಮವ್ವ (38) ಪತಿಯಿಂದ ಕೊಲೆಗೀಡಾದ ಪತ್ನಿಯಾಗಿದ್ದಾರೆ. ಇದೀಗ ಸ್ಥಳಕ್ಕೆ ನಿಡಗುಂದಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೆದ್ದಾರಿಯಲ್ಲೇ ಹೊತ್ತಿ ಉರಿದ 22 ಮಂದಿ ಪ್ರಯಾಣಿಕರಿದ್ದ ಬಸ್!

  • ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ – 30 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ – 30 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    -ಗುಳೆ ಹೋಗಿದ್ದವರು ಮರಳುವಾಗ ಅಪಘಾತ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಬಳಿ ಖಾಸಗಿ ಬಸ್ ಪಲ್ಟಿಯಾಗಿ 30 ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

    ಘಟನೆಯಲ್ಲಿ ಗಾಯಗೊಂಡವರನ್ನು ದೇವದುರ್ಗ ತಾಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‍ಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಜಮೀನಿಗೆ ಪಲ್ಟಿ ಹೊಡೆದಿದೆ. ಮಹಾರಾಷ್ಟ್ರದ ಪುಣೆಯಿಂದ ಅರಕೇರಾ ಗ್ರಾಮಕ್ಕೆ ಬರುತ್ತಿದ್ದ ವೇಳೆ ಬಸ್ ಅಪಘಾತಕ್ಕೀಡಾಗಿದೆ. ಘಟನೆ ಬಳಿಕ ಬಸ್ ಚಾಲಕ ಹಾಗೂ ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು

    ಸಂಬಂಧಿಕರೊಬ್ಬರು ಸಾವನ್ನಪ್ಪಿದ ಹಿನ್ನೆಲೆ ಪುಣೆಗೆ ಕೂಲಿ ಕೆಲಸಕ್ಕೆ ಗುಳೆ ಹೋಗಿದ್ದವರು ಗ್ರಾಮಕ್ಕೆ ಮರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸದ್ಯ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಆಸರೆ ನೀಡುವುದು ನಮ್ಮ ಕರ್ತವ್ಯ : ವಿ.ಸೋಮಣ್ಣ

  • ಜಮೀನು ವಿವಾದ ಎರಡು ಗ್ರಾಮಗಳ ನಡುವೆ ಮಾರಾಮಾರಿ

    ಜಮೀನು ವಿವಾದ ಎರಡು ಗ್ರಾಮಗಳ ನಡುವೆ ಮಾರಾಮಾರಿ

    ದಾವಣಗೆರೆ: ಜಮೀನು ವಿವಾದ ಹಿನ್ನೆಲೆ ಎರಡು ಗ್ರಾಮಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದೊಣ್ಣೆ, ಕುಡುಗೋಲುಗಳಿಂದ ಪರಸ್ಪರವಾಗಿ ಸಿನಿಮೀಯ ರೀತಿ ಹಲ್ಲೆ ನಡೆಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಚಿಕೊಪ್ಪ ಹಾಗೂ ಹೊನ್ನಾಳಿಯ ತುಗ್ಗಲಹಳ್ಳಿ ಗ್ರಾಮಸ್ಥರ ನಡುವೆ ಮಾರಾಮಾರಿಯಾಗಿದೆ. ಕಂಚಿಕೊಪ್ಪ ಗ್ರಾಮದ 30 ದಲಿತ ಕುಟುಂಬಗಳು ತುಗ್ಗಲಹಳ್ಳಿ ಗ್ರಾಮದ ಬಳಿ ಇರುವ ಸರ್ವೇ ನಂಬರ್ 29- 30 ರಲ್ಲಿ 40 ಎಕರೆ ಜಮೀನನಲ್ಲಿ ಉಳುಮೆ ಮಾಡುತ್ತಿದ್ದು, ಸಾಗುವಳಿ ಚೀಟಿ, ಪಹಣೆ ಕೂಡ ನೀಡಲಾಗಿದೆ. ಇದನ್ನೂ ಓದಿ: ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ದೊಡ್ಡ ರಸ್ತೆ ಗುಂಡಿಗೆ ಬಿದ್ದ ವಿದ್ಯಾರ್ಥಿನಿಯರು!

     Davanagere

    ಈ ಜಮೀನು ಖಾತೆ ಮಾಡಿಕೊಡುವಂತೆ ಕಂಚಿಕೊಪ್ಪ ಗ್ರಾಮದ ದಲಿತ ಕುಟುಂಬಗಳು ಕೋರ್ಟ್ ಮೊರೆ ಹೋಗಿದ್ದವು. ಆದರೆ ಇದೇ ಸಂದರ್ಭದಲ್ಲಿ ತುಗ್ಗಲಹಳ್ಳಿ ಗ್ರಾಮದ ಕೆಲವರು ದಲಿತರು ಉಳುಮೆ ಮಾಡುತ್ತಿರುವ ಜಮೀನು ನಮಗೆ ಸೇರಿದ್ದು ಎಂದು ತಕರಾರು ತೆಗೆದಿದ್ದಾರೆ. ಬಳಿಕ ಬುಧವಾರ ಸಂಜೆ ಏಕಾಏಕಿ ಜಮೀನಿನಲ್ಲಿದ್ದ ಬೆಳೆಯನ್ನು ನಾಶ ಮಾಡಿದ್ದರು. ಇದರಿಂದ ಮಾತಿನ ಚಕಮಕಿಯಾಗಿ ನಡೆದಿದ್ದು, ನಂತರ ಎರಡು ಗ್ರಾಮದವರು ಕುಡಗೋಲು, ದೊಣ್ಣೆಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಗೃಹ ಸಚಿವರಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ಕೊರೊನಾ ಪಾಸಿಟಿವ್

     Davanagere

    ಹಲ್ಲೆಗೊಳಗದ ಕಂಚಿಕೊಪ್ಪದ 13 ಜನರು ಆಸ್ಪತ್ರೆಗೆ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಹೊನ್ನಾಳಿ ಸಿಪಿಐ ದೇವರಾಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಹಲ್ಲೆಗೊಳಗಾದವರಿಂದ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತುಗ್ಗಲಹಳ್ಳಿ ಗ್ರಾಮದ ಇಬ್ಬರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.

  • ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 55ರ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 55ರ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಲಕ್ನೊ: 55 ವರ್ಷದ ಮಹಿಳೆಯನ್ನು ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 4 ಜನ ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಈ ಕುರಿತಂತೆ ಮಾತನಾಡಿದ ಡಿಸಿಪಿ ವೃಂದಾ ಶುಕ್ಲಾ ಅವರು, ಬೆಳಗ್ಗೆ 10 ಗಂಟೆ ಸುಮಾರಿಗೆ ಮಹಿಳೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆ ಆರೋಪಿಯೊಬ್ಬನ ಗುರುತನ್ನು ಪತ್ತೆ ಹಚ್ಚಿದ್ದು, ಆತ ತಮ್ಮ ಗ್ರಾಮದವನೇ ಆಗಿದ್ದಾನೆ ಮತ್ತು ಅದೇ ಜಮೀನಿನಲ್ಲಿ ಜಾನುವಾರುಗಳಿಗೆ ಹುಲ್ಲು ಮೇಯಿಸುತ್ತಿದ್ದ ಎಂದು ತಿಳಿಸಿದ್ದಾರೆ. ಇದೀಗ ಉಳಿದ ಮೂವರು ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಮಹಿಳೆ ನೀಡಿರುವ ದೂರಿನ ಪ್ರಕಾರ, ಆಕೆಯನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಆರೋಪಿ ಮತ್ತು ಆತನ ಸಹಚರರು ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಮಹಿಳೆ ಕೂಡಲೇ ತನ್ನ ಮನೆಗೆ ಆಗಮಿಸಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: ಮದುವೆಯ ನೆಪದಲ್ಲಿ ಶಿಕ್ಷಕನಿಂದ ಪದೇ, ಪದೇ ಅತ್ಯಾಚಾರ

    ಇದೀಗ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಳಿಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಮತ್ತು ಆಕೆಯ ಸ್ಥಿತಿ ಸ್ಥಿರವಾಗಿದೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‍ಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಜೊತೆಗೆ ಆರೋಪಿಗಳನ್ನು ಪತ್ತೆ ಹಚ್ಚಲು ತಂಡವೊಂದನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     

  • ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ

    ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ

    – ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಉತ್ಪನ್ನ ಮಾರಾಟ ಮಳಿಗೆ
    – ರೈತರನ್ನು ಅಧಿಕಾರಿಗಳು ಪ್ರೀತಿಯಿಂದ ನಡೆಸಿಕೊಳ್ಳಬೇಕು

    ಶಿವಮೊಗ್ಗ: ರೇಷ್ಮೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಮಾರುಕಟ್ಟೆಗೆ ತೆರಳುವ ರೈತರು ಪೊಲೀಸರು ಮತ್ತು ದಲ್ಲಾಳಿಗಳಿಂದ ಬೇಸತ್ತಿದ್ದು, ಅವರಿಗೆ ತೊಂದರೆ ಆಗದಂತೆ ವಿಶೇಷ ಗುರುತಿನ ಚೀಟಿ ನೀಡುವುದಾಗಿ ರೇಷ್ಮೆ ಸಚಿವ ಡಾ.ನಾರಾಯಣಗೌಡ ಹೇಳಿದರು.

    ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರ ಜೊತೆ ಸಚಿವರು ಸಂವಾದ ನಡೆಸಿದರು. ರೇಷ್ಮೆ ಗಿಡಗಳಿಗೆ ತ್ರಿಪ್ಸ್ ಆ್ಯಂಡ್ ಮೈಟ್ಸ್ ಎನ್ನುವ ಎಲೆ ತಿನ್ನುವ ಕೀಟದ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಹೇಗೆ ತಡೆಗಟ್ಟುವುದು ಮತ್ತು ಹೆಚ್ಚಿನ ಇಳುವರಿ ಕುರಿತು ಮಾಹಿತಿ ನೀಡಲು ವಿಜ್ಞಾನಿಗಳನ್ನು ಕರೆಸಿ ರೈತರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಚಿವರು ರೇಷ್ಮೆ ಹೊಲಕ್ಕೆ ರೈತರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಉಚಿತವಾಗಿ ನುವಾನ್ ಮತ್ತು ರೋಗಾರ್ ಎನ್ನುವ ಔಷಧವನ್ನು ಸಿಂಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಈ ವೇಳೆ ಅತ್ಯುತ್ತಮ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ:  ಭಾರತ್ ಬಂದ್ ಮಾಡಿದ್ದು ರೈತರಲ್ಲ, ಮಧ್ಯವರ್ತಿಗಳು: ನಾರಾಯಣಗೌಡ

    ರೈತರೊಂದಿಗೆ ಹೊಲದಲ್ಲಿ ನಿಂತುಕೊಂಡೇ ಸಂವಾದ ನಡೆಸಿದ ಸಚಿವರು: ರೈತರು ಶ್ರಮ ಜೀವಿಗಳು. ಅವರೊಂದಿಗೆ ಅಧಿಕಾರಿಗಳು ಗೌರವದಿಂದ ನಡೆದುಕೊಳ್ಳಬೇಕು. ರೈತರನ್ನು ಅಧಿಕಾರಿಗಳು ಪ್ರೀತಿಯಿಂದ ನಡೆಸಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ರೇಷ್ಮೆಗೆ ಉತ್ತಮ ದರ ಸಿಗುತ್ತಿದೆ. ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಉತ್ಪನ್ನ ಮಾರಾಟ ಮಳಿಗೆ ಮಾಡುತ್ತೇವೆ. ರೈತರಿಗೆ ನಷ್ಟವಾಗದಂತೆ ತಡೆಯಲು ಹೈಟೆಕ್ ಮಾರುಕಟ್ಟೆ ಕೂಡ ಮಾಡುತ್ತಿದ್ದೇವೆ. ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡುತ್ತೇವೆ ಎಂದರು. ಇದನ್ನೂ ಓದಿ:   ಭಾರತ್ ಬಂದ್ ನಡುವೆ ಕಾರ್ಖಾನೆಗೆ ಬೀಗ ಹಾಕಲು ರೈತರ ಯತ್ನ

    ಸುಮಾರು ಮುಕ್ಕಾಲುಗಂಟೆಗಳ ಕಾಲ ರೈತರೊಂದಿಗೆ ನಿಂತುಕೊಂಡೇ ಸಚಿವರು ಸಂವಾದ ನಡೆಸಿದರು. ರೇಷ್ಮೆ ಬೆಳೆಗಾರರ ಸಮಸ್ಯೆ ಬಗ್ಗೆ ಅರಿವಿದೆ. ಈಗ ದರ ಏರಿಕೆ ಆಗಿದೆ. ರೇಷ್ಮೆ ಬೆಳೆಗಾರರೊಂದಿಗೆ ನಾನು ಸದಾ ಇರುತ್ತೇನೆ. ಯಾವುದೇ ಸಂದರ್ಭಲ್ಲೂ ರೈತರ ಜೊತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

    ರೈತರೊಂದಿಗೆ ಊಟ ಮಾಡಿದ ಸಚಿವರು: ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ನಡೆಸಿದ ಸಚಿವರು, ಬಳಿಕ ರೈತರ ಮನೆಗೆ ತೆರಳಿ ಅವರೊಂದಿಗೆ ಊಟ ಸವಿದರು. ಸಚಿವರು ತಮ್ಮ ಊರಿಗೆ ಬಂದು ತಮ್ಮೊಂದಿಗೇ ಕುಳಿತು ಊಟ ಮಾಡಿದ್ದಕ್ಕಾಗಿ ರೈತರು ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ:  ಬಸ್- ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

    ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ವೇತ, ಹಿರಿಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.