Tag: ಜಮೀನು

  • ಯುವಕರ ಸಾಹಸ – ಭೂಗಳ್ಳರ ಕೈಯಿಂದ ಶಾಲೆಗೆ ಸೇರಿತು ಕೋಟ್ಯಂತರ ಮೌಲ್ಯದ ಜಮೀನು

    ಯುವಕರ ಸಾಹಸ – ಭೂಗಳ್ಳರ ಕೈಯಿಂದ ಶಾಲೆಗೆ ಸೇರಿತು ಕೋಟ್ಯಂತರ ಮೌಲ್ಯದ ಜಮೀನು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಮನೆ ಮಠ, ಸ್ಕೂಲ್ ಕಾಲೇಜು, ಕಂಪನಿಗಳನ್ನು ಮಾಡಿಕೊಂಡು ನಮ್ಮದೇ ಜಾಗ ಇದು ಅಂತಾ ಬೋರ್ಡ್ ಹಾಕಿಕೊಂಡಿರುವವರನ್ನು ನೋಡಿದ್ದೇವೆ. ಆದರೆ ಗ್ರಾಮದ ಯುವಕರು ನಡೆಸಿದ ಪ್ರಯತ್ನದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸ್ವತ್ತು ಮತ್ತೆ ಗ್ರಾಮಕ್ಕೆ ಸೇರಿದೆ.

    ಬೆಂಗಳೂರು ಪೂರ್ವ ತಾಲೂಕು, ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಡ ಅಗ್ರಹಾರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮುಂಭಾಗದ ಸುಮಾರು ಹದಿಮೂರುವರೆ ಗುಂಟೆ ಜಾಗವನ್ನು ಅನೇಕರು 20 ವರ್ಷಗಳ ಹಿಂದೆ ಖಾಸಗಿಯವರಿಗೆ ಪರಭಾರೆ ಮಾಡಲಾಗಿತ್ತು. ಗ್ರಾಮದ ಯುವಕರು ಇದು ಸರ್ಕಾರಿ ಜಾಗ ಹೇಗೆ ಖಾಸಗಿಯವರಿಗೆ ಸೇರಿದೆ ಅಂತಾ ಹೋರಾಟಕ್ಕೆ ನಿಂತರು. ಕಂದಾಯ ಇಲಾಖೆಗೆ ಪತ್ರಗಳನ್ನು ಬರೆಯುವ ಮೂಲಕ ಗ್ರಾಮದ ನಕ್ಷೆಯಲ್ಲಿರುವ ಗ್ರಾಮ ಠಾಣಾ ಸ್ವತ್ತನ್ನು ಗುರುತಿಸಿ ಗ್ರಾಮಕ್ಕೆ ಮರಳಿ ನೀಡುವಂತೆ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಇದನ್ನೂ ಓದಿ: ಎಎಸ್‍ಐಗಳಿಂದ ಕಿರಿಯ ಸಹೋದ್ಯೋಗಿಗಳ ಮೇಲೆ ನಡೆಯುತ್ತಿದ್ಯಾ ದಬ್ಬಾಳಿಕೆ?

    ಕಳೆದ ತಿಂಗಳು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಇದು ಸರ್ಕಾರಿ ಸ್ವತ್ತು, ಗ್ರಾಮಠಾಣಾ ವ್ಯಾಪ್ತಿಗೆ ಬರಲಿದೆ ಅಂತಾ, ಗುರುತಿಸಿ ಅಲ್ಲಿ ಅತಿಕ್ರಮಣ ಮಾಡಿಕೊಂಡಿದ್ದವರನ್ನು ತೆರವು ಮಾಡಿಸಿ ಬೋರ್ಡ್ ಹಾಕಿದ್ದಾರೆ. ಸರಿ ಸುಮಾರು 4 ಕೋಟಿಗೂ ಅಧಿಕ ಬೆಲೆ ಬಾಳುವ ಜಾಗವನ್ನು ಗ್ರಾಮಕ್ಕೆ ಮತ್ತೆ ಉಳಿಸಿಕೊಂಡ ಸಂತಸ ಗ್ರಾಮದ ಯುವಕರಿಲ್ಲಿದ್ದು ಇಲ್ಲಿ ಶಾಲಾ ಮಕ್ಕಳಿಗೆ ಆಟದ ಮೈದಾನ, ಲೈಬ್ರರಿ, ಕುಡಿಯುವ ನೀರಿನ ಘಟಕ ಮತ್ತು ಸಮುದಾಯ ಭವನ ಮಾಡುವ ಉದ್ದೇಶವನ್ನು ಯುವಕರು ಹೊಂದಿದ್ದಾರೆ.

    ಗ್ರಾಮದ ಯುವಕರ ಪ್ರಯತ್ನದಿಂದ ಕಂಡವರ ಪಾಲಾಗುತ್ತಿದ್ದ ಗ್ರಾಮದ ಜಾಗ ಉಳಿದಿದೆ. ಇದೇ ರೀತಿ ಸರ್ಕಾರಿ ಜಾಗವನ್ನು ಉಳಿಸುವ ಕೆಲಸ ಪ್ರತಿಯೊಬ್ಬರು ಮಾಡಿದ್ದರೆ ಒತ್ತುವರಿ ಮಾಡುವವರಿಗೆ ಪಾಠ ಕಲಿಸಿದಂತೆ ಆಗಲಿದೆ. ಇದನ್ನೂ ಓದಿ : ಸ್ವಾರ್ಥಕ್ಕೆ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದೇವೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಮಲಗಿದ್ದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು – ಪವಾಡದ ರೀತಿ ಪಾರು

    ಮಲಗಿದ್ದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು – ಪವಾಡದ ರೀತಿ ಪಾರು

    ಕಲಬುರಗಿ: ಎದೆ ಝಲ್ ಎನ್ನಿಸುವಂತಹ ಘಟನೆಯೊಂದು ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ನಾಗರಹಾವು ಎಂದರೆ ಯಾರಿಗೆ ತಾನೇ ಭಯ ಇರುವುದಿಲ್ಲ ಹೇಳಿ. ಒಮ್ಮೆ ನಾಗರ ಹಾವು ಕಚ್ಚಿದರೆ ಪ್ರಾಣ ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕಲಬುರಗಿಯಲ್ಲಿ ಮಹಿಳೆಯೊಬ್ಬರು ಪವಾಡದ ರೀತಿಯಲ್ಲಿ ನಾಗರ ಹಾವಿನಿಂದ ಪಾರಾಗಿದ್ದಾರೆ.

    ಹೌದು, ಜಮೀನಿನಲ್ಲಿ ಮಲಗಿದ್ದ ಭಾಗಮ್ಮ ಬಡದಾಳ್ ಅವರ ಮೈ ಮೇಲೆ ನಾಗರಹಾವೊಂದು ಎಡೆ ಎತ್ತಿ ಕುಳಿತುಕೊಂಡಿತ್ತು. ಇದನ್ನು ಕಂಡು ಗಾಬರಿಗೊಂಡ ಭಾಗಮ್ಮ ಸ್ಥಳದಿಂದ ಒಂದು ಚೂರು ಸಹ ಕದಡದೇ ಮಲಗಿದ್ದ ಜಾಗದಲ್ಲಿಯೇ ಕಾಪಾಡು ಶ್ರೀಶೈಲ ಮಲ್ಲಯ್ಯ ಎಂದು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್ ತಂದ ಅವಾಂತರ – ಪ್ರಿಯಕರನನ್ನೇ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ್ಲು

    ಕೆಲಹೊತ್ತಿನ ನಂತರ ಪವಾಡದ ರೀತಿ ನಾಗರಹಾವು ಮಹಿಳೆಗೆ ಏನನ್ನು ಸಹ ಮಾಡದೇ ಸ್ಥಳದಿಂದ ಕಾಲ್ಕೆತ್ತಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ವರ್ಕ್‌ ಆರ್ಡರ್‌ ಇಲ್ಲದೇ ಕಾಮಗಾರಿ – ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಪಂಚಾಯತ್‌ನಿಂದ ದೂರು

    Live Tv
    [brid partner=56869869 player=32851 video=960834 autoplay=true]

  • ತಮ್ಮನ ಕಿರುಕುಳ ತಾಳಲಾರದೇ ಅಣ್ಣ ಆತ್ಮಹತ್ಯೆಗೆ ಶರಣು

    ತಮ್ಮನ ಕಿರುಕುಳ ತಾಳಲಾರದೇ ಅಣ್ಣ ಆತ್ಮಹತ್ಯೆಗೆ ಶರಣು

    ಬೆಳಗಾವಿ: ತಮ್ಮನ ಕಿರುಕುಳ ತಾಳಲಾರದೇ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಅಣ್ಣನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಚಗಾಂವ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಉಚಗಾಂವ ಗ್ರಾಮದ ಶ್ರೀಕಾಂತ ಅಪ್ಪಾಜಿ ಜಾಧವ್(56) ಆತ್ಮಹತ್ಯೆ ಮಾಡಿಕೊಂಡವ. ಮೃತ ಶ್ರೀಕಾಂತ್ ಮತ್ತು ಆತನ ತಮ್ಮ ಮಧುಕರ್ ಜಾಧವ್ ನಡುವೆ ಜಮೀನು ವಿವಾದವಿತ್ತು. ಪದೇ ಪದೇ ಮೃತ ಶ್ರೀಕಾಂತ್ ಜಾಧವ್‍ಗೆ ಅವರ ಸಹೋದರ ಮಧುಕರ್ ಜಾಧವ್ ಕಿರುಕುಳ ನೀಡುತ್ತಿದ್ದನಂತೆ ಇದರಿಂದ ಬೇಸತ್ತು ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಶ್ರೀಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾಕತಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ:  ರಾಜ್ಯದ ಜನತೆಗೆ ಕರೆಂಟ್‌ ಶಾಕ್‌ – ಇಂದಿನಿಂದ ವಿದ್ಯುತ್‌ ದರ ಏರಿಕೆ

    ಪ್ರಕರಣ ಹಿನ್ನೆಲೆ:
    ಮಧುಕರ್ ಜಾಧವ್ ಮೃತ ಶ್ರೀಕಾಂತ್ ಹಾಗೂ ಅವರ ತಂದೆ ಅಪ್ಪಾಜಿಗೆ ತಿಳಿಸದೇ ನಾಲ್ಕು ವರ್ಷದ ಹಿಂದೆ ಸುಧೀರ್ ಗಡ್ಡೆ ಎಂಬ ಬಿಲ್ಡಪ್‍ಗೆ 28 ಲಕ್ಷ ರೂಪಾಯಿಗೆ 1 ಎಕರೆ 6 ಗುಂಟೆ ಜಮೀನು ಮಾರಾಟ ಮಾಡಿದ್ದನಂತೆ. ಇದು ಗೊತ್ತಾದ ಮೇಲೆ ಮಧುಕರ್ ಜಾಧವ್ ಮೇಲೆ ಶ್ರೀಕಾಂತ್ ಕೇಸ್ ಹಾಕಿದ್ದರು. ನಂತರ ರಾಜಿ ಪಂಚಾಯತಿ ಮಾಡಿ ಸಮಾಧಾನ ಪಡಿಸಲು ಮಧುಕರ್ ಮುಂದಾಗಿದ್ದನಂತೆ. ನಂತರ ಸಬ್ ರಿಜಿಸ್ಟರ್ ಕಡೆ ಹೋಗಿ ಸಹಿ ಮಾಡಿಸಿ ಶ್ರೀಕಾಂತ್‍ಗೆ 6 ಲಕ್ಷ ರೂಪಾಯಿ ಕೊಟ್ಟು ಮಧುಕರ್ ಕೈ ತೊಳೆದುಕೊಂಡು ಬಿಟ್ಟಿದ್ದನು. ಇದನ್ನೂ ಓದಿ:  ನಾಯಿಕಚ್ಚಿ ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಾವು

    ನಂತರ ತಮಗಾದ ಮೋಸಕ್ಕೆ ನ್ಯಾಯ ಕೊಡಿಸುವಂತೆ ಗ್ರಾಮದ ಹಿರಿಯರ ಬಳಿ ಶ್ರೀಕಾಂತ್ ಹೋದರೂ ಗ್ರಾಮದ ಹಿರಿಯರ ಮೇಲೆ ಮಧುಕರ್ ಮತ್ತು ಆತನ ಪತ್ನಿ ಗ್ರಾಮ ಪಂಚಾಯತಿ ಸದಸ್ಯೆ ಭಾರತಿ ಒತ್ತಡ ಹಾಕಿದ್ದರಂತೆ. ಇದರಿಂದ ಮನನೊಂದು ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶ್ರೀಕಾಂತ್ ಸುಪುತ್ರ ಸಂತೋಷ್ ಆರೋಪಿಸಿದ್ದಾನೆ. ಈ ಪ್ರಕರಣ ದಾಖಲಿಸಿಕೊಂಡ ಕಾಕತಿ ಪೊಲೀಸರು ತನಿಖೆ ನಡೆಸಿದ್ದಾರೆ.

    Live Tv

  • ಪತ್ನಿ ಜೊತೆ ಜಗಳ – ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ಕೊಂದ ತಂದೆ

    ಪತ್ನಿ ಜೊತೆ ಜಗಳ – ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ಕೊಂದ ತಂದೆ

    ವಿಜಯಪುರ: ತಂದೆಯೊಬ್ಬ ತನ್ನ ಪತ್ನಿ ಜಮೀನು ಮಾರಲು ಒಪ್ಪದಕ್ಕೆ ಕುಪಿತಗೊಂಡು ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ತಿನ್ನಿಸಿದ್ದು, ಪುತ್ರ ಸಾವನ್ನಪ್ಪಿದ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.

    ಶಿವರಾಜ್ ಅರಸನಾಳ (2) ಹತ್ಯೆಗೀಡಾದ ಮಗು. ಆರೋಪಿ ತಂದೆ ಚಂದ್ರಶೇಖರ್ ಅರಸನಾಳ ಮೈತುಂಬ ಸಾಲಮಾಡಿಕೊಂಡಿದ್ದನು. ಹಾಗಾಗಿ ತನ್ನ ಪತ್ನಿಗೆ ಜಮೀನು ಮಾರಾಟ ಮಾಡುವಂತೆ ಒತ್ತಾಯಸುತ್ತಿದ್ದನು. ಮಾರಾಟ ಮಾಡಲು ಒಪ್ಪದ ಹಿನ್ನಲೆ ಕುಪಿತಗೊಂಡು ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ಮಗ ಹಾಗೂ ಮಗಳಿಗೆ ಉಣ್ಣಿಸಿದ್ದಾನೆ. ಇದರ ಪರಿಣಾಮವಾಗಿ ಗಂಡು ಮಗುವೊಂದು ಸಾವನ್ನಪ್ಪಿದ್ದು, ಮಗಳು ರೇಣುಕಾ (5) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವಳ ಸ್ಥಿತಿ ಗಂಭೀರವಾಗಿದೆ.

    ಈಗಾಗಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತಾಳಿಕೋಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಹೋಲ್ಡರ್

    ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಹೋಲ್ಡರ್

    ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ತಾಯಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ.

    ಬಿಪಿಎಲ್ ತಾಯಿಗೆ ಮಂಜೂರಾದ ಜಮೀನು ಪಕ್ಕದಲ್ಲಿಯೇ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಎಸ್.ಎನ್.ಸಿಟಿ ಮಾಡಿಕೊಂಡಿದ್ದಾರೆ. ಆದರೆ ತಾಯಿ ಮುನಿಯಮ್ಮ ಮಾತ್ರ ಈಗಲೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದ ಸರ್ವೇ ನಂ.256 ರಲ್ಲಿ 3 ಎಕರೆ 10 ಗುಂಟೆ ಸರ್ಕಾರಿ ಜಮೀನನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ತಾಯಿ ಮುನಿಯಮ್ಮ ಹೆಸರಿಗೆ 2018-19ರಲ್ಲಿ ಮಂಜೂರು ಮಾಡಿದ್ದಾರೆ.

    1998 ರಲ್ಲಿಯೇ ಅರ್ಜಿ ಸಲ್ಲಿಸಿದಂತೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸರ್ಕಾರಿ ಭೂಮಿಯನ್ನು ತಮ್ಮ ತಾಯಿ ಹೆಸರಿಗೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪ್ರಮುಖವಾಗಿ ಭೂಮಿ ಮಂಜೂರು ಮಾಡಿದಾಗ ದರಾಖಾಸ್ತು ಕಮಿಟಿ ಅಧ್ಯಕ್ಷರಾಗಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಟಿ ಬೆಲೆ ಬಾಳುವ ಜಮೀನನ್ನು ಕಮಿಟಿಯಲ್ಲಿ ತಮ್ಮ ತಾಯಿ ಹೆಸರಿಗೆ ಮಂಜೂರು ಮಾಡುವುದು ಸ್ವಜನ ಪಕ್ಷಪಾತ. ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ

    ಇದಕ್ಕಾಗಿ ಅವರು ದರಖಾಸ್ತು ಕಮಿಟಿಯ ಸದಸ್ಯರನ್ನು ಕೂಡ ಬಳಕೆ ಮಾಡಿಕೊಂಡು ಸರ್ಕಾರಿ ಭೂಮಿಯನ್ನು ಶಾಸಕ ನಾರಾಯಣಸ್ವಾಮಿ ಕಬಳಿಕೆ ಮಾಡಿಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಮುನಿಯಪ್ಪ ಅವರು ಶಾಸಕರಿಂದ ದೂರು ಉಳಿದಿದ್ದು ವಾರ್ಷಿಕ 15 ಸಾವಿರ ಆದಾಯ ಹೊಂದಿದ್ದಾರೆ. ಜೊತೆಗೆ ಅವರು 1998 ರಲ್ಲಿಯೇ ಸಾಗುವಳಿ ಚೀಟಿ ಜೊತೆ ಅರ್ಜಿ ಸಲ್ಲಿಸಿರುವ ದಾಖಲೆಗಳಿವೆ. ಅವರು ಭೂಮಿ ಮಂಜೂರಿಗಾಗಿ ಕೋರಿರುವ ದಾಖಲೆಗಳೆಲ್ಲವೂ ಕೂಡಾ ನ್ಯಾಯ ಬದ್ದವಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

    ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಕಬಳಿಕೆ ಆರೋಪ ಇದೇ ಮೊದಲೇನಲ್ಲ. ಈ ಹಿಂದೆ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಕೂಡ ಗಾಲ್ಫ್ ರೆಸಾರ್ಟ್‍ಗಾಗಿ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎಂದು ದಾಖಲೆ ಸಮೇತ ಆರೋಪ ಮಾಡಿದ್ದರು. ಆದರೆ ಅದು ಹೈಕೋರ್ಟ್‍ನಲ್ಲಿಯೇ ಇತ್ಯರ್ಥವಾಗಿತ್ತು. ಕೆಲ ತಿಂಗಳ ಹಿಂದೆಯಷ್ಟೇ ಸಂಸದ ಮುನಿಸ್ವಾಮಿ ಕೂಡ ಸರ್ಕಾರಿ ಜಮೀನು ಕಬಳಿಕೆ ಮಾಡಿದ್ದಾರೆ, ಆದರೆ ಇದ್ಯಾವುದು ಕೂಡ ಸಾಬೀತಾಗದೆ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ – ನಟ ದಿಲೀಪ್ ಸ್ನೇಹಿತ ಅರೆಸ್ಟ್‌

    ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ನಾರಾಯಣಸ್ವಾಮಿ, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನನ್ನ ಹಾಗೂ ನನ್ನ ತಾಯಿ ಜೊತೆಗೆ ಕೇವಲ ರಕ್ತ ಸಂಬಂಧ ಇದೆ, ಹೊರತು ನಮ್ಮ ನಡುವೆ ಯಾವುದೇ ವ್ಯವಹಾರಿಕ ಸಂಬಂಧ ಹೊಂದಿಲ್ಲ. ನಾವು 1995 ರಲ್ಲಿಯೇ ಅದರಿಂದ ಹೊರ ಬಂದಿದ್ದೇವೆ. ನಾನು ಶಾಸಕನಾಗುವ ಮೊದಲೇ ಅಂದರೆ 1998 ರಲ್ಲಿ ಭೂಮಿ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಭೂಮಿ ಮಂಜೂರು ಮಾಡಲು ಬೇಕಿರುವ ಎಲ್ಲಾ ದಾಖಲೆಗಳು ಸರಿಯಾಗಿರುವ ಕಾರಣ ಭೂಮಿ ಮಂಜೂರು ಮಾಡಲಾಗಿದೆ. ಇದರಲ್ಲಿ ಯಾವುದೇ ಅಕ್ರಮ ಸ್ವಜನ ಪಕ್ಷಪಾತವಿಲ್ಲ ಎನ್ನುತ್ತಿದ್ದಾರೆ.

    ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ 2021ರ ಏಪ್ರಿಲ್ 26 ರಂದು ಬಂಗಾರಪೇಟೆ ಪೊಲೀಸ್ ಠಾಣೆಗೆ ಶಾಸಕರ ಬಗರ್‌ಹಕುಂ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ದಾಖಲೆಗಳು ನಾಪತ್ತೆಯಾಗಿದೆ ಎಂದು ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧವೇ ದೂರು ನೀಡಿರುವುದು ಮತ್ತೊಂದು ಅಂಶ. ಇದು ಶಾಸಕರು ತಮ್ಮ ಪ್ರಭಾವ ಬಳಸಿ ಮೂಲ ದಾಖಲೆಗಳನ್ನು ನಾಪತ್ತೆ ಮಾಡಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರಾ ಎನ್ನುವ ಅನುಮಾನ ಕೂಡ ಮೂಡಿಬರುತ್ತಿದೆ.

    ಒಟ್ಟಾರೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಕಬಳಿಕೆ ಆರೋಪ ದಾಖಲೆ ಸಹಿತವಾಗಿದ್ದು, ಅದಕ್ಕೆ ಬೇಕಾದ ದಾಖಲೆಗಳು, ಶಾಸಕರ ಪ್ರಭಾವವೂ ಇರಬಹುದು. ಇಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ಕೈವಾಡವೂ ಇರಬಹುದು, ನಿಷ್ಪಕ್ಷಪಾತ ತನಿಖೆ ನಡೆದಾಗ ಮಾತ್ರ ಈ ಎಲ್ಲಾ ಆರೋಪಗಳಿಗೆ ಸರಿಯಾದ ಉತ್ತರ ಸಿಗಲಿದೆ.

  • ಜಮೀನು ಪರಿಹಾರ ಹಣ ನೀಡಲ್ಲವೆಂದು ಭಾವಿಸಿ ತಂದೆ ಇಟ್ಟಿದ್ದ ಹಣವನ್ನೇ ಎಗರಿಸಿದ ಮಗ

    ಜಮೀನು ಪರಿಹಾರ ಹಣ ನೀಡಲ್ಲವೆಂದು ಭಾವಿಸಿ ತಂದೆ ಇಟ್ಟಿದ್ದ ಹಣವನ್ನೇ ಎಗರಿಸಿದ ಮಗ

    ಹಾಸನ: ತಂದೆಯ 13,20,000 ರೂ. ಹಣವನ್ನು ಮಗನೇ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಹಾಸನದ ದೊಡ್ಡ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಯಗಚಿನಾಲೆ ಕಾಮಗಾರಿಗೆ ಹಾಸನ ತಾಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದ ರಂಗಸ್ವಾಮಿ ಅವರ 14 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ರಂಗಸ್ವಾಮಿಗೆ ಸರ್ಕಾರದಿಂದ 13,20,000 ರೂ. ಹಣವನ್ನು ಪರಿಹಾರವಾಗಿ ನೀಡಲಾಗಿತ್ತು. ಅದಕ್ಕೆ ರಂಗಸ್ವಾಮಿ ತಮ್ಮ ಮೂವರು ಮಕ್ಕಳಿಗೆ ಹಣ ಹಂಚಲು ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಮನೆಯಲ್ಲಿಟ್ಟಿದ್ದರು. ಇದನ್ನೂ ಓದಿ: ಹಿಂದಿ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ: ಕಂಗನಾ ರಣಾವತ್

    ಮೇ.23 ರಂದು ರಂಗಸ್ವಾಮಿ ಮನೆಗೆ ಬೀಗ ಹಾಕಿಕೊಂಡು ದನಗಳನ್ನು ಮೇಯಿಸಲು ತೆರಳಿದ್ದರು. ಈ ವೇಳೆ ಮನೆಯಲ್ಲಿ ಕಳ್ಳತನ ನಡೆದಿತ್ತು. ಪರಿಣಾಮ ರಂಗಸ್ವಾಮಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಪ್ರಕರಣ ಭೇದಿಸಲು ಮುಂದಾಗಿದ್ದಾರೆ. ಈ ವೇಳೆ ಕಳ್ಳನ ಸುಳಿವು ಸಿಕ್ಕಿದ್ದು, ದೊಡ್ಡ ಆಲದಹಳ್ಳಿ ಗ್ರಾಮದ ರಂಗನಾಥ ಹಣ ಕಳ್ಳತನ ಮಾಡಿರುವುದಾಗಿ ಪೊಲೀಸರು ರಂಗಸ್ವಾಮಿಗೆ ತಿಳಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿ ಬೇರೆ ಯಾರು ಅಲ್ಲ ರಂಗಸ್ವಾಮಿಯ ಹಿರಿಯ ಮಗನೇ ಆಗಿದ್ದಾನೆ. ಪ್ರಸ್ತುತ ಪೊಲೀಸರು ಬಂಧಿತನಿಂದ 13,20,000 ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ರಂಗನಾಥನನ್ನು ಪೊಲೀಸರು ವಿಚಾರಣೆ ಮಾಡಿದ್ದು, ಜಮೀನು ಹಂಚಿಕೆಯಲ್ಲಿ ನನಗೆ ಮೋಸವಾಗಿದೆ. ಎಲ್ಲ ಹಣ ನನಗೆ ಸೇರಬೇಕು ಹಾಗೂ ತನಗೆ ಹಣ ನೀಡಲ್ಲ ಎಂದು ಭಾವಿಸಿ ಮನೆಯಲ್ಲಿಟ್ಟಿದ್ದ ದುಡ್ಡನ್ನು ಕಳ್ಳತನ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

  • ಜಮೀನಿಗಾಗಿ ಸಹೋದರರ ಸವಾಲ್ – ಎರಡು ಗುಂಪುಗಳ ನಡುವೆ ಮಾರಾಮಾರಿ

    ಜಮೀನಿಗಾಗಿ ಸಹೋದರರ ಸವಾಲ್ – ಎರಡು ಗುಂಪುಗಳ ನಡುವೆ ಮಾರಾಮಾರಿ

    ಚಿತ್ರದುರ್ಗ: ಜಮೀನು ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಮಾರಾಮಾರಿಯಾಗಿದ್ದು, ಪೊಲೀಸರ ಎದುರಲ್ಲಿಯೇ ಅಟ್ಟಾಡಿಸಿಕೊಂಡು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದುಗ್ಗಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಒಂದೇ ಕುಟುಂಬದಲ್ಲಿ ಹುಟ್ಟಿ ಸೋದರ ಸಂಬಂಧಿಗಳಾಗಿರುವ ಚಿತ್ತಣ್ಣ ಹಾಗೂ ಕುಂಟಪ್ಪನ ನಡುವೆ ಜಮೀನಿನ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಸರ್ವೆ ಮಾಡಿಸಿ, ಇಬ್ಬರು ಮಕ್ಕಳಿಗೂ ಸಮವಾಗಿ ಹಂಚುವಂತೆ ತಿಳಿಸಿದ್ದರು. ಆದರೆ ಗಲಾಟೆಯಿಂದಾಗಿ ಜಮೀನಿನಲ್ಲಿ ಉಳುಮೆ ಮಾಡಲು ತೆರಳಿರುವ ಚಿತ್ತಣ್ಣ ಹಾಗೂ ಬೆಂಬಲಿಗರಾದ ಬಸವರಾಜ್, ಬೆಲ್ಲಣ್ಣ, ಜಯ್ಯಣ್ಣ ಮತ್ತು ರೇವಣ್ಣ ಅವರನ್ನು ಜಮೀನು ಸರ್ವೆಯಾಗಿ, ಇಬ್ಭಾಗವಾಗುವವರೆಗೆ ಉಳುಮೆಮಾಡದಂತೆ ತಡೆದ ಪರಿಣಾಮ ಗಲಭೆ ಶುರುವಾಗಿದೆ.

    ಉಳುಮೆ ಮಾಡದಂತೆ ತಡೆದ ಕವಿತ, ಚಿತ್ರಲಿಂಗಪ್ಪ, ಕುಂಟಪ್ಪನ ಮೇಲೆ ಚಿತ್ತಣ್ಣ ಮತ್ತು ಅವರ ಬೆಂಬಲಿಗರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಹಿರಿಯೂರು ಸಿಪಿಐ ರಾಘವೇಂದ್ರ ಜಗಳ ಬಿಡಿಸಲು ಹರಸಾಹಸ ಪಟ್ಟರು ಕೂಡ ಭಾರೀ ಫೈಟಿಂಗ್ ನಡೆದು ನಾಲ್ವರು ಗಂಭೀರವಾಗಿ ಗಾಯಗೊಂಡು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದ ರೈತ

    ಈ ಜಮೀನಿನ ಇಬ್ಭಾಗ ವಿಚಾರ ನ್ಯಾಯಾಲಯದಲ್ಲಿದ್ದರು ಸಹ ರಾಜಕೀಯ ಪ್ರಭಾವ ಹಾಗೂ ಸ್ಥಳೀಯ ಪೊಲೀಸರ ಕುಮ್ಮಕ್ಕು ಪಡೆದ ಚಿತ್ತಣ್ಣ ಹಾಗು ಆತನ ಬೆಂಬಲಿಗರು, ಮಹಿಳೆಯರು ಹಾಗೂ ವೃದ್ಧರೆನ್ನದೇ ಮನಸೋ ಇಚ್ಛೆ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಕೂಡ ಈ ಹಲ್ಲೆಗೆ ಸಾಥ್ ನೀಡಿದ್ದಾರೆಂದು ಆರೋಪಿಸಿದ್ದು, ಮಾರಾಕಾಸ್ತ್ರಗಳಿಂದ ಬಡಿದಾಡುವ ಗಲಾಟೆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಈ ಪ್ರಕರಣ ಜವನಗೊಂಡನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಉಗುರಲ್ಲಿ ಹೋಗುವ ವಿಚಾರಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಕೋರ್ಟ್ ತೀರ್ಪು ಬರುವ ಮುನ್ನವೇ ಜಮೀನಿನಲ್ಲಿ ಮಾರಾಮಾರಿ ನಡೆಸಿ ಆಸ್ಪತ್ರೆ ಸೇರಿರುವುದು ವಿಪರ್ಯಾಸ. ಇದನ್ನೂ ಓದಿ: ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ

  • ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ – ಬಿಎಸ್‍ವೈ ವಿರುದ್ಧ ಎಸಿಬಿಗೆ ದೂರು

    ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ – ಬಿಎಸ್‍ವೈ ವಿರುದ್ಧ ಎಸಿಬಿಗೆ ದೂರು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಾಮಾಜಿಕ ಕಾರ್ಯಕರ್ತ ಕೆ.ಸಿ ರಾಜಣ್ಣ ಹಾಗೂ ವಕೀಲರ ತಂಡ ಎಸಿಬಿಗೆ ದೂರು ನೀಡಿದ್ದಾರೆ.

    ಅರ್ಹತೆ ಇಲ್ಲದ CESS ಎನ್ನುವ ಖಾಸಗಿ ಶಿಕ್ಷಣ ಸಂಸ್ಥೆಗೆ 116 ಎಕರೆ ಜಮೀನು ಮಂಜೂರು ಮಾಡಿದ್ದು, ತನಿಖೆ ನಡೆಸುವಂತೆ ಎಸಿಬಿಗೆ ದೂರು ನೀಡಲಾಗಿದೆ.

    ದೂರಿನಲ್ಲಿ ಏನಿದೆ?: ಹರಳೂರು ಮತ್ತು ಪೂಲನಹಳ್ಳಿ ಬಳಿ ಇದ್ದ ಕೆಐಎಡಿಬಿಗೆ ಸೇರಿದ ಜಮೀನನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಶಿಕ್ಷಣ ಸಂಸ್ಥೆಗೆ ಮಂಜೂರು ಮಾಡಲಾಗಿದೆ. ಅರ್ಜಿ ಸಲ್ಲಿದ 30 ದಿನಗಳಲ್ಲಿ 166 ಎಕರೆ ಜಮೀನು ಮಂಜೂರು ಮಾಡಲಾಗಿದೆ.

    ಚೆಸ್ ಸಂಸ್ಥೆ 130 ಎಕರೆ ಭೂಮಿ ಮಂಜೂರು ಮಾಡಲು ನೇರವಾಗಿ ಅಂದಿನ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿತ್ತು. 25 ಎಕರೆಗಿಂತ ಹೆಚ್ಚು ಜಮೀನು ಮಂಜೂರು ಮಾಡುವಾಗ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಮೊದಲು ಮನವಿ ಸಲ್ಲಿಸಬೇಕು. ಈ ನಿಯಮವನ್ನು ಗಾಳಿಗೆ ತೂರಿ ಖಾಸಗಿ ವಿ.ವಿ ಸ್ಥಾಪಿಸಲು ಬಿಎಸ್‍ವೈ ಜಮೀನು ಮಂಜೂರು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: 32 ವರ್ಷಗಳ ನಂತ್ರ ಕಾಶ್ಮೀರಿ ಪಂಡಿತರಿಗೆ ಸಿಕ್ಕಿದ್ದು ಸಿನಿಮಾ, ನ್ಯಾಯವಲ್ಲ: ಕೇಜ್ರಿವಾಲ್

    ಅಇSS ಸಂಸ್ಥೆ ಜಮೀನು ಮಂಜೂರು ಮಾಡಲು ಪ್ರತಿ ಎಕರೆಗೆ 1.61 ಕೋಟಿ ದರವನ್ನು ಅಪರ ಮುಖ್ಯ ಕಾರ್ಯದರ್ಶಿ ನಿಗದಿ ಪಡಿಸಿದ್ದರು. ಆದರೆ ಬಿಎಸ್‍ವೈ 2021 ಎಪ್ರಿಲ್ 26ರಂದು ಸಚಿವ ಸಂಪುಟದ ಮುಂದೆ ತಂದು 116.16 ಎಕರೆ ಜಾಗವನ್ನು 50 ಕೋಟಿಗೆ ಮಂಜೂರು ಮಾಡಿಕೊಟ್ಟಿದ್ದಾರೆ. ನಿಗದಿ ಪಡಿಸಿದ್ದ 186.76 ಕೋಟಿ ರೂ.ಗೆ ನೀಡದೇ ಕೇವಲ 50 ಕೋಟಿಗೆ ಮಂಜೂರು ಮಾಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಈ ಅಕ್ರಮದ ವಿರುದ್ಧ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅನ್ನೋದೊಂದು ಶಕ್ತಿ: ಬಸವರಾಜ್ ರಾಯರೆಡ್ಡಿ

  • ಕೆಐಎಡಿಬಿ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಬೇಡ ಎಂದವರಿಗೆ ಅಭಿವೃದ್ಧಿಪಡಿಸಿದ ಭೂಮಿ: ನಿರಾಣಿ

    ಕೆಐಎಡಿಬಿ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಬೇಡ ಎಂದವರಿಗೆ ಅಭಿವೃದ್ಧಿಪಡಿಸಿದ ಭೂಮಿ: ನಿರಾಣಿ

    – ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಸ್ಥಾಪಿಸಿದ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶ
    – ಪರ್ಯಾಯ ಭೂಮಿ ನೀಡುವ ವ್ಯವಸ್ಥೆ ದೇಶದಲ್ಲಿ ಬೇರೆಲ್ಲಿಯೂ ಜಾರಿಯಲ್ಲಿಲ್ಲ

    ಬೆಂಗಳೂರು: ಕೆಐಡಿಬಿಯಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ರೈತರು ನಗದು ಪರಿಹಾರ ಪಡೆಯದೇ ಇದ್ದಲ್ಲಿ, ಅಭಿವೃದ್ಧಿಪಡಿಸಿದ ನಿವೇಶನದಲ್ಲಿ ಪ್ರತಿ ಎಕರೆಗೆ 10,781 ಚ.ಅಡಿ ಜಾಗವನ್ನು ಫಲಾನುಭವಿಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

    ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರಿಸಿದ ನಿರಾಣಿ, ಈ ಮೊದಲು ಪ್ರತಿ ಎಕರೆಗೆ 9,500 ಚ.ಅಡಿ ಅಭಿವೃದ್ಧಿಪಡಿಸಿದ ಜಾಗವನ್ನು ಭೂ ಮಾಲೀಕರಿಗೆ ನೀಡಲಾಗುತ್ತಿತ್ತು. ಈಗ ಎಕೆರೆಗೆ 10,781 ಚ.ಅಡಿ ಜಾಗವನ್ನು ನೀಡಲು ನಿರ್ಧರಿಸಲಾಗಿದೆ ಎಂದರು. ಇದನ್ನೂ ಓದಿ: ತೃತೀಯ ಲಿಂಗಿಗಳಿಗೆ ಸೌಲಭ್ಯ ಕಲ್ಪಿಸಲು ಸಮಿತಿ ರಚನೆ: ಹಾಲಪ್ಪ ಆಚಾರ್

    ಜಮೀನು ಕಳೆದುಕೊಂಡ ಕುಟುಂಬದ ಸದಸ್ಯರಲ್ಲಿ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಸ್ಥಾಪಿಸಿದ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಭೂಮಿಯ ಬದಲಾಗಿ ಪರ್ಯಾಯ ಭೂಮಿ ನೀಡುವ ವ್ಯವಸ್ಥೆ ದೇಶದಲ್ಲಿ ಎಲ್ಲಿಯೂ ಜಾರಿಯಲ್ಲಿಲ್ಲ ಎಂದು ಉಪ ಪ್ರಶ್ನೆಯೊಂದಕ್ಕೆ ನಿರಾಣಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮಂಗಳೂರಿನ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ

    ರಾಜ್ಯದಲ್ಲಿ 83,058 ಎಕರೆಯನ್ನು ಕೈಗಾರಿಕಾ ಪ್ರದೇಶಕ್ಕಾಗಿ, 79,017 ಎಕರೆಯನ್ನು ಏಕಘಟಕ ಸಂಕೀರ್ಣದಡಿ ಒಟ್ಟು 1,62,000 ಎಕರೆಯನ್ನು ಕೆಐಎಡಿಬಿ ವಿವಿಧ ಜಿಲ್ಲೆಗಳಲ್ಲಿ ಸ್ವಾಧೀನಪಡಿಸಿಕೊಂಡಿದೆ ಎಂದು ತಿಳಿಸಿದರು.

  • ಜಮೀನು ಮಾರಿ ಹಣ ಜೊತೆ ಎಸ್ಕೇಪ್ ಆಗಿದ್ದ ಮಗನಿಗಾಗಿ ತಾಯಿ ಹುಡಕಾಟ!

    ಜಮೀನು ಮಾರಿ ಹಣ ಜೊತೆ ಎಸ್ಕೇಪ್ ಆಗಿದ್ದ ಮಗನಿಗಾಗಿ ತಾಯಿ ಹುಡಕಾಟ!

    ಬೆಳಗಾವಿ: ಸರ್ಕಾರಿ ನೌಕರಿಯಲ್ಲಿರುವ ನನ್ನ ಮಗನನ್ನು ಹುಡುಕಿ ಕೊಡಿ ಎಂದು ರಾಮದುರ್ಗ ತಾಲೂಕಿನ ಖಾನಪೇಟ ನಗರದ ವೃದ್ಧೆ ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.

    ಕಳೆದ 18 ವರ್ಷಗಳ ಹಿಂದೆ ನನ್ನ ಹಿರಿಯ ಮಗನಾದ ಬಸಪ್ಪ ಕೋರಿಶೆಟ್ಟಿ ನನಗೆ 2 ಎಕರೆ ಹೊಲವನ್ನು ನೀಡಿ ಇರುವ ಮೂರು ಮನೆಗಳಲ್ಲಿ ಒಂದನ್ನು ನಾನು ಬದುಕಿರುವರೆಗೂ ವಾಸಿಸಲು ನೀಡಿದ್ದನು. ಆದರೆ ನನ್ನ ಕಿರಿಯ ಮಗನಾದ ಶಿಂಗಪ್ಪಾ ಕೋರಿಶೆಟ್ಟಿ ನನಗೆ ನೀಡಿದ ಹೊಲವನ್ನು ಮಾರಲು ಪ್ರಚೋದಿಸಿದ. ಆ ಹೊಲವನ್ನು 2 ಲಕ್ಷ 50 ಸಾವಿರ ರೂ.ಗಳಿಗೆ ನಾನು ಮಾರಾಟ ಮಾಡಿ ನಂತರ ಹಣವನ್ನು ಬ್ಯಾಂಕ್‍ನಲ್ಲಿ ಸುರಕ್ಷಿತವಾಗಿ ನನ್ನ ಹೆಸರಿಲ್ಲಿ ಇಡುವುದಾಗಿ ಹೇಳಿ ನನಗೆ ವಂಚಿಸಿದ್ದಾನೆ. ಇತ್ತ ಇರುವ ಮನೆಯನ್ನು ಬೀಳಿಸಿ ಹೋಗಿದ್ದಾನೆ. ಇದರಿಂದ ನನಗೆ ವಾಸಿಸಲು ಸ್ಥಳವಿಲ್ಲ ಮತ್ತೊಬ್ಬರ ಮನೆಯ ಕಟ್ಟೆಯ ಮೇಲೆ ಜೀವನ ನಡೆಸುತ್ತಿದ್ದೇನೆ ಎಂದು ದೂರಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ಕಳೆದ 15 ದಿನಗಳ ಹಿಂದೆ ರಾಮದುರ್ಗದಲ್ಲಿ ಅವನನ್ನು ನಾನು ನೋಡಿದ್ದೇನೆ. ಹತ್ತಾರು ಬಾರಿ ಬೆಂಗಳೂರಿಗೆ ಹೋಗಿ ಅವನನ್ನು ಹುಡುಕಿದರೂ ಸಿಕ್ಕಿರಲಿಲ್ಲ. ಸದ್ಯ ಅವನು ಧಾರವಾಡದಲ್ಲಿ ಇರುವುದಾಗಿ ಮಾಹಿತಿ ಇದೆ. ನಾನು ನನ್ನ ಉಪಜೀವನಕ್ಕಾಗಿ ಇಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದೆ. ಆದರೆ ನನಗೆ ವಯಸ್ಸಾದ ಕಾರಣ ನಾನು ಅಶಕ್ತಳಾಗಿದ್ದೇನೆ. ಆ ಕಾರಣ ಸರಕಾರಿ ನೌಕರಿಯಲ್ಲಿರುವ ನನ್ನ ಮಗನನ್ನು ಹುಡುಕಿಕೊಡಿ ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!