Tag: ಜಮೀನು ವ್ಯಾಜ್ಯ

  • ಮಾಜಿ ಡಾನ್ ಜೇಡರಹಳ್ಳಿ ಕೃಷ್ಣಪ್ಪ ಅರೆಸ್ಟ್

    ಮಾಜಿ ಡಾನ್ ಜೇಡರಹಳ್ಳಿ ಕೃಷ್ಣಪ್ಪ ಅರೆಸ್ಟ್

    ಬೆಂಗಳೂರು: ಜಮೀನು ವ್ಯಾಜ್ಯ (Land Grabbing) ಸಂಬಂಧ ಮಾಜಿ ಡಾನ್ (Ex Don) ಜೇಡರಹಳ್ಳಿ ಕೃಷ್ಣಪ್ಪನನ್ನು (Jedarahalli Krishnappa) ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬ್ಯಾಡರಹಳ್ಳಿ ಪೊಲೀಸರು ಜೇಡರಹಳ್ಳಿ ಕೃಷ್ಣಪ್ಪನನ್ನು ಅರೆಸ್ಟ್ ಮಾಡಿದ್ದಾರೆ. ಜಮೀನು ವ್ಯಾಜ್ಯ ಸಂಬಂಧ ಕೃಷ್ಣಪ್ಪ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆ ಕೃಷ್ಣಪ್ಪನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – 11 ಮಂದಿ ದುರ್ಮರಣ, 60 ಮಂದಿಗೆ ಗಾಯ

    16 ಎಕರೆ ಜಮೀನು ಕಬಳಿಸಿದ ಆರೋಪದಡಿ ಅರೆಸ್ಟ್ ಮಾಡಲಾಗಿದೆ. ಬೇರೆಯವರ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ್ದ ಆರೋಪದಡಿ ಮಾಜಿ ಡಾನ್ ಕೃಷ್ಣಪ್ಪನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ತಿಂಡಿ ಮಾಡದ್ದಕ್ಕೆ ತಾಯಿಯನ್ನು ಹತ್ಯೆಗೈದ ಕೇಸ್‍ಗೆ ಟ್ವಿಸ್ಟ್ – ಕೊಲೆ ಮಾಡಿದ್ದು ಮಗನಲ್ಲ, ತಂದೆಯಿಂದಲೇ ಕೃತ್ಯ

  • ಮಹಿಳೆಯನ್ನು ನಿಂದಿಸಿ ಹಲ್ಲೆ ಆರೋಪ – ಮುಳಬಾಗಿಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ಧ ಎಫ್‌ಐಆರ್

    ಮಹಿಳೆಯನ್ನು ನಿಂದಿಸಿ ಹಲ್ಲೆ ಆರೋಪ – ಮುಳಬಾಗಿಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ಧ ಎಫ್‌ಐಆರ್

    ಕೋಲಾರ: ಮಹಿಳೆಯನ್ನು ನಿಂದಿಸಿ ಹಲ್ಲೆ ಮಾಡಿದ ಆರೋಪದಡಿ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.

    ಮುಳಬಾಗಿಲು (Mulabagilu) ತಾಲೂಕಿನ ಯಲವಳ್ಳಿ ಗ್ರಾಮದ ಸರ್ವೆ ನಂ.65ರಲ್ಲಿ 2 ಎಕರೆ 10 ಗುಂಟೆ ಜಮೀನು ಲಪಟಾಯಿಸಲು ಮುಂದಾಗಿದ್ದ ಕೊತ್ತೂರು ಅಂಜು ಬಾಸ್ ಅಲಿಯಾಸ್ ಆಂಜನೇಯಲು ವಿರುದ್ಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಏ. 9ಕ್ಕೆ ಮೋದಿ ಬಂಡೀಪುರ ಭೇಟಿ – ಪ್ರವಾಸಿಗರಿಗೆ ಇಂದಿನಿಂದ 4 ದಿನ ಸಫಾರಿ, ರೆಸಾರ್ಟ್ ವಾಸ್ತವ್ಯ ಬಂದ್ 

    ಅಂಜು ಬಾಸ್ ಚಂಗಮ್ಮ ಎಂಬ ಮಹಿಳೆಯ ಬಳಿ ಒಂದು ಎಕರೆ ಕ್ರಯ ಮಾಡಿಸಿಕೊಂಡು 2 ಎಕರೆ ಜಮೀನಿಗೆ ತಂತಿ ಬೇಲಿ ಹಾಕಿಕೊಂಡಿದ್ದರು. ಇದನ್ನು ಪ್ರಶ್ನೆ ಮಾಡಿದ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆಂಬಲಿಗರಿಂದ ಧಮ್ಕಿ ಹಾಕಿಸಿದ್ದರು. ಜಮೀನು ವ್ಯಾಜ್ಯ (Land Litigation) ಹಿನ್ನೆಲೆಯಲ್ಲಿ ಮಹಿಳೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಇಂದು ರಿಲೀಸ್? 

    ಮಹಿಳೆ ನೀಡಿರುವ ದೂರಿನ ಅನ್ವಯ ಅಂಜು ಬಾಸ್, ಮುರಳಿ, ಸುರೇಶ್ ಸೇರಿದಂತೆ 4 ಜನರ ವಿರುದ್ಧ ಐಪಿಸಿ (IPC) ಸೆಕ್ಷನ್ 504, 143, 149, 323, 354ರ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ 865 ಹಳ್ಳಿಗಳಿಗೆ ಆರೋಗ್ಯ ವಿಮೆ – ಮಹಾರಾಷ್ಟ್ರದ ಸರ್ಕಾರದಿಂದ ಆದೇಶ

  • ಜಮೀನಿಗಾಗಿ ಕಿತ್ತಾಟ – ತೋಟದ ಮನೆಗೆ ಬೆಂಕಿ

    ಜಮೀನಿಗಾಗಿ ಕಿತ್ತಾಟ – ತೋಟದ ಮನೆಗೆ ಬೆಂಕಿ

    ರಾಮನಗರ: ಜಮೀನಿನ ವ್ಯಾಜ್ಯದ ವಿಚಾರವಾಗಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ತೋಟದ ಮನೆಗೆ ಬೆಂಕಿ ಹಚ್ಚಿ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ನಡೆದಿದೆ.

    ಕನ್ನಮಂಗಲ ಗ್ರಾಮದ ಕಮಲಮ್ಮ ಅವರಿಗೆ ಸೇರಿದ ಮನೆಯನ್ನ ತಡ ರಾತ್ರಿ 6 ರಿಂದ 7 ಜನ ದುಷ್ಕರ್ಮಿಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಒಡೆದು ಮನೆಗೆ ಬೆಂಕಿ ಹಚ್ಚಿ ಮನೆ ಮುಂದೆ ಹಾಕಿದ್ದ ಹಂಚಿನ ಚಾವಣಿಯನ್ನು ಕೂಡ ಧ್ವಂಸ ಮಾಡಿ ಪರಾರಿಯಾಗಿದ್ದಾರೆ.

    ಇದು ಮೇಲ್ನೋಟಕ್ಕೆ ದಾಯಾದಿಗಳ ಕಲಹ ಎಂದು ತಿಳಿದು ಬಂದಿದೆ. ಕಮಲಮ್ಮನ ಮಗ ಮಹೇಶ್ ಹಾಗೂ ಅವರ ಸೋದರ ಸಂಬಂಧಿ ಶಿವರಾಜ್ ಎಂಬುವವರ ನಡುವೆ ತಡರಾತ್ರಿ ಗಲಾಟೆ ನಡೆದಿತ್ತು. ಕಳೆದ ಮೂರು ದಿನಗಳ ಹಿಂದೆ ಮಹೇಶ್ ಸೋದರ ಸಂಬಂಧಿ ಶಿವರಾಜ್ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಎರಡು ಕುಟುಂಬದವರು ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

    ಆದರೆ ತಡರಾತ್ರಿ ಹೊಸದಾಗಿ ಕಟ್ಟಿಸಿದ್ದ ತೋಟದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗಲಾಟೆಯ ಸೇಡಿಗಾಗಿ ಶಿವರಾಜ್ ಕಡೆಯವರು ಮಹೇಶನ ಮನೆಯನ್ನ ಧ್ವಂಸ ಮಾಡಿದ್ದಾರೆ ಎಂದು ತಾಯಿ ಕಮಲಮ್ಮ ಆರೋಪಿಸುತ್ತಿದ್ದಾರೆ.

    ಈ ಸಂಬಂಧ ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚನ್ನಪಟ್ಟಣ ಎಎಸ್ಪಿ ರಾಮರಾಜನ್ ಹಾಗೂ ಚನ್ನಪಟ್ಟಣ ವೃತ್ತ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಂತರ ಶಿವರಾಜ್ ಕಣ್ಮರೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಆಸ್ತಿ ವಿಚಾರಕ್ಕೆ ಅಣ್ಣ – ತಮ್ಮನ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

    ಆಸ್ತಿ ವಿಚಾರಕ್ಕೆ ಅಣ್ಣ – ತಮ್ಮನ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

    ಶಿವಮೊಗ್ಗ: ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಹೊಳಲೂರು ಗ್ರಾಮದಲ್ಲಿ ನಡೆದಿದೆ.

    45 ವರ್ಷದ ರೇವಣ್ಣ ಅಣ್ಣನಿಂದಲೇ ಕೊಲೆಯಾದ ದುರ್ದೈವಿ. ಅಣ್ಣ ಪ್ರಕಾಶ್ ಹಾಗೂ ತಮ್ಮ ರೇವಣ್ಣ ನಡುವೆ ಅಡಿಕೆ ತೋಟದ ಜಮೀನು ವಿವಾದ ಕೋರ್ಟ್‍ನಲ್ಲಿತ್ತು. ಇದೇ ವಿಚಾರವಾಗಿ ಇಬ್ಬರಿಗೂ ಪದೇ ಪದೇ ಜಗಳ ನಡೆಯುತ್ತಿತ್ತು. ಇಂದು ಬೆಳಗ್ಗೆ ಜಮೀನಿಗೆ ಬಂದಿದ್ದ ರೇವಣ್ಣ ಹಾಗೂ ಪ್ರಕಾಶ್ ನಡುವೆ ಇದೇ ವಿಷಯಕ್ಕೆ ಜಗಳ ಏರ್ಪಟಿತ್ತು. ಈ ವೇಳೆ ಸಿಟ್ಟಿಗೆದ್ದ ಪ್ರಕಾಶ್ ಕೈಯಲ್ಲಿದ್ದ ಮಚ್ಚಿನಿಂದ ರೇವಣ್ಣನ ಮೇಲೆ ಹಲ್ಲೆ ನಡೆಸಿದ್ದ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರೇವಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಪ್ರಕಾಶ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಮೀನಿನ ವಿಚಾರಕ್ಕಾಗಿ ಬಿಜೆಪಿ ಮುಖಂಡನಿಂದ ಮಾರಣಾಂತಿಕ ಹಲ್ಲೆ

    ಜಮೀನಿನ ವಿಚಾರಕ್ಕಾಗಿ ಬಿಜೆಪಿ ಮುಖಂಡನಿಂದ ಮಾರಣಾಂತಿಕ ಹಲ್ಲೆ

    ಧಾರವಾಡ: ಜಮೀನು ವಿಚಾರದಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ರೌಡಿ ಶಿಟರ್ ಆಗಿರುವ ಬಿಜೆಪಿ ಮುಖಂಡನೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಗುರುನಾಥಗೌಡ ಹಲ್ಲೆ ನಡೆಸಿದ ರೌಡಿ ಶಿಟರ್ ಆಗಿರುವ ಬಿಜೆಪಿ ಮುಖಂಡ. ಗುರುನಾಥಗೌಡ ಹೆಬ್ಬಳ್ಳಿ ಗ್ರಾಮದ ವಿಠ್ಠಲ್ ಭೀಮಕ್ಕನವರ ಹಾಗೂ ಆತನ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

    ಕಳೆದ ಕೆಲವು ವರ್ಷಗಳಿಂದ ಗುರುನಾಥಗೌಡ ಹಾಗೂ ಭೀಮಕ್ಕನವರ ಕುಟುಂಬದ ಮಧ್ಯೆ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆದಿತ್ತು. ಅಲ್ಲದೇ ನ್ಯಾಯಾಲಯವು ಭೀಮಕ್ಕನವರ ಪರ ತೀರ್ಪು ನೀಡಿದ್ದು, ಜಮೀನು ಭೀಮಕ್ಕನವರ ಕುಟುಂಬದ ಕೈ ಸೇರಿತು. ಆದರೆ ಬುಧವಾರ ಜಮೀನಿನಲ್ಲಿ ಬಿತ್ತನೆ ಮಾಡಲು ಮುಂದಾದ ವಿಠ್ಠಲ್ ಭೀಮಕ್ಕನವರ ಹಾಗೂ ಅವರ ಸಹೋದರ ಮೇಲೆ ಗುರುನಾಥಗೌಡ ಹಾಗೂ ಆತನ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

    ತಮ್ಮ ಮೇಲೆ ಹಲ್ಲೆ ಮಾಡಲು ಗುರುನಾಥಗೌಡ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತಂದಿದ್ದ ಎಂದು ಹಲ್ಲೆಗೊಳಗಾದ ವಿಠ್ಠಲ್ ಹಾಗೂ ಆತನ ಸಹೋದರ ತಿಳಿಸಿದ್ದಾರೆ. ಈ ಕುರಿತು ಗುರುನಾಥಗೌಡನ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.