Tag: ಜಮೀನು

  • ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಜಮೀನು ವಶ – ಮನನೊಂದು ಮಹಿಳೆ ಆತ್ಮಹತ್ಯೆ

    ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಜಮೀನು ವಶ – ಮನನೊಂದು ಮಹಿಳೆ ಆತ್ಮಹತ್ಯೆ

    ಚಾಮರಾಜನಗರ: ಅಂಬೇಡ್ಕರ್ ಭವನ (Ambedkar Bhavan) ನಿರ್ಮಾಣ ಮಾಡುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು (Revenue Department officials) ಜಮೀನು ವಶ ಪಡಿಸಿಕೊಂಡ ಹಿನ್ನೆಲೆ ಮನನೊಂದು ಮಹಿಳೆ ನೇಣಿಗೆ ಶರಣಾದ ಘಟನೆ ಚಾಮರಾಜನಗರದಲ್ಲಿ (Chamarajanagar) ನಡೆದಿದೆ.

    ರಾಜಮ್ಮ (52) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಚಾಮರಾಜನಗರ ಜಿಲ್ಲೆ ಹನೂರು (Hanur) ತಾಲೂಕಿನ ದೊಡ್ಡಾಲತ್ತೂರಿನಲ್ಲಿ ಘಟನೆ ನಡೆದಿದೆ. ರಾಜಮ್ಮರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ಸ್ ಭೂಮಿ ಬಂದಿತ್ತು. ಇದ್ದ ಚೂರುಪಾರು ಭೂಮಿಯಲ್ಲಿ ಕುಟುಂಬ ವ್ಯವಸಾಯ ಮಾಡಿಕೊಂಡಿತ್ತು. ಕಳೆದ ವಾರ ಇದ್ದಕ್ಕಿದ್ದ ಹಾಗೆ ಬಂದ ಕಂದಾಯ ಇಲಾಖೆಯ ಅಧಿಕಾರಿಗಳು 20 ಸೆಂಟ್ಸ್ ಭೂಮಿ ವಶಪಡಿಸಿಕೊಂಡಿದ್ದರು. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಇದರಿಂದ ಬೇಸತ್ತು ರಾಜಮ್ಮ ಇಂದು ಮುಂಜಾನೆ ತಮ್ಮ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ

    ರಾಜಮ್ಮರ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಯಾವುದೇ ಕಾರಣಕ್ಕೂ ಶವ ತೆಗೆಯುವುದಿಲ್ಲವೆಂದು ಪ್ರತಿಭಟನೆ ನಡೆಸಿದರು. ಘಟನೆ ಸಂಬಂಧ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶ್ರಾವಣ ಶನಿವಾರ – ಕೋಲಾರದ ಚಿಕ್ಕ ತಿರುಪತಿ, ಬಂಗಾರ ತಿರುಪತಿ ದೇವಾಲಯದಲ್ಲಿ ಭಕ್ತ ಸಾಗರ

  • ಚಿತ್ರದುರ್ಗದಲ್ಲಿ ಧಾರಾಕಾರ ಮಳೆ – ಚಳ್ಳಕೆರೆ ತಾಲೂಕಿನ ವಿವಿಧೆಡೆ ಜಮೀನುಗಳು ಜಲಾವೃತ

    ಚಿತ್ರದುರ್ಗದಲ್ಲಿ ಧಾರಾಕಾರ ಮಳೆ – ಚಳ್ಳಕೆರೆ ತಾಲೂಕಿನ ವಿವಿಧೆಡೆ ಜಮೀನುಗಳು ಜಲಾವೃತ

    ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಚಳ್ಳಕೆರೆ (Challakere) ತಾಲೂಕಿನ ವಿವಿಧೆಡೆ ಜಮೀನುಗಳು (Farms) ಜಲಾವೃತಗೊಂಡಿವೆ.

    ಭಾರೀ ಮಳೆಗೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯ ರೈತ ಮಧು ಎಂಬವರ ಜಮೀನು ಜಲಾವೃತಗೊಂಡಿದೆ. ಅಡಿಕೆ, ತೆಂಗು, ಮೆಕ್ಕೆಜೋಳ, ತರಕಾರಿ ಬೆಳೆಗಳು ಜಲಾವೃತಗೊಂಡಿದ್ದು, ನಾಲ್ಕು ಎಕರೆಗೂ ಹೆಚ್ಚು ಜಮೀನು ಜಲಮಯವಾಗಿದೆ. ಇದನ್ನೂ ಓದಿ: ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಮತ ಖರೀದಿಯಿಂದ: ಸಿ.ಎಂ.ಇಬ್ರಾಹಿಂ ಆರೋಪ

    ಇನ್ನು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರೈತ ದಯಾನಂದ ಎಂಬವರಿಗೆ ಸೇರಿದ ಐದು ಎಕರೆ ಮೆಕ್ಕೆಜೋಳ ಜಮೀನು ಕೂಡ ಜಲಾವೃತವಾಗಿದೆ. ಕೈಗೆ ಬಂದಿದ್ದ ಬೆಳೆ ಮಳೆರಾಯನ ಅವಕೃಪೆಯಿಂದ ಹಾನಿಯಾಗಿದೆ. ಅತಿವೃಷ್ಟಿಯಿಂದ ಚಳ್ಳಕೆರೆ ಭಾಗದ ರೈತರಿಗೆ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ರಣ ಮಳೆಗೆ ಕುಸಿದ ಗೋಡೆ – ಇಬ್ಬರು ಮಕ್ಕಳು ಸೇರಿ 7 ಮಂದಿ ದಾರುಣ ಸಾವು

  • 4,500 ಎಕ್ರೆಗೆ ದಾಖಲೆ ಇದೆ, ಅರಮನೆ ಹೆಸರಿಗೆ ಜಮೀನು ಬಂದ್ರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ: ಪ್ರಮೋದಾದೇವಿ ಒಡೆಯರ್

    4,500 ಎಕ್ರೆಗೆ ದಾಖಲೆ ಇದೆ, ಅರಮನೆ ಹೆಸರಿಗೆ ಜಮೀನು ಬಂದ್ರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ: ಪ್ರಮೋದಾದೇವಿ ಒಡೆಯರ್

    – ಗ್ರಾಮಸ್ಥರು ತಮ್ಮ ಬಳಿ ಇರುವ ಗಿಫ್ಟ್ ದಾಖಲೆಯನ್ನ ಅರಮನೆ ಕಚೇರಿಗೆ ತಲುಪಿಸಲಿ

    ಮೈಸೂರು: ಚಾಮರಾಜನಗರದಲ್ಲಿ (Chamarajanagara) 4,500 ಎಕರೆ ಜಮೀನು ಅರಮನೆಗೆ ಸೇರಿದ್ದು ಎಂಬುದಕ್ಕೆ ದಾಖಲೆ ಇದೆ. ಆದ್ರೆ ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ. ಅರಮನೆ ಹೆಸರಿಗೇ ಜಮೀನು ಬಂದರೂ ನಾವು ಅದನ್ನು ಅವರಿಗೇ ಬಿಟ್ಟು ಕೊಡುವ ವ್ಯವಸ್ಥೆ ಮಾಡ್ತಿವಿ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ (Pramoda Devi Wadiyar) ಹೇಳಿದ್ದಾರೆ.

    CNG PRAMODA DEVI LETTER AV 1

    ರಾಜಮನೆತನಕ್ಕೆ (Royal family) ಸೇರಿದ 4,500 ಎಕರೆ ಜಾಗವನ್ನು ರಿಜಿಸ್ಟರ್‌ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಪತ್ರ ಬರೆದಿದ್ದರು. ಈ ವಿಚಾರವಾಗಿ ಸಿದ್ದಯ್ಯನಪುರ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಮೋದಾದೇವಿ ಒಡೆಯರ್‌ಗೆ ನಮ್ಮ ಗ್ರಾಮ ರಿಜಿಸ್ಟರ್‌ ಮಾಡಿಕೊಡಬೇಡಿ ಎಂದು ಡಿಸಿಗೆ ಮನವಿ ಮಾಡಿದ್ದರು. ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಮೋದಾದೇವಿ ಒಡೆಯರ್‌ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.

    ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಧಿಕಾರಿಗೆ 2014 ರಲ್ಲೇ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಡಿಸಿಗೆ ಮಾಹಿತಿ ಇಲ್ಲದೇ ಇರಬಹುದು. ಆದ್ರೆ 1951 ರಲ್ಲಿ ಸರ್ಕಾರದ ಕಾರ್ಯದರ್ಶಿ ಆಗಿದ್ದ ಶ್ರೀನಿವಾಸನ್ ಅವರ ಸಹಿ ಇರುವ ಪತ್ರದಲ್ಲಿ ನಮ್ಮ ಆಸ್ತಿ ಪಟ್ಟಿಯಲ್ಲಿ 4,500 ಎಕ್ರೆಯೂ ಇದೆ. ಅರಮನೆ ಹೆಸರಿಗೆ ಜಮೀನು ಬಂದರೂ ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ. ಗ್ರಾಮಸ್ಥರೊಂದಿಗೆ ಮಾತನಾಡಿ ನಾವು ಅದನ್ನು ಅವರಿಗೇ ಬಿಟ್ಟು ಕೊಡುವ ವ್ಯವಸ್ಥೆ ಮಾಡ್ತಿವಿ ಎಂದು ಹೇಳಿದ್ದಾರೆ.

    pramoda devi wadiyar

    ಆ ಕಾಲದಲ್ಲಿ ಮಹಾರಾಜರು ಜಮೀನು ಗಿಫ್ಟ್ ಕೊಟ್ಟಿದ್ದಾರೆ. ಖಂಡಿತವಾಗಿಯೂ ಅವರನ್ನು ಒಕ್ಕಲೆಬಿಸುವ ಕೆಲಸ ಮಾಡಲ್ಲ. ಗ್ರಾಮಸ್ಥರು ತಮ್ಮ ಬಳಿ ಇರುವ ಗಿಫ್ಟ್ ದಾಖಲೆಯನ್ನು ಅರಮನೆ ಕಚೇರಿಗೆ ತಲುಪಿಸಲಿ. ಈ ವಿಚಾರದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಮಾತನಾಡಲು ಪ್ರಯತ್ನ ಪಟ್ಟೆ. ದೂರವಾಣಿ ಕರೆ ಮಾಡಿದ್ದೆ ಸ್ವೀಕರಿಸಿಲ್ಲ. ಮೇಸೇಜ್‌ಗೂ ರೀಪ್ಲೆ ಮಾಡಿಲ್ಲ. ಗ್ರಾಮಸ್ಥರು ಯಾವುದೇ ಸಂದರ್ಭದಲ್ಲಾದರೂ ಅರಮನೆ ಕಚೇರಿಗೆ ಗಿಫ್ಟ್ ಕೊಟ್ಟಿರುವ ದಾಖಲೆ ಇದ್ದರೆ ಖಂಡಿತ ಕೊಡಿ. ಗ್ರಾಮಸ್ಥರ ಬಳಿ ಗಿಫ್ಟ್ ಕೊಟ್ಟ ದಾಖಲೆ ಇಲ್ಲದಿದ್ದರೂ ಅವರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಭಯ ನೀಡಿದ್ದಾರೆ.

    ಇನ್ನೂ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು. ರಾತ್ರಿ ಸಂಚಾರದ ಅವಶ್ಯಕತೆ ಇಲ್ಲ. ಪ್ರಾಣಿಗಳ ದೃಷ್ಟಿಯಿಂದ ರಾತ್ರಿ ಸಂಚಾರ ಬೇಡ. ಸಂಚಾರಕ್ಕೆ- ಈಗ ಇರುವಷ್ಟು ಅವಧಿಯೇ ಸಾಕು ಎಂದು ಹೇಳಿದ್ದಾರೆ.

  • 5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್‌ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು

    5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್‌ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು

    ಬೆಳಗಾವಿ: ಜಮೀನಿನಲ್ಲಿ ಕಟ್ಟಿದ್ದ ಗೋವುಗಳನ್ನ ರಾತ್ರೋರಾತ್ರಿ ದುರುಳರು ಕದ್ದು ಸಾಗಿಸಿದ ಘಟನೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ನಡೆದಿದೆ.

    ಜ.7ರ ರಾತ್ರಿ ಉಮಾ ಸಂಪಗಾವ ಎಂಬುವವರಿಗೆ ಸೇರಿದ್ದ ಐದು ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಜಮೀನಿನ ಶೆಡ್ ನಲ್ಲಿ ಕಟ್ಟಿದ್ದ ನಾಲ್ಕು ಜರ್ಸಿ ಆಕಳು, ಒಂದು ಆಕಳಿನ ಕರುವನ್ನು ಪಿಕಪ್‌ ವಾಹನದಲ್ಲಿ ಎತ್ತಿಕೊಂಡು ಹೋಗಿದ್ದಾರೆ.

    ತಂದೆ ಇಲ್ಲದ, ಗಂಡನಿಲ್ಲದ ಉಮಾಗೆ ಆಕಳುಗಳು ಆಧಾರ ಸ್ತಂಭವಾಗಿದ್ದವು. ತಂದೆಯ ಆಸ್ತಿಯಲ್ಲಿ ಪಶುಪಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಉಮಾ ಅವರು ಈಗ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ವಕ್ಫ್‌ ವಿರುದ್ಧ ಅನ್ನದಾತರ ಆಕ್ರೋಶ – ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್‌

    ಜ.8 ರ ಮಧ್ಯರಾತ್ರಿ ಆಕಳುಗಳನ್ನು ಪಿಕಪ್‌ ವಾಹನದಲ್ಲಿ ಕದ್ದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಇಟ್ಟುಕೊಂಡು ಸವದತ್ತಿ ಪೊಲೀಸ್ ಠಾಣೆಯಲ್ಲಿ ಉಮಾ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿ ವಾರ ಕಳೆದರೂ ದನಗಳನ್ನ ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ.

    ಸಿಸಿಟಿವಿ ದೃಶ್ಯವನ್ನು ನೀಡಿದಾಗ ಪಿಕ್‌ಅಪ್‌ ವಾಹನಕ್ಕೆ ನಂಬರ್‌ ಇಲ್ಲ ಎಂದು ಹೇಳಿ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ. ದನಗಳನ್ನು ಕಸಾಯಿಖಾನೆಗೆ ಸಾಗಿಸಿರಬಹುದು ಶಂಕೆ ವ್ಯಕ್ತಪಡಿಸುತ್ತಿರುವ ಉಮಾ ಈಗ ಕಂಡಕಂಡವರಲ್ಲಿ ಐದು ಆಕಳುಗಳನ್ನ ಹುಡುಕಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

  • ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ – ರೈತರ ಜಮೀನಿನಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿ, ಟ್ರಾನ್ಸ್‌ಫಾರ್ಮರ್

    ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ – ರೈತರ ಜಮೀನಿನಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿ, ಟ್ರಾನ್ಸ್‌ಫಾರ್ಮರ್

    ಹಾವೇರಿ: ಹೆಸ್ಕಾಂ (HESCOM) ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಹಲವು ರೈತರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು, ಟ್ರಾನ್ಸ್‌ಫಾರ್ಮರ್‌ಗಳು ಕೈಗೆಟಕುವಂತಿವೆ. ಟ್ರಾನ್ಸ್‌ಫಾರ್ಮರ್‌ಗಳಂತೂ ಬಾಗಿ ನೆಲಕ್ಕೆ ಬೀಳುವಂತಿವೆ.

    ಶಿರಬಡಗಿ ಗ್ರಾಮದ ರೈತ ಮುತ್ತನಗೌಡ ಮತ್ತು ಶಿವನಗೌಡ ಎಂಬವರ ಜಮೀನಿನಲ್ಲಿ ಬಾಗಿ ನಿಂತಿರುವ ಟ್ರಾನ್ಸ್‌ಫಾರ್ಮರ್ ಮತ್ತು ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಬೆಳೆಗಳಿಗೆ ತಗುಲಿ ಬೆಳೆಗಳು ಸುಟ್ಟು ಹಾಳಾಗಲಿವೆ. ಅಷ್ಟೇ ಅಲ್ಲದೇ ಜಮೀನಿನಲ್ಲಿ ಕೃಷಿ ಕೆಲಸ ಮಾಡುವ ರೈತರು ಜೋತು ಬಿದ್ದ ವಿದ್ಯುತ್ ತಂತಿಗಳು ಮತ್ತು ಬಾಗಿದ ಟ್ರಾನ್ಸ್‌ಫಾರ್ಮರ್‌ಗಳಿಂದ ಯಾವಾಗ ಏನಾಗುತ್ತದೆಯೋ ಎಂಬ ಜೀವ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ದಂಧೆ ಭೇದಿಸಿದ ಪೊಲೀಸರು – 11 ಮಂದಿ ಅರೆಸ್ಟ್‌

    ಗ್ರಾಮದ ರೈತರು ಮನವಿಗಳ ಮೇಲೆ ಮನವಿಗಳನ್ನು ಸಲ್ಲಿಸಿ ಹೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಅವಘಡಗಳು ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಉಡುಪಿ| ದೈವದ ಕಾರಣಿಕ – 28 ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ

  • ಬೆಳಗಾವಿಯಲ್ಲಿ ಮತ್ತೊಂದು ಘಟನೆ- ಮಹಿಳೆಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ಆರೋಪ

    ಬೆಳಗಾವಿಯಲ್ಲಿ ಮತ್ತೊಂದು ಘಟನೆ- ಮಹಿಳೆಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ಆರೋಪ

    ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಮಹಿಳೆಯನ್ನು ವಿವಸ್ತ್ರಗೊಳಿಸುವ ಜೊತೆಗೆ ಆಕೆಯ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಬೆಳಗಾವಿ (Belagavi) ಜಿಲ್ಲೆಯ ಕಾಗವಾಡದ ಐನಾಪುರ ಗ್ರಾಮದಲ್ಲಿ ಒತ್ತುವರಿ ಪ್ರಶ್ನಿಸಿದ ಬಡ ಕುಟುಂಬದ ಮೇಲೆ ದೌರ್ಜನ್ಯ ಎಸಗಲಾಗಿದೆ. ರಾಮಪ್ಪಗೆ ಎಂಬವರಿಗೆ 1991ರಲ್ಲಿ ಸರ್ಕಾರ 3 ಎಕರೆ ಜಮೀನು ನೀಡಿತ್ತು. ಆ ಬಳಿಕದಿಂದ ರಾಮಪ್ಪ ಇದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಕೆಲ ದಿನಗಳ ಬಳಿಕ ರಾಮಪ್ಪಗೆ ಸೇರಿದ ಜಮೀನಿನ 20 ಗುಂಟೆಯನ್ನು ಒತ್ತುವರಿ ಮಾಡಿದ್ದಾರೆ. ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ, ಮಾಯಪ್ಪ ಹಳ್ಯಾಳ ವಿರುದ್ಧ ಒತ್ತುವರಿ ಆರೋಪ ಕೇಳಿಬಂದಿದೆ.

    ನಮಗೆ ರಾಜಕೀಯ ನಾಯಕರ ಸಂಪರ್ಕ ಇದೆ ಎಂದು ಹೇಳಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಜಮೀನು ಜೊತೆ ರಸ್ತೆಗೆ ಮೀಸಲಿಟ್ಟ ಜಾಗವೂ ಒತ್ತುವರಿ ಮಾಡಿದ್ದಾರೆ. ಈ ಒತ್ತುವರಿ ಪ್ರಶ್ನಿಸಲು ಹೋಗಿದ್ದ ಪತ್ನಿ ಜಯಶ್ರೀ ಜೊತೆಗೆ ಅಸಭ್ಯ ವರ್ತನೆ ತೋರಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸುವ ಜೊತೆಗೆ ವಿವಸ್ತ್ರಗೊಳಿಸಿ ವಿಕೃತಿ ಮೆರೆಯುವುದರ ಜೊತೆಗೆ ಪುತ್ರ ಮುರಾರಿ ಮೇಲೂ ಮಾರಣಾಂತಿಕ ಹಲ್ಲೆಗೈದಿರುವ ಆರೋಪವನ್ನು ರಾಮಪ್ಪ ಮಾಡಿದ್ದಾರೆ. ಇದನ್ನೂ ಓದಿ: ಪಶುಸಂಗೋಪನಾ ಇಲಾಖೆಯ 2 ಎಕರೆ ಜಮೀನು ಅಲ್ಪಸಂಖ್ಯಾತರಿಗೆ – ಸರ್ಕಾರದ ನಡೆಗೆ ವಿರೋಧ

    ಈ ಹಿಂದೆಯೂ ನಡೆದಿತ್ತು ಇಂಥದ್ದೇ ಘಟನೆ: ಎರಡು ತಿಂಗಳ ಹಿಂದೆಯಷ್ಟೇ ಇಂಥದ್ದೇ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿತ್ತು. ಅದುಕೂಡ ಜಮೀನು ವಿಚಾರವಾಗಿತ್ತು. ಜಮೀನು ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಮಹಿಳೆಯ ಮಾವ ಜಮೀನಿನಲ್ಲಿ ಮೇವಿನ ಬಣವಿ ಒಟ್ಟಲು ನೀಡಿದ್ದರು. 6 ಎಕರೆ ಭೂಮಿ ಆಕೆಯ ಮಾವನ ಹೆಸರಿನಲ್ಲಿತ್ತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಈ ಜಮೀನು ಹೊಂದಿದ್ದರು. ಮಹಿಳೆಯನ್ನು ಆರೋಪಿಗಳೆಲ್ಲ ಸೇರಿ ಹೊಡೆದು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು.

  • ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತನ ರುಂಡ ಕತ್ತರಿಸಿದ ದುಷ್ಕರ್ಮಿಗಳು

    ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತನ ರುಂಡ ಕತ್ತರಿಸಿದ ದುಷ್ಕರ್ಮಿಗಳು

    ಗದಗ: ಜಮೀನಿನಲ್ಲಿ (Farm) ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತ ಕಾರ್ಮಿಕನ ತಲೆಯನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋದ ಘಟನೆ ಗದಗ (Gadag) ತಾಲೂಕಿನ ತಿಮ್ಮಾಪೂರ (Thimmapur) ಗ್ರಾಮದ ಜಮೀನಿನಲ್ಲಿ ನಡೆದಿದೆ.

    ಸಣ್ಣ ಹನುಮಪ್ಪ ಅಲಿಯಾಸ್ ಕುಂಟೆಪ್ಪ ವಜ್ರದ್ (65) ಎಂಬ ರೈತ ಕಾರ್ಮಿಕನ ರುಂಡವನ್ನು ಯಾರೋ ಕತ್ತರಿಸಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ದೇಹ ಮಾತ್ರ ಇದ್ದು, ರುಂಡ ಇಲ್ಲ. ಮೃತ ರೈತ ಕಾರ್ಮಿಕ ಕೊಪ್ಪಳ (Koppal) ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ನಿವಾಸಿ. ಈತ ತಿಮ್ಮಾಪೂರ ಗ್ರಾಮದ ಬಾಲಪ್ಪ ಕೊಪ್ಪದ ಎಂಬ ರೈತರ ಜಮೀನಲ್ಲಿ ಬೆಳೆ ಕಾಯುತ್ತಿದ್ದ. ಜಮೀನಿನ ಮಾಲಿಕರು ನಿತ್ಯ ಊಟ ಕೊಟ್ಟು ತಿಂಗಳಿಗೆ 7,000 ರೂ. ಕೊಡುವುದಾಗಿ ಹೇಳಿ ಜಮೀನು ಕಾಯುವಂತೆ ಹೇಳಿದ್ದರು. ಕಳೆದ ಒಂದು ತಿಂಗಳಿನಿಂದ ಮೆಣಸಿನಕಾಯಿ ಕಾಯುತ್ತಿದ್ದ. ಆದರೆ ಬೆಳಗ್ಗೆ ಮಾಲೀಕರು ಬಂದು ನೋಡಿದಾಗ ಕುಂಟೆಪ್ಪನ ರುಂಡ ಇಲ್ಲವಾಗಿದೆ. ಇದನ್ನೂ ಓದಿ: ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ಆರೋಪ; 15 ಮಂದಿ ಐಸಿಸ್ ಶಂಕಿತರ ಬಂಧನ

    ಯಾರು ಕೊಲೆ ಮಾಡಿದ್ದಾರೆ? ಯಾಕೆ ಆಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಕೊಲೆಯ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಸ್ಥಳಕ್ಕೆ ಗದಗ ಎಸ್.ಪಿ ಬಿ.ಎಸ್ ನೇಮಗೌಡ, ಡಿವೈಎಸ್ಪಿ ಸುಂಕದ್ ಹಾಗೂ ಗ್ರಾಮೀಣ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದ ತಂಡ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ರೈತ ಕಾರ್ಮಿಕನ ರುಂಡ ಹಾಗೂ ದುಷ್ಕರ್ಮಿಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ

    ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ. ತಮ್ಮ ಬೆಳೆ ಉಳಿಸಿಕೊಳ್ಳಲು ರೈತರು ಸಾಕಷ್ಟು ಕಷ್ಟ ಪಡುವಂತಾಗಿದೆ. ಆದರೆ ಈ ಘಟನೆಯಿಂದ ರೈತರು ಬೆಚ್ಚಿ ಬಿದ್ದಿದ್ದಾರೆ. ತಮ್ಮ ಬೆಳೆ ಉಳಿಸಿಕೊಳ್ಳಲು ಹಗಲು ರಾತ್ರಿ ಕಾವಲು ಕಾಯಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಬೇಲ್‌ನಲ್ಲಿ ಹೊರಬಂದ ಅತ್ಯಾಚಾರ ಆರೋಪಿ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ – ಬಳಿಕ ಆತ್ಮಹತ್ಯೆ

  • 6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶರತ್

    6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶರತ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಣ್ಣ ತಮ್ಮಂದಿರ ನಡುವೆ ದ್ವೇಷ- ದ್ರಾಕ್ಷಿ ಗಿಡಗಳಿಗೆ ಮಚ್ಚಿನೇಟು

    ಅಣ್ಣ ತಮ್ಮಂದಿರ ನಡುವೆ ದ್ವೇಷ- ದ್ರಾಕ್ಷಿ ಗಿಡಗಳಿಗೆ ಮಚ್ಚಿನೇಟು

    ಚಿಕ್ಕಬಳ್ಳಾಪುರ: ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬಂತೆ ಅಣ್ಣ, ತಮ್ಮಂದಿರ ನಡುವಿನ ಜಮೀನು ವಿವಾದದ ದ್ವೇಷಕ್ಕೆ 150ಕ್ಕೂ ಹೆಚ್ಚು ದ್ರಾಕ್ಷಿ ಗಿಡಗಳನ್ನು (Grapes) ಮಚ್ಚಿನಿಂದ ಕೊಚ್ಚಿ ಕಟಾವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ನಾರಾಯಣರೆಡ್ಡಿ ಹಾಗೂ ನಾಗರಾಜ್ ನಡುವೆ ಪಿತ್ರಾರ್ಜಿತ ಆಸ್ತಿ ಸಂಬಂಧ ಜಮೀನು ವಿವಾದವಿದ್ದು, ವಿವಾದಿತ ಜಮೀನಿನಲ್ಲಿ ನಾರಾಯಣರೆಡ್ಡಿ ಬೆಳೆಸಿರುವ 150ಕ್ಕೂ ದ್ರಾಕ್ಷಿ ಗಿಡಗಳನ್ನು ಮಚ್ಚಿನಿಂದ ಬುಡದಲ್ಲಿ ಕೊಚ್ಚಿ ಇಡೀ ಗಿಡವನ್ನು ಸಂಪೂರ್ಣವಾಗಿ ನಾಶವಾಗುವಂತೆ ಮಾಡಲಾಗಿದೆ.

    ಈ ಸಂಬಂಧ ರೈತ ನಾರಾಯಯಣರೆಡ್ಡಿ ಸಹೋದರ ನಾಗರಾಜ್ ಹಾಗೂ ಆತನ ಮಗ ಮನೋಜ್ ವಿರುದ್ಧ ನಾಶ ಮಾಡಿದ ಆರೋಪ ಹೊರಿಸಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಹಲವು ಜಿಲ್ಲೆಗಳಲ್ಲಿ ಬೃಹತ್ ಕಾರ್ಯಕ್ರಮದಲ್ಲಿ `ಸಿದ್ದು ನಿಜಕನಸುಗಳು’ ಕೃತಿ ಬಿಡುಗಡೆಗೆ ಪ್ಲಾನ್?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಮೀನು ವಿವಾದ- ಮಾತುಕತೆಗೆ ಬಂದಾತನ ಕಾಲಿಗೆ ಗುಂಡು ಹೊಡೆದ ರೈತ ಸಂಘದ ಜಿಲ್ಲಾಧ್ಯಕ್ಷ

    ಜಮೀನು ವಿವಾದ- ಮಾತುಕತೆಗೆ ಬಂದಾತನ ಕಾಲಿಗೆ ಗುಂಡು ಹೊಡೆದ ರೈತ ಸಂಘದ ಜಿಲ್ಲಾಧ್ಯಕ್ಷ

    ಚಿಕ್ಕಮಗಳೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಮಾತುಕತೆಗೆ ತೆರಳಿದ್ದವರ ಮೇಲೆ ರೈತ ಸಂಘದ ಜಿಲ್ಲಾಧ್ಯಕ್ಷ ಶೂಟ್ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಾಲಿಗೆ ಗುಂಡು ತಾಗಿದ ವ್ಯಕ್ತಿಯನ್ನು ನಾರಾಯಣ್ ರಾಜ್ ಎಂದು ಗುರುತಿಸಲಾಗಿದೆ. ಮಾಕೋನಹಳ್ಳಿ ಗ್ರಾಮದ ರೈತ (Farmer) ಸಂಘದ ದುಗ್ಗಪ್ಪಗೌಡ ಹಾಗೂ ಮಂಚೇಗೌಡ ನಡುವೆ ಜಮೀನು ವಿವಾದವಿದ್ದು, ಮಂಚೇಗೌಡ ತಮ್ಮ ಜಮೀನನ್ನು ಮನೋಜ್ ಎಂಬವರಿಗೆ ಮಾರಾಟ ಮಾಡಿದ್ದರು. ಮಂಚೇಗೌಡ ಅವರ ಜಮೀನು (Land) ಖರೀದಿಸಿದ ಮನೋಜ್ ಜಮೀನಿನ ಸರ್ವೇ ಕಾರ್ಯ ಮುಗಿಸಿದ್ದರು. ಈ ವೇಳೆ ಮನೋಜ್ ಖರೀದಿಸಿದ ಜಾಗವನ್ನು ದುಗ್ಗಪ್ಪಗೌಡ ಅವರು ಒತ್ತುವರಿ ಮಾಡಿ ಮನೆ ಕಟ್ಟಿದ್ದರು ಎಂದು ಹೇಳಲಾಗಿದೆ.

    crime

    ಹಾಗಾಗಿ, ಜಮೀನು ಖರೀದಿಸಿದ ಮನೋಜ್ ಹಾಗೂ ಅದೇ ಜಮೀನು ಪಕ್ಕದಲ್ಲಿದ್ದ ದುಗ್ಗಪ್ಪಗೌಡರಿಗೆ ಜಮೀನು ವಿವಾದ ಕೂಡ ಇತ್ತು. ಈ ಬಗ್ಗೆ ಮಾತನಾಡಲು ದುಗ್ಗಪ್ಪಗೌಡ ಅವರ ಮನೆ ಬಳಿ ಹೋದಾಗ ಮಹಡಿ ಮೇಲೆ ನಿಂತಿದ್ದ ದುಗ್ಗಪ್ಪಗೌಡ ಕೋವಿಯಿಂದ ಮಾತುಕತೆಗೆ ಬಂದವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ನಾರಾಯಣ್‍ರಾಜ್ ಎಂಬುವರ ಕಾಲಿಗೆ ಗುಂಡು ತಗುಲಿದ್ದು, ಕೂಡಲೇ ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಕುಂಭ ಕಳಶ ಹೊತ್ತು ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ ಶಶಿಕಲಾ ಜೊಲ್ಲೆ

    ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ಮೂಡಿಗೆರೆ ಪೊಲೀಸರು ರೈತ ಸಂಘದ ಅಧ್ಯಕ್ಷ ದುಗ್ಗಪ್ಪಗೌಡರನ್ನು ಬಂಧಿಸಿದ್ದಾರೆ. ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗುಂಡು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾರಾಯಣ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದನ್ನೂ ಓದಿ: ನಿದ್ದೆಯಿಂದ ಎದ್ದೇಳಿ- ಬೊಮ್ಮಾಯಿಯವರನ್ನು ಕುಂಭಕರ್ಣನಿಗೆ ಹೋಲಿಸಿ, 150ನೇ ದಿನದ ಏಮ್ಸ್ ಹೋರಾಟ

    Live Tv
    [brid partner=56869869 player=32851 video=960834 autoplay=true]