Tag: ಜಮಾತ್ ಉಲೇಮಾ ಟ್ರಸ್ಟ್

  • ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?

    ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?

    ಬೆಂಗಳೂರು: ರಾಜ್ಯದಲ್ಲಿ ಹುಟ್ಟಿಕೊಂಡ ಹಿಜಬ್ ವಿವಾದ ಬಳಿಕ ಹಿಂದೂಗಳು ಮತ್ತು ಮುಸ್ಲಿಂರ ನಡುವೆ ಒಂದಲ್ಲ ಒಂದು ವಿವಾದಗಳು ಭುಗಿಲೆಳುತ್ತಿದೆ. ಇದೀಗ ರಾಜ್ಯದಲ್ಲಿ ಹಲಾಲ್ ಬಗ್ಗೆ ಹಿಂದೂ ಸಂಘಟನೆಗಳು ರೊಚ್ಚಿಗೇಳಲು ಆ ಒಂದು ಘಟನೆ ಕಾರಣ ಎಂಬ ವಿಷಯ ಇದೀಗ ಬಹಿರಂಗವಾಗಿದೆ.

    ಹಿಜಬ್ ವಿವಾದಗಳ ಬಳಿಕ ಹಿಂದೂಗಳ ಜಾತ್ರೆಯಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ಬಹಿಷ್ಕಾರ ಹಾಕಲಾಯಿತು. ಆ ಬಳಿಕ ಇದೀಗ ಹಲಾಲ್ ಕುರಿತಾಗಿ ಹಿಂದೂ ಸಂಘಟನೆಗಳು ಗಂಭೀರ ಆರೋಪ ಮಾಡುತ್ತಿದ್ದು, ಹಿಜಬ್-ಹಲಾಲ್ ವಿವಾದಕ್ಕೆ ಲಿಂಕ್ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಮುಸ್ಲಿಂ ಶಿಲ್ಪಿಗಳನ್ನು ಯಾವಾಗ ಬಹಿಷ್ಕರಿಸುತ್ತೀರಿ: ಹೆಚ್‌ಡಿಕೆ ಪ್ರಶ್ನೆ

    ಜಮಾತ್ ಉಲೇಮಾ ಟ್ರಸ್ಟ್ ಹಲಾಲ್ ಪ್ರಮಾಣಪತ್ರ ನೀಡುತ್ತಿದೆ. ಹಿಂದಿನಿಂದಲೂ ಈ ಸಂಸ್ಥೆ ಪ್ರಮಾಣಪತ್ರ ನೀಡುತ್ತಿದ್ದರೂ ಇಲ್ಲಿಯವರೆಗೆ ಅದು ದೊಡ್ಡ ಸುದ್ದಿಯಾಗಿರಲಿಲ್ಲ. ಹಲಾಲ್ ಬಗ್ಗೆ ಹಿಂದೆಯೂ ಧ್ವನಿ ಎತ್ತಲಾಗಿದ್ದರೂ ಕರ್ನಾಟಕದಲ್ಲಿ ಅಷ್ಟೊಂದು ಚರ್ಚೆ ಆಗಿರಲಿಲ್ಲ. ಆದರೆ ಹಿಜಬ್ ವಿವಾದದಲ್ಲಿ ಈ ಸಂಸ್ಥೆ ನೀಡಿದ ನಗದು ಬಹುಮಾನ ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.

    ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಕ್ಕಾಗಿ ಜಮಾತ್ ಉಲೇಮಾ ಟ್ರಸ್ಟ್ 5 ಲಕ್ಷ ರೂ. ಹಣ ಘೋಷಿಸಿತ್ತು. ಅಷ್ಟೇ ಅಲ್ಲದೇ ಸಿಎಎ ಪ್ರತಿಭಟನೆಯ ವೇಳೆಯೂ ಜಮಾತ್ ಉಲೇಮಾ ಟ್ರಸ್ಟ್ ಮುಸ್ಲಿಂ ಸಮುದಾಯದವರಿಗೆ ಹಣ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಹಲಾಲ್ ಸರ್ಟಿಫಿಕೇಟ್ ಪಡೆಯಲು ನೀಡಿದ ಹಣವನ್ನೇ ಈ ಸಂಸ್ಥೆ ಬಳಸಿಕೊಂಡಿದೆ ಎನ್ನುವುದು ಹಿಂದೂ ಸಂಘಟನೆಗಳ ಆರೋಪ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ʼಮಾಫಿಯಾʼ ಹಿಡಿತದಲ್ಲಿ ಬಂಗಾಳ: ಬಿಜೆಪಿ ವರದಿ

    ಭಾರತ ಜಾತ್ಯಾತೀತ ರಾಷ್ಟ್ರ ಎಂದು ಸಂವಿಧಾನ ಹೇಳುತ್ತಿದೆ. ಹಿಜಬ್ ಹೋರಾಟದ ಸಮಯದಲ್ಲೂ ಮುಸ್ಲಿಂ ಸಂಘಟನೆಗಳು ನಮ್ಮದು ಜಾತ್ಯಾತೀತ ರಾಷ್ಟ್ರ, ಹಿಂದೂ ರಾಷ್ಟ್ರವಲ್ಲ ಎಂದು ಹೇಳಿದ್ದವು. ಹೀಗಿರುವಾಗ ಆಹಾರದಲ್ಲಿ ಜಾತಿ ಸಂಸ್ಥೆಯ ಪ್ರಮಾಣಪತ್ರ ಯಾಕೆ ಎನ್ನುವುದು ಹಿಂದೂ ಸಂಘಟನೆಗಳ ಪ್ರಶ್ನೆ. ಈ ಕಾರಣಕ್ಕೆ ರಾಜ್ಯಾದ್ಯಂತ ಹಲಾಲ್ ಮಾಂಸ ಖರೀದಿಸದಂತೆ ಹಿಂದೂ ಸಂಘಟನೆಗಳು ಹಿಂದೂ ಬಾಂಧವರಲ್ಲಿ ಮನವಿ ಮಾಡಿಕೊಳ್ಳುತ್ತಿದೆ. ಅಲ್ಲದೆ ಹಿಂದವೀ ಜಟ್ಕಾ ಕಟ್ ಚಿಕನ್ ಸೆಂಟರ್ ಓಪನ್ ಮಾಡಲು ಹಿಂದೂ ಸಂಘಟನೆಗಳು ತಿರ್ಮಾನಿಸಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಂಡ್ಯ ಸೇರಿ ರಾಜ್ಯದ ಹಲವೆಡೆ ಹಲಾಲ್ ಮಾಂಸ ಖರೀದಿಸದಂತೆ ಅಭಿಯಾನ ಅಭಿಯಾನ ಆರಂಭವಾಗಿದೆ.

    ಬೆಂಗಳೂರಿನಲ್ಲಿ ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳು ನೂತನ ಅಭಿಯಾನ ಆರಂಭಿಸಿದ್ದು, ಹಿಂದವೀ ಮಾರ್ಟ್‍ನಲ್ಲಿ ಮಾಂಸ ಖರೀದಿಗೆ ಆಫರ್ ನೀಡಿ ಗ್ರಾಹಕರನ್ನು ಬರಮಾಡಿಕೊಂಡಿದ್ದಾರೆ. 5 ಕಿಮೀ ವ್ಯಾಪ್ತಿಯಲ್ಲಿ ಫ್ರೀ ಡೆಲಿವರಿ. 5 ಕಿಮೀ ದಾಟಿಹೋದ್ರೆ 50 ರೂ. ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾಗಿದೆ. ಇದರೊಂದಿಗೆ ಮಾರುಕಟ್ಟೆಗಿಂತ 50 ರೂ. ಕಡಿಮೆ ದರದಲ್ಲಿ ಮಾಂಸ ಮಾರಾಟ ಮಾಡಲು ಹಿಂದವೀ ಮಾರ್ಟ್ ಮುಂದಾಗಿದೆ. ಹಲಾಲ್‍ಗೆ ಪ್ರತಿಯಾಗಿ ಹಿಂದೂ ಜಟ್ಕಾ ಕಟ್ ಶಾಪ್ ಓಪನ್ ಮಾಡಲು ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ: ಶಂಕರಣ್ಣ@45: ಹೀಗೊಂದು ಸುದ್ದಿ ನಿಜನಾ?