Tag: ಜಮಖಂಡಿ

  • ಮದ್ವೆ ಇತರೆ ಕೆಲಸಗಳಿಗೆ ಹೊರಟ್ಟಿದ್ದ 20 ಕ್ರೂಸರ್ ವಶಕ್ಕೆ ಪಡೆದ RTO ಅಧಿಕಾರಿಗಳು!

    ಮದ್ವೆ ಇತರೆ ಕೆಲಸಗಳಿಗೆ ಹೊರಟ್ಟಿದ್ದ 20 ಕ್ರೂಸರ್ ವಶಕ್ಕೆ ಪಡೆದ RTO ಅಧಿಕಾರಿಗಳು!

    ಬಾಗಲಕೋಟೆ: ಮದುವೆ ಹಾಗು ಇತರೆ ಶುಭ ಸಮಾರಂಭಗಳಿಗೆ ತೆರಳುತ್ತಿದ್ದ ಖಾಸಗಿ ವಾಹನಗಳನ್ನು ಆರ್ ಟಿಓ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.

    ಜಿಲ್ಲೆಯ ಜಮಖಂಡಿ ಆರ್ ಟಿಓ ಅಧಿಕಾರಿಗಳು ಮದುವೆ ಹಾಗು ಇನ್ನಿತರ ಶುಭ ಸಮಾರಂಭಗಳಿಗೆ ತೆರಳುತ್ತಿದ್ದ 20 ಕ್ರೂಸರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ವಾಹನಗಳನ್ನು ವಶಪಡಿಸಿಕೊಂಡ ಬಳಿಕ ಪೊಲೀಸ್ ಠಾಣೆಯ ಮುಂದೆ ಮಹಿಳೆಯರು ಸೇರಿದಂತೆ 150 ಜನರು ಎರಡು ಗಂಟೆಗಳ ಕಾಲ ನಿಲ್ಲುವಂತಾಯ್ತು.

    ಕೊನೆಗೆ ಅಧಿಕಾರಿಗಳು ವಾಹನಗಳು ಚುನಾವಣೆ ಉದ್ದೇಶಕ್ಕಾಗಿ ಬಳಕೆ ಆಗ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕ ಕಳುಹಿಸಲಾಯ್ತು. ಆದ್ರೆ ಅಧಿಕಾರಿಗಳು ನಮ್ಮ ವಾಹನಗಳನ್ನು ವಶಪಡಿಸಿಕೊಂಡಿದ್ದರಿಂದ ತಲುಪಬೇಕಿದ್ದ ಸ್ಥಳಕ್ಕೆ ತಡವಾಗಿದೆ ಅಂತಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ರು.

  • ಮಹಿಳೆಯೊಬ್ಬರ ಜೊತೆ ಸರಸ ಸಲ್ಲಾಪ? ಶಾಸಕ ಸಿದ್ದು ನ್ಯಾಮಗೌಡಗೆ ಸೇರಿದ್ದು ಎನ್ನಲಾದ ಆಡಿಯೋ ವೈರಲ್!

    ಮಹಿಳೆಯೊಬ್ಬರ ಜೊತೆ ಸರಸ ಸಲ್ಲಾಪ? ಶಾಸಕ ಸಿದ್ದು ನ್ಯಾಮಗೌಡಗೆ ಸೇರಿದ್ದು ಎನ್ನಲಾದ ಆಡಿಯೋ ವೈರಲ್!

    ಬಾಗಲಕೋಟೆ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರು ಮಾತನಾಡಿದ್ದಾರೆ ಎನ್ನಲಾಗಿರುವ ಮೊಬೈಲ್ ಆಡಿಯೋ ಒಂದು ಹೊರಬಿದ್ದಿದ್ದು, ಸಖತ್ ವೈರಲ್ ಆಗಿದೆ.

    ಈ ಆಡಿಯೋದಲ್ಲಿ ಇರುವ ವ್ಯಕ್ತಿಯ ಧ್ವನಿ ಶಾಸಕ ಸಿದ್ದು ನ್ಯಾಮಗೌಡ ಅವರ ಧ್ವನಿಗೆ ಹೋಲಿಕೆ ಇದ್ದು, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಜೊತೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಸಂಭಾಷಣೆಯಲ್ಲಿ ಮಹಿಳೆ ಹಾಗೂ ವ್ಯಕ್ತಿಯ ನಡುವೆ ನಿಕಟ ಪರಿಚಯ ಇರುವುದು ಸ್ಪಷ್ಟವಾಗುತ್ತದೆ.

    21 ನಿಮಿಷವಿರುವ ಆಡಿಯೋದಲ್ಲಿ ಮಹಿಳೆಯೊಂದಿಗೆ ಸರಸ ಸಲ್ಲಾಪ ನಡೆಸಿದ್ದಾರೆ. ಇನ್ನು ಮಹಿಳೆಗೆ ನಿನ್ನನ್ನು ನಗರಸಭೆ ಅಧ್ಯಕ್ಷೆಯನ್ನಾಗಿ ಮಾಡುತ್ತೇನೆ ಎಂದು ಪುಸಲಾಯಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆಯೇ ಆಡಿಯೋ ಬಿಡುಗಡೆಯಾಗಿದ್ದು, ಕ್ಷೇತ್ರದ ಎಲ್ಲೆಡೆ ವೈರಲ್ ಆಗಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ನ್ಯಾಮಗೌಡ, ಚುನಾವಣೆ ಸಮೀಪವಾಗುತ್ತಿದಂತೆ ನನ್ನ ವಿರುದ್ಧ ಅಪಪ್ರಚಾರ ನಡೆಲು ಇಂತಹ ನಕಲಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್‍ಪಿ ಅವರಿಗೆ ಈಗಾಗಲೇ ದೂರು ನೀಡಿದ್ದೇನೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    https://www.youtube.com/watch?v=9tl4el4G4-4

  • ಬಾಗಲಕೋಟೆ: ಅಕ್ರಮ ಕಸಾಯಿಖಾನೆ ತೆರೆದು ಗೋವುಗಳ ಮಾರಣಹೋಮ

    ಬಾಗಲಕೋಟೆ: ಅಕ್ರಮ ಕಸಾಯಿಖಾನೆ ತೆರೆದು ಗೋವುಗಳ ಮಾರಣಹೋಮ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಪಟ್ಟಣದ ಕಟಾಪೆ ಪ್ಲಾಟ್‍ನಲ್ಲಿ ಗೋಹತ್ಯೆ ನಡೆದಿರೋದು ಬೆಳಕಿಗೆ ನಡೆದಿದೆ.

    ಬೇಪಾರಿ ಜನಾಂಗದವರು ಅಕ್ರಮ ಕಸಾಯಿಖಾನೆ ತೆರೆದು ಗೋಹತ್ಯೆ ಮಾಡಿದ್ದಾರೆಂದು ಆರೋಪಗಳು ಕೇಳಿಬಂದಿವೆ. ಕಸಾಯಿಖಾನೆಯಲ್ಲಿ ಈಗಾಗಲೇ ಐದು ಗೋವು ಹಾಗು ಒಂದು ಎಮ್ಮೆ ಕೊಲ್ಲಲ್ಪಟ್ಟಿವೆ. ಕಸಾಯಿಖಾನೆಯಲ್ಲಿದ್ದ 19 ಆಕಳುಗಳನ್ನು ರಕ್ಷಣೆ ಮಾಡಲಾಗಿದೆ.

    ವಿಷಯ ತಿಳಿದು ಸ್ಥಳಕ್ಕೆ ಜಮಖಂಡಿ ಕಮಿಷನರ್ ಜೆ.ಎಚ್.ಕಾಸೆ, ಸಿಪಿಐ ಸುನಿಲ್ ಕುಮಾರ್ ನಂದೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಅಧಿಕಾರಿಗಳು ಸ್ಥಳಕ್ಕಾಗಮಿಸುತ್ತಿದ್ದಂತೆ ಗೋವುಗಳ ಹತ್ಯೆ ಮಾಡಿದ್ದಾರೆ ಎನ್ನಲಾದ ಬೇಪಾರಿ ಜನಾಂಗದವರು ಪರಾರಿಯಾಗಿದ್ದಾರೆ.

     

  • ಸಂಬಳದ ಅರ್ಧ ದುಡ್ಡು ಶಾಲೆಯ ಅಭಿವೃದ್ಧಿಗೆ ಮೀಸಲು- ಬಾಗಲಕೋಟೆಯ ಶಿಕ್ಷಕ ದಂಪತಿ ನಮ್ಮ ಪಬ್ಲಿಕ್ ಹೀರೋ

    ಸಂಬಳದ ಅರ್ಧ ದುಡ್ಡು ಶಾಲೆಯ ಅಭಿವೃದ್ಧಿಗೆ ಮೀಸಲು- ಬಾಗಲಕೋಟೆಯ ಶಿಕ್ಷಕ ದಂಪತಿ ನಮ್ಮ ಪಬ್ಲಿಕ್ ಹೀರೋ

    ಬಾಗಲಕೋಟೆ: ಸ್ಕೂಲ್‍ಗೆ ಬಂದು ಪಾಠ ಮಾಡಿದ ಮೇಲೆ ನಮಗ್ಯಾಕಪ್ಪಾ ಬೇರೆ ವಿಷಯ ಅನ್ನೋ ಶಿಕ್ಷಕರಿಗೆಲ್ಲ ಮಾದರಿಯಾಗುವ ಶಿಕ್ಷಕ ದಂಪತಿ ಬಾಗಲಕೋಟೆಯಲ್ಲಿದಾರೆ.ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಂಪತಿ ಎ.ಎಫ್ ಹೂಲಿ ಹಾಗೂ ದೀಪಾ ಮಳಲಿ ನಮ್ಮ ಪಬ್ಲಿಕ್ ಹೀರೋಗಳು.

    ಸತತ ಆರು ವರ್ಷಗಳಿಂದ ಹೂಲಿ ದಂಪತಿ ತಮ್ಮ ಸಂಬಳದ ಅರ್ಧ ಭಾಗವನ್ನು ಶಾಲೆಯ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದಾರೆ. ಶಾಲೆಯಲ್ಲಿ ಹಸಿರು ಕಾಣುವಂತೆ ಮಾಡಿದ್ದಾರೆ. ಇನ್ನು ಶಾಲೆಯ ಆವರಣದಲ್ಲಿ ಸರ್ವಧರ್ಮ ಸಮಾನತೆ ಸಾರುವ ಭವನವಿದೆ. ಈ ಭವನದಲ್ಲಿ ಅಲ್ಲಾ, ರಾಮ್, ರಹೀಮ್ ಎಲ್ಲರೂ ಇದ್ದಾರೆ. ಇಲ್ಲಿನ ಮಕ್ಕಳು ಅಷ್ಟೇ ಪ್ರೀತಿ, ಸಹಬಾಳ್ವೆಯಿಂದ ಪಾಠ ಕಲಿಯುತ್ತಿದ್ದಾರೆ ಮತ್ತು ಆಟವಾಡಿ ನಲಿಯುತ್ತಾರೆ.

    ಹೂಲಿ ದಂಪತಿ ಬಂದ ಮೇಲೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಓದಿನ ಜೊತೆ ಮಕ್ಕಳಿಗೆ ಸಾಮನ್ಯ ಜ್ಞಾನ, ಕಂಪ್ಯೂಟರ್ ಶಿಕ್ಷಣ, ಇಂಗ್ಲೀಷ್ ಕಲಿಕೆ, ನೀತಿ ಬೋಧನೆ, ಸರ್ವಧರ್ಮ ಸಮನ್ವಯತೆ ಹೀಗೆ ಎಲ್ಲದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಎಲ್ಲರೂ ಸಂಬಳಕ್ಕಾಗಿ ಕೆಲಸ ಮಾಡಿದರೆ ಈ ಶಿಕ್ಷಕ ದಂಪತಿಯ ನಿಸ್ವಾರ್ಥ ಸೇವೆಗೆ ಅಭಿನಂದನೆಯನ್ನು ಸಲ್ಲಿಸಬೇಕು.

    https://www.youtube.com/watch?v=hR6q1wBT800

     

  • ವ್ಯಕ್ತಿ ಹುಟ್ಟುವ 11 ವರ್ಷಗಳ ಮುನ್ನವೇ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿ ನಮೂದು

    ವ್ಯಕ್ತಿ ಹುಟ್ಟುವ 11 ವರ್ಷಗಳ ಮುನ್ನವೇ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿ ನಮೂದು

    ಬಾಗಲಕೋಟೆ: ವ್ಯಕ್ತಿಯೊಬ್ಬರು ಹುಟ್ಟುವ 11 ವರ್ಷಗಳ ಮುನ್ನವೇ ಅವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ನಮೂದಾಗಿರುವ ಪ್ರಕರಣ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.

    ನಜೀರ್ ಅಹ್ಮದ್ ಕಂಗನೊಳ್ಳಿ ಎಂಬವರ ಹೆಸರಲ್ಲಿ ಕೋಟ್ಯಾಂತರ ರೂ. ಬೆಲೆಬಾಳುವ ಸೈಟ್ ನಮೂದಾಗಿದೆ. ನಜೀರ್ ಅವರು ಸದ್ಯ ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಭ್ರಷ್ಟ ರಾಜಕಾರಣಿಯ ದರ್ಬಾರೋ ಗೊತ್ತಿಲ್ಲ ನಜೀರ್ ಅವರ ಹೆಸರಲ್ಲಿ ಮಾತ್ರ ಸೈಟ್ ನಮೂದಾಗಿದೆ.

    ನಜೀರ್ ಅವರು ಹುಟ್ಟಿದ್ದು ಜನವರಿ 6, 1974ರಲ್ಲಿ, ಆದರೆ 1963 ರಲ್ಲಿ ಅಂದ್ರೆ ಇವರು ಹುಟ್ಟುವ 11 ವರ್ಷ ಮೊದಲೇ ಇವರ ಹೆಸ್ರಲ್ಲಿ ಜಮಖಂಡಿ ನಗರಸಭೆಯ ಅಧೀನದಲ್ಲಿದ್ದ 279 ಸ್ಕ್ವೇರ್ ಮೀಟರ್ ಆಸ್ತಿ ನಮೂದಾಗಿದೆ. ಸಿಟಿ ಸರ್ವೇ ನಂಬರ್ 4618/01 ಆಸ್ತಿ ಇದಾಗಿದೆ. ನಜೀರ್ ಕಂಗನೊಳ್ಳಿ ತಮ್ಮ ಪ್ರಭಾವ ಬಳಸಿಕೊಂಡು ಬೆಲೆಬಾಳುವ ಸರ್ಕಾರಿ ಜಾಗ ಕೊಳ್ಳೆ ಹೊಡೆಯಲು ಮುಂದಾಗಿದ್ದಾರೆ ಎಂದು ಜಮಖಂಡಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಆರೋಪಿಸಿದ್ದಾರೆ.

    ಮಾಜಿ ಶಾಸಕರ ಆರೋಪದಲ್ಲಿ ಹುರುಳಿಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ. ನಗರಸಭೆಯಿಂದ 2000ರಲ್ಲಿ ರಾಜೀವ್ ಗಾಂಧಿ ಮೀನುಗಾರಿಕೆ ಸಹಕಾರಿ ಸಂಘಕ್ಕೆ ಸೈಟನ್ನು ಖರೀದಿಸಲಾಗಿದೆ. ಸ್ವಂತಕ್ಕಾಗಿ ಖರೀದಿ ಮಾಡಿಲ್ಲ ಎಂದು ನಜೀರ್ ಅಹ್ಮದ್ ಹೇಳಿದ್ದಾರೆ.

    ನಜೀರ್ ಅಹ್ಮದ್ ಕಂಗನೊಳ್ಳಿ

    ನಗರಸಭೆಯ ಆಸ್ತಿಯ ಅಕ್ರಮ ಪರಭಾರೆ ವಿಚಾರದ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡ್ತಿದ್ದಾರೆ. ಆದರೆ ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.