Tag: ಜಮಖಂಡಿ

  • ದೇಶ ಕಾಯೋ ಯೋಧನಿಂದಲೇ ಕೊಲೆ –  ಡೀಸೆಲ್‌ ಸುರಿದು ಸಹೋದರನ ಹತ್ಯೆಗೈದ ಮೂವರು ಅರೆಸ್ಟ್

    ದೇಶ ಕಾಯೋ ಯೋಧನಿಂದಲೇ ಕೊಲೆ – ಡೀಸೆಲ್‌ ಸುರಿದು ಸಹೋದರನ ಹತ್ಯೆಗೈದ ಮೂವರು ಅರೆಸ್ಟ್

    ಬಾಗಲಕೋಟೆ: ಕುಡುಕ ಸಹೋದರನನ್ನು ಡೀಸೆಲ್‌ ಹಾಕಿ ದೇಶ ಕಾಯುವ ಯೋಧನೇ ಕೊಲೆ ಮಾಡಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಜಮಖಂಡಿ (Jamakhandi) ತಾಲ್ಲೂಕಿನ ಬಿದರಿ (Bidari) ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.

    ಅನಿಲ್ ಪರಪ್ಪ ಕಾನಟ್ಟಿ(32) ಮೃತ ವ್ಯಕ್ತಿ. ಕುಡಿದ ಮತ್ತಲ್ಲಿ ನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದ. ಹೀಗಾಗಿ ಸಹೋದರ ಯೋಧ ಬಸವರಾಜ ಕಾನಟ್ಟಿ, ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಕಾನಟ್ಟಿ ಮೂವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ

    ಸೆ.5ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಹೋದರ ಬಸವರಾಜ ಕಾನಟ್ಟಿ ಯೋಧನಾಗಿದ್ದು, ರಜೆ ಮೇಲೆ ಊರಿಗೆ ಬಂದಿದ್ದ. ಈ ವೇಳೆ ಕುಡುಕ ಸಹೋದರನ ಗಲಾಟೆ ತಾಳಲಾರದೆ ಈ ಕೃತ್ಯ ಎಸಗಿದ್ದಾರೆ. ಸಹೋದರ, ತಂದೆ ಹಾಗೂ ತಾಯಿ ಮೂವರು ಸೇರಿಕೊಂಡು ಡೀಸೆಲ್‌ ಸುರಿದು ಸುಟ್ಟು ಹಾಕಿ, ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತದ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

  • ಉಕ್ಕಿ ಹರಿಯುತ್ತಿದ್ದಾಳೆ ಕೃಷ್ಣೆ – ಕುಡಚಿಯ ಬೃಹತ್‌ ಸೇತುವೆ ಮುಳುಗಡೆ

    ಉಕ್ಕಿ ಹರಿಯುತ್ತಿದ್ದಾಳೆ ಕೃಷ್ಣೆ – ಕುಡಚಿಯ ಬೃಹತ್‌ ಸೇತುವೆ ಮುಳುಗಡೆ

    ಬೆಳಗಾವಿ: ಕೃಷ್ಣ ನದಿಯ (Krishna River) ಆರ್ಭಟಕ್ಕೆ ಕುಡಚಿ (Kudachi) ಉಗಾರಖುರ್ದ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ (Jamkhandi Miraj State Highway) ಸಂಪರ್ಕ ಸ್ಥಗಿತವಾಗಿದೆ.

    ರಾಯಭಾಗ ತಾಲೂಕಿನಲ್ಲಿರುವ ಬೃಹತ್‌ ಕುಡಚಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದರಿಂದ ಕರ್ನಾಟಕ (Karnataka0 ಮತ್ತು ಮಹಾರಾಷ್ಟ್ರದ (Maharashtra) ಸಂಪರ್ಕ ಕಡಿತಗೊಂಡಿದೆ.

    ನಿತ್ಯ ಸಾವಿರಾರು ವಾಹನಗಳು ಓಡಾಡುವ ಪ್ರಮುಖ ಹೆದ್ದಾರಿ ಇದಾಗಿದ್ದು ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ಸಂಚಾರ ಬಂದ್‌ ಮಾಡಿದ್ದಾರೆ.  ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್‌

    ಸದ್ಯ ಕೃಷ್ಣೆಯಲ್ಲಿ 1.50 ಲಕ್ಷ ಕ್ಯೂಸೆಕ್‌ ಒಳಹರಿವು ಇದ್ದು ಮಹಾರಾಷ್ಟ್ರ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕ್ಷಣ ಕ್ಷಣಕ್ಕೂ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ.

    ದುರ್ಗಾದೇವಿ ದೇವಸ್ಥಾನ ಜಲಾವೃತ
    ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರದಿಂದ ಹೀರಣ್ಯಕೇಶಿ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು ಘಟಪ್ರಭಾ ನದಿ ತೀರದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

    ಹಿಡಕಲ್ ಜಲಾಶಯದಿಂದ 50 ಸಾವಿರಕ್ಕಿಂತ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಕೊಟಬಾಗಿ ಗ್ರಾಮದ ಶಕ್ತಿ ಪೀಠ ದುರ್ಗಾದೇವಿ ದೇವಸ್ಥಾನ ಜಲಾವೃತಗೊಂಡಿದೆ. ಮತ್ತಷ್ಟು ನೀರು ಬಿಡುಗಡೆಯಾದರೆ ಕೊಟಬಾಗಿ ಗ್ರಾಮದ ಒಳಗೆ ನೀರು ನುಗ್ಗುವ ಸಾಧ್ಯತೆಯಿದೆ.

     

  • ಕಬ್ಬಿನ ಬಿಲ್ ಪಾವತಿಗೆ ಆಗ್ರಹಿಸಿ ಜಮಖಂಡಿ ಶುಗರ್ಸ್ ಫ್ಯಾಕ್ಟರಿ ಮುಂದೆ ರೈತರ ಅಹೋರಾತ್ರಿ ಧರಣಿ

    ಕಬ್ಬಿನ ಬಿಲ್ ಪಾವತಿಗೆ ಆಗ್ರಹಿಸಿ ಜಮಖಂಡಿ ಶುಗರ್ಸ್ ಫ್ಯಾಕ್ಟರಿ ಮುಂದೆ ರೈತರ ಅಹೋರಾತ್ರಿ ಧರಣಿ

    ಬಾಗಲಕೋಟೆ: ಕಬ್ಬಿನ ಬಿಲ್‌ (Sugar Cane Bill)  ಪಾವತಿಸದ್ದಕ್ಕೆ  ಜಮಖಂಡಿ ಶುಗರ್ಸ್ ಕಾರ್ಖಾನೆ (Jamkhandi Sugar Factory) ವಿರುದ್ಧ ರೈತರು (Farmers) ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಜಮಖಂಡಿ ತಾಲೂಕಿನ ನಾಗನೂರು ಗ್ರಾಮದಲ್ಲಿರುವ ಕಾರ್ಖಾನೆ ಬಳಿ ಪ್ರತಿಭಟನೆ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ ಗೇಟ್ ಬಳಿ ಕಟ್ಟಿಗೆ ಸುಟ್ಟು, ಮಾಲೀಕರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.  ಇದನ್ನೂ ಓದಿ: ಪತ್ನಿ ಮನೆಬಿಟ್ಟು ಹೋಗಿದ್ದಕ್ಕೆ ಬೇಸತ್ತು ಪತಿ ಆತ್ಮಹತ್ಯೆ

    ಪ್ರತಿಭಟನೆಯಲ್ಲಿ (Protest) ಜಮಖಂಡಿ ಹಾಗೂ ವಿಜಯಪುರ ಭಾಗದ ರೈತರು ಭಾಗಿಯಾಗಿದ್ದು, ಕೂಡಲೇ ಸಕ್ಕರೆ ಕಾರ್ಖಾನೆ  ಆಡಳಿತ ಮಂಡಳಿಯವರು ಬಿಲ್ ಪಾವತಿಸದಿದ್ದರೆ ಹೋರಾಟ ಉಗ್ರ ರೂಪ ಪಡೆದುಕೊಳ್ಳಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.

    ಕಾರ್ಖಾನೆ ಅಧ್ಯಕ್ಷರಾಗಿರುವ ಮಾಜಿ ಶಾಸಕ ಆನಂದ್ ನ್ಯಾಮಗೌಡರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಹೋರಾಟ ಹಾದಿ ಹಿಡಿದಿದ್ದೇವೆ ಎಂದು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ರೈತರು ಸಿಟ್ಟು ಹೊರ ಹಾಕಿದ್ದಾರೆ.

  • ನಿರಂತರ ಮಳೆ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಜೀವಕಳೆ – ರೈತರ ಮೊಗದಲ್ಲಿ ಮಂದಹಾಸ

    ನಿರಂತರ ಮಳೆ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಜೀವಕಳೆ – ರೈತರ ಮೊಗದಲ್ಲಿ ಮಂದಹಾಸ

    ಬಾಗಲಕೋಟೆ: ನಿರಂತರ ಮಳೆಯಿಂದ ಕೃಷ್ಣಾ ನದಿಯಲ್ಲಿ (Krishna River) ನೀರು ಹೆಚ್ಚಾಗಿದ್ದು ಚಿಕ್ಕಪಡಸಲಗಿ ಬ್ಯಾರೇಜ್‌ಗೆ (Chikkapadasalagi Barrage) ಜೀವ ಕಳೆ ಬಂದಿದೆ.

    ಬಯಲು ಸೀಮೆ ನಾಡು ಬಾಗಲಕೋಟೆ ಜಿಲ್ಲೆಯಲ್ಲಿ (Bagalkot District) ಈಗಾಗಲೇ ಉತ್ತಮ ಮಳೆ ಆಗುತ್ತಿದ್ದು ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣೆ ಸಹ ಮೈದುಂಬಿ ಹರಿಯಲು ಶುರು ಮಾಡಿದ್ದಾಳೆ.

    ಬಿರು ಬೇಸಿಗೆಯಿಂದ ಖಾಲಿ ಖಾಲಿಯಾಗಿದ್ದ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ನೀರನ್ನು ನೋಡಿ ರೈತರು ಸಂಭ್ರಮಿಸಿದ್ದಾರೆ.

    ಚಿಕ್ಕಪಡಸಲಗಿ ಬ್ಯಾರೇಜ್ ರೈತರಿಂದ ರೈತರಿಗಾಗಿ ನಿರ್ಮಿಸಿದ ಬ್ಯಾರೇಜ್ ಆಗಿದ್ದು ಬೇಸಿಗೆಯಲ್ಲಿ ಬರಿದಾಗಿತ್ತು. ನದಿ ತೀರದ ರೈತರು ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿರಂತರ ಮಳೆಯಿಂದ ಭರ್ಜರಿ ನೀರು ಬಂದಿದ್ದು, ನದಿ ತೀರದ ರೈತರ‌‌‌ ಮೊಗದಲ್ಲಿ ಮಂದಹಾಸ ಮೂಡಿದೆ.

  • Bagalkote | ಮದುವೆ ಮಂಟಪದಲ್ಲೇ ಹೃದಯಾಘಾತ – ಕುಸಿದು ಬಿದ್ದು ವರ ಸಾವು

    Bagalkote | ಮದುವೆ ಮಂಟಪದಲ್ಲೇ ಹೃದಯಾಘಾತ – ಕುಸಿದು ಬಿದ್ದು ವರ ಸಾವು

    ಬಾಗಲಕೋಟೆ: ಮದುವೆ ಸಂಭ್ರಮದಲ್ಲಿದ್ದ ವರ ಆರತಕ್ಷತೆ ಸಮಯದಲ್ಲಿ ಹೃದಯಾಘಾತಕ್ಕೊಳಗಾಗಿ (Heart Attack) ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿ (Jamakhandi) ನಗರದಲ್ಲಿ ನಡೆದಿದೆ.

    ಪ್ರವೀಣ್ ಕುರಣಿ ಮೃತ ವರ. ಇಂದು ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರವೀಣ್ ಕುರಣಿ ಹಾಗೂ ಪೂಜಾ ಎಂಬವರ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಆರತಕ್ಷತೆ ಮುಗಿಯುವಷ್ಟರಲ್ಲಿ ಮಧುಮಗ ಪ್ರವೀಣ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡ್ತೀನಿ – ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ

    ಪ್ರವೀಣ್ ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಪುತ್ರ. ಮೂಲತಃ ಜಮಖಂಡಿ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ನಿವಾಸಿಯಾದ ಪ್ರವೀಣ್ ಮನೆಯಲ್ಲಿ ಬೆಳಗ್ಗೆ ದೈವದ ಅಕ್ಕಿಕಾಳು ಕಾರ್ಯ ನಡೆದಿತ್ತು. ಬಳಿಕ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದರು. ಕಲ್ಯಾಣಮಂಟಪಕ್ಕೆ ಆಗಮಿಸಿದ ನವ ದಂಪತಿಗೆ ಬಂಧು-ಮಿತ್ರರು ಆರತಕ್ಷತೆ ಹಾಕಿ ಆಶೀರ್ವದಿಸುವ ಗಳಿಗೆಯಲ್ಲೇ ಯಾರೂ ಊಹಿಸದ ರೀತಿ ದುರ್ಘಟನೆ ನಡೆದಿದೆ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ದಲ್ಲಿ ಶೌರ್ಯ ಮೆರೆದ BSF ಯೋಧ – ಗೌರವಿಸಿದ ಸೇನಾ ಮುಖ್ಯಸ್ಥ

    ಹಸೆಮಣೆ ಏರಿ ವಿಭಿನ್ನ ಕನಸುಗಳನ್ನು ಕಂಡಿದ್ದ ಪ್ರವೀಣ್ ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಶುಭ ಸಂದರ್ಭದಲ್ಲಿ ಹೃದಯಾಘಾತಕ್ಕೆ ವರ ಬಲಿಯಾಗಿದ್ದನ್ನು ಕಂಡು ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇದನ್ನೂ ಓದಿ: ಕೊತ್ತೂರು ಮಂಜುನಾಥ್ ಅನುಮಾನ ಸೇನೆ ಬಗ್ಗೆ ಅಲ್ಲ, ಬಿಜೆಪಿ ನಾಯಕರ ಬಗ್ಗೆ: ರಾಮಲಿಂಗಾ ರೆಡ್ಡಿ

  • ಜಮಖಂಡಿಯಲ್ಲಿ ಚಿರತೆ ಪ್ರತ್ಯಕ್ಷ – ಆತಂಕದಲ್ಲಿ ಗ್ರಾಮಸ್ಥರು

    ಜಮಖಂಡಿಯಲ್ಲಿ ಚಿರತೆ ಪ್ರತ್ಯಕ್ಷ – ಆತಂಕದಲ್ಲಿ ಗ್ರಾಮಸ್ಥರು

    ಬಾಗಲಕೋಟೆ: ಜಮಖಂಡಿ (Jamkhandi) ‌ನಗರದ ಹೊರ ವಲಯದ ಬಳಿ ಚಿರತೆಯೊಂದು (Leopard) ಪ್ರತ್ಯಕ್ಷವಾಗಿ ಗ್ರಾಮಸ್ಥರಿಗೆ ಭಯ‌ ಮೂಡಿಸಿದೆ.

    ನಗರದ ಹೊರ ವಲಯದ ಕುಂಚನೂರು ರಸ್ತೆ ಬಳಿ ಗುರುವಾರ ರಾತ್ರಿ ಚಿರತೆ ಹೊಲದಿಂದ ಮತ್ತೊಂದು ಹೊಲಕ್ಕೆ ತೆರಳುವಾಗಿ, ಟ್ರ್ಯಾಕ್ಟರ್ ಚಾಲಕನ ಕಣ್ಣಿಗೆ ಬಿದ್ದಿದೆ. ಟ್ರ್ಯಾಕ್ಟರ್ ಲೈಟ್ ಬೆಳಕಿನ ಮಧ್ಯೆಯೂ ಚಿರತೆ ಮತ್ತೊಂದು ಹೊಲಕ್ಕೆ ನುಗ್ಗಿದೆ. ಇದನ್ನೂ ಓದಿ: ಸಿಂಧನೂರು | ಸರ್ಕಾರಿ ಹುದ್ದೆಗಾಗಿ ನಗರಸಭೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ

    ಚಿರತೆಯನ್ನ ನೋಡಿದ ಟ್ರ್ಯಾಕ್ಟರ್ ಚಾಲಕ, ಟ್ರ್ಯಾಕ್ಟರ್ ನಿಲ್ಲಿಸಿ ಚಿರತೆಯ ವಿಡಿಯೋ ಮಾಡಿದ್ದಾರೆ. ಚಿರತೆಯ ವಿಡಿಯೋ ತುಣುಕು ಕಂಡ ಜಮಖಂಡಿ ಹಾಗೂ ಕುಂಚನೂರು ಗ್ರಾಮಸ್ಥರಿಗೆ ಭಯ ಆವರಸಿದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣ; ಯುನೆಸ್ಕೋದ ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ʼಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ

    ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ‌ ಮಾಡಿದ್ದಾರೆ. ಇತ್ತ ಚಿರತೆಯ ಸೆರೆಗೆ ಬಲೆ ಬೀಸಿರುವ ಅರಣ್ಯಾಧಿಕಾರಿಗಳು ಚಿರತೆಯ ಚಲನವಲನ ಗಮಿಸಲು ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.

  • ಮದುವೆಯಾಗಲು ಬಂದ ಪ್ರೇಮಿಗಳಿಗೆ ಗೂಸಾ – ರಕ್ತ ಸುರಿಯುತ್ತಿದ್ದರೂ ಪ್ರಿಯಕರನತ್ತ ಕೈ ಸನ್ನೆ ಮಾಡಿದ ಯುವತಿ

    ಮದುವೆಯಾಗಲು ಬಂದ ಪ್ರೇಮಿಗಳಿಗೆ ಗೂಸಾ – ರಕ್ತ ಸುರಿಯುತ್ತಿದ್ದರೂ ಪ್ರಿಯಕರನತ್ತ ಕೈ ಸನ್ನೆ ಮಾಡಿದ ಯುವತಿ

    ಬಾಗಲಕೋಟೆ: ಮದುವೆಯಾಗಲು ಸಬ್ ರಿಜಿಸ್ಟ್ರಾರ್ ಕಚೇರಿಗೆ (Sub-Registrar Office) ಆಗಮಿಸಿದ್ದ ಪ್ರೇಮಿಗಳ ಮೇಲೆ ಯುವತಿ ಕಡೆಯುವರು ದಾಳಿ ನಡೆಸಿ ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶುಕ್ರವಾರ ಜಿಲ್ಲೆಯ ಜಮಖಂಡಿ (Jamkhandi ) ನಗರದಲ್ಲಿ ನಡೆದಿದೆ.

    ನಗರದ ಉಳ್ಳಾಗಡ್ಡಿ ಏರಿಯಾದ ಪ್ರೇಮಿಗಳಾದ ಗಾಣಿಗ ಸಮುದಾಯದ ಲಕ್ಷ್ಮೀ, ಮರಾಠಾ ಸಮುದಾಯದ ಅಪ್ಪಾಜಿ ಅಂತರ್ಜಾತಿ ವಿವಾಹಕ್ಕೆ ಬೆಳಿಗ್ಗೆ ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಜಮಖಂಡಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ಇದನ್ನೂ ಓದಿ: ಪ್ರಮೋದಾದೇವಿ ಒಡೆಯರ್‌ಗೆ ನಮ್ಮ ಗ್ರಾಮ ರಿಜಿಸ್ಟರ್‌ ಮಾಡಿಕೊಡಬೇಡಿ: ಡಿಸಿಗೆ ಗ್ರಾಮಸ್ಥರ ಮನವಿ

    ವಿಷಯ ತಿಳಿದು ಕಚೇರಿಗೆ ಧಾವಿಸಿದ ಯುವತಿಯ ಮನೆಕಡೆಯ ಪೋಷಕರು ಯುವತಿಗೆ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ. ಮೂರ್ಛೆ ಹೋಗಿ ಬಿದ್ದರೂ ಬಿಡದ ಹುಡುಗಿಯ ಮನೆಯವರು ಯುವತಿಗೆ ನೀರು ಕುಡಿಸಿ, ಮನೆಗೆ ಎಳೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಹೆಂಡತಿಯನ್ನು ಮನೆಗೆ ಕರೆದಿದ್ದಕ್ಕೆ ಚಾಕು ಇರಿದ ಬಾಮೈದ – ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ ಪತಿ!

    ಈ ನಡುವೆ ರಿಕ್ಷಾದಲ್ಲಿದ್ದ ಯುವತಿ ಬಾಯಿಯಿಂದ ರಕ್ತ ಸುರಿಯುತ್ತಿದ್ದರೂ ಪ್ರಿಯಕರನತ್ತ ಕೈ ಸನ್ನೆ ಮಾಡುತ್ತಿದ್ದಳು. ಹಲ್ಲೆಗೆ ಒಳಗಾಗಿರುವ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಜಮಖಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಿಯಕರ ಸ್ಥಳೀಯ ಜಮಖಂಡಿ ಪೊಲೀಸ್ ಠಾಣೆಯಲ್ಲಿ ತಂಗಿದ್ದಾನೆ.

  • ಬಾಗಲಕೋಟೆ | ಹಲವೆಡೆ ಬಿರುಗಾಳಿ ಸಹಿತ ಮಳೆ, ನೆಲಕ್ಕುರುಳಿದ ಬೆಳೆ

    ಬಾಗಲಕೋಟೆ | ಹಲವೆಡೆ ಬಿರುಗಾಳಿ ಸಹಿತ ಮಳೆ, ನೆಲಕ್ಕುರುಳಿದ ಬೆಳೆ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ (JamaKhandi) ತಾಲೂಕಿನ ಕೆಲವು ಕಡೆಗಳಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆಯಿಂದ ಕಟಾವಿಗೆ ಬಂದಿದ್ದ ಬೆಳೆಗಳು ನೆಲಕ್ಕುರುಳಿದೆ.

    ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಕೇಶವ್ ಜಾಧವ್, ಅನೀಲ್ ಬಬಲೇಶ್ವರ, ಉಮೇಶ್ ಜಾಧವ್, ಶಿವಾಜಿ ಜಾಧವ್ ಎಂಬುವವರ ಒಣದ್ರಾಕ್ಷಿ ಘಟಕಗಳಿಗೆ ಗಾಳಿ ಸಹಿತ ಮಳೆಯಿಂದ ಹಾನಿ ಆಗಿದೆ. ಹಾಗೆಯೇ ತೊದಲಬಾಗಿ ಗ್ರಾಮದ ಅಣ್ಣಪ್ಪ ಶಿರಹಟ್ಟಿ ಎನ್ನುವವರ ಜಮೀನಿನಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ ಗಾಳಿ ಹೊಡೆತಕ್ಕೆ ಸಿಕ್ಕು ನೆಲಕ್ಕಪ್ಪಳಿಸಿದೆ. ಇದನ್ನೂ ಓದಿ: ನಾಗ್ಪುರ ಕೋಮು ಗಲಭೆ – ಮಾಸ್ಟರ್‌ಮೈಂಡ್‌ ಮನೆ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ!

    ಜಿಲ್ಲೆಯಲ್ಲಿ ಒಂದು ಕಡೆಗೆ ಬೇಸಿಗೆ ಬಿರುಬಿಸಿಲು ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದೆ. ಮತ್ತೊಂದೆಡೆ ತಾಪಮಾನ ಹೆಚ್ಚಾಗಿ ಅಕಾಲಿಕ ಮಳೆ ಆಗುತ್ತಿದ್ದು, ಇದೀಗ ಮಳೆಯ ಜೊತೆ ಗಾಳಿ ಬೀಸುವುದು ಬೆಳೆಗಳಿಗೆ ಕಂಟಕವಾಗುತ್ತಿದೆ. ಗಾಳಿ ಹಾಗೂ ಅಕಾಲಿಕ ಮಳೆಯು ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ ಡಿಕೆಶಿ ಬಂಡವಾಳ ಬಯಲು ಮಾಡಿದೆ: ಬಿವೈವಿ

  • ಪೂರ್ಣವಾಗಿ ಲಾಕ್‌ ಆಗುತ್ತಿಲ್ಲ ಹಿಪ್ಪರಗಿ ಬ್ಯಾರಜ್‌ನ 7ನೇ ಗೇಟ್‌

    ಪೂರ್ಣವಾಗಿ ಲಾಕ್‌ ಆಗುತ್ತಿಲ್ಲ ಹಿಪ್ಪರಗಿ ಬ್ಯಾರಜ್‌ನ 7ನೇ ಗೇಟ್‌

    ಬಾಗಲಕೋಟೆ: ಲಾಕ್‌ ಮಾಡಲಾಗಿರುವ ಹಿಪ್ಪರಗಿ ಬ್ಯಾರೇಜ್ (Hipparagi Barrage) ಗೇಟ್‌ನಿಂದ ನೀರು ಹರಿದು ಹೋಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

    ಕೃಷ್ಣ ನದಿಗೆ (Krishna River) ಅಡ್ಡಲಾಗಿ ಹಿಪ್ಪರಗಿ ಬ್ಯಾರೇಜ್ ನಿರ್ಮಾಣವಾಗಿದ್ದು ಒಟ್ಟು 22 ಗೇಟ್‌ಗಳ ಪೈಕಿ 21 ಗೇಟ್‌ಗಳು ಪೂರ್ಣವಾಗಿ ಬಂದ್‌ ಆಗಿದೆ. ಆದರೆ ಏಳನೇ ಗೇಟ್‌ ಪೂರ್ಣವಾಗಿ ಲಾಕ್‌ ಆಗದ ಕಾರಣ ಮೂರು ಅಡಿ ಕೆಳಮಟ್ಟದಿಂದ ನೀರು ಹರಿಯುತ್ತಿದೆ.  ಇದನ್ನೂ ಓದಿ: ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್‌ಗೆ ಮತ್ತೆ ಶಾಕ್ – ವಿಚಾರಣೆ ನಾಳೆಗೆ ಮುಂದೂಡಿಕೆ

     

    7ನೇ ಗೇಟ್‌ ಪೂರ್ಣ ಕೆಳಗಿಳಿಯದೇ ಮೂರಡಿ ಅಂತರದಲ್ಲೇ ನಿಂತಿದೆ. ಗೇಟ್ ಕೆಳಗಡೆ ಯಾವುದೋ ವಸ್ತು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈಗ ದುರಸ್ತಿ ಕಾರ್ಯದಲ್ಲಿ ಬ್ಯಾರೇಜ್ ಸಿಬ್ಬಂದಿ ತೊಡಗಿದ್ದಾರೆ.

    ಬೇಸಿಗೆ ಕಾಲದಲ್ಲಿ ಜಮಖಂಡಿ ನಗರ ಹಾಗೂ ಹಳ್ಳಿಗೆ ಇಲ್ಲಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಆದಷ್ಟು ಬೇಗ ದುರಸ್ತಿ ಮಾಡಿ ನೀರು ಉಳಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    6 ಟಿಎಂಸಿ ಸಾಮರ್ಥ್ಯದ ಈ ಬ್ಯಾರೇಜ್ ನಲ್ಲಿ, ನೀರು ಪೋಲಾಗುತ್ತಿರುವುದನ್ನು ಕಂಡ ರೈತ ಸಮೂಹ ಆತಂಕಕ್ಕೆ ಮುಳುಗಿದೆ. ಈ ಬ್ಯಾರೇಜ್‌ ಜಮಖಂಡಿ, ರಬಕವಿ ಬನಹಟ್ಟಿ ತಾಲೂಕಿನ 50 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಆದರೆ ಬ್ಯಾರೇಜ್‌  ಒಂದು ಗೇಟ್‌ನಿಂದ ನೀರು ನಿರಂತರವಾಗಿ ಪೋಲಾಗ್ತಿರೋದು ರೈತರ ಆತಂಕ್ಕೆ ಕಾರಣವಾಗಿದೆ. ಈಗಾಗಲೇ ಗೇಟ್ ಕ್ಲೋಸ್ ಮಾಡಲು ಅಧಿಕಾರಿಗಳು ಸಿಬ್ಬಂದಿ ವರ್ಗ ಬ್ಯಾರೇಜ್ ಬಳಿ ಬೀಡುಬಿಟ್ಟಿದ್ದು ಗೇಟ್ ದುರಸ್ತಿ ಕಾರ್ಯ ಶುರುಮಾಡಿದ್ದಾರೆ. ಹೆಚ್ಚುವರಿಯಾಗಿ ಹುಬ್ಬಳ್ಳಿಯಿಂದ ತಜ್ಞರನ್ನು ಕರೆಯಿಸಿ ಗೇಟ್ ಬಂದ್‌ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

    ಇತ್ತ ಸ್ಥಳಕ್ಕೆ ಭೇಟಿ ನೀಡಿರುವ ಜಮಖಂಡಿ ಎಸಿ ಶ್ವೇತಾ ಬಿಡಿಕರ್, ಸದ್ಯ ಏಳನೇ ಗೇಟ್ ನಿಂದ 15 ಸಾವಿರ ಕ್ಯೂಸೆಕ್‌ ನೀರು ಹರಿದು ನದಿ ಸೇರುತ್ತಿದೆ. ಆದರೆ 12 ಸಾವಿರ ಕ್ಯೂಸೆಕ್‌ ಒಳ ಹರಿವು ಇದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ರೈತರಿಗೆ ಸಮಸ್ಯೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ಸಿಬ್ಬಂದಿ ದುರಸ್ತಿ ಕಾರ್ಯ ಶುರುಮಾಡಿದ್ದಾರೆ. ಗುರುವಾರ ಬೆಳಗ್ಗೆ ಒಳಗಡೆ ಈ ಸಮಸ್ಯೆ ಬಗೆ ಹರಿಯುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

     

  • ಬಿಜೆಪಿ ಕಾರ್ಯಕರ್ತೆಯ ಫೇಕ್ ವೀಡಿಯೋ ಮಾಡಿ ಬ್ಲ್ಯಾಕ್‍ಮೇಲ್

    ಬಿಜೆಪಿ ಕಾರ್ಯಕರ್ತೆಯ ಫೇಕ್ ವೀಡಿಯೋ ಮಾಡಿ ಬ್ಲ್ಯಾಕ್‍ಮೇಲ್

    ಬಾಗಲಕೋಟೆ: ಬಿಜೆಪಿ (BJP) ಕಾರ್ಯಕರ್ತೆ ಹಾಗೂ ಖಾಸಗಿ ಶಾಲೆಯ ಶಿಕ್ಷಕಿಯ ಫೋಟೋದಿಂದ ಅಶ್ಲೀಲ ವೀಡಿಯೋ ತಯಾರಿಸಿ ಬ್ಲ್ಯಾಕ್‍ಮೇಲ್ ಮಾಡಿದ ಪ್ರಕರಣ ಜಮಖಂಡಿಯಲ್ಲಿ ನಡೆದಿದೆ.

    ಮಹಿಳೆಯ (Woman) ಫೋಟೋ ಒಂದಕ್ಕೆ ಕಣ್ಣಿಗೆ ಕಪ್ಪು ಪಟ್ಟಿ ಹಾಕಿ ಎಡಿಟ್ ಮಾಡಿ ಅಶ್ಲೀಲ ವೀಡಿಯೋ ತಯಾರಿಸಲಾಗಿದೆ. ನಂತರ ಯಾವುದೋ ಅಶ್ಲೀಲ ವೀಡಿಯೋ ಒಂದನ್ನು ಬ್ಲರ್ ಮಾಡಿ ಬಿಜೆಪಿ ಕಾರ್ಯಕರ್ತೆಯ ವೀಡಿಯೋ ಎಂಬಂತೆ ಬಿಂಬಿಸಲಾಗಿದೆ. ಅಲ್ಲದೇ ಬಿಜೆಪಿ ಕಾರ್ಯಕರ್ತೆಯ ರಾಸಲೀಲೆ ಎಂಬ ಬರಹ ಹಾಕಲಾಗಿದೆ. ಇದನ್ನೂ ಓದಿ: ರಶ್ಮಿಕಾ ನಂತರ ಕತ್ರಿನಾಗೆ ಡೀಪ್ ಫೇಕ್ ಕಾಟ

    ಈ ವಿಚಾರವಾಗಿ ಬಂದೆನವಾಜ್ ಸರಕಾವಸ್ ಎಂಬಾತ ಮಹಿಳೆಗೆ ಕರೆ ಮಾಡಿ ನಾನು ಖಾಸಗಿ ಸುದ್ದಿ ವಾಹಿನಿಯ ವರದಿಗಾರ. ನನ್ನ ಬಳಿ ನಿಮ್ಮ ರಾಸಲೀಲೆ ವೀಡಿಯೋ ಇದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ನೀವು ನನ್ನನ್ನು ಭೇಟಿಯಾಗಿ ಈ ವಿಚಾರವನ್ನು ಸರಿ ಮಾಡಿಕೊಳ್ಳಿ, ಸ್ವಲ್ಪ ಹಣ ಖರ್ಚಾಗುತ್ತದೆ ಎಂದಿದ್ದಾನೆ. ಹಣ ನೀಡದಿದ್ದರೆ ವೀಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ ಎಂದು ಎಫ್‍ಐಆರ್‌ನಲ್ಲಿ  ಉಲ್ಲೇಖಿಸಲಾಗಿದೆ.

    ಈ ಸಂಬಂಧ ಜಮಖಂಡಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಷ ಸೇವಿಸಿ ಎಎಸ್ಐ ಆತ್ಮಹತ್ಯೆ