Tag: ಜಪಾನ್

  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹುಟ್ಟು ಹಬ್ಬಕ್ಕೆ ಸಿಕ್ತು ಭರ್ಜರಿ ಗಿಫ್ಟ್

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹುಟ್ಟು ಹಬ್ಬಕ್ಕೆ ಸಿಕ್ತು ಭರ್ಜರಿ ಗಿಫ್ಟ್

    ನಿನ್ನೆ ತಮ್ಮ 40ನೇ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ. ಈ ಬಾರಿ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಜಪಾನ್ ಗೆ ತೆರಳಿದ್ದರು. ಹಾಗಾಗಿ ಅವರ ನಟನೆಯ ಹಾಗೂ ನಿರ್ಮಾಣದ ಯಾವುದೇ ಪೋಸ್ಟರ್ ರಿಲೀಸ್ ಆಗಿರಲಿಲ್ಲ. ಈ ಕಾರಣದಿಂದಾಗಿಯೇ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆ ಆಗಿತ್ತು. ಆ ನಿರಾಸೆಯನ್ನು ಹೋಗಲಾಡಿಸಿದ್ದಾರೆ. ಖ್ಯಾತ ಯುವ ಚಿತ್ರಕಲಾವಿದ ಬಾದಲ್ ನಂಜುಂಡ ಸ್ವಾಮಿ.

    ತಮ್ಮ ವಿಶೇಷ ಕಲಾಕೃತಿ ಮತ್ತು ಅದನ್ನು ಪ್ರಸೆಂಟ್ ಮಾಡುವ ರೀತಿಯಲ್ಲಿ ಯಾವಾಗಲೂ ವಿಶೇಷವನ್ನೇ ಕಾಯ್ದುಕೊಂಡು ಬಂದಿರುವ ಬಾದಲ್, ಈ ಬಾರಿ ರಮ್ಯಾ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿಸಿದ್ದಾರೆ. ಯಲಹಂಕ ಸಮೀಪದ ಗೋಡೆಯ ಮೇಲೆ 35 ಫೀಟ್ ರಮ್ಯಾ ಚಿತ್ರವನ್ನು ಬಿಡಿಸಿದ್ದಾರೆ. ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಟಿಯೊಬ್ಬರ ಚಿತ್ರವು ಈ ಪ್ರಮಾಣದಲ್ಲಿ ಮೂಡಿ ಬಂದಿದೆ ಎನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

    ಸದ್ಯ ರಮ್ಯಾ ಅವರು ಜಪಾನ್ ಗೆ ಹಾರಿದ್ದು, ಅಲ್ಲಿಂದಲೇ ಅಭಿಮಾನಿಗಳಿಗೆ ವಯಸ್ಸಿನ ಮೇಘ ಸಂದೇಶವನ್ನೂ ಕಳುಹಿಸಿದ್ದಾರೆ. ಇವತ್ತು ತಮಗೀಗ 40 ವರ್ಷ ತುಂಬಿದ್ದು, ನಲವತ್ತರ ಕ್ಲಬ್ ನ ಸದಸ್ಯೆಯಾಗಿ ಬಡ್ತಿ ಪಡೆದಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ರಮ್ಯಾ ಅವರೇ ಹಂಚಿಕೊಂಡಿದ್ದರಿಂದ ಒಂದು ರೀತಿಯಲ್ಲಿ ಅಚ್ಚರಿಯೂ ವ್ಯಕ್ತವಾಗಿತ್ತು.

    ರಮ್ಯಾ ಅವರಿಗೆ ಡಾಲಿ ಧನಂಜಯ್, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಶುಭಾಶಯ ಕೋರಿದ್ದಾರೆ. ಬಹುತೇಕ ಸಂದೇಶಗಳಿಗೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.  ಈ ಹುಟ್ಟು ಹಬ್ಬಕ್ಕೆ ರಮ್ಯಾ ಅವರಿಗೆ ಡಬಲ್ ಧಮಾಕಾ. ಒಂದು ಕಡೆ ಅವರ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿದೆ. ಮತ್ತೊಂದು ಕಡೆ ಇನ್ನಷ್ಟೇ ಅವರ ನಟನೆಯ ಉತ್ತರ ಕಾಂಡ ಚಿತ್ರ ಶೂಟಿಂಗ್ ಆಗಬೇಕಿದೆ. ಹಾಗಾಗಿ ರಮ್ಯಾ ಅವರಿಗೆ ಈ ಹುಟ್ಟು ಹಬ್ಬ ವಿಶೇಷವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

    ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಜಪಾನ್ ಗೆ ಹಾರಿದ್ದು, ಅಲ್ಲಿಂದಲೇ ವಯಸ್ಸಿನ ಮೇಘ ಸಂದೇಶವನ್ನೂ ಕಳುಹಿಸಿದ್ದಾರೆ. ಇವತ್ತು ತಮಗೀಗ 40 ವರ್ಷ ತುಂಬಿದ್ದು, ನಲವತ್ತರ ಕ್ಲಬ್ ನ ಸದಸ್ಯೆಯಾಗಿ ಬಡ್ತಿ ಪಡೆದಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ರಮ್ಯಾ ಅವರೇ ಹಂಚಿಕೊಂಡಿದ್ದಾರೆ.

    ರಮ್ಯಾ ಅವರಿಗೆ ಡಾಲಿ ಧನಂಜಯ್, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಶುಭಾಶಯ ಕೋರಿದ್ದಾರೆ. ಬಹುತೇಕ ಸಂದೇಶಗಳಿಗೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.  ಈ ಹುಟ್ಟು ಹಬ್ಬಕ್ಕೆ ರಮ್ಯಾ ಅವರಿಗೆ ಡಬಲ್ ಧಮಾಕಾ. ಒಂದು ಕಡೆ ಅವರ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿದೆ. ಮತ್ತೊಂದು ಕಡೆ ಇನ್ನಷ್ಟೇ ಅವರ ನಟನೆಯ ಉತ್ತರ ಕಾಂಡ ಚಿತ್ರ ಶೂಟಿಂಗ್ ಆಗಬೇಕಿದೆ. ಹಾಗಾಗಿ ರಮ್ಯಾ ಅವರಿಗೆ ಈ ಹುಟ್ಟು ಹಬ್ಬ ವಿಶೇಷವಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ

    ರಮ್ಯಾ ಅವರ ಹುಟ್ಟು ಹಬ್ಬಕ್ಕೆ ಅವರ ಸಿನಿಮಾದ ಪೋಸ್ಟರ್ ಅಥವಾ ಉತ್ತರಕಾಂಡ ಸಿನಿಮಾದ ಫಸ್ಟ್ ಲುಕ್ ಏನಾದರೂ ರಿಲೀಸ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಮ್ಯಾ ಅವರು ಈ ದೇಶದಲ್ಲೇ ಇರದೇ ಇರುವ ಕಾರಣಕ್ಕಾಗಿ ಬಹುಶಃ ಬಿಡುಗಡೆ ಪ್ಲ್ಯಾನ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

    ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

    ಟೊಕಿಯೊ: ಜಪಾನ್‌ನ (Japan) ಮಾಜಿ ಪ್ರಧಾನಿ ಶಿಂಜೋ ಅಬೆ (Shinzo Abe) ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

    ನೇರಳೆ ಬಣ್ಣದ ಬಟ್ಟೆಯಿಂದ ಸುತ್ತಿಡಲಾಗಿದ್ದ ಮರದ ಪೆಟ್ಟಿಗೆಯಲ್ಲಿ ಅಬೆ ಅವರ ಚಿತಾಭಸ್ಮವನ್ನು ಇಡಲಾಗಿತ್ತು. ಇದನ್ನು ಇಂದು ಟೋಕಿಯೊದ ಬುಡೋಕನ್ ಸಭಾಂಗಣಕ್ಕೆ ಪತ್ನಿ ಅಕಿ ಅಬೆ ತಂದರು. ಶಿಂಜೋ ಅಬೆ ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೆಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿದಂತೆ ಹಲವಾರು ಜಾಗತಿಕ ನಾಯಕರು ಸೇರಿದ್ದರು. ಈ ಸಂದರ್ಭದಲ್ಲಿ ಅವರೆಲ್ಲರೂ ಶಿಂಜೋ ಅಬೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

    ಜಪಾನ್ ಪ್ರಧಾನಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಶಿಂಜೋ ಅಬೆ ಅವರನ್ನು ಜುಲೈ 8ರಂದು ಪಶ್ಚಿಮ ಜಪಾನಿನ ನಾರಾ ನಗರದ ಸ್ಟ್ರೀಟ್‌ವೊಂದರಲ್ಲಿ ಭಾಷಣ ಮಾಡುವಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಜುಲೈನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತ್ತು. ಇದನ್ನೂ ಓದಿ: ಕಟೀಲ್ ಒಬ್ಬ ವಿದೂಷಕ, ಪಾಪ ಇನ್ನೂ ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ

    ಪ್ರಧಾನಿ ಮೋದಿ ಅವರು ನಿನ್ನೆ ಟ್ವೀಟ್ ಮಾಡಿ, ಆತ್ಮೀಯ ಸ್ನೇಹಿತ ಹಾಗೂ ಭಾರತ-ಜಪಾನ್ ಸ್ನೇಹದ ಶ್ರೇಷ್ಠ ಚಾಂಪಿಯನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ನಾನು ಇಂದು ರಾತ್ರಿ ಟೋಕಿಯೊಗೆ ಪ್ರಯಾಣಿಸುತ್ತಿದ್ದೇನೆ. ಎಲ್ಲಾ ಭಾರತೀಯರ ಪರವಾಗಿ ಸಂತಾಪ ಸೂಚಿಸಲು ಜಪಾನ್ ಪ್ರಧಾನಿ ಕಿಶಿದಾ ಅವರನ್ನು ಭೇಟಿ ಮಾಡಲಿದ್ದೇನೆ ಎಂದಿದ್ದರು.  ಇದನ್ನೂ ಓದಿ: ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ: ಖಾದರ್

    Live Tv
    [brid partner=56869869 player=32851 video=960834 autoplay=true]

  • ಚೀನಾಗೆ ಕೌಂಟರ್ ಕೊಡಲು ಸಿದ್ಧತೆ – 1,000 ಶಕ್ತಿಶಾಲಿ ಕ್ಷಿಪಣಿಗಳ ನಿಯೋಜನೆಗೆ ಮುಂದಾದ ಜಪಾನ್

    ಚೀನಾಗೆ ಕೌಂಟರ್ ಕೊಡಲು ಸಿದ್ಧತೆ – 1,000 ಶಕ್ತಿಶಾಲಿ ಕ್ಷಿಪಣಿಗಳ ನಿಯೋಜನೆಗೆ ಮುಂದಾದ ಜಪಾನ್

    ಟೊಕಿಯೊ: ಚೀನಾ ವಿರುದ್ಧ ಪ್ರತಿದಾಳಿ ನಡೆಸಲು ಜಪಾನ್ ಮುಂದಾಗಿದ್ದು, ಅತ್ಯಂತ ಶಕ್ತಿಶಾಲಿ ಹಾಗೂ ದೀರ್ಘ ಶ್ರೇಣಿಯ 1,000 ಕ್ರೂಸ್ ಮಿಸೈಲ್‌ಗಳನ್ನು ತನ್ನ ನೌಕಾಪಡೆಗೆ ನಿಯೋಜಿಸಲು ಜಪಾನ್ ಸಿದ್ಧವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಈ ಕ್ಷಿಪಣಿಗಳು 100 ಕಿ.ಮೀ ನಿಂದ ಬರೋಬ್ಬರಿ 1,000 ಕಿಮೀ ವರೆಗೆ ಗುರಿ ತಲುಪುವ ಸಾಮರ್ಥ್ಯವನ್ನು ಒಳಗೊಂಡಿವೆ. ಕ್ಷಿಪಣಿಗಳನ್ನು ಉತ್ತರ ಕೊರಿಯಾ ಮತ್ತು ಚೀನಾಕ್ಕೆ ಸಮೀಪವಿರುವ ನ್ಯಾನ್ಸಿ ದ್ವೀಪಗಳಲ್ಲಿ ನಿಯೋಜಿಸಲು ಜಪಾನ್ ಮುಂದಾಗಿದೆ ಎಂದು ವರದಿ ಹೇಳಿದೆ. ಇದನ್ನೂ ಓದಿ: ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್

    ಈಗಾಗಲೇ ಅಸ್ತಿತ್ವದಲ್ಲಿರುವ ಹಡಗುಗಳಿಗೆ ಹಾಗೂ ಯುದ್ಧ ವಿಮಾನಗಳಿಗೆ ಕ್ರೂಸ್ ಮಿಸೈಲ್‌ಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ. ಈ ಬಹುತೇಕ ಕ್ಷಿಪಣಿಗಳನ್ನು ನೈರುತ್ಯ ವಲಯದಲ್ಲಿ ತೈವಾನ್ ಬಳಿ ನಿಯೋಜಿಸಲು ಜಪಾನ್ ಮುಂದಾಗಿದೆ. ಚೀನಾ ಹಾಗೂ ಉತ್ತರ ಕೊರಿಯಾದ ಮಿಸೈಲ್ ಶಕ್ತಿಗೆ ಕೌಂಟರ್ ಕೊಡಲು ಜಪಾನ್ ಇಂತಹ ದೊಡ್ಡ ಯತ್ನಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಯುವಕರಿಗೆ ಮದ್ಯ ಸೇವಿಸಲು ಉತ್ತೇಜನ ನೀಡುತ್ತಿದೆ ಜಪಾನ್- ಕಾರಣ ಏನು ಗೊತ್ತಾ?

    ಯುವಕರಿಗೆ ಮದ್ಯ ಸೇವಿಸಲು ಉತ್ತೇಜನ ನೀಡುತ್ತಿದೆ ಜಪಾನ್- ಕಾರಣ ಏನು ಗೊತ್ತಾ?

    ಟೋಕಿಯೋ: ಕೋವಿಡ್‌ನಿಂದ ತೀವ್ರ ಆರ್ಥಿಕ ಸಂಕಷ್ಟ, ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಜಪಾನ್ ಸರ್ಕಾರ ತನ್ನ ಆದಾಯ ಹೆಚ್ಚಿಸಲು ಹೊಸ ಅಭಿಯಾನ ಆರಂಭಿಸಿದೆ. ಯುವ ವಯಸ್ಕರಿಗೆ ಹೆಚ್ಚು ಮದ್ಯಪಾನ ಮಾಡಲು ಕರೆ ಕೊಟ್ಟಿದ್ದು, “ಸೇಕ್ ವಿವಾ” ಎನ್ನುವ ಸ್ಪರ್ಧೆಯನ್ನು ಆರಂಭಿಸಿದೆ.

    ರಾಷ್ಟ್ರೀಯ ತೆರಿಗೆ ಏಜೆನ್ಸಿ (NTA) “ಸೇಕ್ ವಿವಾ!” ಎಂಬ ರಾಷ್ಟ್ರೀಯ ವ್ಯಾಪಾರ ಸ್ಪರ್ಧೆಯನ್ನು ಘೋಷಿಸಿದ್ದು, ದೇಶದ ಕಿರಿಯ ಜನಸಂಖ್ಯೆಯಲ್ಲಿ ಮದ್ಯಪಾನವನ್ನು ಉತ್ತೇಜಿಸಲು ಈ ಅಭಿಯಾನ ಪ್ರೋತ್ಸಾಹಿಸುತ್ತದೆ. ಹೊಸ ವ್ಯಾಪಾರ ಕಲ್ಪನೆಗಳೊಂದಿಗೆ ಬರುವುದು, ಸೇಕ್, ಶೋಚು, ಅವಮೊರಿ, ಬಿಯರ್, ವಿಸ್ಕಿ ಮತ್ತು ವೈನ್ ನಂತಹ ಜಪಾನಿನ ಆಲ್ಕೊಹಾಲ್‌ಯುಕ್ತ ಪಾನೀಯಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಅಭಿಯಾನ ಸಹಾಯ ಮಾಡಲಿದೆ.

    ಈ ಅಭಿಯಾನ ಮದ್ಯದ ಉದ್ಯಮವನ್ನು ಪುನಶ್ಚೇತನಗೊಳಿಸಲು ಮತ್ತು ಇತರೆ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡಲಿದೆ ಎಂದು ಜಪಾನಿನ ತೆರಿಗೆ ಏಜೆನ್ಸಿ ಯೋಜನೆಯನ್ನು ವಿವರಿಸಿದೆ. “ಸೇಕ್ ವಿವಾ!” ಆಲ್ಕೊಹಾಲ್‌ಯುಕ್ತ ಪಾನೀಯಗಳ ಆಕರ್ಷಣೆಯನ್ನು ಪುನರುಜ್ಜೀವನಗೊಳಿಸಲಿದ್ದು, ಅಭಿಯಾನದಲ್ಲಿ ಪಾಲ್ಗೊಳ್ಳಲು 20 ಮತ್ತು 39ರ ನಡುವಿನ ವಯಸ್ಸಿನ ಜನರನ್ನು ಆಹ್ವಾನಿಸಲಾಗುತ್ತಿದೆ. ಇದನ್ನೂ ಓದಿ: 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್‌ ಆಫರ್‌

    ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕವಿಲ್ಲ, ಇದು ಕೃತಕ ಬುದ್ಧಿಮತ್ತೆ, ಮೆಟಾವರ್ಸ್ ಮತ್ತು ಭೌಗೋಳಿಕ ಸೂಚನೆಗಳನ್ನು (ಉತ್ಪನ್ನಗಳ ಭೌಗೋಳಿಕ ಮೂಲವನ್ನು ಸೂಚಿಸಲು ಬಳಸುವ ಚಿಹ್ನೆ) ಬಳಸುವ ಹೊಸ ಮಾರಾಟ ವಿಧಾನಗಳನ್ನು ಸೂಚಿಸಲು ಜನರನ್ನು ಕೇಳುತ್ತದೆ. ಇದಕ್ಕೆ ಸ್ಪರ್ಧಿಗಳು ಹೊಸ ಯೋಚನೆಗಳನ್ನು ನೀಡಬೇಕು.

    ಸ್ಪರ್ಧೆಯಲ್ಲಿ ಫೈನಲಿಸ್ಟ್‌ಗಳನ್ನು ಸೆಪ್ಟೆಂಬರ್ 27 ರೊಳಗೆ ಆಯ್ಕೆ ಮಾಡಲಾಗುವುದು. ನಂತರ ಅಕ್ಟೋಬರ್‌ನಲ್ಲಿ ಮತ್ತೊಂದು ಸುತ್ತು ನಡೆಯಲಿದ್ದು, ಈ ವಿಶಿಷ್ಟ ಸ್ಪರ್ಧೆಯ ಫಲಿತಾಂಶಗಳನ್ನು ನವೆಂಬರ್ 10 ರಂದು ಟೋಕಿಯೊದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    NTA ಪ್ರಕಾರ, 1995 ಕ್ಕೆ ಹೋಲಿಸಿದರೆ ದೇಶವು ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ 2020 ರಲ್ಲಿ ಜಪಾನಿಯರು ಕಡಿಮೆ ಮದ್ಯ ಸೇವನೆ ಮಾಡುತ್ತಿದ್ದಾರೆ. 1995 ರಲ್ಲಿ ಜನರು 100 ಲೀಟರ್ (22 ಗ್ಯಾಲನ್) ಆಲ್ಕೋಹಾಲ್ ಅನ್ನು ಸೇವಿಸುತ್ತಿದ್ದರು. ಸದ್ಯ ಕುಡಿಯುವಿಕೆಯು 75 ಲೀಟರ್‌ಗಳಿಗೆ (16 ಗ್ಯಾಲನ್‌ಗಳು) ಕಡಿಮೆಯಾಗಿದೆ  ಎಂದು ವರದಿಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ

    ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ

    ಟೋಕಿಯೋ: ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ಸಿದ್ಧತೆ ಚುರುಕುಗೊಳಿಸಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ್‌ ಆರ್‌. ನಿರಾಣಿ ಅವರು ಜಪಾನ್‌ಗೆ ಭೇಟಿ ನೀಡಿದ್ದಾರೆ.

    ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಲು ಸಚಿವ ನಿರಾಣಿ ನೇತೃತ್ವದ ನಿಯೋಗ ಜಪಾನ್‌ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಟೋಕಿಯೋ ಕನ್ನಡ ಬಳಗ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಅಲ್ಲದೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಹ್ವಾನ ನೀಡಿದರು. ಇದನ್ನೂ ಓದಿ: ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್‌ ಶಾ ಬಳಿ ನೆರೆ ಪರಿಹಾರ ಕೇಳಲಿಲ್ಲವೇಕೆ – BJP ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

    ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ ಜಪಾನ್‌ಗೆ ಸಂಬಂಧಿಸಿದಂತೆ, ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್‌ ಕೈಗಾರಿಕಾ ಟೌನ್‌ಶಿಪ್ ಸ್ಥಾಪಿಸಲಾಗಿದೆ. ಅದಕ್ಕಾಗಿ 519.55 ಎಕರೆ ಭೂಮಿ ಮೀಸಲಿಡಲಾಗಿದ್ದು, ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಪಾನಿನ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದು ಎಂದು ನಿರಾಣಿ ಭರವಸೆ ನೀಡಿದರು.

    ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳ ನೇರ ಹೂಡಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತದೆ. ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ವಿದೇಶಿ ನೇರ ಹೂಡಿಕೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.38 ಎಂದು ಅವರು ವಿವರಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುವ ಮಟ್ಟಕ್ಕೇರಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದ್ದು, ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಳೆದ 3-4 ತಿಂಗಳಿಂದೀಚೆಗೆ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಮೊತ್ತದ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಇದು ರಾಜ್ಯದ ಮೇಲೆ ದೊಡ್ಡ ದೊಡ್ಡ ಕಂಪನಿಗಳು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿ ಸುಳ್ಳು ಹೇಳಲ್ಲ ಎಂದು ಅಂದುಕೊಂಡಿದ್ದೇವೆ: ಯು.ಟಿ ಖಾದರ್

    ಈ ಸಂದರ್ಭದಲ್ಲಿ ಮಾತನಾಡಿದ ಟೋಕಿಯೊ ಕನ್ನಡ ಬಳಗದ ಗಣೇಶ್‌ ಕೃಷ್ಣಯ್ಯ, ಟೋಕಿಯೋ ಕನ್ನಡ ಬಳಗದಲ್ಲಿ 1,000ಕ್ಕೂ ಹೆಚ್ಚು ಸದಸ್ಯರಿದ್ದು, ಜಪಾನಿನ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಿಣಿಸಿ ಹಲವು ಕನ್ನಡಿಗರು ಇಲ್ಲಿನ ಸರ್ಕಾರದ ಗೌರವಕ್ಕೆ ಪಾತ್ರರಾಗಿದ್ದಾರೆ. ಕನ್ನಡ ಬಳಗ ಆಯೋಜಿಸುವ ಯುಗಾದಿ ಉತ್ಸವದಲ್ಲಿ ಜಪಾನ್‌ ನಾಗರಿಕರು ಪಾಲ್ಗೊಂಡು ಸಂಭ್ರಮಿಸುತ್ತಾರೆ ಎಂದರು.

    ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಮಯಾಂಕ್ ಜೋಶಿ ಮತ್ತು ಭಾರತೀಯ ರಾಯಭಾರಿ ಕಚೇರಿಯ ಮೊದಲ ಕಾರ್ಯದರ್ಶಿ ಮನೋಜ್ ಸಿಂಗ್ ನೇಗಿ ಹಾಗೂ ಕನ್ನಡ ಬಳಗದ ಸದಸ್ಯರು ಉಪಸ್ಥಿತರಿದ್ದರು.

    ಜಪಾನ್ ಕನ್ನಡಿಗರ ಹರ್ಷೋದ್ಘಾರ
    ಟೋಕಿಯೋ ಕನ್ನಡ ಬಳಗದೊಂದಿಗಿನ ಸಭೆಯಲ್ಲಿ ‘ಎಲ್ಲಾದರು ಇರು ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು’…..ಎಂಬ ಕವಿವಾಣಿಯೊಂದಿಗೆ ಸಚಿವರು ಭಾಷಣ ಆರಂಭಿಸಿದಾಗ ಸಭೆಯಲ್ಲಿ ಹರ್ಷೋದ್ಘಾರ ಕೇಳಿಬಂತು. ಇದನ್ನೂ ಓದಿ: ಮಹದಾಯಿ ವಿಷಯದಲ್ಲಿ ಮತ್ತೆ ಗೋವಾ ಕ್ಯಾತೆ – ಕರ್ನಾಟಕದ ವಿರುದ್ಧ ತುರ್ತು ತನಿಖೆಗೆ ಶಾಸಕ ಮನವಿ

    Live Tv
    [brid partner=56869869 player=32851 video=960834 autoplay=true]

  • ಅಮೆರಿಕ ಅಧಿಕಾರಿಗಳ ತೈವಾನ್ ಭೇಟಿಯನ್ನು ಚೀನಾದಿಂದ ತಡೆಯಲು ಸಾಧ್ಯವೇ ಇಲ್ಲ: ನ್ಯಾನ್ಸಿ ಪೆಲೋಸಿ

    ಅಮೆರಿಕ ಅಧಿಕಾರಿಗಳ ತೈವಾನ್ ಭೇಟಿಯನ್ನು ಚೀನಾದಿಂದ ತಡೆಯಲು ಸಾಧ್ಯವೇ ಇಲ್ಲ: ನ್ಯಾನ್ಸಿ ಪೆಲೋಸಿ

    ಟೋಕಿಯೋ: ಅಮೆರಿಕದ ಅಧಿಕಾರಿಗಳ ತೈವಾನ್ ಭೇಟಿಯನ್ನು ಚೀನಾ ತಡೆಯುವುದರಿಂದ ನಮ್ಮನ್ನು ಪ್ರತ್ಯೇಕಿಸಲು ಅದಕ್ಕೆ ಸಾಧ್ಯವೇ ಇಲ್ಲ ಎಂದು ಅಮೆರಿಕ ಹೌಸ್ ಆಫ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಶುಕ್ರವಾರ ತಿಳಿಸಿದ್ದಾರೆ.

    ಸಿಂಗಾಪುರ, ಮಲೇಷ್ಯಾ, ತೈವಾನ್ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿದ ಬಳಿಕ ಪೆಲೋಸಿ ಮತ್ತು ಇತರ ಐವರು ಕಾಂಗ್ರೆಸ್ ಸದಸ್ಯರು ಗುರುವಾರ ತಡರಾತ್ರಿ ಟೋಕಿಯೊಗೆ ಆಗಮಿಸಿದರು. ಏಷ್ಯಾ ಪ್ರವಾಸದ ಅಂತಿಮ ಹಂತದಲ್ಲಿರುವ ಪೆಲೋಸಿ ಶುಕ್ರವಾರ, ಚೀನಾಗೆ ನಮ್ಮ ತೈವಾನ್ ಭೇಟಿಯನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿಕೆ ನೀಡಿದರು.

    25 ವರ್ಷಗಳಲ್ಲೇ ತೈವಾನ್‌ಗೆ ಭೇಟಿ ನೀಡಿದ ಮೊದಲ ಹೌಸ್ ಸ್ಪೀಕರ್ ಪೆಲೋಸಿ ಬುಧವಾರ ತೈವಾನ್‌ನ ತೈಪೆಯಲ್ಲಿ ಮಾತನಾಡಿ, ಸ್ವ-ಆಡಳಿತ ದ್ವಿಪಕ್ಷದಲ್ಲಿ ಹಾಗೂ ಬೇರೆಡೆಗಳಲ್ಲೂ ಅಮೆರಿಕದ ಪ್ರಜಾಪಭುತ್ವದ ಬದ್ಧತೆ ಕಬ್ಬಿಣದ ಕವಚವಾಗಿ ಉಳಿದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ

    ತೈವಾನ್ ತಮ್ಮದೇ ದೇಶದ ಭಾಗ ಎಂದು ವಾದಿಸುವ ಚೀನಾ ಅಗತ್ಯವಿದ್ದರೆ ಬಲವಂತವಾಗಿ ಅದನ್ನು ಸ್ವಾಧೀನಪಡಿಸಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದೆ. ಇದರ ನಡುವೆಯೇ ಅಮೆರಿಕ ಸ್ಪೀಕರ್‌ನ ತೈವಾನ್ ಭೇಟಿ ಚೀನಾವನ್ನು ಕೆರಳಿಸಿದೆ. ಈ ಹಿನ್ನೆಲೆ ಚೀನಾ ಗುರುವಾರ ತೈವಾನ್ ಸುತ್ತಮುತ್ತಲಿನ 6 ವಲಯಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಮಿಲಿಟರಿ ಅಭ್ಯಾಸಗಳನ್ನು ಪ್ರಾರಂಭಿಸಿತ್ತು.

    ಈ ಬಗ್ಗೆ ಮಾತನಾಡಿದ ಜಪಾನಿನ ಪ್ರಧಾನ ಮಂತ್ರಿ ಫ್ಯೂಮಿಯೋ ಕಿಶಿಡಾ, ತೈವಾನ್ ಅನ್ನು ಗುರಿಯಾಗಿಸಿ ಚೀನಾ ನಡೆಸಿರುವ ಮಿಲಿಟರಿ ವ್ಯಾಯಾಮ ಗಂಭೀರ ಸಮಸ್ಯೆಯಾಗಿದೆ. ಅಭ್ಯಾಸದ ಭಾಗವಾಗಿ ಜಪಾನಿನ ಕಡೆಗೂ 5 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು, ಇದು ಪ್ರಾದೇಶಿಕ ಶಾಂತಿ ಹಾಗೂ ಭದ್ರತೆಗೆ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು

    Live Tv
    [brid partner=56869869 player=32851 video=960834 autoplay=true]

  • ತೈವಾನ್ ಆಯ್ತು ಈಗ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

    ತೈವಾನ್ ಆಯ್ತು ಈಗ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

    ಟೊಕಿಯೊ: ತೈವಾನ್‍ನ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಚೀನಾ 5 ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ.

    ಈ ಬಗ್ಗೆ ಜಪಾನಿನ ರಕ್ಷಣಾ ಸಚಿವ ನೊಬುವೊ ಕಿಶಿ ಮಾಹಿತಿ ನೀಡಿದ್ದು, ಚೀನಾ ಉಡಾವಣೆ ಮಾಡಿದ್ದ 9 ಕ್ಷಿಪಣಿಗಳಲ್ಲಿ 5 ಜಪಾನ್‍ನ ವಿಶೇಷ ಆರ್ಥಿಕ ವಲಯದೊಳಗೆ ಬಂದಿದೆ. ಇದರಿಂದಾಗಿ ನಮ್ಮ ದೇಶದ ಭದ್ರತೆ ಹಾಗೂ ಜನರ ಜನರ ಸುರಕ್ಷತೆಗೆ ಗಂಭೀರ ಸಮಸ್ಯೆಯಾಗಿದೆ ಎಂದು ತಿಳಿಸಿದರು.

    ಜಪಾನ್‍ನ ದಕ್ಷಿಣದ ದ್ವೀಪ ಪ್ರದೇಶದ ಓಕಿನಾವಾವು ತೈವಾನ್‍ಗೆ ಹತ್ತಿರದಲ್ಲಿವೆ. ಈ ಹಿನ್ನೆಲೆಯಲ್ಲಿ ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್‍ನ ವಿಶೇಷ ಆರ್ಥಿಕ ವಲಯದ ಮೇಲೆ ಬಿದ್ದಿರುವುದು ಇದೇ ಮೊದಲು ಎಂದು ಹೇಳಿದರು.

    ಚೀನಾ ಪ್ರಜಾಸತ್ತಾತ್ಮಕ ತೈವಾನ್ ಅನ್ನು ತನ್ನ ಭೂಪ್ರದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತದೆ. ಅಗತ್ಯವಿದ್ದಲ್ಲಿ ಬಲವಂತವಾಗಿ ಅದನ್ನು ವಶಪಡಿಸಿಕೊಳ್ಳುವುದಾಗಿ ಚೀನಾ ಸರ್ಕಾರ ತಿಳಿಸಿತ್ತು. ಇದನ್ನೂ ಓದಿ: ತೈವಾನ್ ಮೇಲೆ ಚೀನಾದಿಂದ ಕ್ಷಿಪಣಿ ದಾಳಿ

    ಅಷ್ಟೇ ಅಲ್ಲದೇ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‍ಗೆ ಭೇಟಿ ನೀಡಿದ ಬಳಿಕ ಕೆರಳಿರುವ ಚೀನಾವು ಇಂದು ತೈವಾನ್‍ನ ಸುತ್ತಮುತ್ತಲು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇದನ್ನೂ ಓದಿ: ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

    Live Tv
    [brid partner=56869869 player=32851 video=960834 autoplay=true]

  • 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ ಶತಕೋಟಿ ಡಾಲರ್‌ಗಳಷ್ಟು ವಿಸ್ತಾರ

    2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ ಶತಕೋಟಿ ಡಾಲರ್‌ಗಳಷ್ಟು ವಿಸ್ತಾರ

    ನವದೆಹಲಿ: ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಜನರಲ್ಲಿ ಬಲವಾದ ಜಾಗೃತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ ಗಾತ್ರ ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಜಾಗತಿಕ ತಂತ್ರಜ್ಞಾನ ಸಂಸ್ಥೆಯೊಂದು ತಿಳಿಸಿದೆ.

    ಮಾಹಿತಿಗಳ ಪ್ರಕಾರ 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ $3.70 ಶತಕೋಟಿಗಳಷ್ಟು ವಿಸ್ತಾರಗೊಳ್ಳಲಿದೆ. ಸುಮಾರು ಶೇ.44 ರಷ್ಟು ಬೆಳವಣಿಗೆ ಏಷ್ಯಾ ಫೆಸಿಫಿಕ್‍ನಿಂದ ಹುಟ್ಟಿಕೊಂಡಿದ್ದು, ಚೀನಾ, ಭಾರತ, ಜಪಾನ್ ಪ್ರಮುಖ ಮಾರುಕಟ್ಟೆಗಳಾಗಿದೆ. ಇದನ್ನೂ ಓದಿ: ಬಿಸಾಡಿದ ಮಚ್ಚು ತೋರಿಸುತ್ತೇನೆಂದು ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗೆ ಗುಂಡೇಟು

     

    ಲೈಂಗಿಕ ರೋಗಗಳ ಬಗ್ಗೆ ಜಾಗೃತಿ ಮೂಡುತ್ತಿರುವುದು, ಹತ್ತಾರು ಕಂಪನಿಗಳ ಮಾರಾಟ, ಆಕಾರ, ಗಾತ್ರ, ಬಣ್ಣ ಮತ್ತು ಫ್ಲೇವರ್‌ಗಳ ವೈಶಿಷ್ಟ್ಯಗಳು ಹಾಗೂ ಜನರಿಗೆ ವೈಯಕ್ತಿಕವಾಗಿ ಗೌಪ್ಯವಾಗಿ ಲಭ್ಯವಾಗುತ್ತಿರುವ ಹಿನ್ನೆಲೆ ಕಾಂಡೋಮ್ ಮಾರುಕಟ್ಟೆ ವಿಸ್ತರಣೆಯಾಗಲು ಪ್ರಮುಖ ಕಾರಣಗಳಾಗಿದೆ.

    ಕಾಂಡೋಮ್ ಕಂಪನಿಗಳ ಬ್ರ್ಯಾಂಡಿಂಗ್, ಪ್ರಚಾರ, ಗಮನ ಸೆಳೆಯುವ ಪ್ಯಾಕೇಜಿಂಗ್ ಮತ್ತು ಇ-ಕಾರ್ಮಸ್ ಮೂಲಕ ಗೌಪ್ಯವಾಗಿ ಖರೀದಿಸಲು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆ ಕಾಂಡೋಮ್ ಮಾರಾಟ ಮತ್ತಷ್ಟು ಹೆಚ್ಚಾಗಲು ಕಾರಣಗಳಾಗಿವೆ. ಇದನ್ನೂ ಓದಿ: 13 ವರ್ಷಗಳ ನಂತರ ದೆಹಲಿಯಲ್ಲಿ ಸುದೀಪ್ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ ಮಾಡಿದ ಕಿಚ್ಚ

    Live Tv
    [brid partner=56869869 player=32851 video=960834 autoplay=true]

  • ಶಿಂಜೋ ಅಬೆ ಹತ್ಯೆಗೆ ಕಾರಣ ತಿಳಿಸಿದ ಯಮಗಾಮಿ – ತಾನೇ ತಯಾರಿಸಿದ್ದ ಗನ್ ಬಳಕೆ

    ಶಿಂಜೋ ಅಬೆ ಹತ್ಯೆಗೆ ಕಾರಣ ತಿಳಿಸಿದ ಯಮಗಾಮಿ – ತಾನೇ ತಯಾರಿಸಿದ್ದ ಗನ್ ಬಳಕೆ

    ಟೋಕಿಯೋ: ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ (62) ಹಂತಕ ಟೆಟ್ಸುಯಾ ಯಮಗಾಮಿ ಪೊಲೀಸರ ಮುಂದೆ ಹತ್ಯೆಗೆ ಕಾರಣ ತಿಳಿಸಿದ್ದಾನೆ.

    ನಿನ್ನೆ ಜಪಾನ್ ಸಂಸತ್‍ನ ಮೇಲ್ಮನೆಗೆ ಚುನಾವಣೆ ನಡೆಯುತ್ತಿದ್ದ ಪ್ರಚಾರದ ವೇಳೆ ಶಿಂಜೋ ಅಬೆ ಹಿಂದೆ 10 ಅಡಿ ದೂರದಲ್ಲಿ ನಿಂತಿದ್ದ ಟೆಟ್ಸುಯಾ ಯಮಗಾಮಿ 2 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಹಂತಕನನ್ನು ಕೂಡಲೇ ಪೊಲೀಸರು ಬಂಧಿಸಿದ್ದರು. ಬಳಿಕ ತನಿಖೆಯಲ್ಲಿ ಆರೋಪಿ ನಾರಾ ಸಿಟಿಯ ನಿವಾಸಿಯಾಗಿದ್ದು ನೌಕಾಸೇನೆಯ ಮಾಜಿ ಅಧಿಕಾರಿಯಾಗಿದ್ದ. ಜಪಾನೀಸ್ ನೌಕಾಪಡೆಯಾಗಿರುವ ಜಪಾನೀಸ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ (JMSDF)ನಲ್ಲಿ 2005ರ ವರೆಗೆ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಯಮಗಾಮಿ ಕೆಲಸವಿಲ್ಲದೆ ಜೀವನ ಸಾಗಿಸುತ್ತಿದ್ದ. ಘಟನೆಗೆ ಮನೆಯಲ್ಲಿ ತಯಾರಿಸಿದ ದೇಸಿ ಗನ್ ಬಳಕೆ ಮಾಡಿ ಎರಡು ಸುತ್ತು ಗುಂಡು ಹಾರಿಸಿ ಶಿಂಜೋ ಅಬೆಯನ್ನು ಹತ್ಯೆ ಮಾಡಿದ್ದ. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು – ಆಸ್ಪತ್ರೆಯಲ್ಲಿ ನಿಧನ

     

    ಹತ್ಯೆಯ ಬಳಿಕ ಯಮಗಾಮಿಯನ್ನು ನಾರಾದ ನಿಶಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಕಾರಣ ತಿಳಿಸಿದ್ದಾನೆ. ಯಮಗಾಮಿ ಸೇನೆಯಲ್ಲಿ ಸೇವೆಸಲ್ಲಿಸಿದ ಬಳಿಕ ನಿರುದ್ಯೋಗಿಯಾಗಿದ್ದ. ಹಾಗಾಗಿ ನಿರುದ್ಯೋಗದಿಂದ ಬೇಸತ್ತು ಮತ್ತು ಶಿಂಜೋ ಅಬೆಯ ರಾಜಕೀಯ ನಡೆಯಿಂದ ಅಸಮಾಧಾನಗೊಂಡು ಹತ್ಯೆಗೆ ಮುಂದಾಗಿದ್ದ. ಹತ್ಯೆಗಾಗಿ ತಾನೇ ತಯಾರಿಸಿದ್ದ ಗನ್ ಬಳಕೆ ಮಾಡಿದ್ದ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ. ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 40 ಮಂದಿ ನಾಪತ್ತೆ – ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ

    https://twitter.com/Gretche55113699/status/1545314377812922369

    ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ:
    ಜಪಾನ್‍ನಲ್ಲಿ ಶಸ್ತ್ರಾಸ್ತ್ರ ಕಾನೂನುಗಳು ಅತ್ಯಂತ ಕಠಿಣವಾಗಿದ್ದು, ಯಾವುದೇ ವ್ಯಕ್ತಿ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ. ಪರವಾನಗಿ ಕೂಡ ಜಪಾನ್‍ನಲ್ಲಿ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಹಾಗಾಗಿ ಯಮಗಾಮಿ ತಾನೇ ಗನ್ ತಯಾರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಚ್ಚರಿ ಎಂದರೆ ಅಬೆ ಹತ್ಯೆಯ ಬಳಿಕ ಯಮಗಾಮಿ ಓಡಿ ಹೋಗಲೂ ಕೂಡ ಯತ್ನಿಸಿಲ್ಲ. ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು. ಜಪಾನ್ ಇತಿಹಾಸದಲ್ಲೇ ಸುಮಾರು ನೂರು ವರ್ಷಗಳಲ್ಲಿ ಜಪಾನ್‍ನ ಹಾಲಿ ಅಥವಾ ಮಾಜಿ ಪ್ರಧಾನಿಯೊಬ್ಬರನ್ನು ಹತ್ಯೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]