Tag: ಜಪಾನ್

  • ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ

    ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ

    ಟೋಕಿಯೋ: ಜಪಾನ್ (Japan) ಪ್ರಧಾನಿ ಫ್ಯೂಮಿಯೋ ಕಿಶಿಡಾ (Fumio Kishida) ಅವರು ಭಾಷಣ ಮಾಡುತ್ತಿದ್ದ ವೇಳೆ ಹತ್ತಿರದಲ್ಲೇ ಸ್ಫೋಟ (Blast) ಸಂಭವಿಸಿರುವುದಾಗಿ ವರದಿಯಾಗಿದೆ.

    ಪಶ್ಚಿಮ ಜಪಾನ್‌ನ ವಕಯಾಮಾದಲ್ಲಿ (Wakayama) ಕಿಶಿಡಾ ಭಾಷಣ ಮಾಡುತ್ತಿದ್ದರು. ಈ ವೇಳೆ ಪ್ರಧಾನಿಯೆಡೆಗೆ ಸ್ಫೋಟಕ ವಸ್ತುವನ್ನು ಎಸೆಯಲಾಗಿದೆ ಎಂದು ವರದಿಗಳು ತಿಳಿಸಿವೆ. ತಕ್ಷಣವೇ ಕಿಶಿಡಾ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸರು ನಿರಾಕರಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಪ್ರಧಾನಿ ಭಾಷಣ ಮಾಡುತ್ತಿದ್ದ ವೇಳೆ ಅನುಮಾನಾಸ್ಪದ ವಸ್ತುವನ್ನು ಅವರೆಡೆಗೆ ಎಸೆಯಲಾಗಿದೆ. ಈ ವೇಳೆ ಸ್ಥಳದಲ್ಲಿ ಹೊಗೆ ಕಾಣಿಸಿಕೊಂಡಿದೆ. ಸದ್ಯ ಘಟನಾ ಸ್ಥಳದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಧಿಕಾರಿಗಳು ಸ್ಥಳದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಕಾರು ಅಪಘಾತ – ಮಾಜಿ ಸಚಿವ ಆಸ್ಪತ್ರೆಗೆ ದಾಖಲು

    ಕಳೆದ ವರ್ಷ ಜುಲೈನಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ಮಾಜಿ ಪ್ರಧಾನಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಶಿಂಜೋ ಅಬೆ ಹತ್ಯೆಯ ಬಳಿಕ ಜಪಾನ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಶಾಸಕ ವೆಂಕಟಸ್ವಾಮಿ ಹೃದಯಾಘಾತದಿಂದ ನಿಧನ

  • ಜಪಾನ್‌ ಪ್ರಧಾನಿಯೊಂದಿಗೆ ಗೋಲ್‌ ಗಪ್ಪ, ಲಸ್ಸಿ ಸವಿದ ಮೋದಿ!

    ಜಪಾನ್‌ ಪ್ರಧಾನಿಯೊಂದಿಗೆ ಗೋಲ್‌ ಗಪ್ಪ, ಲಸ್ಸಿ ಸವಿದ ಮೋದಿ!

    ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯಕ್ಕೆ ಸಾಲು ಸಾಲು ಭೇಟಿ ನೀಡುವ ಕಾರ್ಯಕ್ರಮ ಕೈಗೊಂಡಿದ್ದಾರೆ. ಇದೇ ಮಾರ್ಚ್‌ 25ಕ್ಕೆ ಮತ್ತೊಮ್ಮೆ ಭೇಟಿ ನೀಡಲಿರುವ ಮೋದಿ ಬೆಂಗಳೂರಿನಲ್ಲಿ ಬೃಹತ್‌ ರೋಡ್‌ ಶೋ ಸಹ ನಡೆಸಲಿದ್ದಾರೆ. ಇಂತಹ ಬ್ಯೂಸಿ ಶೆಡ್ಯೂಲ್‌ ನಡುವೆಯೂ ಜಪಾನ್‌ ಪ್ರಧಾನಿಯೊಂದಿಗೆ ಕಾಲಕಳೆದಿದ್ದಾರೆ.

    ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ (Fumio Kishida) ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು, ಸೋಮವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಸ್ವಾಗತಿಸಿದ್ದಾರೆ. ಬಳಿಕ ಮೋದಿ ಅವರೊಂದಿಗೆ ದೆಹಲಿಯ ಬುದ್ಧ ಜಯಂತಿ ಪಾರ್ಕ್‌ಗೆ ಭೇಟಿ ನೀಡಿ, ಬೋಧಿ ವೃಕ್ಷಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಇದೇ ವೇಳೆ ಗೋಲ್‌ ಗಪ್ಪ ಮತ್ತು ಲಸ್ಸಿ ಸೇರಿದಂತೆ ಭಾರತೀಯ ಖಾದ್ಯಗಳನ್ನ ಸವಿದು ಸಂತಸಪಟ್ಟಿದ್ದಾರೆ.

    15 ವರ್ಷಗಳ ಹಿಂದೆ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ದೆಹಲಿಗೆ ಭೇಟಿ ನೀಡಿ, ಇಂಡೋ-ಫೆಸಿಪಿಕ್ ಸಹಕಾರ ಕುರಿತಂತೆ ಮಾತನಾಡಿದ್ದರು. ಇದೀಗ ಫ್ಯೂಮಿಯೊ ಕಿಶಿದಾ G7 ಹಿರೋಶಿಮ ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನ ಔಪಚಾರಿಕವಾಗಿ ಆಹ್ವಾನಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

    ಇದೇ ವೇಳೆ ಭಾರತ ಮತ್ತು ಜಪಾನ್ ನಡುವೆ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಲಯದಲ್ಲಿ ಪರಸ್ಪರ ಸಹಕಾರ ಪಡೆಯುವ ಬಗ್ಗೆ ಮಾತುಕತೆ ನಡೆಸಿದರು. ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಮಾ.25ರಂದು ಮತ್ತೆ ಮೋದಿ ರಾಜ್ಯಕ್ಕೆ – ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋಗೆ ಮುಹೂರ್ತ ಫಿಕ್ಸ್‌

  • ಮಹಿಳೆಯನ್ನು ಎಳೆದಾಡಿ ಕಿರುಕುಳ- ಮೂವರ ಬಂಧನ

    ಮಹಿಳೆಯನ್ನು ಎಳೆದಾಡಿ ಕಿರುಕುಳ- ಮೂವರ ಬಂಧನ

    ನವದೆಹಲಿ: ಜಪಾನ್ (Japan) ಪ್ರವಾಸಿ ಮಹಿಳೆಯೊಬ್ಬರಿಗೆ ಹೋಳಿ (Holi) ಆಚರಣೆ ವೇಳೆ ಕಿರುಕುಳ ನೀಡಿದ ಆರೋಪದ ಮೇಲೆ ಮೂರು ಜನರನ್ನು ಬಂಧಿಸಲಾಗಿದೆ ಎಂದು ದೆಹಲಿ (Delhi) ಪೊಲೀಸರು ತಿಳಿಸಿದ್ದಾರೆ.

    ದೆಹಲಿಯ ಪಹರ್‌ಗಂಜ್‌ನಲ್ಲಿ (Paharganj) ತಂಗಿದ್ದ ಮಹಿಳೆಗೆ, ಅದೇ ಊರಿನ ಮೂವರು ಕಿರುಕುಳ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

    KILLING CRIME

    ಮಹಿಳೆಯನ್ನು ಎಳೆದಾಡಿ `ಹೋಳಿ ಹೈ’ ಎಂಬ ಘೋಷಣೆ ಕೂಗಿ ಮೈಗೆ ಬಣ್ಣ ಬಳಿದಿದ್ದಾರೆ. ಒಬ್ಬ ಆಕೆಯ ತಲೆಯ ಮೇಲೆ ಮೊಟ್ಟೆ ಒಡೆದಿದ್ದಾನೆ. ಕೊನೆಯಲ್ಲಿ ಒಬ್ಬನಿಗೆ ಕೆನ್ನೆಗೆ ಆಕೆ ಬಾರಿಸಿದ್ದು ವೀಡಿಯೋದಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಬಾಲಕಿಯನ್ನು ರೇಪ್ ಮಾಡಿ ಪೊದೆಗೆ ಎಸೆದ ಕುಡುಕ!

    ವೀಡಿಯೋ ವೈರಲ್ ಆಗುತ್ತಿದ್ದಂತೆ ಕಿರುಕುಳ ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆಯೇ ಯುವತಿ ಬಾಂಗ್ಲಾದೇಶಕ್ಕೆ ( Bangladesh) ತೆರಳಿದ್ದಾಳೆ. ಟ್ವಿಟ್ಟರ್‌ನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದೇನೆ ಎಂದು ಬರೆದುಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಥಳೀಯ ಗುಪ್ತಚರ (Intelligence) ಅಧಿಕಾರಿಗಳು ಆರೋಪಿಗಳನ್ನು ಗುರುತಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜಪಾನ್ ರಾಯಭಾರಿ ಕಚೇರಿಯೊಂದಿಗೆ ಈ ಬಗ್ಗೆ ಮಾತಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ

  • ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

    ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

    ಟೋಕಿಯೋ: ಜೀವಿಗಳ ಸಂತಾನೋತ್ಪತ್ತಿ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮೊದಲ ಬಾರಿಗೆ ಎರಡು ಗಂಡು ಇಲಿಗಳನ್ನು (Rat) ಉಪಯೋಗಿಸಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಲಾಗಿದೆ.

    ಭವಿಷ್ಯದಲ್ಲಿ ಇಬ್ಬರು ಪುರುಷರು ಸೇರಿ ಮಕ್ಕಳನ್ನು ಹೇರಲು ಈ ವಿಧಾನ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದನ್ನೂ ಓದಿ: ಮಹಿಳಾ ಮಾಡೆಲ್‌ಗಳಿಗೆ ನಿಷೇಧ – ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು

    ಪ್ರಕ್ರಿಯೆ ಹೇಗೆ?
    ಜಪಾನ್‌ನ ಕ್ಯುಷು, ಒಸಾಕಾ ವಿವಿಯ (Kyushu University) ತಜ್ಞರು ಮೊದಲು ಇಲಿಯ ಚರ್ಮ ಕಣಗಳನ್ನು ಸಂಗ್ರಹಿಸಿ, ಇಂಡ್ಯೂಸ್ಡ್ ಫ್ಲೋರಿಪೋಟೆಂಟ್ ಸ್ಟೆಮ್ ಕಣಗಳನ್ನು ಸೃಷ್ಟಿಸಲು ಈ ಚರ್ಮಕಣಗಳನ್ನು ಮೂಲ ಕಣಗಳ ಸ್ಥಿತಿಗೆ ಸೇರಿಸಿದ್ದರು. ನಂತರ ಅವುಗಳಿಂದ ವೈ ಕ್ರೋಮೋಸೋಮ್ಸ್ ಬೇರ್ಪಡಿಸಿ ಆ ಸ್ಥಾನದಲ್ಲಿ ಮತ್ತೊಂದು ಎಕ್ಸ್ ಕ್ರೋಮೋಸೋಮ್ಸ್ ಇರಿಸಿದರು.

    ಈ ಕಣಗಳನ್ನು ಅಂಡಾಣುಗಳನ್ನಾಗಿ ಪರಿವರ್ತಿಸಿ, ನಂತರ ಈ ಅಂಡಾಣುಗಳನ್ನು ಮತ್ತೊಂದು ಇಲಿಯ ವೀರ್ಯದಲ್ಲಿ ಸೇರಿಸಿದರು. ಈ ವಿಧಾನದಲ್ಲಿ 600 ಪಿಂಡಗಳು ಸೃಷ್ಟಿಯಾದವು. ಇವನ್ನು ಸರೋಗೇಟ್ ಇಲಿಗಳಲ್ಲಿ ಇರಿಸಿದ ನಂತ್ರ ಏಳು ಇಲಿ ಮರಿಗಳು ಹುಟ್ಟಿದ್ದು, ಅವು ಆರೋಗ್ಯವಾಗಿವೆ. ಈ ಇಲಿಗಳಿಗೆ ಜೀವಶಾಸ್ತ್ರದ ಲೆಕ್ಕದಲ್ಲಿ ಹೇಳೋದಾದ್ರೆ ಇಬ್ಬರು ತಂದೆ (ಬಯಾಲಾಜಿಕಲ್ ಫಾದರ್) (Biological Fathers) ಇಲಿಗಳಿವೆ ಎಂದು ಹೇಳಲಾಗಿದೆ.

    ಮಾನವ ಕಣಗಳ ಮೇಲೆಯೂ ಈ ವಿಧಾನವನ್ನು ಪ್ರಯೋಗ ಮಾಡುವ ಬಗ್ಗೆ ಇದೀಗ ಪರಿಶೀಲಿಸಲಾಗುತ್ತಿದೆ. ಭವಿಷ್ಯದಲ್ಲಿ ಇಬ್ಬರು ಪುರುಷರು ಸೇರಿಕೊಂಡು ಸಂತಾನೋತ್ಪತ್ತಿ ಮಾಡುವುದಕ್ಕೆ ಈ ವಿಧಾನ ಅವಕಾಶ ಮಾಡಿಕೊಡುವ ಸಂಭವ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪಾಕ್ ಇತಿಹಾಸ ಪುಸ್ತಕಗಳಲ್ಲಿ ಭಾರತ, ಹಿಂದೂ ವಿರೋಧಿ ನಿಲುವು – ಪಠ್ಯದಲ್ಲಿ ಗಾಂಧಿ ಹಿಂದೂ ನಾಯಕ ಎಂದು ಪರಿಚಯ

  • ಜಪಾನ್ ಮೇಲೆ ಪರೀಕ್ಷಾರ್ಥ ಖಂಡಾಂತರ ಕ್ಷಿಪಣಿ ಹಾರಿಸಿದ ಉ. ಕೊರಿಯಾ – ಅಮೆರಿಕ, ದ. ಕೊರಿಯಾಗೆ ಎಚ್ಚರಿಕೆ

    ಜಪಾನ್ ಮೇಲೆ ಪರೀಕ್ಷಾರ್ಥ ಖಂಡಾಂತರ ಕ್ಷಿಪಣಿ ಹಾರಿಸಿದ ಉ. ಕೊರಿಯಾ – ಅಮೆರಿಕ, ದ. ಕೊರಿಯಾಗೆ ಎಚ್ಚರಿಕೆ

    ಪ್ಯೊಂಗ್ಯಾಂಗ್: ಅಮೆರಿಕ (America) ಹಾಗೂ ದಕ್ಷಿಣ ಕೊರಿಯಾಗೆ (South Korea) ಎಚ್ಚರಿಕೆ ನೀಡುವ ಸಲುವಾಗಿ ಉತ್ತರ ಕೊರಿಯಾ (North Korea) ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು (Missile Test) ನಡೆಸಿರುವುದಾಗಿ ತಿಳಿಸಿದೆ. ಕ್ಷಿಪಣಿ ಜಪಾನ್ (Japan) ಬಳಿಯಲ್ಲಿ ಪತನಗೊಂಡಿದ್ದು, ತೀವ್ರ ಆತಂಕ ಸೃಷ್ಟಿಸಿದೆ.

    ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಶನಿವಾರ ಹಠಾತ್ತನೆ ಕ್ಷಿಪಣಿ ಪರೀಕ್ಷೆ ನಡೆಸಲು ಆದೇಶಿಸಿರುವುದಾಗಿ ವರದಿಯಾಗಿದೆ. ಉತ್ತರ ಕೊರಿಯಾ ಮೊದಲ ಬಾರಿಗೆ ಪರೀಕ್ಷಿಸಿರುವ ಹ್ವಾಸಾಂಗ್-15 ಕ್ಷಿಪಣಿ ಪ್ಯೊಂಗ್ಯಾಂಗ್ ವಿಮಾನ ನಿಲ್ದಾಣದಿಂದ ಹಾರಿಸಲಾಗಿದೆ. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?

    ಶನಿವಾರ ಈ ಕ್ಷಿಪಣಿ ಜಪಾನಿನ ಬಳಿ ಪತನವಾಗಿದೆ. ಕ್ಷಿಪಣಿ ಗುರಿಯನ್ನು ಹೊಡೆಯುವುದಕ್ಕೂ ಮೊದಲು 66 ನಿಮಿಷ ವಾಯುಪ್ರದೇಶದಲ್ಲಿ ಸಂಚರಿಸಿದೆ. ಇದು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಅನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.

    ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಜಂಟಿಯಾಗಿ ಯುದ್ಧಭ್ಯಾಸಗಳನ್ನು ನಡೆಸಲು ಮುಂದಾಗಿರುವುದರಿಂದ ಉತ್ತರ ಕೊರಿಯಾ ಇದನ್ನು ವಿರೋಧಿಸಲು ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ ಎನ್ನಲಾಗಿದೆ. ಕಳೆದ ವಾರ ಉತ್ತರ ಕೊರಿಯಾ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು. ಇದೀಗ ಕ್ಷಿಪಣಿ ಪರೀಕ್ಷೆಯನ್ನು ಉತ್ತರ ಕೊರಿಯಾದ ನಾಯಕತ್ವ ಶ್ಲಾಘಿಸಿಕೊಂಡಿದೆ. ಇದು ಮಾರಣಾಂತಿಕ ಪರಮಾಣು ಪ್ರತಿದಾಳಿಯ ಸಾಮರ್ಥ್ಯಕ್ಕೆ ನಿಜವಾದ ಪುರಾವೆಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಪಾನ್-ದಕ್ಷಿಣ ಕೊರಿಯಾ ಜಲಮಾರ್ಗದಲ್ಲಿ ಮುಳುಗಿದ ಹಡಗು; 8 ಮಂದಿ ಸಾವು

    ಜಪಾನ್-ದಕ್ಷಿಣ ಕೊರಿಯಾ ಜಲಮಾರ್ಗದಲ್ಲಿ ಮುಳುಗಿದ ಹಡಗು; 8 ಮಂದಿ ಸಾವು

    ಟೋಕಿಯೊ: ಜಪಾನ್‌ನ (Japan) ನಾಗಸಾಕಿ ಪ್ರಾಂತ್ಯದ ಪೂರ್ವ ಚೀನಾ (China) ಸಮುದ್ರದಲ್ಲಿ ಬುಧವಾರ ಹಡಗು ಮುಳುಗಿ ಎಂಟು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

    ಹಾಂಗ್ ಕಾಂಗ್‌ನ ನೋಂದಾಯಿತ ಸರಕು ಹಡಗಿನಿಂದ ರಕ್ಷಿಸಲ್ಪಟ್ಟ 13 ಜನರಲ್ಲಿ, ಆರು ಮಂದಿ ಚೀನಾದಿಂದ ಬಂದವರು. ಸಂಬಂಧಪಟ್ಟವರ ದೇಶಗಳನ್ನು ಸಂಪರ್ಕಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. ಇದನ್ನೂ ಓದಿ: ತಾಲಿಬಾನ್‌ನ್ನು 21ನೇ ಶತಮಾನಕ್ಕೆ ತರಲು ಸಹಾಯ ಮಾಡಿ – ಮುಸ್ಲಿಂ ಮಹಿಳೆ ಸಲಹೆ

    ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್‌ನ ಡಾಂಜೋ ದ್ವೀಪಗಳ ಪಶ್ಚಿಮಕ್ಕಿರುವ ಸುಮಾರು 110 ಕಿಲೋಮೀಟರ್‌ ದೂರದ ಭಾಗದಿಂದ ರಾತ್ರಿ 11:15 ರ ಸುಮಾರಿಗೆ ಹಡಗು ದುರಂತದ ಕರೆ ಬಂದಿತ್ತು. ಚಂಡಮಾರುತದ ಎಚ್ಚರಿಕೆ ನೀಡಿಲಾಗಿತ್ತು. ಆ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ.

    ಸರಕು ಹಡಗಿನಲ್ಲಿ 14 ಮಂದಿ ಚೀನೀಯರು ಮತ್ತು 8 ಮಂದಿ ಮ್ಯಾನ್ಮಾರ್ ಸಿಬ್ಬಂದಿ ಇದ್ದರು. ಮರದ ತುಂಡುಗಳನ್ನು ಹಾಕಿಕೊಂಡು ಮಲೇಷ್ಯಾದಿಂದ ದಕ್ಷಿಣ ಕೊರಿಯಾದ ಇಂಚಿಯಾನ್‌ಗೆ ಹಡಗು ತೆರಳುತ್ತಿತ್ತು. ಇದನ್ನೂ ಓದಿ: ಅಮೆರಿಕದಲ್ಲಿ ಮುಂದುವರಿದ ಗುಂಡಿನ ಮೊರೆತ – ಶೂಟೌಟ್‌ಗೆ 3 ಬಲಿ

    ಎಎಸ್‌ಡಿಎಫ್‌ನಿಂದ ರಕ್ಷಿಸಲ್ಪಟ್ಟ ಇಬ್ಬರನ್ನು ನಾಗಸಾಕಿಯಿಂದ ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಪಾನ್‌ ಮಿಲಿಟರಿ ಬಜೆಟ್‌ ಹೆಚ್ಚಿಸಿದ್ದು ಯಾಕೆ?

    ಜಪಾನ್‌ ಮಿಲಿಟರಿ ಬಜೆಟ್‌ ಹೆಚ್ಚಿಸಿದ್ದು ಯಾಕೆ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟೋಕಿಯೋ ತೊರೆದ್ರೆ ಪ್ರತಿ ಮಗುವಿಗೂ ಸಿಗುತ್ತೆ ಲಕ್ಷ-ಲಕ್ಷ ಹಣ

    ಟೋಕಿಯೋ ತೊರೆದ್ರೆ ಪ್ರತಿ ಮಗುವಿಗೂ ಸಿಗುತ್ತೆ ಲಕ್ಷ-ಲಕ್ಷ ಹಣ

    ಟೋಕಿಯೋ: ರಾಜಧಾನಿ ಟೋಕಿಯೋ ನಗರದಲ್ಲಿ ಜನಸಂಖ್ಯೆ (Tokyo, Population) ಒತ್ತಡವನ್ನ ಕಡಿಮೆ ಮಾಡಲು ಜಪಾನ್ ಸರ್ಕಾರ ಲಕ್ಷಗಟ್ಟಲೇ ಹಣ ನೀಡುವ ಯೋಜನೆ ಪ್ರಕಟಿಸಿದೆ.

    ಟೋಕಿಯೋದಿಂದ ಯಾರು ಹೊರ ಹೋಗ್ತಾರೋ ಅಂತಹ ಕುಟುಂಬಗಳ ಪ್ರತಿಯೊಂದು ಮಗುವಿಗೆ 10 ಲಕ್ಷ ಯೆನ್ ಅಂದ್ರೆ ಅಂದಾಜು 6.26 ಲಕ್ಷ ರೂಪಾಯಿ ಹಣ ನೀಡುವುದಾಗಿ ಅಲ್ಲಿನ ಸರ್ಕಾರ (Japan Government) ಆಫರ್ ನೀಡಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಕಳೆದ ವರ್ಷ ಮೊದಲಬಾರಿಗೆ ಜಪಾನ್‌ನಲ್ಲಿ (Japan) ಜನಸಂಖ್ಯಾ ಕುಸಿತ ವರದಿಯಾಗಿದ್ದು, ಕೊರೊನಾ ಕಾರಣದಿಂದಾಗಿಯೇ ಜನಸಂಖ್ಯೆ ಕುಸಿದಿರುವುದಾಗಿ ಜನಸಂಖ್ಯಾ ನೀತಿ ನಿರೂಪಕರು ಹೇಳಿದ್ದಾರೆ. ಅದರಲ್ಲೂ ದೇಶದ ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯಾ ಸಾಂದ್ರತೆ ಕಡಿಮೆಯಾಗಿದ್ದು, ಸೌಲಭ್ಯಗಳು ಉತ್ತಮವಾಗಿರುವ ನಗರ ಪ್ರದೇಶಗಳತ್ತ ಜನರು ವಲಸೆ ಹೋಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

    ಈ ಹಿನ್ನೆಲೆ ಗ್ರಾಮೀಣ ಭಾಗಗಳಿಗೆ ಜನರು ಹಿಂದಿರುಗಲು ಮತ್ತು ನಗರಗಳಿಂದ ವಸತಿ ಬದಲಾಯಿಸುವಂತೆ ಮಾಡಲು ಸರ್ಕಾರ, ನಗರಗಳನ್ನು ತೊರೆಯುವ ಕುಟುಂಬಕ್ಕೆ 1.87 ಲಕ್ಷ ರೂ.ಗಳ ಸಹಾಯಧನ (3 ಲಕ್ಷ ಯೆನ್) ನೀಡಲಾಗ್ತಿತ್ತು. ಆದ್ರೆ, ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಈ ಸೌಲಭ್ಯವನ್ನು ಪರಿಷ್ಕರಿಸಿದ್ದು, ರಾಜಧಾನಿ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.26 ಲಕ್ಷ ರೂ. ನೀಡುವುದಾಗಿ ಹೇಳಿದೆ. ಈ ವರ್ಷದ ಏಪ್ರಿಲ್‌ನಿಂದ ಈ ಯೋಜನೆ ಜಾರಿಗೆ ಬರಲಿದೆ.

    ಪ್ರಸ್ತುತ ಜಪಾನ್ ಜನಸಂಖ್ಯೆ 12.57 ಕೋಟಿಯಿದ್ದು ಟೋಕಿಯೋ ನಗರದಲ್ಲೇ 1.4 ಕೋಟಿ ಜನ ವಾಸಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತಷ್ಟು ಹಣ ಕೊಡ್ತೇವೆ, ಮಕ್ಕಳನ್ನು ಹಡೆಯಿರಿ – ಪೋಷಕರಿಗೆ ಜಪಾನ್ ಆಫರ್

    ಮತ್ತಷ್ಟು ಹಣ ಕೊಡ್ತೇವೆ, ಮಕ್ಕಳನ್ನು ಹಡೆಯಿರಿ – ಪೋಷಕರಿಗೆ ಜಪಾನ್ ಆಫರ್

    ಟೋಕಿಯೋ: ಜಪಾನ್‍ನಲ್ಲಿ (Japan) ಜನನ ಪ್ರಮಾಣ ಗಣನೀಯವಾಗಿ ಇಳಿಮುಖ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಜನರು ಮಗುವನ್ನು (Baby) ಮಾಡಿಕೊಂಡರೆ ಈಗಾಗಲೇ ನೀಡುತ್ತಿರುವ ಹಣಕ್ಕಿಂತಲೂ (Money) 48 ಸಾವಿರ ರೂ. ಅಧಿಕ ನೀಡುವುದಾಗಿ ತಿಳಿಸಿದೆ.

    ಈಗಾಗಲೇ ಮಗುವಿನ ಜನನದ ನಂತರ ಹೊಸ ಪೋಷಕರಿಗೆ ಹೆರಿಗೆ ಮತ್ತು ಶಿಶುಪಾಲನೆಗಾಗಿ ಒಟ್ಟು 420,000 ಯೆನ್‍ಗಳ (2,52,338 ರೂ.) ಅನುದಾನವನ್ನು ನೀಡುತ್ತಿದೆ. ಇದೀಗ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವ ಕ್ಯಾಟೊ ಕಟ್ಸುನೋಬು ಮಗು ಜನನದ ನಂತರ ನೀಡಲಾಗುವ ಹಣವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಆ ಸಂಖ್ಯೆಯನ್ನು 5,00,000 ಯೆನ್‍ಗೆ (3,00,402 ರೂ.) ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಈ ಬಗ್ಗೆ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಯೋಜನೆಯನ್ನು ಚರ್ಚಿಸಿದ್ದಾರೆ. ಸರ್ಕಾರ 2023ರ ಆರ್ಥಿಕ ವರ್ಷಕ್ಕೆ ಅಂಗೀಕರಿಸುವ ಸಾಧ್ಯತೆಯಿದೆ.

    ಜಪಾನ್‍ನಲ್ಲಿ ಸಾರ್ವಜನಿಕ ವೈದ್ಯಕೀಯ ವಿಮಾ ವ್ಯವಸ್ಥೆಯಿದೆ. ಇದರಿಂದಾಗಿ ಸರ್ಕಾರವು ನೀಡುವ ಅನುದಾನವನ್ನು ಹೆಚ್ಚಿಸಿದರೆ ಆಸ್ಪತ್ರೆಯಿಂದ ಮನೆಗೆ ಬರುವಾಗ ಪಾಲಕರು ಸರಾಸರಿ 30,000 ಯೆನ್‍ಗಳು ಉಳಿಯುತ್ತದೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದ ಕಾಂಗ್ರೆಸ್ ಶಾಸಕ – ಬಿಜೆಪಿಯಿಂದ ಆಕ್ರೋಶ

    2021ರಲ್ಲಿ ಬಿಡುಗಡೆಯಾದ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಜಪಾನ್‍ನಲ್ಲಿ ಜನನದ ದರಕ್ಕಿಂತ ಸಾವಿನ ದರವೇ ಹೆಚ್ಚಿದೆ. ದೇಶದಲ್ಲಿ ಕಳೆದ ವರ್ಷ 8,11,604 ಜನನವಾಗಿದ್ದರೆ, 14,39,809 ಸಾವು ದಾಖಲಿಸಿದೆ. ಇದನ್ನೂ ಓದಿ: ಪ್ರೇಯಸಿಯ ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತಾಕಿದ ಪ್ರಿಯಕರ – 15 ದಿನದ ಬಳಿಕ ಪ್ರಕರಣ ಬೆಳಕಿಗೆ

    Live Tv
    [brid partner=56869869 player=32851 video=960834 autoplay=true]

  • ಜಪಾನ್‍ನಲ್ಲಿದ್ದಾರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

    ಜಪಾನ್‍ನಲ್ಲಿದ್ದಾರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

    ಬೀಜಿಂಗ್: 2020ರಿಂದ ಸಾರ್ವಜನಿಕವಾಗಿ ಕಾಣೆಯಾಗಿದ್ದ ಅಲಿಬಾಬಾ (Alibaba) ಸಂಸ್ಥಾಪಕ ಜಾಕ್ ಮಾ ಇದೀಗ ಜಪಾನ್‍ನಲ್ಲಿ (Japan) ಕಾಣಿಸಿಕೊಂಡಿದ್ದು, ಟೋಕಿಯೋದಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಜಾಕ್ ಮಾ (Jack Ma) ಚೀನಾದಲ್ಲಿ (China) ಏಕಸ್ವಾಮ್ಯ ವಿರೋಧಿ ನಿಯಮಗಳನ್ನು ಉಲ್ಲಂಘಿಸಿ ಚೀನಾ ಸರ್ಕಾರದಿಂದ ತೊಂದರೆಗೀಡಾಗಿದ್ದರು. ಅದಾದ ಬಳಿಕ ಚೀನೀಸ್ ರೆಗ್ಯೂಲೇಟರ್ಸ್‍ನವರು ಅಲಿಬಾಬಾ ಸಂಸ್ಥೆಯ ಫಿಂಟೆಕ್ ದೈತ್ಯ ಆಂಟ್ ಫೈನಾನ್ಶಿಯಲ್‍ನ ಐಪಿಒವನ್ನು ಅಮಾನತಿನಲ್ಲಿಟ್ಟು, ಅಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿದ್ದರು. ಆ ಬಳಿಕ ಜಾಕ್ ಮಾ ಕಾಣೆಯಾಗಿದ್ದರು ಎನ್ನಲಾಗಿತ್ತು.

    ಇದೀಗ ಮೂಲಗಳ ಪ್ರಕಾರ ಜಾಕ್ ಮಾ ಅವರು ಕಳೆದ 6 ತಿಂಗಳಿಂದ ಟೋಕಿಯೋದ ಹೊರಗಿನ ಗ್ರಾಮಾಂತರದಲ್ಲಿ ಸ್ಕೀ ರೆಸಾರ್ಟ್‍ಗಳಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಆಗಾಗ ಅಮೆರಿಕ ಹಾಗೂ ಇಸ್ರೇಲ್‍ಗೆ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿವೆ. ಇದನ್ನೂ ಓದಿ: ಆರೋಪಿ ಜೀಪ್‌ನಿಂದ ಬಿದ್ದು ಸಾವು ಪ್ರಕರಣ- ಮೂವರು ಪೊಲೀಸರ ವಿರುದ್ಧ FIR

    ಜಾಕ್ ಮಾ ಹೇಳಿದ್ದೇನು?: 2020ರ ಅಕ್ಟೋಬರ್ 24 ರಂದು ಶಾಂಘೈನಲ್ಲಿ ಜಾಕ್ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು.

    ಜಾಕ್ ಮಾ ಭಾಷಣ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಜನ ಜಾಕ್ ಮಾ ಸುರಕ್ಷತೆಯ ಬಗ್ಗೆ ಆಗಲೇ ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದರು. ಅದಾದ ಬಳಿಕ ಚೀನಾ ಸರ್ಕಾರದಿಂದ ಅನೇಕ ಸಂಕಷ್ಟ ಎದುರಿಸಿದ್ದರು. ಇದನ್ನೂ ಓದಿ: ಮದುವೆ ನಿಶ್ಚಯವಾಗಿದ್ದ ಹುಡುಗನ ಜೊತೆ ತೆರಳಿದ್ದ ಅಪ್ರಾಪ್ತೆ ಅನುಮಾನಾಸ್ಪದ ಸಾವು

    Live Tv
    [brid partner=56869869 player=32851 video=960834 autoplay=true]