ಟೋಕಿಯೊ: ಜಪಾನಿನ ಬಾಹ್ಯಾಕಾಶ ಸಂಸ್ಥೆ (Japan Space Agency) ಅಭಿವೃದ್ಧಿಪಡಿಸಿದ್ದ ರಾಕೆಟ್ ಶುಕ್ರವಾರ ಪರೀಕ್ಷೆಯ ಸಮಯದಲ್ಲಿ ಸ್ಫೋಟಗೊಂಡಿದೆ. ಆದ್ರೆ ಯಾವುದೇ ಹಾನಿಯಾಗಿಲ್ಲ ಎಂದು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (JAXA) ತಿಳಿಸಿದೆ.
ಉತ್ತರ ಜಪಾನ್‌ನಲ್ಲಿರುವ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ ಏಜೆನ್ಸ್ (ಜೆಎಎಕ್ಸ್‌ಎ) ಟೆಸ್ಟಿಂಗ್ ಕೇಂದ್ರದಲ್ಲಿ ಎಪ್ಸಿಲಾನ್ ಎಸ್. ಎಂಬ ಎಂಜಿನ್ (Epsilon Engine) ಸ್ಪೋಟಗೊಂಡಿದೆ. ಇದರಿಂದಾಗಿ ಜಪಾನ್ ಬಾಹ್ಯಾಕಾಶ ಮಹತ್ವಾಕಾಂಕ್ಷೆಯ ಯೋಜನೆಗೆ ಹಿನ್ನಡೆಯಾಗಿದೆ. ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲೂ ಸತತ ವೈಫಲ್ಯ ಅನುಭವಿಸಿತ್ತು.
ಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪರೀಕ್ಷೆಗೆ ಚಾಲನೆ ನೀಡಿದಾಗ ಸುಮಾರು 1 ನಿಮಿಷದ ನಂತರ ಎಂಜಿನ್ ಸ್ಫೋಟಗೊಂಡಿದೆ. ಅಪಘಾತಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜೆಎಎಕ್ಸ್‌ಎ ತಿಳಿಸಿದೆ. ಇದನ್ನೂ ಓದಿ: ಚಂದ್ರಯಾನ-3 ಭಾರತದ ಭರವಸೆ, ಕನಸುಗಳನ್ನ ಹೊತ್ತೊಯ್ಯಲಿದೆ – ಪ್ರಧಾನಿ ಶುಭಹಾರೈಕೆ
ಭಾರತದಲ್ಲಿ ಉಡಾವಣೆ ಯಶಸ್ವಿ:
ಇತ್ತ ಭಾರತದಲ್ಲಿ ಬಾಹುಬಲಿ ರಾಕೆಟ್ ಎಲ್‌ವಿಎಂ3- ಎಂ4 ಮೂಲಕ ಚಂದ್ರಯಾನ-3ರ (Chandrayaan-3) ಉಡಾವಣೆ ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಲ್ಯಾಂಡರ್ (ವಿಕ್ರಮ್), ರೋವರ್ (ಪ್ರಜ್ಞಾನ) ಹೊತ್ತ ರಾಕೆಟ್ ನಭಕ್ಕೆ ಚಿಮ್ಮಿತು. ಮಧ್ಯಾಹ್ನ 2:35 ನಿಮಿಷಕ್ಕೆ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿತು. ಇದನ್ನೂ ಓದಿ: ಅಮೆರಿಕದ 1 ನಿರ್ಧಾರ – ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿಯಾದ ಭಾರತ
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ (KGF) ಸರಣಿ ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಆದರೂ, ಅದರ ಕ್ರೇಜ್ ಇನ್ನೂ ನಿಂತಿಲ್ಲ. ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ (Japan) ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿವೆ.
ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳನ್ನು ಈಗಾಗಲೇ ಜಪಾನ್ ಭಾಷೆಗೆ ಡಬ್ ಮಾಡಿದ್ದು, ಏಕಕಾಲಕ್ಕೆ ಎರಡೂ ಚಿತ್ರಗಳು ಜುಲೈ 14ರಂದು ಬಿಡುಗಡೆ (Release) ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗುತ್ತಿರುವುದು ವಿಶೇಷ. ಈಗಾಗಲೇ ಈ ಕುರಿತು ಜಪಾನ್ ನಲ್ಲಿ ಪ್ರಚಾರ ಕಾರ್ಯ ಕೂಡ ಶುರು ಮಾಡಲಾಗಿದೆ. ಕೆಜಿಎಫ್ 1 ಸಿನಿಮಾ 91 ಶೋಗಳು ಹಾಗೂ ಕೆಜಿಎಫ್ 2 ಸಿನಿಮಾದ 85 ಶೋಗಳು ಮುಂಗಡವಾಗಿ ಈಗಾಗಲೇ ಬುಕ್ ಆಗಿವೆ.
ಕೆಜಿಎಫ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ನೋಡುಗರನ್ನು ತಲುಪಿದ್ದರು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ (Yash). ಕೆಜಿಎಫ್ 1 ಮಾಡಿದ ಮೋಡಿಯೇ ಕೆಜಿಎಫ್ 2 ಚಿತ್ರಕ್ಕೆ ಸಾಕಷ್ಟು ಪ್ಲಸ್ ಪಾಯಿಂಟ್ ಆಯಿತು. ಮೊದಲ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಂದುಕೊಟ್ಟ ಹಣದ ಎರಡರಷ್ಟು ಪಾರ್ಟ್ 2 ಮಾಡಿತು. ಹೀಗಾಗಿ ಎರಡೂ ಚಿತ್ರಗಳ ಮೂಲಕ ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಬಂತು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ
ಆರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದು ಗುರುತಿಸಬೇಕಾದ ಸಂಗತಿ. ಜುಲೈ 14 ರಂದು ರಿಲೀಸ್ ಆಗುತ್ತಿರುವ ಚಿತ್ರಕ್ಕಾಗಿ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆರ್.ಆರ್.ಆರ್ ಸಿನಿಮಾ ಕೂಡ ಈ ಹಿಂದೆ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿತ್ತು. ನೂರು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ಲೂಟಿ ಮಾಡಿತ್ತು. ಆ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ ಕೆಜಿಎಫ್ ಸಿನಿಮಾವನ್ನೂ ಜಪಾನ್ ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದೀಗ ನಾಳೆ ಸಿನಿಮಾ ರಿಲೀಸ್ ಆಗುತ್ತಿದೆ.
ಇತಿಹಾಸದ ಪುಟ ತೆರೆದು ನೋಡಿದರೆ ಜಪಾನ್‌ನಲ್ಲಿ (Japan) ಅದೆಷ್ಟೋ ಬಾರಿ ಭೀಕರ ಭೂಕಂಪ (Earthquake) ಹಾಗೂ ಸುನಾಮಿಗಳು (Tsunami) ಉಂಟಾಗಿವೆ. ಇಂತಹ ಪ್ರಾಕೃತಿಕ ವಿಕೋಪಗಳಿಂದ ಬಚಾವಾಗೋದು ಯಾರೊಬ್ಬರ ಕೈಯಲ್ಲೂ ಸಾಧ್ಯವಾಗದ ಮಾತು. ಜಪಾನ್‌ಗೆ ಇವೆಲ್ಲವನ್ನೂ ಎದುರಿಸೋದು ಬಿಟ್ಟರೆ ಬೇರೆ ದಾರಿಯೂ ಇಲ್ಲ. ಭೀಕರ ಭೂಕಂಪ ಹಾಗೂ ಸುನಾಮಿಯನ್ನು ಪ್ರತ್ಯಕ್ಷವಾಗಿ ನೋಡಿ, ಅನುಭವಿಸಿರೋ ಜಪಾನ್ ಇವೆಲ್ಲವನ್ನು ಹೇಗೆ ಎದುರಿಸುತ್ತೆ, ಯಾವೆಲ್ಲಾ ಕ್ರಮಗಳನ್ನು ದೇಶ ತೆಗೆದುಕೊಳ್ಳುತ್ತದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
ಕಳೆದ ಸಾವಿರ ವರ್ಷಗಳಲ್ಲಿ ಜಪಾನ್‌ನಲ್ಲಿ ನೂರಕ್ಕು ಹೆಚ್ಚು ಬಾರಿ ಸುನಾಮಿ ರುದ್ರತಾಂಡವವಾಡಿದೆ. ಇದಕ್ಕೆ ಸಿಲುಕಿ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ವರ್ಷಗಳು ಕಳೆದಂತೆ ಜಪಾನ್‌ನಲ್ಲಿ ಸುನಾಮಿಯ ಅಪಾಯ ಹೆಚ್ಚುತ್ತಲೇ ಇದೆ. ಕಳೆದ ಒಂದೇ ವರ್ಷದಲ್ಲಿ ಜಪಾನ್‌ನಲ್ಲಿ 300ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿವೆ.
ಅರ್ಥ್‌ಕ್ವೇಕ್ ಪ್ರೂಫ್ ಕಟ್ಟಡ:
ಜಪಾನ್‌ನಲ್ಲಿ ಭೂಕಂಪ ಎನ್ನೋದು ಎಷ್ಟು ಸಾಮಾನ್ಯ ಎನಿಸಿಬಿಟ್ಟಿದೆಯೆಂದರೆ ಇಲ್ಲಿನ ಪ್ರತಿ ದೈತ್ಯ ಕಟ್ಟಡಗಳನ್ನು ಕೆಲ ಮಾನದಂಡಗಳ ಅನುಗುಣವಾಗಿ ‘ಅರ್ಥ್‌ಕ್ವೇಕ್ ಪ್ರೂಫ್’ ಆಗಿ ಕಟ್ಟುವುದು ಕಡ್ಡಾಯ ಮಾಡಲಾಗಿದೆ. ಈ ಮೂಲಕ ಯಾವುದೇ ಗಳಿಗೆಯಲ್ಲಿ ಭೂಕಂಪವಾದರೂ ಆ ಕಟ್ಟಡಗಳು ಬೀಳದಂತೆ ತಡೆಯಲು ಸಾಧ್ಯವಾಗುತ್ತಿದೆ.
2011ರ ಭೀಕರ ಸುನಾಮಿ:
ಇತ್ತೀಚಿನ ಭೂಕಂಪದ ನಿದರ್ಶನಗಳನ್ನು ನೋಡೋದಾದ್ರೆ 2011ರಲ್ಲಿ ನಡೆದ ಸುನಾಮಿ ಅತ್ಯಂತ ಭೀಕರವಾಗಿತ್ತು. 2011ರ ಮಾರ್ಚ್ 11 ರಂದು ಓಶಿಕಾ ಪರ್ಯಾಯ ದ್ವೀಪದಿಂದ ಸಮುದ್ರದ 72 ಕಿ.ಮೀ ದೂರದಲ್ಲಿ ಬರೋಬ್ಬರಿ 9.1 ತೀವ್ರತೆಯ ಭೂಕಂಪ ಉಂಟಾಗಿತ್ತು. ಇದು 6 ನಿಮಿಷಗಳ ವರೆಗೆ ಮುಂದುವರಿದು ಭೀಕರ ಸುನಾಮಿಯನ್ನು ಹುಟ್ಟಿಸಿತು. ಇದು ಇಲ್ಲಿವರೆಗೆ ದಾಖಲಿಸಲಾದ ವಿಶ್ವದ 4ನೇ ಅತ್ಯಂತ ದೊಡ್ಡ ಭೂಕಂಪವೂ ಎನಿಸಿಕೊಂಡಿತ್ತು. ಇದರ ಅಲೆಯೇ ಬರೋಬ್ಬರಿ 180 ಅಡಿಗಳಷ್ಟು ಎತ್ತರವಾಗಿತ್ತು ಮಾತ್ರವಲ್ಲದೇ ಜಪಾನ್ ಭೂಪ್ರದೇಶದ 10 ಕಿ.ಮೀ ದೂರದವರೆಗೂ ತಲುಪಿತ್ತು.
ಕೊನೆ ಗಳಿಗೆಯಲ್ಲಿ ಜನತೆಗೆ ಎಚ್ಚರಿಕೆ:
ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಇಲ್ಲಿಯವರೆಗೆ ಭೂಕಂಪ ಯಾವಾಗ, ಎಲ್ಲಿ, ಎಷ್ಟು ತೀವ್ರವಾಗಿ ಸಂಭವಿಸಬಹುದು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. 2011ರಲ್ಲಿ ನಡೆದ ಭಯಾನಕ ಭೂಕಂಪದ ವೇಳೆ ಜಪಾನ್ ಕರಾವಳಿ ಭಾಗ ಸಂಡೈನ ನಿವಾಸಿಗಳಿಗೆ ಕೇವಲ 8 ನಿಮಿಷಗಳ ಮೊದಲು ಈ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಸಾವಿರಾರು ಜನರಿಗೆ ಇದರಿಂದ ತಪ್ಪಿಸಿಕೊಂಡು ಓಡಿ ಹೋಗಲು ಅವಕಾಶವೂ ಸಿಕ್ಕಿರಲಿಲ್ಲ. ಈ ಮಾರಣಾಂತಿಕ ಸುನಾಮಿಯಿಂದಾಗಿ 18 ಸಾವಿರಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದರು.
ಜಪಾನ್‌ನಲ್ಲಿ ಹೆಚ್ಚು ಭೂಕಂಪ ಯಾಕೆ?
ಇಷ್ಟಕ್ಕೂ ಜಪಾನ್‌ನಲ್ಲಿ ಸಂಭವಿಸೋ ಭೂಕಂಪಕ್ಕೆ ಮುಖ್ಯ ಕಾರಣ ಅದಿರುವ ಸ್ಥಳ. ಪೆಸಿಫಿಕ್ ಸಾಗರದ ಸುತ್ತಲಿರುವ ಪ್ರದೇಶದಲ್ಲಿ ಭೂಮಿಯಲ್ಲಿಯೇ ಅತಿ ಹೆಚ್ಚು ಭೂಕಂಪ, ಜ್ವಾಲಾಮುಖಿ ಸ್ಫೋಟ ಹಾಗೂ ಸುನಾಮಿ ಉಂಟಾಗೋ ಸ್ಥಳವಾಗಿದೆ. ಭೂಗೋಳದಲ್ಲಿ ನೋಡಹೋದರೆ ಈ ಪ್ರದೇಶ ಉಂಗುರಾಕಾರದಲ್ಲಿ ಕಂಡುಬರುತ್ತದೆ. ಹೀಗಾಗಿ ಈ ಪ್ರದೇಶಕ್ಕೆ ‘ರಿಂಗ್ ಆಫ್ ಫೈರ್’ ಎಂದು ಕರೆಯಲಾಗುತ್ತದೆ. ಇಂತಹ ಪ್ರದೇಶದ ಬಳಿಯಲ್ಲಿಯೇ ಜಪಾನ್ ಇರುವುದರಿಂದ ಅಲ್ಲಿ ಅತಿ ಹೆಚ್ಚು ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತದೆ. ಇದನ್ನೂ ಓದಿ: 6 ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ ನೇಪಾಳದಲ್ಲಿ ನಾಪತ್ತೆ
ಸಮುದ್ರ ಗೋಡೆಗಳು:
ಜಪಾನ್ ತನ್ನ ಹೈರಿಸ್ಕ್ ಏರಿಯಾಗಳನ್ನು ಸುನಾಮಿಯಿಂದ ರಕ್ಷಿಸಿಕೊಳ್ಳಲು ಹೆಚ್ಚಿನ ಕರಾವಳಿ ಭಾಗಗಳಲ್ಲಿ ಸಮುದ್ರ ಗೋಡೆಗಳನ್ನು (Sea Wall) ನಿರ್ಮಿಸಿದೆ. ಇದು ಇತ್ತೀಚಿನ ರಕ್ಷಣಾ ವಿಧಾನವಾಗಿರದೇ ಹಲವು ವರ್ಷಗಳಿಂದಲೇ ಜಪಾನ್ ಕರಾವಳಿ ತೀರದ ಭಾಗವೆನಿಸಿಕೊಂಡಿದೆ. ನೂರಾರು ವರ್ಷಗಳ ಹಿಂದೆ ಜಪಾನ್‌ನ ಸಣ್ಣ ಹಳ್ಳಿಯೊಂದರಲ್ಲಿ 2.4 ಕಿ.ಮೀ ಉದ್ದದ ಹಾಗೂ 10 ಮೀಟರ್ ಎತ್ತರದ ಗೋಡೆಯನ್ನು ಕರಾವಳಿಯುದ್ದಕ್ಕು ನಿರ್ಮಿಸಲಾಯಿತು. ಇದು ಸಮುದ್ರದ ಭಾರೀ ಅಲೆಗಳನ್ನು ತಡೆದು ನಿವಾಸಿಗಳನ್ನು ರಕ್ಷಿಸಿತು. ಇದಾದ ಬಳಿಕ ಜಪಾನ್‌ನ ಇತರ ಕರಾವಳಿ ಪ್ರದೇಶಗಳಲ್ಲೂ ಇದೇ ರೀತಿಯ ದೈತ್ಯ ಗೋಡೆಗಳನ್ನು ನಿರ್ಮಿಸಲಾಯಿತು. ಆದರೆ 2011ರಲ್ಲಿ ಸಂಭವಿಸಿದ ಸುನಾಮಿ ಈ ಗೋಡೆಗಳನ್ನೂ ಮೀರಿ ಅತ್ಯಂತ ಎತ್ತರದಿಂದ ಅಪ್ಪಳಿಸಿದ್ದರಿಂದ ಆಸ್ತಿ-ಪಾಸ್ತಿ ನಾಶ ಹಾಗೂ ಸಾವು-ನೋವುಗಳಿಗೆ ಕಾರಣವಾಯಿತು. ಹಲವೆಡೆ 10 ಮೀಟರ್ ಎತ್ತರದ ಈ ಗೋಡೆಗಳೂ ನಾಶವಾದವು. 2011ರ ಬಳಿಕ ಅಲ್ಲಿನ ಸರ್ಕಾರ ಪೂರ್ವ ಕರಾವಳಿ ಭಾಗದಲ್ಲಿ 400 ಕಿ.ಮೀ ಉದ್ದದ ಹಾಗೂ 15 ಮೀ. ಎತ್ತರದ ಮತ್ತಷ್ಟು ಸದೃಢ ಗೋಡೆಯನ್ನು ನಿರ್ಮಿಸಲು ನಿರ್ಧರಿಸಿತು.
‘ಸೀ ವಾಲ್’ ವಿನ್ಯಾಸ ಬದಲಾವಣೆ:
ಭಯಾನಕ ಘಟನೆಯ ನಂತರ ಹಲವು ಸಂಶೋಧನೆಗಳಿಂದ ನೇರವಾದ ಗೋಡೆಗಳನ್ನು ನಿರ್ಮಿಸುವುದರಿಂದ ಅಲೆಗಳು ರಭಸವಾಗಿ ಅದಕ್ಕೆ ಡಿಕ್ಕಿ ಹೊಡೆಯುತ್ತವೆ ಹಾಗೂ ಹೆಚ್ಚಿನ ಒತ್ತಡ ಹಾಕುವುದರ ಮೂಲಕ ಅಲೆಗಳು ಮತ್ತಷ್ಟು ಎತ್ತರಕ್ಕೆ ಸಾಗಿ ಗೋಡೆಗಳನ್ನು ದಾಟುತ್ತವೆ ಎಂಬುದು ತಿಳಿದುಬಂತು. ಈ ಸಂಶೊಧನೆಯ ಬಳಿಕ ಸಮುದ್ರ ಗೋಡೆಗಳನ್ನು ಇದೀಗ ನೇರವಾಗಿ ನಿರ್ಮಿಸೋ ಬದಲು ಡೊಂಕಾದ ವಿನ್ಯಾಸದಲ್ಲಿ ನಿರ್ಮಿಸಲಾಗುತ್ತಿದೆ. ಇದು ಅಲೆಗಳು ಗೋಡೆಗೆ ಅಪ್ಪಳಿಸಿದಾಗ ಇದರ ಡೊಂಕಾದ ವಿನ್ಯಾಸ ನೀರನ್ನು ಯೂಟರ್ನ್ ಹೊಡೆಯುವಂತೆ ಮಾಡುತ್ತದೆ. ಹೀಗೆ ಯೂಟರ್ನ್ ಹೊಡೆದ ಒಂದು ಅಲೆ ಹಿಂದಿನಿಂದ ಬರುವ ಮತ್ತೊಂದು ಅಲೆಯ ಬಲವನ್ನು ಕುಗ್ಗಿಸುತ್ತದೆ. ಇನ್ನೂ ಹಲವು ಕರಾವಳಿ ಭಾಗಗಳಲ್ಲಿ ಈ ದೈತ್ಯ ಗೋಡೆಗಳನ್ನು ನಿರ್ಮಿಸುವ ಬದಲು ಬ್ರೇಕ್ ವಾಟರ್‌ಗಳೆಂಬ ಇತರ ವಿಧಾನಗಳನ್ನೂ ಅನುಸರಿಸಲಾಗುತ್ತಿದೆ. ಇದನ್ನೂ ಓದಿ: ರಾಂಗ್ ರೂಟ್‌ನಲ್ಲಿ ಬಂದ ಶಾಲಾ ಬಸ್‌ನಿಂದ ಕಾರಿಗೆ ಡಿಕ್ಕಿ – ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಸಾವು
ಇಂತದ ದೈತ್ಯ ಗೋಡೆಗಳಿದ್ದರೂ ಜಪಾನ್‌ನಲ್ಲಿ ಸುನಾಮಿಯ ಭೀತಿ ಎಂದೂ ಕಡಿಮೆಯಾಗಿಲ್ಲ. ಇನ್ನಷ್ಟು ಭೀಕರ ಸುನಾಮಿಗಳು ಮುಂದೆ ಹುಟ್ಟಿಕೊಂಡರೆ ಈ ಗೋಡೆಗಳೂ ಅವನ್ನು ಮೆಟ್ಟಿಸಲು ಸಾಧ್ಯವಾಗುವುದಿಲ್ಲ ಎಂಬ ಯೋಚನೆಯನ್ನು ದೇಶ ಈಗಾಗಲೇ ಮಾಡಿದೆ. ಒಂದು ವೇಳೆ ಅಂತಹ ಅನಾಹುತವಾದರೆ ಅದನ್ನು ತಡೆಯಲು ಮತ್ತೊಂದು ಉಪಾಯವನ್ನೂ ದೇಶ ಮಾಡಿದೆ. ಹಲವು ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ದಟ್ಟವಾದ ಕಾಡುಗಳನ್ನು ನಿರ್ಮಿಸಲಾಗಿದೆ. ಒಂದು ವೇಳೆ ದೈತ್ಯ ಗೋಡೆಗಳನ್ನು ಮೀರಿ ಸುನಾಮಿ ಅಪ್ಪಳಿಸಿದರೆ ಈ ಕಾಡುಗಳು ಆ ಅಲೆಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೇ ಅಲೆಗಳು ವಾಪಸ್ ಸಮುದ್ರ ಸೇರುವ ಸಂದರ್ಭ ತನ್ನೊಂದಿಗೆ ವಸ್ತುಗಳನ್ನು ಹೊತ್ತೊಯ್ಯುವುದನ್ನು ಇದು ತಡೆಯಲು ಸಹಾಯ ಮಾಡುತ್ತದೆ.
ತನ್ನನ್ನು ತಾನು ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಜಪಾನ್ ಎಲ್ಲಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಜಾಗತಿಕ ತಾಪಮಾನದಿಂದಾಗಿ ದಿನಕಳೆದಂತೆ ಸಮುದ್ರಮಟ್ಟ ಎತ್ತರಕ್ಕೇರುತ್ತಲೇ ಇದೆ. ಭೂಕಂಪಗಳು ಅಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ಭೀಕರ ಸುನಾಮಿಯಿಂದ ರಕ್ಷಿಸಿಕೊಳ್ಳಲು ಈ ಸೀ ವಾಲ್‌ಗಳು ಶಾಶ್ವತ ಪರಿಹಾರ ಅಲ್ಲ ಎಂಬುದು ತಿಳಿದಿದ್ದರೂ ಜಪಾನ್ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಈ ವ್ಯವಸ್ಥೆಗಳನ್ನು ಮಾಡಿದೆ. ಇದರಿಂದ ಕನಿಷ್ಟಪಕ್ಷ ಜನತೆ ಅಲ್ಲಿಂದ ತಪ್ಪಿಸಿಕೊಂಡು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸ್ವಲ್ಪ ಸಮಯವಾದರೂ ಸಿಗುತ್ತದೆ ಎಂಬುದು ಅಲ್ಲಿನ ಅಭಿಪ್ರಾಯ.
ಆರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಯಶ್ (Yash) ಮತ್ತು ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್ ನ ‘ಕೆಜಿಎಫ್ 1’ (KGF) ಹಾಗೂ ‘ಕೆಜಿಎಫ್ 2’ ಚಿತ್ರವು ಜಪಾನ್ (Japan) ಭಾಷೆಗೆ ಡಬ್ ಆಗಿದ್ದು, ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆಯಂತೆ. ಅದಕ್ಕಾಗಿಯೇ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆರ್.ಆರ್.ಆರ್ ಸಿನಿಮಾ ಕೂಡ ಈ ಹಿಂದೆ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿತ್ತು. ನೂರು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ಲೂಟಿ ಮಾಡಿತ್ತು. ಆ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ ಕೆಜಿಎಫ್ ಸಿನಿಮಾವನ್ನೂ ಜಪಾನ್ ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದೀಗ ಸಿನಿಮಾ ರಿಲೀಸ್ ಮಾಡಲು ಹೊರಟಿದೆ.
ಇದೇ ಜುಲೈ 14 ರಂದು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಕೂಡ ಜಪಾನ್ ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಪಠಾಣ್ ಸಿನಿಮಾ ಕೂಡ ಈ ವರ್ಷ ಹಿಟ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿದೆ. ಜಪಾನ್ ನಲ್ಲಿ ಶಾರುಖ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಶಾರುಖ್ ಖಾನ್ ಸಿನಿಮಾಗಳು ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಲೇ ಇರುತ್ತವೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಕೆಜಿಎಫ್. ಈ ಹಿಂದೆ ಕೆಜಿಎಫ್ ಸಿನಿಮಾ 50ನೇ ದಿನದತ್ತ ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ, ಜಪಾನ್‍ನ ಟೋಕಿಯೋದ ಚಿತ್ರಮಂದಿರವೊಂದರಲ್ಲಿ ಚಿತ್ರದ ಪ್ರದರ್ಶನ ನಡೆದಿತ್ತು. ಜಪಾನ್‍ನಲ್ಲೂ ಅಪಾರ ಕನ್ನಡ ಅಭಿಮಾನಿಗಳು ಇದ್ದು, ಅವರು ಕೆಜಿಎಫ್ ಸಿನಿಮಾ ವೀಕ್ಷಿಸಿದ್ದರು.
ಈ ವೇಳೆ ಅಲ್ಲಿನ ಕನ್ನಡಾಭಿಮಾನಿಗಳು ಯಶ್ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಸಿನಿಮಾ ಚೆನ್ನಾಗಿದೆ, ಕನ್ನಡ ಭಾಷೆಯಲ್ಲಿ ನೋಡುತ್ತಿದ್ದೇವೆ ಎಂದು ಹೇಳಿ ಯಶ್ ಅವರಿಗೆ ಶುಭಾಶಯ ತಿಳಿಸಿದ್ದರು. ಅಲ್ಲದೇ ಇದೇ ವೇಳೆ ಅಭಿಮಾನಿಗಳು ಸಿನಿಮಾದ ಒಂದು ಡೈಲಾಗ್ ಹೇಳಿ ಎಂದು ಮನವಿ ಮಾಡಿಕೊಂಡಿದ್ದರು.
ಅಭಿಮಾನಿಗಳ ಒತ್ತಾಯದ ಮೇರೆಗೆ ಯಶ್ ಫೋನ್ ಮೂಲಕವೇ ಡೈಲಾಗ್ ಹೇಳಿದ್ದಾರೆ. ಯಶ್ ಡೈಲಾಗ್ ಹೇಳಿದ ಬಳಿಕ ಚಿತ್ರಮಂದಿರದಲ್ಲಿದ್ದ ಅಭಿಮಾನಿಯೊಬ್ಬರು, ಯಶ್ ನನ್ನ ರಕ್ತಾನೂ ಕೆಂಪಗೇ ಇದೆಯಲ್ಲಾ ಎಂದು ಹೇಳಿದ್ದಾರೆ.
ರಾಯ್ಪುರ: ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರುವ ಮಾವು ಎಂದರೆ ಅದು ಜಪಾನಿನ (Japan) ಮಿಯಾಝಾಕಿ (Miyazaki) ಮಾವಿನ ಹಣ್ಣು. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 1.82 ಲಕ್ಷ ಮೌಲ್ಯವನ್ನು ಹೊಂದಿರುವ ಈ ದುಬಾರಿ ಮಾವನ್ನು ಛತ್ತೀಸ್‌ಗಢದ (Chattisgarh) ರಾಯ್ಪುರದಲ್ಲಿ (Raipur) ನಡೆದ ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.
ಜಪಾನ್ ಮೂಲದ ಮಿಯಾಝಾಕಿ ಮಾವು ವಿಶ್ವದಲ್ಲೇ ಅತ್ಯಂತ ದುಬಾರಿ ಮಾವು ಎಂಬ ಖ್ಯಾತಿಯನ್ನು ಹೊಂದಿದೆ. ಜೂನ್ 17ರಿಂದ 19ರ ವರೆಗೆ ಛತ್ತೀಸ್‌ಗಢದ ರಾಯ್ಪುರದಲ್ಲಿ ಮಾವಿನ ಮೇಳವನ್ನು (Mango Festival) ಆಯೋಜಿಸಲಾಗಿತ್ತು. ಈ ಮಾವಿನ ಮೇಳದಲ್ಲಿ ದುಬಾರಿ ಮಾವು ಮಿಯಾಝಾಕಿಯನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಈ ಮಾವು ಕೆ.ಜಿಗೆ ಸುಮಾರು 2.70 ಲಕ್ಷ ರೂ. ಮೌಲ್ಯವನ್ನು ಹೊಂದಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಇದನ್ನೂ ಓದಿ: RAW ಸಂಸ್ಥೆಯ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ನೇಮಕ
ಕೋಲ್ ಇಂಡಿಯಾದ (Coal India) ನಿವೃತ್ತ ಮ್ಯಾನೇಜರ್ ಆರ್‌ಪಿ ಗುಪ್ತ ಈ ದುಬಾರಿ ಮಾವನ್ನು ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು, ಈ ಮಾವನ್ನು ಅತ್ಯಂತ ಕಾಳಜಿಯಿಂದ ಬೆಳೆಸಬೇಕಾಗುತ್ತದೆ. ಈ ಮಾವನ್ನು ಕಾರ್ಪೊರೇಟ್‌ನ ಕೊಡುಗೆಯಾಗಿ ವ್ಯಾಪಾರ ಮಾಡಲಾಗುತ್ತಿದ್ದು, ಈ ಮಾವಿನ ಬೆಲೆ ಸಾಮಾನ್ಯ ಮಾವಿನ ಹಣ್ಣುಗಳಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್‌ಬಸ್ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್ – ವಿಶ್ವದಾಖಲೆ ಬರೆದ ಇಂಡಿಗೋ
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ (KGF) ಸರಣಿ ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಆದರೂ, ಅದರ ಕ್ರೇಜ್ ಇನ್ನೂ ನಿಂತಿಲ್ಲ. ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ (Japan) ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿವೆ ಎನ್ನುವ ಮಾಹಿತಿ ಸಿಕ್ಕಿದೆ.
ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳನ್ನು ಈಗಾಗಲೇ ಜಪಾನ್ ಭಾಷೆಗೆ ಡಬ್ ಮಾಡಿದ್ದು, ಏಕಕಾಲಕ್ಕೆ ಎರಡೂ ಚಿತ್ರಗಳು ಜುಲೈ 14ರಂದು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗುತ್ತಿರುವುದು ವಿಶೇಷ. ಈಗಾಗಲೇ ಈ ಕುರಿತು ಜಪಾನ್ ನಲ್ಲಿ ಪ್ರಚಾರ ಕಾರ್ಯ ಕೂಡ ಶುರು ಮಾಡಲಾಗಿದೆಯಂತೆ. ಇದನ್ನೂ ಓದಿ: ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್
ಕೆಜಿಎಫ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ನೋಡುಗರನ್ನು ತಲುಪಿದ್ದರು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ (Yash). ಕೆಜಿಎಫ್ 1 ಮಾಡಿದ ಮೋಡಿಯೇ ಕೆಜಿಎಫ್ 2 ಚಿತ್ರಕ್ಕೆ ಸಾಕಷ್ಟು ಪ್ಲಸ್ ಪಾಯಿಂಟ್ ಆಯಿತು. ಮೊದಲ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಂದುಕೊಟ್ಟ ಹಣದ ಎರಡರಷ್ಟು ಪಾರ್ಟ್ 2 ಮಾಡಿತು. ಹೀಗಾಗಿ ಎರಡೂ ಚಿತ್ರಗಳ ಮೂಲಕ ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಬಂತು.
ಕೆಜಿಎಫ್ ನಂತರ ಪ್ರಶಾಂತ್ ನೀಲ್ (Prashant Neel) ಸಲಾರ್ ಸಿನಿಮಾದಲ್ಲಿ ತೊಡಗಿಕೊಂಡಿದ್ದರೆ, ಯಶ್ ಇನ್ನೂ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಹಾಗಂತ ಸುಮ್ಮನೆಯೂ ಕೂತಿಲ್ಲ. ಮತ್ತೆ ಅಚ್ಚರಿ ಮೂಡಿಸುವಂತಹ ಸಿನಿಮಾ ಮಾಡುವ ತಯಾರಿಯನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ಹೊಸ ಸಿನಿಮಾದ ಮಾಹಿತಿಯನ್ನು ಕೇಳಲು ಅವರ ಅಭಿಮಾನಿಗಳೂ ಕೂಡ ತುದಿಗಾಲಲ್ಲಿ ನಿಂತಿದ್ದಾರೆ.
‘ಪೊನ್ನಿಯನ್ ಸೆಲ್ವನ್ 2′ (Ponniyin Selvan 2) ಸಿನಿಮಾದ ಸಕ್ಸಸ್ ನಂತರ ನಟ ಕಾರ್ತಿ ಅವರು ಇದೀಗ ‘ಜಪಾನ್’ ಸಿನಿಮಾ ಮೂಲಕ ಬರುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ಮೂಲಕ ಸದ್ದು ಮಾಡ್ತಿದ್ದಾರೆ. ಕಾರ್ತಿ ಚಿತ್ರಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ.
ಕಾಲಿವುಡ್ ನಟ ಕಾರ್ತಿ (Actor Karthi) ಅವರು ‘ಪೊನ್ನಿಯನ್ ಸೆಲ್ವನ್’ ಪಾರ್ಟ್ 1 ಮತ್ತು ಪಾರ್ಟ್ 2 ಸಕ್ಸಸ್ ಖುಷಿಯಲ್ಲಿದ್ದಾರೆ. ಜೊತೆಗೆ ತಮ್ಮ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ನಟ ಕಾರ್ತಿ, ಜಪಾನ್ ಮೇಡ್ ಇನ್ ಚೀನಾ ಅಂತಿದ್ದಾರೆ.
ಕಾರ್ತಿ ನಟನೆಯ ಜಪಾನ್ ಚಿತ್ರದ ಲುಕ್, ಟೀಸರ್ ಹೊರಬಿದ್ದಿದೆ. ಕಾರ್ತಿ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಒಂದಕ್ಕಿಂತ ಒಂದು ಡಿಫ್ರೆಂಟ್ ಆಗಿರುತ್ತೆ. ಕಂಟೆಂಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಕಾರ್ತಿ ಮೇಲೆ ಸಿನಿಪ್ರಿಯ ನಿರೀಕ್ಷೆನೂ ಅಷ್ಟೇ ಸಹಜ. ಕಾರ್ತಿ ನಟನೆಯ 25ನೇ ಸಿನಿಮಾ ಪ್ಯಾನ್ ಇಂಡಿಯಾ ಆಗಿರುವುದರಿಂದ ‘ಜಪಾನ್’ಗೆ ಕನ್ನಡದ ನಟ ರಿಷಬ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ:ಭಾರತದ ಮಣ್ಣಿಗೆ ಘನತೆಯಿದೆ- G20 ಸಭೆಯಲ್ಲಿ ರಾಮ್ ಚರಣ್ ಮಾತು
‘ಜಪಾನ್’ (Japan) ಸಿನಿಮಾ ಕಾರ್ತಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಹೀರೊ, ಮತ್ತೊಮ್ಮೆ ಕಾಮಿಡಿಯನ್, ಮಗದೊಮ್ಮೆ ವಿಲನ್ ಆಗಿ ಕಂಡಿದ್ದಾರೆ. ಸ್ಟೈಲಿಶ್ ಲುಕ್.. ಗುಂಗುರು ಕೂದಲಿನಲ್ಲಿ ಎಂಟ್ರಿ ಕೊಟ್ಟಿರೋ ಕಾರ್ತಿ ಹೆಸರು ಈ ಸಿನಿಮಾದಲ್ಲಿ ‘ಜಪಾನ್’ ಆದರೆ, ಮೇಡ್ ಇನ್ ಇಂಡಿಯಾ. ಹೀಗಾಗಿಯೇ ಸಿನಿಮಾ ಟೀಸರ್ ಕಿಕ್ ಕೊಡುತ್ತಿದೆ. ಈ ಚಿತ್ರದ ಟೀಸರ್ ರಿಷಬ್ ಶೆಟ್ಟಿ ರಿಲೀಸ್ ಮಾಡಿ, ಕಾರ್ತಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಚಿತ್ರ ಜಪಾನ್ ಟೀಸರ್ ವ್ಯಾಪಕ ಮೆಚ್ಚಿಗೆ ವ್ಯಕ್ತವಾಗಿದೆ.
ಟೋಕಿಯೊ: ಉಕ್ರೇನ್ (Ukrain) ಮೇಲೆ ರಷ್ಯಾ (Russia) ಯುದ್ಧ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಜಪಾನಿನ (Japan) ಹಿರೋಷಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ (G7 summit) ನೇಪಥ್ಯದಲ್ಲಿ ಪ್ರಧಾನಿ ಮೋದಿ ಹಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಇಂದು ಭೇಟಿಯಾದರು. ಕಳೆದ ವರ್ಷ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದ ನಂತರ ಉಭಯ ನಾಯಕರ ನಡುವಿನ ಮೊದಲ ವೈಯಕ್ತಿಕ ಭೇಟಿ ಇದಾಗಿದೆ. ಇದನ್ನೂ ಓದಿ: ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ನಿರ್ಬಂಧ ಹೇರಿದ ರಷ್ಯಾ
ಉಕ್ರೇನ್‌ನಲ್ಲಿನ ಯುದ್ಧವು ಇಡೀ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿದೆ. ಇದು ಪ್ರಪಂಚದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದೆ. ಆದರೆ ನಾನು ಇದನ್ನು ರಾಜಕೀಯ ಅಥವಾ ಆರ್ಥಿಕ ಸಮಸ್ಯೆ ಎಂದು ಪರಿಗಣಿಸುವುದಿಲ್ಲ. ಇದು ನನಗೆ ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ಸಮಸ್ಯೆಯಾಗಿದೆ. ಯುದ್ಧದ ನೋವು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಕಳೆದ ವರ್ಷ ನಮ್ಮ ಮಕ್ಕಳು ಉಕ್ರೇನ್‌ನಿಂದ ಹಿಂದಿರುಗಿದಾಗ ಮತ್ತು ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದಾಗ, ನಿಮ್ಮ ನಾಗರಿಕರ ವೇದನೆಯನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ಈ ಪರಿಸ್ಥಿತಿಯನ್ನು ಪರಿಹರಿಸಲು ಭಾರತ ಮತ್ತು ನಾನು ವೈಯಕ್ತಿಕವಾಗಿ ನಮ್ಮ ಸಾಮರ್ಥ್ಯದಲ್ಲಿ ಏನು ಬೇಕಾದರೂ ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಮೋದಿ ಅವರು ಝೆಲೆನ್ಸ್ಕಿಗೆ ತಿಳಿಸಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಪಾಲ್ಗೊಂಡಿದ್ದ ಸಭೆಯ ಛಾಯಾಚಿತ್ರಗಳನ್ನು ಪ್ರಧಾನಿ ಕಾರ್ಯಾಲಯ ಹಂಚಿಕೊಂಡಿದೆ. ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಜಿ7 ಶೃಂಗಸಭೆಯಲ್ಲಿ ಮೂರು ಸೆಷನ್‌ಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಜಪಾನ್‌ಗೆ ಭೇಟಿ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷರು ಸಹ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಭಾರತ ಪಾಕ್‌ನೊಂದಿಗೆ ಸಾಮಾನ್ಯ ಬಾಂಧವ್ಯ ಬಯಸುತ್ತದೆ, ಆದರೆ… – ಮೋದಿ ಹೇಳಿದ್ದೇನು?
ಕ್ಯಾನ್‌ಬೆರಾ: ಮುಂದಿನ ವಾರ ಸಿಡ್ನಿಯಲ್ಲಿ (Sydney) ನಡೆಯಬೇಕಿದ್ದ ಕ್ವಾಡ್ ಶೃಂಗಭೆಯನ್ನು (Quad Summit) ಆಸ್ಟ್ರೇಲಿಯಾ (Australia) ಬುಧವಾರ ರದ್ದುಗೊಳಿಸಿದೆ.
ಸ್ವದೇಶದ ಆರ್ಥಿಕ ಸಮಸ್ಯೆಯ ಹಿನ್ನೆಲೆ ಅಮೆರಿಕದ (America) ಅಧ್ಯಕ್ಷ ಜೋ ಬೈಡನ್ (Joe Biden) ಆಸ್ಟ್ರೇಲಿಯಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ.
ಅಮೆರಿಕದಲ್ಲಿ ಸಾಲದ ಮಿತಿಯನ್ನು ತೆರವುಗೊಳಿಸುವ ಕುರಿತು ನಡೆಯುತ್ತಿರುವ ಚರ್ಚೆಯ ಹಿನ್ನೆಲೆ ಬೈಡನ್ ಆಸ್ಟ್ರೇಲಿಯಾ ಹಾಗೂ ಪಪುವಾ ನ್ಯೂಗಿನಿಯಾ ಭೇಟಿಗಳನ್ನು ರದ್ದುಗೊಳಿಸಿದ್ದಾರೆ. ಆದರೂ ಈ ವಾರಾಂತ್ಯ ಅವರು ಜಿ7 ಶೃಂಗಸಭೆಯಲ್ಲಿ (G7 Summit) ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕ್ವಾಡ್ ಶೃಂಗಸಭೆಯ ರದ್ದು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಮುಂದಿನ ವಾರ ಸಿಡ್ನಿಯಲ್ಲಿ ಕ್ವಾಡ್ ನಾಯಕರ ಸಭೆ ನಡೆಯುವುದಿಲ್ಲ. ಬದಲಿಗೆ ನಾವು ಜಪಾನ್‌ನಲ್ಲಿ (Japan) ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಕ್ವಾಡ್ ನಾಯಕರೊಂದಿಗೆ ಆ ಚರ್ಚೆಯನ್ನು ನಡೆಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿದ್ದ ಚೀನಾದ ಪ್ರಭಾವದ ಹಿನ್ನೆಲೆ 2017ರಲ್ಲಿ ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ ಕ್ವಾಡ್ ಒಕ್ಕೂಟವನ್ನು ರಚಿಸಲಾಯಿತು. ಭಾರತ ಹಾಗೂ ಆಸ್ಟ್ರೇಲಿಯಾ 7 ದೇಶಗಳ ಜಿ7 ನ ಸದಸ್ಯತ್ವ ಹೊಂದಿಲ್ಲ. ಆದರೂ ಮೇ 19 ರಿಂದ ಮೇ 21 ರವರೆಗೆ ಜಪಾನ್‌ನ ಹಿರೋಶಿಮಾದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸಲು ಇವೆರಡು ದೇಶಗಳನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: ಅಮೆರಿಕಕ್ಕೆ ಹಾರಲಿದ್ದಾರೆ ರಾಹುಲ್ – 10 ದಿನ ಪ್ರವಾಸ
ಇಂದು ಡಾ.ರಾಜ್ ಕುಮಾರ್ (Dr. Rajkumar) ಅವರ 94ನೇ ಜನ್ಮದಿನ. ಕೇವಲ ದೇಶಾದ್ಯಂತ ಮಾತ್ರವಲ್ಲ, ವಿದೇಶಗಳಲ್ಲೂ ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು (Birthday) ಆಚರಿಸುತ್ತಿದ್ದಾರೆ. ಜಪಾನ್ ನಲ್ಲಿ ಅಣ್ಣಾವ್ರ ಅಭಿಮಾನಿಗಳು ರಾಜ್ ಕುಮಾರ್ ಫೋಟೋ ಮುಂದೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ್ದಾರೆ. ಕನ್ನಡಿಗರ ಜೊತೆ ಸೇರಿಕೊಂಡ ಜಪಾನಿಯರು (Japan) ಸಂಭ್ರಮದಿಂದ ಡಾ.ರಾಜ್ ಅವರನ್ನು ಸ್ಮರಿಸಿದ್ದಾರೆ.
ನಾಡಿನಾದ್ಯಂತ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಡಾ.ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ನೆಚ್ಚಿನ ನಟನ ಹೆಸರಿನಲ್ಲಿ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಆಚರಿಸುತ್ತಿದ್ದಾರೆ. ನಿನ್ನೆಯಷ್ಟೇ ಅಣ್ಣಾವ್ರ ಮೊಮ್ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದ ಅಭಿಮಾನಿಗಳು ಇಂದು ಮೇರುನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ನಟಿ ವಿದಿಶಾ ಶ್ರೀವಾಸ್ತವ
ಕೆಲ ಅಭಿಮಾನಿಗಳು ಇದ್ದೂರಿನಲ್ಲೇ ಹುಟ್ಟು ಹಬ್ಬ ಆಚರಿಸುತ್ತಿದ್ದರೆ, ಇನ್ನೂ ಹಲವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ (Kantheerava Studio) ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ಅಭಿಮಾನಿಗಳು ದಂಡು ಹರಿದು ಬಂದಿದೆ. ಸ್ಮಾರಕದ ಮುಂದೆಯೇ ಅನ್ನಸಂತರ್ಪಣೆ, ಕೇಕ್ ಕತ್ತರಿಸುವುದು ಹಾಗೂ ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ.
ಡಾ.ರಾಜ್ ಕುಟುಂಬದ ಸದಸ್ಯರು ಕೂಡ ಆಗಮಿಸಿ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪಕ್ಕದಲ್ಲೇ ಇರುವ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಿದ್ದಾರೆ. ಅಣ್ಣಾವ್ರ ಅಭಿಮಾನಿಗಳ ಜೊತೆ ಕುಟುಂಬದ ಸದಸ್ಯರು ಕೆಲಹೊತ್ತು ಇದ್ದರು.