Tag: ಜಪಾನ್

  • ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆ

    ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆ

    ಕಾರವಾರ: ಪ್ರವಾಸಕ್ಕೆಂದು (Tour) ಆಗಮಿಸಿದ್ದ ಜಪಾನ್ (Japan) ಮೂಲದ ಮಹಿಳೆ (Woman) ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ (Gokarna) ನಡೆದಿದೆ.

    ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಮಹಿಳೆ. ಫೆಬ್ರವರಿ 05 ರಂದು ಮಹಿಳೆ ತನ್ನ ಪತಿಯೊಂದಿಗೆ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್‌ನಲ್ಲಿ ತಂಗಿದ್ದರು. ಮರುದಿನ ಮುಂಜಾನೆ 10:30ರ ಸುಮಾರಿಗೆ ನೇಚರ್ ಕ್ಯಾಂಪಸ್‌ನಿಂದ ಹೊರಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಪಾಕ್‌ನ ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್‌ ಸ್ಫೋಟ: 26 ಮಂದಿ ಸಾವು

    ನಾಪತ್ತೆ ಹಿನ್ನೆಲೆ ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಓದಿನ ಕಡೆ ಗಮನಕೊಡುವಂತೆ ಹೇಳಿದ್ದಕ್ಕೆ ಫುಟ್ಬಾಲ್ ಪ್ಲೇಯರ್ ಸೂಸೈಡ್

  • ಜಪಾನ್‌ ಭೂಕಂಪ; ಮೃತರ ಸಂಖ್ಯೆ 62 ಕ್ಕೇರಿಕೆ – ಮತ್ತೆ ಭೂಕುಸಿತ, ಭಾರೀ ಮಳೆಯ ಎಚ್ಚರಿಕೆ

    ಜಪಾನ್‌ ಭೂಕಂಪ; ಮೃತರ ಸಂಖ್ಯೆ 62 ಕ್ಕೇರಿಕೆ – ಮತ್ತೆ ಭೂಕುಸಿತ, ಭಾರೀ ಮಳೆಯ ಎಚ್ಚರಿಕೆ

    ಟೋಕಿಯೊ: ಜಪಾನ್‌ನಲ್ಲಿ (Japan Earthquake) ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಇದುವರೆಗೂ 62 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಏರಿಕೆಯಾಗುತ್ತಿದೆ. ಭೂಕಂಪದ ನಂತರ ಭೂಕುಸಿತಗಳು ಮತ್ತು ಭಾರೀ ಮಳೆಯಾಗುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಜನವರಿ 1 ರಂದು ಸಂಭವಿಸಿದ 7.5 ತೀವ್ರತೆಯ ಭೂಕಂಪವು, ಹೊನ್ಶು ಮುಖ್ಯ ದ್ವೀಪದ ಇಶಿಕಾವಾ ಪ್ರಾಂತ್ಯದಲ್ಲಿ ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹುಟ್ಟುಹಾಕಿತು. ಇದನ್ನೂ ಓದಿ: ನಾನು ಸತ್ತೇ ಹೋದೆ ಅಂದ್ಕೊಂಡೆ – ಅವಘಡಕ್ಕೀಡಾದ ವಿಮಾನದೊಳಗಿದ್ದ ಪ್ರಯಾಣಿಕ

    ನೂರಾರು ಕಟ್ಟಡಗಳು ಬೆಂಕಿಯಿಂದ ಧ್ವಂಸಗೊಂಡಿವೆ. ವಾಜಿಮಾ ಮತ್ತು ಸುಜು ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ಮನೆಗಳನ್ನು ನೆಲಸಮವಾಗಿವೆ. ಪ್ರಿಫೆಕ್ಚರ್‌ನ ನೋಟೊ ಪೆನಿನ್ಸುಲಾವು ತೀವ್ರ ಪ್ರಮಾಣದಲ್ಲಿ ಹಾನಿಗೊಳಗಾಗಿದೆ.

    ಭೂಕಂಪದಿಂದ ಜಪಾನ್‌ ತತ್ತರಿಸಿದ್ದು, 62 ಜನರು ಸಾವನ್ನಪ್ಪಿದ್ದಾರೆ. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ 20 ಮಂದಿ ಸ್ಥಿತಿ ಗಂಭೀರವಾಗಿದೆ. 31,800 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ಇದನ್ನೂ ಓದಿ: ಜಪಾನ್‌ ವಿಮಾನ ಅವಘಡ- ಕೋಸ್ಟ್‌ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ

    ವಿಪತ್ತು ಸಂಭವಿಸಿ 40 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ರಕ್ಷಣೆಯ ಅಗತ್ಯವಿರುವ ಜನರ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಬಂದಿದೆ. ಸಹಾಯಕ್ಕಾಗಿ ಜನರು ಕಾಯುತ್ತಿದ್ದಾರೆ ಎಂದು ತುರ್ತು ಕಾರ್ಯಪಡೆ ಸಭೆಯ ನಂತರ ಪ್ರಧಾನಿ ಫುಮಿಯೊ ಕಿಶಿಡಾ ತಿಳಿಸಿದ್ದಾರೆ.

    2011 ರಲ್ಲೂ ಈಶಾನ್ಯ ಜಪಾನ್‌ನಲ್ಲಿ 9.0 ತೀವ್ರವಾದ ಸಮುದ್ರದೊಳಗಿನ ಭೂಕಂಪ ಸಂಭವಿಸಿತ್ತು. ಇದರಿಂದ ಸುನಾಮಿ ಉಂಟಾಗಿತ್ತು. ಪರಿಣಾಮವಾಗಿ ದೇಶದಲ್ಲಿ ಮೃತರು ಮತ್ತು ಕಾಣೆಯಾದವರ ಸಂಖ್ಯೆ ಸುಮಾರು 18,500 ಆಗಿತ್ತು. ಇದನ್ನೂ ಓದಿ: Japan Earthquakes; ಜಪಾನ್‌ನಲ್ಲಿ ಭೂಕಂಪಕ್ಕೆ 13 ಮಂದಿ ಸಾವು – ಒಂದೇ ದಿನ 155 ಬಾರಿ ಭೂಮಿ ಕಂಪನ

  • ಜಪಾನ್‌ ವಿಮಾನ ಅವಘಡ- ಕೋಸ್ಟ್‌ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ

    ಜಪಾನ್‌ ವಿಮಾನ ಅವಘಡ- ಕೋಸ್ಟ್‌ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ

    ಟೋಕಿಯೋ: ಜಪಾನಿನ (Japan) ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ (Tokyo’s Haneda Airport) ನಡೆದ ದುರ್ಘಟನೆಯಲ್ಲಿ ಐವರು ಸಿಬ್ಬಂದಿ ಮೃತಪಟ್ಟಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಮಂಗಳವಾರ ಜಪಾನ್ ಏರ್‌ಲೈನ್ಸ್ ಜೆಟ್ ಕೋಸ್ಟ್ ಗಾರ್ಡ್ (Coast Guard aircraft) ವಿಮಾನಕ್ಕೆ ಪ್ರಯಾಣಿಕರ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ . ಪ್ರಯಾಣಿಕ ವಿಮಾನದಲ್ಲಿದ್ದ ಎಲ್ಲಾ 367 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೆ ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ ಆರು ಸಿಬ್ಬಂದಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಹೊಕ್ಕೈಡೊದಿಂದ ಟೇಕಾಫ್‌ ಆದ JAL 516 ವಿಮಾನವು ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಲ್ಯಾಂಡ್‌ ಆಗುತ್ತಿದ್ದಾಗ ಹೊತ್ತಿ ಉರಿದಿದೆ. ಸದ್ಯ ವಿಮಾನ ಡಿಕ್ಕಿಯ ಬಳಿಕ ಬೆಂಕಿ ಹೊತ್ತಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ವೀಡಿಯೋದಲ್ಲಿ ಹೊಗೆ ತುಂಬಿದ ಕ್ಯಾಬಿನ್‌ನೊಳಗೆ ಪ್ರಯಾಣಿಕರು ಅಳುತ್ತಿರುವುದು ಹಾಗೂ ಕೆಮ್ಮುತ್ತಲೇ ವಿಮಾನದಿಂದ ಹೊರಗೆ ಓಡಿಕೊಂಡು ಬರುತ್ತಿರುವುದನ್ನು ಗಮನಿಸಬಹುದಾಗಿದೆ.  ಇದನ್ನೂ ಓದಿ: ಜಪಾನ್‌ ವಿಮಾನ ಅವಘಡ- ಕೋಸ್ಟ್‌ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ

    ಕೋಸ್ಟ್ ಗಾರ್ಡ್ ವಿಮಾನದಲ್ಲಿ ಆರು ಸಿಬ್ಬಂದಿ ಇದ್ದರು. ಅವಘಡದಿಂದಾಗಿ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ. ವಿಮಾನದ ಕ್ಯಾಪ್ಟನ್ ಸ್ಥಿತಿ ಗಂಭೀರವಾಗಿದೆ ಎಂದು ಟೋಕಿಯೊದ ಪೊಲೀಸ್ ಇಲಾಖೆಯು ಜಪಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (NHK) ಗೆ ತಿಳಿಸಿದೆ. ಇನ್ನು ಈ ಸಂಬಂಧ ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯವು ಘಟನೆಯ ಕುರಿತು ತನಿಖೆ ನಡೆಸುತ್ತಿದೆ ಎಂದು ಎನ್‌ಎಚ್‌ಕೆ ವರದಿ ಮಾಡಿದೆ.

  • ರನ್‌ವೇಯಲ್ಲಿ ಹೊತ್ತಿ ಉರಿದ ಜಪಾನ್‌ ವಿಮಾನ – 367 ಮಂದಿ ಗ್ರೇಟ್‌ ಎಸ್ಕೇಪ್‌

    ರನ್‌ವೇಯಲ್ಲಿ ಹೊತ್ತಿ ಉರಿದ ಜಪಾನ್‌ ವಿಮಾನ – 367 ಮಂದಿ ಗ್ರೇಟ್‌ ಎಸ್ಕೇಪ್‌

    ಟೋಕಿಯೋ: ರನ್‌ವೇಯಲ್ಲಿ ಲ್ಯಾಂಡ್‌ ಆಗುತ್ತಿದ್ದಾಗ ವಿಮಾನವೊಂದು ಹೊತ್ತಿ ಉರಿದ ಘಟನೆ ಜಪಾನಿನ (Japan) ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ (Haneda Airport) ನಡೆದಿದೆ.

    ಈ ವಿಮಾನದಲ್ಲಿ ಒಟ್ಟು 387 ಮಂದಿ ಪ್ರಯಾಣಿಸುತ್ತಿದ್ದರು. ಎಲ್ಲಾ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಈಗ ವರದಿಯಾಗಿದೆ. JAL 516 ವಿಮಾನ ಹೊಕ್ಕೈಡೊದಿಂದ ಟೇಕಾಫ್‌ ಆಗಿತ್ತು.

     ಕೋಸ್ಟ್‌ ಗಾರ್ಡ್‌ ವಿಮಾನಕ್ಕೆ ಪ್ರಯಾಣಿಕರ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

     

  • Japan Earthquakes; ಜಪಾನ್‌ನಲ್ಲಿ ಭೂಕಂಪಕ್ಕೆ 13 ಮಂದಿ ಸಾವು – ಒಂದೇ ದಿನ 155 ಬಾರಿ ಭೂಮಿ ಕಂಪನ

    Japan Earthquakes; ಜಪಾನ್‌ನಲ್ಲಿ ಭೂಕಂಪಕ್ಕೆ 13 ಮಂದಿ ಸಾವು – ಒಂದೇ ದಿನ 155 ಬಾರಿ ಭೂಮಿ ಕಂಪನ

    ಟೋಕಿಯೊ: ಒಂದೇ ದಿನ 155 ಬಾರಿ ಭೂಕಂಪ ಸಂಭವಿಸಿದ ಪರಿಣಾಮ ಜಪಾನ್‌ನಲ್ಲಿ (Japan Earthquakes) 13 ಮಂದಿ ಸಾವಿಗೀಡಾಗಿದ್ದಾರೆ. ಹೊಸ ವರ್ಷದಂದೇ ಭೂಕಂಪ ಸಂಭವಿಸಿ ಅಪಾರ ಸಾವು-ನೋವಿಗೆ ಕಾರಣವಾಗಿದೆ.

    ಹೊನ್ಶುವಿನ ಮುಖ್ಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 7.5 ತೀವ್ರತೆಯ ಭೂಕಂಪವು ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಭೂಕಂಪದ ತೀವ್ರತೆಗೆ ಕಟ್ಟಡಗಳು ನೆಲಕ್ಕುರುಳಿವೆ, ಪ್ರಮುಖ ಬಂದರು ಬೆಂಕಿ ಅವಘಡಕ್ಕೆ ಕಾರಣವಾಯಿತು, ರಸ್ತೆಗಳು ಬಿರುಕು ಬಿಟ್ಟಿವೆ. ಇದನ್ನೂ ಓದಿ: ಜಪಾನ್‍ನಲ್ಲಿ 7.6 ತೀವ್ರತೆಯ ಭೂಕಂಪ – ಸುನಾಮಿ ಎಚ್ಚರಿಕೆ

    ಜಪಾನ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದಾಗಿ ಹಲವಾರು ಸಾವುನೋವುಗಳು, ಕಟ್ಟಡ ಕುಸಿತಗಳು ಮತ್ತು ಬೆಂಕಿ ಸೇರಿದಂತೆ ಬಹಳ ವ್ಯಾಪಕ ಹಾನಿಯಾಗಿದೆ ಎಂದು ವಿಪತ್ತು ನಿರ್ವಹಣಾ ಸಭೆಯ ಬಳಿಕ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ತಿಳಿಸಿದ್ದಾರೆ.

    ವಾಜಿಮಾ ಬಂದರಿನಲ್ಲಿ ಏಳು ಮಂದಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏರಿಯಲ್ ನ್ಯೂಸ್ ಫೂಟೇಜ್ ಬಂದರಿನಲ್ಲಿ ಭೂಕಂಪದಿಂದ ಬೆಂಕಿ ಅವಘಡ ಸಂಭವಿಸಿತು. ಏಳು ಅಂತಸ್ತಿನ ಕಟ್ಟಡವು ಕುಸಿದಿದೆ. ಈ ಪ್ರದೇಶದಲ್ಲಿ ಸುಮಾರು 45,000 ಕುಟುಂಬಗಳು ವಿದ್ಯುತ್‌ ಸಮಸ್ಯೆಯಿಂದ ಕತ್ತಲಲ್ಲಿ ಜೀವನ ನಡೆಸುವಂತಾಗಿದೆ. ಇದನ್ನೂ ಓದಿ: ಹೊಸ ವರ್ಷವನ್ನು ಸ್ವಾಗತಿಸಿದ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌

    ಭೂಕಂಪದ ತೀವ್ರತೆ 7.5ರಷ್ಟಿತ್ತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ. ಜಪಾನ್‌ನ ಹವಾಮಾನ ಸಂಸ್ಥೆ ಇದನ್ನು 7.6 ಎಂದು ಹೇಳಿದೆ.

  • ಜಪಾನ್‍ನಲ್ಲಿ 7.6 ತೀವ್ರತೆಯ ಭೂಕಂಪ – ಸುನಾಮಿ ಎಚ್ಚರಿಕೆ

    ಜಪಾನ್‍ನಲ್ಲಿ 7.6 ತೀವ್ರತೆಯ ಭೂಕಂಪ – ಸುನಾಮಿ ಎಚ್ಚರಿಕೆ

    ಟೋಕಿಯೊ: ಹೊಸ ವರ್ಷದ ಆರಂಭದಲ್ಲೇ ಜಪಾನ್‍ಗೆ (Japan) ತೀವ್ರ ಆಘಾತ ಎದುರಾಗಿದೆ. ಈಶಾನ್ಯ ಜಪಾನ್‍ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್‌ಗಳಷ್ಟು ಎತ್ತರದ ತೆರೆಗಳು ಅಪ್ಪಳಿಸುತ್ತಿದೆ.

    ಇಶಿಕಾವಾ, ನೈಕತಾ ಮತ್ತು ಟೊಯಾಮಾ ನಗರಗಳ ಕರಾವಳಿ ತೀರಗಳಲ್ಲಿ ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ. ಇಶಿಕಾವಾ ಜಿಲ್ಲೆಯ ಕರಾವಳಿ ನೋಟೋಗೆ 5 ಮೀಟರ್ ಎತ್ತರದವರೆಗಿನ ಬೃಹತ್ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ. ನೈಗತ ಮತ್ತು ಟೊಯಾಮಾ ಸೇರಿದಂತೆ ಉಳಿದ ಕೆಲವು ಕರಾವಳಿ ತೀರಗಳಲ್ಲಿ 3 ಮೀಟರ್‍ವರೆಗೂ ಅಲೆಗಳು ಏಳಬಹುದು ಎಂದು ಜಪಾನ್ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

    ಸ್ಥಳೀಯ ಕಾಲಮಾನ ಸಂಜೆ 4:10 ಸುಮಾರಿಗೆ ಇಶಿಕಾವಾ ಪ್ರಾಂತ್ಯದ ನೋಟೊ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4ರಿಂದ 7.6 ರವರೆಗೂ ಭೂಕಂಪನದ ತೀವ್ರತೆ ದಾಖಲಾಗಿದೆ. ಜಪಾನ್‍ನ ಈಶಾನ್ಯ ಭಾಗದ ನನಾವೋ ಭೂ ಕಂಪನದ ಕೇಂದ್ರ ಬಿಂದು ಎಂದು ವರದಿಯಾಗಿದೆ.

    ಹವಾಮಾನ ಇಲಾಖೆ, ಜನರಿಗೆ ಆದಷ್ಟು ಮನೆಗಳಿಂದ ದೂರದ ಬಯಲು ಪ್ರದೇಶಗಳಲ್ಲಿ ಇರುವಂತೆ ಸೂಚಿಸಿದೆ. ಅಲ್ಲದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.

    ಮಾ.2011 ರಲ್ಲಿ ಈಶಾನ್ಯ ಜಪಾನ್‍ನಲ್ಲಿ ಸಂಭವಿಸಿದ 9.0-ತೀವ್ರತೆಯ ಭೂಕಂಪದ 18,500 ಜನ ಸಾವಿಗೀಡಾಗಿದ್ದರು. ಇದನ್ನೂ ಓದಿ: ಇಸ್ರೋ 2024ರ ಮೊದಲ ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ ಯಶಸ್ವಿ

    ಸುನಾಮಿ ಹೇಗೆ ಸಂಭವಿಸುತ್ತದೆ?
    ಸಮುದ್ರದ ಆಳದಲ್ಲಿ ಭೂಕಂಪ ಅಥವಾ ಜ್ವಾಲಾಮುಖಿಗಳು ಸಂಭವಿಸಿದಾಗ, ಸಮುದ್ರದ ಅಡಿಯಲ್ಲಿರುವ ಭೂಪದರ ಸ್ಥಳಾಂತರಗೊಳ್ಳುತ್ತದೆ. ಇದು ಸಮುದ್ರದ ನೀರನ್ನು ಮೇಲಕ್ಕೆ ತಳ್ಳುತ್ತದೆ. ಇದರಿಂದ ಅಪಾರ ಪ್ರಮಾಣದ ಅಲೆಗಳು ಹುಟ್ಟಿಕೊಳ್ಳುತ್ತವೆ. ಈ ಅಲೆಗಳ ಎತ್ತರ ಹಾಗೂ ತೀವ್ರತೆ ಭೂಕಂಪದ ತೀವ್ರತೆಯನ್ನು ಆಧರಿಸಿರುತ್ತದೆ. ಭಾರೀ ಪ್ರಮಾಣದ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸಿ ಅಪಾರ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತವೆ.

  • ಜಪಾನ್ ಕರಾವಳಿ ತೀರದಲ್ಲಿ ಅಮೆರಿಕ ಸೇನಾ ವಿಮಾನ ಪತನ – 8 ಸಿಬ್ಬಂದಿ ದುರ್ಮರಣ

    ಜಪಾನ್ ಕರಾವಳಿ ತೀರದಲ್ಲಿ ಅಮೆರಿಕ ಸೇನಾ ವಿಮಾನ ಪತನ – 8 ಸಿಬ್ಬಂದಿ ದುರ್ಮರಣ

    ವಾಷಿಂಗ್‍ಟನ್: ಅಮೆರಿಕದ Osprey ಮಿಲಿಟರಿ ವಿಮಾನವೊಂದು ಜಪಾನ್‍ನ (Japan) ಯಕುಶಿಮಾ ದ್ವೀಪದ ಬಳಿ ಪತನಗೊಂಡಿದ್ದು, ಅದರಲ್ಲಿದ್ದ 8 ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

    ಸ್ಥಳಿಯ ಕಾಲಮಾನ ಮಧ್ಯಾಹ್ನ 02:47 ಗಂಟೆಗೆ ವಿಮಾನ ಯಕುಶಿಮಾ ದ್ವೀಪದಲ್ಲಿ ಪತನಗೊಂಡಿದೆ. ವಿಮಾನ ಕೆಳಗೆ ಬರುವಾಗ ಎಡ ಭಾಗದ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ವಿಮಾನವು ಪಶ್ಚಿಮ ಜಪಾನ್‍ನ ಸಮುದ್ರಕ್ಕೆ ಅಪ್ಪಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಜಪಾನ್‍ನ ಕರಾವಳಿ ಕಾವಲು ಪಡೆ ಹೇಳಿದೆ. ಇದನ್ನೂ ಓದಿ: ಬಿಆರ್ ಪಾಟೀಲ್ ಪತ್ರದ ಬಗ್ಗೆ ಸಿಎಂ ನಿರ್ಧರಿಸುತ್ತಾರೆ: ಕೃಷ್ಣ ಬೈರೇಗೌಡ

    ವಿಮಾನ ಪತನಗೊಂಡ ಪ್ರದೇಶದಲ್ಲಿ ಅಮೆರಿಕದ (America) ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಿಮಾನ ಪತನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ಆಗ‌ಸ್ಟ್‌ನಲ್ಲಿ ಉತ್ತರ ಆಸ್ಟ್ರೇಲಿಯಾದಲ್ಲಿ Osprey ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ 32 ಮಂದಿ ಸಾವಿಗೀಡಾಗಿದ್ದರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ಗೆ ರಿಲೀಫ್;‌ ಮೇಲ್ಮನವಿ ಹಿಂಪಡೆದ ಮನವಿ ಪರಿಗಣಿಸಿದ ಹೈಕೋರ್ಟ್

  • ‘ಜಪಾನ್’ ಸಿನಿಮಾಗೆ ಕಾರ್ತಿ ಡಬ್ಬಿಂಗ್

    ‘ಜಪಾನ್’ ಸಿನಿಮಾಗೆ ಕಾರ್ತಿ ಡಬ್ಬಿಂಗ್

    ಮಿಳು ನಟ ಕಾರ್ತಿ (Karthi) ನಟಿಸುತ್ತಿರುವ 25ನೇ ಸಿನಿಮಾ ಜಪಾನ್ (Japan). ಇತ್ತೀಚೆಗೆ ರಿಲೀಸ್ ಆಗಿದ್ದ ಈ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಭಾರೀ ಸದ್ದು ಮಾಡಿತ್ತು. ಇದೀಗ ಡಬ್ಬಿಂಗ್ (Dubbing) ಮನೆಯಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅಂದರೆ ಜಪಾನ್ ಸಿನಿಮಾದ ಡಬ್ಬಿಂಗ್ ಶುರುವಾಗಿದೆ. ಸಣ್ಣದಾಗಿರುವ ಝಲಕ್ ಮೂಲಕ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

    ಜೋಕರ್ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್ ಗೆ ಮುತ್ತಿಟ್ಟಿದ್ದ ನಿರ್ದೇಶಕ ರಾಜು ಮುರುಗನ್ (Raju Murugan), ನಿರ್ಮಾಪಕರಾದ ಎಸ್. ಆರ್. ಪ್ರಕಾಶ್ ಬಾಬು ಹಾಗೂ ಎಸ್. ಆರ್. ಪ್ರಭು ‘ಜಪಾನ್’ ಸಿನಿಮಾ ಮೂಲಕ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ.

    ಜಪಾನ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಅನು ಇಮ್ಯಾನುಯೆಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಟಾಲಿವುಡ್‌ನ ಹಾಸ್ಯನಟನಾಗಿ ಸುನಿಲ್ ಈ ಚಿತ್ರದ ಮೂಲಕ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ,  ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ್ ಕ್ಯಾಮೆರಾ ಹಿಡಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಾ ಭಾರತ?

    ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಾ ಭಾರತ?

    “ನನ್ನ ಮೂರನೇ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಮೂರು ಆರ್ಥಿಕತೆಯಲ್ಲಿ (Economy) ಭಾರತದ (India) ಹೆಸರು ಇರಲಿದೆ. ಇದು ಮೋದಿ ನೀಡುವ ಗ್ಯಾರಂಟಿ” – ದೆಹಲಿಯ ‘ಭಾರತ ಮಂಟಪಂ’ವನ್ನು ಉದ್ಘಾಟನೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಈ ಭಾಷಣದ ಬಗ್ಗೆ ಹಲವು ಚರ್ಚೆಗಳು ಈಗ ಆರಂಭವಾಗಿದ್ದು ಅದರಲ್ಲೂ ಜಪಾನ್‌ ದೇಶವನ್ನು ಹಿಂದಿಕ್ಕಿಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಇಲ್ಲಿ ಜಪಾನ್‌ ಅಭಿವೃದ್ಧಿಯಾಗಿದ್ದು ಹೇಗೆ? ಭಾರತ ಅಭಿವೃದ್ಧಿಯಾಗಿದ್ದು ಹೇಗೆ? ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಬೇಕಾದರೆ ಭಾರತ ಏನು ಮಾಡಬೇಕು? ಮತ್ತು ಭಾರತದ ಮುಂದಿರುವ ಸವಾಲು ಏನು? ಈ ವಿಷಯದ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.


    ಜಪಾನ್‌ ಅಭಿವೃದ್ಧಿಯಾಗಿದ್ದು ಹೇಗೆ?
    ಶುಚಿತ್ವಕ್ಕೆ ಹೆಸರುವಾಸಿಯಾದ ದೇಶ, ಸಮಯ ಪಾಲನೆಗೆ ಮಹತ್ವ ನೀಡುವ ಜನ, ಟೆಕ್ ಪ್ರಿಯರ, ಅಭಿವೃದ್ಧಿ ಹೊಂದಿದ ದೇಶವಾಗಿರುವ ಜಪಾನ್‌ 18, 19ನೇ ಶತಮಾನದಲ್ಲಿ ಯುದ್ಧ ಪ್ರಿಯ ರಾಷ್ಟ್ರವಾಗಿತ್ತು. ಸಣ್ಣ ದೇಶವಾದರೂ ಬಲಾಢ್ಯ ಚೀನಾ, ರಷ್ಯಾವನ್ನೇ ಸೋಲಿಸಿತ್ತು. ಸೇನಾ ಶಕ್ತಿ, ಯುದ್ಧವೇ ವಿದೇಶ ನೀತಿಯ ಭಾಗವಾಗಿತ್ತು.

    ಯುದ್ಧದಾಹಿ ದೇಶವಾಗಿದ್ದ ಜಪಾನ್‌ ಎರಡನೇ ಮಹಾಯುದ್ಧದಲ್ಲಿ ಅಮೆರಿಕದ ಪರ್ಲ್‌ ಹರ್ಬರ್‌ ನೌಕಾ ನೆಲೆಯ ಮೇಲೆ 1941ರ ಡಿಸೆಂಬರ್‌ 7 ರಂದು ಏರ್‌ ಸ್ಟ್ರೈಕ್‌ ಮಾಡಿತ್ತು. ಈ ದಾಳಿ ನಡೆಯುವವರೆಗೂ 1939 ರಿಂದ ಆರಂಭಗೊಂಡಿದ್ದ ಎರಡನೇ ಮಹಾಯುದ್ಧದಲ್ಲಿ ಅಮೆರಿಕ (USA) ಭಾಗಿಯಾಗಿರಲಿಲ್ಲ. ದಾಳಿ ನಡೆದ ಮರು ದಿನವೇ ಅಮೆರಿಕ ಎರಡನೇ ಮಹಾಯುದ್ಧಕ್ಕೆ ಧುಮುಕಿತು. ತನ್ನ ಮೇಲಿನ ದಾಳಿಗೆ ಸೇಡು ತೀರಿಸಲು 1945ರ ಆಗಸ್ಟ್‌ 6 ರಂದು ಹಿರೋಶಿಮಾ ಆಗಸ್ಟ್‌ 9 ರಂದು ನಾಗಸಾಕಿ ಮೇಲೆ ಅಣು ಬಾಂಬ್‌ ದಾಳಿ ಮಾಡಿತು. ಎರಡು ದಾಳಿಗೆ ಹತ್ತಿರ ಹತ್ತಿರ ಎರಡೂವರೆ ಲಕ್ಷ ಜನ ಸಾವನ್ನಪ್ಪಿದ್ದರು. ಕೊನೆಗೆ ಸೆಪ್ಟೆಂಬರ್‌ 2 ರಂದು ಜಪಾನ್‌ ಅಮೆರಿಕಗೆ ಶರಣಾಯಿತು. ಇಲ್ಲಿಗೆ ಎರಡನೇ ಮಹಾಯುದ್ಧ ಅಂತ್ಯವಾಯಿತು.

    ಯುದ್ಧದಿಂದ ಜಪಾನ್‌ ನಲುಗಿ ಹೋಗಿತ್ತು. ಈ ಕಾರಣಕ್ಕೆ ಅಮೆರಿಕದ ನಿರ್ದೇಶನದಂತೆ ಸಂವಿಧಾನಕ್ಕೆ 1947ರಲ್ಲಿ ಜಪಾನ್‌ ತಿದ್ದುಪಡಿ ಮಾಡಿತು. ವಿಶ್ವಶಾಂತಿ ಬಯಸುವ ರಾಷ್ಟ್ರವಾದ ಜಪಾನ್ ಜನರು ಎಂದಿಗೂ ಯಾವುದೇ ದೇಶದ ಮೇಲೆ ಯುದ್ಧ ಘೋಷಿಸುವುದಿಲ್ಲ ಮತ್ತು ಅತರರಾಷ್ಟ್ರೀಯ ವಿವಾದಗಳನ್ನು ಪರಿಹರಿಸಲು ಎಂದಿಗೂ ಬಲಪ್ರಯೋಗ ಮಾಡುವುದಿಲ್ಲ ಎಂದು ತಿದ್ದುಪಡಿ ಮಾಡಿತ್ತು. ಈ ತಿದ್ದುಪಡಿಯಿಂದ ಜಪಾನ್‌ಗೆ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯನ್ನು ಅಧಿಕೃತವಾಗಿ ಹೊಂದಲು ಅವಕಾಶವಿರಲಿಲ್ಲ. ಇದನ್ನೂ ಓದಿ: ಮೇಡ್‌ ಇನ್‌ ಚೈನಾಗೆ ಭಾರತ ಶಾಕ್‌ -ಲ್ಯಾಪ್‌ಟಾಪ್‌ ಬ್ಯಾನ್‌ ಮಾಡಿದ್ದು ಯಾಕೆ?

    ಜಪಾನ್‌ನಲ್ಲಿ ಅಭಿವೃದ್ಧಿ ಕ್ರಾಂತಿ
    ಮಿಲಿಟರಿಗೆ ಹಾಕುವ ಹಣವನ್ನು ಅಭಿವೃದ್ಧಿಗೆ ಬಳಸಿದ ಕಾರಣ ಜಪಾನ್‌ನಲ್ಲಿ ಕೈಗಾರಿಕಾ ಕ್ರಾಂತಿ (Industrial Revolution) ಆರಂಭವಾಯಿತು. ಉದ್ಯಮಗಳು ಆರಂಭಗೊಂಡವು, ಸರ್ಕಾರ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿತು. ಇದೆಲ್ಲದರ ಪರಿಣಾಮ 1968 ರಲ್ಲಿ ಜಪಾನ್‌ ಯುರೋಪ್‌ ದೇಶಗಳನ್ನು ಹಿಂದಿಕ್ಕೆ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಬದಲಾಯಿತು. 1945 ಅಣು ಬಾಂಬ್‌ ಹಾಕಿ ಕೇವಲ 23 ವರ್ಷದಲ್ಲಿ ಜಪಾನ್‌ನಲ್ಲಿ ಭಾರೀ ಬದಲಾವಣೆ ನಡೆಯಿತು. 2009 ವರೆಗೆ ಜಪಾನ್‌ ಎರಡನೇ ಸ್ಥಾನದಲ್ಲೇ ಇತ್ತು. 2010ರಲ್ಲಿ ಚೀನಾ (China) ಜಪಾನ್‌ನನ್ನು ಸೋಲಿಸಿ ಎರಡನೇ ಸ್ಥಾನ ಪಡೆಯಿತು.

    ಭಾರತ ಅಭಿವೃದ್ಧಿಯಾಗಿದ್ದು ಹೇಗೆ?
    ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತ ಅಲಿಪ್ತ ನೀತಿಯನ್ನು ಅಳವಡಿಸಿಕೊಂಡಿತ್ತು. ಎರಡನೇ ಮಹಾಯುದ್ಧದ ಬಳಿಕ ಅಮೆರಿಕ ಮತ್ತು ಯುಎಸ್‌ಎಸ್‌ಆರ್‌ ಜೊತೆ ಶೀತಲ ಸಮರ ನಡೆಯುತ್ತಿತ್ತು. ಶೀತಲ ಸಮರ ನಡೆಯುತ್ತಿದ್ದರೂ ರಕ್ಷಣಾ ವಿಚಾರದಲ್ಲಿ ಭಾರತ ಯುಎಸ್‌ಎಸ್‌ಆರ್‌ ಜೊತೆ ಜಾಸ್ತಿ ವ್ಯವಹಾರ ಮಾಡಿತ್ತು. ಇದು ಅಮೆರಿಕದ ಕಣ್ಣು ಕೆಂಪಗೆ ಮಾಡಿತ್ತು. ಈ ಮಧ್ಯೆ ಗಡಿಯಲ್ಲಿರುವ ಪಾಕಿಸ್ತಾನ ಮತ್ತು ಚೀನಾದ ಜೊತೆ ಯುದ್ಧ ಮಾಡಿತು. ವಿರೋಧಿ ರಾಷ್ಟ್ರಗಳು ಶಕ್ತಿಶಾಲಿ ಆಗುತ್ತಿದ್ದಂತೆ ಭಾರತ 1974 ಮತ್ತು 1998ರಲ್ಲಿಅಣು ಬಾಂಬ್‌ ಸ್ಫೋಟ ಮಾಡಿತು. ಯಾವ ದೇಶಕ್ಕೂ ತಿಳಿಯದೇ ಬಹಳ ರಹಸ್ಯವಾಗಿ ಅಣು ಬಾಂಬ್‌ ಸ್ಫೋಟ ಮಾಡಿದ್ದನ್ನು ಸಹಿಸದ ಅಮೆರಿಕ ಸೇರಿದಂತೆ ಹಲವು ದೇಶಗಳು ಭಾರತದ ನಿರ್ಬಂಧ ಹೇರಿದ್ದವು.

    1991ರ ಪಿವಿ ನರಸಿಂಹ ರಾವ್‌ ಸರ್ಕಾರ ಉದಾರಿಕರಣ, ಖಾಸಗೀಕರಣ, ಜಾಗತಿಕರಣ ನೀತಿಯನ್ನು ಅಳವಡಿಸಿಕೊಂಡಿತು. ಆದರೆ ಅಮೆರಿಕದ ಒತ್ತಡದಿಂದ ಭಾರತಕ್ಕೆ ಸಾಲ ನೀಡಲು ವಿವಿಧ ರಾಷ್ಟ್ರಗಳು ಹಿಂದೇಟು ಹಾಕಿದವು. ಒಂದು ರಾಕೆಟ್‌ ಮೇಲಕ್ಕೆ ಹಾರಲು ಬೇಕಾದ ಕ್ರಯೋಜನಿಕ್‌ ಎಂಜಿನ್‌ (Cryogenic Engine) ಅಮೆರಿಕ ನಿರ್ಬಂಧ ಹೇರಿತು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನಿರ್ಬಂಧದಿಂದ ಅಭಿವೃದ್ಧಿ ವಿಚಾರದಲ್ಲಿ ಭಾರತಕ್ಕೆ ಬಹಳಷ್ಟು ಸಮಸ್ಯೆಯಾಯಿತು. ಈ ನಡುವೆ ಗಡಿಯಲ್ಲಿ ಪಾಕ್‌ ಕಿರಿಕಿರಿ, ದೇಶದ ಒಳಗಡೆ ಉಗ್ರರ ಕಾಟ. ಈ ಕಾರಣಕ್ಕೆ ಭಾರತ ಅಭಿವೃದ್ಧಿಯ ಜೊತೆಗೆ ರಕ್ಷಣೆಗೆ ಹೆಚ್ಚಿನ ಅನುದಾನ ನೀಡಿತು. ಬಜೆಟ್‌ನಲ್ಲಿ ರಕ್ಷಣೆಯೇ ಮೊದಲ ಆದ್ಯತೆ ಆಯಿತು. ಹೀಗಿದ್ದರೂ ನಿಧಾನವಾಗಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸತೊಡಗಿತು. ಇದನ್ನೂ ಓದಿ: ತಾಲಿಬಾನ್‌ ಉಗ್ರರಿಗೆ ಪಾಕ್‌ ಮೇಲೆ ಸಿಟ್ಯಾಕೆ?

    ಭಾರತ Vs ಜಪಾನ್‌:
    ಒಂದು ದೇಶ ಅಭಿವೃದ್ಧಿಯತ್ತ ಸಾಗುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬಳಸುವ ಪ್ರಮುಖ ಮಾನದಂಡ ಯಾವುದು ಎಂದರೆ ಅದು ಜಿಡಿಪಿ. ಜಿಡಿಪಿ (GDP) ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಎಂದು ಕರೆಯಲಾಗುತ್ತದೆ. ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪತ್ತಿಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ. ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಆಮದು ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿಯ ಸಂಖ್ಯೆ ತಿಳಿಯುತ್ತದೆ.

    ಭಾರತ ಮತ್ತು ಜಪಾನ್‌ ಜಿಡಿಪಿ ಯಾವ ವರ್ಷ ಎಷ್ಟು?

    ಜಿಡಿಪಿ ಬೆಳವಣಿಗೆ ದರ ಎಷ್ಟು?
    ಜಪಾನಿಗೆ ಹೋಲಿಕೆ ಮಾಡಿದಾಗ ಜಿಡಿಪಿ ಬೆಳವಣಿಗೆ ದರ ಭಾರತದ್ದೇ ಚೆನ್ನಾಗಿದೆ ಎಂದು ಅನಿಸಬಹುದು. ಆದರೆ ಆರ್ಥಿಕತೆಯಲ್ಲಿ ಭಾರತ ಹಿಂದೆ ಇದ್ದೇವೆ ಎಂದು ಅನಿಸುವುದು ಸಹಜ.  ಜಿಡಿಪಿ ಕಡಿಮೆ ಯಾಕೆ ಎನ್ನುವುದಕ್ಕೆ ಎರಡು ಕಾರಣ ನೀಡಬಹುದು. ಒಂದನೇಯದಾಗಿ ನಮ್ಮ ಜನಸಂಖ್ಯೆ ಎರಡನೇಯದಾಗಿ ಈ ಹಿಂದೆ ತಿಳಿಸಿದಂತೆ ರಕ್ಷಣಾ ಬಜೆಟ್‌ಗೆ ನಾವು ಮೀಸಲಿಟ್ಟ ಹಣ.

    ಸದ್ಯ ಭಾರತದ ಜನ ಸಂಖ್ಯೆ 142 ಕೋಟಿ ರೂ. ವಿಶ್ವದ 17% ಜನಸಂಖ್ಯೆ ನಮ್ಮಲ್ಲೇ ಇದೆ. ಜಪಾನ್‌ ಜನಸಂಖ್ಯೆ 12.32 ಕೋಟಿ ಇದ್ದು ವಿಶ್ವದ 1%ಜನಸಂಖ್ಯೆಗೆ ಸಮ. ಮಿಲಿಟರಿ ಬಜೆಟ್‌ ತೆಗದುಕೊಂಡರೆ 2022 ರಲ್ಲಿ ಭಾರತ 81.1 ಬಿಲಿಯನ್‌ ಡಾಲರ್‌ ಹಣವನ್ನು ಖರ್ಚು ಮಾಡುವ ವಿಶ್ವದಲ್ಲಿ 4 ಸ್ಥಾನವನ್ನು ಪಡೆದಿದೆ ಸ್ಟಾಕ್‌ಹೋಮ್‌ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೇಳಿದೆ.

    ಚೀನಾ ಮತ್ತು ರಷ್ಯಾ ಬಲಾಢ್ಯವಾಗುತ್ತಿರುವ ಹಿನ್ನೆಲೆಯಲ್ಲಿ 2014 ರಲ್ಲಿ ಜಪಾನ್‌ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ರಕ್ಷಣೆಗೆ ಹೆಚ್ಚಿನ ಅನುದಾನ ನೀಡತೊಡಗಿತು. 2022 ರಲ್ಲಿ ಜಪಾನ್‌ 46 ಬಿಲಿಯನ್‌ ಡಾಲರ್‌ ರಕ್ಷಣೆಗೆ ಮೀಸಲಿಡುವ ಮೂಲಕ ವಿಶ್ವದಲ್ಲಿ 10ನೇ ಸ್ಥಾನ ಪಡೆದಿದೆ. ಇದನ್ನೂ ಓದಿ: ಜಪಾನ್‌ ಮಿಲಿಟರಿ ಬಜೆಟ್‌ ಹೆಚ್ಚಿಸಿದ್ದು ಯಾಕೆ?

    ಜಿಡಿಪಿ ರ‍್ಯಾಂಕ್‌
    ಜಿಡಿಪಿ ರ‍್ಯಾಂಕ್‌ನಲ್ಲಿ 2009ರವರೆಗೆ ಜಪಾನ್‌ ವಿಶ್ವದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿತ್ತು. ನಂತರ ಮೂರನೇ ಸ್ಥಾನದಲ್ಲಿದೆ ಮುಂದುವರಿದಿದೆ.

    ಆರ್ಥಿಕತೆಯಲ್ಲಿ ಯಾವ ದೇಶ ಎಷ್ಟನೇ ಸ್ಥಾನದಲ್ಲಿ ಇದೆ?
    ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಚೀನಾ ಎರಡನೇ ಸ್ಥಾನದಲ್ಲಿದೆ. ಜಪಾನ್‌, ಜರ್ಮನಿ, ಭಾರತ ಅನುಕ್ರಮವಾಗಿ ನಂತರದ ಸ್ಥಾನದಲ್ಲಿದೆ.

    ಭಾರತ ಜಪಾನ್‌ ಹಿಂದಿಕ್ಕುತ್ತಾ?
    ಕೋವಿಡ್‌ (Covid 19) ನೀಡಿದ ಹೊಡೆತದಿಂದ ಹಲವು ದೇಶಗಳು ಇನ್ನೂ ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ರಷ್ಯಾ-ಉಕ್ರೇನ್‌ ಯುದ್ಧ ಮತ್ತಷ್ಟು ಹೊಡೆತ ನೀಡಿತು. ಪರಿಸ್ಥಿತಿ ಹೀಗಿದ್ದರೂ ಭಾರತದ ಜಿಡಿಪಿ ಬೆಳವಣಿಗೆ (India GDP Growth) ದರ ಅತ್ಯುತ್ತಮವಾಗಿದೆ. 2022 ರಲ್ಲಿ 7% ಪ್ರಗತಿ ಸಾಧಿಸಿದ್ದೇವೆ. ಈ ರೀತಿಯ ಬೆಳವಣಿಗೆಯನ್ನು ಕಾಯ್ದುಕೊಂಡರೆ ಭಾರತ 2027ರಲ್ಲಿ ಜಪಾನ್‌ ಮತ್ತು ಜರ್ಮನಿಯನ್ನು ಹಿಂದಿಕ್ಕಿ 3ನೇ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಭವಿಷ್ಯ ನುಡಿದಿದೆ. 2027ರ ವೇಳೆಗೆ ಜರ್ಮನಿ 4.9 ಟ್ರಿಲಿಯನ್‌ ಡಾಲರ್‌, ಜಪಾನ್‌ 5.2 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ದೇಶವಾಗಿದ್ದರೆ ಭಾರತ 5.4 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದೆ ಎಂದು ಐಎಂಎಫ್‌ ಹೇಳಿದೆ.

    ಜಪಾನ್‌ನಲ್ಲಿ ಒಟ್ಟು ಜನಸಂಖ್ಯೆಯಲ್ಲಿ 30% ಜನ 65 ವರ್ಷ ಮೇಲ್ಪಟ್ಟವರಾಗಿದ್ದಾರೆ . ಆದರೆ ಭಾರತದಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ಇರುವುದು ಕೇವಲ 7%. 15-64 ವರ್ಷದ ಜನಸಂಖ್ಯೆ ದುಡಿಯುವ ವರ್ಗದ ಜನಸಂಖ್ಯೆ ಎಂದು ಕರೆಯಲಾಗುತ್ತದೆ. ಈ ಸಂಖ್ಯೆ ಹೆಚ್ಚಿದ್ದಷ್ಟು ದೇಶದ ಅಭಿವೃದ್ಧಿಯಾಗುತ್ತದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ. ಭಾರತದಲ್ಲಿ 70% ಜನರು 15-64 ವಯಸ್ಸಿನ ಒಳಗಡೆ ಇದ್ದಾರೆ.

    ಸವಾಲು, ಪರಿಹಾರ ಏನು?
    ಒಂದು ದೇಶದ ಆಮದು ಕಡಿಮೆಯಾಗಿ ರಫ್ತು ಹೆಚ್ಚಾದರೆ ಮಾತ್ರ ಆ ದೇಶ ಅಭಿವೃದ್ಧಿ ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಬಹಳ ಮುಖ್ಯ 2022- 23ನೇ ಅವಧಿಯಲ್ಲಿ ಭಾರತ 447 ಬಿಲಿಯನ್‌ ಡಾಲರ್‌ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದರೆ 714 ಬಿಲಿಯನ್‌ ಡಾಲರ್‌ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಭಾರತ ಮೇಕ್‌ ಇನ್‌ ಇಂಡಿಯಾ ಹೆಚ್ಚು ಒತ್ತು ನೀಡಲು ಆರಂಭಿಸಿದ್ದು, ಹಲವು ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಇದರ ಫಲ ಈಗಲೇ ಬರದೇ ಇದ್ದರೂ ಕೆಲ ವರ್ಷಗಳಲ್ಲಿ ಸಿಗಲಿದೆ.

    ವಿಶ್ವದಲ್ಲೇ ಯುಪಿಐ (UPI) ಪಾವತಿಯಲ್ಲಿ ಭಾರತ ವಿಶ್ವದಲ್ಲೇ ನಂಬರ್‌ ಒನ್‌ ಸ್ಥಾನ ಪಡೆದಿದೆ. ಈಗ ಹಲವು ದೇಶಗಳ ಜೊತೆ ಭಾರತದ ಆರ್‌ಬಿಐ (RBI) ಯುಪಿಐ ಪಾವತಿ ಸಂಬಂಧ ಸಹಿ ಹಾಕಿದೆ.

    ಬಹಳ ಮುಖ್ಯವಾಗಿ ಈಗ ಡಾಲರ್‌ ಅವಲಂಬನೆ ಕಡಿಮೆ ಮಾಡಲು ಸ್ಥಳೀಯ ಕರೆನ್ಸಿ ಜೊತೆಯಲ್ಲೇ ವ್ಯವಹಾರ ನಡೆಸುತ್ತಿದೆ. ಕಚ್ಚಾ ತೈಲ ಪೂರೈಸುವ ದೇಶ ಯುದ್ಧದಲ್ಲಿ ಭಾಗವಹಿಸಿದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆಯಿಂದ ಡಾಲರ್‌ ಬೆಲೆ ಏರಿಕೆಯಾಗುತ್ತದೆ. ಕಚ್ಚಾ ತೈಲ ದರ ಭಾರೀ ಏರಿಕೆಯಾಗುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಇದೇ ಮೊದಲ ಬಾರಿಗೆ ಯುಎಇ ಜೊತೆ ಸ್ಥಳೀಯ ಕರೆನ್ಸಿ ಪಾವತಿಸಿ ಭಾರತ ಕಚ್ಚಾ ತೈಲವನ್ನು ಖರೀದಿಸಿದೆ.

    ಭಾರತ ಈಗಾಗಲೇ ಪಾಕಿಸ್ತಾನದ ಜೊತೆ ಮೂರು ಬಾರಿ, ಚೀನಾದ ಜೊತೆ 1 ಬಾರಿ ಯುದ್ಧ ಮಾಡಿದೆ. ಒಂದು ವೇಳೆ ಭಾರತ ವಿರೋಧಿಗಳ ಜೊತೆ ಯುದ್ಧ ನಡೆಸಿದರೆ ಆರ್ಥಿಕತೆಯ ಮೇಲೆ ಬಹಳ ಪೆಟ್ಟು ಬೀಳುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?

    ಕೊನೆಯದಾಗಿ ಮೇ 2023ರಲ್ಲಿ ಭಾರತದ ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ 6 ರಾಷ್ಟ್ರೀಯ ಪಕ್ಷ, 54 ಪ್ರಾದೇಶಿಕ ಪಕ್ಷಗಳು ಇವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಪಕ್ಷಗಳು ಆಡಳಿತ ನಡೆಸುತ್ತಿವೆ. ಹೀಗಾಗಿ ಒಂದು ಸರ್ಕಾರ ಬಂದ ಯೋಜನೆಗಳನ್ನು ಇನ್ನೊಂದು ಸರ್ಕಾರ ಮುಂದುವರಿಸುತ್ತದೆ ಎನ್ನುವುದು ಗ್ಯಾರಂಟಿ ಇಲ್ಲ. ಹೀಗಾಗಿ ಅಭಿವೃದ್ಧಿ ಪರ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಅನುದಾನ ನೀಡಬೇಕು. ವಿಶೇಷವಾಗಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಬೇಕು ಮತ್ತು ವಿದೇಶಿ ಹೂಡಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಹೂಡಿಕೆಗಳಿಗೆ ಈಗ ಫಲ ಬಾರದೇ ಇದ್ದರೆ 3-4 ವರ್ಷಗಳಲ್ಲಿ ಖಂಡಿತವಾಗಿಯೂ ಫಲ ಬಂದೇ ಬರುತ್ತದೆ. ಅಭಿವೃದ್ಧಿ ಪರ ಯೋಜನೆಗಳು ಯಶಸ್ವಿಯಾದರೆ ಖಂಡಿತವಾಗಿಯೂ ಆರ್ಥಿಕತೆಯಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನ ಇಲ್ಲ.

    – ಅಶ್ವಥ್‌ ಸಂಪಾಜೆ

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೆಜಿಎಫ್’ ಚಿತ್ರಕ್ಕೆ ಜಪಾನ್ ನಲ್ಲೂ ಭರ್ಜರಿ ರೆಸ್ಪಾನ್ಸ್

    ‘ಕೆಜಿಎಫ್’ ಚಿತ್ರಕ್ಕೆ ಜಪಾನ್ ನಲ್ಲೂ ಭರ್ಜರಿ ರೆಸ್ಪಾನ್ಸ್

    ಶ್ ನಾಯಕನಾಗಿ ನಟಿಸಿರುವ ಕೆಜಿಎಫ್ 1 ಮತ್ತು ಕೆಜಿಎಫ್ 2 ಚಿತ್ರಗಳು ಇತ್ತೀಚೆಗಷ್ಟೇ ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದ್ದವು. ಕನ್ನಡದ ಚಿತ್ರಕ್ಕೆ ಜಪಾನ್ ಸಿನಿಮಾ ನೋಡುಗರು ಕೂಡ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ರಿಲೀಸ್ ಆದ ಹತ್ತು ದಿನಕ್ಕೆ ಸಾವಿರದ ನಾಲ್ಕು ನೂರು ಟಿಕೆಟ್ ಗಳು ಮಾರಾಟವಾಗಿವೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ವಾರಾಂತ್ಯದ ಬಹುತೇಕ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ.

    kgf 2

    ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಕೆಜಿಎಫ್ (KGF) ಸರಣಿ ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿದಿದ್ದರೂ ಅದರ ಕ್ರೇಜ್ ಇನ್ನೂ ನಿಂತಿಲ್ಲ ಎನ್ನುವುದಕ್ಕೆ ಜಪಾನ್ ನೋಡುಗರೇ ಸಾಕ್ಷಿಯಾಗಿದ್ದಾರೆ. ಭಾರತದಲ್ಲೂ ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ (Japan) ಭಾಷೆಗೆ ಡಬ್ ಆಗಿ ಅಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿವೆ.

    ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗಿದ್ದು ವಿಶೇಷ. ಸಿನಿಮಾ ರಿಲೀಸ್ ಗೂ ಮುನ್ನ ಜಪಾನ್ ನಲ್ಲಿ ಪ್ರಚಾರ ಕಾರ್ಯ ಕೂಡ ಶುರು ಮಾಡಿದ್ದರಿಂದ, ಸಿನಿಮಾ ಬಿಡುಗಡೆಗೂ ಮೊದಲು ಕೆಜಿಎಫ್ 1 ಸಿನಿಮಾ 91 ಶೋಗಳು ಹಾಗೂ ಕೆಜಿಎಫ್ 2 ಸಿನಿಮಾದ 85 ಶೋಗಳು ಮುಂಗಡವಾಗಿ ಬುಕ್ ಆಗಿದ್ದವು.

    ಕೆಜಿಎಫ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ನೋಡುಗರನ್ನು ತಲುಪಿದ್ದರು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ (Yash). ಕೆಜಿಎಫ್ 1 ಮಾಡಿದ ಮೋಡಿಯೇ ಕೆಜಿಎಫ್ 2 ಚಿತ್ರಕ್ಕೆ ಸಾಕಷ್ಟು ಪ್ಲಸ್ ಪಾಯಿಂಟ್ ಆಯಿತು. ಮೊದಲ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಂದುಕೊಟ್ಟ ಹಣದ ಎರಡರಷ್ಟು ಪಾರ್ಟ್ 2 ಮಾಡಿತು. ಹೀಗಾಗಿ ಎರಡೂ ಚಿತ್ರಗಳ ಮೂಲಕ ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಬಂತು.

    ಆರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದು ಗುರುತಿಸಬೇಕಾದ ಸಂಗತಿ. ಅದಕ್ಕಾಗಿ ನಟ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದರು.

     

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆರ್.ಆರ್.ಆರ್ ಸಿನಿಮಾ ಕೂಡ ಈ ಹಿಂದೆ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿತ್ತು. ನೂರು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ಲೂಟಿ ಮಾಡಿತ್ತು. ಆ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ ಕೆಜಿಎಫ್ ಸಿನಿಮಾವನ್ನೂ ಜಪಾನ್ ಭಾಷೆಯಲ್ಲಿ ರಿಲೀಸ್ ಮಾಡಲಾಗಿದೆ. ಅದಕ್ಕೆ ಉತ್ತಮ ರೀತಿಯಲ್ಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]