ಟೋಕಿಯೋ: ಜಪಾನ್‍ನ (Japan) ಮಿಯಾಜಾಕಿ ವಿಮಾನ ನಿಲ್ದಾಣದಲ್ಲಿ (Airport ) ರನ್‍ವೇ ಬಳಿ 2ನೇ ಮಹಾಯುದ್ದದ (2nd World War) ಕಾಲದ ಬಾಂಬ್ ಈಗ ಸ್ಫೋಟಗೊಂಡಿದ್ದು, 87 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಸ್ಫೋಟವು ಟ್ಯಾಕ್ಸಿವೇಯಲ್ಲಿ 7 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಕುಳಿಯನ್ನು ಸೃಷ್ಟಿಸಿದೆ. ಇದರಿಂದ ಅಧಿಕಾರಿಗಳು ರನ್‍ವೇಯನ್ನು ಮುಚ್ಚಲು ಆದೇಶಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾವುದೇ ಹೆಚ್ಚಿನ ಸ್ಫೋಟಗಳ ಅಪಾಯವಿಲ್ಲ. ಕುಳಿ ತುಂಬುವ ದುರಸ್ತಿ ಇಂದು (ಗುರುವಾರ) ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅದರ ಹಠಾತ್ ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಜಪಾನ್ ಸರ್ಕಾರದ ವಕ್ತಾರ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.
ಜಪಾನ್‍ಗೆ ಸ್ಫೋಟಗೊಳ್ಳದ ಬಾಂಬ್‍ಗಳು ನಿರಂತರ ಬೆದರಿಕೆಯಾಗಿವೆ. ಯುದ್ಧ ನಡೆದು 79 ವರ್ಷಗಳಾಗಿವೆ. ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಹಲವು ಸ್ಫೋಟಿಸದ ಬಾಂಬ್‍ಗಳು ಪತ್ತೆಯಾಗಿವೆ. 2023 ರಲ್ಲಿ ಸ್ವಯಂ ರಕ್ಷಣಾ ಪಡೆಗಳು 37.5 ಟನ್ ತೂಕದ 2,348 ಬಾಂಬ್‍ಗಳನ್ನು ವಿಲೇವಾರಿ ಮಾಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ಟೋಕಿಯೋ: ವೇಗವಾಗಿ ಬೀಸಿದ ಗಾಳಿಯಿಂದ ವಿಮಾನ (Plane) ಲ್ಯಾಂಡಿಂಗ್ (Landing) ಮಾಡಲು ಪರದಾಡಿದ ಘಟನೆ ಜಪಾನ್‌ನಲ್ಲಿ (Japan) ನಡೆದಿದೆ.
ಪೀಚ್ ಕಂಪನಿಯ ವಿಮಾನವು ಫುಕುವೋಕಾ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಈ ವೇಳೆ ಗಾಳಿ ಬೀಸಿದ್ದರಿಂದ ವಿಮಾನ ಮತ್ತೆ ಟೇಕಾಫ್ ಆಗಿದೆ. ಟೇಕಾಫ್ ವೇಳೆ ವಿಮಾನ ಆಕಾಶದಲ್ಲಿ ವಾಲಿದೆ. ಅದರೂ ಪೈಲೆಟ್ ನಿಯಂತ್ರಣ ತಂದು ವಿಮಾನವನ್ನು ಮುಂದಕ್ಕೆ ಹಾರಿಸಿದ್ದಾರೆ. ವಿಮಾನ ಆಕಾಶದಲ್ಲಿ ಗಾಳಿಗೆ ವಾಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
Video captures Jeju Air 737 battling strong winds from Typhoon Shanshan during aborted landing in Fukuoka.
Flight 1408 from South Korea landed safely on another runway moments later.
Typhoon Shanshan slammed into Japan on Thursday, injuring dozens as howling winds smashed… pic.twitter.com/5mKw2jGyhi
— Breaking Aviation News & Videos (@aviationbrk) August 29, 2024
– ಹಸಿರು ಹೈಡ್ರೋಜನ್, ಅಮೋನಿಯಾ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗುವ ತವಕ
ನವದೆಹಲಿ: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಒಂದು ಹೆಜ್ಜೆ ಮುಂದಿರುವ ಭಾರತ ಇದೀಗ ಜಪಾನ್‌ಗೆ (Japan) ಹಸಿರು ಅಮೋನಿಯಾ (Ammonium) ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದೆ.
ನವದೆಹಲಿಯಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಜಪಾನ್‌ಗೆ ಇದೇ ಮೊದಲ ಭಾರೀ ಹಸಿರು ಅಮೋನಿಯಾ ರಫ್ತು ಯೋಜನೆ ಆಫ್‌ಟೇಕ್ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ವೇಳೆ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅವರು ಮಾತನಾಡಿ, ಜಪಾನ್‌ಗೆ ಹಸಿರು ಅಮೋನಿಯಾ ರಫ್ತು ಮಾಡುವ ಈ ಒಪ್ಪಂದ ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ ಎಂದು ಪ್ರತಿಪಾದಿಸಿದರು.
Chaired the project offtake agreement signing ceremony for export of green ammonia. Was accompanied by leadership from partner companies- Sembcorp Industries, Sojitz Corporation, Kyushu Electric and NYK Line.
ಭಾರತದಲ್ಲಿ ಹಸಿರು ಅಮೋನಿಯಾ ಉತ್ಪಾದನೆಗೆ ಸೆಂಬ್‌ಕಾರ್ಪ್ ಇಂಡಸ್ಟ್ರೀಸ್ ಮುಂದಾಗಿದ್ದು, ಇದಕ್ಕಾಗಿ ದೇಶದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಳ್ಳುತ್ತದೆ. ಜಪಾನ್ ತನ್ನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ಭಾಗಶಃ ಬದಲಾಯಿಸಿ ಹಸಿರು ಅಮೋನಿಯಾ ಬಳಕೆಗೆ ಮುಂದಾಗಿದ್ದು, ಭಾರತ ಹಸಿರು ಅಮೋನಿಯಾ ಪೂರೈಕೆ ಮಾಡುವ ಮೂಲಕ ಜಪಾನ್ ಈ ಕಾರ್ಯಕ್ಕೆ ಸಾಥ್ ನೀಡಲಿದೆ ಎಂದರು. ಇದನ್ನೂ ಓದಿ: ಸಾಕ್ಷ್ಯ ನೀಡಿದ್ರೆ ಝಾಕೀರ್ ನಾಯ್ಕ್ ಭಾರತಕ್ಕೆ ಹಸ್ತಾಂತರ – ಮಲೇಷ್ಯಾ ಪ್ರಧಾನಿ ಇಬ್ರಾಹಿಂ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಹಸಿರು ಅಮೋನಿಯಾ ರಫ್ತು ಮಾಡುವ ಜಪಾನ್ ನೊಂದಿಗಿನ ಒಪ್ಪಂದ ನಿದರ್ಶನ ಎಂದು ಹೇಳಿದರು.
7.5 ಲಕ್ಷ ಟಿಪಿಎ ಗೆ ಟೆಂಡರ್: ಪ್ರಸ್ತುತದಲ್ಲಿ ಗ್ರೀನ್ ಅಮೋನಿಯಾದ 7.5 ಲಕ್ಷ ಟಿಪಿಎಗೆ ಟೆಂಡರ್ ಆಗಿದೆ. 4.5 ಲಕ್ಷ ಟಿಪಿಎ ಸಾಮರ್ಥ್ಯಕ್ಕೆ ಹೆಚ್ಚುವರಿ ಟೆಂಡರ್‌ಗಳನ್ನು ಸಹ ನಿರೀಕ್ಷಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದರು.
1 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ: ಭಾರತದಲ್ಲಿ ವಾರ್ಷಿಕ ಒಂದು ಮಿಲಿಯನ್ ಟನ್‌ಗಳಷ್ಟು ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ ಹೊಂದಿದ್ದು, ಇದಕ್ಕಾಗಿ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಹಸಿರು ಶಕ್ತಿ ಉತ್ಪಾದನೆಯಲ್ಲಿ ಭಾರತ ತ್ವರಿತ ಮತ್ತು ಅಭೂತಪೂರ್ವ ಸಾಧನೆ ತೋರುತ್ತಿದೆ ಎಂದರು.
ಭಾರತ, ಜಪಾನ್ ಮತ್ತು ಸಿಂಗಾಪುರ ಈ ಮೂರು ದೇಶಗಳು ಇಂಧನ ದಕ್ಷತೆ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಮೇಲೆ ಸಹಯೋಗ ಮಾಡುತ್ತಿವೆ ಎಂದು ತಿಳಿಸಿದರು.
– 1,000ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿ – ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ತಿಳಿಸಿದ ಎಂಬಿಪಿ
ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ (MB Patil) ಅವರ ನೇತೃತ್ವದಲ್ಲಿನ ಕರ್ನಾಟಕದ (Karnataka) ಉನ್ನತ ಮಟ್ಟದ ನಿಯೋಗವು ಜಪಾನ್ (Japan) ಮತ್ತು ದಕ್ಷಿಣ ಕೊರಿಯಾದ (South Korea) ಎರಡು ವಾರಗಳ ಭೇಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು 6,450 ಕೋಟಿ ರೂ. ಮೊತ್ತದ ಬಂಡವಾಳ (Investment) ಹೂಡಿಕೆಯ ಬದ್ಧತೆ ಪಡೆದುಕೊಂಡಿದೆ. ಈ ಬದ್ಧತೆ ಹಾಗೂ ಒಪ್ಪಂದಗಳ ಫಲವಾಗಿ ರಾಜ್ಯದಲ್ಲಿ 1,000 ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಉಭಯ ದೇಶಗಳ ಭೇಟಿಯ ಫಲಶ್ರುತಿ ಬಗ್ಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ಹಂಚಿಕೊಂಡ ಸಚಿವರು, ಜೂನ್ 24 ರಿಂದ ಜುಲೈ 5 ರವರೆಗಿನ ಉಭಯ ದೇಶಗಳ ಎರಡು ವಾರಗಳ ಭೇಟಿಯ ಸಮಯದಲ್ಲಿ, ಕರ್ನಾಟಕದ ನಿಯೋಗವು ಅಲ್ಲಿನ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ (SME) ಬಂಡವಾಳ ಹೂಡಿಕೆ ರೋಡ್‌ಷೋಗಳನ್ನು ನಡೆಸಿತು. ತಯಾರಿಕಾ ವಲಯಕ್ಕೆ ರಾಜ್ಯದಲ್ಲಿ ಇರುವ ಉತ್ತೇಜಕರ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಂಡಿತುʼ ಎಂದು ಹೇಳಿದರು.
???????????????????? ???????????????? ???????? ???????????????????????? ???????????????????????????????????? ???????????????????????????????????????? ???????? ???????????????????? ???????????? ???????????????????? ????????????????????
Our #InvestKarnataka delegation returned from a triumphant two-week mission to Japan and South Korea, securing INR 6,450 crore in investments and MoUs poised… pic.twitter.com/7eXVxFduJD
35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿದ ನಿಯೋಗವು, ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ – ʼಇನ್ವೆಸ್ಟ್ ಕರ್ನಾಟಕ 2025ʼರಲ್ಲಿ ಭಾಗವಹಿಸಲು ಟೋಕಿಯೋ ಮತ್ತು ಸಿಯೋಲ್‌ನಲ್ಲಿ ನಡೆದ ರೋಡ್ ಶೋಗಳಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಯಿತು ಎಂದರು.
ಜಪಾನ್‌ನಲ್ಲಿ ನಡೆದ ಸಭೆಗಳಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್, ಟೊಯೊಟಾ ಮೋಟರ್ ಕಾರ್ಪೊರೇಷನ್, ಯಮಹಾ ಮೋಟರ್ ಕಂಪನಿ, ಸುಮಿಟೊಮೊ ಹೆವಿ ಇಂಡಸ್ಟ್ರೀಸ್, ಪ್ಯಾನಾಸೋನಿಕ್ ಎನರ್ಜಿ, ನಿಡೆಕ್ ಕಾರ್ಪೊರೇಷನ್, ನಿಸಾನ್ ಮೋಟರ್ ಕಾರ್ಪೊರೇಷನ್, ಬ್ರದರ್ ಇಂಡಸ್ಟ್ರೀಸ್, ಶಿಮಾಡ್ಜು ಕಾರ್ಪೊರೇಷನ್, ಹಿಟಾಚಿ ಮತ್ತಿತರ ಕಂಪನಿಗಳು ಪ್ರಮುಖವಾಗಿವೆ. ಇದನ್ನೂ ಓದಿ: ಮಹಿಳೆಯಿಂದ ಪುರುಷನಾದ ಐಆರ್‌ಎಸ್ ಅಧಿಕಾರಿ – ಲಿಂಗ, ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ
Karnataka Forges Ahead in Industrial Collaboration with South Korea
Our recent delegation to South Korea has proven highly successful, solidifying the state’s industrial ties with the nation. The visit facilitated significant investments across diverse sectors, encompassing… pic.twitter.com/F5QIpS8tft
ದಕ್ಷಿಣ ಕೊರಿಯಾದಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಇಂಧನ ಸಚಿವಾಲಯದ ಉಪ ಮಂತ್ರಿ, ಕೊರಿಯಾದ ಜಿಯೊಂಗಿ ಪ್ರಾಂತ್ಯದ ವೈಸ್ ಗವರ್ನರ್ ಮತ್ತು ಸೋಲ್ ಮೆಟ್ರೊಪಾಲಿಟನ್ ಸರ್ಕಾರದಲ್ಲಿ ಆರ್ಥಿಕ ನೀತಿಯ ಉಪ ಮೇಯರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಾಯಿತು.
ದಕ್ಷಿಣ ಕೊರಿಯಾದಲ್ಲಿ ನಡೆದ ಸಭೆಗಳಲ್ಲಿ ಸ್ಯಾಮ್‌ಸ್ಯಂಗ್ ಎಲೆಕ್ಟ್ರಾನಿಕ್ಸ್, ಎಲ್‌ಜಿ ಎನರ್ಜಿ ಸೊಲ್ಯೂಷನ್ಸ್, ಎಲ್‌ಎಕ್ಸ್ ಎಲೆಕ್ಟ್ರಾನಿಕ್ಸ್, ನಿಫ್ಕೊ ಕೊರಿಯಾ, ಒಸಿಐ ಹೋಲ್ಡಿಂಗ್ಸ್, ಕ್ರಾಫ್ಟನ್, ಎಚ್‌ವೈಎಸಿ, ಹುಂಡೈ ಮೋಟರ್ಸ್, ವೈಜಿ-1, ಹೊಯ್ಸಂಗ್ ಅಡ್ವಾನ್ಸಡ್ ಮಟೇರಿಯಲ್ಸ್ ಮುಂತಾದವು ಸೇರಿವೆ ಎಂದು ಎಂಬಿಪಿ ವಿವರಿಸಿದರು. ಇದನ್ನೂ ಓದಿ: ಮಹಿಳೆ ಕಿಡ್ನ್ಯಾಪ್ ಕೇಸ್ – ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್
ಒಸಾಕಾ ಗ್ಯಾಸ್: ಜಪಾನಿನ ಪ್ರಮುಖ ಇಂಧನ ಕಂಪನಿಯಾಗಿರುವ ಒಸಾಕಾ ಗ್ಯಾಸ್, ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲಸೌಲಭ್ಯ ವಿಸ್ತರಿಸಲು 5000 ಕೋಟಿ ರೂ. (600 ದಶಲಕ್ಷ ಡಾಲರ್) ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ತೋರಿದೆ.
ಡಿಎನ್ ಸೊಲ್ಯೂಷನ್ಸ್: ಕೊರಿಯಾದ ಮಷಿನ್ ಟೂಲ್ಸ್ ಕಂಪನಿಯಾಗಿರುವ ಡಿಎನ್ ಸೊಲ್ಯೂಷನ್ಸ್, ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪಿಸಲು 1000 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.
ಅವೊಯಮಾ ಸೈಸಕುಶೊ : ವಾಹನ ಬಿಡಿಭಾಗಗಳನ್ನು ಪೂರೈಸುವ ಜಪಾನಿನ ಅವೊಯಮಾ ಸೈಸಕುಶೊ, ತುಮಕೂರು ಬಳಿಯ ಜಪಾನ್ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು 210 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.
ಕೊರಿಯಾ ಪ್ರವಾಸದ ಗಳಿಕೆ – ರಾಜ್ಯಕ್ಕೆ ಬಂತು ಹೆಚ್ಚಿನ ಹೂಡಿಕೆ
2025ರಲ್ಲಿ ಬೆಂಗಳೂರಿನಲ್ಲಿ KEB ಹಾನಾ ಬ್ಯಾಂಕ್ ಶಾಖೆ ಆರಂಭ
ಕ್ರಾಫ್ಟನ್ ಗೇಮಿಂಗ್ ಕಂಪೆನಿ; ರೂ. 1,245 ಕೋಟಿ ಹೂಡಿಕೆಗೆ ಆಸಕ್ತಿ
ಆಟೋ ಬಿಡಿಭಾಗಗಳ ತಯಾರಿಕಾ ಘಟಕ ಸ್ಥಾಪನೆಗೆ HYAC ಕಂಪೆನಿ ಒಲವು
ಸಿಯೋಲ್ ಮೇಯರ್ ಅವರೊಂದಿಗೆ ಹೂಡಿಕೆಗಿರುವ ಅವಕಾಶಗಳ ಕುರಿತು ಚರ್ಚೆ
ಜಿಯೊಂಗಿ… pic.twitter.com/rze1ZVjSF7
ಡೈಕಿ ಆ್ಯಕ್ಸಿಸ್, ಹೈವಿಷನ್ ಮತ್ತು ಇಎಂಎನ್‌ಐ ಕಂಪನಿ ಲಿಮಿಟೆಡ್ : ಬ್ಯಾಟರಿ ಸೆಲ್‌ಗಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ಜಂಟಿಯಾಗಿ 210 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ.
ಸುಮಿಟೊಮೊ ಹೆವಿ ಇಂಡಸ್ಟ್ರೀಸ್ (ಎಸ್‌ಎಚ್‌ಐ) ಬೆಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿಯನ್ನು ತೆರೆಯಲು ಸಜ್ಜಾಗಿದ್ದು, 2024ರ ಅಂತ್ಯಕ್ಕೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದೆ.
ಈ ತಕ್ಷಣದ ಹೂಡಿಕೆಗಳನ್ನು ಹೊರತುಪಡಿಸಿ, ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಇಂಧನ ಪರಿಹಾರ ವಲಯಗಳಲ್ಲಿ 25,000 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನೂ ರಾಜ್ಯದ ನಿಯೋಗವು ಗುರುತಿಸಿದೆ. ಈ ಹೂಡಿಕೆ ನಿರೀಕ್ಷೆಯು, ಕರ್ನಾಟಕವು ಜಾಗತಿಕ ಹೂಡಿಕೆದಾರರ ಪಾಲಿಗೆ ಆಕರ್ಷಕ ತಾಣವಾಗಿರುವುದರ ಮಹತ್ವವನ್ನು ಸೂಚಿಸುತ್ತದೆ.
ಕರ್ನಾಟಕದಲ್ಲಿ ವಹಿವಾಟು ವಿಸ್ತರಣೆಯ ಅನ್ವೇಷಣೆಯಲ್ಲಿ ಸ್ಯಾಮ್ ಸಂಗ್
ಎಲೆಕ್ಟ್ರಾನಿಕ್ಸ್!
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ಪ್ರಮುಖರೊಂದಿಗೆ ಕರ್ನಾಟಕದಲ್ಲಿ ಅವರ ಸಂಭಾವ್ಯ ವಿಸ್ತರಣೆ, ಹಾಗೂ ವ್ಯಾಪಕ ಅವಕಾಶಗಳ ಕುರಿತು ಚರ್ಚಿಸಿದೆ. ಸೆಮಿಕಂಡಕ್ಟರ್ , ಬ್ಯಾಟರಿ ಸೆಲ್ ತಯಾರಿಕೆ, ಎಲೆಕ್ಟ್ರಿಕ್ ವೆಹಿಕಲ್ (ಇವಿ), ಸ್ಮಾರ್ಟ್ಫೋನ್,… pic.twitter.com/l5YJZ3zJNa
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ, ಮೂಲಸೌಕರ್ಯ ಇಲಾಖೆ ಉಪ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಈ ಸಂದರ್ಭದಲ್ಲಿ ಇದ್ದರು.
ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ಅಚ್ಚರಿ ಮೂಡಿಸುತ್ತಿದ್ದರೆ, ಹೊಸ ಮಾದರಿಯ ವೈರಸ್‌ಗಳು ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿವೆ. ಈಚೆಗೆ ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ವೈರಸ್ ಪತ್ತೆಯಾಗಿತ್ತು. ಇದೀಗ ಜಪಾನ್‌ನಲ್ಲಿ (Japan) ಅತ್ಯಂತ ಭಯಾನಕವಾದ ಮಾಂಸ ತಿನ್ನುವ ವೈರಸ್‌ವೊಂದು (Flesh Eating Bacteria) ಕಾಣಿಸಿಕೊಂಡಿದೆ. ಈ ವೈರಸ್‌ನಿಂದ ಭಾರತಕ್ಕೆ ಯಾವುದೇ ಆತಂಕ ಸದ್ಯಕ್ಕೆ ಇಲ್ಲ. ಆದ್ರೆ ನಿರ್ಲಕ್ಷ್ಯ ವಹಿಸಿದ್ರೆ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಸಾಂಕ್ರಾಮಿಕ ರೋಗತಜ್ಞರು ಹೇಳುತ್ತಾರೆ.
2020-2021ರ ವೇಳೆಗೆ ಚೀನಾದ (China) ವುಹಾನ್ ಲ್ಯಾಬ್‌ವೊಂದರಲ್ಲಾದ ಯಡವಟ್ಟಿನಿಂದ ಇಡೀ ವಿಶ್ವವನ್ನೇ ಕೊರೊನಾ ವೈರಸ್ ಕಾಡಿತ್ತು. ಆದ್ರೆ ಇದಕ್ಕೂ ಮುನ್ನವೇ ಎಬೋಲಾ, ಮಾರ್ಬರ್ಗ್, ರೇಬಿಸ್ ಹಾಗೂ ಸಿಡುಬು, ಹಂಟಾ ದಂತಹ ವೈರಸ್‌ಗಳು ವಿಶ್ವವವನ್ನು ಕಾಡಿದ್ದವು. ಈ ಎಲ್ಲ ವೈರಸ್‌ಗಳಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಜಪಾನ್‌ನಲ್ಲಿ ಹುಟ್ಟಿಕೊಂಡ ವೈರಸ್‌ವೊಂದು ಜನರ ನಿದ್ದೆಗೆಡಿಸಿದೆ. ಮನುಷ್ಯನ ದೇಹದ ಮಾಂಸ ತಿನ್ನುವ ವೈರಸ್ ಇದಾಗಿದ್ದು, ಬೇರೆ ದೇಶಗಳಿಗೂ ಹರಡುವ ಆತಂಕ ಹುಟ್ಟಿಸಿದೆ. 2022ರಲ್ಲಿ ಕನಿಷ್ಠ 5 ಯುರೋಪಿಯನ್ ದೇಶಗಳಲ್ಲಿ ಈ ವೈರಸ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ವೈರಸ್‌ಗೆ ಹೊಸ ಔಷಧಿಯನ್ನು ಕಂಡುಹಿಡಿಯುವತ್ತ ಚಿತ್ತ ಹರಿಸಿದ್ದಾರೆ.
ಹೌದು. ಮಾಂಸ ತಿನ್ನುವ ಬ್ಯಾಕ್ಟೀರಿಯಾ ಹೊಸ ಆತಂಕ ಸೃಷ್ಟಿಸಿದೆ. ಜಪಾನ್‌ನಲ್ಲಿ ಹರಡುತ್ತಿರುವ ಈ ಅಪರೂಪದ ಬ್ಯಾಕ್ಟೀರಿಯಾ, ಗಂಭೀರ ಕಾಯಿಲೆ ಉಂಟುಮಾಡುತ್ತಿದ್ದು, 48 ಗಂಟೆಗಳಲ್ಲಿ ಸಾವಿಗೆ ಕಾರಣವಾಗುವಷ್ಟು ಅಪಾಯಕಾರಿಯಾಗಿದೆ. ಇದು ವೈದ್ಯಕೀಯ ಲೋಕಕ್ಕೆ ಹೊಸ ಸವಾಲೊಡ್ಡಿದೆ. ಕೋವಿಡ್ ಸಮಯದ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಜಪಾನ್‌ನಲ್ಲಿ ಇದು ಕಾಣಿಸಿಕೊಂಡಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಜಪಾನ್‌ನಲ್ಲಿ ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಎಸ್‌ಟಿಎಸ್‌ಎಸ್ – Streptococcal Toxic Shock Syndrome) ಎಂಬ ಹೊಸ ವೈರಸ್ ಹುಟ್ಟಿಕೊಂಡಿದ್ದು, ಇದು ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡಿದೆ.
ಕಳೆದ ವರ್ಷ 941 ಪ್ರಕರಣಗಳು ದಾಖಲಾಗಿತ್ತು. ಆದ್ರೆ ಪ್ರಸಕ್ತ ವರ್ಷದಲ್ಲಿ ಈಗಾಗಲೇ ಪ್ರಕರಣಗಳ ಸಂಖ್ಯೆ 1,000ಕ್ಕೂ ಹೆಚ್ಚಿದೆ. ಈ ವರ್ಷಾಂತ್ಯಕ್ಕೆ ಇದರ ಸಂಖ್ಯೆ ಇನ್ನಷ್ಟು ದುಪ್ಪಟ್ಟಾಗಲಿದೆ ಎಂದು ತಜ್ಞ ವೈದ್ಯರು (Doctors) ಅಂದಾಜಿಸಿರುವುದಾಗಿ ಸಾಂಕ್ರಾಮಿಕ ಕಾಯಿಲೆಗಳ ರಾಷ್ಟ್ರೀಯ ಸಂಸ್ಥೆ ವರದಿ ಮಾಡಿದೆ.
ಅಷ್ಟಕ್ಕೂ ಈ ವೈರಸ್ ಹುಟ್ಟಿಕೊಂಡಿದ್ದು ಹೇಗೆ? ಇದರ ಅಪಾಯದ ತೀವ್ರತೆ ಎಷ್ಟು? ಇದು ಕೊರೊನಾದಂತೆ ವಿಶ್ವಕ್ಕೆ ವ್ಯಾಪಿಸುವ ಸಾಧ್ಯತೆ ಇದೆಯೇ? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಟಾಕ್ಸಿಕ್ ಶಾಕ್ ಸಿಂಡ್ರೋಮ್ ಲಕ್ಷಣಗಳೇನು?
ಈ ಕಾಯಿಲೆಯಲ್ಲಿ ಮರಣ ದರ ಶೇ.30ರಷ್ಟು ಇದ್ದು, ಅಪಾಯದ ಕರೆಗಂಟೆ ಬಾರಿಸಿದೆ. ಗ್ರೂಪ್ ಎ ಸ್ಟ್ರೆಪ್ಟೋಕೊಕ್ಕಸ್ (GAS), ಮಕ್ಕಳಲ್ಲಿ ಸ್ಟ್ರೆಪ್ ಥ್ರೋಟ್ ಎಂದು ಕರೆಯಲಾಗುವ ಲಘು ಕಾಯಿಲೆಯನ್ನು ಉಂಟುಮಾಡುತ್ತದೆ. ಇದರಲ್ಲಿ ಗಂಟಲು ನೋವು ಮತ್ತು ಊದುವಿಕೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಅಂಗಾಂಗ ನೋವು, ಊತ, ಜ್ವರ ಹಾಗೂ 24 ರಿಂದ 48 ಗಂಟೆಯೊಳಗೆ ಕಡಿಮೆ ರಕ್ತದೊತ್ತಡದಂತಹ ಲಕ್ಷಣಗಳನ್ನು ತ್ವರಿತವಾಗಿ ಉಂಟುಮಾಡಬಹುದು. ಇದು ಜೀವಕೋಶಗಳ ಸಾವು, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ ಹಾಗೂ ಸಾವಿಗೆ ಕೂಡ ಕಾರಣವಾಗಬಹುದು. ವಯಸ್ಕರು, ಮುಖ್ಯವಾಗಿ 50 ವರ್ಷ ದಾಟಿದವರಿಗೆ ಈ ಕಾಯಿಲೆ ಹೆಚ್ಚು ಅಪಾಯಕಾರಿಯಾಗಿದೆ. ಅಲ್ಲದೇ ಈ ವೈರಸ್ ಕಾಣಿಸಿಕೊಂಡ 48 ಗಂಟೆಗಳಲ್ಲಿ ಮನುಷ್ಯ ಸಾಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಟೋಕಿಯೋ ಮಹಿಳಾ ವೈದ್ಯಕೀಯ ಕಾಲೇಜಿನ ಸಾಂಕ್ರಾಮಿಕ ಕಾಯಿಲೆ ವಿಭಾಗದ ಪ್ರೊಫೆಸರ್ ಕೆನ್ ಕಿಕುಚಿ ತಿಳಿಸಿದ್ದಾರೆ.
ಚಿಕಿತ್ಸೆ ಏನು?
ಟಾಕ್ಸಿಕ್ ಶಾಕ್ ಸಿಂಡ್ರೋಮ್ ವೈರಸ್‌ಗೆ ನಿಖರ ಚಿಕಿತ್ಸೆ ಇಲ್ಲವಾದರೂ ತಾತ್ಕಾಲಿಕ ಚಿತ್ಸೆಗಾಗಿ ʻIV ʼ ಆಂಟಿಬಯೊಟಿಕ್ ಕಂಡುಹಿಡಿಯಲಾಗಿದೆ. ಇದು ರಕ್ತದೊತ್ತಡ ಕಡಿಮೆ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್ ವಿರುದ್ಧ ಹೋರಾಟುವ ಶಕ್ತಿ ಒದಗಿಸುತ್ತದೆ. ಅಲ್ಲದೇ ಅಂಗಾಗ ವೈಫಲ್ಯತೆ ಮತ್ತು ಪ್ರಾಣಹಾನಿಯಂತಹ ತೀವ್ರ ಸಮಸ್ಯೆಗೆ ಸಿಲುಕದಂತೆ ನೋಡಿಕೊಳ್ಳುತ್ತದೆ.
ರೋಗ ನಿರ್ಣಯಿಸುವುದು ಹೇಗೆ?
ಅಪಾಯಕಾರಿ ಟಾಕ್ಸಿಕ್ ಶಾಕ್ ಸಿಂಡ್ರೋಮ್ ನಿರ್ಣಯಿಸಲು ಕೆಲವು ಪರೀಕ್ಷಾ ವಿಧಾನಗಳಿವೆ. ಮೊದಲನೆಯದ್ದಾಗಿ ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಇದರೊಂದಿಗೆ ಕಿಡ್ನಿ, ಕಡಿಮೆ ರಕ್ತದೊತ್ತಡ, ಪಿತ್ತಜನಕಾಂಗ ಸಮಸ್ಯೆಗಳಿರುವ ಬಗ್ಗೆ ಗುರುತಿಸಲಾಗುತ್ತದೆ. ಜೊತೆಗೆ ಅಂಗಾಗ ವೈಫಲ್ಯಗಳು ಕಂಡುಬಂದಿದ್ದರೆ ಆಗ ಕಾಯಿಲೆಗೆ ತುತ್ತಾಗಿರುವ ಬಗ್ಗೆ ದೃಢೀಕರಿಸಲಾಗುತ್ತದೆ.
ಮುಂಜಾಗ್ರತಾ ಕ್ರಮ ಏನು?
* ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು
* ಯಾವುದೇ ವಸ್ತುಗಳನ್ನು ಮುಟ್ಟುವ ಮುನ್ನ ಕೈಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು.
* ಕೆಮ್ಮುವಾಗ ಸೀನುವಾಗ ಬಾಯಿ, ಮೂಗನ್ನು ಕೈನಿಂದ ಮುಚ್ಚಿಕೊಳ್ಳಬೇಕು ಅಥವಾ ಬಟ್ಟೆಯನ್ನು ಅಡ್ಡಲಾಗಿಟ್ಟುಕೊಳ್ಳಬೇಕು.
* ದೇಹದಲ್ಲಿ ಗಾಯಗೊಂಡ ಭಾಗಗಳನ್ನು ಸೂಕ್ಷವಾಗಿ- ನೋಡಿಕೊಳ್ಳಬೇಕು, ಸೆಪ್ಟಿಕ್‌ಗೆ ಅವಕಾಶ ನೀಡಬಾರದು.
* ಸೋಂಕಿನ ಬಗ್ಗೆ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದು ತಜ್ಞರ ಸಲಹೆ.
ಕನ್ನಡದ ಹೆಸರಾಂತ ನಿರ್ದೇಶಕ, ನಟರೊಬ್ಬರನ್ನು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಜಪಾನ್ (Japan) ಎಂದು ಕರೆಯುತ್ತಾರಂತೆ. ಈ ವಿಷಯವನ್ನು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದು, ರಮ್ಯಾ ಅವರು ಹಾಗೆ ಕರೆದಾಗ ಬಲು ಸಂತೋಷವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ರಮ್ಯಾ ಅವರು ಜಪಾನ್ ಎಂದು ಕರೆಯುವ ವ್ಯಕ್ತಿ ಬೇರೆ ಯಾರೂ ಇಲ್ಲ, ಸಂಜು ವೆಡ್ಸ್ ಗೀತಾ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ, ಸಾಕಷ್ಟು ಚಿತ್ರಗಳಲ್ಲಿ ನಟರಾಗಿ ಕಾಣಿಸಿಕೊಂಡಿರುವ ನಾಗಶೇಖರ್ (Nagashekhar) ಅವರನ್ನು ರಮ್ಯಾ ಜಪಾನ್ ಎಂದು ಈಗಲೂ ಕರೆಯುತ್ತಾರಂತೆ.
ನಾಗಶೇಖರ್ ಅವರಿಗೆ ಜಪಾನ್ ಎಂದು ಹೆಸರು ಬರಲು ಕಾರಣ, ಸುದೀಪ್ ನಟನೆಯ ರಂಗ ಎಸ್.ಎಸ್.ಎಲ್.ಸಿ ಚಿತ್ರ. ಈ ಸಿನಿಮಾದಲ್ಲಿ ನಾಗಶೇಖರ್ ಪಾತ್ರದ ಹೆಸರು ಜಪಾನ್. ಸದಾ ಹೀರೋ ಜೊತೆ ಇರುವಂತಹ ಪಾತ್ರ ಅದಾಗಿತ್ತು. ಅಂದಿನಿಂದ ಅನೇಕರು ನಾಗಶೇಖರ್ ಅವರನ್ನು ಜಪಾನ್ ಅಂತಾನೇ ಕರೆಯುತ್ತಾರಂತೆ.
ನಾಗಶೇಖರ್ ಅವರಿಗೆ ನಟರಾಗಿ ದೊಡ್ಡ ಹೆಸರು ತಂದು ಕೊಟ್ಟ ಚಿತ್ರ ರಂಗ ಎಸ್.ಎಸ್.ಎಲ್.ಸಿ. ನಟಿಸುತ್ತಲೇ ಅನೇಕ ಚಿತ್ರಗಳ ನಿರ್ದೇಶನವನ್ನೂ ಅವರು ಮಾಡಿದ್ದಾರೆ. ಸದ್ಯ ಸಂಜು ವೆಡ್ಸ್ ಗೀತಾ 2 ಸಿನಿಮಾದ ಶೂಟಿಂಗ್ ನಲ್ಲಿ ಅವರು ಬ್ಯುಸಿಯಾಗಿದ್ದಾರೆ.
ತೈಪೆ: ಬುಧವಾರ ಬೆಳಗ್ಗೆ ತೈವಾನ್‌ನ (Taiwan) ಪೂರ್ವದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ.
ತೈವಾನ್, ಜಪಾನ್ (Japan) ಮತ್ತು ಫಿಲಿಪೈನ್ಸ್‌ನ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು ತೀರ ಪ್ರದೇಶದಿಂದ ದೂರ ತೆರಳುವಂತೆ ಸೂಚಿಸಲಾಗಿದೆ. ಭೂಕಂಪದ ತೀವ್ರತೆಗೆ ಬೃಹತ್ ಗಾತ್ರದ ಕಟ್ಟಡಗಳು ನೆಲಕ್ಕೆ ಉರುಳಿದೆ.
ಕಳೆದ 25 ವರ್ಷದಲ್ಲಿ ತೈವಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದೆ. ತೈವಾನ್‌ನ ಹುವಾಲಿಯನ್ ಸಿಟಿಯಿಂದ ದಕ್ಷಿಣಕ್ಕೆ 18 ಕಿಲೋಮೀಟರ್ ದೂರದಲ್ಲಿ 34.8 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.
🚨#BREAKING: Multiple buildings have collapsed after a Pair of Massive 7.5 Earthquakes Strikes Triggering Tsunami Warnings
Currently, a pair of powerful, massive earthquakes has just occurred. The first one measured a magnitude of 7.5, followed by a 7.4… pic.twitter.com/XCKd7ocjel
ಜಪಾನ್‌ನ ಹವಾಮಾನ ಸಂಸ್ಥೆಯು ಮಿಯಾಕೊಜಿಮಾ ದ್ವೀಪ ಸೇರಿದಂತೆ ಈ ಪ್ರದೇಶದಲ್ಲಿನ ದೂರದ ಜಪಾನಿನ ದ್ವೀಪಗಳಿಗೆ ಮೂರು ಮೀಟರ್‌ಗಳಷ್ಟು (10 ಅಡಿ) ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
ಕರಾವಳಿ ಪ್ರದೇಶಗಳಲ್ಲಿನ ಜನರು ಜಾಗರೂಕರಾಗಿರಬೇಕು. ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳಬಹುದು ಎಂದು ತೈವಾನ್ ತನ್ನ ಪ್ರಜೆಗಳಿಗೆ ಪಠ್ಯ ಸಂದೇಶವನ್ನು ಕಳುಹಿಸುವ ಮೂಲಕ ಎಚ್ಚರಿಕೆ ನೀಡಿದೆ.
ಜಪಾನ್ (Japan) ನಲ್ಲಿರುವ ಹೆಸರಾಂತ ನಾಟಕ ತಂಡ ‘ತಕರಾಜುಕಾ’ (Takarajuka) ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿದೆ. 110 ವರ್ಷಗಳ ಹಳೆಯದಾದ ಈ ನಾಟಕ ತಂಡವು ಸೂಪರ್ ಹಿಟ್ ಆರ್.ಆರ್.ಆರ್ ಸಿನಿಮಾದ ಕಥೆಯನ್ನು ಸಂಗೀತ ನಾಟಕಕ್ಕೆ ಅಳವಡಿಸಿದೆ. ಜೊತೆಗೆ ಈ ಸಿನಿಮಾದ ನಿರ್ದೇಶಕ ರಾಜಮೌಳಿ ಎದುರೇ ನಾಟಕವನ್ನು ಪ್ರದರ್ಶಿಸಿದೆ.
ಸದ್ಯ ರಾಜಮೌಳಿ (Rajamouli) ಮತ್ತು ಟೀಮ್ ಜಪಾನ್ ನಲ್ಲಿ ಬೀಡು ಬಿಟ್ಟಿದೆ. ಇದೇ ಸಂದರ್ಭದಲ್ಲಿ ತಮ್ಮದೇ ಕಥೆಯಿಂದ ತಯಾರಾಗಿರುವ ನಾಟಕವನ್ನು ವೀಕ್ಷಿಸಿ ಸಂಭ್ರಮಿಸಿದ ರಾಜಮೌಳಿ ಮತ್ತು ತಂಡ. ನಾಟಕದ ಕಲಾವಿದರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ನಿರ್ದೇಶಕರು. ನಾಟಕ ಕುರಿತು ಅವರು ಬರೆದಿದ್ದಾರೆ.
ನಾಟಕ ತಂಡದವರ ಉತ್ಸಾಹ ಮತ್ತು ಅವರ ಪ್ರತಿಭೆ ಕಂಡು ಬೆರಗಾದೆ. ಅದ್ಭುತವಾಗಿ ನಾಟಕವನ್ನು ಹೆಣೆದಿದ್ದಾರೆ. ಇಂತಹ ತಂಡಕ್ಕೆ ನನ್ನ ಧನ್ಯವಾದಗಳು ಎಂದು ರಾಜಮೌಳಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಆರ್.ಆರ್.ಆರ್ (RRR) ಸಿನಿಮಾದ ವಿಶೇಷ ಪ್ರದರ್ಶನ ಜಪಾನ್ (Japan) ನಲ್ಲಿ ನಡೆಯುತ್ತಿದೆ. ನಿರ್ದೇಶಕ ರಾಜಮೌಳಿ (Rajamouli), ಅವರ ಪುತ್ರ ಕಾರ್ತಿಕೇನ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಜಪಾನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಭೂಕಂಪನದ (Earthquake) ಅನುಭವಕ್ಕೆ ತುತ್ತಾಗಿದ್ದಾರೆ. ಆ ಅನುಭವವನ್ನು ರಾಜಮೌಳಿ ಪುತ್ರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಭೂಕಂಪ ಆದಾಗ ರಾಜಮೌಳಿ ಮತ್ತು ಟೀಮ್ ಖಾಸಗಿ ಹೋಟೆಲ್ ನ 28ನೇ ಮಹಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಭೂಕಂಪವಾದಾಗ ಕಟ್ಟಡ ಅಲುಗಾಡಿದ ಅನುಭವ ಕೂಡ ಆಗಿದೆ. ಅಲ್ಲಿ ಭೂಕಂಪದ ತೀವ್ರತೆ ಮತ್ತು ಅಲರ್ಟ್ ಕುರಿತಾಗಿಯೂ ಅವರು ಬರೆದುಕೊಂಡಿದ್ದಾರೆ. ಭೂಕಂಪ ಆಗುವುದಕ್ಕೂ ಮುನ್ನ ಮೊಬೈಲ್ ಗೆ ಅಲರ್ಟ್ ಬಂದಿರುವ ಮೆಸೇಜ್ ಕೂಡ ಹಾಕಿದ್ದಾರೆ.
ಆರ್.ಆರ್.ಆರ್ ಸಿನಿಮಾದ ವಿಶೇಷ ಪ್ರದರ್ಶನವು ಜಪಾನ್‌ನಲ್ಲಿ ಹಲವು ದಿನಗಳಿಂದ ನಡೆಯುತ್ತಿದೆ. ಸಿನಿಮಾ ಕುರಿತಂತೆ ರಾಜಮೌಳಿ ನೋಡುಗರ ಜೊತೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಒಂದಷ್ಟು ವಿಷಯ ರಿವಿಲ್ ಮಾಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ: ಜಪಾನ್‌ಗೆ (japan) ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ಸ್ಯಾನ್ ಫ್ರಾನ್ಸಿಸ್ಕೋದಿಂದ (San Francisco) ಟೇಕಾಫ್ ಆಗಿತ್ತು. ಹೀಗೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಟೈರ್ ಕಳಚಿಬಿದ್ದಿದೆ. ಪರಿಣಾಮ 2 ಕಾರುಗಳು ಜಖಂಗೊಂಡಿವೆ.
ANOTHER Boeing plane inspection gone wrong by diversity hires.
The tire fell off at takeoff.
You can’t tell me this isn’t just neglect and pure laziness at this point.
ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಟೈರ್ ಕಳಚಿ ಬೀಳುತ್ತಿರುವ ವೀಡಿಯೋ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟೇಕ್‌ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನವು ತನ್ನ 6 ಟೈಯರ್‌ಗಳಲ್ಲಿ ಒಂದು ಕಳಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ಲಾಸ್ ಏಂಜಲೀಸ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.
ವಿಮಾನದಲ್ಲಿ 235 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಇದ್ದರು. ಘಟನೆ ನಡೆದ ಕೂಡಲೇ ಅವರನ್ನು ಪ್ರಯಾಣಿಕರನ್ನು ಮತ್ತೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು ಎಂದು ಯುನೈಟೆಡ್ ತಿಳಿಸಿದೆ. ಬೋಯಿಂಗ್ 777ಗಳ ಎರಡು ಮುಖ್ಯ ಲ್ಯಾಂಡಿಂಗ್ ಗೇರ್‌ಗಳಲ್ಲಿ ತಲಾ 6 ಟೈರ್‌ಗಳನ್ನು ಹೊಂದಿವೆ. ಅವುಗಳಲ್ಲಿ ಒಂದು ಕಳಚಿಕೊಂಡಿದೆ ಎಂಬುದಾಗಿ ವರದಿಯಾಗಿದೆ.
ವಿಮಾನಗಳು ಟೈರ್‌ಗಳನ್ನು ಕಳೆದುಕೊಳ್ಳುವುದು ಇದು ಅಪರೂಪದ ಘಟನೆಯಾಗಿದೆ ಎಂದು ವಾಯುಯಾನ ತಜ್ಞರು ಹೇಳಿದ್ದಾರೆ.